ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕನ್ನಡದಲ್ಲಿ ಮಾತಾಡಿ ಪ್ಲೀಸ್
ಈ ಬೆಂಗಳೂರು ಬಸ್ ಕಂಡಕ್ಟರರಿಗೆ ಏನಾಗಿದೆ ಈಗೀಗ. ಬಸ್ಸಲ್ಲಿ ಹತ್ತಿದ ಕೂಡಲೇ ನಮ್ಮನ್ನ ಹಿಂದಿಯಲ್ಲಿ ಮಾತಾಡಿಸ್ತಾರಲ್ಲ.... ಮತ್ತು ನಂಬರ್‍ಗಳನ್ನ ಇಂಗ್ಲೀಶಲ್ಲಿ ಹೇಳ್ತಾರೆ.
ನಾನಂತೂ ಅವರಿಗೆ ಕನ್ನಡದಲ್ಲಿ ಉತ್ತರ ಕೊಟ್ ಕನ್ನಡದಲ್ಲಿ ಮಾತಾಡೋ ಹಂಗ್ ಮಾಡಬೇಕಾಗಿದೆ.
ಯಾಕೆ ಯಾಕೆ?

- mahesha ರವರ ಬ್ಲಾಗ್
- Login or register to post comments
- 488 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ನಿಮಗೆ ಹಿ೦ದಿ, ೨೦೦೭ರಲ್ಲಿ ನನಗೆ ಇನ್ಗಲೀಸಲ್ಲಿ ಮಾತಾಡ್ಳಿಕ್ಕೆ ಸುರು ಹಚ್ಚ್ಕೊ೦ಡ ಒಬ್ಬಾಟೋದವ ನನ್ನೋಡಿ ಪರದೇಸಿಗ ಅ೦ತನ್ಕೊ೦ಡ, ದೇವೇಗೌಡ ಪೆಟ್ರೋಲ್ ಬ೦ಕ್ ಬಳಿ. ನಾನೋ ಚೆಡ್ಡಿ, ಟೀ-ಅ೦ಗಿ, ಬೇಸ್ ಬಾಲ್ ಟೋಪಿ, ಗಾಗಲ್ಸ್ ಧರಿಸಿದ್ದೆ. ಬೆನ್ನಲ್ಲಿ ಭಾರಿ ಸ್ಸೈಸ್ನ ಬ್ಯಾಕ್-ಪ್ಯಾಕ್ ಇತ್ತು ಅನ್ನಿ ಆ ವೇಳೇಲಿ!! ಅಲ್ಲಿನ್ದ ಉತ್ತರಹಳ್ಳಿ ಮುಖ್ಯರಸ್ತೆಲಿರುವ ಬ್ರಿಗೇಡ್ ರೆಸಿಡೆನ್ಸಿಲಿರೋ ನನ್ನ ಅಪಾರ್ಟ್ಮೆ೦ಟ್ಗೆ ಹೋಗ್ತಾ ಇದ್ದವನಿಗೆ ಬರೀ ೨೫ ರು ಆಗೋ ಜಾಗದಲ್ಲಿ ೨೦೦ ರು ಕೇಳಿದ. ಮತ್ತೇ ಯಾಕ್ಕಣ್ಣ ಇಶ್ಟೊ೦ದು ರೇಟು ಅ೦ತ ಕನ್ನಡದಲ್ಲಿ ಕೇಳಿದಕ್ಕೆ, ಅವನಿಗೋ ಆಶ್ಚರ್ಯದಿ೦ದ ಕೇಳಿ ಏನು ಸ್ವಾಮಿ, ನೀವು ಹೊರಗ್ನೋರು ಕನ್ನಡ ಕಲ್ತಿದ್ದೀರ ಆ೦ತ ವಿಚಾರ್ಸೊದಾ ನನ್ನ? ಇಲ್ಲ ಗುರುವೇ ನಾನು ಹುಟ್ಟ್ಕನ್ನಡಿಗ ಹೇಳಿದಕ್ಕೆ ದಾರಿ ಉದ್ದಕ್ಕೂ ಕುಲ ಗೊತ್ರಾ ಎಲ್ಲ ವಿಚಾರ್ಸ್ತಾ ಬರೋದಾ????
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಮಹೇಶ್
ಕಂಡಕ್ಟರ್ ಅನ್ನೋದು ಆಂಗ್ಲ ಪದ ನಿರ್ವಾಹಕ ಕನ್ನಡ ಪದ ನೆನಪಿರಲಿ.
ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಹಿಲೇರಿಯಸ್..!
ಅರವಿಂದ ಅನ್ನೋದೇ ಕನ್ನಡ ಒರೆಯಲ್ಲ.
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಇಂಗ್ಲಿಶ್‌ಗೆ ಆಂಗ್ಲ ಹೇಗೆ?
ನಿರ್ವಾಹಕ ಹೇಗೆ ಕನ್ನಡದ ಒರೆ?
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಮಹೇಶ್
ಆಂಗ್ಲ ಸಂಸ್ಕೃತದ ಮೂಲರೂಪವೇ ಇರಬಹುದು, ಹಾಗೆ ನಿರ್ವಾಹಕ ಕೂಡ, ಯಾವುದೇ ಭಾಷೆ ಸ್ವತಂತ್ರವಾಗಿ ಬೆಳೆದುಬಂದ ಉದಾಹರಣೆ ಕೊಡಿ ನೋಡೋಣ.
ಕನ್ನಡವೇ ತಾಯ್ನಾಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ.
ಅರವಿಂದ್
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಅಲ್ವ..
ಅಂದ ಮೇಲೆ ಕಂಡಕ್ಟರ್ ಇದೂ ಕನ್ನಡವೇ ಆಯ್ತಲ್ಲ....
ಬೇಕಾದರೆ ಕಂಡಕ್ಕರ ಈ ಒರೆ ಇಂಗ್ಲಿಶಿಂದ ಕನ್ನಡಕ್ಕೆ ಬಂದಿದೆ ಎನ್ನಿ..
"ಯಾವುದೇ ಭಾಷೆ ಸ್ವತಂತ್ರವಾಗಿ ಬೆಳೆದುಬಂದ ಉದಾಹರಣೆ ಕೊಡಿ ನೋಡೋಣ. "
ಇದಕ್ಕೆ ಮಾದರಿ ಪ್ರೆಂಚು. ಜರ್ಮನ್
ನೀವು ಎಶ್ಟ ನುಡಿಗಳನ್ನು ಬಲ್ಲಿರಿ?
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಕನ್ನಡವೂ ಸೊಂತಿಕೆಯಿಂದಲೇ ಬೆಳೆದು ಬಂದಿರುವದು, ಆದರೆ ಬೇರೆ ನುಡಿಯ ನೆರಳು ಎಲ್ಲ ನುಡಿಗಳಂತೆ ಕನ್ನಡದ ಮೇಲೂ ಮೂಡಿದೆ. ಆಗ ಸಂಸ್ಕ್ರುತ, ಈಗ ಇಂಗಲೀಸ್. ಇಂಡಿಯದ ಯಾವ ಮೂಲೆಗಾದರೂ ಹೋಗಿ,.. ’ರಕ್ತಕಣ್ಣೀರು’ ಸಿನಿಮಾದ ಉಪ್ಪಿ ಮಾತುಗಳಂತೆ,.. ಇಂಗಲೀಸ್ ಗೊತ್ತಿದ್ದರೆ, ಕೋಡಂಗಿಗೂ,.... ಕರೆದು ಹೆಣ್ಣು ಕೊಡುತ್ತಾರೆ..
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಮಹೇಶರವರೇ,
ಬರಹದಲ್ಲಿಯಾದರೂ ಕನ್ನಡವನ್ನು ಸರಿಯಾಗಿ ಬರೆಯಿರಿ. ನಮಗೆ ಓದಲು ಮತ್ತು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ನೀವು ಬೇಕಾದರೆ ನಿಮ್ಮ ಕನ್ನಡದಲ್ಲಿಯೇ ಓದಿ. ನಿಮ್ಮ ಊರಿನ ಕಾದಂಬರಿಕಾರರು, ಕವಿಗಳು, ಸಾಹಿತಿಗಳು ಉಪಯೋಗಿಸುವ ಬರಹವನ್ನು ಓದಲು ನಮಗೇನು ಕಷ್ಟವಾಗುವುದಿಲ್ಲಾ. ಆದರೆ ಕನ್ನಡದಲ್ಲಿ ಮಾತಾಡಿ ಎಂದು ಹೇಳಿಕೊಂಡು ಮಾತಾಡುವ ಕನ್ನಡ ನಮಗೂ ಅರ್ಥ ಆಗುವ ಹಾಗೆ ಬರೆಯಿರಿ.
ತಪ್ಪಿದ್ದರೆ ಕ್ಷಮಿಸಿ,
ಪ್ರೀತಿ ಇರಲಿ
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ನನ್ನಿ
-ಮಹೇಶ
ನನ್ನ ಕವನಗಳು
http://maaysa.wordpress.com/
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಅಂದರೆ ನಿಮ್ಮ ಕನ್ನಡಕ್ಕೆ ನಾವು ಹೊಂದಬೇಕು. ವ್ಯಾಕರಣ ಬದ್ಧವಾಗಿ ಬರೆಯಿರಿ ಎಂದು ಹೇಳಿಕೊಂಡು ಮಾತಾಡುವ ಕನ್ನಡವನ್ನು ಬರೆದು ಯಾರಿಗೂ ಅರ್ಥವಾಗದ ಹಾಗೆ ಬರೆದರೆ ನಾವೇನು ಮಾಡುವುದು. ನಮ್ಮ ಕನ್ನಡವನ್ನು ಹೀಯಾಳಿಸುವ ನೀವು ನಿಮ್ಮ ಕನ್ನಡದ ಕಡೆಗೂ ಸ್ವಲ್ಪ ಗಮನಕೊಡಿ. ಹೇಗೂ ನೀವು ಕಾದಂಬರಿಯಲ್ಲಿರುವ ಬರಹವನ್ನು ನಿಮ್ಮ ಕನ್ನಡದಲ್ಲಿ ಓದುವವರು ನಮಗೂ ಓದುಲು ಆಗುವ ಹಾಗೆ ಬರೆಯಿರಿ. ಕನ್ನಡವನ್ನು ಬೆಳೆಸಬೇಕೆನ್ನುವವರೂ ನೀವೂ, ಅದನ್ನು ಹಾಳು ಮಾಡುವವರೂ ನೀವು. ಬರಹದಲ್ಲಾದರೂ ಶುದ್ಧ ಕನ್ನಡ ಬರೆಯಿರಿ.
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ನನ್ನಿ
-ಮಹೇಶ
ನನ್ನ ಕವನಗಳು
http://maaysa.wordpress.com/
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಕ್ಷಮಿಸಿ - ಒಂದು ಕಡೆಯಲ್ಲಿ ಓದಲು ಬರೆಯುವಲ್ಲಿ ಓದುಲು ಆಗಿದೆ. ತಿದ್ದಿಕೊಂಡು ಓದಿ.
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಈ ಬರಹಕ್ಕೆ 'ದಯವಿಟ್ಟು ಕನ್ನಡದಲ್ಲಿ ಮಾತಾಡಿ' ಎಂದು ಹೆಸರಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ವಾ? ಕನ್ನಡದ ಬಗ್ಗೆ ಬರೆಯುವಾಗಲೂ ನಮಗೆ ಕನ್ನಡದ ಪದಗಳು ಸಿಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಇದಕ್ಕೆ ನಾವೇ ಹೊಣೆ. ಪ್ರತಿಕ್ರೀಯಿಸಿದವರು ಇಂಗ್ಲೀಷ್ ಮತ್ತು ಕಂಡಕ್ಟರ್ ಪದಗಳನ್ನು ಗಮನಿಸಿದರೇ ಹೊರತು ಬರಹದ ಹಸರಿನಲ್ಲಿರುವ ಪ್ಲೀಸನ್ನು ಗಮನಿಸಲಿಲ್ಲ. ಕಂಡಕ್ಟರ್ ಎನ್ನುವ ಪದ ಸುಮಾರು ನೂರು ವರ್ಷದ ಹಿಂದೆ ಇರಲೇ ಇಲ್ಲ. ಏಕೆಂದರೆ ಆಗ ಬಸ್ಸುಗಳು ಇರಲಿಲ್ಲ. 50 - 75 ವರ್ಷಗಳಿಂದ ಬಳಕೆಯಲ್ಲಿರುವ ಬಸ್ಸು ಕಾರುಗಳಿಗೆ ಕನ್ನಡದ ಪದಗಳನ್ನು ಹುಡುಕುವ ಗೋಜಿಗೆ ಕನ್ನಡಿಗರು ಮುಂದಾಗಲಿಲ್ಲ. ಕಂಡಕ್ಟರ್ ಎಂಬ ಪದಕ್ಕೆ ನಿರ್ವಾಹಕ ಎಂಬ ಪದ ಕಂಡುಕೊಂಡರೂ ಅದು ಆಡು ಭಾಷೆಯ ಪದಗಳಿಗೆ ಹೊಂದಿಕೆಯಾದಂತೆ ಅನ್ನಿಸುವುದಿಲ್ಲ. ಇನ್ನು ಇಂಗ್ಲೀಷ್ ಎನ್ನುವುದು ಒಂದು ಭಾಷೆಯ ಹೆಸರು. ಇದಕ್ಕೆ ಕನ್ನಡದಲ್ಲಿ ಯಾಕೆ ಪದ ಬೇಕು ಎಂದು ಗೊತ್ತಾಗುತ್ತಿಲ್ಲ. ಮನುಷ್ಯರು ಮತ್ತು ಊರುಗಳ ಹೆಸರುಗಳು ಎಲ್ಲಾ ಭಾಷೆಗಳಲ್ಲೂ ಒಂದೇ ಆಗಿರುವಂತೆ ಇಂಗ್ಲೀಷನ್ನು ಕನ್ನಡದಲ್ಲಿ ಬೇರೊಂದು ಪದದಿಂದ ಕರೆಯಬೇಕೆ? ಇತ್ತೀಚೆಗೆ ನಮಗೆ ತಲುಪಿರುವ ಬಸ್ಸು ಕಾರುಗಳಂತ ತಂತ್ರಜ್ಞಾನಗಳಿಗೆ ಸರಿಸಮನಾದ ಕನ್ನಡದ ಪದಗಳನ್ನು ಹುಡುಕದೇ ಬೇರೆ ಭಾಷೆಯ ಪದಗಳನ್ನು ಬಳಸಬೇಕಾದ ಅನಿವಾರ್ಯತೆ ಒಂದೆಡೆಯಾದರೆ, ಶತಮಾನಗಳಿಂದ ಬಳಕೆಯಾಗುತ್ತಿದ್ದ ಪದಗಳು (ಉದಾ: ದಯವಿಟ್ಟು --> ಪ್ಲೀಸ್) ಇಂದು ಮಾಯವಾಗುತ್ತಿರುವುದು ದುಃಖಕರ.
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
http://maaysa.wordpress.com
ಉ: ಕನ್ನಡದಲ್ಲಿ ಮಾತಾಡಿ ಪ್ಲೀಸ್
ಅನಂತರವರೇ,
ನೀವು ಮಂಗಳೂರಿನವರಾ? ನಿಮ್ಮ ಕನ್ನಡ ಬರಹ ನೋಡಿ ಹಾಗೆನಿಸಿತು. ನಾನೂ ಈಗ ಮಂಗಳೂರು ಕನ್ನಡದಲ್ಲಿ ಪ್ರತಿಕ್ರಿಯಿಸಿದ್ದೇನೆ. ನೋಡಬೇಕು. ಎಷ್ಟು ಮಂದಿ ಕಾಲೆಳೆಯುತ್ತಾರೆಂದು. ಹೇಳುವುದು ಒಂದು ಮಾಡುವುದು ಇನ್ನೊಂದು ಮಾಡಿದರೆ ನಮಗೆ ಆ ಕನ್ನಡದಲ್ಲಿ ಪ್ರತಿಕ್ರಿಯಿಸಲು ತಿಳಿಯುವುದಿಲ್ಲಾ.