ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಆದದ, ವೋದದ?
ನಾನಿರುವ ಮನೆಯೊಡೆರ ಮನೇಲಿ ಅಪ್ಪಟ ಕನ್ನಡಾನೇ ಮಾತಾಡೋದು.
ಅವರ ಕೆಲವು ಬೞಕೆಗಳು
ಆದದ? = ಆಗುವುದಾ?
ವೋದದ? = ಹೋಗುವುದಾ?
ಆದದು = ಆಗುವುದು
ವೋದದು=ಹೋಗುವುದು
ಈ ಬೞಕೆಗಳ ಬಗ್ಗೆ ಯಾರಾದರೂ ಹೆಚ್ಚಿಗೆ ತಿಳಿಸಿರಿ.

- mahesha ರವರ ಬ್ಲಾಗ್
- Login or register to post comments
- 292 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಆದದ, ವೋದದ?
ನೀವು ಹೇಳಿದ ಪದಗಳಂತೆ ಇನ್ನೊಂದು ಪದ:
ಬಂದದ-ಬರುವುದಾ?
ಬಳಕೆ:
ಅಲ್ಲಿಗ್ ವೋದ್ರೆ ನಮ್ ಕೆಲ್ಸ ಆದದ? (ಅಂದ್ರೆ,ಅಲ್ಲಿಗೆ ಹೋದ್ರೆ ನಮ್ ಕೆಲ್ಸ ಅಗುತ್ತಾ ?)
ಇಲ್ಲೇ ಕುಂತ್ಕಂಡ್ ಕೇಳಿದ್ರೆ ಏನ್ ಬಂದದು?(ಅಂದ್ರೆ,ಇಲ್ಲೇ ಕುಳಿತು ಕೇಳಿದ್ರೆ ಏನ್ ಬರುತ್ತೆ?)
ಉ: ಆದದ, ವೋದದ?
ಇದು ಸರಿ..
ಆದ್ರೆ ಇದನ್ನೆ ಪ್ರಶ್ನೆ ಅಲ್ಲದೇ ಹೇಳಿಗೆ ಮಾಡಿ ನೋಡಿ..
ಅಲ್ಲಿಗ್ ವೋದ್ರೆ ನಮ್ ಕೆಲ್ಸ ಆದದು/ಆದಾದು.
ಇಲ್ಲೇ ಕುಂತ್ಕಂಡ್ ಕೇಳಿದ್ರೆ ಅದು ಬಂದದು/ಬಂದಾದು.
=====================================
ಮಾಯ್ಸ!
ಉ: ಆದದ, ವೋದದ?
ನಮ್ಮಮ್ಮ ಹಿಂಗೆ ಹೇಳುತ್ತಾರೆ
ವಾಬೇದು = ಹೋಗಬಹುದು
ವಾಗಂವ್ ನಡ= ಹೋಗೋಣ ನಡೆ
ಬರ್ಬೇದು = ಬರಬಹುದು
ಬಂದರ್ಯಾ? = ಬರುತ್ತೀರಾ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಆದದ, ವೋದದ?
ಇದು ಬೇರೆ ತೆರ ಆಯ್ತು...
ನಾನು ಹೇೞ್ತಾ ಇರೋದು.. ಈ ಬೆಂಗಳೂರು ಹಳ್ಳಿಗಡೆ ಮಂದಿ ಮಾತು...
=====================================
ಮಾಯ್ಸ!
ಉ: ಆದದ, ವೋದದ?
ಬೆಂಗಳೂರಿನಲ್ಲಿ ಈ 'ಇಕ್ಕು' ಜಾಸ್ತಿ
ತಂದಿಕ್ಕು= ತಂದ್ ಮಡಗು= ತಂದಿಡು
ಅಲ್ಲಿಕ್ಕು= ಅಲ್ಲಿಡು = ಅಲ್ ಮಡಗು
ನಾನು ತಕೊಂಡ್ ಹೋಗಿ ಇಕ್ಕಿದೆ = ನಾನು ಡಿಕ್ಕಿ ಹೊಡೆದೆ.
ನಾವು ಮಂಡ್ಯ ಕಡೆ ಮಡಗು ಜಾಸ್ತಿ ಬಳಸ್ತೀವಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಆದದ, ವೋದದ?
ಅಲ್ಲ...
http://dsal.uchicago.edu/cgi-bin/philologic/getobject.pl?c.1:1:2062.burr...
Ka. maḍagu, maḍaṅgu to lay down, place, put, take into one's service as a man, etc., procure and keep for one's use as a horse, etc., hire
http://dsal.uchicago.edu/cgi-bin/philologic/getobject.pl?c.0:1:495.burro...
Ka. irku, ikku to lay or put down, put, place, beat, serve up (as food); be put; n. act of putting, etc.; ikkuva, ikkuha laying, putting, etc.; irkisu, ikkisu to cause to put.
ನಾವ್ ಮಂಡ್ಯದೋರು ಇದನ್ನ ಸರಿಯಾಗೇ ಬೞಸ್ತೀವಿ..
ಆ ಬಿಂದಿಗೆ ಮಡಗಲ್ಲಿ = Place that pot there
ಎಲ್ಲಿ ಮಡಗಿದ್ದೀಯೋ/ಮಡಗೀಯೋ ? = where have u place it?
ಮಡಗು is a nicer way of ಇಕ್ಕು..
ಮಡಗು ಅನ್ನೋದು ನಯವಾದ ಮಾತು.. ಇಕ್ಕು ಅನ್ನೋದು ಬಿರುಸು..!
ಜೊತೆ ಮಡಗು ಅನ್ನೋದು ಮರ್ಯಾದೆ ಕೂಡ.. "ಅಯ್ಯನೋರೆ, ಅಲ್ಲಿ ಮಡಗಿ" ಎಂದೇ ಹೇಳೋದು "ಅಯ್ಯನೋರೆ, ಅಲ್ಲಿ ಇಕ್ಕಿ" ಎಂದು ಎಂದೂ ಹೇಳಲ್ಲ...
=====================================
ಮಾಯ್ಸ!