ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಕ್ಕಸ್ಸು ಮತ್ತು ವಾಸ್ತು
[ ಇದನ್ನು ದಯವಟ್ಟು ನಗೆ ಎಂದು ತೆಗೆದುಕೊಳ್ಳಿರಿ .. ಅಸಯ್ಯ ಅನ್ನಿಸಬೋದು]
ಟಿವಿ ಹಾಕಿದೆ.. ನಮ್ಮ ಯೆಮ್ಮೆಯ ಪ್ರತೀಕ ’ಕಚ್ತಾರ್ರಿ ಕಸ್ತೂರಿ’ ಚಾನಲ್ ಬಂತು. ಅದ್ರಾಗೆ ಏನಪ್ಪ ಪ್ರೋಗ್ರಾಮು ಅಂದ್ರೆ.."ಉತ್ತಮ ಜೀವನಕ್ಕೆ ವಾಸ್ತು"
ಸರಿ ಅದೇನ್ ನೋಡಣ ಅಂತ ಕೂತೆ... ಸುರು..
ಪಾತ್ರಪರಿಚಯ
ವಾಸ್ತುಗಾರ: ಅಲಿಯಾಸ್ ಸ್ವಾಮೀಜಿ ಹತ್ತೂ ಬೆರಳುಗಳಿಗೆ ದೊಡ್ಡ ದೊಡ್ಡ ಹೊಳೆಯುವ ಚಿನ್ನದ ಉಂಗುರ ಹಾಕ್ಕೊಂಡಿದ್ರು. ಕಯ್ಯಿಗೆ ಕಡಗ. ಎದೆ ಬಿಟ್ಕೊಂಡು ದೊಡ್ಡ ಜರಿಜರಿ ಶಾಲು ವೊದ್ಕೊಂಡಿದ್ರು.. ತಲೆಬೋಳಿಸಿ ಜುಟ್ಟಬುಟ್ಟಿದ್ರು. ದೊಡ್ಡದಾಗಿ ನಾಮ ಏರಿಸಿದ್ರೂ. ವಸಿ ಮೇಕಪ್ ಮಾಡಿಕೊಂಡು ತುಟಿಗೆ ನಸುಗೆಂಪು ಬಳಿದುಕೊಂಡಿದ್ರು.
ಆಕೆ: ಅಲಿಯಾಸ್ ನಿರೂಪಣೆಗಾರ್ತಿ. ಅಚ್ಚಕಟ್ಟಾಗಿ ಸಿಲ್ಕ್ ಸೀರೆ. ಕುತ್ತಿಗೆ ತಾಳಿಯಿಲ್ಲದ ಬಂಗಾರದ ಒಂದು ಚಯ್ನು. ಕಿವಿಗೆ ಒಂದು ಜೊತೆ ಜುಮುಕಿ. ಸೀರೆಗೆ ಮ್ಯಾಚಿಂಗ್ ರವಕೆ. ವಾಸ್ತುಗಾರನಿಗಿಂತ ಕಡಮೆ ಹೊಳಪಿನ ಮೇಕಪ್ಪು!
ಸಂಬಾಸಣೆ.
ವಾಸ್ತುಗಾರ : ಇಂದಿನ ಸಂಚಿಕೆಯಲ್ಲಿ, ನಾವು ಕಕ್ಕಸ್ಸುಮನೆಯನ್ನು ವಾಸ್ತುವಿನಂತೆ ಹೆಂಗೆ ಕಟ್ಟಬೇಕು ಎಂದು ನೋಡಣ.
ಆಕೆ: ಸ್ವಾಮಿಜಿ" ಮೊದಲು ಕಕ್ಕಸ್ಸನ್ನು ವಾಸ್ತುವಿನಂತೆ ಕಟ್ಟದಿದ್ರೆ ಏನೇನೇನೇ ಆಗತ್ತೆ ವಸಿ ಯೋಳಿ.
ವಾ..ರ:ಮಲಬದ್ದತೆ, ಅತಿಬೇದಿ, ನೆಮ್ಮದಿಯ ಕೊರತೆ, ಸಂಸಾರದಲ್ಲಿ ಅಶಾಂತಿ, ಅತಿಗದ್ದಲ, ಆರೋಗ್ಯ ಸಮಸ್ಯೆ...
ಆಕೆ" ಅವ್ದಾ... ಹಂಗಾರೆ . ಯಾವ ಯಾವ ದಿಕ್ಕಿನಾಗೆ ಕಕ್ಕಸ್ಸು ಮಡಗಿದ್ರೆ ಏನೇನೇನಾಗ್ತಯ್ತೆ, ವಸಿ ಬಿಡಿಸಿ ಯೋಳಿ ಸಾಮಿಜಿ.
ವಾ..ರ:
...ನೋಡಮ್ಮಿ
... ವಾಯುವ್ಯ ಮೂಲೆಯಲ್ಲಿ ಮಲಾಲಯವನ್ನು ನಿರ್ಮಿಸಿದ್ರೆ, ಅತಿ ವಾತ,ವಾಯುಪೀಡೆ ಆ ಮಲಾಲಯದಲ್ಲಿ ಮಲವಿಸರ್ಜಿಸಿದವರಿಗೆಲ್ಲ......
ಆಕೆ: ಯಪ್ಪೋ.. ವಸಿ ಅರ್ತ ಆಗೋ ಹಂಗೆ ಯೋಳಿ.. ಆದೇನ್ ಪೀಡೆ ಅಂತ
ವಾ..ರ:
.. ಅಂದ್ರೆ ಸಿಕ್ಕಾಪಟ್ಟೆ ವೂಸು ಬತ್ತದೆ ಅಂತ ಕಣಮ್ಮಿ..
ಆಕೆ: (ಆತಂಕದಿಂದ ನಕ್ಕು) ಅವ್ದಾ.. ಮುಂದಿನ ದಿಕ್ಕು ಬಗ್ಗೆ ಅರ್ತ ಆಗೋ ಹಂಗೆ ಯೋಳಿ
ವಾ..ರ: ವೋಕ್ಕೊಳ್ಳಿ.. ನ
ಅಗ್ನೇಯ ಮೂಲೆಯಲ್ಲಿ ಮಡಗಿದ್ರೆ.. ವೋದಾಗ ಉರಿತದೆ...
ನಯ್ರುತ್ಯ ಮೂಲೆಯಲ್ಲಿ ಮಡಗಿದ್ರೆ.. ನೀರ್ ನೀರಾಗ್ ವೋಯ್ತದೆ...
ದಕ್ಶಿಣಕ್ಕೆ ಮಡಗಿದ್ರೆ ವೊಟ್ಟೆ ಕಟ್ತದೆ
ಪಶ್ಚಿಮಕ್ಕೆ ಮಡಗಿದ್ರೆ ಬೇದಿ ಆಯ್ತದೆ
ಅದಕ್ಕೆ ಉತ್ತರಕ್ಕೆ ಇಲ್ವಾ ಪೂರ್ವಕ್ಕೆ ಮಡಗಬೇಕು..
ಆಕೆ: ಅಲ್ಲ ಸಾಮಿ ಸಾಮಾನ್ಯ ಮುಂಬಾಕಿಲ್ನ ಉತ್ರ ಇಲ್ಲ ಪೂರ್ವಕ್ಕೆ ಅಲ್ವರ ಮಡಗೋದು.. ಏನ್ ನೀವ್ ಕಕ್ಕಸ್ಸನ್ನು ಬಾಕಿಲ ಪಕ್ಕ ಮಡಗು ಅಂದೀರಿ..? [ ಎಂದು ಮಗ್ದಕಣ್ಗಳನ್ನು ಪಿಳಿಪಿಳಿ ಮಿಟಿಕುಸುವಳು ]
ವಾ..ರ: [ಮುನಿಸಿಕೊಂಡು ದುರ ದುರ ದುರ ಎಂದು ಆಕೆಯನ್ನು ಹೆದರಿಸಲೆಂದೇ ಗುರಾಯಿಸಿ] ಲೇ ಅಮ್ಮಿ.. ನಿಂದು ಈಟುದ್ದ ಬಾಯಿ.. ಹೆಣ್ ವುಡಿಗಿ ಆಗಿ ಹಿಂಗೆ ಮಾತಾಡಕ್ಕೆ ನಾಚಿಕೆ ಆಗಕ್ಕೆಲ್ವ. ಬೊಡ್ಡಿ!
ಆಕೆ:[ ಅತ್ಕೊಂಡ್] ಈಕ್ಸಕರೇ.. ಇಲ್ಲಿಗೆ ನಮ್ ಕಾರಯಕರ್ಮ ಮುಗಿತು.. ವೋಗಿ ನಿಮ್ಮನೆ ಕಕ್ಕಸ್ಸು ಸರಿಯಾದ ದಿಕ್ಕಿಗೆ ಅಯ್ತಾ ನೋಡ್ಕಳಿ. ನಮ್‌ಸ್ಕಾರ

- mahesha ರವರ ಬ್ಲಾಗ್
- Login or register to post comments
- 411 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕಕ್ಕಸು ಮತ್ತು ವಾಸ್ತು
ಅಯ್ಯಪ್ಪ...
ಕಾಮೆಂಟೋಕೂ ನಗು ಬಿಡ್ತಿಲ್ಲ!!
ತಡೀರಿ... ಸುದಾರಿಸಕೊಂಡು ಬರ್‍ತೀನಿ...
ಉ: ಕಕ್ಕಸು ಮತ್ತು ವಾಸ್ತು
ಎಲ್ಲಿಗೋದ್ರಿ? ನಿಮ್ಮ ಕಕ್ಕಸಿನ ದಿಕ್ಕು ನೋಡಕ್ಕಾ?
ನನ್ನಿ!
ಉ: ಕಕ್ಕಸು ಮತ್ತು ವಾಸ್ತು
(
)
*ಅಶೋಕ್
ಉ: ಕಕ್ಕಸು ಮತ್ತು ವಾಸ್ತು
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಕಕ್ಕಸು ಮತ್ತು ವಾಸ್ತು
ಉ: ಕಕ್ಕಸು ಮತ್ತು ವಾಸ್ತು
ಚಲೋ ಅದ... ಆದರ....’ಆಕೆ’ಯನ್ನು ’ಬೊಡ್ಡಿ’ ಅಂದಿದ್ದಕ್ಕೆ ಹೆಣ್ ಹೈಕಳು ಸಿಟ್ ಮಾಡ್ಕೊಂಡಾವು...
ಉ: ಕಕ್ಕಸು ಮತ್ತು ವಾಸ್ತು
ಏನ್ ಗವ್ಡ್ರೇ ಹಿಂಗ್ ಅಂದ್ ಬುಟ್ರೀ...
ದೊಡ್ ಮನಶ್ಯರು ಹಂಗೇನೇಯಾ..... ಮಾತುಕಟ್ಟಿ ವೋದಾಗ.. ಇಂಗೆ ಬಯ್ಗಳಗಳನ್ನ ಎರಚ್ತಾರೆ.!
ಉ: ಕಕ್ಕಸು ಮತ್ತು ವಾಸ್ತು
ದಪ್ಪಗೆ ಇದ್ದವರಿಗೆ ಬೊಡ್ಡಿ ಅಂದ್ರೆ ಬೇಸರ ಆಗ್ತಾವ.. ಸಣ್ಣಗೆ ಇದ್ರೆ ಬೇಜಾರ್ ಮಾಡಾಕಿಲ್ಲ ಅಲ್ವಾ?
ಉ: ಕಕ್ಕಸು ಮತ್ತು ವಾಸ್ತು
ಇವರಿಗೆ ಬೊಡ್ಡಿ ಅರ್ತ ಗೊತ್ತಿಲ್ಲ.. !
ಬೊಡ್ಡಿ ಒಂದು ಬಲು ಕೆಟ್ಟ ಪದ.. ಬೆಲೆವೆಣ್ಣು ಎಂದು ಅರಿತ
ಉ: ಕಕ್ಕಸು ಮತ್ತು ವಾಸ್ತು
ಹೊ ಹಾಗೊ ಗೊತ್ತಿರಲಿಲ್ಲ..ನಮ್ ಕಡೆ ಅದನ್ನ ಬಳಸೊಲ್ಲ...
ಉ: ಕಕ್ಕಸು ಮತ್ತು ವಾಸ್ತು
ಪರವಾಗಿಲ್ಲ. ನಮ್ ಕಡೆನೂ ಈಗೀಗ ಬಳಸಲ್ಲ.!
ಉ:
ನನ್ನ ಮಿತ್ರನೊಬ್ಬನ ಮನೆಯಲ್ಲಿ ಅವನ ಅಪ್ಪಾ ತೀರಿದಾಗ - ಮನೆಯ ವಾಸ್ತು ಸರಿಯಿಲ್ಲಾ ಅ೦ತಾ ದ್ಯಾವರ್ ಮನೆಯಿದ್ದ ಕಡೆ ಕಕ್ಕಸ್ ಕೋಣೆ- ಕಕ್ಕ ಸ್ ಕೋಣೆ ಇದ್ದ ಕಡೆ ದೇವರ ಮನೆಯಾಯ್ತು . ನಾನು ಒಮ್ಮೆ ಅವಸರವಾದಾಗ ಅವರ್ ಕಕ್ಕಸ್ ಕೋಣೆ ಕಡೆ ಓಡಿ ಹೋದೆ. ಅಲ್ಲಿ ದ್ಯಾವರ್ ಮನೆ.
ಆಮೇಲೆ ಆತ ಬ೦ದ ಮೇಲೆ ಆದ್ ಬದಲಾವಣೆ ತಿಳ್ಕೊ೦ಡು ಶಾಕ್ ಆಯ್ತು.
"ಸದ್ಯ ಕಕ್ಕಸ್ ಕೋಣೆ - ಮನೆ ಒಳಗೆ ಇಡ್ ಬಾರು ಅ೦ದಿದ್ದ್ರೇ ಏನಾಗ್ತಾಯಿತ್ತು - " ಅ೦ದ್ಕೊ೦ಡು ನಕ್ಕು ನಕ್ಕೂ ಬ೦ದೆ.
ಉ:
ರೀ ಕಕ್ಕಸ್ ಹಳ್ಳೀಲಿ ಮನೆ ಒಳಗೆ ಇರಲ್ರೀ!
ಉ: ಕಕ್ಕಸ್ಸು ಮತ್ತು ವಾಸ್ತು
ನನ್ನೀ ಕಕ್ಕಸ್ಸು ಬರಅ ’ಜನಪ್ರಿಯ’ದಲ್ಲಿ ಮೊದಲು ಬರಿಸಿದಕ್ಕೆ ಎಲ್ಲರಿಗೂ ನಂನಿ.!