mayajaala
----------------------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರನ ಮಾಯಾಜಾಲ!
www.mayajaala.com
ಬೆಳಕಾಗಿ ಬಾ
ಬೆಳಕಾಗಿ ಬಾ
ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ || ೧ ||
ಕಿವಿಯೊಳಗೆ ಕುಹುಗುಟ್ಟುವ ಕೋಗಿಲೆಯೆ
ಮನದೊಳಗೆ ಮುದ ಮೂಡಿಸುವೆಯೇಕೆ?
ಕರಹಿಡಿದು ಕಾಣದ ಕನಸುಗಳ ಕಾಣಿಸುವೆ
ಮನವೆಂಬ ಮರ್ಕಟದೊಳಗೆ ಮಾಡಿರುವೆ ಮನೆಯೇಕೆ? || ೨ ||
ಸರಿಗಮದ ಸುಧೆಯ ಸವಿಸಿ ಸದ್ದಿಲ್ಲದೆ ಸರಿದಿರುವೆ
ತಳಮಳದ ತಮಸಿನಲಿ ತಿರಸ್ಕರಿಸಿ ತಳುಹಿರುವೆ
ಸೆರೆಮನೆಯಲಿ ಸೆರೆಯಿಟ್ಟರೂ ಸೊಕ್ಕಿನಲಿ ಸಂತಸದಲಿರುವಂತೆ
ತಾನ್ಯಾರು ತನಗೊಪ್ಪುವುದೇನೆಂದು ತನಗರಿಯದೆ ತನ್ನನ್ನೆ ತೊರೆದಿರುವೆ || ೩ ||
ನಿನ್ನದೆ ನೆನಪಿನಲಿ ನರಳುತಿರುವೆ, ನನಗಾಗಿ ನೀನಿಲ್ಲದ ನೋವ ನನ್ನದಾಗಿರಿಸಿರುವೆ
ಬೆಳಕಿಲ್ಲದ ಬಾಳಾಗಿಹುದೆನ್ನದು, ಬೆಳಕಿನ ಬಯಕೆಯಿನ್ನು ಬಾರದು, ಬಯಸಿರುವೆ, ಬರುವುದಾದರೆ ಬಾಯೆನ್ನ್ ಬದುಕಿನ ಬೆಳಕಾಗಿ
>>ಧಾಮ

- mayakar ರವರ ಬ್ಲಾಗ್
- Login or register to post comments
- 237 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಪ್ರತಿಕ್ರಿಯೆಗಳು
ಉ: ಬೆಳಕಾಗಿ ಬಾ
ಮೊದಲನೆ ಪ್‌ಯಾರ ಹಿಡಿಸಿತು..
"ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ" ಚನ್ನಾಗಿದೆ..
ಬಳಿಕ.. ಹದ ಹಿಡಿಸಲಿಲ್ಲ.!
"ನೀನು ನಿನಗಾಗಿ ನನಗಾಗಿ ನಕ್ಕು ನಲಿದೆ
ಹೊಸದಾದ ಹುಮ್ಮಸ್ಸು ಹೊರಚೆಲ್ಲಿ ಹೊರಟೆ
ನಿನ್ನೀ ನಿನ್ನತನದ ನಸುಕಿನಲಿ ನೆಂದು ನಾ ನಲಿದೆ
ಹರೆಯದ ಹೊಸತನವ ಹನಿಹನಿಯಾಗಿ ಹರಡಿಕೊಂಡೆ |"
ಇಶ್ಟು ಸಕ್ಕತ್!! ಅಪ್ಪಟಗನ್ನಡದ ಸವಿಗಂಪಿನ ಇಂಪು!
ಉ: ಬೆಳಕಾಗಿ ಬಾ
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಮಹೇಶ್.
ಕವಿತೆ ಬ್ರೆದು ಮುಉಗಿಸಿದ ನಂತರ ನನಗೆ ಅನಿಸಿದ್ದು, ಇನ್ನು ೧ ಪ್ರಾರಾ ಬೇಕಿತ್ತೆಂದು. ಕವಿತೆಯ ಮೂಲ ಸೂತ್ರ ಸಂತಸದಿಂದ ದು:ಖದೆಡೆಗೆ ಒಯುವುದಾಗಿತ್ತು. ಹಾಗಾಗಿ ಅದು ಚಿಕ್ಕದಾಗಿದ್ದು ಸಂತಸವುಣಿಸುವ ಪ್ಯಾರಾ ಅದೊಂದೆ ಆಗಿರಲೆಂದು ಹಾಗೆ ಉಳಿಸಿದೆ
----------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರ!
www.mayajaala.com
ಉ: ಬೆಳಕಾಗಿ ಬಾ
ಪ್ರವೀಣ್, ಬರೀತಾನೇ ಇರಿ
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
http://platonic.techfiz.info