ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › manjunathsinge ರವರ ಬ್ಲಾಗ್

ಹೊಸತನದ ಹಳೆ ಕಥೆ

August 5, 2007 - 3:27pm — manjunathsinge

ಬೀರ್ ಹೀರಿ "ಎಂಡ್ಕುಡ್ಕ ರತ್ನ ನಂಜಿನ ಹೊಗಳೊ" ಹಂಗೆ ನನ್ನ ಗೆಳೆಯ 'ವಿಶ್ವ' ನನ್ನ ಬ್ಲಾಗ್ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸುತ್ತಿದ್ದ. ಬಡಪಾಯಿ ನಾನು, ನಿಜ ಇರಬಹುದೇನೊ ಅನ್ಕೊಂಡು, ಸ್ವರ್ಗಕ್ಕೆ ಮೂರೇ ಗೇಣು ಅಂತ ಎಣಿಸ್ತಿದ್ದೆ. "ಕುಡುದ್ ಬಿಟ್ ಮಾತಾಡ್ತವ್ನೆ ನನ್ ಮಗ" ಅಂತ ಕೊಂಚ ಬೇಜಾರೇನೊ ಆಯಿತು. ಅವನು ಅಂದಿದ್ರಲ್ಲಿ ಸ್ವಲ್ಪನಾದ್ರು ನಿಜ ಇರಬೇಕಲ್ಲ ಅಂತ ಸಮಧಾನ ಪಟ್ಟುಕೊಂಡೆ. ಅವನು ಯಾವುದೇ ಸಂಧರ್ಭದಲ್ಲಿ ಹಿಂಗಿಂಗೇ ಪ್ರತಿಕ್ರಿಯೆ ಕೊಡ್ತಾನೆ ಅಂತ ಹೇಳೊಕ್ಕಾಗಲ್ಲ. ಅವಾಗಾವಾಗ ಮಖದ ಮೇಲೆ ವಾನರನ ಗುಣಗಳು ಪ್ರತಿಬಿಂಬಿಸುತ್ತಿರುತ್ತವೆ! ಅದೂ ಒಂದ್ ರೀತೀಲಿ ವಿನೋದ ಪ್ರವೃತ್ತಿ (sense of humour) ಅನ್ಕೊಬಹುದು. ಮನಸ್ಸು ಮಾತ್ರ ಒಳ್ಳೇದು. ಅವನ ಒಂದು ಪ್ರಶ್ನೆ ಮಾತ್ರ ನನ್ನನ್ನು ಗೊಂದಲಕ್ಕೆ ಸಿಲುಕಿಸಿ ಬಿಡುತ್ತೆ. "ಮತ್ತೇನ್ ವಿಷೇಶ?" ಅಂತ. ನನ್ನ ಉತ್ತರ ಮಾತ್ರ: "ಏನಿಲ್ಲಪ್ಪ ಅದೇ ಹಳೇ ಲೈಫು" ಅಂತ. ನಿನ್ನಂಥೊರು ಇನ್ನು ಉಸಿರಾಡ್ತಿರೋದೇ ತಪ್ಪು ಅನ್ನೊ ಹಾಗಿತ್ತು ಅವನ ಪ್ರತಿಕ್ರಿಯೆ!

ಅವನು ಹೇಳೊ ಮಾತಿನನಲ್ಲಿ ಸ್ವಲ್ಪ ಅರ್ಥ ಇತ್ತು ಅಂತ ಕಾಣುತ್ತೆ. ಬೆಳಿಗ್ಗೆ 9 ಗಂಟೆಗೆ ಆಫೀಸಿಗೆ ಬಂದು, ಕಾಫಿ ಕುಡಿದು, ಅವರಿವರ ಹತ್ರ ಸ್ವಲ್ಪ ಹರಟೆ ಹೊಡ್ದು, ಮೇಲ್ ಚೆಕ್ ಮಾಡಿ, ಇದ್ದ ಕೆಲಸ ಮಾಡಿ, lunch time ಅಲ್ಲಿ ಎಲ್ಲರ ಜೊತೆ ಹರಟೆ ಹೊಡಿಯುತ್ತ, ಅತ್ತಿತ್ತ ಕಣ್ಣು ಹಾಯಿಸಿ ಯಾರಾದ್ರು ಕಣ್ಣು ತಂಪು ಮಾಡೋರ್ ಸಿಗ್ತಾರ ಅಂತ ನೋಡಿ, ರೇಡಿಯೊ ಮಿರ್ಚಿಯಲ್ಲಿ ಹೇಳೋ ಹಾಗೆ "ಸಕ್ಕತ್ hot ಮಗಾ!" ಅಂದು, ಊಟ ಮುಗಿಸಿ, ಉಳಿದ ಕೆಲಸ ಮಾಡಿ ಮತ್ತೊಂದ್ ಸಲ ಟೀ ಕುಡ್ದು, "ಹತ್ತಿರದ ಗೆಳೆಯರು" ಅನಿಸಿಕೊಂಡವರ ಜೊತೆ chat ಮಾಡಿ, ಉಫ್ssssss... ಅನ್ನೊ ಹೊತ್ತಿಗೆ 6 ಗಂಟೆ! ಮನೆಗೆ ಹೋಗಿ ಟೀವಿ ನೋಡಿ, ಊಟ ಮಾಡಿ, ಕಥೆ ಕಾದಂಬರಿ ಅಂತ ಕಾಲ ಕಳೆದು ಮಲಗಿಕೊಂಡು ಬೆಳಿಗ್ಗೆ ಎದ್ರೆ, ಮತ್ತೆ ಅದೇ ಹಳೇ ಲೈಫು! ಇನ್ನು weekendಅಲ್ಲಿ ಸಿನಿಮಾನೋ, ಪ್ರವಾಸನೋ, ಗೆಳೆಯರ ಜೊತೆ ಹರಟೆ, ಅಥವ, Forum, Inox, ಗರುಡ mall ಅನ್ನೋದ್ರಲ್ಲೇ ಕಾಲ ಹೋಗಿ ಬಿಡುತ್ತೆ. ಅಷ್ಟಾದ್ರೆ ಮತ್ತೆ "monday morning" ರಾಗ ಶುರು! ತಿಂಗಳಿಗೊಮ್ಮೆ ಊರಿಗೆ ಹೋಗಿ ಅಮ್ಮನ ಕೈಯಿಂದ ಮಾಡಿದ ಮೃಷ್ಟಾನ್ನ ಸವಿದು, 10ಕೇಜಿ ತೂಕ ಜಾಸ್ತಿ ಮಾಡ್ಕೊಂಡು ವಾಪಸ್ ಬಂದುಬಿಟ್ರೆ "ಸಾಫ್ಟ್ ವೇರ್ ಕೂಲಿ" (ನನ್ನ ಗುರುಗಳೊಬ್ಬರು ನನ್ನನ್ನ ಹಾಗೆಯೇ ಕರೆಯೋದು)ಯ ಬದುಕು ಮತ್ತೆ ಮುಂದುವರಿಯುತ್ತದೆ.

ಯಾರಾದ್ರು ಜೀವನ ಹೆಂಗಿದೆ ಮಗಾ(Hows life)? ಅಂತ ಕೇಳಿದ್ರೆ ಸಿಡಿಲು ಬಡಿದಂತಹ ಅನುಭವ! ಇಂಜಿನೀಯರಿಂಗ್ ಮುಗಿಸಿ, ಒಳ್ಳೇ ಸಂಬಳ ಕೊಡೊ MNC ಯಲ್ಲಿ ಕೆಲಸಕ್ಕೆ ಸೇರಿಕೊಂಡು, ವರ್ಷ ಕಳೆದಂಗೆ ಕಂಪನಿ shift ಮಾಡಿ, ಸಂಬಳ ಜಾಸ್ತಿ ಮಾಡ್ಕೊಂಡು, ದುಡ್ದು ಗಳಿಸಿ, ಸುಂದರವಾಗಿರೊ ಹುಡುಗಿನ್ನ ಹುಡುಕಿ, love story ಶುರು ಮಾಡ್ಕೊಂಡು, ಅವಳಿಲ್ಲಾ ಅಂದ್ರೆ ಬೇರೆಯವಳನ್ನ ಹುಡುಕಿ ಮದುವೆ ಮಾಡ್ಕೊಂಡು, ಸ್ವಲ್ಪ ದಿನ ಆದ್ ಮೇಲೆ ಮಹಾನಗರದಲ್ಲೆ ದೊಡ್ಡ ಮನೆ ಖರೀದಿ ಮಾಡಿ, ಕಾರ್ ತೊಗೊಂಡು, ಜೀವನದ ಸುಖವನ್ನು ಉಕ್ಕಿ ಹರಿಸುವ ಮಕ್ಕಳನ್ನು ಹೆತ್ತು, ಆರಾಮಾಗಿ ಇರುತ್ತ, ಬೇಕಾದಷ್ಟು ದುಡ್ಡು ಗಳಿಸಿ, ಮಾಡುತ್ತಿರುವ ಕೆಲಸದಲ್ಲಿ promotion ಗಿಟ್ಟಿಸಿಕೊಂಡು, ಶರವೇಗದಲ್ಲಿ ಕಾಲ ಕಳೆಯುತ್ತ, ಜೀವನದಲ್ಲಿ ಬೇಕಾದ ಎಲ್ಲಾನು ಗಳಿಸಿದೆ, so what? ಮಾಡಿದ್ದರಲ್ಲಿ ಹೊಸಾದೇನಿದೆ? ಎಲ್ಲಾ software engineerನ ಕಥೆನೇ ಹೀಗೆ ಅಂತ ಅನಿಸೊ ಹೊತ್ತಿಗೆ ಐವತ್ತು ತುಂಬಿರುತ್ತದೆ!!! ಮಕ್ಕಳು ದೊಡ್ಡವರಾಗಿ, ಅವರೂ ಇಂಜಿನಿಯರಿಂಗ್ ಮಾಡಿದ್ರೆ ಅಪ್ಪ (ಅಮ್ಮ) ನ ಕಥೆ ಮತ್ತೆ ಪುನರಾವರ್ತನೆ! ಇದೆಲ್ಲಾ ಕೇಳಿದ್ರೆ ಇನ್ನೂ ಇಂಜಿನಿಯರ್ ಬದುಕಿನ ಹೊಸ್ತಿಲಲ್ಲೇ ಇರುವ ನನಗೆ ಭಯಂಕರ ಸಂಕಟವಾಗುತ್ತೆ. ಇಂತಹ ಕಾಲ ಚಕ್ರದ ಮಿಂಚಿನ ಓಟಕ್ಕೆ ಕಡಿವಾಣ ಹಾಕಿ ಆದಷ್ಟು ಬೇಗ ಹೊಸ ದಾರಿ ಕಂಡುಕೊಳ್ಳಬೇಕೆನಿಸುತ್ತದೆ! ಹೊಸದಾಗಿರೋ ಮಸ್ತುವನ್ನು ಕಂಡುಕೊಳ್ಳಬೇಕೆಂಬ ಚಪಲ ಬೇರೆ.

ಜೀವನ ಅನ್ನೋದೇ ಒಂದು ಅಮೂರ್ತ(abstract) ವಸ್ತು. ಬಿಡಿಸಿ ಸರಳೀಕರಿಸಲು ಹೋದರೆ ಮತ್ತಷ್ಟು ಜಟಿಲತೆಯ ಅರಿವಾಗತ್ತದೆ. ಯಾವುದೋ ತಪ್ಪಿನಿಂದ, ಹೊಸದೊಂದು ಪಾಠ ಕಲಿತು, ಮತ್ತೊಂದು ಹೊಸ ಅರ್ಥ ಹುಡುಕಿದೆ ಎಂದು ಹಿಗ್ಗಿ ನಲಿಯುವಷ್ಟರಲ್ಲಿ ಮತ್ತೊಂದು ಸಮಸ್ಯಯ ಅರಿವಾಗುತ್ತದೆ. ಮತ್ತೆ ಅದೇ ಜಾಗಕ್ಕೆ ಬಂದೆನಲ್ಲ (Back to square one) ಅನಿಸುತ್ತದೆ. ಯಾವುದೋ ಖಷಿಯಲ್ಲಿ ಆನಂದದ ಎತ್ತರಕ್ಕೆ ಹೋದರೆ, ಮರುಕ್ಷಣವೇ ನೋವು ನಮ್ಮನ್ನು ಪಾತಳಕ್ಕಿಳಿಸುತ್ತದೆ! ಉಬ್ಬರವಿಳಿತವಿರುವ (ups and downs) ಬದುಕಿನಲ್ಲಿ ಸರಳ ರೇಖೆಯಂತಿರುವ ದಾರಿ ಹುಡುಕಲು ಪ್ರತಿಯೊಂದು ಕ್ಷಣ ಕ್ಷಣಕ್ಕೂ ಪರಿತಪಿಸುವ ಮಾನವನ ಬದುಕು ನಿಸರ್ಗದ ಅತ್ಯಪೂರ್ವ ಕಾಣಿಕೆಯಲ್ಲವೇ? "ಹುಚ್ಚು ಮನಸಿನ ಹತ್ತು ಮಖಗಳಿಂದ" ದುಃಖಿಸುವುದರಲ್ಲಿ ಅರ್ಥವೇನಿದೆ? ನಮ್ಮ ಎಲ್ಲಾ ಸಮಸ್ಯಗಳ ಮೂಲ, ನಮ್ಮ ಮಾನಸಿಕ ಪರಿಸ್ಥಿತಿ. ಮನಸ್ಸು ಒಳ್ಳೆಯ moodನಲ್ಲಿದ್ರೆ ನಮ್ಮ ಸಮಸ್ಯೆ ಸಮಸ್ಯೆಯಾಗಿ ಕಾಣುವುದೇ ಇಲ್ಲ. ಎಲ್ಲಾ ಮನಸಿನ ಮಾಯೆ! ಎಂಥಹ ಜಟಿಲ ಸಮಸ್ಯ ಎದುರಾದರೂ ಮನಸ್ಸನ್ನು ಒಂದು "ಉತ್ಸಾಹ"ದಲ್ಲಿಟ್ಟುಕೊಂಡರೆ ನಮ್ಮ ಕಣ್ಮುಂದಿರುವ ಜಗತ್ತೇ ಜೀವಂತ ಸ್ವರ್ಗ! ನಮಗೆ ಸರಿಯೆನಿಸಿದ ಗುರಿಯತ್ತ ಸಾಗುತ್ತ ಪ್ರತಿಯೊಂದು ಕ್ಷಣವನ್ನೂ ಆನಂದಮಯವಾಗಿಸಿಕೊಳ್ಳೋಣ. "ಮತ್ತೇನು ವಿಷೇಶ ಮಗಾ?" ಅಂತ ಮತ್ತೆ ಯಾರಾದರು ಕೇಳಿದರೆ ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ಹೊಸತು, ಹೊಸತು, ಹೊಸತು ಎಂದು ಹಿಗ್ಗಿ ಹೇಳುತ್ತೇನೆ!

~.~
  • manjunathsinge ರವರ ಬ್ಲಾಗ್
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 5, 2007 - 7:15pm — kishorpatwardhan

ಉ: ಹೊಸತನದ ಹಳೆ ಕಥೆ

kishorpatwardhan's picture

ಬರಹ ಓದಿಸಿಕೊಂಡು ಹೋಯಿತು. ಚೆನ್ನಾಗಿದೆ .
ಬಹುಶಃ ನೀವು ಎತ್ತಿರುವ ಪ್ರಶ್ನೆಗಳು ಎಲ್ಲರನ್ನೂ ಕಾಡುವಂತಹವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 5, 2007 - 9:29pm — manjunathsinge

ಉ: ಹೊಸತನದ ಹಳೆ ಕಥೆ

manjunathsinge's picture

ಕಿಶೋರ್, ಥನ್ಯವಾದಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2007 - 3:02pm — srikanth

ಉ: ಹೊಸತನದ ಹಳೆ ಕಥೆ

srikanth's picture

ಬರಹ ಚೆನ್ನಗಿದೆ. ಮುಂದೆ ನಿಮ್ಮಿಂದ ಹೆಚ್ಚು ಬರಹಗಳು ಬರಲಿ ಅಂತ ಹಾರೈಸುತ್ತೇನೆ

ಶ್ರೀಕಾಂತ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 8, 2007 - 11:13pm — manjunathsinge

ಉ: ಹೊಸತನದ ಹಳೆ ಕಥೆ

manjunathsinge's picture

thanks ಶ್ರೀಕಾಂತ್.. ಒಳ್ಳೇ ಬರಹಗಳಿಗಾಗಿ ಪ್ರಯತ್ನ ಪಡ್ತಾ ಇರ್ತಿನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 9, 2007 - 7:38pm — betala

ಉ: ಹೊಸತನದ ಹಳೆ ಕಥೆ

betala's picture

ನಿಮ್ಮ ಲೇಖನ ನೋಡಿದ್ರೆ , ನೀವು ಜೀವನ ಅಂದ್ರೆ ಇಷ್ಟೆ ಅಂತ compromise ಆದ ಹಾಗೆ ಕಾಣುತ್ತೆ. ಆ compromise ಆಗಿರೊದನ್ನ ನೀವು ಸಮರ್ಥಿಸಿಕೊಂಡ ಹಾಗೆ ಇದೆ ಲೇಖನ.

