ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ಶ್ವಾನವು ಒಂದು ಉತ್ತಮವಾದ ನಿಷ್ಠ ಪ್ರಾಣಿ. ಈ ಶ್ವಾನಕ್ಕೆ ಚತುಷ್ಪಾದಗಳು ಇರುವುವು. ಶ್ವಾನಕ್ಕೆ ದ್ವಿನೇತ್ರಗಳು, ಏಕಾಲಾಂಗೂಲ, ಏಕವದನ ಇತ್ಯಾದಿ ಇರುವುವು.
ಶ್ವಾನವು ಮಾಂಸಾಹಾರಿ ಪ್ರಾಣಿ ಅಂದರೆ ಶ್ವಾನವು ಮಾಂಸಭಕ್ಷಿಸುವುದು. ಶ್ವಾನವು ಭೌ ಭೌ ಎಂದು ರವ ಮಾಡುವುದು.
ಶ್ವಾನವನ್ನು ಜನರು ಗೃಹದಲ್ಲಿ ಪೋಷಿಸುವರು. ಅದಕ್ಕೆ ದಿನವೂ ಕ್ಷೀರವನ್ನು, ಅನ್ನವನ್ನು, ಕ್ಷೀರಾನ್ನವನ್ನು, ಮಾಂಸವನ್ನು ಖಾದ್ಯವಾಗಿ ಕೊಟ್ಟು ಪಾಲಿಸುವರು.
ಶ್ವಾನಕ್ಕೆ ಕುಕ್ಕುರ, ಸಾರಮೇಯ, ಶುನಕ ಎಂದೂ ಕನ್ನಡದಲ್ಲಿ ಅನ್ಯನಾಮಗಳಿವೆ. ಸ್ತ್ರೀ-ಶ್ವಾನವನ್ನು ಶುನಿ ಎನ್ನುವರು.
ಶುನಿಯಿಂದ ಶ್ವಾನಶಿಶುಗಳು ಜನಿಸುವುವು. ಶುನಿಯು ಶ್ವಾನಶಿಶುಗಳಿಗೆ ಸ್ತನಕ್ಷೀರಪಾನವನ್ನು ಮಾಡಿಸುವುದು.
ಹೀಗೆ ಶ್ವಾನವು ಅಮೂಲ್ಯವಾದ ಅತ್ಯುತ್ತಮವಾದ ಪ್ರಾಣಿ.
ಈ ಲೇಖನವನ್ನು ಪಠಿಸಿದ್ದಕ್ಕೆ ಧನ್ಯವಾದ ಮತ್ತು ನಮಸ್ಕಾರ! ![]()
===========================================
ಶ್ವಾನವನ್ನು ಉದ್ದೇಶಿಸಿಸಿ ಮಾನವಶಿಶುಗಳಿಗಾಗಿ ಲಿಖಿಸಿದ ಪ್ರಬಂಧ ![]()

- mahesha ರವರ ಬ್ಲಾಗ್
- Login or register to post comments
- 277 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ಶ್ವಾನ ಆಗಮಿಸುತ್ತಾನೆ, ಶ್ವಾನಿ ಆಗಮಿಸುತ್ತಾಳೆ, ಕರೆಕ್ಟಾ?..
ಅಥವಾ ’ನಾಯಿ ಬರುತ್ತದೆ’ ಕರೆಕ್ಟಾ??
ಕನ್‍ಫ್ಯೂಸ್ ಆಗಮಿಸಿದೆ, ಅಲ್ಪ ಪ್ರಮಾಣದಲ್ಲಿ ವಿವರಿಸಿ ಉತ್ತರಿಸಿ ದಯಪಾಲಿಸಿ.
ಉ: ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ಶ್ವಾನ ಶುನಿಗಳು ಆಗಮಿಸುವುವು ಇದು ಯುಕ್ತವಾದದು.
ನಿಮ್ಮ ಕಷ್ಟ ಏನು ಎಂದು ನನಗೆ ಸಮ್ಯಕ್ ಅರ್ಥವಾಗಲಿಲ್ಲ!! ಸ್ವಲ್ಪ ಅಧಿಕವಾಗಿ ವಿವರಿಸಿ
ಉ: ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ತಮ್ಮ ಗಂಭೀರ ಲೇಖನ ಶ್ವಾನದ ಬಗ್ಗೆ ಸವಿವರವಾದ ಸಂಪೂರ್ಣ ಪರಿಜ್ನಾನವನ್ನು ನನಗೀಗ ಅನುಗ್ರಹಿಸಿದೆ.
ಇಂತಹ ಬಹುವಿಸ್ಮತವಾದ ಅತಿ ಅರ್ಥಗರ್ಭಿತ ವಿದ್ವತ್ಪೂರ್ಣ ಲೇಖನವನ್ನು ಪ್ರಕಾಶಿಸಿದ್ದಕ್ಕೆ ಹಾಗೂ ಶ್ವಾನದ ಇತರೆ ಬಹುರ್ವಿಧವಾದ ನಾಮಾಂಕಿತಗಳನ್ನೂ, ಅದರ ಲಾಲನೆ ಪಾಲನೆಗಾಗಿ ಅನಿವಾರ್ಯವಾದ ಔಚಿತ್ಯಪೂರ್ಣ ವಿವರಗಳನ್ನೂ, ತತ್ಸಂಭಂಧವಾದ ಅದರ ಅಮೂಲ್ಯತೆಯನ್ನು ಪ್ರಚುರಪಡಿಸಿದ್ದಕ್ಕಾಗಿ
ನಾವು ನಿಮಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ.
ಆ ಭಕ್ತವತ್ಸಲ ಶ್ವಾನೇಶ್ವರನ ಅನುಗ್ರಹ ತಮ್ಮ ಮೇಲೆ ಸರ್ವತ್ರವೂ ಇರಲೆಂದು ಪ್ರಾರ್ಥಿಸುತ್ತೇನೆ.
ಇಂತಿ
ನಮಸ್ಕಾರಗಳು..
ಉ: ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ನನ್ನ ಬಹುವಿಸ್ಮತಾತ್ಯರ್ಥಗರ್ಭಿತವಿದ್ವತ್ಪೂರ್ಣಲೇಖನಪ್ರಶಂಸೆಗೆ ಬಹು ಅತ್ಯನಂತ ಧನ್ಯವಾದಗಳು!!
ಉ: ಶ್ವಾನವನ್ನು ಉದ್ದೇಶಿಸಿ ಕನ್ನಡದಲ್ಲೊಂದು ಲೇಖನ
ನಿಮ್ಮ ಪಾಂಡಿತ್ಯಪೂರ್ಣ ಲೇಖನಗಳು ಹೀಗೇ ಮುಂದುವರೆದರೆ
ಪಾಪ , ಓದುಗರು , ನಕ್ಕೂ ನಕ್ಕೂ ಸುಸ್ತಂಗತರಾದಾರು !
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"