ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕ್ರಿಕೇಟ್ ಬಗ್ಗೆ ನಾವು ಯಾಕೆ ಇಷ್ಟೊಂದು ತಲೆಗೆಡಿಸಿಕೊಂಡಿದ್ದೇವೆ?
ಕ್ರಿಕೇಟ್ ಬಗ್ಗೆ ನಾವು ಯಾಕೆ ಇಷ್ಟೊಂದು ತಲೆಗೆಡಿಸಿಕೊಂಡಿದ್ದೇವೆ? ಅದೇನ್ ಹುಚ್ಚೋ?
ನಂಗಂತೂ ತಿಳಿಕ್ಕಿಲ್ಲ. ಈ ಬುವಿ ಮೇಲೆ ಯಾವ ಆಟವನ್ನು ಮಂದಿ ಮೂರು ಗಂಟೆಗಿಂತ ಜಾಸ್ತಿ ಆಡೋದೇ ಇಲ್ಲ. ಟೆನ್ನೀಸಲ್ಲಿ ಐದು ಗೇಮ್ ಆಡಿದರೂ ಅದು ಹೆಚ್ಚಂದರೆ ಮೂರ್ನಾಲ್ಕು ಗಂಟೆಯೊಳಗೆ ಮುಗಿಯುತ್ತೆ.
ಆದರೆ ಈ ಕ್ರಿಕೇಟು ಎಂಟು ತಾಸುಗಳ ಆಟ. ಅದರಲ್ಲೂ ಈ ಟೀವೀಲಿ ad ನಡುವೆ ಕ್ರಿಕೇಟ್ ತೋರಿಸ್ತಾರೋ, ಕ್ರಿಕೇಟ್ ನಡುವೆ ad ತೋರಿಸ್ತಾರೋ, ಒಂದಾಸೆಯಿಂದ ನೋಡಿದರೆ ಈ ಕ್ರಿಕೇಟ್ ಟೀವಿಯಲ್ಲಿ ತೋರಿಸೋದೇ, ಒಂದು ರಾಸಿ ad ತೋರಿಸಕ್ಕೆ ಅನ್ನಸತ್ತೆ.
ಸರಿ ಈ ಕ್ರಿಕೇಟನ್ನು ಎಷ್ಟು ದೇಸಗಳು ಆಡ್ತಾವೆ? ಹದಿನಾರು? ಜಗತ್ತಲ್ಲಿ ೨೦೦ ದೇಸಗೊಳವೆಯಂತೆ!!
ನಾವು ೧೦೦ ಕೋಟಿ ಮಂದಿ ಬರಿ ಇದೊಂದೇ ಆಟ ಹಿಡಕೊಂಡು ಕೂತೀವಿ. ಅಲ್ಲಿ ಒಲೆಂಪಿಕ್ಸಲ್ಲಿ ಒಂದು ಕಂಚು ತರಕ್ಕೂ ತಿಣುಕಾಟ.
ಒಟ್ಟಿನಲ್ಲಿ ನಮ್ ದೇಸದೋರಿಗೆ(ನನ್ನೂ ಸೇರಿಸಿಕೊಂಡು) ಯಾವ ಆಟದಲ್ಲೂ ಮೊದಲಿಗೆ ಬರಕ್ಕೆ ಆಗಕ್ಕಿಲ್ಲ.
ನಾವು ಮೊದಲಿಗೆ ಇರೋದು ಬರಿ ಮಕ್ಕಳು ಹುಟ್ಟಿಸೋದರಲ್ಲಿ, ಇಲ್ಲ ಮಕ್ಕಳನ್ನು ಸಾಯಿಸೋದರಲ್ಲಿ, ಆಟೇ....
"ಮೇರಾ ಭಾರವಾದ ಭಾರತ ಮಹಾನ್" ಸರಿ ಯಾವುದರಲ್ಲಿ?![]()

- mahesha ರವರ ಬ್ಲಾಗ್
- Login or register to post comments
- 389 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: