mayajaala
----------------------------------------------------------------------------------
ಮನಸಿನ ಮಾಯಾಜಾಲದ ಮಾಯೆಯ ಮರ್ಮವನರಿಸಲು ಮೂಡಿದ ಮಾಯಾಕರನ ಮಾಯಾಜಾಲ!
www.mayajaala.com
ಕನಸಿನ ಕನ್ಯ
ಕನಸಿನ ಕನ್ಯ
ರವಿಯ ರಮ್ಯತೆಯಲಿ ರಮಿಸಿರುವೆ ರತ್ನದಂತೆ
ಕವಿಯ ಕವಿತೆಯಲಿ ಕುಳಿತಿರುವೆ ಕರಗದಂತೆ
ದಿನದ ದಿನಚರಿಯ ಧರಿಸಿರುವೆ ಧರಿತ್ರಿಯಂತೆ
ಮನದ ಮಮತೆಯಲಿ ಮಲಗಿರುವೆ ಮಗುವಿನಂತೆ ||೧||
ಸುಧೆಯ ಸವಿಸಿರುವೆ ಸುಂದರ ಸಮುದ್ರದಂತೆ
ಹ್ರುದಯ ಹೊಮ್ಮಿಸಿರುವೆ ಹೊಸ ಹುಮ್ಮಸ್ಸಿನಂತೆ
ಚಿತ್ತವ ಚೆಲ್ಲಿರುವೆ ಚಿತ್ತಾರದ ಚಿತ್ರದಂತೆ
ಹುತ್ತವ ಹುಟ್ಟಿಸಿರುವೆ ಹೊಂಗನಸಿನ ಹರುಷದಂತೆ ||೨||
ಕಣ್ಣಂಚಿನಲೆ ಕಂಡಿರುವೆ ಕರುಣೆಯನು ಕನಸಿನಂತೆ
ಕಾರಂಜಿಯಲೆ ಕುಣಿದಿರುವೆ ಕನಸಿನ ಕನ್ಯೆಯಂತೆ
ನಲುಮೆಯಲಿ ನಲಿದಿರುವೆ ನವಿಲಿನ ನಾಟ್ಯದಂತೆ
ಒಲುಮೆಯಲಿ ಒಲಿದಿರುವೆ ಒಡಲಾಳದ ಓಟದಂತೆ ||೩||
ಸುಪ್ತದಿ ಸರಿದಾಡಿರುವೆ ಸರ್ಪದ ಸರಸದಂತೆ
ಗುಪ್ತದಿ ಗಡಿದಾಟಿರುವೆ ಗರುಡನ ಗರ್ವದಂತೆ
ಸರ್ವತ್ರವೂ ಸಮಾಗಮಿಸಿರುವೆ ಸುಗಂಧದ ಸ್ವಾದದಂತೆ
ವಿಚಿತ್ರವೂ ವಿರಮಿತವಾಗಿದೆ ವೈರಾಗ್ಯದ ವಾದದಂತೆ ||೪||
ತಮಸಿನಲಿ ತಳುಹಿರುವೆ ತೊರೆದಿರುವೆ ತಂತ್ರದಂತೆ
ಕನಸಿನಲಿ ಕಂಡಿರುವೆ ಕಾಣೆಯಾಗಿರುವೆ ಕೆಂಡದ ಕೆಂಪಿನಂತೆ
ಮರೆವೆಂಬುದ ಮರೆಸಿರುವೆ ಮಾಯಗಾರನ ಮಂತ್ರದಂತೆ
ಹಸಿವೆಂಬುದ ಹೊರಗಿರಿಸಿರುವೆ ಹೊಸಿಲಾಚೆಯ ಹಣತೆಯಂತೆ ||೫||
ಚೆಲುವನ್ನು ಚೆಲ್ಲು ಚಂದಿರನ ಚಂದದಂತೆ
ಗೆಲುವನ್ನು ಗೆಲ್ಲು ಗಂಧರ್ವನ ಗಾನದಂತೆ
ಅರಿಸಿರುವೆ ಅರ್ಥವ ಅರಸಿನ ಆಕಾಶದ ಅರಮನೆಯಂತೆ
ಬಯಸಿರುವೆ ಭಾರದ ಬದುಕಿನ ಬಂಗಾರದ ಬೆಡಗಿಯಂತೆ ||೬||
-ಪ್ರವೀಣ್ ಮಾಯಾಕರ್

- mayakar ರವರ ಬ್ಲಾಗ್
- Login or register to post comments
- 173 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ಕನಸಿನ ಕನ್ಯ
ಪ್ರವೀಣ ಅವರೇ, ಕವಿತೆ ಚೆನ್ನಾಗಿದೆ. ಆದರೆ, ಪ್ರಾಸದ ಭಾರದಲ್ಲಿ ನಲುಗಿದೆ.
ಕವಿತೆಗೆ ಪ್ರಾಸ ಸಹಜ ಮುಗುಳ್ನಗುವಂತಿರಲಿ. ಅದು ಬಲವಂತದ ನಗೆಯಾಗುವುದು ಬೇಡ. ಪ್ರಾಸದ ಹಂಗಿರದ, ಅದಕ್ಕಾಗಿ ಕಷ್ಟಪಡದ ರೀತಿ ಕವಿತೆ ಬರೆಯಿರಿ. ಇಲ್ಲದಿದ್ದರೆ ಓದಲು ಚೆನ್ನಾಗಿರುತ್ತದೆ. ಆದರೆ, ಮನಸ್ಸಿನಲ್ಲಿ ನಿಲ್ಲುವುದಿಲ್ಲ.
ನಿಮ್ಮ ಕವಿತೆಯ
” ಮರೆವೆಂಬುದ ಮರೆಸಿರುವೆ ಮಾಯಗಾರನ ಮಂತ್ರದಂತೆ
ಹಸಿವೆಂಬುದ ಹೊರಗಿರಿಸಿರುವೆ ಹೊಸಿಲಾಚೆಯ ಹಣತೆಯಂತೆ”
ಎಂಬ ಸಾಲುಗಳು ಹಿಡಿಸಿದವು.
- ಚಾಮರಾಜ ಸವಡಿ
ಉ: ಕನಸಿನ ಕನ್ಯ
ಕವನ ಬಹಳ ಸುಂದರವಾಗಿದೆ ಪ್ರವೀಣ್...!
ಹೀಗೆ ಬರೆಯುತ್ತಲಿರಿ..!
-ಯುವಪ್ರೇಮಿ