ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಹಳೇ ತಲೆಗಳ ನಡುವೆ.....

April 1, 2007 - 12:02am — mahesha

ಈ generation gap ಬರ್ತಾ ಬರ್ತಾ ಜಾಸ್ತಿ ಆಗ್ತಾ ಇದೆ ಅಲ್ವಾ?

ನಮ್ಮ ಹರೆಯದವರಿಗೆ ಹಲವು ಸರತಿ ನಮ್ಮಗಿಂತ ಹಳೆಯ ತಲೆಗಳ ಯೋಚನೆ, ಅರ್ಥ ಮಾಡಿಕೊಳ್ಳವ ರೀತಿ, ನೀಡುವ ಕಾರಣವೆಲ್ಲ ಹಿಡಿಸುವುದೇ ಇಲ್ಲ. ಕೆಲವು ಸರತಿಯಂತೂ ಏನು stupid ಆಗಿ ಮಾತಾಡ್ತಾರೆ ಅನ್ಸಿಬಿಡುತ್ತೆ.

ಅವರಿಗೆ ನಾವು "ಉದ್ದಟರು, ವಿತಂಡವಾದಿಗಳು, ತಲೆಹರಟೆಗಳು, ದೊಡ್ಡವರಿಗೆ ಗೌರವ ನೀಡದವರು, ಸಂಸ್ಕೃತಿ-ಸಂಪ್ರಾದಯಕ್ಕೆ ಬೆಲೆಕೊಡದವರು....ಇನ್ನು ಏನೇನೋ". ಏನು ಹೇಳಿದರು "ಗೌರವ ಇಲ್ಲ, ಗೌರವ ಇಲ್ಲ"..

ಅವರ ಮಾತು ಸುರುವಾಗೋದೇ "ನಮ್ಮ ಕಾಲದಾಗೆ ಹೇಗಿತ್ತು ಗೊತ್ತಾ.. ದೊಡ್ಡವರನ್ನು ಕಂಡರೆ ಹೆದರಿ ನಡುಗುತಿದ್ವಿ.". ಅರೇ!! ನಿಮ್ಮ ಕಾಲದಾಗೆ ಹಾಗಿತ್ತು ಸರಿ, ಆದರೆ ನಮ್ಮ ಕಾಲದಾಗೆ ಹೀಗಿದೆ.!!

ಇದಕ್ಕೆಲ್ಲ ಕಾರಣಗಳನ್ನು ಯೋಚಿಸಿದಾಗ ನನಗೆ ಅನ್ನಿಸುವುದು....

ಹೇಗೆ ಜಗತ್ತಿನಲ್ಲಿ ಪ್ರಭಾವಿಸಿದ್ಧಾಂತಗಳು ಬದಲುತ್ತವೆ, ಹಾಗೆ ಹಿಂದಿನ ಸಿದ್ಧಾಂತದಡಿ ಆಳಿಸಿಕೊಂಡ, ಆ ಸಿದ್ಧಾಂತದಡಿ ವಿನ್ಯಾಸವಾಗಿದ್ದ ಕಲಿಕೆಯನ್ನು ಕಲಿತ, ಆ ಸಿದ್ದಾಂತಕ್ಕಿಂತ ಭಿನ್ನವಾಗಿ ಬೇರೆಯಾದ ಯೋಚನೆಯಿದೆ ಎಂದು ಊಹಿಸಲು ತಲೆಗೆಡಿಸಿಕೊಳ್ಳದೇ ಹೋದ ಮಂದಿಗೆ ಬದಲಾದ ಸಂದರ್ಭದಲ್ಲಿನ ಹೊಸ ಪ್ರಭಾವಿಸಿದ್ಧಾಂತವನ್ನು ಒಪ್ಪುವುದು, ಅರಿಯುವುದು, ಅದಕ್ಕೆ ಒಗ್ಗುವುದು ಬಹಳ ಕಷ್ಟವೆನಿಸುತ್ತದೆ.

ನಮ್ಮ ತಂದೆಯ ಕಾಲದವರನ್ನು ನೆಹರು ಅವರ socialist ಮಂದಿ ಆಳಿದರು. ಅವರಿಗೆ ಸರಕಾರವೇ ಸರ್ವಕಾರಿ( ಎಲ್ಲವನ್ನು ಮಾಡುವ ಸಂಸ್ಥೆ ) ಅಂತ ಇಂದು ನಂಬಿಕೆ. ಅವರಿಗೆ ಈ private telecom ಕಂಪೆನಿಗಳು ಬಂದ ತಕ್ಕಣ response "ಹಾಗೆ ಹೇಗೆ ಆಗುತ್ತೆ?" ಅಂತ.

ನಾವು ಬೆಳೆದು graduation ಮುಗಿಸಿ, ಕೆಲಸಕ್ಕೆ ಬರುವ ವೇಳೆಗೆ ನೆಹರು ಸಿದ್ಧಾಂತ ಮಣ್ಣು ಕಚ್ಚಿ, ನಮ್ಮ ಮನಮೋಹನ ಸಿಂಗರು(ನರಸಿಂಗ ರಾಯರ ಕಾಲದಾಗೆ ಸುರುವಾದ ) ಸುರು ಮಾಡಿದ "liberalization/gloablization" ಕಾಲ ಬಂದುಬಿಟ್ಟಿತ್ತು. ನಮ್ಮ ಕಣ್ಣೆದುರೇ "ನಿಗಮ"ಗಳು ಎದ್ದವು. ಅದಕ್ಕೆ ತಕ್ಕಂತೆ ನಮ್ಮ ಕಲಿಕೆಯಲ್ಲೂ ಹಲವು ಬದಲಾವಣೆಯಾಗಿರುತ್ತೆ.

ಇಂದು ಮಂದಿ ಎಲ್ಲವನ್ನು "ಇದು ಯಾಕೆ, ಹೇಗೆ, ಏಕೆ ಬೇಕು" ಎಂದು ಕೇಳುವುದನ್ನು ಹೆಚ್ಚು ಮಾಡಿದ್ದಾರೆ; ಯಾವುದೋ ಒಂದು ಸಿದ್ಧಾಂತ-ತತ್ವಗಳನ್ನು ಕೇವಲ ಗೌರವಕ್ಕಾಗಿ ಒಪ್ಪದೇ, ಅದನ್ನು ಅರಿತೇ ಒಪ್ಪಲು ತುಡಿಯುತ್ತಾರೆ; "ಕುರುಡು ನಂಬಿಕೆ/ಅರ್ಥವಿಲ್ಲದ ಆಚರಣೆ"ಗಳು ಎಂದು ಅನ್ನಿಸಿದವನ್ನು ಮುಲಾಜಿಲ್ಲದೇ ಬಿಡುತ್ತಾ ಇದ್ದಾರೆ; ಎಂದು ನನ್ನ ಅನಿಸಿಕೆ. ಇದು ಕೆಲವು ’ಹಳೇ ತಲೆ’ಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಬದಲಾವಣೆಯನ್ನು ಒಪ್ಪಲು ತಯಾರಾಗದೆ, ಅವರು ಈ ಕಾಲದ ಹರೆಯದವರನ್ನು "ಸಾಮ, ದಾನ, ಭೇದ, ದಂಡ.." ಮುಂತಾದವುಗಳಿಂದ ತಡೆಯಲು ನೋಡಿ, ಆಗದಿದ್ದಾಗ deserate ಆಗಿ ಬಿಡ್ತಾರೆ.

ಈ intellectual progress(change)ಗೆ ಕಾರಣಗಳಲ್ಲಿ ನಮ್ಮ ಕಾಲದ(ಈ ಕಾಲದ) ಮಂದಿ ಹೆಚ್ಚು ಓದುವ ಇಂಗ್ಲೀಸು ಬರಹಗಳು, ನಾವು ನೋಡುವ ಇಂಗ್ಲೀಸು ಸಿನಿಮಾಗಳು, ಇನ್ನಿತರ western influenceಗಳು ಒಂದು ಕಾರಣವಿರಬೇಕು. ನಮ್ಮ ಹಿಂದಿನ ಜೀವನವನ್ನು ನಂಬಿಕೆಗಳನ್ನು ಓದಿದವರು "ಅಯ್ಯೋ ಇಷ್ಟು ಕುರುಡು ನಂಬಿಕೆಗಳೇ, ಅರ್ಥವಿಲ್ಲದ ಆಚರಣೆಗಳು, ತಾರತಮ್ಯಗಳು, ವರ್ಗಸಂಘರ್ಷ, ವರ್ಣದ ಹೆಸರಲ್ಲಿ ತುಳಿತ, ಸತ್ಕುಲದ ಹೆಸರಲ್ಲಿ ಮೇಲುವರ್ಣೀಯರ ದರ್ಪ, ಹೆಣ್ಣಿಗೆ ಕಟ್ಟಪಾಡು, ದೇವರು ದಿಂಡರ ಹೆಸರಲ್ಲಿ ಹುಚ್ಚಾಟಗಳು, ಆಧ್ಯಾತ್ಮ ಎಂಬ ಗಲಿಬಿಲಿ ಗೊಂದಲ" ಅಂತ ಮಾಡಿ, ತಿರುಗಿಬೀಳಕ್ಕೆ ಧೈರ್ಯಮಾಡುವುದು ಇನ್ನೊಂದು ಮುಖ್ಯಕಾರಣವಿರಬಹುದು.

ಒಟ್ಟಿನಲ್ಲಿ ಬದಲಾವಣೆಗಳು ಆಗುತ್ತಿರುವ ಗತಿ ನೋಡಿದರೆ ನಮಗೂ ನಮ್ಮ ಮುಂದಿನ generationಗೂ gap ಇನ್ನೇಷ್ಟು ದೊಡ್ಡದಿರಬಹುದು.? ನಮ್ಮ ಮಾತುಗಳು ಅವರಿಗೆ ಇನ್ನೆಷ್ಟು stupid ಅನ್ನಿಬಹುದು.? ನಮಗೂ ಅವರಿಗೂ ಎಷ್ಟು understanding differenceಗಳು ಬರಬಹುದು.? ಎಂಬ ಕುತೂಹಲವು ಅಂಜಿಕೆ ತರುತ್ತೆ !!

~.~
  • mahesha ರವರ ಬ್ಲಾಗ್
  • Login or register to post comments
  • 457 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 1, 2007 - 2:35pm — ವೈಭವ

Re: ಹಳೇ ತಲೆಗಳ ನಡುವೆ.....--globalisation,glocalisation

ವೈಭವ's picture

ಹೇಳಕ್ಕಾಗಲ್ಲ... ಗ್ಲೋಬಲೈಸೇಶನ್ ಜೊತೆ ಜೊತೆ ಗ್ಲೋಕಲೈಸೇಶನ್(glocalisation) ಕೂಡ ಅಗ್ತಾ ಇದೆ ಅಂತ ಅನ್ನಿಸುತ್ತದೆ. ಈಗ ಸಂಪದದಲ್ಲಿ ನಡೆಯುತ್ತಿರುವ ಚರ್ಚೆಗಳೇ ನೋಡಿ, ನಾವು ನಮ್ಮ ಬೇರುಗಳನ್ನು ಹುಡುಕುವ ನಿರಂತರ ಪ್ರಯತ್ನ ಮಾಡ್ತಾ ಇದ್ದೀವಿ. ಅಂದರೆ ನಮ್ಮ ತನ ಉಳಿಸಿಕೊಳ್ಳುವ ಎಳೆತ ಜಾಸ್ತಿ ಆಗ್ತಾ ಇದೆ. ಇತ್ತೀಚೆಗೆ ಬೆಂದಕಾಳೂರಿನಲ್ಲಿ ಭಾರಿ ಜಸ ಕಂಡ 'ಜನಪದ ಜಾತ್ರೆ' ನೆನಪಿಸಿಕೊಳ್ಳಿ.

ಒಂದಂತು ನಿಜ, ಗ್ಲೋಬಲೈಸೇಶನ್ನಲ್ಲಿ ಒಳ್ಳೇದು, ಕೆಟ್ಟದ್ದು ಎರಡು ಇದೆ. ಇದನ್ನು ಹೇಗೆ ಅರಗಸ್ಕೋತೀವಿ ಅನ್ನೋದ್ರು ಮೇಲೆ ನಮ್ಮ ಭವಿಷ್ಯ ನಿಂತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 1, 2007 - 3:11pm — mahesha

Re: ಹಳೇ ತಲೆಗಳ ನಡುವೆ.....--globalisation,glocalisation

mahesha's picture

Quote:

ಅಂದರೆ ನಮ್ಮ ತನ ಉಳಿಸಿಕೊಳ್ಳುವ ಎಳೆತ ಜಾಸ್ತಿ ಆಗ್ತಾ ಇದೆ

ಅದೇ ಈ ’ಎಳೆತ’, ’ಜಗ್ಗಾಟ’ ನಡೈತಾ ಇದೆ. ಇದನ್ನು ತಾಳಿಕೊಳ್ಳೋದು ತುಸು ತ್ರಾಸವೇ!!

ನೋಡೋಣ ಜಸ ಯಾರಿಗೆ globalizationಗೋ nativityಗೋ....

ನಮ್ಮ ಕನ್ನಡತನವು globalizationಅನ್ನು ಅರಗಿಸಿಕೊಂಡು, ಅದರಿಂದ ಎಲ್ಲ ಲಾಭಪಡೆದು ಗಟ್ಟಿಮುಟ್ಟಾಗಲಿ ಎಂದು ಹಂಬಲ. ನೋಡೋಣ!!!
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೌರವವೆಂಬ ಬಯಕೆ!! ಗೌರವವಿಲ್ಲ ಎಂಬ ನೋವು
  • ಕೊನೆಯ ಮಾತು
  • ಅನ್ಯಾಯಕ್ಕೆ ದನಿಯೆತ್ತದವರು ಸಬ್ಯರೂ ಅಲ್ಲ, ಮಾದರಿಯೂ ಅಲ್ಲ, ಅವರಿಗೆ ಗವ್ರವವೂ ಸಲ್ಲದು
  • ಬಯಕೆ v/s ನಂಬಿಕೆ
  • ದೀಪಾವಳಿ ಎಂಬ ಎರಡು ಕೊಲೆಗಳ ಹಬ್ಬ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 389 ಅತಿಥಿಗಳು ಆನ್ಲೈನ್ ಇರುವರು.


ಮುಕ್ತ ಮನಸ್ಸು ಖಾಲಿ ಆಕಾಶದಂತೆ. ಹೊರಗಡೆ ವಿಶಾಲ ಮತ್ತು ಒಳಗಡೆ ಶೂನ್ಯ. ಅದರಲ್ಲಿ ಅಂಟುತನ ಇಲ್ಲವೇ ಇಲ್ಲ.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator