ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನಾನೇಕೆ ಬರೆಯುತ್ತೇನೆ?
ಬರೆಯಬೇಕೆಂಬ ಮಹದಾಸೆ ಬಹಳ ದಿನದಿಂದಿದ್ದರೂ, ಸೋಮಾರಿತನದಿಂದ ಬಹು ಕಾಲ blog Create ಮಾಡಿ ಹಾಗೆಯೇ ಬಿಟ್ಟಿದ್ದೆ. ಇವತ್ತೇಕೊ ಶುರೊ ಮಾಡಬೇಕೆಂಬ ಉತ್ಸಾಹ ಪುಟಿದೆದ್ದಿದೆ. ಅನಿಸಿದ್ದನ್ನು ಬರೆಯಲೆ? ಎಲ್ಲರೂ ಮಾಡುವುದು ಅದನ್ನೆ, ನಡೆದದ್ದನ್ನು ಅನುಕರಿಸಲೇ? ಮಕ್ಕಳಾಟಿಕೆಯಾದೀತೆಂಬ ಭಯ. ಸಾಮಾನ್ಯ ಸಂಗತಿಯನ್ನು ಅಸಾಮಾನ್ಯವೆಂಬಂತೆ ಅಭಿವ್ಯಕ್ತಿಸಲೇ? ಕವಿಯ ಕಲ್ಪನೆಯಾದಿತೆಂಬ ಕಸಿವಿಸಿ. ಆದರೂ ಬರೆಯುತ್ತೇನೆ. ಅನಿಸಿದ್ದನ್ನು ಅನುಕರಿಸಿ, ಸಾಮಾನ್ಯವಾದ್ದನ್ನು ಅಂತರ್ ದ್ರುಷ್ಟಿಯಿಂದ ನೋಡಲೆತ್ನಿಸಿ ನವೀನತೆಯನ್ನು ತರುತ್ತೀನೋ ನೋಡಬೇಕು.
ಬರೆಯುವ ಉದ್ದೇಶ ಮಾತ್ರ ಇಷ್ಟೆ, ಒಳಗಿರುವ ಮನಸ್ಸಿಗೆ ಕನ್ನಡಿ ಹಿಡಿಯುದರ ಜೊತೆಗೆ, ಅದರಲ್ಲಿ ಕಾಣುವ ವಸ್ತುಗಳಲ್ಲಿ ಬೇರೊಂದು ಅರ್ಥವನ್ನು ಕಾಣುವ ಹಂಬಲ. ಕೆಲವರು ಅದನ್ನೆ "ಪ್ರತಿಭೆ" ಎನ್ನುತ್ತಾರೆ. ಅಂಥ ಪ್ರತಿಭೆಯನ್ನು ಹೊರಗೆಡುವುವ ಪ್ರತಿಭಾನ(Intuition) ನನ್ನಲ್ಲಿದೆಯೇ ಗೊತ್ತಿಲ್ಲ. ಪ್ರಯತ್ನವಾದರೂ ಮಾಡೋಣ ಎಂಬ ಹಂಬಲ, ಅದಕ್ಕೆ ಬರೆಯುತ್ತೇನೆ. ನೋಡೋಣ ಎಲ್ಲಿಯವರೆಗು ಸಾಗುವೆನೆಂದು......

- manjunathsinge ರವರ ಬ್ಲಾಗ್
- Login or register to post comments
- 574 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನಾನೇಕೆ ಬರೆಯುತ್ತೇನೆ?
Naanu, Kannadiga!-- ನೀವು ಇ೦ಗ್ಲೀಷ್ ಕನ್ನಡಿಗರೋ ಹೇಗೆ ??
ಇರಲಿ ಬರೆಯಿರಿ ! ಹೊಸದು ಬರೆಯಿರಿ - - ಯಾರೂ ಓದಿಲ್ಲದೇ ಇರೋದು .. ಯಾರೂ ಕೇಳಿಲ್ಲದೇ ಇರೋದು ..
ಯಾರೂ ಊಹೆ ಮಾಡೋಕ್ಕೆ ಆಗಲೇ ಬಾರದು .. ಹ೦ಗೇ ಬರೆಯಿರಿ...ಇಲ್ಲಾ ಅ೦ದರೆ ಬರೀಬೇಡೀ..ಓದಿದ್ದೋ ಓದೋಕ್ಕೆ ಬೇಜಾರು ....
ಉ: ನಾನೇಕೆ ಬರೆಯುತ್ತೇನೆ?
ಬರೆಯೋರ್ ಬರಿಲಿ ಬಿಡಿ ಪಾಪ.
ಉ: ನಾನೇಕೆ ಬರೆಯುತ್ತೇನೆ?
Motivate ಮಾಡೋಕ್ಕೆ ಹೀಗ೦ದೆ....
ಉ: ನಾನೇಕೆ ಬರೆಯುತ್ತೇನೆ?
ಮುರಳಿ ಅಣ್ಣ!
motivate = ಹುರಿದುಂಬಿಸು..
ಕನ್ನಡದ ಒರೆ ಐತಲ್ಲ!!
ಉ: ನಾನೇಕೆ ಬರೆಯುತ್ತೇನೆ?
ಒಮ್ಮೊಮ್ಮೆ ಉರಿದು ಹು೦....ಬೀಸ ಬೇಕಾಗುತ್ತೆ.....
ಉ: ನಾನೇಕೆ ಬರೆಯುತ್ತೇನೆ?
ಮುರಳಿ
ಮಂಜುನಾಥಸಿಂಗೆ ಅವರೆ, ಎಲ್ಲರ ಮಾತುಗಳಿಂದ ನಿಮಗೆ motivation (ಹುರುಪು) ಸಿಕ್ಕಿರಲೇ ಬೇಕಲ್ಲವೇ. ಇಲ್ಲವಾದರೆ ನನ್ನ ಹಾರೈಕೆಗಳನ್ನೂ ಸೇರಿಸಿಕೊಂಡುಬಿಡಿ. ಬರೆಯಿರಿ, ಮನದುಂಬಿ ಬರೆಯಿರಿ.
ಉ: ನಾನೇಕೆ ಬರೆಯುತ್ತೇನೆ?
ಸುನೀಲ್ ಅವರೆ, ಬರೆದಿದ್ದೇನೆ ಮತ್ತೊಂದನ್ನ. ನಿಮ್ಮ ವಿಮರ್ಶೆ ನನಗೆ ಸಂಭ್ರಮ!
ಉ: ನಾನೇಕೆ ಬರೆಯುತ್ತೇನೆ?
ಮುರಳಿ ಅವರೆ, ಬರೆದಿದ್ದೇನೆ ಮತ್ತೊಂದನ್ನ. ನಿಮ್ಮ ವಿಮರ್ಶೆ ನನಗೆ ಸಂಭ್ರಮ!
ಉ: ನಾನೇಕೆ ಬರೆಯುತ್ತೇನೆ?
veena.
ಮಂಜುನಾಥ್ ಅವರಿಗೆ ಸಂಪದ ಕುಟುಂಬಕ್ಕೆ ಸುಸ್ವಾಗತ.
ಉ: ನಾನೇಕೆ ಬರೆಯುತ್ತೇನೆ?
veena.
ಮಂಜುನಾಥ್ ಅವರಿಗೆ ಸಂಪದ ಕುಟುಂಬಕ್ಕೆ ಸುಸ್ವಾಗತ.
ಉ: ನಾನೇಕೆ ಬರೆಯುತ್ತೇನೆ?
veena.
ಮಂಜುನಾಥ್ ಅವರಿಗೆ ಸಂಪದ ಕುಟುಂಬಕ್ಕೆ ಸುಸ್ವಾಗತ.
ಉ: ನಾನೇಕೆ ಬರೆಯುತ್ತೇನೆ?
veena.
ಮಂಜುನಾಥ್ ಅವರಿಗೆ ಸಂಪದ ಕುಟುಂಬಕ್ಕೆ ಸುಸ್ವಾಗತ.
ಉ: ನಾನೇಕೆ ಬರೆಯುತ್ತೇನೆ?
veena.
ಮಂಜುನಾಥ್ ಅವರಿಗೆ ಸಂಪದ ಕುಟುಂಬಕ್ಕೆ ಸುಸ್ವಾಗತ.
ಉ: ನಾನೇಕೆ ಬರೆಯುತ್ತೇನೆ?
ವೀಣಾ ಅವರೊಬ್ಬರೇ ಐದು ಬಾರಿ ಮತ್ತು ಬೇರೆ ನಾವೆಲ್ಲರೂ ಸೇರಿ ಹುರಿದುಂಬಿಸಿದ ಪ್ರಭಾವವೋ ಏನೋ, ದೃಷ್ಟಿಯಾಗಿ, ಸಾಕಪ್ಪಾ ಸಾಕು ಅಂತ ಮಂಜುನಾಥಸಿಂಗೆ ಅವರು ತಿರಗಿ ಬರಲೇ ಇಲ್ಲಾಂತ ಕಾಣತ್ತೆ
ಉ: ನಾನೇಕೆ ಬರೆಯುತ್ತೇನೆ?
Optimistic ಆಗಿ ಬಾಳೋ..ದು ಕಲಿಬೇಕು .
ಬಹುಶ: ಅವರು ಮಹತ್ತ್ವದ್ದು ಬರೆಯಬೇಕು ಅ೦ತಾ ಎಲ್ಲೋ ಹೋಗಿರಬೇಕು ..
wait ಮಾಡಿ...lets hope.
ಉ: ನಾನೇಕೆ ಬರೆಯುತ್ತೇನೆ?
ಅದೆಲ್ಲ ಸರಿ...
ಎಲ್ಲಪ್ಪ ಈ ಬ್ಲಾಗ್ ಹಾಕಿದ ಮಾರಾಯ? ನಾಪತ್ತೆ!
ಉ: ನಾನೇಕೆ ಬರೆಯುತ್ತೇನೆ?
ಏನೋ ನಿಜವಾಗಲೂ ಮಹತ್ತ್ವದೇ ಬರೆದಿರಬೇಕು .. ಅಕ್ಷರಕ್ಕೆ ಹಾಕೋದಕ್ಕೆ ಕಷ್ಟ ಪಡ್ತಾಯಿದ್ದನೆ.
ಮುರಳಿ.