ನೀವು ನಾನು ಚೆನ್ನಾಗಿದ್ದಿನಿ, ಜಗತ್ತು ಚೆನ್ನಾಗಿದೆ (ಬೆಳದಿಂಗಳ ಬಾಲೆ ಡೈಲಾಗ್) ಅನ್ನುವ ಸ್ಠಿತಿ ತಲುಪಿದ್ದಿರಾ ಅಲ್ಲವೆ ? , ಆದರೆ ಟೆಕ್ ಕೂಲಿ ಜೀವನ ಅಂತ ಬೇಸರವೇಕೆ ??

ಹಾಗೆ ನೋಡಿದರೆ ನಾನು ಕೂಡ ಅದನ್ನೆ ಮಾಡ್ತ ಇರೋದು ಅನ್ನಿ ?

"ಹಾಗೆ ಸುಮ್ಮನೆ" ಮಾತಾಡೊಕೆ , ಜೀವನ ಅಂದ್ರೆ ಮಕ್ಳು, ಮರಿ, ಕೆಲಸ ಇಷ್ಟೆನಾ ? ಅಥ್ವ ಇನ್ನೆನಾದ್ರು ಇದೇಯಾ ? ನಾವು ಚಿಕ್ಕಂದಿರಲ್ಲಿ ಕಂಡ ಕನಸುಗಳು ಎಲ್ಲಿ ಹೋದವು ? ನಮ್ಮ ಕರೀರ್ ಶುರುಮಾಡಿದಾಗ ಇದ್ದ ಐಡಿಯಾಗಳು ಈಗ ಎಲ್ಲಿ ಹೋದವು ? ಅದನ್ನು ಹುಡುಕಿ ಹೋಗಬೇಕಾ ? ಬೇಡವ ? ನಾವು ಈ ಸಮಾಜಕ್ಕೆ ಕೊಟ್ಟಿದಾದರು ಏನು ? (ಅಥ್ವ ಯಾಕೆ ಕೊಡಬೇಕು ?) ? ಇಲ್ಲ ಬಿಲ್ ಗೇಟ್ಸ್ , ಅಂಬಾನಿ , ರಿಲೈಯನ್ಸ , ಇನ್ಫೊಸಿಸ್, ವಿಪ್ರೊ ಕಂಪನಿಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡು (ಅಥ್ವ ಬೈದುಕೊಂಡು), ಸುಮ್ಮನಿರಬೇಕಾ ?
ನಾವು ಹೀಗ ಮ ಮ ಕೆ ಯಲ್ಲಿ ಇದ್ದರೆ , ಮುಂದಿನ ಪೀಳಿಗೆಯವರು ನಮ್ಮಿಂದ ಕಲಿತ್ತಿದ್ದಾದರು ಏನು ? ಸಾಧಿಸಿದ್ದಾದರು ಏನು ?

ಸರ್ ಎಂ.ವಿ ಅವರ ಮೂಟ್ಟಮೂದಲ ಬಾರಿಗೆ ಕಾವೇರಿ ನದಿಯನ್ನು ಕಂಡಾಗ "ಎಷ್ಟೊಂದು energy ಪೋಲಾಗುತ್ತಿದೆ" ಅಂದರಂತೆ !?!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 10, 2007 - 11:47pm — manjunathsinge

ಉ: ಹೊಸತನದ ಹಳೆ ಕಥೆ

manjunathsinge's picture

ನೋಡಿ ಭೀಮೇಶ್, ನೀವು ನನ್ನ ವಿಚಾರವನ್ನ ತಪ್ಪಾಗಿ ತಿಳಿದುಕೊಂಡಿದ್ದೀರ ಅಂತ ಕಾಣುತ್ತೆ. ಲೇಖನದ ಧ್ವನಿ, ನೀವು ತಿಳಿದ ಹಾಗೆ "ಜೀವನ ಸಾಕಪ್ಪ" ಅನ್ನೋದು ಅಲ್ಲ. ಲಕ್ಷಗಟ್ಟಲೆ ಇಂಜಿನಿಯರುಗಳಲ್ಲಿ ಒಬ್ಬ ನಾರಯಣಮೂರ್ತಿ ಹುಟ್ಟಿದ, ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡೊ ಸಾವಿರಾರು ಜನರಲ್ಲಿ ಒಬ್ಬ ಧೀರುಭಾಯಿ ಹುಟ್ಟಿದ, ನೂರಾರು "ಎಣ್ಣೆ" ವ್ಯಾಪರಸ್ಥರಲ್ಲಿ ಒಬ್ಬ ಪ್ರೇಮಜಿ ಹುಟ್ಟಿದ. ಇಂಥಹ ಅಸಾಧಾರಣ ಪ್ರತಿಭೆಗಳನ್ನು ಬಿಟ್ಟು ಸ್ವತಂತ್ರ ದೃಷ್ಟಿಯಿಂದ ನೋಡಿದರೆ ಉಳಿದವರು ಲಕ್ಷಾಂತರ. ಆ ಲಕ್ಷಾಂತರ ಜನರಿಗೆ (ನನ್ನ ಲೇಖನದಲ್ಲಿರುವ software engineer ನ ಜೀವನ) "ಇದಷ್ಟೇ" ಜೀವನವಲ್ಲ, ಅದು ಬಿಟ್ಟು ಬೇರೇ ಸಾಕಷ್ಟು ಮಾರ್ಗಗಳು ಇವೆ ಅಂತ ಹೇಳೋದೇ ನನ್ನ ಲೇಖನದ ಉದ್ದೇಶ... ಲೇಖನದಲ್ಲಿ ಅಪಾರ್ಥವಾಗೋ ಹಾಗೆ ಏನೋ ಕಂಡಿದ್ದಕ್ಕೆ (ಅದು ಇದ್ದರೆ!) ದಯವಿಟ್ಟು ಕ್ಷಮಿಸಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2007 - 12:03am — betala

ಉ: ಹೊಸತನದ ಹಳೆ ಕಥೆ

betala's picture

ನಿಮ್ಮ ಲೇಖನ ಓದಿ ಹಾಗೆ ಅನ್ನಿಸಿತು,ಅದಕ್ಕೆ ಕೇಳಿದೆ ಅಷ್ಟೆ. ನಾನು ಕೇಳಿದ್ದರಲ್ಲಿ ತಪ್ಪಿಯಿದೆಯೆ ??.

ನನ್ನ ಪ್ರತಿಕ್ರಿಯೆಯಿಂದ ನಿಮಗೆ ಬೇಜಾರು ಆಗಿದ್ದರೆ ಕ್ಷಮೆಯಿರಲಿ. Smiling .

ಆದರೆ ನೀವು ತಗೆದುಕೊಂಡಿರುವ ಟಾಪಿಕ್ ಸೂಪರ್ !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 11, 2007 - 11:03am — manjunathsinge

ಉ: ಹೊಸತನದ ಹಳೆ ಕಥೆ

manjunathsinge's picture

ಅಯ್ಯೊ, ಖಂಡಿತವಾಗಿಯೂ ಬೇಜಾರೇನಿಲ್ಲ... ಹಾಗೆ ವಿಮರ್ಶಿಸುತ್ತಾ, ನನ್ನ ಬರಹಗಳನ್ನು ಸರಿಪಡಿಸುತ್ತಾ ಸಹಾಯ ಮಾಡಿದರೆ ನಿಮಗೆ ನಾನು ಋಣಿಯಾಗಿರುತ್ತೇನೆ.....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚಿಂತನ
  • ನೀಲು
  • ಲಿನಕ್ಸ್‌ನಲ್ಲಿ ಕನ್ನಡ
  • MNC ಅಲ್ಲಿ "ಕನ್ನಡ ಕಲಿ" ಕಾರ್ಯಕ್ರಮ .....
  • ಬೈಟೊ ಕಾಫಿ !!! - ೧
Syndicate content

ಲೇಖಕರು

manjunathsinge's picture

ಪರಿಚಯ

ಹೇಳಿಕೊಳ್ಳುವಂತಹ ಸಾಧನೆ ಇನ್ನೂ ಮಾಡಬೇಕಾಗಿದೆ. ಮಾಡುತ್ತೇನೆ, ಮಾಡಿದ ತಕ್ಷಣ update ಮಾಡುತ್ತೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
ಇನ್ನಷ್ಟು
ಈಗಿನಂತೆ 14 ಸದಸ್ಯರು ಮತ್ತು 120 ಅತಿಥಿಗಳು ಆನ್ಲೈನ್ ಇರುವರು.


ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ

— ಶಿಶುನಾಳ ಷರೀಫ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator