ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನನ್ನ ಲೌಕಿಕ ಕರ್ಮಠ ಧರ್ಮ
ಅಱ/ಅಱು ಅಂದ್ರೆ ದರ್ಮ ಅಂತ...
ನಮ್ ತಾತ ಇದ್ರಲ್ಲ.. ಅವರು ಅದೇನೇನೇನೋ ಓದಿಕೊಂಡಿದ್ರು. ಓದಿಕೊಂಡಿದ್ರೂ ಅನ್ನೋದಕ್ಕಿಂತ ಅವರದು ಏನೇನೇನೇ ಯೋಚ್ನೆಗಳು.... ಅವರು ನಮಗೆಲ್ಲ ಹೇಳಿಕೊಟ್ಟ ಕೆಲವು ಸಂಗತಿಗಳನ್ನು ನಾನು ನನ್ನ ಕಸಿನ್ನು ಸೇರಿ ಆರಯ್ಯು ಮಾಡಿ.. ನಮ್ಮ ಕರ್ಮಠ ಅಱಂ ಹೀಗೆ ಎಂದು ತೀರ್ಮಾನಿಸಿದ್ದೀವಿ.
ಅದಕ್ಕೆ ಹಿನ್ನಲೆ.....
ನಾವ್ ಜಾತಿಯಿಂದ ಕರ್ಮಠ ಲವ್ಕಿಕ ಬಬ್ಬೂರುಕಮ್ಮೆ ಬ್ರಾಹ್ಮಣರು. ನಮ್ಮನ್ನು ಸ್ಮಾರ್ತರೆಂದು ಎಣಿಸಿದರು, ಬೇರೆ ಸ್ಮಾರ್ತರಿಗೂ ನಮಗೂ ಹಲವು ಬೇರೆತನಗಳಿವೆ. ಮಠವೆಂದು ನಾವ್ ಶ್ರುಂಗೇರಿ ಶಂಕರಮಠಕ್ಕೆ ಸೇರಿದವರು.
ನಮ್ಮಲ್ಲಿ ಎರಡು ಬಗೆಯಂತೆ ವಯ್ದಿಕರು ಮತ್ತು ಲವ್ಕಿಕರೆಂದು.. ನಮ್ಮಲ್ಲಿ ಹೆಚ್ಚಿನವರು ಲವ್ಕಿಕರು.
ವಯ್ದಿಕರು ಅಂದ್ರೆ ವೇದವನ್ನೋದಿ, ಪೂಜೆಹೋಮಹವನ, ಗುಡಿಪೂಜೆ ಮಾಡಿಸುವ ಪುರೋಹಿತತನದವರು.
ಲವ್ಕಿಕರೆಂದರೆ ಪವ್ರೋಹಿತ್ಯವನ್ನು ಬಿಟ್ಟು ಮಿಕ್ಕಕೆಲಸಗಳನ್ನೂ ಅದರಲ್ಲೂ ಶಾನುಬೋಗತನ, ನೆಲದಾಳ್ವಿಕೆ, ಕಾವ್ಯ, ಸಂಗೀತ, ಆಟ, ಇಂಜಿನಿಯರಿಕೆ, ಡಾಕ್ಷರಿಕೆ, ಮೇಶ್ಟರಿಕೆ, ವಯ್ಯಾಕರಣಿ ಮುಂತಾದವನ್ನು ಮಾಡುವವರು.
ನಾವ್ ಲವ್ಕಿಕರಾದುದರಿಂದ ವೇದಗಳನ್ನು ಕಲಿತು ಓದಿಕೊಂಡರೂ, ಪವ್ರೋಹಿತ್ಯ ಮಾಡಿಸೋ ಹಾಗಿಲ್ಲ.. ಗುಡಿ ಪೂಜೆ ಮಾಡೋ ಹಾಗಿಲ್ಲ.. ನಾವ್ ನಮ್ಮ ವಯ್ದಿಕ ಮಂದಿಯಿಂದ ಹೋಮಹವನ, ರತೋತ್ಸವ, ಸೇವೆಗಳನ್ನು ಮಾಡಿಸ್ತೀವಿ..ಜೋತಿಶ್ಯ ಕೂಡ ಹೇಳುವ ಹಾಗಿಲ್ಲ.
ಹಿಂದೆ ನಮ್ಮ ಮಂದಿ ಯಾವ ಯಾವುದೋ ರಾಯರಡಿ ಮಂತ್ರಿ, ವಿದ್ವಾಂಸ ಮುಂತಾದವರು ಆಗಿದ್ದರಂತೆ. ಹಾಗೆ ಕೆಲವರು ಕ್ಶತ್ರಿಯರಂತೆ ಆಳ್ವಿಕೆಯನ್ನೂ ಮಾಡಿಹರಂತೆ... ಇನ್ನೂ ಕೆಲವರು ನಮ್ ಅಱುವನ್ನು ಬಿಟ್ಟು ಲಿಂಗಾಯತ, ಬುದ್ದ, ಜಯ್ನ, ಅದ್ವಯ್ತ, ದ್ವಯ್ತ ಮತಗಳನ್ನು ಅಪ್ಪಿಕೊಂಡರಂತೆ. ನಾವ್ ಕೂಡ ಅದ್ವಯ್ತಿ ಎಂದೇ ಹೇಳಿಕೊಳ್ಳೋದು.
ಆದರೆ....
ನಮ್ಮ ಮೂಲ ಅಱುವನ್ನು ಹುಡುಕಿಕೊಂಡು ಹೊರಟ ನಮಗೆ ತಿಳಿದುದು.. ನಮ್ ಬಲುಹಳೆಯ ನಂಬಿಕೆ ಕರ್ಮಸಿದ್ದಾಂತವೆಂದು. ನಾವ್ ವೇದೋಕ್ತ/ವೇದವು ಹೇಳುವ ಹದಿನಾರು ಕರ್ಮಗಳನ್ನು ಚನ್ನಾಗಿ, ಜೋರಾಗಿ(ದುಡ್ಡು, ಕ್ರಮ, ನಿಯಮ ಎಲ್ಲದರಲ್ಲೂ) ಮಾಡಿ ಮೋಕ್ಶಪಡೆತದಲ್ಲಿ ನಂಬಿಕೆ ಹೊಂದಿದವರೆಂದು. ಮೂರ್ತಿ ಪೂಜೆ, ಗುಡಿ ಕಟ್ಟುವುದು ಹಿಂದೆ ಇರಲಿಲ್ಲವೆಂದು... ನಮ್ ದೇವತಾರಾದನೆ ಬೆಂಕಿಯ ಮೂಲಕ ಹವಿಸ್ಸಿಂದವೆಂದು.. ಬಳಿಕ ಶಂಕರಾಚಾರ್ಯರ ಜೊತೆಗಿನ ಚರ್ಚಾಯುದ್ಧದಲ್ಲಿ ನಮ್ಮ ವಿದ್ವಾಂಸರೆಲ್ಲ ಮಣಿದು ಅದ್ವಯ್ತಿಗಳಾದರೆಂದೂ...... ಹೀಗೇ ಹೀಗೇ ತಿಳಿಯುತ್ತಾ ಹೋಯ್ತು..
ಆದರೆ ನಮ್ ತಾತ ಯಾವತ್ತು ನಮಗೆ ನಂಜನಗೂಡಿನ ನಂಜುಂಡೇಶ್ವರನಂನು ಲಿಂಗರೂಪದಲ್ಲಿ ಪೂಜೆ ಮಾಡಬೇಕು.. ಲಿಂಗರೂಪದಲ್ಲಿ ನಂಜುಂಡನನ ಪೂಜೆಯ ಹೊರತು ಮಿಕ್ಕಾವ ದೇವ ಬೊಂಬೆಗಳನ್ನಿಟ್ಟು ಪೂಜೆ ಮಾಡಬಾರದುದೆಂದು.. ಆದರೆ ಮನೆಯಲ್ಲಿ ವಿಶ್ಣುಸಹಸ್ರನಾಮ ಮುಂತಾದರ ಸ್ತೋತ್ರಗಳನ್ನು ಹೇಳಬೋದುದೆಂದು... ತಿರುಪತಿಗೆ ಹೋಗುವುದಾಗಲಿ, ತಿರುಪತಿಯ ದೇವರನ್ನು ನಂಬುವುದಾಗಲಿ ಮಾಡಬಾರದೆಂದು.. ಹಾಗೆ ದರ್ಮಸ್ತಳದ ಮಂಜುನಾತನ ಪೂಜೆ ಕೂಡ ಅದ್ಯಾಕೋ ಬೇಡವೆಂದು ಹೇಳುತ್ತಲೇ ಇದ್ದರು...
ನಮ್ ಮನೇಲಿ ಶಿವರಾತ್ರಿಯ ಲಿಂಗಪೂಜೆ ಎಶ್ಟು ಜೋರು ಅಂದ್ರೆ, ನಾವೆಲ್ಲ ಮಾಮಂಗಳಾರತಿಗೆ ಬಡೆಯೋ ಜಾಗಟೆಯ ಸದ್ದು ಮೂರುಬೀದಿಗೆ ಕೇಳಿಬೇಕು ಹಾಗೆ.. ನಾವ್ ಎಂದೂ ಹಣೆಗೆ ಮೂರುದೊಡ್ಡ ಇಬೂತಿ ಪಟ್ಟೆಯಿಲ್ಲದೇ ಹೊರಹೋಗುವಹಾಗೇ ಇರಲಿಲ್ಲ... ಇಬೂತಿ ಒಂದೇ ಕುಂಕುಮ ಇಡುವ ಪದ್ದತಿಯೂ ಇರಲಿಲ್ಲ.. ಅದು ಏನಿದ್ದು ನಮ್ಮಮ್ಮ ಅಜ್ಜಿ ಚಂದ ಕಾಣಲಿ ಎಂದು ಇಡುತ್ತಿದ್ದು ಒಂದು ಬೊಟ್ಟು.. ಇದನ್ನೆಲ್ಲ ನೋಡಿ, ಕೆಲವರು ಇವೆರೇನು ಲಿಂಗಾಯತರ ಎಂದುದೂ ಉಂಟು.. ಅದಕ್ಕೆ ನಮ್ ತಾತ ಇಲ್ಲ ನಾವ್ "ನಂಜುಡೇಶ್ವರನ ಒಕ್ಕಲಿನವರು" ಎಂದೇ ಹೇಳುತ್ತಿದ್ದರು.
ನಮ್ಮಪ್ಪನಿಗೆ ಇಂತ ಸಂಗತಿಯಲ್ಲಿ ಹೆಚ್ಚು ಆಸಕ್ತಿ ಇಲ್ಲ..
ನಾನೂ, ನನ್ನ ತಮ್ಮ, ನನ್ನ ಚಿಕ್ಕಪ್ಪಂದಿರ ಮಕ್ಕಳು ಹುಟ್ಟಿದಾಗ ನಮ್ಮ ಮುತ್ತಿಜ್ಜಿ ಬದುಕಿದ್ದರು.. ಒಬ್ಬೊಬ್ಬ ಮರಿಮಕ್ಕಳ ಹುಟ್ಟಿಗೂ ನಮ್ಮ ತಾತನವರು ದೊಡ್ಡ ಸಮಾರಾದನೆಗಳನ್ನೇ ಮಾಡಿದ್ದರಂತೆ...
ಹಾಗೆ ನಮ್ಮ ತಾತನವರು ಯಾವ ಮದುವೆಯೇ ಆಗಲಿ ಬಲು ಜೋರಾಗಿ, ಸಿಕ್ಕಾಪಟ್ಟೆ ಜೋರಾಗಿ ವಿಜ್ರುಂಬಣೆಯಿಂದ ಮಾಡುವುದು ನಮ್ಮ ಅಱು ಎಂದು ಅನ್ನುತ್ತಿದ್ದರಂತೆ.....
ಇದನ್ನೆಲ್ಲ ಗಮನಿಸಿದ ನಾವ್ ನಮ್ಮ ಅಱು ಹೀಗೆಂದು ತೀರ್ಮಾನಕ್ಕೆ ಬಂದೆವು...
ಕರ್ಮಟರಾದ ನಾವು ಮೋಕ್ಶಕ್ಕೆ ಇವನ್ನು ಮಾಡಲೇಬೇಕು...
೧) ಹೆಚ್ಚೆಚ್ಚು ಹಣ ಪಡೆಯಬೇಕು.. ಅದಕ್ಕೆ ಓದು, ಕೆಲಸ ಇವೆಲ್ಲ ಜೋರಾಗಿ ನಡೆಸಬೇಕು. ಹಾಗು ಹೆಚ್ಚೆಚ್ಚು ಕಾಲ ಬದುಕಬೇಕು.
೨) ಮದುವೆಯಾಗಲೇ ಬೇಕು. ಹಾಗು ಮದುವೆಯ ಹುಡುಗಿಯು ನಮ್ ಅಱುವನ್ನು ಕಾಪಾಡುವಂತೆ ಇರಬೇಕು
೩) ಮಕ್ಕಳು ಪಡೆಯಬೇಕು.. ಸದ್ಯದ ವಾದಕ್ಕೆ ಮೂರು ಎಂದು ಬಂದು ನಿಂತಿದ್ದರೂ.. ಮಕ್ಕಳೆಶ್ಟು ಅನ್ನೋದು ಇನ್ನು ತೀರ್ಮಾನವಾಗಬೇಕಿದೆ.. ![]()
೩) ಮಕ್ಕಳಿಗೆ ಚನ್ನಾಗಿ ಜೋರಾಗಿ ಕಿವಿಚುಚ್ಚಿಸಲೇಬೇಕು, ಮುಂಜಿ ಮಾಡಿಸಲೇ ಬೇಕು.
೪)ಮಕ್ಕಳನ್ನು ಚನ್ನಾಗಿ ಜೋರಾಗಿ ಓದಿಸಲೇ ಬೇಕು.. ಓದಿದುವರೋ ಬಿಡಿವರೂ, ಅವರ ಬಾಳಿಗೆ ಬೇಕಾಗಿ ಮಿಗುವಶ್ಟು ದುಡ್ಡಿನ ಏರ್ಪಾಡು ಮಾಡಲೇ ಬೇಕು. ಈ ಏರ್ಪಾಡು ಆಸ್ತಿ ಮಾಡುವುದರಿಂದಲೋ, ಅವರಿಗೆ ಒಳ್ಳೆಯ ಕೆಲಸ ಕೊಡುಸುವುದರಿಂದಲೋ.. ಹೀಗೆ..
೫) ಅವರಲ್ಲಿ ಹಣ, ಮದುವೆ, ಮಕ್ಕಳು ಹೀಗೆ ಸಂಸಾರದ ಆಸೆ ಹುಟ್ಟು ಹಾಕಲೇ ಬೇಕು.. ಅದಕ್ಕಾಗಿ ಹಬ್ಬ, ಊಟ, ಬಟ್ಟೆ ಮುಂತಾದವುಗಳ ಚಪಲಹತ್ತಿಸಬೇಕು....ಈ ಆಸೆ ಇಲ್ಲದೇ ಇದ್ದರೆ ನಮ್ಮ ಅಱು ನಡೆಯುವುದಿಲ್ಲ...
೬) ತಕ್ಕಮಟ್ಟಿನ ಹರೆಯದಲ್ಲಿ, ದುಡ್ಡಿನ ಸವ್ಕರ್ಯ ಚನ್ನಾಗಿಸಿ.. ಮಕ್ಕಳಿಗೆಲ್ಲ ಚನ್ನಾಗಿ ಜೋರಾಗಿ ಮದುವೆ ಮಾಡಲೇಬೇಕು.. ಹೆಣ್ಣುಮಕ್ಕಳಾದರೇ ಅವರಿಗೆ ಗಂಡಮನೆಯಲ್ಲಿ ತಕ್ಕ ಮರ್ಯಾದೆಗೋಸ್ಕರ, ಮದುವೆಯನ್ನು ಜೋರಾಗಿ ಮಾಡಲೇ ಬೇಕಾದುದರ ಜೊತೆಗೆ, ಅವರ ಮುಂದಿನ ಬಾಳಿಗೂ ಹಣವಿರಿಸಬೇಕು....
೭)ಆತ್ಮಹತ್ಯೆ, ಸಂನ್ಯಾಸ, ಆಜನ್ಮಬಹ್ಮಚರ್ಯ ನಮ್ಮ ಅಱುವಿಗೆ ವಿರುದ್ದ...
೮)ಬಾಳಲ್ಲಿ ಬದುಕುವುದೇ ಮುಕ್ಯ.. ಹಾಗು ಸಂಸಾರ ಚನ್ನಾಗಿ ಜೋರಾಗಿ ನಡೆಸುವುದರಿಂದಲೇ ಮೋಕ್ಶ ಎಂಬ ನಂಬಿಕೆಯನ್ನು ಬಿಡಲೇಬಾರದು.
೯)ಮೊಮ್ಮಕ್ಕಳು, ಮರಿಮಕ್ಕಳು ಚನ್ನಾಗಿ ಜೋರಾಗಿ ಬದುಕಲು ದುಡಿಯಬೇಕು.. ಹಾಗು ಮರಿಮಕ್ಕಳನ್ನು ನೋಡುವ ವರಗೂ ಚನ್ನಾಗಿ ಜೋರಾಗಿ ಬದುಕಲೇ ಬೇಕು.. ಅದಕ್ಕಾಗಿ ಮಕ್ಕಳಿಗೆ ಬೇಗ ಬೇಗ ಚನ್ನಾಗಿ ಜೋರಾಗಿ ಮದುವೆ ಮಾಡುವುದರ ಜೊತೆಗೆ ನಮ್ಮ ಹದುಳವನ್ನು ಮಯ್ಯನ್ನು ಗಟ್ಟಿಮುಟ್ಟಾಗಿ ಸುಕವಾಗಿರಸಿಕೊಳ್ಳಬೇಕು.
೧೦)ದೇವರಪೂಜೆ ಮಾಡದಿದ್ದರೂ, ಯಾರು ಉಪಾಸ, ವ್ರತ ಎಂದು ಹದುಳಕ್ಕೆ ಕುತ್ತು ತಂದುಕೊಳ್ಳಲೇ ಬಾರದು.....
೧೧)ಮುಂದಿನ ಪೀಳಿಗೆಯೂ ಈ ಅಱುವನ್ನು ಚನ್ನಾಗಿ ಜೋರಾಗಿ ಉಳಿಸುವ ಹಾಗೆ ಮಾಡಲೇಬೇಕು...
೧೨)ಈ ಗುರಿಗಳನ್ನು ತಲುಪುವಲ್ಲಿ ತೊಡಕಾಗುವ ಯಾವುದೇ ಸಂಗತಿಯನ್ನು ದರ್ಮವಿರುದ್ದ ಎಂದು ಬಗೆದು ಅದನ್ನು ಚನ್ನಾಗಿ ಜೋರಾಗಿ ತೊಡೆದು ಅಳಿಸಿ ಹಾಕಲೇ ಬೇಕು. ಅದರಲ್ಲಿ ಎಳ್ಳಶ್ಟು ಹಿಂಜರಿಕೆ, ಅಂಜಿಕೆ ಕೂಡದು..
ಒಟ್ನಲ್ಲಿ "ಚನ್ನಾಗಿ ಜೋರಾಗಿ" ಇರಬೇಕು.! ![]()

- mahesha ರವರ ಬ್ಲಾಗ್
- Login or register to post comments
- 511 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನನ್ನ ಕರ್ಮಠ ಧರ್ಮ
ಮಹೇಶ ಅವರೇ,
ಬಬ್ಬೂರುಕಮ್ಮೆಯವರ 'ಲವ್ಕಿಕ-ಕರ್ಮಠ' ಧರ್ಮವನ್ನ ಬಹಳ ಚೆನ್ನಾಗಿ ಪ್ರತಿಪಾದಿಸಿದ್ದೀರಿ!
ನಾನೀಗ ಬಬ್ಬೂರುಕಮ್ಮೆ ಮನೆತನವೊಂದಕ್ಕೆ ಸೊಸೆಯಾಗಿದ್ದೇನೆ. ನಮ್ಮದು ವೈದಿಕ ಮನೆತನ ಎಂದಿಟ್ಟುಕೊಳ್ಳಿ. ಹೀಗಾಗಿ ಕಮ್ಮೆಯವರ 'ಹೆಮ್ಮೆ' ನನಗೆ ಬಹಳ ದಿನ ಅರ್ಥವಾಗಿರಲಿಲ್ಲ, ಈಗ ಅರ್ಥವಾಯಿತು.
ಅಭಿನಂದನೆಗಳು
ಶಾಮಲ
ಉ: ನನ್ನ ಕರ್ಮಠ ಧರ್ಮ
ಶಾಮಲ ಅಮ್ಮ(ಇದು ನಮ್ಮ ಸಂಪ್ರದಾಯ)
ಹೆಮ್ಮೆಯೂ ಕೂಡ ಒಂದು ಅಱು/ದರ್ಮ ಲಕ್ಶಣ.. ಯೋಚಿಸಿ.. ಹಲವರು ಹೆಮ್ಮೆಗಾಗೇ ಬದುಕುವರು...
ನನ್ನಿ...!
ಉ: ನನ್ನ ಲೌಕಿಕ ಕರ್ಮಠ ಧರ್ಮ
"ಚೆನ್ನಾಗಿ ಜೋರಾಗಿ" ಬರೆದಿದ್ದೀರ, ಹಂಗೇ "ಚೆನ್ನಾಗಿ ಜೋರಾಗಿ" ಬಾಳಿರಿ..
ಉ: ನನ್ನ ಲೌಕಿಕ ಕರ್ಮಠ ಧರ್ಮ
ಅದ್ಭುತ ಬರಹ. ಚೆನ್ನಾಗಿ ನಿರೂಪಿಸಿದ್ದೀರ. ಜಾತಿ,ಧರ್ಮ,ಆಚರಣೆಗಳಬಗ್ಗೆ ಮುಕ್ತಮನಸ್ಸಿನಿಂದ ಹೇಳಿಕೊಂಡಿದ್ದೀರಿ.
ಉ: ನನ್ನ ಲೌಕಿಕ ಕರ್ಮಠ ಧರ್ಮ
ನನ್ನಿ..!!
ಮುಕ್ತ ಮನಸ್ಸೇನು ಇಲ್ಲ.. ಕರ್ಮಸಿದ್ದಾಂತ ಹಿಂಗೆ ಇದ್ಯಂತೆ.
ಉ: ನನ್ನ ಲೌಕಿಕ ಕರ್ಮಠ ಧರ್ಮ
ಓದಿ ಖುಷಿಯಾಯ್ತು!
ನನ್ನ ದೃಷ್ಟಿಯಲ್ಲಿ ನಿಮ್ಮದು ಪ್ರಾಕ್ಟಿಕಲ್ ಧರ್ಮ. ಧರ್ಮಗಳು/ ಮತಗಳು ಹೀಗಿದ್ರೇನೆ ಚೆಂದ.
ಸವಿತೃ
ಉ: ನನ್ನ ಲೌಕಿಕ ಕರ್ಮಠ ಧರ್ಮ
ಓದಿದೋರಿಗೆಲ್ಲಗೆ ನನ್ನಿ
ಉ: ನನ್ನ ಲೌಕಿಕ ಕರ್ಮಠ ಧರ್ಮ
ಹ್ಹ, ಹ್ಹ. ಚೆನ್ನಾಗಿ ಬರೆದಿದ್ದೀಯಾ. ಸರಿ, ಚೆನ್ನಾಗಿ ಜೋರಾಗಿ ಪೊಗದಸ್ತಾಗಿ ಬದುಕಪ್ಪಾ. ಒಂದು ವಿಶ್ಯ, ಪೌರೋಹಿತ್ಯವೂ ಲೌಕಿಕದ ಅಡಿಗೇ ಬರತ್ತೆ.
ಉ: ನನ್ನ ಲೌಕಿಕ ಕರ್ಮಠ ಧರ್ಮ
ಹು..ಈಗಿನ ಪವ್ರೋಹಿತ್ಯ ಲವ್ಕಿಕವೇ!
ಉ: ನನ್ನ ಲೌಕಿಕ ಕರ್ಮಠ ಧರ್ಮ
ಸಕತ್!!
ಉ: ನನ್ನ ಲೌಕಿಕ ಕರ್ಮಠ ಧರ್ಮ
ತಮ್ಮ ಕೆಲಸಗಳನ್ನು ಸಮರ್ಥಿಸಿಕೊಳ್ಳಲು, ತಮಗೆ ಅನಿಸಿದ್ದನ್ನು, ಬೇಕಾದ್ದನ್ನು ಮಾಡಿಕೊಳ್ಳಲು ತಮ್ಮ ಧರ್ಮ, ಜಾತಿ, ಪೂರ್ವಜರು ಎಲ್ಲರ ಸಪೋರ್ಟು ಬಳಸಿಕೊಂಡಿರುವುದು ಚೆನ್ನಾಗಿದೆ.
ಅದಕ್ಕೆ ಲೌಕಿಕ, ವೈದಿಕದ ಮಸಾಲೆ ಬೇರೆ !
ಇದನ್ನೆಲ್ಲ ಗಮನಿಸಿದ ನಾವ್ ನಮ್ಮ ಅಱು ಹೀಗೆಂದು ತೀರ್ಮಾನಕ್ಕೆ ಬಂದೆವು... ಕರ್ಮಟರಾದ ನಾವು ಮೋಕ್ಶಕ್ಕೆ ಇವನ್ನು ಮಾಡಲೇಬೇಕು... ಎಂದು ತಾವೇ ಹೇಳಿಕೊಂಡು ತಾವೇ ತೀರ್ಮಾನಿಸಿಕೊಂಡು ಅದನ್ನು ಇಡೀ ಕಮ್ಮೆಗಳಿಗೆ, ಕರ್ಮಟರಿಗೆ ಅನ್ವಯಿಸುವ ಕೆಲಸ ಯಾಕೋಪ್ಪಾ. ನಾಳೆ ಕರ್ಮಟರಾದ ನಾವು ಕುಡೀಬೇಕು, ಹೆಂಗಸರ ಜೊತೆ ಮಜಾ ಮಾಡಬೇಕು ಅಂತವೂ ಕೂಡ ಹೇಳಿ ಅದನ್ನೂ ಸರ್ಮರ್ಥಿಸಿಕೊಂಡರೆ ಆಶ್ಚರ್ಯವೇನಿಲ್ಲ.
ಪಾಪ, ಆ ತಾತನವರು ಬದುಕಿದ್ದರೆ........ ಸಂಪದ ಓದಿದ್ದರೆ..............
ಉ: ನನ್ನ ಲೌಕಿಕ ಕರ್ಮಠ ಧರ್ಮ
ನಮ್ ತಾತನವರು ಏನು ಅಂತ ನಂಗೆ ಗೊತ್ತು!
ನೀನ್ ಯಾವೂರ್ ದಾಸಯ್ಯ! ವೋಗಲೇ!
ಉ: ನನ್ನ ಲೌಕಿಕ ಕರ್ಮಠ ಧರ್ಮ
ಆದ್ರೆ ನೀನ್ ಏನೂಂತ ನಂಗೆ ಗೊತ್ತು ..
ಉ: ನನ್ನ ಲೌಕಿಕ ಕರ್ಮಠ ಧರ್ಮ
". ಹಾಗು ಸಂಸಾರ ಚನ್ನಾಗಿ ಜೋರಾಗಿ ನಡೆಸುವುದರಿಂದಲೇ ಮೋಕ್ಶ ಎಂಬ ನಂಬಿಕೆಯನ್ನು ಬಿಡಲೇಬಾರದು."
ನೀವು ಮತ್ತು ನಿಮ್ಮ ವಂಶದವರು ಮೋಕ್ಷ ಅಂದ್ರೆ ಏನು ಅಂದ್ಕೊಂಡಿದೀರಿ ಅನ್ನೋದು ತಿಳಿಯದೆ ಮೇಲಿನ ವಾಕ್ಯಕ್ಕೆ ಅರ್ಥವೇ ಇಲ್ಲ.
"ಏರಿದವನು ಚಿಕ್ಕವನಿರಬೇಕು"
ಉ: ನನ್ನ ಲೌಕಿಕ ಕರ್ಮಠ ಧರ್ಮ
ಮೋಕ್ಷ => ಜನ್ಮಗಳಿಂದ ಬಿಡುಗಡೆ.
ಉ: ನನ್ನ ಲೌಕಿಕ ಕರ್ಮಠ ಧರ್ಮ
ನಿಮ್ಗೇ ಬೆ೦ಗಳೂರು ತು೦ಬಾ ಕಷ್ಟ ಆಗ ಬಹುದು - "ಜೋರಾಗಿ " ಬದುಕೋಕ್ಕೆ!
ಕಾರ್ ಜೋರಾಗಿ ಓಡಿಸೋಕ್ಕೆ ಆಗೋಲ್ಲಾ ! ಜೋರಾಗ್ ಗಲಾಟೆ ಮಾಡಿದರೂ ವಾಹನದ ಸದ್ದಿನಲ್ಲಿ ನಿಮ್ಮ ಇರುವು ತಿಳಿಯೋದು ಕಷ್ಟ.
ಆಮೇಲೆ ಹಣ ಜಾಸ್ತಿ ಸ೦ಪಾದನೆ ಮಾಡೋ ರಭಸದಲ್ಲಿ ಆರೋಗ್ಯದ ಕಡೆ ಲಕ್ಷ್ಯ ಇರೋದಿಲ್ಲಾ ..
2>- ನಾವು ಸ್ಮಾರ್ತರು - ನಮ್ಗೇ ಧರ್ಮ / ಮೋಕ್ಷ ಬೇರೆ ತರಹ - ನಾವು ಮುಸ್ಲಿ೦ ಜನ ನಮ್ಗೇ ಮೋಕ್ಷ ಬೇರೆ - ಅನೋದು ಸರಿಯೇ ?
ಮೋಕ್ಷಕ್ಕೆ ಭಕ್ತಿ - ಜ್ಞಾನವೇ ಆಧಾರ ಅ೦ತ ಶ೦ಕರ ಹೇಳಿರೋದು ! ಅದು ಬಿಟ್ಟೂ ವ೦ಶ ಆಧಾರ ಅ೦ತಾ ಎಲ್ಲೂ ಹೇಳಿಲ್ಲಾ.
ಅ೦ದರೆ ಈ ವ೦ಶದವರಿಗೆ ಈ ಮಾರ್ಗ - ಅ೦ತಾ ಹೇಳೋದಾದರೆ - ಭೈರಪ್ಪನವರ್ " ವ೦ಶ ವೃಕ್ಷ " ಓದಿ - ವ೦ಶದ ಭ್ರಮೆ
ಯಾವ ಯಾವ ಆಲೋಚನೆಗಳಿಗೆ ದಾರಿ ಮಾಡ್ತಾವೇ ಅ೦ತಾ ತಿಳಿಯುತ್ತೆ.
ಉ: ನನ್ನ ಲೌಕಿಕ ಕರ್ಮಠ ಧರ್ಮ
ಬುಡುಬುಡಿಕೆ..
ನೋಡಿ ದರ್ಮ ಅನ್ನೋದು ನಂಬಿಕೆ ಅಶ್ಟೇ! ನಾವ್ ನಮ್ಮದನ್ನು ನಂಬಿದ್ದೀವಿ..
ನೀವ್ ಪ್ರಶ್ನೇ ಮಾಡಿ.. ಉತ್ರ ಕೊಡದೇ ಇರೋ ಅನುವಿದೆಯೆಮಗೆ!
ಉ: ನನ್ನ ಲೌಕಿಕ ಕರ್ಮಠ ಧರ್ಮ
ಎಲ್ಲ ಸರಿ, ಆದರೆ "ಕನ್ನಡ, ಕನ್ನಡಿಗ, ಕರ್ನಾಟಕದ" ಬಗ್ಗೆ ನಿಮ್ಮ ವಂಶಸ್ಥರು ಏನು ತಿಳ್ಕೊಂಡಿದ್ದಾರೆ ? ಇದರ ಬಗ್ಗೆ ಆರಯ್ಯ ನಡೆಯಲಿಲ್ಲವೇ ?