ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ನಾನು ಇನ್ನೇನು ನನ್ನ ಒಲ್ಮೆಯ ತಿಂಡ್ಲನ್ನು ಬಿಟ್ಟು ಬೇರೆಡೆಗೆ ಹೋಗಿ ನೆಲೆಸುವ ಹೊತ್ತು ಬಂದಿದೆ. ಅದಕ್ಕೆ ನನ್ನ ನೆಚ್ಚಿನ ತಿಂಡ್ಲಿಗೆ ದೊಡ್ಡ ನನ್ನಿ ಹೇಳುವ ಹೊತ್ತಿದು.
ನಾನಿರುವ ತಿಂಡ್ಲು ಕೊಡುಗೆಹಳ್ಳಿಯ ಪಕ್ಕದ್ದು. ಎಶ್ಟು ಚಂದದ ಹಳ್ಳಿ. ನಮ್ಮ ಮನೆಯ ದಾರಿಯ ಕೊನೆಗೆ ದೊಡ್ಡ ದೊಡ್ಡ ಅರಳೀಮರಗಳು. ಮನೆಯಿಂದ ಕೊಂಚ ದೂರ ಮಾವಿನ ತೋಪು.
ಹತ್ತಿರದ ವಿದ್ಯಾರಣ್ಯಪುರದಲ್ಲಿ ಎಂತೆಂತ ಒಳ್ಳೇ ಕನ್ನಡತಿನಿಸುಗಳ ಹೋಟೆಲುಗಳು. ಸಹಕಾರ ನಗರದ "ಕನ್ನಡ ಬಸ್ ನಿಲ್ದಾಣ", ಶಾಂಗಯ್ ಚೀಣಾ-ಹೋಟೆಲು.
ನಮ್ಮ ಮನೆಯ ಹತ್ತಿರ ಎರಡು ಗುಡಿಗಳಿವೆ. ಒಂದು ವೀರಬದ್ರಸ್ವಾಮಿಯದು ಇನ್ನೊಂದು ಹನುಮ ದೇವರದು. ನನ್ನ ಎಂಗೇಜ್ಮೆಂಟಂದು ನಾವು ವೀರಬದ್ರಸ್ವಾಮಿಗುಡಿಗೆ ಹೋಗಿ ಮುಂದೆ ನಡೆದುದು. ಆ ತಿಂಡ್ಲಪ್ಪನ ಜಾತ್ರೆಯಲ್ಲಿನ ಚರಪಿನ ನೆನಪು ಇನ್ನೂ ಇದೆ.
ಹಾಗೆ ಹುನುಮಂತ ದೇವರ ಗುಡಿಗೂ ಆಗಾಗ ಹೋಗಿದ್ದೆವು.
ನಮ್ಮ ಮನೆ ಸುತ್ತಿಲಿರುವ "ಹೊಸದೇವರು ಒಕ್ಕಲಿಗರ" ಮಾತು, ಅವರ ಕನ್ನಡ ಎಶ್ಚು ಚನ್ನಾಗಿದೆ. "ವೋತಿಯ, ವೋತಿನಿ" ಇದು ಅವರ ನಿಬ್ಬರ.
ತಿಂಡ್ಲು ಎಂಬ ಹೆಸರು ತುಸು ಮಾಮೂಲಿಯಲ್ಲ. ಅದರ ತಿಳಿವೇನೋ ಇನ್ನೂ ತಿಳಿಯಲಾಗಿಲ್ಲ..
ನನ್ನಿ ತಿಂಡ್ಲು.!

- mahesha ರವರ ಬ್ಲಾಗ್
- Login or register to post comments
- 357 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ಪಕ್ಕಾ ಕಾಂಕ್ರೀಟ್ ಕಾಡಿನಂತಹ ಬೆಂಗಳೂರಿನಲ್ಲಿದ್ದೂ ಕೂಡ ತಿಂಡ್ಲುವಿನಂತಹ ಅದ್ಭುತ ವಾತಾವರಣದಲ್ಲಿದ್ದ ನೀವೇ ಧನ್ಯರು !
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ದನ್ಯತೆ ನಂದಲ್ಲ.. ತಿಂಡ್ಲುದು..
ಇದನ್ನೆಲ್ಲ ಮಿಸ್ ಮಾಡಿಕೋತೀನಿ.. ಈಗ ಹೋಗೋ ವಸಜಾಗದಲ್ಲಿ
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ಎಲ್ಲ್ರೀ ನಿಮ್ ಹೊಸಾ ಮನೆ?
ಹೊಸ ಜೋಡಿಗೆ ಜಾಸ್ತಿ ಜಾಗ ಬೇಕಾ ...
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ನಾನೆಲ್ಲಿ ವಸಮನೆಗೆ ವೋತಿನಿ ಅಂದೆ..
ನಾನ್ ಯೇಳಿದ್ದು. ಇನ್ಮುಂದೆ ತಿಂಡ್ಲಲ್ಲಿ ಇರಲ್ಲ ಅಂತ... ನಾವ್ ಮರಳಿ ಅಳೇಜಾಗಕ್ಕೆ ವೋತಿವಿ.
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ಅಳೆ ಜಾಗ ಯಾವುದು?
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ವಸಜಾಗ
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ದೇವ್ರು, ಹೋಗೋ ವಸಜಾಗ ಅಲ್ಲ, ವೋಗೋ ವಸಜಾಗ ಅಲ್ವರಾ!!!
ಉ: ತಿಂಡ್ಲಿನಲ್ಲಿ ಕೊನೆಯ ನಾಳ್ಗಳು
ತಿಂಡ್ಲು ಅನ್ನೋ ಹೆಸರು ನೋಡಿದ ತಕ್ಷಣ ನನ್ನ ಆತ್ಮೀಯ ಸ್ನೇಹಿತೆ ಶ್ಯಾಮಲಾಳ ನೆನಪಾಯ್ತು
ಅವಳು ಊರಿನ ಹೆಸರು ಹೇಳುವಾಗಲೆಲ್ಲಾ ನಾವು ರೇಗಿಸ್ತಿದ್ವಿ
ಯಾರು ಏನು ತಿಂದಿದ್ದು ಅಂತ
ಅವಳು ಈಗ ಎಲ್ಲಿದಾಳೋ , ಹೇಗಿದ್ದಾಳೊ. ಅಲ್ಲೇ ಇದ್ದಾಳೊ ಅಥವ ಬೇರೆ ಕಡೆ ಹೋಗಿದ್ದಾಳೊ ಗೊತ್ತಿಲ್ಲಾ
http://thereda-mana.blogspot.com/
ರೂಪ