ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅವಳ ಆ ಹಾಡು
ನಾನೆದ್ದಿಹೆ ಈ ನಟ್ಟಿರುಳಿನಲ್ಲಿ
ಜಂಪೂ ಬಾರದು ಏಕೆ,
ಕಾಡುತಿಹುದು ಆ ಸವಿನೆನಪು,
ಒಲವ ಕಣ್ಣೋಟದ ಹೊಳಪು.
ಅವಳ ಆ ಕೆನ್ನೆಮುತ್ತು,
ಮುದ್ದು, ಆ ತೊಡೆದಿಂಬು,
ತಲೆಗೂದಲ ಸವರುವ,
ಆ ಕೈ, ಮೆದು ಹೂಗೈ!
ಅವಳ ಮೊಗ ಎನಿತಂದ,
ಎನಿತು ಚೆಂದ ಅವಳ ನಗೆ
ಅವಳ ಆ ಕೊರಲಿಂಪು,
ಕಿವಿ-ಮನ ಎರಡಕ್ಕೂ ತಂಪು
ದಿನವೂ ಅವಳ ಆ ಆದೇ ಹಾಡು,
ಒಂದೇ ರಾಗ ಒಂದೇ ತಾಳ
ಆದರೂ ದಿನವೂ ಹೊಸತು,
ಎದೆ ಹನಿಮಳೆಗೆ ನವಿಲಂತೆ ನಿಮಿರುತ್ತಿತ್ತು
ಆ ಹಾಡು ಅದೇ ಹಾಡು,
ಎನಿತು ಸಲ ಮನವ ತಣಿಸಿತ್ತು
ಮೈಮರೆವ ಕನಸಿನರಮನೆಗೆ
ಮೆಲ್ಲಗೆ ಅವಳ ಜೊತೆಗೊಯ್ಯುತ್ತಿತು.
ಆದರೆ ಈ ನಡುರಾತ್ರಿಯಲ್ಲಿ,
ಅದೇ ಸವಿನೆನೆಪು ಬಂದು,
ತನ್ನ ಹಳೆಬೆರಳುಗಳಿಂದ ಮುಟ್ಟಿ,
ಮೆತ್ತಗೆ ತಟ್ಟಿ ಎಬ್ಬಿಸುತ್ತಿದೆ
ಎಬ್ಬಿಸಿ, ಅವಳ ಆದೇ ಹಾಡನ್ನು
ಅವಳ ದನಿಯಲ್ಲೆ ಹಾಡಿ,
ಅವಳ ಚಿತ್ರವನ್ನೇ ಕಣ್ಮುಂದಿರಿಸಿ
ಬಿಡದೇ ಕಾಡಿಸುತ್ತಿದೆ .
====================================
-ಮಹೇಶ
ಯಾವ ರಾಯನ ಕಾಲದಲ್ಲಿ ಬರೆದುದ್ದೋ ಗೊತ್ತಿಲ್ಲ. ಇಂದು ಸಿಕ್ಕಿತು ಇಲ್ಲ ಪೇಸ್ಟಿದೆ. :)

- mahesha ರವರ ಬ್ಲಾಗ್
- Login or register to post comments
- 584 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಅವಳ ಆ ಹಾಡು
ಹಳೆ ಹಾಡು
..
ಹಳೆ ಕವನ
..
ಹಳೆ ಕನ್ನಡ
..
ಹೊಸ ಹುಡುಗಿ?
ಉ:
ಈ ಹಾಡಿನ ತುಣುಕನ್ನ ಅದೇ ಹುಡುಗಿಗೆ ಒಯ್ದು ಕೊಡಿ
---------------------------------------------------------------- ನಡೆವವ ಬಿದ್ದಾನಲ್ಲದೇ, ನಿಂತವ ಬೀಳಲಾರ :-|
ಉ:
======================================
ಅವಳು ಸಿಗಲಿ, ಮೊದಲು.. ಕಾಣೆಯಾಗಿದ್ದಾಳೆ