ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

July 28, 2008 - 4:48am — mahesha

ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ ಮಾತಿನ ಒಳಗುಟ್ಟಂನು ಅಂತೂ ಶನಿವಾರ ಬಲು ಎಡರುಗಳನ್ನು ದಾಟಿ ಪಡೆದುಕೊಂಡೆನು. ಇದಕ್ಕಾಗಿ ಗಾಂದಿನಗರದ ಸಪ್ನಕ್ಕೆ ಹೋಗಿದ್ದೆ. ಬೆಲೆ ೧೨೦ರೂ. ಇದು ಶಂಕರಬಟ್ಟರ ತಮ್ಮ ಹಿಂದಿನ ಹೊತ್ತಗೆಯಲ್ಲಿ ಹೇಳಿದೆ "ಹೊಸ ಬರಹದಲ್ಲಿದೆ"

ತಲೆಇಣುಕುಗಳು
೧) ಸೊಲ್ಲರಿಮೆ = ವ್ಯಾಕರಣ
೨) ಮಾತು ಅಂದರೇ ಏನು? ಜೇನುನೊಣಗಳ ಮಾತು, ಕಿವುಡರ ಮಾತು?
೩) ಮಾತು ಮತ್ತು ಉಲಿಕೆ
೪) ಅರ್‍ತ ಅಂದರೇನು?
೫) ಸದ್ದು, ಪದ, ಸೊಲ್ಲು
೬) ಕನ್ನಡವಾಡುವ ಎಲ್ಲರಲ್ಲೂ ಹುದುಗಿರುವ ಗುಟ್ಟಾದ ಮೇಲ್ಮಟ್ಟ ತಿಳಿವಾದ ಕನ್ನಡ ಸೊಲ್ಲರಿಮೆಯ ಗುಟ್ಟುಗಳು. ಮತ್ತು ಆ ಗುಟ್ಟುಗಳನ್ನು ಹೇಳಿ ತಿಳಿಸುವುದರಲ್ಲಿ ಕನ್ನಡಿಗರ ಸೋಲು.
೭)ಕನ್ನಡಬಗೆಗಳು.
೮) ಹಕಾರ ಇಲ್ಲದ ಕನ್ನಡ ಎಂಬುದು ಒಂದು ಕಿರುನುಡಿ. ಅದೊಂದು ನೆಲದ ಗುಣ. ಹಕಾರ ಬಿದ್ದುಹೋಗುವುದು ಕನ್ನಡನೆಲದ ತಲೆಯಿಂದ ಅಡಿಯವರೆಗೂ ಇರುವ ಸಂಗತಿ.
೯) ಕನ್ನಡ ತಾಯ್ನುಡಿಯಾದ ಮಕ್ಕಳು, ಕನ್ನಡದಲ್ಲೇ ಮೊದಲು ಕಲಿಯಬೇಕು. ಕನ್ನಡದಲ್ಲಿ ತಕ್ಕಮಟ್ಟಿಗೆ ಓದಿಬರೆಯಲು ಬಂದ ಬಳಿಕ ಬೇರೆನುಡಿಕಲಿಯವೇಕು. ಆದರೆ ’ಕನ್ನಡ’ ಎಂದರೆ ಹೇರಳವಾಗಿ ಹೊರನುಡಿಪದದುಂಬಿದ, ಹೊರನುಡಿಪದಗಳಿಗೋಸುಗ ಉಲಿಕೆ ಮಾಡಿದ ಕನ್ನಡವಲ್ಲ. ಇಲ್ಲಿ ಕನ್ನಡವೆಂದರೆ ನಮ್ಮ ನೆಲದ ಉಲಿಕೆ ಮತ್ತು ಹೆಚ್ಚು ಒರೆಗಳನ್ನು ಬಳಸುವ ದಿಟಗನ್ನಡ.

ಒಟ್ಟಾರೆ:
ತುಂಬಾ ಚಂದದ ಹೊತ್ತಗೆ. ಅಚ್ಚಗನ್ನಡದ ಒರೆಗಳ ಬಳಕೆ ಕಣ್ಣುಕೋರಯ್ಸುವಂತದ್ದು. ಕನ್ನಡದ ದಿಟಮಾಟ ತಿಳಿಬಯಸುವವರು ಓದಲೇಬೇಕಾದುದು.

  • ಕನ್ನಡ
~.~
  • mahesha ರವರ ಬ್ಲಾಗ್
  • Login or register to post comments
  • 442 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 28, 2008 - 5:09am — madhava_hs

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

madhava_hs's picture

ಇಂಥದೇ ಒಂದು ಲೇಖನವನ್ನು ಯಾರೋ ದಟ್ಸ್ ಕನ್ನಡದಲ್ಲಿ ಹಾಕಿದ್ದರು. ಅದಕ್ಕೆ ಸುನಾಥ ಎಂಬುವರು ಕೊಟ್ಟಿರುವ ಜವಾಬು ನನಗೆ ಬಹಳ ಹಿಡಿಸಿತು. ಅದನ್ಣೇ ಇಲ್ಲಿ ದಾಖಲಿಸಲಿಚ್ಚಿಸುತ್ತೇನೆ.

ಸುನಾಥ ಹೇಳಿದ್ದು :
"ಕರ್ನಾಟಕದ ಬೇರೆ ಬೇರೆ ಪ್ರದೇಶಗಳಲ್ಲಿ ಕನ್ನಡದ ಉಚ್ಚಾರ ಬೇರೆಬೇರೆಯಾಗಿರುತ್ತದೆ ಹಾಗು ಅದೆಲ್ಲವೂ ಕನ್ನಡವೇ ಎನ್ನುವದು ನಮಗೆಲ್ಲರಿಗೂ ಗೊತ್ತಿದೆ. ಅದಕ್ಕೆ ಯಾರದೂ ವಿರೊಧವಿಲ್ಲ.ಕನ್ನಡದ ಎಲ್ಲ ಪ್ರಕಾರಗಳೂ ನಮಗೆಲ್ಲರಿಗೂ ಪ್ರಿಯವೇ. ಆದರೆ, ಕನ್ನಡಿಗರು ಮಹಾಪ್ರಾಣವನ್ನು ಉಚ್ಚರಿಸುವದಿಲ್ಲ (ಪುಟ ೬೦, ಕನ್ನಡ ಬರಹವನ್ನು ಸರಿಪಡಿಸೋಣ)ಎನ್ನುವ ಶಂಕರ ಭಟ್ಟರ ಹೇಳಿಕೆ ತಪ್ಪು.
ಕನ್ನಡಿಗರಾದ ಮಾಜಿ ಮಂತ್ರಿ ಖರ್ಗೆಯವರಿಗೆ ನೀವು ಕರ್ರಗೆ ಎಂದು ಕರೆದು ನೋಡಿರಿ.ಅವರು ನಿಮ್ಮ ನಾಲಿಗೆ ಸೀಳಿ ನಿಮ್ಮಿಂದ ಖರ್ಗೆ ಎನಿಸಿಯಾರು.ಕನ್ನಡ ಮೂಲರೂಪದಲ್ಲಿ ಮಹಾಪ್ರಾಣಗಳಿಲ್ಲ ಎಂದು ಹೇಳಿ, ಈ ಮಾತಿಗೆ ಸೋಲಿಗರ ಅಥವಾ ಜೇನುಕುರುಬರ ಉದಾಹರಣೆ ಕೊಡುವ ಕೆಲವು ಜನರು ಇದ್ದಾರೆ. ಹಾಗಿದ್ದರೆ ಇವರು ತಾವೇಕೆ ಅವರಂತೆಯೇ ಲಂಗೋಟಿ ಹಾಕಿಕೊಂಡು ತಿರುಗಬಾರದು,ಏಕೆ ಪ್ಯಾಂಟ್ ಹಾಕಿಕೊಳ್ಳಬೇಕು. ಕಾಲ ಬದಲಾಯಿಸಿದಂತೆ ವಿಕಾಸದ ಕಡೆಗೆ ನಾವು ನಡೆಯಬೇಕು. ಇದು ಭಾಷೆಗೂ ಅನ್ವಯವಾಗತ್ತದೆ. ಶಂಕರ ಭಟ್ಟರು ಕನ್ನಡ ವರ್ಣಮಾಲೆಯನ್ನು ಸಂಕುಚಿತಗೊಳಿಸುತ್ತಿದ್ದಾರೆ. ತಮ್ಮ ಉದ್ದೇಶಕ್ಕಾಗಿ ಅವರು ಒಡೆದು ಆಳು ಎನ್ನುವ ವರ್ಣಭೇದ ಮಾರ್ಗ ಅನುಸರಿಸುತ್ತಿರುವದು ವಿಷಾದನೀಯ. "

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 11:34am — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಮಾದವ ಸ್ವಾಮಿಗಳೇ>..

ಆ ಸುನಾತರ ಕಮೆಂಟಿರೋದು ಏನ್ಗುರು ಬ್ಲಾಗ್ ಬಗ್ಗೆ..

ನಾನು ಬರೆದುದ ಏನು ಓದಿದ್ರ?..

ನನಗೆ ಒತ್ತು ಎನಿಸಿದ ೯ರಲ್ಲಿ ಅದು ಒಂದು ಅಶ್ಟೇ...
ಒಂದ್ ಸರತಿ ಹೊತ್ತಗೆ ಓದಿ.. ಆಮೇಲೆ ಹೇಳಿ..

ಯಾರೋ ಎಲ್ಲೋ ಹೇಳಿದ್ದನ್ನು ಇಲ್ಲಿ ಹೇಳೋ ಅಲ್ಲಾ ಕಾಪಿ ಮಾಡೋ ತವಕ.. !! ಇದು ನಿಮಗೆ ಮೆರಗಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 11:40am — madhava_hs

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

madhava_hs's picture

"ಯಾರೋ ಎಲ್ಲೋ ಹೇಳಿದ್ದನ್ನು ಇಲ್ಲಿ ಹೇಳೋ ಅಲ್ಲಾ ಕಾಪಿ ಮಾಡೋ ತವಕ.."

ಇದು ನಿಮಗೂ ಅನ್ವಯಿಸುತ್ತಲ್ವ. ಯಾರೋ ಏನೋ ಪುಸ್ತಕ ಬರಕೊಂಡರು ಅಂತ ಅದನ್ನು ಇಲ್ಲಿ ಹೇಳೋ ತವಕ Smiling) Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 11:47am — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಸರಿ..!! Smiling

ಸಂಪದದ ತುಂಬ ಒಂದು ಪುಸ್ತಕದ ಬಗ್ಗೆ ಬರೆದಿರೋರೆಲ್ಲ ಇದನ್ನೇ ಮಾಡಿರೋದು.. Smiling

ಹವುದು ಹೊತ್ತಗೆ ಬಗ್ಗೆ ಹೇಳೋ ತವಕ..!!

ಆದರೆ ನಿಮ್ಮದು.. .. ಕಾಪಿ Smiling

ಅದ್ ಸರಿ ಏನೀಗೀಗ ಇಂಗ್ಲೀಶ್ ವಿಕಿಪಿಡಿಯ ಕಾಪಿ ಮಾಡೋದು ನಿಲ್ಲಿಸಿಬಿಟ್ಟಿದ್ದೀರಿ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 11:59am — madhava_hs

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

madhava_hs's picture

ಹೌದು..ಇಲ್ಲಿ ಒಬ್ಬರೋ ಇಬ್ಬರೋ ಬರೀ ಒಬ್ಬರ ಪುಸ್ತಕದ ಬಗ್ಗೆ ನೂರಾರು ಬಾರಿ ಬರೆದಿದ್ದಾರೆ. ನಾವು ಕಾಪಿ ಮಾಡಿದ್ದರೆ ನೀವು ರಿಮೇಕ್ ಮಾಡಿದ್ದೀರಿ..ಇಬ್ಬರಿಗೂ ಸಬ್ಸಿಡಿ ಇಲ್ಲ ಬಿಡಿ. Smiling

ವಿತಂಡ ವಾದಕ್ಕೆ ಕೆಲವೊಮ್ಮೆ ವಿಕಿಪಿಡಿಯಾವೇ ಮದ್ದು !

ಬರಹ ಆರೀತಿ ಬರೆಯಿರಿ ಈ ರೀತಿ ಬರೆಯಿರಿ ಅಂತ ಸಾವಿರ ಸರಿ ಕೊರೆದಿದ್ದೇ ಆಯ್ತು..ಒಬ್ಬರಾದ್ರೂ ಮಾತು ಕೇಳ್ಬೇಕಲ್ಲ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 12:09pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಕೊನೆಗೂ "ವಿತಂಡವಾದ" ಪದಪ್ರಯೋಗತೃಪ್ತರಾದಿರಿ..

ಸಲ್ಲದಲ್ಲದೆಡೆ ಸಲ್ಲದಲ್ಲದದ ಬರೆದದು ಸುಳ್ಳುಸುಳ್ಳೇ ಸೊಲ್ಲುಸೊಲ್ಲೇ!!

ನಂಗೆ ಗೊತ್ತಿತ್ತು ನೀವು ನನ್ನ ಕಾಲ್ಕೆರೀತಾ ಇದ್ದೀರಿ ಅಂತ.. ಈಗ ನಿಕ್ಕಿ ಆಯ್ತು..!!

ಮಾದವಾ ಮಾದವಾ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 12:20pm — madhava_hs

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

madhava_hs's picture

ಆ ಸುನಾಥರು ಬರೆದಿದ್ದೂ ನೀವು ಹೇಳಿದ ಪುಸ್ತಕದ ಬಗ್ಗೆ. ಮೊದಲು ಅದಕ್ಕೆ ಉತ್ತರ ಕೊಡಿ (ಗೊತ್ತಿದ್ದರೆ). ಅದು ಕಾಪಿಯೋ ಟೀಯೋ ಬೇರೆ ಪ್ರಶ್ನೆ.

ಸುಮ್ಮನೆ ಕಾಡು ಹರಟೆ ಬೇಡ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 12:24pm — madhava_hs

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

madhava_hs's picture

ನಾನು ಕೆಲವೊಮ್ಮೆ ಕೆಲ ವಿಷಯ ಅರಸುವಾಗ ವಿಕಿಪೀಡಿಯಾ ಹುಡುಕುವುದು ದಿಟ..ಕೆಲ ಚರ್ಚೆಗಳಲ್ಲಿ ಅದನ್ನು ಬಳಸಿದ್ದೇನೆ(ಇಲ್ಲಲ್ಲ)

ಅದ್ಸರಿ.. ನಾನು ಸಂಪದದಲ್ಲಿ ವಿಕಿಪೀಡಿಯಾ ಬಳಸಿದ್ದು ಯಾವಾಗ? ಸ್ವಲ್ಪ ಕೊಂಡಿ ಕೊಡಿ..

ಹಾಳು ಮರೆವು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 1:10pm — vikashegde

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

vikashegde's picture

--------------ಯಾರೋ ಏನೋ ಪುಸ್ತಕ ಬರಕೊಂಡರು ಅಂತ ಅದನ್ನು ಇಲ್ಲಿ ಹೇಳೋ ತವಕ ---------.

Laughing out loud

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 1:16pm — srinivasps

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

srinivasps's picture

ಪುಸ್ತಕ ವಿಮರ್ಶೆ ಸಂಪದದಲ್ಲಿ ಉಪಯುಕ್ತ ಮಾಹಿತಿ...ಯಾಕ್ರೀ ನೀವು encourage ಮಾಡಲ್ಲ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 1:18pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ನನ್ನಿ!

ಇರಲಿ ಬಿಡ್ರೀ.. ಸಿರಿನೆಲಸಿಗ..

ಓದಿ ಚನ್ನಾಗಿಗೆ ಆ ಹೊತ್ತಗೆ.. ನಿಮಗೆ ಇದ್ರಾಗೆ ಇಂಟರೆಸ್ಟ್ ಇದೆ. ಅದಕ್ಕೆ ’ಶಾಲೆ’ಗೆ ಅಪ್ಪಟಕನ್ನಡದ ಒರೆ ಕೇಳಿದ್ರಲ್ವ..!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 1:42pm — srinivasps

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

srinivasps's picture

Smiling

ಮೊದಲು ಬೇರೆ ಭಟ್ಟರ ಹೊತ್ತಗೆ ಓದಬೇಕು ಆಮೇಲೆ ಇದು... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:16pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಹೆ ಹೆ..

ಸರಿ... !! ನನ್ನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:22pm — vikashegde

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

vikashegde's picture

ಇಂಟರೆಸ್ಟ್ ಗೆ ಕನ್ನಡ ಪದ ಏನೂ ಇಲ್ವೋ? ಬಟ್ಟರು ಸೂಚಿಸಿಲ್ವೋ.. Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:26pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಬಟ್ಟರ ಹೊತ್ತಗೆ ಓದಿ ತಿಳಿದುಕೊಳ್ಳಬೋದು..!

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:28pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಬೇರೆ ಬಟ್ಟರ ಹೊತ್ತಗೆಗಳಲ್ಲಿ ಇದ್ದರೂ ಓದಿಕೊಳ್ಳಬೋದು.. ಒತ್ತಾಯ ಜಪ್ಪಯ್ಯ ಇಲ್ಲ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:28pm — vikashegde

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

vikashegde's picture

ಮತ್ತೆ ಬಂಟರಿಗೇನು ಕೆಲಸ . ಬರೀ ಗಾಳಿ ಬೀಸೋದಾ! Smiling

**************************
http://vikasavada.blogspot.com/
**************************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 2:37pm — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ಏನು ಹಂಗಂದ್ರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 28, 2008 - 7:53pm — uniquesupri

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

uniquesupri's picture

ಮಾಯ್ಸಣ್ಣ,
ಈ ವಿಷಯವಾಗಿ ನಿಮ್ಮ ಜೊತೆಗೆ ತುಂಬಾ ಸಲ ಜಗಳವಾಡಿಯಾಗಿದೆ.
ಈಗ ನನಗನ್ನಿಸುವುದು, ಶಂಕರ ಬಟ್ಟರು ಸಂಶೋಧಕರು, ಪಂಡಿತರು ಅವರು ನಮ್ಮ ನಿಮ್ಮಗಳ ಹಾಗೆ ಕೇವಲ ಮೇಲ್ಪದರದಲ್ಲಿ ಕಮೆಂಟು ಮಾಡಿ ಕೈತೊಳೆದುಕೊಳ್ಳುವವರಲ್ಲ. ಅವರ ವಿಚಾರವನ್ನು ತಿಳಿಯೋಣ. ಅವರ ಸಂಶೋಧನೆಯ ಬಗ್ಗೆ ಅಕಾಡೆಮಿಕ್ ಆಗಿ ಚರ್ಚಿಸಲು ಸಾಧ್ಯವಾದರ್ ಮಾಡೋಣ. ಅವರ ವಿಚಾರ ಒಪ್ಪಿಗೆಯಾದರೆ ಅವರ ಶೈಲಿಯಲ್ಲಿ ಬರಹವನ್ನು ಬದಲಾಯಿಸೋಣ. ಎಲ್ಲರಿಗೂ ಇರುವುದು ಭಾಷೆಯನ್ನು ಇನ್ನಷ್ಟು ಹತ್ತಿರವಾಗಿಸಿಕೊಳ್ಳುವ, ಆಪ್ತವಾಗಿಸಿಕೊಳ್ಳುವ ಹಂಬಲವೇ ತಾನೇ?

ನೀವು ನಿಮ್ಮ ಕಾಲೆಳೆಯುವವರ, ಸಂಸ್ಕೃತದ ಬಗ್ಗೆ ಪ್ಯಾಶನೇಟ್ ಆಗಿ ಮಾತನಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ. ಅವರು ತಮಗೆ ತೋಚಿದ ಹಾಗೆ ಮಾಡಿಕೊಳ್ಳಲಿ. ಕಡೆಗೆ ಉಳಿಯುವುದು ಭಾಷೆಯನ್ನು ನಾವೆಷ್ಟು ಬಳಕೆಗೆ ಯೋಗ್ಯವಾಗಿ ಉಳಿಸಿಕೊಂಡಿದ್ದೇವೆ ಎಂಬುದು ಮಾತ್ರ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 29, 2008 - 9:49am — mahesha

ಉ: ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ

mahesha's picture

ನನ್ನಿ..

ನನಗೆ ವಿಶಯವಾಗಿ ಮಾತಾಡರೋ ಜೊತೆ ಯಾವ ಅಬ್‌ಯಂತವಿಲ್ಲ..

ಆದರೆ ಬರೀ ಚುಡಾಸಲ್ಕೆ, ಮೂದಲಿಸಲ್ಕೆ ಅಂತ ಬರೆದು ಬೀಗೋರ ಕಂಡು ಕನಿಕರ, ಸಿಟ್ಟು, ಉಡಾಪೆ, ಎಲ್ಲಾ ಇದೆ..

ನನ್ನ ಬೆಂಬಡದೇ ಬರೆಯುವ ನೀಯತ್ತನ್ನು ನಾನು ಮೆಚ್ಚಿದ್ದೀನಿ.. ! Smiling

ನನ್ನಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾತಿನ ಒಳಗುಟ್ಟು - ಡಾ. ಡಿ.ಎನ್.ಶಂಕರಬಟ್ಟರ ಹೊಚ್ಚ ಹೊಸ ಹೊತ್ತಗೆ
  • ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ
  • ಡಿ.ಎನ್. ಶಂಕರಬಟ್ಟರ ಹೊಸ ಹೊತ್ತಿಗೆ ' ಕನ್ನಡ ನುಡಿ ನಡೆದು ಬಂದ ದಾರಿ'
  • ನಮ್ಮ ಮಗು ಇಂಗ್ಲೀಶ್ ಮೀಡಿಯಮ್ಮಲ್ಲೇ ಸಂಸ್ಕ್ರುತ ಪಸ್ಟ್ ಲ್ಯಾಂಗ್ವೇಜ್ ತಗೊಂಡೇ ಓದೋದು
  • ನುಡಿಗೆ ಬರವಣಿಕೆ ಕಟ್ಟುಪಾಡು ಬೇಡ!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 364 ಅತಿಥಿಗಳು ಆನ್ಲೈನ್ ಇರುವರು.


ಏನಾದೊಡೆಯುಮಪ್ಪುದುಂಟು, ಸಿದ್ಧನಿರದಕೆ |
ಭಾನು ತಣುವಾದಾನು; ಸೋಮ ಸುಟ್ಟಾನು ||
ಕ್ಷೋಣಿಯೇ ಕರಗೀತು, ಜಗ ಶೂನ್ಯವಾದೀತು |
ಮೌನದಲಿ ಸಿದ್ಧನಿರು -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator