ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ನಾಗೋಲಿ ನಿದ್ದೆ

September 22, 2008 - 3:20pm — mahesha

ನನ್ ಮದುವೆಯಾದ ಸುದ್ದೀನ್ ನಮ್ ಸುನಿಲ ಆಗಲೇ ಹೇಳಿದ್ದಾನೆ.

ಹು ನನ್ ನಲ್-ಮದುವೆ ಸಪ್ಟೆಂಬರ್‍ ೨೦೦೮ರ ಒಂಬತ್-ಹತ್-ಹನ್ನೊಂದು ಮೂರುದಿವಸ ಬೆಂಗಳೂರಲ್ಲೇ ನಡೀತು.

ಆದರೆ ಒಂಬತ್ತು ಸೋಮವಾರ ದೇವರ ಸಮಾರಾಧನೆಯೆಂದು ಎಂಟಕ್ಕೆ ನಮ್ಮ ದೊಡ್ಡಮ್ಮ, ದೊಡ್ಡಮ್ಮನ ಮಗಳು ಅವಳ ಮಗಳು ಎಲ್ಲ ಬಂದಿದ್ದರು. ಮನೇಲಿ ವಯಸ್ಸಾದವರಿಗೆಲ್ಲ ಹಾಸಿಗೆ ಸಿಕ್ಕಿತು.. ವಯಸ್ಸಾಗದ ನಾನು, ನನ್ ತಮ್ಮ,ನನ್ ಗೆಳೆಯ+ರೂಮ್ ಮೇಟಿಗೆ ಜಮಕಾನವೇ ಗತಿಯಾಯ್ತು... ಅಂದು ಇರಳೆಲ್ಲ ಹರಟಿ ನಿದ್ದೇ ಮಾಡಿದ್ದು ಅಶ್ಟಕ್ಕಶ್ಟೇ......

ಒಂಬತ್ತಕ್ಕೆ ಚಪ್ಪರ ಪೂಜೆ, ದೇವರ ಸಮಾರಾಧನೆ, ನಾಂದಿ, ನವಗ್ರಹ ಹೋಮ, ಮೃತ್ಯುಂಜಯ ಹೋಮ ಮುಂತಾದವು ಇದ್ದವು... ಇನ್ನೂ ನೆಂಟರು ಬಂದರು.. ಅವತ್ತು ಇರಳೂ ನಮಗೆ ಜಮಕಾನವೇ ಗತಿ..

ಮಾರನೇ ದಿನ ನಮ್ ಬಸ್-ದಿಬ್ಬಣ ನಮ್ಮೂರಿಂದ ಬೆಂಗಳೂರಿಗೆ ಸಂಜೆ ತಲುಪಿತು. ಸಂಜೆ ವರಪೂಜೆ ಮುಂತಾದವು.. ಇನ್ ಮದುವೆ ಚತ್ರದಲ್ಲಿ ನಿದ್ದೇ ಬಂದೀತೇ? ನಾನ್ ಬರೀ ಮಲಗಿದ ಶಾಸ್ತ್ರ ಮಾಡಿದಶ್ಟೇ...

ಇನ್ ಮದುವೆ ದಿವಸ ಬೆಳಬೆಳಗ್ ಐದಕ್ಕೆ ಎಣ್ಣೇಶಾಸ್ತ್ರ ಅಂತ ಎಬ್ಬಿಸಿ ಕೂರಿಸಿದರು. ತಲೆ ಸ್ನಾನ ಬೇರೆ ಮಾಡಬೇಕಾಯ್ತು. ತಿಂಡಿ ತಿನ್ನೋ ಹಾಗಿಲ್ಲ ಅಂತ ಮೂರು ಲೋಟ ಹಾಲು ಕುಡಿಯಕ್ಕೆ ಬಿಟ್ಟರು. ಸರಿ ಸ್ನಾನ ಆದ ಮೇಲೆ ಸಂಕಲಕೆ ಪಂಜೆ ಅಂತ ಒಂದು ತೆಳುವಾದ ಕಜ್ಜೆ ಪಂಜೆ ಉಡಿಸಿ, ಪೇಟ ಮುಡಿಸಿ, ಕೈಗೆ ಊರುಗೋಲು ಬೀಸಣಿಗೆ ಹಿಡಿಸಿ, ಕಾಶಿಯಾತ್ರೆಗೆ ಹೊರಡಿಸಿದರು. ನನಗೋ ನಿದ್ದೇ ಸಾಲದಕ್ಕೆ ಎಲ್ಲದಕ್ಕೆ ಹು ಹು ಎನ್ನುತ್ತಿದ್ದೆ.

ಕಾಶಿಯಾತ್ರೇಲಿ ನಮ್ ಮಾವ ಕಾಲು ತೊಳೆದು, ಹೊಸ ಚಪ್ಪಲಿ ಕೊಟ್ಟು ಹಸೆಮಣೆ ಕರೆದುಕೊಂಡು ಹೋದರು. ಆ ಮೇಲೆ ’ತೆರೆ’, ’ಧಾರೆ’, ’ತಾಳಿ’, ಕೆಲವರು ವೋದಿಸಿದ್ದು.. ಮುಗಿದು ’ಭೌಮ’ವಾಗಿತು. ನನಗೆ ಹೊಟ್ಟೆ ಪಕಪಕ ಎಂದು ಹಸಿದಿತ್ತು..

ಚನ್ನಾಗಿ ಊಟವಾದ ಮೇಲೆ ನನಗೆ ಜೋರು ನಿದ್ದೆ ಎಳೆಯಲು ಸುರುವಾಯ್ತು.. ಅಶ್ಟರಲ್ಲೇ ಪುರೋಹಿತರು ನಾಗೋಲಿಗೆ ಬನ್ನಿ ಎಂದು ಕರೆದುಕೊಂಡು ಹೋದರು.. ನನಗೆ ಹೇಗೆ ನಿದ್ದೇ ಅಂದರೆ.. ಅವರು ಅದೇನೇನೇನು ಮಾಡಿಸಿದರೋ ಒಂದೂ ನೆನಪೇ ಇಲ್ಲ ಸರಿಯಾಗಿ.. ಅವಳು ಒಂದೆರಡು ಸಲ ಮೊಣಗೈಯಿಂದ ತಿವಿದು ಎಬ್ಬಿಸ್ತಿದ್ದಳಂತೆ.. ನಾಗೋಲಿ ತಾಳೀನ್ ಆ ನಿದ್ದೆ ಮಂಪರಲ್ಲೇ ಕಟ್ಟಿದ್ದೂ ಆಯಿತು....

ಎಲ್ಲ ಮುಗಿದ ಮೇಲೆ ಮೊದಲು ಹೋಗಿ ಮುಕ್ಕಾಲುಗಂಟೆ ನಿದ್ದೇ ಮಾಡಿದೆ ಅಶ್ಟೇ.. ತಿರುಗಿ ರಿಸೆಪ್ಶನ್ನು ಅಂತ ಎಬ್ಬಿಸಿ ಮೂರುವರೆ ಗಂಟೆ ನಿಲ್ಲಿಸಿದ್ದರು....

ನಾನು ನಿದ್ದೇಲಿ ನಾಗೋಲಿ ತಾಳಿ ಕಟ್ಟಿದನ್ನ ವಿಡಿಯೋ ಬೇರೆ ಮಾಡಿದ್ದಾರೆ.. ಇನ್ ನನ್ ಜನುಮ ಪೂರ್ತಿ ಅದನ್ನ ನೋಡಿ ಆಡಿಕೋತಾರೆ.. Sad

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 270 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 22, 2008 - 4:47pm — Sunil Jayaprakash

ಉ: ನಾಗೋಲಿ ನಿದ್ದೆ

Sunil Jayaprakash's picture

Smiling :) Smiling ಹೌದು, ಮದುವೆಯಲ್ಲಿ ಅಕ್ಷತೆಕಾಳು ಯಾರು ಮೊದಲು ಹಾಕಿದ್ದು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 10:27am — naasomeswara

ಉ: ನಾಗೋಲಿ ನಿದ್ದೆ

naasomeswara's picture

ಅಕ್ಷತೆ ಕಾಳೋ? ಜೀರಿಗೆ ಬೆಲ್ಲವೊ???

- ನಾಸೋ
http://naasomeswara.blogspot.com/
http://someswara.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 11:48am — Sunil Jayaprakash

ಉ: ನಾಗೋಲಿ ನಿದ್ದೆ

Sunil Jayaprakash's picture

ಮಾಯ್ಸರು, ಗೋಧಿ ಹಾಕಬೇಕು ಅಂತ ಅಂದ್ಕೊಳ್ತಾ ಇದ್ರು....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 11:50am — srinivasps

ಉ: ನಾಗೋಲಿ ನಿದ್ದೆ

srinivasps's picture

ರಾಗಿ ಅಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 11:53am — Sunil Jayaprakash

ಉ: ನಾಗೋಲಿ ನಿದ್ದೆ

Sunil Jayaprakash's picture

ಕೊನೆಗೆ ಏನು ಮಾಡಿದ್ರೋ, ನಂಗೆ ಗೊತ್ತಿಲ್ಲ... ಅವರೇ ಹೇಳಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 1:19pm — mahesha

ಉ: ನಾಗೋಲಿ ನಿದ್ದೆ

mahesha's picture

ಜೀರಿಗೆ ಬೆಲ್ಲ ಅವಳೇ ಮೊದಲು ಹಾಕಿದ್ದಂತೆ.. Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 22, 2008 - 11:25pm — kalpana

ಉ: ನಾಗೋಲಿ ನಿದ್ದೆ

kalpana's picture

ಅದ್ಸರಿ, ರಿಸೆಪ್ಶನ್ ಆದ್ಮೇಲೆ ಚೆನ್ನಾಗಿ ನಿದ್ದೆ ಮಾಡಿದ್ರಿ ತಾನೆ? Eye-wink
~ಕಲ್ಪನ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 1:19pm — mahesha

ಉ: ನಾಗೋಲಿ ನಿದ್ದೆ

mahesha's picture

ಹೆ ಹೆ ಹು..Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 23, 2008 - 10:46am — ಸಂಗನಗೌಡ

ಉ: ನಾಗೋಲಿ ನಿದ್ದೆ

ಸಂಗನಗೌಡ's picture

Smiling :) ಕಾದಿದೆ ನಿಮಗೆ ಜನುಮ ಪೂರ್ತಿ ಮೊಣಕೈ ತಿವಿತ..
ನಲಿವಾಗಲಿ.
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜೋತಿಶ್ಯ ಹೇಳೋರಿಗೆ, ಪುರೋಹಿತರಾದರೋರಿಗೆ ತೆರಿಗೆ ಇಲ್ವ?
  • ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ
  • ಕಳವು - ಸಣ್ಣ ಕಥೆ
  • ಕೊಲೆಗಾರನ ಕಳವಳ
  • ೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
  • ಲಿನಕ್ಸಾಯಣ - ೩೦ - ಸ್ಟೆಲ್ಲೇರಿಯಂ - ಖಗೋಳಕ್ಕೊಂದು ಕಿಟಕಿ
  • ಕಂನುಡಿಯ ಹುಟ್ಟು - ಶಂ.ಬಾ.ಜೋಶಿಯವರ ಪುಸ್ತಕ
  • ವಿಪರ್ಯಾಸ
  • ಎಂದಿನಂತೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anil.ramesh
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:21pm
  • omshivaprakash
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:18pm
  • anil.ramesh
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
    December 1, 2008 - 9:17pm
  • omshivaprakash
    ಉ: ಶುಕ್ರ ಮತ್ತು ಗುರುವಿನ ಇಂಟರ್ವ್ಯೂ - ನೀವ್ ನೋಡಿದ್ರಾ?
    December 1, 2008 - 9:15pm
  • kannadakanda
    ಉ: ಅಳಿಯ, ಅನಿಷ್ಟ ಮತ್ತು ಗ್ರಹಚಾರ!
    December 1, 2008 - 9:12pm
  • palachandra
    ಉ: ಚಂದ್ರ-ಗುರು-ಶುಕ್ರ...
    December 1, 2008 - 9:06pm
  • palachandra
    ಉ: Aperture ಮತ್ತು Depth of Field
    December 1, 2008 - 9:01pm
  • gopinatha
    ಉ: ಚಂದ್ರ-ಗುರು-ಶುಕ್ರ...
    December 1, 2008 - 8:59pm
  • venkatb83
    ಉ: ಬನ್ನಿ ನಾವೆಲ್ಲ ಒಟ್ಟಾಗಿ ಉಗ್ರವದವನ್ನ/ಉಗ್ರವಾದಿಗಳನ್ನ ಮೆಟ್ಟಿ ನಿಲ್ಲೋಣ. ಒಗ್ಗಟ್ಟಿನಲ್ಲಿ ಬಲವಿದೆ .ಭಾರತ ನಿಜವಾಗಿ ಪ್ರಕಾಶಿಸುವ ಕಾಲ ಈಗ ಬಂದಿದೆ.
    December 1, 2008 - 8:58pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 104 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾನವೀಯತೆಯಲ್ಲಿ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಮಾನವೀಯತೆಯು ಸಮುದ್ರದಂತೆ; ಕೆಲ ಹನಿಗಳು ಅಪವಿತ್ರಗೊಂಡರೆ, ಸಮುದ್ರವೇ ಅಪವಿತ್ರವಾಗುವುದಿಲ್ಲ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator