ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್

ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್

  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help
ಸಂಪದ › Sampada Blogs › Nagaraj.G ರವರ ಬ್ಲಾಗ್

ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

October 5, 2008 - 11:50pm — Nagaraj.G
ನಿನಾಸಂನಿಂದ ವಿಧ್ಯಾರ್ಥಿಗಳ ಕೈ ಚಾಲಕ

ಮೊನ್ನೆ ಅಂದರೆ 24ನೇ ತಾರೀಖು ಸಾಗರಕ್ಕೆ ಬೇಟಿ ನೀಡಿದ್ದೆ. ಬೆಂಗಳೂರಿನಿಂದ ರೈಲಿನಲ್ಲಿ ಶಿವಮೊಗ್ಗ ಎಕ್ಸ್ ಪ್ರೆಸ್ ನಲ್ಲಿ ಹೊರಟೆ ರೈಲು ಬೆಳಿಗ್ಗೆ 5:30ಗೆ ಹೋಗಬೇಕಾದದ್ದು 2 ಗಂಟೆ ತಡವಾಗಿ ಹೋಯಿತು, ಶಿವಮೊಗ್ಗ ಹತ್ತಿರ ಹೋಗುತ್ತಿದ್ದಾಗೆ ಜಿಟೆ ಜಿಟೆ ಮಳೆ ಬೀಳುತ್ತಿತ್ತು ಆ ಮಳೆಯಲ್ಲಿ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರೆ ಅದರ ಮಜಾನೆ ಬೇರೆ. ಶಿವಮೊಗ್ಗ 7:30 ಗಂಟೆಗೆ ತಲುಪಿದೆ ಅಲ್ಲಿಂದ ಸಾಗರದ ಕಡೆ ಪ್ರಯಾಣ ಬೆಳೆಸಿದೆ. ಸಾಗರ ಶಿವಮೊಗ್ಗ ಜಿಲ್ಲೆಯ ಒಂದು ಪಟ್ಟಣ ಮತ್ತು ಅದೇ ಹೆಸರಿನ ತಾಲೂಕಿನ ಆಡಳಿತ ಕೇಂದ್ರ. ಬೆಂಗಳೂರು ನಗರದಿಂದ 360 ಕಿ.ಮೀ ದೂರದಲ್ಲಿರುವ ಸಾಗರ ಪಟ್ಟಣವು ಮಲೆನಾಡು ಪ್ರದೇಶದ ವ್ಯಾಪ್ತಿಗೊಳಪಟ್ಟಿದೆ. ಮಳೆ ಹೆಚ್ಚಾಗಿ ಬೀಳುವ ಸಾಗರ ತಾಲೂಕು ಸಹಜವಾಗಿ ದಟ್ಟವಾದ ಕಾಡು ಮತ್ತು ವಿವಿಧ ರೀತಿಯ ಪ್ರಾಣಿಸಂಕುಲಗಳಿಗೆ ತವರಾಗಿದೆ. ಪ್ರಕೃತಿಪ್ರಿಯರಿಗೆ ಮತ್ತು ಚಾರಣಪ್ರಿಯರಿಗೆ ಸಾಗರ ಸ್ವರ್ಗ. ಶ್ರೀಗಂಧ ಕೆತ್ತನೆಗೆ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಸಾಗರವನ್ನು ಶ್ರೀಗಂಧದ ಗುಡಿ ಎಂದೂ ಕರೆಯಲಾಗುತ್ತದೆ. ಸಾಗರದಲ್ಲಿ ಬೆಳಗಿನ ತಿಂಡಿ ಮುಗಿಸಿ ಸಾಗರ‌ದಿಂದ ಹೆಗ್ಗೋಡುಗೆ ಹೊರಟೆ ಸಾಗರ ತಾಲೂಕಿನ ಜನ ಕಲಾರಸಿಕರು ಮತ್ತು ಸಾಹಿತ್ಯಾರಾಧಕರು. ಬಹಳ ಜನ ಕಲಾವಿದರನ್ನ, ಸಾಹಿತಿಗಳನ್ನ ರಾಜ್ಯಕ್ಕೆ ಸಾಗರ ತಾಲೂಕು ನೀಡಿದೆ. ಸಾಗರದ 7 ಕಿ.ಮೀ ದೂರದಲ್ಲಿ ಕೆ.ವಿ.ಸುಬ್ಬಣ್ಣ ಕಟ್ಟಿ ಬೆಳೆಸಿದ ನೀನಾಸಂ (ನೀಲಕಂಠೇಶ್ವರ ನಾಟ್ಯ ಸಂಘ) ತನ್ನ ತಿರುಗಾಟಗಳಿಂದಾಗಿ ಬಹು ಪ್ರಸಿದ್ದಿಯನ್ನು ಪಡೆದಿದೆ ನಾನು ಇದೇ ನೀನಾಸಂ ನಲ್ಲಿ ಉಳಿದುಕೊಂಡೆ ಅಲ್ಲಿ 20 ಜನ ಇದ್ಯಾರ್ಥಿಗಳು ಓದುತ್ತಿದ್ದರು ಅಂದರೆ ರಂಗಭೂಮಿ ವಿದ್ಯಾಭ್ಯಾಸ ಮಾಡುತ್ತಿದ್ದರು. ನಿನಾಸಂನಿಂದ ತರಬೇತಿ ಪಡೆದ ಎಷ್ಟೋ ಜನರು ಈಗ ಚಲನ ಚಿತ್ರಗಳಲ್ಲಿ ಮತ್ತು ದಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಅಲ್ಲಿ ಹೋಗುತ್ತಿದ್ದಾಗೆ ಜಿಟಿ ಜಿಟಿ ಮಳೆ ಬೀಳುತ್ತಿದ್ದರಿಂದ ಹಾಗೂ ಮಳೆಯಲ್ಲಿ ನೆಂದಿದ್ದರಿಂದ ಒಂದು ಕಪ್ ಕಶಾಯ ಕುಡಿದು ವಿಶ್ರಾಂತಿಗೆ ಹೊರಟೆ. ರಾತ್ರಿ ವಿದ್ಯಾರ್ಥಿಗಳು ಯಕ್ಷಗಾನ ಕಳೆಯುತ್ತಿದ್ದರು. ಯಕ್ಷಗಾನ ಸಾಗರ ತಾಲೂಕಿನಲ್ಲಿ ಬಹಳ ಪ್ರಸಿದ್ಧವಾದ ಕಲಾಪ್ರಕಾರ. ಬೇಸಿಗೆಯ ಕಾಲದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಯಕ್ಷಗಾನ ಮೇಳದ ಪ್ರದರ್ಶನ ಏರ್ಪಾಡಾಗಿರುವುದನ್ನು ಕಾಣಬಹುದು.ಅದನ್ನು ನೋಡುತ್ತಾ ಕಾಲ ಕಳೆದು ಮತ್ತೆ ಊಟ ಮುಗಿಸಿ ಕೊಠಡಿಗೆ ಹೋಗಿ ಮಲಗಿದೆ. ಬೆಳಿಗ್ಗೆ ಎದ್ದು ನೀನಾಸಂ ಬಗ್ಗೆ ತಿಳಿದುಕೊಂಡು ನಂತರ ಒಮ್ಮೆ ಸುತ್ತಿ ಅಲ್ಲಿಂದ ಸುತ್ತಲು ಹೊರಟೆ.
ಅಲ್ಲಿಂದ ಜೋಗ್ ನೋಡಲು ಹೋದೆ ಭಾರತದಲ್ಲೇ ಅತ್ಯಂತ ಎತ್ತರವಾದ ಮತ್ತು ಜಗತ್ತಿನಲ್ಲಿ 27ನೆಯ ಸ್ಥಾನದಲ್ಲಿರುವ ವಿಶ್ವ ಪ್ರಸಿದ್ಧ ಜೋಗ ಜಲಪಾತವು ಸಾಗರದಿಂದ 29 ಕಿ.ಮೀ ಅಂತರದಲ್ಲಿದೆ. ಶರಾವತಿ ನದಿಯು ರಾಜ, ರೋರರ್, ರಾಕೆಟ್ ಮತ್ತು ರಾಣಿ ಎಂಬ ನಾಲ್ಕು ಕವಲುಗಳಾಗಿ 273ಮೀ ಎತ್ತರದಿಂದ ದುಮುಕುವ ಜೋಗ ಜಲಪಾತಕ್ಕೆ ಸಾಗರದಿಂದ ಪ್ರತೀ 5 ನಿಮಿಷಕ್ಕೆ ಒಂದರಂತೆ ಬಸ್ಸಿನ ವ್ಯವಸ್ಥೆ ಇದೆ.
ಅಲ್ಲಿಂದ ಇಕ್ಕೇರಿ ಹೋರಟೆ, ಇಕ್ಕೇರಿ ಹೊಯ್ಸಳ ಶೈಲಿಯ ಸುಂದರವಾದ ಕೆತ್ತನೆಗಳಿರುವ ಕೆಳದಿ ಸಂಸ್ಥಾನಕ್ಕೆ ಸೇರಿದ ದೇವಸ್ಥಾನವಿರುವ ಇಕ್ಕೇರಿ ಪಟ್ಟಣ ಸಾಗರದಿಂದ 5 ಕಿ.ಮೀ. ದೂರದಲ್ಲಿದೆ. ಬಸ್ಸು, ಟ್ಯಾಕ್ಸಿ ಅಥವ ಆಟೋಗಳಿಂದ ಸುಲಭವಾಗಿ ಇಕ್ಕೇರಿಯನ್ನು ತಲುಪಬಹುದು.
ಮಾರನೆದಿನ ಕೆಳದಿ ಕಡೆ ಹೋದೆ ಕೆಳದಿ ರಾಜವಂಶದಿಂದ ಪ್ರಸಿದ್ಧವಾದ ಕೆಳದಿ ಪಟ್ಟಣವು ಸಾಗರದಿಂದ 7 ಕಿ.ಮೀ ದೂರದಲ್ಲಿದೆ. ಕೆಳದಿ ಸಂಸ್ಥಾನದ ಅರಮನೆ, ಸುಂದರ ಕೆತ್ತನೆಗಳಿರುವ ದೇವಸ್ಥಾನ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯ ಈ ಊರಿನ ಆಕರ್ಷಣೆಗಳು.
ಸಾಗರದ ಜನ ಸಾಮಾನ್ಯವಾಗಿ ಶಾಂತಿಪ್ರಿಯರು ಮತ್ತು ಸ್ನೇಹಪ್ರಿಯರು. ಹೆಚ್ಚಿನ ಜನರು ಜೀವನಕ್ಕೆ ವ್ಯವಸಾಯವನ್ನ ಅವಲಂಬಿಸಿದ್ದಾರೆ. ಅಡಿಕೆ ಸಾಗರದ ಪ್ರಮುಖ ಬೆಳೆ. ಭತ್ತ, ಕಬ್ಬು, ವೆನಿಲ್ಲಾ ಮತ್ತಿತರ ಬೆಳೆಗಳು ಕೂಡ ಪ್ರಚಲಿತದಲ್ಲಿವೆ. ಬಹುಪಾಲು ಜನರು ಹವ್ಯಕರಾದ್ದರಿಂದ ಸಹಜವಾಗಿ ಸಾಗರದಲ್ಲಿ ಹವ್ಯಕ ಕನ್ನಡ ಚಾಲ್ತಿಯಲ್ಲಿದೆ. ನಂತರ ಅಲ್ಲಿಂದ ಚರಕ ಕಾರ್ಖಾನೆಗೆ ಹೋದೆ ಅಲ್ಲಿ ನಾರಿ ಮಣಿಯರು ತಮ್ಮ ಕೆಲಸದಲ್ಲಿ ಬ್ಯುಸಿಯಾಗಿ ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಅಂದಹಾಗೆ ಈ ಚರಕ ಕಾರ್ಖಾನೆಯಿಂದ ಉಣ್ಣೆಯಿಂದ ಹಲವಾರು ವಿದದ ಬಟ್ಟೆಗಳನ್ನು ತಯಾರಿಸುತ್ತಿದ್ದಾರೆ. ಅದನ್ನು ನಡೆಸುವವರು ಮಹಿಳೆಯರೇ, ಇಲ್ಲಿ ತಯಾರಾದ ಎಷ್ಟೋ ಬಟ್ಟೆಗಳು ನಮ್ಮ ಬೆಂಗಳೂರು ಸೇರಿದಂತೆ ಹಲವಾರು ಪಟ್ಟಣ ಹಾಗು ಬೇರೆ ಬೇರೆ ರಾಜ್ಯಗಳಿಗೂ ಸಹ ರಫ್ತಾಗುತ್ತಿದೆ. ನಾನು ಸಹ ಕೆಲವು ಉಣ್ಣೆಯ ಬಟ್ಟೆಗಳನ್ನು ತೆಗೆದುಕೊಂಡೆ. ನೀವು ಸಹ ಒಮ್ಮೆ ಹೋಗಿ ಬನ್ನಿ ಅಲ್ಲಿನ ಪ್ರಕೃತಿ ತುಂಬಾ ಸುಂದರ ಎಲ್ಲಿ ನೋಡಿದರೂ ಹಚ್ಚ ಹಸಿರು.....

  • ನೀನಾಸಂ
  • ಸಾಗರ
~.~
  • Nagaraj.G ರವರ ಬ್ಲಾಗ್
  • Login or register to post comments
  • 211 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2008 - 10:50am — shylaswamy

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

shylaswamy's picture

ಪ್ರಿಯ ನಾಗರಾಜ್ ಅವರೆ,
ಸಾಗರದ ಪರಿಚಯ ನೋಡಿ ಖುಶಿಯಾಯ್ತು. ನಿಜಕ್ಕು ಅದು ಸಂದರ ತಾಣ. ಎಲ್ಲರೂ ಒಮ್ಮೆ ನೋಡಲೇಬೇಕಾದ ಊರು ಎನ್ನುವುದರಲ್ಲಿ ಅನುಮಾನವೇ ಇಲ್ಲ, ಜೊತೆಗೆ ಅಲ್ಲೇ ಹತ್ತಿರದಲ್ಲಿರುವ ವರದಾ ಹಳ್ಳೀಯ ಶ್ರೀಧರ ಸ್ವಾಮಿಗಳ ಆಶ್ರಮ ಹಾಗೂ ವರದಾ ಮೂಲ (ವರದಾ ನದಿ ಹುಟ್ಟುವ ಸ್ಥಳ) ಸೇರಿಸಲು ನೀವು ಮರೆತಿರುವಂತಿದೆ. ಅವೂ ಕೂಡ ಹೋಗಿ ನೋಡಲೇಬೇಕಾದಂತಹ ಸುಂದರ ಸ್ಥಳಗಳು. ಒಳ್ಳೆಯ ಲೇಖನ. ಧನ್ಯವಾದಗಳು ನಾಗರಾಜ್.
ಇನ್ನೊಂದು ವಿಚಾರ. train ಈಗ ಶಿವಮುಗ್ಗ ತಲುಪಬೇಕಾದ ನಿಗದಿತ ಸಮಯವೇ ೬.೩೦ ಅಥವಾ ೭ ಗಂಟೆಯಾಗಿದೆ. ಅದು ಬೆಂಗಳೂರು ಬಿಡುವುದೇ ರಾತ್ರಿ ೧೧.೪೦ಕ್ಕೆ.
ಶೈಲಾಸ್ವಾಮಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 11:53am — Nagaraj.G

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

Nagaraj.G's picture

ನಿಮಗೂ ಸಹ ದನ್ಯವಾದಗಳು,
ಹೌದು ನಾನು ಸಹ ಕೇಳಿದ್ದೆ ಹತ್ತಿರದಲ್ಲಿರುವ ವರದಾ ಹಳ್ಳೀಯ ಬಗ್ಗೆ , ಶ್ರೀಧರ ಸ್ವಾಮಿಗಳ ಆಶ್ರಮ ಹಾಗೂ ವರದಾ ನದಿ ಹುಟ್ಟುವ ಸ್ಥಳದ ಬಗ್ಗೆ, ಜೊತೆಗೆ ಇನ್ನಿತರ ಸ್ಥಳಗಳ ಬಗ್ಗೆ . ಆದರೆ ನನಗೆ ಸಮಯ ಜಾಸ್ತಿ ಕಡಿಮೆ ಇತ್ತು ಅದ್ದರಿಂದ ಹಲವಾರು ಸ್ಥಳಗಳನ್ನು ನೋಡಲು ಆಗಲಿಲ್ಲ ಮುಂದಿನ ತಿಂಗಳು ಮತ್ತೆ ನೀನಾಸಂ ಬೇಟಿ ನೀಡುತ್ತಿದ್ದೇನೆ ಆಗ ತಪ್ಪದೆ ಬೇಟಿ ಮಾಡುತ್ತೇನೆ.
ನಾಗರಾಜ್. ಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 11:05am — kannadakanda

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

kannadakanda's picture

ನನ್ನ ಸ್ವಂತ ಊರು ಶಿವಮೊಗ್ಗ ಜಿಲ್ಲೆಯ ಸಾಗರವೇ. ನನ್ನ ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಬಿ. ಎಸ್ಸಿ. ಪದವಿಯ ತನಕ ನಾನು ಓದಿದ್ದು ಸಾಗರದಲ್ಲೇ. ಇಲ್ಲಿ ನೋಡಬೇಕಾದ ಸ್ಥಳಗಳು: ಇಕ್ಕೇರಿ, ಕೆಳದಿ, ಸಿಗಂದೂರು, ವರದಾಮೂಲ ಹಾಗೂ ಜಗತ್ಪ್ರಸಿದ್ಧ ಜೋಗ ಜಲಪಾತ ಇಲ್ಲಿಂದ ೩೦ ಕಿ.ಮೀ. ದೂರದಲ್ಲಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 11:58am — Nagaraj.G

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

Nagaraj.G's picture

ನೀವು ನಿಜವಾಗಲೂ ಅದೃಷ್ಟವಂತರು ಕಣ್ರೀ ಸಾಗರದಂತ ಜಾಗದಲ್ಲಿ ಹುಟ್ಟಿದ್ದಕ್ಕೆ ನನಗಂತು ಅಲ್ಲೇ ಎಲ್ಲಿಯಾದರೂ ಇದ್ದುಬಿಡಬೇಕು ಅನಿಸತ್ತೆ ಈಗಾಗಲೇ ನೀನಾಸಂ ಜೊತೆ ಚರ್ಚೆ ನಡಿತಾ ಇದೆ ಅದು ಸಕ್ಸಸ್ ಆದರೆ ಅಲ್ಲೇ ಇರಲು ನಿರ್ದರಿಸಿದ್ದೇನೆ. ಮತ್ತೆ ಇಕ್ಕೇರಿ, ಕೆಳದಿ, ಸಿಗಂದೂರು, ವರದಾಮೂಲ ನೋಡಬೇಕಾದ ಸ್ಥಳಗಳೇ ಮತ್ತೆ ಬೇಟಿ ನೀಡಿದಾಗ ತಪ್ಪದೆ ಬೇಟಿ ನೀಡುವೆ.

ನಾಗರಾಜ್. ಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 12:45pm — kannadakanda

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

kannadakanda's picture

ಸದ್ಯಕ್ಕೆ ಕೆಲಸ ನಿಮಿತ್ತ ಕೊಡಗಿನ ಪೊನ್ನಂಪೇಟೆಯಲ್ಲಿ ವಾಸವಾಗಿದ್ದೇನೆ. ನವೆಂಬರ್ ತಿಂಗಳಿನಲ್ಲಿ ಸಾಗರಕ್ಕೆ ಹೋಗುತ್ತಿದ್ದೇನೆ. ಆಗ ನೀವಲ್ಲಿದ್ದರೆ ಭೇಟಿ ಆಗೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 2:26pm — Nagaraj.G

ಉ: ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ

Nagaraj.G's picture

ಜಿಏನ್ರೀ ಎಲ್ಲೊ ಹೋದ್ರು ಒಳ್ಳೆ ಜಾಗಗಳನ್ನೇ ಆಯ್ಕೆ ಮಾಡ್ಕೊತ್ತಿರಾ?
ತಪ್ಪದೆ ಭೇಟಿಯಾಗೋಣ ದಯವಿಟ್ಟು ತಮ್ಮ ಹೆಸರು ತೋರಿಸಿದರೆ ಚೆನ್ನಾಗಿರತ್ತೆ (ಕನ್ನಡ ಕಂದ ಬಿಟ್ಟು)
ನಾಗರಾಜ್. ಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಳೆದ ನೆನೆಪುಗಳು
  • ಮಿಸ್.ಸದಾರಮೆ
  • ಜಲ ಸಾಕ್ಷರ ತಾಲೂಕು... ಇದೊಂದು ಸಾಂಘಿಕ ಅಭಿಯಾನ
  • ಬೆಂಗಳೂರಿನ, " ಜಾನಪದ ಕಲಾ ಕುಟೀರ," ಏರ್ಪಡಿಸಿರುವ ಆದಿವಾಸಿಗಳಿಂದ ನೇಯ್ದ ಉಡುಪುಗಳ ಪ್ರದರ್ಶನ !
  • ಮಾಹಿತಿ ಹಂಚಿಕೊಳ್ಳುವುದೇ ನನ್ನ ಧ್ಯೇಯವಾಕ್ಯ
Syndicate content

ಲೇಖಕರು

Nagaraj.G's picture

ಪೂರ್ಣ ಹೆಸರು
Nagaraj

ಪರಿಚಯ

ಹಾಯ್
ನನ್ನ ಹೆಸರು ನಾಗರಾಜ್ ನನ್ನ ಸ್ವಂತ ಊರು ಬೂದಿಕೋಟೆ ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿದೆ ಇದು ಚಾರಿತ್ರಿಕವಾಗಿ ಪ್ರಸಿದ್ದಿಯಾದ ಸ್ಥಳ. ಇದು ಮೈಸೂರು ಹುಲಿ ಟಿಪ್ಪುವಿನ ತಂದೆ ನವಾಬ್ ಹೈದರಾಲಿ ಖಾನ್ ಜನಿಸಿದ ಸ್ಥಳ. ಇತ್ತೇಚೆಗೆ ನಾನು ಮತ್ತು ನನ್ನ ಸ್ನೇಹಿತರು ಸೇರಿ ಬೆಂಗಳೂರಿನಲ್ಲಿ ಮರ ಅನ್ನುವ ಒಂದು ಮಾಧ್ಯಮ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇವೆ. ಮರ ಸಂಸ್ಥೆಯು ಸಮುದಾಯ ಮಾದ್ಯಮದೊಟ್ಟಿಗೆ ಕೆಲಸ ಮಾಡುತ್ತಿದೆ. ಅವುಗಳಲ್ಲಿ ಸಮುದಾಯ ರೇಡಿಯೋ, ರಂಗಭೂಮಿ, ಇಂಟರ್ನೆಟ್, ಡ್ಯಾಕ್ಯುಮೆಂಟರಿ ಪಿಲ್ಮ್ ಇತ್ಯಾದಿಗಳು. ಸಂಸ್ಥೆಯು ಭಾರತದ 6 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ www.maraa.in

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಮಳೆನೀರು ಹಿಡಿದ ಎಲೆಗಳು

(ಫೋಟೋ: Girish M G)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಹೇ ನೀರೆ
  • ಸಂಗಾತಿ
  • ಮೌನ
  • 'ರೀ’ ಅನ್ನುವ ಒಂದೇ ಸ್ವರ
  • ಓದಿದ್ದು ಕೇಳಿದ್ದು ನೋಡಿದ್ದು-86 ನಗೆಪತ್ರಿಕೆ "ವಾರೆಕೋರೆ" ಓದಿ; ಇನ್ನು ನೀವೂ 32 ಹಲ್ಲುಗಳನ್ನು ತೂರಿಸಿ ನಗಬಲ್ಲಿರಿ!
  • ನವಗ್ರಹ ಚಿತ್ರದ ಬಗ್ಗೆ ನನ್ನ ವಿಮರ್ಶೆ/ಅನಿಸಿಕೆ.
  • ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
  • ಕದ್ದ ಹಾಸ್ಯ ಚಟಾಕಿಗಳು
  • ಧ್ವನಿ ಮತ್ತು ವೀಡಿಯೊ ಚಾಟ್
  • ನಾನು ಈರುಳ್ಳಿ ಆಲುಗೆಡ್ಡೆ ಹುಳಿ ಮಾಡುವ ವಿಧಾನ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ನವೆಂಬರ್ ೧೮
    November 21, 2008 - 1:09am
  • uniquesupri
    ಉ: ಸದಾ ಅಮರುವ ಕರಡಿ ಅಕಾಲ ಮೃತ್ಯುವಿಗೆ ಈಡಾಗಿ ‘ಅಮರ’ವಾದಾಗ..
    November 21, 2008 - 1:05am
  • uniquesupri
    ಉ: ಚಪ್ಪಲಿ ಎಂಬ ದೊರೆಯೇ, ನಿನಗಾರು ಸರಿಯೇ...!
    November 21, 2008 - 12:43am
  • manjunath s reddy
    ಉ: ನವೆಂಬರ್ ೧೮
    November 21, 2008 - 12:09am
  • manjunath s reddy
    ಉ: ನವೆಂಬರ್ ೧೮
    November 21, 2008 - 12:06am
  • manjunath s reddy
    ಉ: ಈರುಳ್ಳಿ ಆಲುಗೆಡ್ಡೆ ಹುಳಿ ಮತ್ತು ನನ್ನ ಧರ್ಮಪತ್ನಿ
    November 20, 2008 - 11:41pm
  • kalpana
    ಉ: 'ರೀ’ ಅನ್ನುವ ಒಂದೇ ಸ್ವರ
    November 20, 2008 - 11:19pm
  • kalpana
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:11pm
  • hamsanandi
    ಉ: ಕನ್ನಡೀಕರಿಸಿದ ಶ್ಲೋಕಗಳು - ೧
    November 20, 2008 - 11:04pm
  • palachandra
    ಉ: ನೀವು ಈರುಳ್ಳಿ ಆಲುಗೆಡ್ಡೆ ಹುಳಿಯನ್ನು ಹೀಗೆ ಮಾಡಬಹುದು
    November 20, 2008 - 11:02pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 198 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator