ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ವೋಲ್ವೋ ಇಲ್ಲದ ಹೆಬ್ಬಾಳ
ಇದು ಅನಿಸಿಕೆ. ಬ್ಲಾಗು ಚರ್ಚೆಯಲ್ಲ! ![]()
===================================================================================
ನಾನು ದಿನಾ ಆರುವರೆಗೆ ಮನೇ ಬಿಡೋದು ಆಪೀಸಿಗೆ. ಕಳೆದ ಒಂದು ವಾರದಿಂದ ನಮ್ಮ ಬಿಟಿಎಸ್ ಬಸ್ಸಲ್ಲಿ ನಮ್ಮ ತಿಂಡ್ಲು ಹಳ್ಳೀಂದ ಹೆಬ್ಬಾಳಕ್ಕೆ ಬಂದು ಅಲ್ಲಿಂದ ದೇವರಬಿಸಬಹಳ್ಳಿ/ಇಂಟೆಲ್ ಸ್ಟಾಪಿಗೆ ಮತ್ತೊಂದು ಬಸ್ಸು. ಬೆಳಿಗ್ಗೆ ಆರುವರೆ ಹೊರಟರೆ, ಆಪೀಸು ಸೇರೋದು ೮ ಗಂಟೆಗೆ.
ಹೊಸ ಏರ್‍ಪೋರ್ಟು ಸುರು ಆಗುತ್ತೆ ಅಂತ ವೋಲ್ವೋ ಬಸ್ಸಗಳನ್ನ ಬಿಟವರೆ. ಅದು ಹೆಬ್ಬಾಳದಿಂದ ಸಿಲಿಕ್ ಬೋರಡರ ತನಕ ಹೋಗ್ತದೆ. ನೆಂನೆ, ಮೊಂನೆಯೆಲ್ಲ ನನ್ನ ಕೊಲೀಗರು ಅದರಲ್ಲೇ ಬಂದರಂತೆ. ’ನೀನ್ ಯಾಕೆ ಅಶ್ಟು ಬೇಗ ಬಂದೀಯ. ಎಂಟುವರೆಯಂಗೆ ಹಬ್ಬಾಳದಿಂದ ವೊಲ್ವದಾಗೆ ಬಾ. ರಶ್ಶು ಕಡಮೆ ಇರ್ತದೆ’ ಅಂದ್ರು.
ನಾನು ಒಂದು ದಪ ನೋಡಣ ಅಂತ ಇವೊತ್ತು ಮನೇನ ಎಂಟಕ್ಕೆ ಬಿಟ್ಟೆಂ. ಯಲಹಂಕ ರೋಡಲ್ಲಿ ಏನ್ ಜಾಮೋ ಜಾಮು. ಹೆಬ್ಬಾಳಕ್ಕೆ ಬರಕ್ಕೇ ಎಂಟುವರೆ ಆಯ್ತು. ಇನ್ನ ಅಲ್ಲಿ ಹೋಗಿ ನೋಡಿದ್ರೆ... ನಂನ ಹಾಗೆ ಒಂದು ಹತ್ತು ಮಂದಿ ವೋಲ್ವೋ ಬಸ್ಸಿಗೆ ಕಾಯ್ತವ್ರೆ. ಆಗ ಒಬ್ಬಳು ಕೂಲಿಂಗ್ ಗ್ಲಾಸ್ ಹಾಕ್ಕೊಂಡ ಯಮ್ಮ, ಅಲ್ಲಿದ್ದ ಬಿಟಿಎಸ್ ಆಪೀಸರನ ಹತ್ರ ’ಏನ್ ಸಾರ್, ವೋಲ್ವೋ ಇದೆ ಅಂತ ಬಂದ್ರೆ ಎಲ್ಲ ಡಿಪೋದಲ್ಲಿ ನಿಲ್ಸಿದ್ದೀರ. ಈಗ ವೋಲ್ವೋ ಬರಲ್ಲ ಅಂತೀರ, ಏನಿದು’ ಎಂದು ಗೋಗರೆತಿದ್ದಳು. ಅದಕ್ಕೆ ಆ ವಯ್ಯ’ ನಾನೇನಮ್ಮ ಮಾಡಲಿ. ನಮ್ ಮೇಲ್ ಆಪೀಸರನ್ನ ಕೇಳಬೇಕು’ ಅಂದ. ನಾನು ಅದೇ ಹೊತ್ತಿಗೆ ಅಲ್ಲೋಗಿ ’ಏನು ವೋಲ್ವೋ ಇಲ್ವ?’ ಎಂದೆ. ಆಯಮ್ಮ ನಂಗೆ ’ಸೀ ಆಲ್ ಆರ್ ಸ್ಟಾಂಡಿಂಗ್ ದೇರ್’ ಅಂತ ಡಿಪೋ ಕಡೆ ಬೆರಳು ಮಾಡಿದಳು.
ಸರಿ ಇನ್ನೇನು ಮಾಡೋದು.. ಅಂತ ಮಾಮೂಲಿ ಬಸ್ಸನ್ನೇ ಹತ್ತಿದ್ವು. ನಾನು ದಿನಾ ಹೋಗಾದು ನಮ್ ನೀಲಿ-ಬಿಳಿ ಬಸ್ಸಲ್ಲೆ.. ಆದ್ರೆ ಎಂಟುವರೆ ಆದ ಮೇಲೆ ಸಕ್ಕತ್ ರಶ್ಶು. ಆಪೀಸನ್ನ ತಲುಪಿದಾಗ ಹನ್ನೊಂದು ಗಂಟೆಗೆ.
ಹಿಂಗೆ ಆದರೆ ವೋಲ್ವೋಗಳು ಕಾಲಿ ಓಡಾಡಬೇಕಾಗ್ತವೆ. ದಿನಾ ಕಾಲಿನೇ ಓಡಾದು. ನಮ್ ಬಸ್ ಮಂದಿ ಮತ್ತೆ ಹಿಂಗೆ ಮಾಡಲ್ಲ ಅಂತ ಅಂದುಕೊಂಡು.. ಕಾರು-ಗೀರಲ್ಲಿ ಓಡಾಡೋರು, ರಿಂಗ್ ರೋಡಲ್ಲಿ ಅಚ್ಚಕಟ್ಟಾಗಿ ವೋಲ್ವೋದಲ್ಲಿ ಓಡಾಡಣ. ಪೆಟ್ರೋಲ್ ಉಳಿಸಣ. ಪರಿಸರ ಉಳಿಸಣ, ಹಾಗೆ ಟ್ರಾಪಿಕ್ ಜಾಮ್ ಕಡಮೆ ಮಾಡಣ.

- mahesha ರವರ ಬ್ಲಾಗ್
- Login or register to post comments
- 334 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: