ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

October 10, 2008 - 8:57am — mahesha

ಇತಿಹಾಸ ಪರಿಣಿತನಿಗೆ ಭೌತಶಾಸ್ತ್ರ ಸುಲಭವೇ?
ಸಂಗೀತ ಕಲಿತವನಿಗೆ ನಾಟ್ಯ ಸುಲಭವೇ?

ಹಾಗೇ ಒಂದು ಭಾಷೆಗೂ ಇನ್ನೊಂದು ಭಾಷೆಗೂ ಅದರ ಒಳರಚನೆಯಲ್ಲಿ ಇತಿಹಾಸ ಮತ್ತು ಭೌತಶಾಸ್ತ್ರದಷ್ಟೇ ವ್ಯತ್ಯಾಸಗಳಿರುತ್ತವೆ.... ಬಹುಭಾಷಾಪಾಂಡಿತ್ಯವು ಸುಲಭ್ಯಾಸಾಧ್ಯ..

ಅದರಲ್ಲೂ ಒಂದು ಭಾಷಾಕುಟುಂಬದ ಮಾತೃಭಾಷಿಕರು ಇನ್ನೊಂದು ಭಾಷಾಕುಟುಂಬದ ಭಾಷೆಗಳನ್ನು ತಮ್ಮ ಮಾತೃಭಾಷೆಯ ಮಟ್ಟದಲ್ಲಿ ಕಲಿತು ನಿಪುಣರಾಗುವುದು ಅಸಾಧ್ಯವೇ...

ಭಾಷೆಯೆಂದರೆ ಬರೀ ಪದಗಳಲ್ಲ.. ಹೇಳು ಎಂಬ ಶಬ್ದಕ್ಕೆ ಆಂಗ್ಲೀಯವಾಗಿ say,speak, tell, utter, ಹೀಗೆ ಹಲವು ಶಬ್ದಗಳಿದ್ದರೂ ಯಾ ಯಾ ಶಬ್ದಗಳ ಯಾ ಯಾ ಸಂದರ್ಭಾನುಸಾರ ಸನ್ನಿವೇಶಾನುಗುಣ ಉಪಯೋಗಸೂಕ್ತತೆಗಳನ್ನು ಕಾಣುವುದು ಸುಲಭವಲ್ಲ.

ಏಕವ್ಯಕ್ತಿಗೆ ಕಂನಡದ ಎಲ್ಲ ಶಬ್ದಗಳಿಗೆ ಪರ್ಯಾಯ ಆಂಗ್ಲೀಯ ಶಬ್ದಗಳು ತಿಳಿದ ಮಾತ್ರಕ್ಕೆ ಆತನಿಗೆ ಆಂಗ್ಲ ಸಂಭಾಷಣೆ ಸುಲಭವಲ್ಲ.. ಏಕೆಂದರೆ ಭಾಷೆಯಲ್ಲಿ ಪದಗಳಿಗಿಂತ ವಾಕ್ಯರಚನೆ, ವಾಕ್ಯರಚನೆಗೆ ಶಬ್ದಗಳ ಅನುಸರಣೆ ಮುಖ್ಯ..

who is he? = ಯಾರು ಅವನು? ಸರಿ.. ಹಾಗಾದರೆ ’is'ನ ಪಾತ್ರವೇನು ಎಂದು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ..

ಹಾಗೆ..

’ಮಿಲ್ಕು ಕೊಡು’ ಎಂದ ತಕ್ಷಣ ಅದು ಆಂಗ್ಲವಲ್ಲ.. ಇದನ್ನು ಆಂಗ್ಲೀಯವಾಗಿಸಲು ’milk give’ ಎಂದರೆ ಅಪದ್ದವಾಗುವುದು.. 'give me the milk' ಎಂದು ಹೇಳಿದಾಗ me, the ಯಾಕೆ ಬೇಕು ಹಾಗೆ... ಪದಗಳ ಅನುಕ್ರಮವಾಗಿ give ಆದ ಮೇಲೆ me ತರುವಾಯ the ತರುವಾಯ milk ಹೇಗೆ, ಯಾಕೆ ಬಂತು ಎಂದು ತಿಳಿದುಕೊಂಡು ಇತರ ವಾಕ್ಯರಚನೆಯಲ್ಲಿ ತೊಡಗಲು ಶ್ರಮ ಮತ್ತು ಜಾಣ್ಮೆ ಬೇಕು....

ಶಂಕರಬಟ್ಟರ ’ಮಾತಿನ ಒಳಗುಟ್ಟು’ ಹೊತ್ತಗೆಯಲ್ಲಿ ಹೇಳಿರುವಂತೆ ನಮಗೆ ಮಾತೃಭಾಷಿಕ ಕನ್ನಡಿಗರಿಗೆ ಕನ್ನಡಭಾಷೆಯ ಕ್ಲಿಷ್ಟ ವ್ಯಾಕರಣಸೂತ್ರಗಳನ್ನು ಹೇಗೆ ಕಲಿತೆವೆಂದೇ ತಿಳಿಯದು.. ಆದರೂ ಕನ್ನಡದಂತಹ ಬಲು ಕ್ಲಿಷ್ಟವ್ಯಾಕರಣರಚನೆ ಹೊಂದಿರುವ ಭಾಷೆಯ ವ್ಯಾಕರಣಗಳ ತಿಳುವಳಿಕೆ ಮತ್ತು ಅದರ ಬಳಕೆ ನಮಗೆ ತಿಳಿಯದೇ ನಮ್ಮ ಮೆದುಳಲ್ಲಿ ಸಂಗ್ರಹವಾಗಿ ಕಾರ್ಯಪ್ರವೃತ್ತವಾಗಿದೆ...

ಈ ವ್ಯಾಕರಣಸೂತ್ರಗಳು ನಮ್ಮ ಮೆದುಳೊಳಗೆ ಹೇಗೆ ಹೋಯಿತು ಎಂದು ಇಂದಿಗೂ ವಿಜ್ಞಾನಿಗೆ ಹೇಳಲು ಕ್ಲಿಷ್ಟಕಷ್ಟವಾಗಿದೆಯಂತೆ... ಅದಕ್ಕೆ ಮಾತೃಭಾಷೆಯ ವ್ಯಾಕರಣನಿಯಮಗಳು ಹುಟ್ಟಿನಿಂದಲೇ ರಕ್ತಗತವಾಗಿ ಜೀನ್ಗಳಲ್ಲೇ ಬಂದಿರಬಹುದು ಎಂಬ ಊಹೆಗೆ ಪಾತ್ರವಾಗಿವೆ.

ಕನ್ನಡಿಗರು ಅದರಲ್ಲೂ ಹುಟ್ಟುನಿಂದ ಕನ್ನಡವನ್ನೇ ಆಡುನುಡಿಯಾಗಿಸಿಕೊಂಡವರಿಗೆ ಕನ್ನಡದ ಭಾಷಾಕುಟುಂಬಕ್ಕೆ ಸೇರಿದ ತಮಿಳು ಮುಂತಾದವುಗಳು ಭಾಷಾಒಳರಚನೆ ಕಲಿತರು ಅವನ್ನು ಉಲಿಯುವಲ್ಲಿ ತೊಡಕು ಇದ್ದೇ ಇರುತ್ತದೆ.. ಏಕೆಂದರೆ ಭಾಷಾಶಿಕ್ಷಣದಲ್ಲಿ ಉಲಿಕೆ/ಉಚ್ಚಾರಣೆ ಒಂದು ಮುಖ್ಯವಾದ ಅಂಶ.. ತಮಿೞು ಎಂದು ನಮಗೆ ಉಚ್ಚರಿಸಲೇ ಆಗದೇ ಇರಬಹುದು..

ಇನ್ನು ನಮ್ಮ ಕನ್ನಡದ ಭಾಷಾಕುಟುಂಬವಾದ ದ್ರಾವಿಡಕುಟುಂಬಕ್ಕೆ ಸೇರದ ಅನ್ಯಭಾಷಾಕುಟಂಬದ ಭಾಷೆಗಳ ಉಲಿಕೆ ಮತ್ತು ವಾಕ್ಯರಚನೆ ಇನ್ನೂ ಕ್ಲಿಷ್ಟ..

ಆಂಗ್ಲದ ಎರಡು ವಗಳನ್ನು, ಸಂಸ್ಕೃತ ಋ,ಷಗಳನ್ನು, ಅರಬ್ಬಿರ ಮೂರು ಹಗಳನ್ನು, ಮಳಯಾಳದ ಙಕಾರದಿಂದ ಮೊದಲಾಗುವ ಪದಗಳನ್ನು, ಉಲಿಯುವುದು ಅಸಾಧ್ಯದಷ್ಟ ಅಸುಲಭ. ಇನ್ನು ಅವುಗಳ ವಾಕ್ಯರಚನೆಯಂತೂ ಬಲು ಕಷ್ಟ.....

ಸಃ ಗಚ್ಛತಿ ಎಂಬ ಎರಡು ಪದದ ಸಂಸ್ಕೃತವಾಕ್ಯಕ್ಕೆ ಕನ್ನಡದಲ್ಲಿ ಸಮನಾಗಿ ’ಅವನು ಹೋಗುವನು’, ’ಅವಳು ಹೋಗುವಳು’, ’ಅದು ಹೋಗುವುದು’ ಎಂಬ ಆರುಪದಗಳ ಕೂಡಣೆಯಿಂದ ಮೂರು ವಾಕ್ಯಗಳನ್ನು ಹೇಳಬಹುದು.. ಈ ಮೂರಲ್ಲಿ ಯಾವ ವಾಕ್ಯವು ಸರಿಯಾದುದು ಎಂದು ನಿರ್ಧರಿಸಿಕೊಳ್ಳುಲು ’ಸಃ ಗಚ್ಛತಿ’ಯ ಹಿಂದಿನ ವಾಕ್ಯ, ಸಂದರ್ಭವಸ್ತುಗಳ ಸರಿಯಾದ ಗ್ರಹಣ ಅವಶ್ಯ.

ಬೇರೆ ಭಾಷೆಯನ್ನು ಕಲಿಯುವುದರಲ್ಲಿ ನಮಗಿರುವ ಇಷ್ಟೊಂದು ತೊಡಕುಗಳನ್ನು ಗಮನಿಸಿ, ಬೇರೆ ಭಾಷೆಯನ್ನು ಕಲಿಯಲು ಸೂಚಿಸುವುದಕ್ಕಿಂತ ನಮ್ಮ ಭಾಷೆಯಲ್ಲಿ ಸರ್ವಜ್ಞಾನದ ಲಭ್ಯತೆಗೆ ಯೋಜಿಸುವುದು ಸುಲಭ ಮತ್ತು ಸೂಕ್ತ ಪರಿಹಾರ...

ಇದನ್ನೇ ನಮ್ಮ ನೆಲದ ಹಲಪ್ರಾಜ್ಞರು ಮಾತೃಭಾಷಾಶಿಕ್ಷಣಕ್ಕೆ ಒತ್ತು ಎಂದು ಹೇಳಿಕೊಂಡು ಬಂದಿರುವುದು.

ನಮ್ಮ ಭಾಷೆಯಲ್ಲೇ ಜ್ಞಾನೋತ್ಪಾದನೆಗೆ ನಮ್ಮ ನೆಲದ ಬಹುಭಾಷಾಪಂಡಿತರು ಶ್ರಮಿಸಿ ಸಾಮಾನ್ಯ ಕನ್ನಡಿಗರಿಗೆ ಸುಲಭಗ್ರಾಹ್ಯವಾದ ಪುಸ್ತಕಗಳನ್ನು, ಆ ಪುಸ್ತಕಗಳಲ್ಲಿ ಸುಲಭವಾದ ಪದವಾಕ್ಯಬಳಕೆಗಳನ್ನು ಮಾಡಿಕೊಡಬೇಕು

  • ನುಡಿ ಭಾಷೆ
~.~
  • mahesha ರವರ ಬ್ಲಾಗ್
  • Login or register to post comments
  • 323 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 10, 2008 - 12:15pm — Srimatha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

Srimatha's picture

’ಸಃ ಗಚ್ಛತಿ’ ಅನ್ನೋದಕ್ಕೆ ’ಅವನು ಹೋಗುವನು’ ಒಂದೇ ಸರಿಯಾದ ಅನುವಾದ ಅಲ್ವಾ?!
ಅವಳು=ಸಾ, ಅದು=ತತ್
ಬರೀ ’ಗಚ್ಛತಿ’ ಅಂದಿದ್ರೆ ಆಗ ಈ ಗೊಂದಲ ಇರ್ತಿತ್ತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:38pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಹೌದೇನ್ರೀ?

ಈ ಸಾಲನ್ನು ಕನ್ನಡಕ್ಕೆ ತನ್ನಿ...

ಮಮ ರಸನಾ|ಸಾ ರುಚಿಗ್ರಾಹ್ಯಾ|

ಸಃ ಗಚ್ಛತಿ = ಅವರು ಹೋಗ್ತಾರೆ ಕೂಡ ಆಗತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:52pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ತೇ ಗಚ್ಚಂತಿ ಅಂತ ನೆನಪು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:56pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಇಲ್ಲಿ

ತೇ ಗಚ್ಛಂತಿ ಅಂದರೆ ಅವು ಹೋಗ್ತವೆ ಅಂತಲೋ, ಅವರು ಹೋಗ್ತಾರೆ ಅಂತಲೋ?

ಗಜಾಃ ತೇ ಗಚ್ಛಂತಿ ವನಮ್| ಇದು "ಆನೆಗಳವರು ಕಾಡಿಗೆ ಹೋಗ್ತಾರೆ" ಎಂದೋ "ಆನೆಗಳವು ಕಾಡಿಗೆ ಹೋಗ್ತವೆ" ಎಂದೋ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:01pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಸಂಸ್ಕೃತದಲ್ಲಿ ಪ್ರತಿ ಶಬ್ದಕ್ಕೆ ಲಿಂಗ ವಿಭಿನ್ನತೆ ಇದೆ.

ಆಕಾರಂತ ಈಕಾರಂತ ಶಬ್ದಗಳು ಹೆಚ್ಚಾಗಿ ಸ್ತ್ರೀಲಿಂಗ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:04pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಕನ್ನಡದಲ್ಲಿ ಪ್ರತಿ ಶಬ್ದಕ್ಕೆ ಲಿಂಗ ವಿಭಿನ್ನತೆ ಇಲ್ಲವೇ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:06pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಆನೆ ಯಾವ ಲಿಂಗ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:07pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಮಾನುಶವಲ್ಲದ ಲಿಂಗ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:13pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:16pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಹುಂ ರಿ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:03pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಗಜಃ ಕನ್ನಡದಲ್ಲಿ ನಪುಂಸಕ ಲಿಂಗ ಆದರೆ ಸಂಸ್ಕೃತದಲ್ಲಿ ಪುಲ್ಲಿಂಗ ಮತ್ತು ಸ್ತ್ರೀಲಿನ್ಗವೂ ಆಗಲು ಸಾಧ್ಯವಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:59pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

>> ಸಃ ಗಚ್ಛತಿ ಎಂಬ ಎರಡು ಪದದ ಸಂಸ್ಕೃತವಾಕ್ಯಕ್ಕೆ ಕನ್ನಡದಲ್ಲಿ ಸಮನಾಗಿ ’ಅವನು ಹೋಗುವನು’, ’ಅವಳು ಹೋಗುವಳು’, ’ಅದು ಹೋಗುವುದು’ ಎಂಬ ಆರುಪದಗಳ ಕೂಡಣೆಯಿಂದ ಮೂರು ವಾಕ್ಯಗಳನ್ನು ಹೇಳಬಹುದು.. ಈ ಮೂರಲ್ಲಿ ಯಾವ ವಾಕ್ಯವು ಸರಿಯಾದುದು ಎಂದು ನಿರ್ಧರಿಸಿಕೊಳ್ಳುಲು ’ಸಃ ಗಚ್ಛತಿ’ಯ ಹಿಂದಿನ ವಾಕ್ಯ, ಸಂದರ್ಭವಸ್ತುಗಳ ಸರಿಯಾದ ಗ್ರಹಣ ಅವಶ್ಯ.

ನಿಮ್ಮ ವಾಕ್ಯದ ಭಾವವನ್ನು ಒಪ್ಪುತ್ತೇನೆ. ಆದರೆ ಬಹುಶ ಸಃ ಗಚ್ಚತಿ ಅದಕ್ಕೆ ತಕ್ಕ ಉದಾಹರಣೆಯಲ್ಲ.

ಸಂಸ್ಕೃತದಲ್ಲಿ ದ್ವಿ ವಚನ ಬೇರೆ ಇದೆಯಲ್ಲ.
ಅವರಿಬ್ಬರೂ ಹೋಗುತ್ತಾರೆ = ತೌ ಗಚ್ಚತಃ

"ರಸನಾ" ಎಂಬ ಶಬ್ದವೇ ಆಕಾರಂತ ಸ್ತ್ರೀಲಿಂಗ ವಾಗಿರುವ ಕಾರಣ ಅದನ್ನು ಕನ್ನಡಕ್ಕೆ ತರ್ಜುಮಿಸುವಾಗ
ನನ್ನ ನಾಲಗೆ, ಅದೊಂದು ಬಡ್ಡು. (ತಮಾಷೆ) ಕನ್ನಡದಲ್ಲಿ ಶಬ್ದಗಳಿಗೆ ಲಿಂಗ ನಿರ್ಧಾರ ಇಲ್ಲ ಅಲ್ಲವೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:06pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

"ಅವರಿಬ್ಬರೂ ಹೋಗುತ್ತಾರೆ"

ತೇ ಗಚ್ಛತಃ ಕೂಡ ಆಗಬೋದಲ್ಲ? "ಮಹಿಳಾಸ್ತೇ ಗಚ್ಛತಃ"| ಹೆಂಗಸರಿಬ್ಬರು ಹೋಗುತ್ತಾರೆ.

ಬರೀ ’ತೌ ಗಚ್ಛತಃ’ ಹೇಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:10pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಹ ಹ
ಸ್ತ್ರೀಲಿನ್ಗಕ್ಕೆ ಬರುವಾಗ
ಸಾ ತೇ ತಾಃ ಇರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:13pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಅದೇ...

ನೋಡಿದ್ರ.. ಎಶ್ಟು ಗೊಂದಲ..!! ಇದನ್ನೇ ಹೇಳಿದ್ದು.. ಬೇರೊಂದು ನುಡಿ ಕಲಿಯೋದು ಸುಲಬವಲ್ಲ..!

ಅವರಿಬ್ಬರು ಇಲ್ಲಿ ಇಬ್ರೂ ಹೆಂಗಸರಲ್ಲ ಅಂತ ನೀವು ಹೇಳಿರಲಿಲ್ಲ..!! Smiling

ಇನ್ನೊಂದು ಗೊತ್ತ?

ಸತ್ಯಮೇವ ಜಯತೆ = "ಸತ್ಯವೇ ಗೆಲ್ಲುವುದು" ಮತ್ತು "ಸತ್ಯವನ್ನೇ ಗೆಲ್ಲುವುದು" ಈ ಎರಡು ತಿಳಿವನ್ನೂ ಕೊಡತ್ತೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:15pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ನಾನು ಮೇಲೆ ಹೇಳಿದ್ದೇನೆ.
ನಿಮ್ಮ ವಾಕ್ಯದ ಭಾವವನ್ನು ನಾನು ಒಪ್ಪುತ್ತೇನೆ ಅಂತ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:16pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ತಿಳಿವು ಕೊಡೋದು ಮತ್ತು ಶಬ್ದಶಃ ಅನುವಾದಿಸೋದು ಎರಡೂ ಬೇರೆ ಬೇರೆ ಅಲ್ವ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:17pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಅದಲ್ಲ .. ವಿಶಯ...

ಒಟ್ನಲ್ಲಿ ಗೊಂದಲ ಗೊತ್ತಾಗ್ಲಿ ಅಂತಲೇ Smiling !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:20pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ನಾನು ಬರೆದ ಕೆಳಗಿನ ತಂತನ್ನು ಪರಾಂಬರಿಸುವವರಾಗಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:21pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಪರಾಂ..ಬರಿಸಾಯ್ತು.! Smiling

ತಂತನ್ನು ಅಂದರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:25pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಚಿಂತನೆಯ ತಂತು: "ಥಾಟು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:37pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ತುಂತು => ತಂತುವನ್ನು.. ತಂತನ್ನು ಅಲ್ಲ.. !

ಬಿಂದುವನ್ನು , ಬಿಂದನ್ನು ಅಲ್ಲ!

FYI ಅಶ್ಟೇ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 9:17pm — hamsanandi

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

hamsanandi's picture

Smiling :) Smiling

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:31pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಅವರಿಬ್ಬರೂ ಹೋಗುತ್ತಾರೆ ಅನ್ನೋದನ್ನು ಸಂಸ್ಕೃತಕ್ಕೆ ಅನುವಾದಿಸಿದಾಗ ಹಿಂದೆ ಮುಂದೆ ನೋಡ್ಬೇಕು.
ಆದರೆ ತೇ ಗಚ್ಚತಃ ಅನ್ನೋದು ಕನ್ನಡಿಸಿದಾಗ ನಮಗೆ ಅವರಿಬ್ಬರೂ ಸ್ತ್ರೀಲಿನ್ಗಿಗಳು ಅನ್ನೋ ಸ್ಪಷ್ಟ ಕಲ್ಪನೆ ಇರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:32pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಕ್ಷಮಿಸಿ "ಅನುವಾದಿಸುವಾಗ" ಅಂತ ಓದಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:39pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

"ಆದರೆ ತೇ ಗಚ್ಚತಃ ಅನ್ನೋದು ಕನ್ನಡಿಸಿದಾಗ ನಮಗೆ ಅವರಿಬ್ಬರೂ ಸ್ತ್ರೀಲಿನ್ಗಿಗಳು ಅನ್ನೋ ಸ್ಪಷ್ಟ ಕಲ್ಪನೆ ಇರುತ್ತೆ."

ಇರಲ್ಲ...

ತೇ ಅನ್ನೋದು ರಸನಾ(ನಾಲಗೆ) ಎಂಬ ಸ್ತ್ರೀಲಿಂಗಯ ದ್ವಿವಚನ ವಾದಾಗ.. ನಾಲಗೆಗಳ ಅವು ಎಂದು ಕನ್ನಡದಲ್ಲಿ ’ಮಾನುಶವಲ್ಲದ’ ಜೆಂಡರ್‍ ಆಗುವುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:42pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಸರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 9:02pm — Srimatha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

Srimatha's picture

ನೀವು ಕೊಟ್ಟಿದ್ದ ಉದಾಹರಣೆ ತಪ್ಪು ಅಂತ ಹೇಳಿದ್ದಷ್ಟೆ. (ಮಿಶ್ರಿಕೋಟಿಯವರು ಆ ಮೂರೂ ವಾಕ್ಯಗಳು ಹೇಗೆ ಬೇರೆ ಅಂತ ವಿವರಿಸಿದ್ದಾರೆ, ನಾ ಮತ್ತೆ ಹೇಳೋ ಅವಶ್ಯಕತೆ ಇಲ್ಲ ಅನ್ಸುತ್ತೆ) ನಿಮ್ಮ ವಾದದ ಬಗ್ಗೆ ನಾನೇನೂ ಹೇಳಲಿಲ್ಲ. ಆದ್ರಿಂದ ನೀವು ಕೊಟ್ಟಿರೋ translation exercise ನಾ ಮಾಡಬೇಕಿಲ್ಲ ಅಂದುಕೊಳ್ತೀನಿ;)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:05pm — shreekant.mishrikoti

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

shreekant.mishrikoti's picture

Quote:

ಅದರಲ್ಲೂ ಒಂದು ಭಾಷಾಕುಟುಂಬದ ಮಾತೃಭಾಷಿಕರು ಇನ್ನೊಂದು ಭಾಷಾಕುಟುಂಬದ ಭಾಷೆಗಳನ್ನು ತಮ್ಮ ಮಾತೃಭಾಷೆಯ ಮಟ್ಟದಲ್ಲಿ ಕಲಿತು ನಿಪುಣರಾಗುವುದು ಅಸಾಧ್ಯವೇ...

ಕಠಿಣ ಇರಬಹುದು ; ಅಸಾಧ್ಯವೇನಲ್ಲ ; ಪ್ರಯತ್ನ ಮಾಡಬಹುದಲ್ಲ ? ಬೇರೆ ಭಾಶೆಗೂ ನಮ್ಮ ಭಾಶೆಗೂ ಹೋಲಿಸಿ ಸಾಮ್ಯ , ವ್ಯತ್ಯಾಸ ತಿಳೀತಾ ಹೋಗಬಹುದು .

Quote:

ಬೇರೆ ಭಾಷೆಯನ್ನು ಕಲಿಯುವುದರಲ್ಲಿ ನಮಗಿರುವ ಇಷ್ಟೊಂದು ತೊಡಕುಗಳನ್ನು ಗಮನಿಸಿ, ಬೇರೆ ಭಾಷೆಯನ್ನು ಕಲಿಯಲು ಸೂಚಿಸುವುದಕ್ಕಿಂತ ನಮ್ಮ ಭಾಷೆಯಲ್ಲಿ ಸರ್ವಜ್ಞಾನದ ಲಭ್ಯತೆಗೆ ಯೋಜಿಸುವುದು ಸುಲಭ ಮತ್ತು ಸೂಕ್ತ ಪರಿಹಾರ...

ಎಲ್ರೂ ಬೇರೆ ಎಲ್ಲಾ ಭಾಶೆ ಕಲೀಬೇಕಿಲ್ಲ ; ಆದ್ರೆ ಸರ್ವಜ್ಞಾನಾನ ನಂ ಭಾಶೆಯಲ್ಲಿ ಒದಗಿಸಲು ಅಲ್ಲಿ ಏನಿದೆ ಅಂತ ತಿಳ್ಕೊಂಡು ಅದನ್ನ ಇಲ್ಲಿ ತರೋಕಾದರೂ ಕೆಲವರಾದರೂ ಕಲೀಲೇಬೇಕಲ್ಲ ?
ರುಚಿ , ಆಸಕ್ತಿ , ಹುಮ್ಮಸ್ಸು ಇದ್ದೋರು ಕಲಿಯಬಹುದು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:29pm — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ಹುಂ ರೀ...

ಮೌಟ್ ಎವರೆಸ್ಟನ್ನ ಏರೋದು ಅಸಾಧ್ಯವಲ್ಲ ಆದರೆ ಎಲ್ಲರಿಂದಲೂ ಸಾಧ್ಯವಲ್ಲ..

ಹಿಂಗೆ ಹಲನುಡಿಗಳನ್ನ ಕಲೀಬೇಕಾರೆ ಎಲ್ಲರೂ ಬಾಶಾಪಂಡಿತರಾಗಬೇಕಶ್ಟೆ...

ಕೆಲವರು ಕಲೀಬೇಕು ಹಲವರಲ್ಲ.. ಕೆಲವರಿಗೆ ಆಗತ್ತೆ ಹಲವರಿಗೆ ಆಗೊಲ್ಲ...

ಅದೇ "ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ." ಬರೀ ಕೆಲವರಿಗೆ ಮಾತ್ರ ಆಗೋದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 1:23pm — gurubaliga

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

gurubaliga's picture

ಒಂದು ಪ್ರದೇಶದಲ್ಲಿ ಯಾವ ಭಾಷೆಗಳು ಜೀವಂತವಾಗಿ ಆಡಲ್ಪಡುತ್ತವೊ ಆಯಾ ಭಾಷೆಗಳ ಕಲಿಯುವಿಕೆ ಆ ಪ್ರದೇಶದವರಿಗೆ ಸುಲಭವಾಗುತ್ತದೆ. ಉದಾಹರಣೆಗೆ ಮಂಗಳೂರಿನಲ್ಲಿ ಕನ್ನಡ, ತುಳು, ಕೊಂಕಣಿ, ಬ್ಯಾರಿ, ಇಂಗ್ಲಿಶ್ ಮತ್ತು ಸ್ವಲ್ಪ ಮಟ್ಟಿಗೆ ಹಿಂದಿ ಇವೆಲ್ಲ ಭಾಷೆಗಳು ಚಾಲ್ತಿಯಲ್ಲಿರುವುದರಿಂದ ಅನೇಕರು ಈ ಭಾಷೆಗಳಲ್ಲಿ ಮಾತನಾಡಲು ಬಲ್ಲರು.
ನನ್ನ ಕೆಲವು ಗುಜರಾತಿ ವ್ಯಾಪಾರೀ ಮಿತ್ರರು ಕೂಡ ಅವರ ಮಾತೃ ಭಾಷೆಯಾದ ಗುಜರಾತಿಯಲ್ಲದೆ ಮೇಲೆ ಹೇಳಿದ ಎಲ್ಲ ಭಾಷೆಗಳಲ್ಲಿ ಮಾತನಾಡಬಲ್ಲರು.

ಬಹುಶ ಭಾಷೆಯ ಕಲಿಕೆಗೆ ಅದು ಹೆಚ್ಚು ಹೆಚ್ಚು ಕಿವಿಗೆ ಬೀಳುತ್ತಿರುವುದು ಮುಖ್ಯವಾಗಿರಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 2:00pm — shreekant.mishrikoti

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

shreekant.mishrikoti's picture

Quote:

ಸಃ ಗಚ್ಛತಿ ಎಂಬ ಎರಡು ಪದದ ಸಂಸ್ಕೃತವಾಕ್ಯಕ್ಕೆ ಕನ್ನಡದಲ್ಲಿ ಸಮನಾಗಿ ’ಅವನು ಹೋಗುವನು’, ’ಅವಳು ಹೋಗುವಳು’, ’ಅದು ಹೋಗುವುದು’ ಎಂಬ ಆರುಪದಗಳ ಕೂಡಣೆಯಿಂದ ಮೂರು ವಾಕ್ಯಗಳನ್ನು ಹೇಳಬಹುದು.. ಈ ಮೂರಲ್ಲಿ ಯಾವ ವಾಕ್ಯವು ಸರಿಯಾದುದು ಎಂದು ನಿರ್ಧರಿಸಿಕೊಳ್ಳುಲು ’ಸಃ ಗಚ್ಛತಿ’ಯ ಹಿಂದಿನ ವಾಕ್ಯ, ಸಂದರ್ಭವಸ್ತುಗಳ ಸರಿಯಾದ ಗ್ರಹಣ ಅವಶ್ಯ.

ಇದು ತಪ್ಪು .

ಸಃ ಗಚ್ಛತಿ - ಅವನು ಹೋಗುವನು
ಸಾ ಗಚ್ಛತಿ - ಅವಳು ಹೋಗುವಳು .
ತೇ ಗಚ್ಛಂತಿ - ಅವರು ಹೋಗುತ್ತಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 10, 2008 - 9:25pm — hamsanandi

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

hamsanandi's picture

ಶ್ರೀಕಾಂತರೆ,

ಸಾಮಾನ್ಯ ಬಳಕೆಯಲ್ಲಿ ನೀವು ಹೇಳಿದ ಅರ್ಥ ಮಾಡಿಕೊಳ್ಳಬಹುದಾದರೂ, ಮಹೇಶರ ಮಾತಿನಲ್ಲಿ ಹುರುಳಿದ್ದೇ ಇದೆ. ಅವರು ಕೊಟ್ಟ ನಾಲಗೆಯ ಉದಾಹರಣೆಯನ್ನೇ ನೋಡಿ.

ಏಷಾ ಮಮ ರಸನಾ.

ಇದು ನನ್ನ ನಾಲಿಗೆ - ಆದರೆ ಏಷಾ ಅನ್ನುವ ಪದದ ಸಾಮಾನ್ಯ ಅರ್ಥ "ಇವಳು".

ಏಷಾ ಮಮ ರಸನಾ, ಏಷಾಯಾ: ವಾಣೀ ಮಧುರಂ ಎಂದು ಸಂಸ್ಕೃದದಲ್ಲಿ ಹೇಳಬಹುದು.

ಇವಳು ನನ್ನ ನಾಲಿಗೆ. ಇವಳ ನುಡಿ ಸವಿ ಎಂದು ಪದಶಃ ಅರ್ಥವಿರಬಹುದು.
ಆದರೆ ಕನ್ನಡದಲ್ಲಿ ಇದನ್ನ "ಇದು ನನ್ನ ನಾಲಗೆ. ಇದರ ನುಡಿ ಸವಿ (ಅಥವಾ ಇದು ಸವಿಯಾಗಿ ನುಡಿಯುತ್ತೆ)" ಎಂದೇ ಹೇಳಬೇಕು ಅಲ್ಲವೇ? ಅದನ್ನೇ ಮಹೇಶರು ಹೇಳುತ್ತಿರುವುದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2008 - 8:27am — mahesha

ಉ: ಬೇರೊಂದು ನುಡಿಯನ್ನು ಕಲಿಯುವುದು ಸುಲಭದ ಮಾತಲ್ಲ.

mahesha's picture

ನಂನಿ....

ಇನ್ನೊಂದು...

ಮಿತ್ರಂ ಇದು ನಪುಂಸಕ.......

ಮಿತ್ರಂ ಮಮ ತತ್ ರಮೇಶಃ |ತದ್ ಅಜಾನಮ್ ಮಾಂ ಖಲು ಸಮ್ಯಕ್ |

ಇದನ್ನು

ತಪ್ಪು
ಗೆಳಯ ನನ್ನ ಅದು ರಮೇಶ | ಅದು ಅರಿತಿದೆ ನಂನ ’ಖಲು’ ಚನ್ನಾಗಿ |

ಸರಿ

ಅವನು ನನ್ನ ಗೆಳೆಯ ರಮೇಶ | ಅವನು ನನ್ನನ್ನು ಚನ್ನಾಗಿ ಅರಿತಿದ್ದಾನೆ|

ಇಲ್ಲಿ ನೋಡಿ... ಪದಗಳ ಜೋಡಣೆ ಎಶ್ಟು ಕಂನಡಕ್ಕೆ ಅಸಹಜ. ಹಾಗು ’ಖಲು’ ಬಳಕೆಯ ಹುರುಳಂನು ಕಂನಡದಲ್ಲಿ ಹೇಳುವುದು ಸುಲುಬವಾಗಲಿಲ್ಲ.

ಹೀಗೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಒಂದು ಕಲಿತವನಿಗೆ ಇನ್ನೊಂದು ಸುಲಭ
  • ಮಾತಿನ ಒಳಗುಟ್ಟು - ಶಂಕರಬಟ್ಟರ ಹೊಸ ಹೊತ್ತಗೆ ಇಣಕುನೋಟ
  • ಸಂಸ್ಕೃತ ಕಲಿತರೆ ಕನ್ನಡಕ್ಕೇ ಒಳ್ಳೆಯದು
  • ಪ್ರತಿಯೊಂದು ಸದ್ದಿಗೂ ಒಂದು ಲಿಪಿಯಕ್ಕರ ಇರಬೇಕಿಲ್ಲ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 358 ಅತಿಥಿಗಳು ಆನ್ಲೈನ್ ಇರುವರು.


ಪ್ರೀತಿಯು ಮನುಷ್ಯನನ್ನು ಹುಚ್ಚನನ್ನಾಗಿಸುತ್ತದೆ.

— ಸಿಗ್ಮಂಡ್ ಫ್ರಾಯ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator