ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ನೋಡ್ರಣ್ಣ...
ನಾನ್ ನೇರ-ನೇರಾ ಹೇಳ್ತೀನಿ.... ನಾನ್ ನನ್ ಹರೆಯಕ್ಕೆ ತಕ್ಕ ಹಾಗೇ ಮಾತಾಡೋದು...
ನೆನ್ನೆ ನನ್ ಗೆಳೆಯ ಕಳೆದ ವಾರದ ಕೊನೆ ಕೂಡ ಒಬ್ಬರನ್ನೊಬ್ಬರು ನೋಡಕ್ಕೆ ಆಗಲಿಲ್ಲ, ಅಂತ ಸಂಜೆ ’ಮುಸ್ಸಂಜೆ ಮಾತು’ ಸಿನಿಮಾನ ಮೆಜೆಸಟಿಕ್ಕಲ್ಲಿ ನೋಡಣ ಅಂತ ತೀರ್ಮಾನ ಮಾಡಿದ್ವಿ. ನಾನ್ ಸಾಮನ್ಯ ಗಣೇಶ, ಪುನೀತ ಇವರ ಸಿನಿಮ ಬಿಟ್ಟು ಬೇರೆ ಯಾರ ಸಿನಿಮಕ್ಕೂ ಮೊದಲ ವಾರ ಹೋಗೊನಲ್ಲ. ಆದರೂ...
ನಾನ್ ನನ್ ರೂಮಿಗ + ನನ್ ಗೆಳೆಯ ಮೂರು ಮಂದಿ ಮೆಜೆಸಟಿಕ್ಕಿನ ತ್ರಿವೇಣಿಗೆ ಹೋದ್ವು. ಟಿಕೇಟು ಸಿಗದೇ ಬ್ಲಾಕಲ್ಲಿ ಕೊಂಡ್ವು. ಹೊರಗಡೆ ಇಂದ ಏನೋ ಜೋರು ಸಿನಿಮ ಅನ್ನಿಸ್ತು. ಆದರೆ.....
ಎಂತಾ ಬೋರ್ ಸಿನಿಮ ಅಂತೀರ ’ಬಡ್ಡೇತದ್ದು’! ತೂ ಅವರ ಅ**ನ್! ಮೊಳೆ ಅಂದರೇ ಮೊಳೆ. ಉದ್ದುದ್ದ ಗಬ್-ಗಬ್ ಡಯಲಾಗುಗಳು.
ಆಮೇಲೆ ಇಡೀ ಸಿನಿಮದಲ್ಲಿ ಚಂದುಳ್ಳಿ ರಮ್ಯಳನ್ನ ಬಗೆಬಗೆ ಕಡೆಯಿಂದ ತೋರಿಸೋದು ಬಿಟ್ಟು, ವಾಲೆ ಹಾಕಿಕೊಂಡ ಆ ಸುದೀಪನ್ನ ತೋರಿಸ್ತಾರೆ. ಸಿನಿಮದಲ್ಲಿ ೮೦% ಅವನ ಮೂತೀನೇ ನೋಡಬೇಕು. ಅವನೋ ಅದೇನು ನಟನೆ ಮಾಡಿದ್ದಾನೋ, ಮಾತಾಡಿದ್ದಾನೋ, ಅದೇನು ಬಟ್ಟೆ ಹಾಕೋತಾನೋ, ಅದೆಂಗೆಂಗೋ ಆಡ್ತಾನೋ. ಒಂತರ ಡಯಿರೆಕಟರ ಅವನ ಮೋಡಲಿಂಗು ಮಾಡಿದಂಗೆ ಇತ್ತು.
ಸಿನಿಮದ ನಡುವೆ ಒಂದು ಸರತಿ ಅಂತೂ ಸೀಟಲ್ಲಿ ಮೊಳೆಗಳು ಎದ್ದು ಕುಂಡೆಗೆ ಚುಚ್ತಾ ಇವೆ ಏನೋ ಎಂದು ಅನ್ನಿಸೋ ಅಶ್ಟು, ತಾಳಲಾರದೇ ಹೋಯ್ತು(ಅಸಹನೀಯ).
ಇದಕ್ಕೆ ಟಯಿಮ್ಸು ಆಪ್ ಇಂಡಿಯದೋರು ೪ ಮಿಂಚುಕ್ಕಿ ಕೊಟ್ಟವರಂತೆ.. ’ಕಳ್ ** ಮಕ್ಕಳು’.. ಅರಮನೆ ಸಿನಿಮಕ್ಕಿಂತ ಜಾಸ್ತಿ.!
ಹಾಳಾಗಿ ಹೋಗ್ಲಿ.. !! ದರಿದ್ರ!!

- mahesha ರವರ ಬ್ಲಾಗ್
- Login or register to post comments
- 481 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಮಹೇಶ್
ಅಯ್ಯೋ..!! ಟಾಯ್ಲೆಟ್ ಪೇಪರ್ ಆಫ್ ಇಂಡಿಯಾದವರನ್ನ ನಂಬಿಕೊಂಡು ಯಾವತ್ತೂ ಸಿನೆಮಾ ನೋಡೋಕೆ ಹೋಗ್ಬೇಡಿ... ನಾನು ಹಿಂದೊಮ್ಮೆ ಹೀಗೆ ಬೆಸ್ತು ಬಿದ್ದಿದ್ದೆ, ಅದೆ ದಿನಪತ್ರಿಕೆಯಲ್ಲಿ ಮೋನಾಲಿಸಾಕ್ಕೆ ೪ ಮಿಂಚುಕ್ಕಿ ನೋಡಿ ಥೇಟರಿಗೆ ಹೋಗಿ ಅರ್ಧಕ್ಕೆ ಬಿಟ್ಟೋಡಿ ಬಂದು ಕುರಿ ಆಗಿದ್ದೆ!! ನೀವು ಪರ್ವಾಗಿಲ್ಲ ಪೂರ್ತಿ ನೋಡಿದ್ರಲ್ಲಾ!!
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಮೊನಲಿಸ ನಂಗೆ ಹಿಡಿಸಿತ್ತೇನೋ ಗೊತ್ತಿಲ್ಲ.. ಅದರ ಹಾಡುಗಳು ಚನ್ನಾಗಿವೆ..
ಆದ್ರೆ ಇದರಲ್ಲಿ ಏನಿದೆ... ಲೊಳಲೊಟ್ಟೆ!
=====================================
ಮಾಯ್ಸ!
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಆ ಪತ್ರಿಕೆಯ ರೇಟಿಂಗ್ ನಂಬಿ ಯಾವತ್ತೂ ಸಿನೆಮಾ ನೋಡಲು ಹೋಗಬೇಡಿ..ನಾನು ಒಂದ್ಸಲ ಮೋಸ ಹೋಗಿದ್ದೆ
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಸುದೀಪ್ ಪಿಚ್ಚರು ನೋಡಿ ಬಹಳಾ ದಿನಾ ಆಗಿತ್ತು. ಈ ವೀಕೆಂಡು ಈ ಫಿಲಮ್ಮು ನೋಡೋಣ ಅನ್ಕೊಂಡಿದ್ದೆ, ಅಲ್ದೆ ಹೈಪ್ ಕೂಡಾ ಚೆನ್ನಾಗಿ ಮಾಡಿದ್ರು. ಶುಕ್ರವಾರನೇ ನೋಡಿ, ಅರ್ಧಕ್ಕೆ ಎದ್ದು ಬಂದ ಗೆಳೆಯರ ಮೂಡ್-ಆವುಟ್ ಮುಖ ನೋಡಿ, ಹೋಗ್ಲಿಲ್ಲ. ಸುದೀಪನ್ ಪಿಚ್ಚರು ನೋಡೋಣ ಅನ್ಕಂಡಿದ್ದೆ, ಈಗ ಆದ ಆದ್ರೆ ಬೇಜಾರಾಗ್ತಿದೆ.., ಆದ್ರೂ ಎರಡ್ಮೂರು ಹಾಡು ಚೆನ್ನಾಗಿದವೆ.
ಉ: ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
ಈ ಚಿತ್ರಕ್ಕೆ ೪ ಮಿಂಚುಕ್ಕಿ ಕೊಡೋದರ ಹಿಂದೆ ಅವರ ಕಮರ್ಷಿಯಲ್ ಇಂಟ್ರೆಸ್ಟ್ ಇದ್ದಂತಿತ್ತು. ಹೇಗಿದ್ರೂ ರೇಡಿಯೋ ಮಿರ್ಚಿ ಅವ್ರ್ದೇ ಅಲ್ವಾ? ರೇಡಿಯೋಲಿ ದಿನಾ ಕೇಳೋದು ಸಾಲದು ಅಂತ, ದುಡ್ಡು ಕೊಟ್ಟು ರೇಡಿಯೋ ಮಿರ್ಚಿ ನೊಡ್ಕೊಂಡ್ ಬಂದಿದ್ದಾಯ್ತು. ಇನ್ಮೇಲೆ ಯವ್ದಾದ್ರು ಸಿನಿಮಾದ ಹೀರೋ ಅರ್.ಜೆ ಅಂದ್ರೆ ೨ ಸಲ ಯೋಚನೆ ಮಾಡಿ ಹೋಗ್ಬೇಕು.