ಗೆಳೆಯ ಸಿನಿಮ
ಈ ಸಿನಿಮ ನನಗೆ ಹಿಡಿಸಿತು...
ಅದರ ಡೊಂಕುಗಳನ್ನು ಎತ್ತಾಡಲು ನಂಗೆ ಮನವಿಲ್ಲ....
ಹಾಡುಗಳು ಚನ್ನಾಗಿತ್ತು..
ಎದೆಕುಲುಕುವ ಬಾವನೆಗಳಿದ್ದವು..
ಕತೆಯ ಹೆಣೆತ ಚನ್ನಾಗಿತ್ತು, ಎರಡನೇ ಬಾಗದಲ್ಲಿ ಇನ್ನೂ ಚನ್ನಾಗಿತ್ತು..
ತರುಣನ ನಟನೆ ಹಿಡಿಸಿತು.. ಪ್ರಜ್ವಲ್ ಪಾತ್ರಕ್ಕೆ ತಕ್ಕನೆನಿಸಿತು.
ನಾಯಕಿನಟಿ ಚಲುವಾಗಿದ್ದಳು ![]()
ಸಂಬಾಶಣೆ ಚನ್ನಾಗಿದ್ದವು, ಸರಳ + ನೇರವಾಗಿದ್ದವು.
ಸಿನಿಮವನ್ನು ಜಾಸ್ತಿ ಎಳೆದಿಲ್ಲ.. ಬೇಗ ಮುಗಿಯುವುದು.
ಸಕ್ಕತ್!

- mahesha ರವರ ಬ್ಲಾಗ್
- Login or register to post comments
- 547 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಗೆಳೆಯ ಸಿನಿಮ
ಸಿನಿಮ ನೋಡಿಲ್ಲ. ಅದರೂ ಕ್ಯಾಮ್ರ ಕೆಲಸ ಹಿಡಿಸಿತು. ಸಕ್ಕತ್
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಗೆಳೆಯ ಸಿನಿಮ
ಮುಂಚೆ ಅನಂತ್ ನಾಗ್, ವಿಷ್ಣುವರ್ದನ್, ರಾಜಕುಮಾರ್ ಯೆಲ್ಲಾ ನೀಟಾಗಿ ತಲೆಕೂದಲು ಕತ್ತರಿಸಿ, ಗಡ್ಡ ಶೇವ್ ಮಾಡಿಕೊಂಡು ಇದ್ರೆ ಹೀರೊ ಅಂದ್ರೆ ಹೀಗಿರಬೇಕು ಅನ್ನಿಸುತ್ತಿತ್ತು.. ಈಗ ರಾಶಿಕೂದಲಿನ, ಪೆಕ್ರ ಗಡ್ಡದ ಸಣಕಲುಗಳೆಲ್ಲಾ ಹೀರೊ.. ಕಾಲ ಬದಲಾಯಿತು.
ಉ: ಗೆಳೆಯ ಸಿನಿಮ
ಒಬ್ಬ ಬಡಬ್ರಾಹ್ಮಣ "ಮೃಚ್ಛಕಟಿಕಾ"ದ ಹೀರೋ...
ಒಬ್ಬ ಗೂನಿ ನಳ, ನಳದಮಯಂತಿಯ ಹೀರೋ
ಒಬ್ಬ ಹೆಂಬೇರ್ಪಿನ ಬೇಗೆಯಿಂದ ತತ್ತರನಾದ ಜಕ್ಕ/ಯಕ್ಷ( ಅವನ ಕೈಗಳೂ ಸಣಕಲಾಗಿ, ಬಳೆಗಳೂ ಬಿದ್ದು ಹೋಗಿರ್ತವೆ ), ಮೇಘದೂತ ಹೀರೋ...
ಒಬ್ಬ ಕಾಡಿಗೆ ಹೋದ, ತೊಗಟೆಯುಟ್ಟವನು, ಜಟೆಕಟ್ಟಿದವನು ರಾಮಾಯಣದ ಹೀರೋ.
ಒಬ್ಬ ಮಸಣಗಾವನು, ಹರಿಶ್ಚಂದ್ರಕಾವ್ಯದ ಹೀರೋ
ನಮ್ಮ ಹೊಸತಲೆಮಾರು, ಪುರಾತನ ಸಂಸ್ಕೃತಿಯನ್ನೇ ಅನುಸರಿಸಿದೆ...
ಒಂದು ಸಕ್ಕದದ ಶ್ಲೋಕ..
"ಕೇಯೂರ ನ ವಿಭೂಷಯಂತಿ ಪುರುಷಂ
)
)
ಹಾರ ನ ಚಂದ್ರೋಜ್ವಲಾಃ
ನ ಸ್ನಾನಂ ನ ವಿಲೇಪನಂ ನ ಕುಸುಮಂ.
ನಾಲಂಕೃತಾ ಮೂರ್ಧಜಾಃ...." ( ಮೂರ್ಧಜಾ ಅಂದ್ರೇನು?
( ಕೊನೆ ಸಾಲು ಇರಲಿ..
ದೀರಗಂಡಸಿಗೆ ದಿಟ್ಟತನವೇ ಒಡವೆ...
ಒಳ್ಳೇ ಮಂದಿ ಒಳ್ಳೇತನವೇ ಮೆರುಗು...(ಇದೇ ಗೆಳೆಯ ಸಿನಿಮದ ನೀತಿ )
ಉ: ಗೆಳೆಯ ಸಿನಿಮ
ಹೆಳ್ಕೊಳೊಕ್ಕೆ ಖುಷಿ ಆಗಬಹುದು... ಆದ್ರೆ ಹುಡುಗೀರಲ್ಲಿ ಕೇಳಿ ನಿನ್ನ ಹೀರೊ ಹೆಗಿರಬೇಕು ಅಂತ!
ಉ: ಗೆಳೆಯ ಸಿನಿಮ
ನೀವು ಹುಡುಗೀನ?
ರಿ ರೋಶನ್ ತಮಾಷೆ.. ಅಷ್ಟೇಏಏ!!!
ಹುಡುಗೀರ್ಗೆ ಏನ್ ಬೇಕು ಅಂತ ಹುಡುಗೀಗೇ ಗೊತ್ತು...
ಉ: ಗೆಳೆಯ ಸಿನಿಮ
ಹುಡುಗಿ ಅರ್ಥ ಮಾಡ್ಕೊಳೊಕ್ಕೆ ಪ್ರಯತ್ನ ಪಡಿ, ನಮ್ಮ ಕವಿಗಳು, ಕತೆಗಾರರು ಹುಡುಗರಾಗಿಯೂ ಹುಡುಗಿರಮನಸಲ್ಲಿ ಇದ್ದಹಾಗೆ ಬಣಿಸುತ್ತಾರೆ.. ಹಾಗೆ, ನಂಗೆ ನೀವು ಹುಡುಗಿ ಅಂದ್ರೆ ಬೆಜಾರಿಲ್ಲ!! ಯಾಕಂದ್ರೆ ಹುಡುಗಿರು ದೈಹಿಕವಾಗಿ ಅಭಲೆಯರು ಇರಬಹುದು ಮಾನಸಿಕವಾಗಿ ಖಂಡಿತ ಅಲ್ಲ.
ಉ: ಗೆಳೆಯ ಸಿನಿಮ
ಅಭಲೆಯರು ಅಲ್ ಅಬಲೆಯರು.( ಬಲ, ಭಲಾ ಅಂದ್ರೆ,, ಬೇರೆ ಅರಿತ )
ಒಳ್ಳೇದು....
ಉ: ಗೆಳೆಯ ಸಿನಿಮ
ಹುಡುಗೀರ್ನಾ ಅರ್ತ ಮಾಡ್ಸೋ ಟ್ಯೂಶನ್ ಹೇಳಿ ಕೊಡ್ತಿರಾ ಪ್ಲೀಸ್, .... ಯಾಕಂದ್ರೆ ಅದು ಬಾಳಾ ತ್ರಾಸು...
ಉ: ಗೆಳೆಯ ಸಿನಿಮ
ಕೇಳಿಲ್ಲೇನ್ರಿ ಗೌಡ್ರ, ಹೆಣ್ಣಿನ ಮನಸ್ಸು ಗಂಡಿಗೆ ಎರಡು ವ್ಯಾಳ್ಯೆದಾಗ ಗೊತ್ತಾಗಂಗಿಲ್ಲಂತ. ಒಂದು, ಮದುವಿಗಿಂತ ಮುಂಚೆ, ಎರಡ್ನೆದ್ದು ಮದುವಿ ಆದ ಮ್ಯಾಲೆ!
ಉ: ಗೆಳೆಯ ಸಿನಿಮ
ಯಾಕ್ರಿ ಟ್ಯುಶನ್ ಮನೆಲಿ ಅಕ್ಕ ,ಅಮ್ಮ, ತಂಗಿ ಇಲ್ವ ಅವರನ್ನು ಅರಿಯಿರಿ