ಅದ್ದು
ನಮ್ಮ ನಾಡಿನ ಊರಿನ ಕೇರಿಯ ಮನೆಯ ಮನೆತನದ ಜಾತಿಯ ಪಂಗಡದ ನಿಬ್ಬರದ ಒರೆ/ಪದ ಎಂದು ತೋರುವ ಒರೆಗಳೊಂದೊಂದರ ಬಗ್ಗೆ ಕೊಂಚ ಕೊಂಚ ಬರೆಯೋಣ ಎಂದು ನನ್ನ ಬಯಕೆ. ಆ ನಿಟ್ಟಿನಲ್ಲಿ ಇದು ಮೊದಲು.
http://dsal.uchicago.edu/cgi-bin/philologic/getobject.pl?c.0:1:288.burro...
Ka. ar̤du, addu, ajju, eddu to immerse, dip, dye; sink in a fluid; addayisu to immerse, put into; addike, adduge immersion.
ಅದ್ದು.ಅೞ್ದು, ಅಜ್ಜು, ಎದ್ದು
ಅದ್ದಯಿಸು
ಅದ್ದಿಕೆ
ಅದ್ದುಗೆ
’ಲೇ ನೋಡೇ, ಮಗು ನೀರಲ್ಲಿ ಕಯ್ ಅದ್ದಿದೆ’
'ಬಟ್ಟೆಯನ್ನು ಜಾಲಾಡುವಾಗ, ನೀರಲ್ಲಿ ಅದ್ದಿ ಅದ್ದಿ ತೆಗೆಯಬೇಕು’
ನನ್ನ ಗಮನದಂತೆ ಹಾರುವರು ’ಅದ್ದು’ ಅಂತ ಹೇಳಿದ್ರೆ, ಹಾರುವರಲ್ಲದವರು ’ಅಜ್ಜು’ ಅಂತಾರೆ.
Immersion of Ganesh Idols = ಗಣೇಶನ ಗೊಂಬೆಗಳ ಅದ್ದಿಕೆ
ಅದ್ದಿ ಅದ್ದಿ = ಅದ್ದಿ ಹೊರಗೆ ತಗೆದು ಮತ್ತೆ ಅದ್ದಿರುವುದು

- mahesha ರವರ ಬ್ಲಾಗ್
- Login or register to post comments
- 198 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅದ್ದು
ಮಹೇಶ, ಒಂದು ಮಾತು. ದಿನನಿತ್ಯದ ಬಳಕೆಗಳ ಜೊತೆಗೆ ನೀನು ಓದಿರುವ ಕನ್ನಡ ಕಾವ್ಯಗಳಲ್ಲಿ ಈ ಪದಗಳ ಬಳಕೆ ಹೇಗಾಗಿದೆ ಎಂಬುದನ್ನೂ ಅಲ್ಲಲ್ಲಿ ಸೇರಿಸುತ್ತಾ ಸಾಗು.
ಉ: ಅದ್ದು
ಇದು ಮೂಲ ಆೞ್=ಮುೞುಗು ಶಬ್ದದ ಪ್ರೇರಣಾರ್ಥಕ ರೂಪ ಅೞ್ಚು->ಅೞ್ದು->ಅದ್ದು=ಮುೞುಗಿಸು ಆಗಿರಬಹುದೆಂಬ ಸಂಶಯ ನನಗೆ. ಹಾಗೆಯೇ ಇನ್ನೊಂದು ಉದಾಹರಣೆ ಕೊಡುತ್ತೇನೆ. ಬೀಜ ಬಿತ್ತುತ್ತೇವೆ. ಅದೂ ಕೂಡ ಬೀೞ್=ಬೀೞು ಇದಱ ಪ್ರೇರಣಾರ್ಥಕ ಬಿೞ್ಚು->ಬಿೞ್ತು (ಹೞಗನ್ನಡದಲ್ಲಿ ಬಿತ್ತು)->ಬಿತ್ತು. ಬೀಜವನ್ನು ನೆಲಕ್ಕೆ ಬೀೞಿಸಿಯೇ ನಾವು ಬೆಳೆ ಬೆಳೆಯುತ್ತೇವೆ. ಆ ಬೆಳೆಯನುಂಡು ನಾವು ಬಳೆಯುತ್ತೇವೆ.