ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › manjunathsinge ರವರ ಬ್ಲಾಗ್

"ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

October 16, 2008 - 1:30am — manjunathsinge

ಮುಂಬೈಯಲ್ಲಿರುವ ವಲಸಿಗರು ಥ್ಯಾಕ್ರೆಯ ಸಿಂಹಗರ್ಜೆನೆಗೆ ಬೆಚ್ಚಿಬಿದ್ದರು. ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವ ಪಾಠ ಕಲಿತರು. ಆದರೆ ಕನ್ನಡಿಗರು ಬೆಂಗಳೂರಿಗೆ ಬಂದ ವಲಸಿಗರಿಗೆ ಎಲ್ಲರೂ ನಮ್ಮ ಜನರಲ್ಲವೇ ಎಂದು ಸಹಿಷ್ಣುತೆ ತೋರಿಸಿದರು. ಸಿಕ್ಕಿದ್ದೇನು? "www.leavingbangalore.com" ಅಭಿಯಾನ! ಸ್ಥಳೀಯ ನೆಲ, ಸಂಸ್ಕೃತಿ, ಭಾಷೆ, ಭಾವನೆಗಳ ಅವಹೇಳನ. ಎಷ್ಟೋ ಜನರಿಗೆ ಬೆಂಗಳೂರು ಕಲ್ಪವೃಕ್ಷವಿದ್ದಂತೆ; ಮೊದಲ ನೌಕರಿ, ಮೊದಲ ಸಂಬಳ, ಮೊದಲ ಕಾರು, ಮೊದಲ ಮನೆ, ಎಲ್ಲಕ್ಕಿಂತ ಮಿಗಿಲಾಗಿ ತಾಳ್ಮೆಯುಳ್ಳ ಕನ್ನಡಿಗರ ಸ್ನೇಹ-ವಿಶ್ವಾಸಗಳೆಲ್ಲ ದೊರೆತದ್ದು ವಲಸಿಗರ ಸೌಭಾಗ್ಯವಲ್ಲವೇ? ಇದನ್ನು ಮರೆತ ಕೆಲ ಕಿಡಿಗೇಡಿ ವಲಸಿಗರು ಬೆಂಗಳೂರಿನ ಮೂಲಭೂತ ಸೌಕರ್ಯಗಳನ್ನು ತಿರಸ್ಕೃತ ಮನೋಭಾವನೆಯಿಂದ ನೋಡುತ್ತಿರುವುದು ಅವರ ಸಂಕುಚಿತ ಸ್ವಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

"ದೇಸೀ ಮಾತು" ಬ್ಲಾಗಿನಲ್ಲಿರುವ "ಹೋಗುವುದಿದ್ದರೆ ಬೇಗ ತೊಲಗಿ ಪೀಡೆಗಳೆ" ಎಂಬ ಲೇಖನದ ಶಿರ್ಷಿಕೆ ಹೇಳುವುದನ್ನು ನೇರವಾಗಿ, ಪರಿಣಾಮಕಾರಿಯಾಗಿ ಹೇಳುತ್ತದೆ. ಬೆಂಗಳೂರಿನಲ್ಲಿ ಸುಮಾರು 60%ಗಿಂತ ಹೆಚ್ಚು ಜನ ವಲಸೆ ಬಂದವರು. ಅವರೆಲ್ಲ ಇಲ್ಲಿ ಬಿಡಾರ ಹಾಕಿದ್ದರಿಂದಲೇ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಶುರುವಾಗಿದ್ದು. ಅದನ್ನು ಮರೆತ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ರಸ್ತೆಗಳು ಸರಿಯಿಲ್ಲ, ಟ್ರಾಫಿಕ್ ಮಿತಿಮೀರಿದೆ, ಪರಿಸರ ಮಾಲಿನ್ಯವಾಗುತ್ತಿದೆ, ಜನರಿಗೆ ಕನ್ನಡದ ಬಗ್ಗೆ ಎಲ್ಲಿಲ್ಲದ ’ಗರ್ವ’ವಿದೆ, "IT Hub" ಹೋಗಿ "Begger hub" ಆಗುತ್ತಿದೆ ಎನ್ನುವುದು ಸರಿಯೇ? ಅಷ್ಟೇ ಅಲ್ಲ, "ಎಲ್ಲ ಭಾಷೆಗಳನ್ನು ಪ್ರೀತಿಸಿ, ಕನ್ನಡವನ್ನು ಪೂಜಿಸುವ" ಕನ್ನಡಿಗರಿಗೆ, ಕನ್ನಡದ ಬಗ್ಗೆ ದುರಭಿಮಾನವಿದೆಯೆನ್ನುವುದು ನ್ಯಾಯವೇ? "ಉಪ್ಪು ತಿಂದ ಮನೆಗೆ ಎರಡು ಬಗೆಯುವ" ಈ ಕಿಡಿಗೇಡಿ "ಕುನ್ನಿಗಳು" ಇದ್ದರೆಷ್ಟು ಬೆಂಗಳೂರು ಬಿಟ್ಟು ತೊಲಗಿದರೆಷ್ಟು, ಹೋದರೆ ಹೋಗಲಿ, ಬೆಂಗಳೂರಿನ ಉಪ್ಪಿನ ಋಣ ಅವರನ್ನು ಅನ್ನ ಸಿಗದ ನಗರದಿಂದ ಪುನಃ ಕೈಬೀಸಿ ಕರೆದಾಗ ಗೊತ್ತಾಗುತ್ತದೆ ಈ ನೆಲದ ಘನತೆ.

ಭಾರತದಲ್ಲಿ "ವಿವಿಧತೆಯಲ್ಲಿ ಏಕತೆ" ಇದೆ ಎಂದು ಎದೆತಟ್ಟಿ ಹೇಳುವ ನಾವೆಲ್ಲರು(ಕನ್ನಡಿಗರು+ಕನ್ನಡೇತರರು), ವಿವಿಧ ಭಾಗಗಳಲ್ಲಿರುವ ಸಂಸ್ಕೃತಿ, ಭಾಷೆ, ಭಾವನೆಗಳನ್ನು ಗೌರವಿಸುವುದನ್ನು ಕಲಿಯಬೇಕು. ಮತ್ತೊಂದು ಪ್ರದೇಶದ/ಭಾಗದ ಭಾಷೆ ಸಂಸ್ಕೃತಿಯನ್ನು ಗೌರವಿಸುವುದರಿಂದ ನಮ್ಮ ಮಾತೃಭಾಷೆಗೇನು ಧಕ್ಕೆಯಾಗವುದಿಲ್ಲ; ಬದಲಾಗಿ ಇನ್ನೂ ಲಾಭವೇ ಎನ್ನಿ. ಬೇರೆ ಭಾಷೆ/ಸಂಸ್ಕೃತಿಯನ್ನು ಕಲಿಯುದರಿಂದ/ಗೌರವಿಸುವುದರಿಂದ ಎರಡು ಸಂಸ್ಕೃತಿಗಳ ಮಿಲನವಾಗುತ್ತದೆ, ಮಾತೃಭಾಷೆಯ ಸಾಹಿತ್ತಿಕ ಉದ್ದಗಲಗಳು ಹಿಗ್ಗುತ್ತವೆ. ಉದಾಹರಣೆಗೆ, ಮಹಾರಷ್ಟ್ರದಲ್ಲಿ ಹೋಗಿ ಅಲ್ಲಿನ ಸಂಸ್ಕ್ರತಿಯನ್ನು ಗೌರವಿಸುವುದರಿಂದ ಕನ್ನಡಕ್ಕೇನು ಧಕ್ಕೆಯಿಲ್ಲ, ಆದರೆ ಆ ಸಂಸ್ಕೃತಿಯ "ಒಳ್ಳೆತನವನ್ನು" ಕನ್ನಡಿಸಿದರೆ ಕನ್ನಡ ಮತ್ತಷ್ಟು ಶ್ರೀಮಂತವಾಗುತ್ತದೆ. ಅದೇ ರೀತಿ, ಮರಾಠಿಗರು ಕರ್ನಾಟಕಕ್ಕೆ ಬಂದು ಇಲ್ಲಿನ ಸಂಸ್ಕೃತಿಯ "ಒಳ್ಳೆತನವನ್ನು" ಮರಾಠಿಗೆ ಕೊಂಡೊಯ್ದರೆ ಮರಾಠಿಗಷ್ಟೇ ಲಾಭವೇ? ಕನ್ನಡದ ಹೆಸರು ಮತ್ತಷ್ಟು ಹರಡುವುದಿಲ್ಲವೇ? ಇದನ್ನರಿಯದು ಮೂರ್ಖರು "www.leavingbangalore.com" ನಂತಹ ಕಿಡಿಗೇಡಿ ಕೆಲಸ ಮಾಡಿದ್ದು ನಿಜಕ್ಕೂ ಶೋಚನೀಯ. ಸದ್ಯಕ್ಕೆ, www.leavingbangalore.com ವೆಬ್ ಸೈಟಿನ ಎತ್ತಂಗಡಿ ಕಾರ್ಯ ಮುಗಿದಿದೆ. ಆದರೆ ವಲಸಿಗರಲ್ಲಿರುವ ಸಂಕುಚಿತ ಮನೋಭಾವ ಭೂದಿ ಮುಚ್ಚಿದ ಕೆಂಡದಂತಿದೆ. ಅದನ್ನು ಆರಿಸಲು ಕನ್ನಡದಲ್ಲಿ ಒಬ್ಬ ರಾಜ್ ಥ್ಯಾಕ್ರೆ ಹುಟ್ಟಬೇಕೋ ಏನೋ...
ಸೂ: ಈ ಲೇಖನದ ಶಿರ್ಷಿಕೆ ಕುಮಾರಸ್ವಾಮಿ ಕಡಾಕೊಳ್ಳರವರ ಟೀಕೆಯಿಂದ ಆಯ್ದುಕೊಂಡದ್ದು.

~.~
  • manjunathsinge ರವರ ಬ್ಲಾಗ್
  • Login or register to post comments
  • 540 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 16, 2008 - 3:33am — hamsanandi

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

hamsanandi's picture

ಹೊರಡೋರು ಹೊರಡಲಿ Smiling ಅವರೇನು ಅರಿಶಿನ ಕುಂಕುಮದ ಜೊತೆಗೆ ಬಾಗಣಕ್ಕೆ ಕಾಯ್ತಿದಾರಾ Eye-wink ??

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 4:56am — createam

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

createam's picture

ನನಗೂ ನೋಡಿ ತಲೆ ಕೆಡ್ತು. ಇವರು ಹೇಳ್ತಾ ಇರೋದು ನೋಡ್ದ್ರೆ ನಾವೇ ಇವರನ್ನೆಲ್ಲ ಸ್ವಾಗತ ಮಾಡಿ ಕರೆದು ತಂದಿರೋ ಹಾಗಿದೆ. ಹೊಗ್ತೀವಿ ಅಂದ್ರೆ ಹೋಗ್ಲಿ, ನಮ್ಗೂ ಒಳ್ಳೇದೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 8:19am — mrsatish

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mrsatish's picture

ನಿಮ್ಮ ಮಾತು ೧೦೦% ಸರಿಯಾಗಿದೆ... ನಿಜಕ್ಕೂ ನೀವು ಬೆಂಗಳೂರಿನ ಯಾವುದೇ ಒಬ್ಬ ಅಚ್ಚಕನ್ನಡಿಗನ ಕೇಳಿ, ಎಲ್ಲ ಕನ್ನಡಿಗರೂ ಈ ವಲಸೆಗಾರರ ಬೇಜವಾಬ್ದಾರಿ ಜೀವನ ಶೈಲಿಯ ಬಗ್ಗೆ ಬೇಸತ್ತಿದ್ದಾರೆ. ಬೆಂಗಳೂರಿಗೆ ಶಪಿಸುತ್ತಾ ಮಜಾ ತಗೋಳ್ಳೋ ಇವರುಗಳೆಲ್ಲಾ ಸದ್ದಿಲ್ಲದೇ ಇಲ್ಲೇ ಠಿಕಾಣಿ ಹೂಡುತ್ತಾರೆ...ಯಾಕೆಂದರೆ ನಮ್ಮ ದೇಶದಲ್ಲಿ ಬೆಂಗಳೂರಿನಷ್ಟು ನೆಮ್ಮದಿಯ ಜೀವನಕ್ಕೆ ಯೋಗ್ಯವಾದ ಜಾಗ ಇನ್ನೊಂದಿಲ್ಲವಲ್ಲ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 9:22am — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ನನ್ ಹಳೆ-ಕಂಪೆನಿಯಲ್ ಹೇಳ್ತಿದ್ರು ಹೊರಗಡೆಯೋರು ಇಲ್ದೇ ಇದ್ರೆ ನಮ್ ಬೆಂಗಳೂರ ಎಕಾನಮಿ ಬಿದ್ದೋಗತ್ತಂತೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 9:32am — sonalisiddarth

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

sonalisiddarth's picture

ಅಬ್ಬಾ! ಅವರೆಲ್ಲಾ ಹೋದ್ರೆ ನೆಮ್ಮದಿಯಾಗಿರಬಹುದು.......ಸಲ್ಪವಾದರೂ ಕನ್ನಡ ಕೇಳಿ ಬರುತ್ತೆ ಬೆಂಗಳೂರಿನಲ್ಲಿ!!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 9:42am — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ಯಾರು ಎಲ್ಲೂ ಹೋಗಲ್ಲ.. ಇಲ್ಲೇ ಇರ್ತಾರೆ..

ಇದೊಂತರ ನಸುಗುನ್ನಿಆಟ Smiling

ನಸುಗನ್ನಿ = ಚಿಕ್ಕನಾಯಿಮರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:54am — ರಾಮಕುಮಾರ್

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

ರಾಮಕುಮಾರ್'s picture

ವಿಷಯಾಂತರಕ್ಕೆ ಕ್ಷಮಿಸಿ...
ನಸುಗುನ್ನಿ ಕಾಯಿ ನೆನಪಾಯ್ತು. ನವುರಾದ ರೋಮಗಳುಳ್ಳ ಈ ಕಾಯಿ ತಾಗಿದಾಗ ಉಂಟಾಗುವ ನವೆ ಅನುಭವಿಸಿದವರಿಗೇ ಗೊತ್ತು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:26am — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ಈ "ಬಿಟ್ಟು ಹೋಗುವ" ಅಭಿಯಾನ ಬಹುಶ ಎಲ್ಲ ಹೊರಗಿನವರ ಅಭಿಪ್ರಾಯವಾಗಿರಲಾರದು.

"ಅಲ್ಲೀವರ್ಗೆ ಬಿಟ್ಟು ಬರ್ಲಾ" "ಊಟ ಮಾಡ್ಕೊಂಡು ಹೋಗಿ" "ಹೋಗಿ ಮುಟ್ಟಿದ ಮೇಲೆ ಕ್ಷೇಮ ಸಮಾಚಾರಕ್ಕೆ ಪತ್ರ ಬರೆಯಿರಿ" "ಆಯ್ತಮ್ಮ, ದಾರೀಲಿ ಹುಷಾರು" ಮುಂತಾದ ಅಭಿಯಾನಗಳು ಇನ್ನು ಹುಟ್ಟಿಕೊಳ್ಳಬಹುದು.

"ಹೋಗುವುದಿದ್ದರೆ ಬೇಗ ತೊಲಗಿ" ಎನ್ನುವುದೇ ಸರಿಯಾದ ಉತ್ತರ ಇದಕ್ಕೆ. (ತುಳುವಿನಲ್ಲಿ "ಒರಾ ಪೋಲ") Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:48am — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ಬಲಿಗ...

ತುಳು ತೆಲುಗಿಗೆ ಬಲು ಹತ್ತಿರವಾದ ನುಡಿ..

ಪೋಲ = ಪೋರ( ಹೋಗಲೇ ಅಂದ ಹಾಗೆ )

ಹಾಗೆ ಸಂಪದಿ(ದೆ)ತಿ ಇದೂ ಕೂಡ ಕನ್ನಡವೇ! Smiling

"ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ" ಎಂದು ಕನ್ನಡಿಗರೇ ಹೋರಾಟ ಶುರು ಮಾಡಬೇಕು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:57am — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

"ವಲಸಿಗರೇ ಕರ್ನಾಟಕ ಬಿಟ್ಟು ತೊಲಗಿ" ಎಂದು "ಕನ್ನಡಿಗರೇ" ಹೋರಾಟ ಶುರು ಮಾಡಬೇಕು

ತುಳುವರ ಸಹಾಯ ಬೇಡಾ ಅಂತೀರಾ? Smiling

ಗುರು ಬಾಳಿಗ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 12:01pm — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ರೀ ತುಳುವರೂ ಕನ್ನಡಿಗರೇ!

ನಾನಂತು ಅವರನ್ನ ಕನ್ನಡಿಗರಲ್ಲ ಎಂದು ಎಣಿಸೇ ಇಲ್ಲ.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 12:05pm — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ಸೊಲ್ಮೆಲು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 12:32pm — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ಸೊಲ್ಮೆಗಳು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 2:10pm — anil.ramesh

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

anil.ramesh's picture

ಸೊಲ್ಮೆ ಅಂದ್ರೆ ನನ್ನಿ ನಾ?

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 2:20pm — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ಕನ್ನಡದಲ್ಲಿ ತುೞಿಲು(saluation)

ತುೞಿ/ತೊೞಿ = to worship, adore, pay homage to;
ತೊೞು = saluation

ಇದೇ ತುಳುವಲ್ಲಿ ಸುಳಿ/ಲಿ => ಸೊಲಿಮೆ => ಸೊಲ್ಮೆ ಆಗಿದೆ.

ತುರ್‍ಲಿ ಅಂತ ಒಂದು ತುಳು ಒರೆ ಇದೆಯಂತೆ.

http://dsal.uchicago.edu/cgi-bin/philologic/getobject.pl?c.1:1:940.burro...

Ta. tor̤u (-v-, -t-) to worship, adore, pay homage to; tor̤ukai worshipping, adoration, prayer; tor̤uvu worshipping, adoration.

-- 310 --

Ma. tor̤uka to salute by joining the hands, acknowledge superiority. Ka. tur̤il salutation, obeisance, bow. Koḍ. to- (topp-, tott-) to salute. Tu. turli obeisance; solma, solmè salutation. Go. (Mu.) doṛī- to bow (Voc. 1902). Pe. ṭoḍ- (ṭoṭt-) id. Manḍ. ṭuḍ- to bow head. ? Konḍa tuRpa- to invoke gods, fulfil a religious vow, adore, worship, DED(S, N) 2904.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 2:24pm — anil.ramesh

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

anil.ramesh's picture

ಇನ್ಮುಂದೆ ಸೊಲ್ಮೆಗಳು ಅಂತನೂ ಹೇಳ್ಬೋದು...

ಸೊಲ್ಮೆ: ಆಹಾ! ಅದ್ಭುತವಾಗಿದೆ...

ಸೊಲ್ಮೆಗಳು ಮಹೇಶ... Smiling

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 2:35pm — mahesha

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

mahesha's picture

ರಮೇಶ..

ಆದರೆ ಇದು ಕನ್ನಡಕ್ಕೆ ಒಪ್ಪಿಗೆ ಆಗದೇ ಇರಬೋದು

ಕನ್ನಡದಲ್ಲಿ ಸೊಲ್ ಅಂದರೆ ಹೇಳು/ಉಲಿ/ನುಡಿ

ಸೊಲ್ಮೆ = ಹೇಳಿಗೆ/ನುಡಿಕೆ/ಉಲಿಕೆ ಎಂಬ ತಿಳಿವು ಬರುವುದು..!

ತುಳವಲ್ಲಿ ಹೇಳು ಅನ್ನಲು... ಏನ್ ಅಂತಾರೆ..!

ಈ ವಿಶಯ ಬೇರೆ ಕಡೆ ಮಾತಾಡಣ.

ಇಲ್ಲಿ ಕುನ್ನಿಗಳ ಬಗ್ಗೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 2:40pm — anil.ramesh

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

anil.ramesh's picture

ಸಣ್ಣ ಬದಲಾವಣೆ, ರಮೇಶ ಅಲ್ಲ ಅನಿಲ್...

ರಮೇಶ್ ನನ್ನ ತಂದೆಯವರ ಹೆಸರು...
ನನ್ ಹೆಸ್ರು ಅನಿಲ್.

ಇಂತಿ ನಿಮ್ಮ,
ಅನಿಲ್ ರಮೇಶ್.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 4:46pm — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ಮಾಯ್ಸರೆ
ಇಲ್ಲೊಂದು ತುಳು ಕನ್ನಡ ನುಡಿ ಚರ್ಚೆಗೆ ಚೆಲುವಾದ ಅವಕಾಶವಿದೆ.
ಸುರು ಮಾಡಿ. ಇನ್ನೊಂದು ತಂತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 6:42pm — vasant.shetty

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

vasant.shetty's picture

ತುಳುವರು, ಕನ್ನಡಿಗರು ಬೇರೆ ಬೇರೆ ಅಲ್ಲ.

ತುಳುವರಲ್ಲಿರುವ ಭೂತ ಕೋಲ, ಭೂತಾರಾಧನೆ, ಯಕ್ಷಗಾನ, ಕಂಬಳ ಎಲ್ಲವೂ ಉಡುಪಿಯಿಂದಿಚೆಯ,ಕುಂದಾಪುರದವರೆಗಿನ ಕನ್ನಡ ಮಾತಾಡೋ ಜನರಲ್ಲೂ ಇದೆ. ತುಳು ಒಂದು ಬೇರೆಯೆ ಸಂಸ್ಕೃತಿ ಅಂತೇನು ಇಲ್ಲ. ನನ್ನ ಮನೆಯಲ್ಲೆ ತುಳು-ಕನ್ನಡ ಮಾತಾಡೋ ಸಂಬಂಧಿಗಳಿದ್ದಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಯಲ್ಲೆಂದೂ ತುಳುವರು ಬೇರೆ, ಕನ್ನಡಿಗರು ಬೇರೆ ಅನ್ನುವ ಭಾವನೆ ಬಂದಿಲ್ಲ. ಅದೇನಿದ್ರೂ ಕನ್ನಡಿಗರಲ್ಲಿನ ಒಗ್ಗಟ್ಟು ಮುರಿಬೇಕು ಅನ್ನೋರು ಮಾತಾಡೋ ಹಳಸಲು ಸರಕು ಅಷ್ಟೇ.

ಕರ್ನಾಟಕಕ್ಕೆ, ಕನ್ನಡಿಗರಿಗೆ ಹೆಮ್ಮೆ ತಂದ ಯೋಗರಾಜ್ ಭಟ್, ಕಯ್ಯಾರ್ ಕಿಯ್ಯಣ್ಣ ರೈ, ಹರಿಕೃಷ್ಣ ಪುನರೂರು, ಗುರುಕಿರಣ್ ಎಲ್ಲರೂ ತುಳು ಮಾತಾಡೋ ಕನ್ನಡಿಗರು.
ಸುಮ್ನೆ ತುಳು ಬೇರೆ, ಕನ್ನಡ ಬೇರೆ ಅನ್ನೊ ವಾದ ಮಾಡೋರಿಗೆ ಜೋಡೆಟು ಹಾಕಬೇಕು.

-
ವಸಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 8:07pm — manjunathsinge

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

manjunathsinge's picture

ನಿಮ್ಮ ಮಾತು ನೂರಕ್ಕೆ ನೂರು ಸತ್ಯ ವಸಂತ ಅವರೆ. ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಸಹ ಒಂದು. ಅದು ಕನ್ನಡದ ಮಡಿಲನ್ನು ಸೇರಿ, ಕನ್ನಡದ ಲಿಪಿಯನ್ನು ಬಳಸಿ, ಕರಾವಳಿ ಕನ್ನಡಿಗರಲ್ಲಿ ಹೊಸದೊಂದು ಸಂಸ್ಕೃತಿ ಮತ್ತು ವೈವಿಧ್ಯತೆಯನ್ನು ತಂದುಕೊಟ್ಟ ಅಪೂರ್ವ ಭಾಷೆ. ಮಂಗಳೂರಿನ ಹತ್ತಿರ ನಾಲ್ಕು ವರ್ಷ ಕಾಲ ಕಳೆದರೂ, "ತುಳು ಗೊತ್ತಿಜ್ಜಿ ಮಹಾರಾಯರೆ" ಎನ್ನುವುದನ್ನು ಬಿಟ್ಟು (ತುಳುವಿನಲ್ಲಿ) ಬೇರೇನನ್ನು ಕಲಿಯದಿದ್ದಕ್ಕೆ ಕೆಲವೊಮ್ಮೆ ಬೇಜಾರಗುತ್ತದೆ.

ಯಾರು ಏನೇ ಹೇಳಲಿ, ಕನ್ನಡೇತರರು ಬೇರೆ ಭಾಷೆಗಳ ಬಗ್ಗೆ ಏನೇ ಹೇಳಲಿ, ಅದನ್ನು ಧಿಕ್ಕರಿಸಿ, "ಎಲ್ಲಾ ಭಾಷೆಗಳನ್ನು ಪ್ರೀತಿಸು, ಕನ್ನಡವನ್ನು ಪೂಜಿಸು" ಎನ್ನುವ ಕವಿಗಳ ಮಾತಿನಂತೆ ಕನ್ನಡಿಗರು ವರ್ತಿಸಿದರೆ ಅದು ನಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ. ಈ ಲೇಖನದಲ್ಲಿ ಮೊದಲೇ ಹೇಳಿದ ಹಾಗೆ, ಬೇರೆ ಭಾಷೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರಿಂದ ಕನ್ನಡದ ಸಾಹಿತ್ತಿಕ ಉದ್ದಗಲಗಳು ಮತ್ತಷ್ಟು ಹಿಗ್ಗುತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 10:08pm — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ನಿಮ್ಮ ಬರಹದ ಭಾವವನ್ನು ನಾನು ಗ್ರಹಿಸಿದ್ದೇನೆ. ಚೆನ್ನಾಗಿದೆ.
"ತುಳು ಒಂದು ಬೇರೆಯೆ ಸಂಸ್ಕೃತಿ ಅಂತೇನು ಇಲ್ಲ."
ತುಳುವರ ಸಂಸ್ಕೃತಿ ಕೊಂಚ ಭಿನ್ನ. ಅಲ್ಲವೇ ಶೆಟ್ರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 10:54pm — vasant.shetty

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

vasant.shetty's picture

ಭಾಷೆಯಾಗಿ ತುಳು ಕೊಂಚ ಭಿನ್ನವೇ ಹೊರತು ಆಚಾರ-ವಿಚಾರದಲ್ಲಿ ತುಳುವರಿಗೂ-ಕನ್ನಡಿಗರಿಗೂ ವ್ಯತ್ಯಾಸವಿಲ್ಲ.
-
ವಸಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 16, 2008 - 11:51pm — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ಇದೆ ಶೆಟ್ರೆ. ಯೋಚನೆ ಮಾಡಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 17, 2008 - 2:12pm — Rakesh Shetty

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

Rakesh Shetty's picture

ರಾಕೇಶ್ ಶೆಟ್ಟಿ

ಗುರು
ಯಾವುದೇ ವ್ಯತ್ಯಾಸ ಇದೆ ಅಂತ ಅನ್ನಿಸುವುದಿಲ್ಲ, ಯಾಕೆಂದರೆ ನಾನು ತುಳು ಭಾಷೆಯಾವನು , ಆದ್ರೆ ನಾನು ಕನ್ನಡಿಗ ಎಂದು ಹೇಳಲು ಹೆಮ್ಮೆಯಾಗುತ್ತದೆ ನನಗೆ. ನಾವು ಒಂದೇ ತಾಯಿಯ ಮಕ್ಕಳಿದ್ದ ಹಾಗೆ. ಇಬ್ಬರ ಗುಣ ಬೇರೆ ಇರಬಹುದು ಆದರೆ ಗುರಿ ಒಂದೇ. ಅದು ಕನ್ನಡ ಕನ್ನಡ ಕನ್ನಡ...

ರಾಕೇಶ್ ಶೆಟ್ಟಿ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 18, 2008 - 12:20pm — gurubaliga

ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"

gurubaliga's picture

ಅದೇ ಶೆಟ್ರೆ,
ನಮ್ಮ ನಾಡಿನ ಸೊಗಡು, ಗುರಿ ಒಂದೇ. ಗುಣ ಬೇರೆ.
ತುಳುವರ ಸಂಸ್ಕೃತಿ ಬೇರೆ. ತುಳುವರ ಆಚಾರ, ತಿಂಡಿ ತಿನಸು, ಜನಪದ, ಇವೆಲ್ಲ ಘಟ್ಟದ ಮೇಲಿಗಿಂತ ಭಿನ್ನವಾದದ್ದು.
ಇಲ್ಲಿ ತುಳುವರ ಕನ್ನಡಾಭಿಮಾನದ ಬಗ್ಗೆ ಎರಡು ಮಾತೇ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಓದಿದ್ದು ಕೇಳಿದ್ದು ನೋಡಿದ್ದು-25
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
  • ಇವರೀಗ ಯಾವ ಕಾಲದಲ್ಲಿದ್ದಾರೆ!
  • ನಾಳೆ ನೀವೂ ಮಾಯ.............
  • ಓದಿದ್ದು ಕೇಳಿದ್ದು ನೋಡಿದ್ದು-35 ಸಿಯೋಲಿನಲ್ಲಿ ಸಸ್ಯಾಹಾರ ಸಿಗುತ್ತಾ?
Syndicate content

ಲೇಖಕರು

manjunathsinge's picture

ಪರಿಚಯ

ಹೇಳಿಕೊಳ್ಳುವಂತಹ ಸಾಧನೆ ಇನ್ನೂ ಮಾಡಬೇಕಾಗಿದೆ. ಮಾಡುತ್ತೇನೆ, ಮಾಡಿದ ತಕ್ಷಣ update ಮಾಡುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 403 ಅತಿಥಿಗಳು ಆನ್ಲೈನ್ ಇರುವರು.


ಸತ್ತೆನೆಂದೆನಬೇಡ; ಸೋತೆನೆಂದೆನಬೇಡ ।
ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ।।
ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು ।
ಮತ್ತೆ ತೋರ್ಪುದು ನಾಳೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator