ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › mahesha ರವರ ಬ್ಲಾಗ್

ಕನ್ನಡದಲ್ಲಿ ದೂರದುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

June 8, 2007 - 4:05pm — mahesha

ಕನ್ನಡದಲ್ಲಿ ದೂರದುಲಿ(telephone) ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಈಗ ಹಚ್ ಕೂಡ ಕನ್ನಡದಲ್ಲಿ ರಸೀದಿ ಕೊಡಕ್ಕೆ ತೊಡಗಿದೆ. ೧೧೧ಗೆ ಮಾತಾಡಿ, ಹೇಳಿ. ಕನ್ನಡದಲ್ಲಿ ರಸೀದಿ ಬರುವುದು.
ಏರ್‍ಟೆಲ್ ಮುಂಚಿನಿಂದಲೂ ಕನ್ನಡದಲ್ಲಿ ಬಿಲ್ ಕೊಡುತ್ತಿದೆ.

ಹಾಗೆ ಇನ್ಸುರೆಸ್ಸು ಅದೂ ಇದೂ ಅಂತ ಕರೆಬಂದರೆ, ಮೊದಲು ಕನ್ನಡದಲ್ಲೇ ಅವರನ್ನು ಮಾತಾಡಿಸಿರಿ.

===

ಸುನಿಲ ಮತ್ತು ಸಂಗನರು 'ದೂರದುಲಿ' ಒರೆಯನ್ನು ತಿದ್ದಿದಕ್ಕೆ ನನ್ನಿ!

~.~
  • mahesha ರವರ ಬ್ಲಾಗ್
  • Login or register to post comments
  • 804 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 8, 2007 - 5:35pm — ASHOKKUMAR

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ASHOKKUMAR's picture

ರಿಲಾಯನ್ಸ್‍ನವರು ನಾವು ಕನ್ನದ ಭಾಷೆ ಆಯ್ದರೆ ಕನ್ನದದಲ್ಲೇ ಮುದ್ರಿತ ಕರೆ ಕೇಳಿಸ್ತಾರೆ.. ಹೆಲ್ಪ್ ದೆಸ್ಕ್‍ನಲ್ಲಿ ಕನ್ನದದಲ್ಲೇ ಮಾತಾಡ್ತಾರೆ
icicibank ಕೂಡಾ ATMನಲ್ಲಿ ಕನ್ನಡ ಭಾಷೆ ಆಯುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಅದನ್ನು ನಾವು ಉಪಯೋಗಿಸೋಣ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2007 - 10:16pm — ವೈಭವ

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ವೈಭವ's picture

icici ATM ನಲ್ಲಿ ಯಾವಾಗಲೂ ನಾನು ಕನ್ನಡವನ್ನ ಬಳಸೋದು

ಅಂದ ಹಾಗೆ ATM ಗೆ ಕನ್ನಡದಲ್ಲಿ ಏನನ್ನಬಹುದು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 8, 2007 - 10:37pm — ASHOKKUMAR

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ASHOKKUMAR's picture

ಹಣ ಕಕ್ಕುವ/ಕೊಡುವ ಯಂತ್ರ
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 9, 2007 - 10:42am — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

"ಎಲ್ಲ ಹೊತ್ತು ದುಡ್ಟು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:02am — ಶ್ರೀನಿವಾಸ ವೀ. ಬ೦ಗೋಡಿ

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಶ್ರೀನಿವಾಸ ವೀ. ಬ೦ಗೋಡಿ's picture

ATM ಅ೦ದ್ರೆ "Automated teller machine" ಹೊರತು "All Time Money" ಅಲ್ಲ. Shocked
ಬಹುಶಃ "ಸ್ವಯ೦ಚಾಲಿತ ದುಡ್ಡು ಎಣಿಕೆಗಾರ" ಅಥವಾ ""ಸ್ವಯ೦ಚಾಲಿತ ದುಡ್ಡು ಎಣಿಕೆಗಾರ ಯ೦ತ್ರ" ಅ೦ತ ಹೇಳಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:53am — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ATM ಅಂದ್ರೆ ನಮಗೆ "All time money" Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 7, 2007 - 1:24pm — karthik

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

karthik's picture

ಅದು ಅಕೌಂಟಲ್ಲಿ ದುಡ್ದಿದ್ರೆ ಮಾತ್ರ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 10, 2007 - 4:59pm — ಪ್ರವೀಣ್

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಪ್ರವೀಣ್'s picture

ಗ್ರಾಹಕ ಸೇವೆಯಲ್ಲಿ ಕನ್ನಡ ಬೇಕು ಎನ್ನುವುದು ನಮ್ಮ ಹಕ್ಕು, ಈ ನಿಟ್ಟಿನಲ್ಲಿ ಹಿಂದೆ ಒಮ್ಮೆ ನನ್ನ ಅನುಭವವನ್ನು ಬ್ಲಾಗಿಸಿದ್ದೆ.
http://chum-banavaasi.blogspot.com/2007/04/blog-post.html

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:35am — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

ಹಾಗೆ ಇನ್ಸುರೆಸ್ಸು ಅದೂ ಇದೂ ಅಂತ ಕರೆಬಂದರೆ, ಮೊದಲು ಕನ್ನಡದಲ್ಲೇ ಅವರನ್ನು ಮಾತಾಡಿಸಿರಿ.

೧. ನಾನು ಮೊಟ್ಟಮೊದಲ ಬಾರಿಗೆ ರಿಲಯನ್ಸ್ ಮೊಬೈಲ್ ಕೊಂಡಾಗ, ಮೊದಲ ಕರೆ ಮಾಡಿದಾತ ಇಂಗ್ಲೀಷಿನಲ್ಲಿ ಮಾತಾಡಿದ. ನಾನು ಅವನಿಗೆ ಕನ್ನಡದಲ್ಲಿಯೇ ಉತ್ತರ ಕೊಡುತ್ತಾ ಸಾಗಿದ್ದಾಗ, ಅವನು ಕಡೆಯಲ್ಲಿ, ಧನ್ಯವಾದಗಳು ಸಾರ್, ಮುಂದಿನ ಸಲಿಯಿಂದ ಕರೆ ಮಾಡಿದಾಗ ನೀವು ಕನ್ನಡದಲ್ಲಿಯೇ ಮಾತನಾಡುವುದಕ್ಕೆ ಇಷ್ಟಪಡ್ತೀರಾ ಎಂದ. ಹೌದು ಎಂದದ್ದೆ. ಆ ಘಟನೆಯ ನಂತರ ನನಗೆ, ರಿಲಯನ್ಸಿನಿಂದ ಬಂದ ಎಲ್ಲ ಕರೆಗಳೂ ಕನ್ನಡದಲ್ಲಿದ್ದವು.
೨. ಸಾಲ ನೀಡುವ ಕರೆಗಳು, ನನಗೆ ಮೊದಮೊದಲು ಬರುತ್ತಿದ್ದ ಕರೆಗಳು ಇಂಗ್ಲೀಷಿನಲ್ಲಿರುತ್ತಿದ್ದವು, ಅವುಗಳಿಗೆ ಕನ್ನಡದಲ್ಲಿ ಉತ್ತರ ನೀಡುತ್ತಿದ್ದೆನಾದ್ದರಿಂದ ನಂತರದ ದಿನಗಳಲ್ಲಿ "ಸಾಲ ಬೇಕೇ, ಕೊಡ್ತೀವಿ" ಎಂಬ ಕರೆಗಳು ಕನ್ನಡದಲ್ಲಿಯೇ ಬರುವ ಶುರುವಾದವು.
೩. ಅಷ್ಟರಲ್ಲಾಗಲೇ ಇನ್ಶೂರೆನ್ಸಿನವರು ಬುದ್ಧಿ ಕಲಿತಿದ್ದರು ಅಂತ ಕಾಣತ್ತೆ, ಇನ್ಶೂರೆನ್ಸಿನವರು ಯಾವತ್ತೂ ಇಂಗ್ಲೀಷಿನಲ್ಲಿ ಮಾತನಾಡಿಸಲೇ ಇಲ್ಲ. ಕನ್ನಡದಲ್ಲಿ ಮಾತನಾಡುತ್ತಾರೆ(ಆದರೆ ಸ್ವಲ್ಪ ಕೆಟ್ಟದಾಗಿರುತ್ತೆ).

ಕಡೆಯದಾಗಿ,
ನಾನು ಈ ಬರಹ ಓದಿದಾಗ ದೂರುಲಿ ರಶೀದಿ ತಲೆಬರಹ ನೋಡಿ, ಏನಿದು complaint registration receipt ಇರಬಹುದೇ ಅಂತ ಮಾಡಿದ್ದೆ. ನಂತರ ತಿಳಿಯಿತು, ಮಹೇಶ ದೂರ + ಉಲಿ (ದೂರದರ್ಶನ ದೂರವಾಣಿಯ ರೀತಿ, ದೂರುಲಿ ೫೦% ಕನ್ನಡ) ಅಂತ ಮಾಡಿದ್ದಾನೆ ಅಂತ. ಆದರೆ ನನಗೆ ದೂರುಲಿಯನ್ನು ಮೊದಲ ಬಾರಿಗೆ ಓದಿದಾಗ, ನನ್ನ ಮನಸ್ಸಿಗೆ ಬಂದದ್ದು ದೂರು + ಉಲಿ (ಒಂಥರಾ feedback, complaint registration) ಎಂಬುದಾಗಿ. ಸಂಧಿಗಳಲ್ಲಿ ಕನ್ನಡ ಪದಗಳನ್ನು ಬಳಕೆಗೆ ತರುವಾಗ ಸ್ವಲ್ಪ ಎಚ್ಚರದಲ್ಲಿರಬೇಕು. ಇಲ್ಲವಾದರೆ ಈ ರೀತಿಯ ಅಭಾಸಗಳಾಗುವತ್ತವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 11:44am — ASHOKKUMAR

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ASHOKKUMAR's picture

ಸದ್ಯ ಬಳಕೆಯಲ್ಲಿರುವ ದೂರವಾಣಿಯಲ್ಲಿ ವಾಣಿ ಸಂಸ್ಕೃತದಲ್ಲಿರುವುದು ತೊಂದರೆ ಅನ್ನಿಸುತ್ತೆ. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:22pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

@ಅಶೋಕ್,
ಅಯ್ಯೋ, ಅಶೋಕ್, ಮಹೇಶನ ಹಾಗೆ Etymology ಹಿಡಿದುಕೊಂಡು ಹೋದರೆ, ದೂರ ಕೂಡ ಸಂಸ್ಕೃತವೇ. ದೂರ ಉಲಿ (ಮಹೇಶನ ತರಹ percentage ಲೆಕ್ಕದಲ್ಲಿ ಮಾತನಾಡಿದರೆ, ೫೦% ಕನ್ನಡ).

@ಮಹೇಶ,
ನಿನ್ನ ಉತ್ಸಾಮ ಮೆಚ್ಚಿದೆನಪ್ಪಾ, ಆದರೆ ಬರೀ ಅನುವಾದದ ದೃಷ್ಟಿಯಿಂದ ಕಲಬೆರಕೆ ಪದವೇಕೆ ? ಅಷ್ಟಕ್ಕೂ ನೀನು ತಲೆಬರಹದಲ್ಲಿ ದೂರುಲಿ ಎಂದರೇನು ಅಂತ ಹಾಕಿಲ್ಲ. ಕನ್ನಡದಲ್ಲಿ ಮಾತ್ರವೇ ಉಂಕಿಸಿದರೆ, ದೂರುಲಿ = ದೂರು + ಉಲಿ ಅಂತಾನೇ ಆಗೋದು.

ಇಲ್ಲಿರುವ ಎಡವಟ್ಟು ನಿನ್ನ ಗಮನಕ್ಕೆ ಬಂದಿದ್ದರೂ, ಬಂದೇ ಇರದ ಹಾಗೆ ನಡೆದರೆ ನಾವೇನೂ ಮಾಡಲಿಕ್ಕಾಗುವುದಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:34pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ನಿನ್ನ ಉತ್ಸಾಮ ಮೆಚ್ಚಿದೆನಪ್ಪಾ, ಆದರೆ ಬರೀ ಅನುವಾದದ ದೃಷ್ಟಿಯಿಂದ ಕಲಬೆರಕೆ ಪದವೇಕೆ ? ಅಷ್ಟಕ್ಕೂ ನೀನು ತಲೆಬರಹದಲ್ಲಿ ದೂರುಲಿ ಎಂದರೇನು ಅಂತ ಹಾಕಿಲ್ಲ. ಕನ್ನಡದಲ್ಲಿ ಮಾತ್ರವೇ ಉಂಕಿಸಿದರೆ, ದೂರುಲಿ = ದೂರು + ಉಲಿ ಅಂತಾನೇ ಆಗೋದು.

ಇಲ್ಲಿರುವ ಎಡವಟ್ಟು ನಿನ್ನ ಗಮನಕ್ಕೆ ಬಂದಿದ್ದರೂ, ಬಂದೇ ಇರದ ಹಾಗೆ ನಡೆದರೆ ನಾವೇನೂ ಮಾಡಲಿಕ್ಕಾಗುವುದಿಲ್ಲ.

ಈಗ ಅಚ್ಚಕನ್ನಡದ, Etymology ಸಂಗತಿಯನ್ನು ಈ ಎಳೆಯಲ್ಲಿ ಎತ್ತಿದನು ನೀನು ಆದುದರಿಂದ ಈಗ, ನೀನೇ ಕೆಲವು ಕೇಳ್ಮೆಗೆ ಮರುನುಡಿಯ ಬೇಕು.

೧) ಉತ್ಸಾಮ ಅಂದರೇನು?
೨) ದೃಷ್ಟೀ ಬಳಕೆ ಯಾವ ಅರ್ಥದಲ್ಲಿದೆ? ದೃಷ್ಟಿ != ನೋಟ - ಚೂಪು/vision
೩) ಮುಂಗೋಪ, ಬೆಂಬಲ, ಇಂತಹ ಒರೆಗಳ ಬಗ್ಗೆ ತಮ್ಮ ಮಾತೇನು?
೪) ಕಲಬೆರಕೆ ಹೇಗೆ? ಇಲ್ಲಿ ಬರಿ ಬರಕೆ ಇರುವುದು?
೫) ಮಾತ್ರ ಇಲ್ಲಿ ಯಾವ ತಿಳಿವಿನಲ್ಲಿ ಬಳಕೆಯಾಗಿದೆ. ಮಾತ್ರ = ಗುಳಿಗೆ, ಒಂದು ಕಣ್ಮಿಟುಕಿಸುವ ಹೊತ್ತು.
೬) ಅನುವಾದ ಅಂದರೆ ? ನಿನಗೆ ಗೊತ್ತು 'ಉಪಸರ್ಗ'ದಿಂದ ತಿಳಿವು ಹೇಗೆ ಮಾರ್ಪಾಟಾಗುವುದೆಂದು ಹೇಳಲು ಬರದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:38pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ತಿದ್ದು
ಬರಕೆ = ಬೆರೆಕೆ

prism ಹೀಗೆ ಹೇಳುವುದು.

೧ 7. ಅನುವಾದ (ಸಂ) (ನಾ) ೧ ಭಾಷಾಂತರ ೨ ವ್ಯಾಖ್ಯಾನ ೩ ಸಮ್ಮತಿ

೨ ಉತ್ಸಾಮ ಸಿಗಲಿಲ್ಲ

೩ ಕಲಬೆರಕೆ (<ಸಂ. ಕಲ + ದೇ. ಬೆರಕೆ) (ನಾ) ಅನೇಕ ವಸ್ತುಗಳ ಮಿಶ್ರಣ, ಸಂಕರಗೊಂಡ ರಾಶಿ Smiling
ಅಂದ್ರೆ ಸಕ್ಕದ ಕಲಕ್ಕೆ, ಕನ್ನಡ ಬೆರಕೆ ಸೇರಿ ಕಲಬೆರಕೆ ಆಗಿದೆಯಂತೆ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:55pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ಸುನಿಲ,

ಇಲ್ಲಿ ನಿನ್ನ response ಬೇಕು!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 1:16pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

ಯಪ್ಪಾ, ಮಹೇಶ ನಾನು ಉತ್ತರವನ್ನು ಈಗಾಗಲೇ ಇಲ್ಲಿತ್ತಿದ್ದೇನೆ ನೋಡಪ್ಪಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 1:25pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ನನ್ನ queries

೧ 7. ಅನುವಾದ (ಸಂ) (ನಾ) ೧ ಭಾಷಾಂತರ ೨ ವ್ಯಾಖ್ಯಾನ ೩ ಸಮ್ಮತಿ

೨ ಉತ್ಸಾಮ ಸಿಗಲಿಲ್ಲ

೩ ಕಲಬೆರಕೆ (<ಸಂ. ಕಲ + ದೇ. ಬೆರಕೆ) (ನಾ) ಅನೇಕ ವಸ್ತುಗಳ ಮಿಶ್ರಣ, ಸಂಕರಗೊಂಡ ರಾಶಿ Smiling
ಅಂದ್ರೆ ಸಕ್ಕದ ಕಲಕ್ಕೆ, ಕನ್ನಡ ಬೆರಕೆ ಸೇರಿ ಕಲಬೆರಕೆ ಆಗಿದೆಯಂತೆ!

ನೀನು 'ಅಭಾಸದ ಬದಲು 'ಎಡವಟ್ಟು' ಬಳಸಿ ಸರಿಮಾಡಿಕೊಂಡೆನು, ಎಂದಿಹಿ. ಹಾಗಾದರೆ 'ಅಭಾಸ'ದ ಬಳಕೆಗೆ ಇನ್ನ ಗೊಂದಲ ಕಂಡಿತು.
'ಕಲಬೆರಕೆ'ಗೂ ನೀನು ಕೊನೆ ಹೇಳಿದೆ.

ಈಗ 'ಅನುವಾದ'ಕ್ಕೂ ಹೇಳಿಬಿಡು ಅಲ್ಲಿಗೆ ಕತೆ ಮುಗಿಯುವುದು.

ನನ್ನದು ಮೊಂಡತನ ಎಂದು ಹೇಳಿತ್ತಿರುವೆ. Smiling ಮೊಂಡತನವಲ್ಲ. ನಿನ್ನ ಆಕ್ಷೇಪಣೆ/ಅಡ್ಡಮಾತು/objectionಗಳಿಗೆ ನೇರ answer.

ಇರಲಿ.
ಅದಕ್ಕೆ 'ಹೆಸರು' ಇಡುಕೊಂಡು ನಲಿಯುವುದು ನಿನ್ನ ಇಷ್ಟ/wish/ಹಂಬಲ. ನಾನು ಈ 'ಹೆಸರು'ಗಳನ್ನ ಕರೆಯುವ ಸಂಗತಿ ಮಾಡಲಾರೆ.

ಇಲ್ಲಿ ನನಗೆ important/ಮುಖ್ಯವಾದುದು, ನೀನು ಕನ್ನಡ ಸಂಧಿಗಳ ಕುರಿತು ಎತ್ತಿರುವ ಗೊಂದಲಗಳನ್ನು ಬಗೆಹರಿಸುವುದು, ಹರಿಸಿಕೊಳ್ಳುವುದು.!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:46pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

ಗೆಳೆಯರೆ,
ಇಲ್ಲಿ ಉತ್ಸಾಹದ ಬದಲು ಉತ್ಸಾಮ ಎಂದು ನಾನು ಬಳಸಿದ್ದು "ಸಿಕ್ಕಾಪಟ್ಟೆ" ಟೀಕೆಗೊಳಗಾದ ಕಾರಣ, ಎನ್ನ ತಪ್ಪಂ ಮನ್ನಿಸಿ ತಿದ್ದಿತೋರ್ಪುದು, ತಮ್ಮುತ್ತಮ ಸದ್ಗುಣಂಗಳ.

@ಮಹೇಶ,
ಇಲ್ಲಿ ಯಾರೂ ಅಚ್ಚಗನ್ನಡದ ಬಗ್ಗೆ ಮಾತು ಎತ್ತರಿಲೇ ಇಲ್ಲ. ದಯಮಾಡಿ ನೀನು ಈ ಪ್ರಶ್ನೆಗಳನ್ನು ಬೇರೆ ಎಳೆಯಲ್ಲಿ ಪ್ರಾರಂಭಿಸು ಆಗ ಹೆಚ್ಚು ತಿಳಿದವರು ಉತ್ತರಿಸುತ್ತಾರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:52pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

Smiling

ಬೇರೆ ಎಳೆ ಬೇಕಾದರೆ ನೀನು ತೆರೆ. ನಾನು ನೀನು ಎತ್ತಿ 'ತಪ್ಪು' 'ಎಚ್ಚರವಿರಬೇಕು' ಎಂಬ ಮಾತುಗಳಿಗೆ ಮರುನುಡಿಯಿತ್ತಿದ್ದೇನೆ.

ನೀನೇ ಎತ್ತಿದ್ದು ಈ ಸಂಗತಿಯನ್ನು. ಅಚ್ಚಕನ್ನಡ ಅಂತ ಹೇಳಿಲ್ಲ ದಿಟ ಆದರೆ...

ಕಡೆಯದಾಗಿ,
ನಾನು ಈ ಬರಹ ಓದಿದಾಗ ದೂರುಲಿ ರಶೀದಿ ತಲೆಬರಹ ನೋಡಿ, ಏನಿದು complaint registration receipt ಇರಬಹುದೇ ಅಂತ ಮಾಡಿದ್ದೆ. ನಂತರ ತಿಳಿಯಿತು, ಮಹೇಶ ದೂರ + ಉಲಿ (ದೂರದರ್ಶನ ದೂರವಾಣಿಯ ರೀತಿ, ದೂರುಲಿ ೫೦% ಕನ್ನಡ) ಅಂತ ಮಾಡಿದ್ದಾನೆ ಅಂತ. ಆದರೆ ನನಗೆ ದೂರುಲಿಯನ್ನು ಮೊದಲ ಬಾರಿಗೆ ಓದಿದಾಗ, ನನ್ನ ಮನಸ್ಸಿಗೆ ಬಂದದ್ದು ದೂರು + ಉಲಿ (ಒಂಥರಾ feedback, complaint registration) ಎಂಬುದಾಗಿ. ಸಂಧಿಗಳಲ್ಲಿ ಕನ್ನಡ ಪದಗಳನ್ನು ಬಳಕೆಗೆ ತರುವಾಗ ಸ್ವಲ್ಪ ಎಚ್ಚರದಲ್ಲಿರಬೇಕು. ಇಲ್ಲವಾದರೆ ಈ ರೀತಿಯ ಅಭಾಸಗಳಾಗುವತ್ತವೆ.
http://sampada.net/blog/mahesha/08/06/2007/4432

ಎಂದು ೫೦% ಕನ್ನಡದ ಸಂಗತಿ ಎತ್ತಿದ್ದು ನೀನೇ.!!

'ಅಭಾಸ' ಮುಂತಾದ ಗೊಂದಲಗಳ ಬಗ್ಗೆ ನನ್ನ questionಗೆ answer ಮಾಡು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:05pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

Smiling

ಅದಕ್ಕೆ ಒಳಗಡೆ ದೂರುಲಿ(telephone ) ಅಂತ ಬರೆದಿದ್ದರು.
===================================
3. ಆಭಾಸ (ಸಂ) (ನಾ) ೧ ಕಾಂತಿ, ಪ್ರಕಾಶ ೨ ತಪ್ಪಾಗಿ ತಿಳಿಯುವ ವಿಷಯ ೩ ಎಡವಟ್ಟು"!
-prism Smiling

ಇಲ್ಲಿ ಆದ 'ಆಭಾಸ' ಯಾವುದು? Smiling

ಸಕ್ಕದದ ಪದಗಳ ಬಳಕೆಯ ತುಸು ಎಚ್ಚರವಿರಬೇಕು, ಇಲ್ಲದಿದ್ದರೆ ಇಂತಹ ಎಡವಟ್ಟು ಆಗುವುದು Smiling

ಒಂದು ಮಾತು ನೆಪ್ಪಾಯ್ತು "ವಿವಿಧಾರ್ಥವಿಹೀನ".
=============================
.
.
.
ಅಂತೂ ಇಂತೂ ಆ ಕಡವಳನ ಮರುಕದಿಂದ ನಿಂಗೆ ಹೊಳೆಯಿತಲ್ಲ!! ಆದೇ ಭಾಗ್ಯ! Smiling
=======================
'ದೂರ' ಕ್ಕೆ ಕನ್ನಡದ ಒರೆಯಾವುದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:06pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ಬರೆದಿದ್ದರು = ಬರೆದಿದ್ದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:24pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ನಾನು ಈ ಬರಹ ಓದಿದಾಗ ದೂರುಲಿ ರಶೀದಿ ತಲೆಬರಹ ನೋಡಿ, ಏನಿದು complaint registration receipt ಇರಬಹುದೇ ಅಂತ ಮಾಡಿದ್ದೆ. ನಂತರ ತಿಳಿಯಿತು, ಮಹೇಶ ದೂರ + ಉಲಿ (ದೂರದರ್ಶನ ದೂರವಾಣಿಯ ರೀತಿ, ದೂರುಲಿ ೫೦% ಕನ್ನಡ) ಅಂತ ಮಾಡಿದ್ದಾನೆ ಅಂತ. ಆದರೆ ನನಗೆ ದೂರುಲಿಯನ್ನು ಮೊದಲ ಬಾರಿಗೆ ಓದಿದಾಗ, ನನ್ನ ಮನಸ್ಸಿಗೆ ಬಂದದ್ದು ದೂರು + ಉಲಿ (ಒಂಥರಾ feedback, complaint registration) ಎಂಬುದಾಗಿ. ಸಂಧಿಗಳಲ್ಲಿ ಕನ್ನಡ ಪದಗಳನ್ನು ಬಳಕೆಗೆ ತರುವಾಗ ಸ್ವಲ್ಪ ಎಚ್ಚರದಲ್ಲಿರಬೇಕು. ಇಲ್ಲವಾದರೆ ಈ ರೀತಿಯ ಅಭಾಸಗಳಾಗುವತ್ತವೆ.

Smiling

ಅಲ್ಲಿ ಸಂಧಿ ತಪ್ಪು ಇದ್ದಿದ್ದು ದಿಟ. ಆದರೆ ಅದನ್ನು ನೀನು ಸರಿಯಾಗಿ ಕಂಡು ಹಿಡಿಯಲಿಲ್ಲ. !! ಬದಲಿಗೆ ಇರದ ತಪ್ಪನ್ನು ಹೇಳಿದೆ.

ದೂರ + ಉಲಿ != ದೂರುಲಿ ( ತಪ್ಪು )
ದೂರ + ಉಲಿ = ದೂರುವುಲಿ

ವೃಕ್ಷ + ಒಂದು = ವೃಕ್ಷವೊಂದು !+ ವೃಕ್ಷೊಂದು

ಈಗ ಸರಿಪಡಿಸಿದ್ದೇನೆ!! 'ದೂರವುಲಿ' ಬಗ್ಗೆ ಮರುಂಕು( ಮರು + ಉಂಕು ) ನಡೆಸಲು ನೆರವಾದುದಕ್ಕೆ ನನ್ನಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:25pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ತಿದ್ದು!
ದೂರ + ಉಲಿ = ದೂರವುಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:36pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

'ದೂರವುಲಿ' ಬಗ್ಗೆ ಮರುಂಕು( ಮರು + ಉಂಕು ) ನಡೆಸಲು ನೆರವಾದುದಕ್ಕೆ ನನ್ನಿ.

ಆಡಿಕೊಳ್ಳಕ್ಕಲ್ಲಪ್ಪಾ ಮಹೇಶ, Smiling ನನಗೆ ನಿಜಕ್ಕೂ ನಗು ಬಂತು.

೧. ಮರ + ಒಂದು = ಮರವೊಂದು ಆಗುವುದಾದರೆ, ಮರು + ಉಂಕು = ಮರುವುಂಕು ಆಗಬೇಡವೇ ? ಮರುಂಕು ಏಕೆ ಆಗುತ್ತದೆ ?
೨. ದೂರ + ಉಲಿ = ದೂರುವುಲಿ, ನಿಜಕ್ಕೂ ಆಗುತ್ತದೆಯೇ ? ಅದು ಹೇಗೆ ದೂರ ಇದ್ದದ್ದು ದೂರು ಆಗುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 12:46pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

೧. ಮರ + ಒಂದು = ಮರವೊಂದು ಆಗುವುದಾದರೆ, ಮರು + ಉಂಕು = ಮರುವುಂಕು ಆಗಬೇಡವೇ ? ಮರುಂಕು ಏಕೆ ಆಗುತ್ತದೆ ?
೨. ದೂರ + ಉಲಿ = ದೂರುವುಲಿ, ನಿಜಕ್ಕೂ ಆಗುತ್ತದೆಯೇ ? ಅದು ಹೇಗೆ ದೂರ ಇದ್ದದ್ದು ದೂರು ಆಗುತ್ತದೆ.

Smiling Laughing out loud

ಮರ ಇದು ಅಕಾರದಿಂದ ಕೊನೆಗೊಳ್ಳೋದು.
ಅದಕ್ಕೆ ಮರವೊಂದು, ಹಾರವೊಂದು

ಮರು ಇದು ಉಕಾರದಿಂದ ಕೊನೆಗೊಳ್ಳೋದು
ಮರು+ ಉಂಕು = ಮರುಂಕು
ಗೊತ್ತು + ಉಂಟು = ಗೊತ್ತುಂಟು, != ಗೊತ್ತುವುಂಟು Smiling
ಬಾನು + ಉಲಿ = ಬಾನುಲಿ != ಬಾನುವುಲಿ Smiling
ಅಂಟು + ಉಂಟು = ಅಂಟುಂಟು != ಅಂಟುವುಂಟು Smiling

ಸಾಕಾ? ತಲೆಗಿಳಿಯಿತಾ?
ಕನ್ನಡದ ಲೋಪಸಂಧಿ ಮತ್ತು ಆಗಮ ಸಂಧಿ ಕಟ್ಟಳೆ ಓದಬೇಕು!

ದೂರ + ಉಲಿ = ದೂರುವುಲಿ ಅಲ್ಲ ಇದನ್ನು ತಿದ್ದಿ ಆಗಲೇ ಹೇಳಿರುವೆನು

ದೂರ + ಉಲಿ = ದೂರವುಲಿ.
ಇಲ್ಲಿ ನೋಡಿಕೋ!
http://sampada.net/blog/mahesha/08/06/2007/4432#comment-8223

ನಿನಗೆ ನಗು ಯಾವುದಕ್ಕೆ ಬರುವುದೋ, ಆ ಕಡವಳಕ್ಕೆ ಗೊತ್ತು!! Smiling

ನನಗೆ ಈ ಸಕ್ಕತಾಗಿ ಬರ್ತಾ ಇದೆ!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 1:03pm — Sunil Jayaprakash

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

Sunil Jayaprakash's picture

೧. ಮರ ಇದು ಅಕಾರದಿಂದ ಕೊನೆಗೊಳ್ಳೋದು. ಅದಕ್ಕೆ ಮರವೊಂದು, ಹಾರವೊಂದು
೨. ಮರು ಇದು ಉಕಾರದಿಂದ ಕೊನೆಗೊಳ್ಳೋದು ಅದಕ್ಕೆ ಮರುಂಕು.

ಸದ್ಯ ಇವುಗಳನ್ನು ನೀನೇ ಎಲ್ಲರಿಗೂ ಹೇಳಿದೆಯಲ್ಲಾ. ತಿಳಿಯಿತೇ, ಈ ಕಾರಣಕ್ಕಾಗಿಯೇ, ನಾನು ದೂರು + ಉಲಿ = ದೂರುಲಿ ಎಂದದ್ದು, ಈಗ ನಿನಗೆ ತಲೆಗಿಳಿಯಿತಾ.

ಕನ್ನಡದ ಲೋಪಸಂಧಿ ಮತ್ತು ಆಗಮ ಸಂಧಿ ಕಟ್ಟಳೆ ಓದಬೇಕು!

ಕನ್ನಡದ ಸಂಧಿಯ ಪ್ರಸ್ತಾಪ ಮಾಡಿದೆಯಲ್ಲಾ, ದೂರ ಕನ್ನಡ ಪದವೇ, ಕನ್ನಡವಲ್ಲದ ಪದಕ್ಕೆ ಕನ್ನಡದ ಸಂಧಿಯೇಕೆ ಅನ್ವಯಿಸುತ್ತದೆ. ತುಸು ಯೋಚಿಸು, ದೂರ ಕನ್ನಡ ಪದವೇ ಅಲ್ಲದಿದ್ದ ಮೇಲೆ, ಸಂಧಿಯಲ್ಲಿ ಹೀಗೆಯೇ ಆಗಬೇಕು ಎಂಬ ಯಾವ ನಿಯಮವೂ ಇಲ್ಲ.

ದೂರ + ಉಲಿ = ಏನಾಗುತ್ತದೆ ಎಂಬುದು ಪ್ರಸ್ತುತವೇ ಅಲ್ಲ, ಏಕೆಂದರೆ ದೂರ ಕನ್ನಡ ಪದವೇ ಅಲ್ಲ.

ಇನ್ನು ಕಲಬೆರಕೆ, ಕಲ ಎನ್ನುವುದು ಕನ್ನಡ ಪದ. ಕಲಬೆರಕೆಯನ್ನು ನಿನ್ನ ರೀತಿಯಲ್ಲಿ ಹೇಳುವುದಾದರೆ ೧೦೦% ಕನ್ನಡ ಪದ.

ಇನ್ನು ಅಭಾಸ ಎಂದೆಯಲ್ಲಾ, ನೀನು ನಾನು ಬರೆದ ಕಾಮೆಂಟ್ ಓದಿದೆಯೋ ಇಲ್ಲವೋ ನನಗೆ ಅನುಮಾನ ಕಾಡಹತ್ತಿದೆ, ನೀನು ಎಡವಟ್ಟು ಎಂಬ ಬಳಕೆ ತೋರಿದ ಮೇಲೆ, ಮುಂದಿನ ಎಳೆಯಲ್ಲಿ ನಾನು ಅಭಾಸದ ಬದಲು ಎಡವಟ್ಟು ಬಳಸಿದ್ದೇನೆ. ಇನ್ನೂ ಓದಿಲ್ಲವಾದರೆ ಓದಿಕೋ.

ಒಟ್ಟಿನಲ್ಲಿ ದೂರುಲಿ, ದೂರವುಲಿಯ ಸರಿತಪ್ಪಗಳ ಜಗ್ಗಾಟದಲ್ಲಿ ಮೊಂಡುತನದಿಂದ ಈ ಎಳೆಯ ಸಾರವಂತೂ ಹೋಗುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 1:18pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ನಾನು ದೂರು + ಉಲಿ = ದೂರುಲಿ ಎಂದದ್ದು, ಈಗ ನಿನಗೆ ತಲೆಗಿಳಿಯಿತಾ.

ಇದು ತಲೆಗಿಳಿದುದಕ್ಕೆ ಮೊದಲೇ ನಾನು ಸರಿಪಡಿಸಿದ್ದೂ.
ನೀನು ಹಿಂಗೆ ಹೇಳಲೇ ಇಲ್ಲ.

ದೂರ + ಉಲಿ = ಏನಾಗುತ್ತದೆ ಎಂಬುದು ಪ್ರಸ್ತುತವೇ ಅಲ್ಲ, ಏಕೆಂದರೆ ದೂರ ಕನ್ನಡ ಪದವೇ ಅಲ್ಲ.

ಇಲ್ಲಿ ಪ್ರಸ್ತುತ ಅಂದರೇ?

prism ಹೀಗೆ ಹೇಳುವುದು.
ಪ್ರಸ್ತುತ (ಸಂ) (ನಾ) ೧ ಸಂದರ್ಭ, ಪರಿಸ್ಥಿತಿ ೨ ಸಂದರ್ಭೋಚಿತವಾದುದು ೩ ಅಗತ್ಯ, ಅವಶ್ಯಕತೆ
ಪ್ರಸ್ತುತ (ಸಂ) (ಗು) ೧ ಹೊಗಳಿದ, ಪ್ರಶಂಸಿಸಿದ ೨ ತತ್ಕಾಲದ, ಸದ್ಯದ, ಈಗಿನ

ನಾನು ಇಲ್ಲಿ "contextual/ಸಂದರ್ಭೋಚಿತವಾದುದು" ಅಂತ ಅಂದುಕೊಂಡಿದ್ದೇನೆ.

ಅದು ಹೇಗೆ ಪ್ರಸ್ತುತವಲ್ಲ? ಇದು ಇದೆ. ನಿನಗೆ ಗೊಂದಲ ಹತ್ತಿದ್ದು ಸಂಧಿನಿಂದ ತಾನೆ.
ದೂರ ಕನ್ನಡ ಒರೆಯಲ್ಲದೇ ಇರಬಹುದು. ಆದರೆ ಈ ಸಂಧಿ ಕನ್ನಡದಲ್ಲಿ ಇದೆ.

ವೃಕ್ಷ + ಒಂದು = ವೃಕ್ಷವೊಂದು ಏಕೆ ಆಗುವುದು? ಎಂದು ಕನ್ನಡದ ವ್ಯಾಕರಣಕಾರರು ಹೇಳಿದ್ದಾರೆ.!!

ಕನ್ನಡದಲ್ಲಿ ಸಂಧಿ ಕಟ್ಟಳೆ/rules ಇವೆಲ್ಲವನ್ನು handle ಮಾಡಿವೆ.
ಪದ ಸಂಸ್ಕೃತದದ್ದಾಗಲೀ, ಕನ್ನಡದ್ದಾಗಲಿ, ಮತ್ತೆ ಯಾವುದೇ ನುಡಿಯದ್ದಾಗಲಿ, ಅದಕ್ಕೆ ಸಂಧಿ ಹೇಗೆ ನಡೆಯುವುದು ಎಂದು rules ಇದ್ದೇ ಇದೆ.

ಈ ಎಲ್ಲ ಮಾತುಗಳಿಗೆ ನಿನ್ನ

ನಾನು ಈ ಬರಹ ಓದಿದಾಗ ದೂರುಲಿ ರಶೀದಿ ತಲೆಬರಹ ನೋಡಿ, ಏನಿದು complaint registration receipt ಇರಬಹುದೇ ಅಂತ ಮಾಡಿದ್ದೆ. ನಂತರ ತಿಳಿಯಿತು, ಮಹೇಶ ದೂರ + ಉಲಿ (ದೂರದರ್ಶನ ದೂರವಾಣಿಯ ರೀತಿ, ದೂರುಲಿ ೫೦% ಕನ್ನಡ) ಅಂತ ಮಾಡಿದ್ದಾನೆ ಅಂತ. ಆದರೆ ನನಗೆ ದೂರುಲಿಯನ್ನು ಮೊದಲ ಬಾರಿಗೆ ಓದಿದಾಗ,ನನ್ನ ಮನಸ್ಸಿಗೆ ಬಂದದ್ದು ದೂರು + ಉಲಿ (ಒಂಥರಾ feedback, complaint registration) ಎಂಬುದಾಗಿ. ಸಂಧಿಗಳಲ್ಲಿ ಕನ್ನಡ ಪದಗಳನ್ನು ಬಳಕೆಗೆ ತರುವಾಗ ಸ್ವಲ್ಪ ಎಚ್ಚರದಲ್ಲಿರಬೇಕು. ಇಲ್ಲವಾದರೆ ಈ ರೀತಿಯ ಅಭಾಸಗಳಾಗುವತ್ತವೆ.

ಈ ಮಾತಲ್ಲಿ ಎದ್ದ ೫೦% ಕನ್ನಡ ಮತ್ತು ಸಂಧಿಗಳ ಸಂಗತಿ ಕಾರಣ. ಅದಕ್ಕೆ ಅದರ ಮಾತುಕತೆ ಇಲ್ಲಿ ತಕ್ಕದಾದುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2007 - 4:21pm — ಕರಿ ತವಳೆ

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಕರಿ ತವಳೆ's picture

ಮರು ಇದು ಉಕಾರದಿಂದ ಕೊನೆಗೊಳ್ಳೋದು
ಮರು+ ಉಂಕು = ಮರುಂಕು
ಗೊತ್ತು + ಉಂಟು = ಗೊತ್ತುಂಟು, != ಗೊತ್ತುವುಂಟು
ಬಾನು + ಉಲಿ = ಬಾನುಲಿ != ಬಾನುವುಲಿ

ಉಕಾರದಿಂದ ಕೊನೆಯಾಗುವ ಎಲ್ಲ ಪದಗಳಿಗೂ ಈ ನಿಯಮ ಹೊಂದುವುದಿಲ್ಲವೆನಿಸುತ್ತದೆ. ಮಾದರಿಗೆ ಎರಡು ಅಕ್ಷರದ ಕೆಲವು ಪದಗಳಿಗೆ (ಮೊದಲನೇ ಅಕ್ಷರದ ಸ್ವರ ಹ್ರಸ್ವವಾಗಿದ್ದರೆ) ಹೊಂದುವುದಿಲ್ಲ.

ಮಗು + ಇಂದ = ಮಗುವಿಂದ
ಕರು + ಅನ್ನು = ಕರುವನ್ನು
ಮಡು + ಉಂಟು = ಮಡುವುಂಟು

ಹೀಗೆ
ಮರು + ಉಂಕು = ಮರುವುಂಕು
ಅನ್ನೋದೇ ಸರಿ ಅಂತ ಅನಿಸುತ್ತದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2007 - 4:35pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

"ಮರುತ್ತರ" ಕೇಳಿದ್ದೀರ? ಇದು ಇದೆ ಅಲ್ವಾ!

ಮಗು, ಕರು, ಮಡು ಇವುಗಳ ಒಂದನೇ ವಿಬಕ್ತಿ
ಮಗುವು, ಕರುವು, ಮಡುವು.

ಆದರೆ
'ಮರು' ಇದು ಮಗು, ಕರು, ಮಡು ಅಂತ noun ಅಲ್ಲ. ಆದ್ದರಿಂದ ಅದರ ಒಂದನೇ ವಿಬಕ್ತಿ "ಮರುವು" ಅಲ್ಲ.

ಇನ್ನೊಂಡು ಕಟ್ಟಳೆ ಇದೆ( ತುಸು ಮರೆತಿದ್ದೇನೆ Sad )
ಕನ್ನಡ ಸಂಧಿಗಳಲ್ಲಿ ನಾಮಪದಗಳು ಬಂದರೆ, ಸಂಧಿಗೆ ಮುನ್ನು ನಾಮಪದವು ಇಡಿಯಾಗಿರಬೇಕು.

ಮಗು + ಉ = ಮಗುವು ( ಇಡಿಯಾದುದು )
ಮಗು + ಉ + ಅನ್ನು = ಮಗುವನ್ನು

ಹಾಲು + ಉ = ಹಾಲು
ಹಾಲು + ಉ + ಅನ್ನು = ಹಾಲು + ಅನ್ನು = ಹಾಲನ್ನು.

ಹೀಗೆ ಏನೋ ಇದೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2007 - 12:02pm — ಕರಿ ತವಳೆ

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಕರಿ ತವಳೆ's picture

ನೆನ್ನೆ ಹೀಗೇ ಕನ್ನಡ ಸಾಹಿತ್ಯ ಪರಿಶತ್ತಿನ ನಿಘಂಟು ನೋಡುತ್ತಿದ್ದಾಗ ಕಣ್ಣಿಗೆ ಬಿದ್ದ ಪದ.

ಕಿರು + ಎಲರ್ = ಕಿರುವೆಲರ್ (ಎಂದರೆ ಮಂದವಾಗಿ, ಮೆಲ್ಲನೆ ಬೀಸುವ ಗಾಳಿ)

ಇದು 'ಕಿರೆಲರ್' ಎಂದು ಆಗುವುದಿಲ್ಲ.
'ಕಿರು' ಎಂಬ ಪದ 'ಮರು' ಪದದಂತೆ ನಾಮಪದವಲ್ಲ. ಅದು ಗುಣವಾಚಕ. ಇದಕ್ಕೆ ಒಂದನೇ ವಿಭಕ್ತಿ ಪ್ರತ್ಯಯ ಸೇರಿಸುವುದಕ್ಕೆ ಆಗದು. 'ಕಿರುವು' ಎಂದು ಆಗುವುದಿಲ್ಲ. ಇದಕ್ಕೆ ಏನು ಹೇಳ್ತೀರಿ?

ಮತ್ತೆ ನಾಮ ಪದಗಳಲ್ಲಿ ಒಂದನೆ ವಿಭಕ್ತಿ ಸೇರಿಸುವುದರಿಂದ ವಕಾರ ಬುರುತ್ತದೆ ಎಂದು ಹೇಳಿದಿರಿ (ಮಗುವನ್ನು, ಮಡುವುಂಟು ಇಂತಹ ಪದಗಳಲ್ಲಿ). ಆದರೆ, ಉ ಪ್ರತ್ಯಯ ಸೇರಿದಾಗ ವಕಾರವಾದರೂ ಏಕೆ ಬರುತ್ತದೆ?
ಹಾಲು + ಉ = ಹಾಲು ಬಾನು + ಉ = ಬಾನು ಹಾಗೆಯೇ,
ಮಗು + ಉ = ಮಗು ಅಂತ ಏಕೆ ಆಗುವುದಿಲ್ಲ. ಮಗುವು ಅಂತ ಏಕೆ ಆಗುತ್ತದೆ? ಅಲ್ಲಿ ವಕಾರ ಏಕೆ ಬರುತ್ತೆ?

ಇದನ್ನ ನೋಡಿದರೆ ಎರಡೇ ಮಾತ್ರೆಗಳಿರುವ ಉಕಾರಾಂತ್ಯ ಪದಗಳ ಮುಂದೆ ಸ್ವರ ಬಂದಾಗ, ಅಲ್ಲಿ ವಕಾರವು ಹುಟ್ಟುತ್ತದೆ ಅಂತ ಅನಿಸುವುದಿಲ್ಲವೇ? ನೀವು, 'ಮರುತ್ತರ' ಪದದ ಬಗ್ಗೆ ಹೇಳಿದಿರಿ. ಇದು 'ಮಾರುತ್ತರ' ಪದದ ತಪ್ಪು ಬಳಕೆ ಇರಬಹುದು ಅಂತ ನನಗೆ ಅನುಮಾನ.

ನನಗೆ ಸರಿ ಅನಿಸಿದ್ದನ್ನು ಹೇಳಿದ್ದೇನೆ. ನಾನು ಕನ್ನಡ ವ್ಯಾಕರಣ ಅಷ್ಟಾಗಿ ಅಭ್ಯಾಸ ಮಾಡಿದವನಲ್ಲ. ತಪ್ಪಿದ್ದರೆ ತಿಳಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2007 - 12:25pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ಕಿರು + ಎಲರ್ = ಕಿರುವೆಲರ್ (ಎಂದರೆ ಮಂದವಾಗಿ, ಮೆಲ್ಲನೆ ಬೀಸುವ ಗಾಳಿ)
ಇದು 'ಕಿರೆಲರ್' ಎಂದು ಆಗುವುದಿಲ್ಲ.
'ಕಿರು' ಎಂಬ ಪದ 'ಮರು' ಪದದಂತೆ ನಾಮಪದವಲ್ಲ. ಅದು ಗುಣವಾಚಕ. ಇದಕ್ಕೆ ಒಂದನೇ ವಿಭಕ್ತಿ ಪ್ರತ್ಯಯ ಸೇರಿಸುವುದಕ್ಕೆ ಆಗದು. 'ಕಿರುವು' ಎಂದು ಆಗುವುದಿಲ್ಲ. ಇದಕ್ಕೆ ಏನು ಹೇಳ್ತೀರಿ?

ಚನ್ನಾಗಿದೆ ಮಾದರಿ..

ಸಾರ್‍ ದಯವಿಟ್ಟು ಉ + ಉ ಇರುವ ಮಾಡದರಿ ಕೊಡಿ.

ಕಿರು + ಉಸಿರು = ?
ಕಿರು + ಉಂಕು =?

ಮತ್ತೆ ನಾಮ ಪದಗಳಲ್ಲಿ ಒಂದನೆ ವಿಭಕ್ತಿ ಸೇರಿಸುವುದರಿಂದ ವಕಾರ ಬುರುತ್ತದೆ ಎಂದು ಹೇಳಿದಿರಿ (ಮಗುವನ್ನು, ಮಡುವುಂಟು ಇಂತಹ ಪದಗಳಲ್ಲಿ). ಆದರೆ, ಉ ಪ್ರತ್ಯಯ ಸೇರಿದಾಗ ವಕಾರವಾದರೂ ಏಕೆ ಬರುತ್ತದೆ?
ಹಾಲು + ಉ = ಹಾಲು ಬಾನು + ಉ = ಬಾನು ಹಾಗೆಯೇ,
ಮಗು + ಉ = ಮಗು ಅಂತ ಏಕೆ ಆಗುವುದಿಲ್ಲ. ಮಗುವು ಅಂತ ಏಕೆ ಆಗುತ್ತದೆ? ಅಲ್ಲಿ ವಕಾರ ಏಕೆ ಬರುತ್ತೆ?

ಹಾ!! ಬೊಂಬಾಟ್ topic..

ಇಲ್ಲಿ ಹಾಲ್, ಬಾನ್ ಇವು ದಿಟವಾದ noun root.
ಹಾಲ್ + ಉ = ಹಾಲು
ಬಾನ್ + ಉ = ಬಾನು

ಆದರೆ ಮಗು ಇದರ root ಮಗ್ ಅಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2007 - 12:26pm — mahesha

ಉ: ಕನ್ನಡದಲ್ಲಿ ದೂರುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ತಿದ್ದುಪಡಿ
ಮಾಡದರಿ ಅಲ್ಲ ಮಾದರಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 4:23pm — ಸಂಗನಗೌಡ

ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

ಸಂಗನಗೌಡ's picture

ಎನ್ರಪಾ ಹುಡುಗರಾ, ನಿಮಗೂ ದೊಡ್ಡ ಮಂದಿ ಚಾಳಿ ಬಿತ್ತೇನು? ಮನಗಂಡ ಬಿರುಸಿಲೇ ಕಿತ್ತಾಡಾಕತ್ತೇರಿ!!

ಇರಲಿ, 'ಉಲಿ' ಬಗ್ಗೆ ನನಗೊಂದು ಡೌಟ್, ನಲಿ-ನಲಿವು, ಸುಳಿ-ಸುಳಿವು ಈ ಎರಡು ಮಾದರಿಗಳಲ್ಲಿ, 'ನಲಿ','ಸುಳಿ' ಇವು ಕೆಲಸಪದಗಳು, 'ನಲಿವು','ಸುಳಿವು' ಇವು ಹೆಸರುಪದ(Noun)ಗಳು. ಹಾಗೆಯೇ 'ಉಲಿ-ಉಲಿವು', ಉಲಿ ಇದು ಕೆಲಸಪದ. "ನಾನು ಹೀಗೆಂದು ಉಲಿದೆನು", "ಗಿಳಿ ಉಲಿಯಿತು" ಹೀಗೆ ಅದರ ಬಳಕೆ. "ನಾನು ಅಲ್ಲಿಗೆ ಹೋಗಿದ್ದೆ, ಮಂದಿಯ ಸುಳಿವೇ ಇರಲಿಲ್ಲ" ಇಲ್ಲಿ ಬರೀ "ಮಂದಿಯ ಸುಳಿ ಇರಲಿಲ್ಲ" ಅಂದರೆ ತಿಳಿಯುವದಿಲ್ಲ(ಅಭಾಸವಾಗುತ್ತೆ). ನಮ್ ಕಡೆ ಆಡುಮಾತಿನಲ್ಲಿ ಉಲಿವು(ಉಲು) ಬಳಕೆಯಲ್ಲಿದೆ.

ದೂರದ ಬಳಕೆ ಹೀಗಿದೆ,
ದೂರದ ಊರು - ದೂರದೂರು.
ದೂರದ ಉಲಿವು - ದೂರದುಲಿವು.

ದೂರ + ಉಲಿ ಈ ಸೇರಿಕೆಯಲ್ಲಿ ಎರಡೂ ಪದಗಳು ಇಡಿಯಾಗಿಲ್ಲ. ಅರರ್ಧ ಅದಾವ್ರಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 11, 2007 - 5:16pm — mahesha

ಉ: ಕನ್ನಡದಲ್ಲಿ ದೂರವುಲಿ ರಸೀದಿ ಪಡೆಯಿರಿ. ಅದಕ್ಕೆ ಒತ್ತಾಯ ಇರಲಿ!

mahesha's picture

ಸಂಗನ..

ಉಲಿ ಅಂದ್ರೆ ನಾಮಪದ/noun ಕೂಡ. 'ಬಾನುಲಿ'. ಇನ್ನೂ 'ದೂರ' ಇದು ಕೂಡ noun.

http://dsal.uchicago.edu/cgi-bin/philologic/getobject.pl?c.0:1:1001.burrow
Ka. uli (ulid-) to sound, cry, utter, speak, say; n. sound, cry, word;
ole a sound; (PBh.) to utter;
ulipa, ulipu, ulivu, uluvu a sound, cry.

ಇನ್ನು ನಿಮ್ಮ ಕಡೆಯ ಉಲಿವು ಇದು ಇದೇ.

ದೂರದ + ಉಲಿ "ದೂರದುಲಿ" ಇದು ಸರಿ.! ( ದೂರಕ್ಕೆ ಆರನೇ ವಿಬಕ್ತಿ ಹಾಕೀರಿ )
ಹಾಗೆ
ದೂರ + ಉಲಿ = ದೂರವುಲಿ ( ದೂರಕ್ಕೆ ಒಂದನೇ ವಿಬಕ್ತೀ ಹಾಕೀನಿ )
ದೂರ + ಒಂದು = ದೂರವೊಂದು

ದೂರ + ಉಲಿಯಲ್ಲಿ ಎರಡು ಪದಗಳು ಇಡಿಯಾಗಿ ಅವೆ.
=====================

ಇನ್ನು

ಎನ್ರಪಾ ಹುಡುಗರಾ, ನಿಮಗೂ ದೊಡ್ಡ ಮಂದಿ ಚಾಳಿ ಬಿತ್ತೇನು? ಮನಗಂಡ ಬಿರುಸಿಲೇ ಕಿತ್ತಾಡಾಕತ್ತೇರಿ!!

ನೀವೇ ಹೇಳಿದ ಹಂಗೆ ಇದು ಹುಡುಗರ ಕಿತ್ತಾಟ(ಕಿತ್ತಾಟದಂತ ಆಟ). Smiling. ಇದರಿಂದ ಏನ್ ಜೋರು ಕುತ್ತಿಲ್ಲ.
ಇನ್ನು ದೊಡ್ಡ ಚಾಳಿ ನಮ್ಗೆ ಬ್ಯಾಡಪ್ಪೋ!! Smiling

ಇರಲಿ ಬಿಡಪ್ಪೋ, 'ಆಭಾಸ'ದ ಕತೆ ಕೆಳಗೆ ಬರ್ದೀನಿ, ನೋಡ್ರಿ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡದಲ್ಲಿ ಮಾತಾಡಿ ಪ್ಲೀಸ್
  • ಜೋತ ನನ್ನಿ ಎನ್ನಿ!
  • fa ಮತ್ತು za
  • how much, hom many ಕನ್ನಡದಲ್ಲಿ....
  • ತಿಳಿವು ಮಾರ್ಪು-ಅರ್ಥಾಂತರ!
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಇಂಡಿಯದ ರಾಜ್ಯಗಳಲ್ಲಿ ಅಲ್ಲಿನ ಮೂಲನಿವಾಸಿಗಳಿಗೆ ನೆಮ್ಮದಿಯಿಲ್ಲ...?!
  • ಜಿಪುಣ ನನ್ನ ಗಂಡ
  • ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
  • ಓದಿದ್ದು ಕೇಳಿದ್ದು ನೋಡಿದ್ದು 42 ಮಾನಸಿಕ ಸ್ಥಿತಿ ಪರೀಕ್ಷಿಸಿ ಮಿಂಚಂಚೆ ಕಳುಹಿಸುವ ಗೂಗಲ್
  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:10pm
  • Deeparavishankar
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:01pm
  • savithasr
    ಉ: ಸ್ವಾತಂತ್ರ್ಯ ಮತ್ತು ಸ್ವರಾಜ್ಯ
    October 8, 2008 - 2:51pm
  • mahesha
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:37pm
  • venkatesh
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:17pm
  • girish.rajanal
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:08pm
  • Deeparavishankar
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 8, 2008 - 1:59pm
  • venkatesh
    ಉ: ವಿಮಾನದಿಂದ ಕೆಳಗೆ ಕಾಣುವ ಚಿತ್ರ !
    October 8, 2008 - 1:55pm
  • Deeparavishankar
    ಉ: ನನ್ನ ಮನಸ್ಸಿನ ಅಜ್ಞಾನ
    October 8, 2008 - 1:55pm
  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 113 ಅತಿಥಿಗಳು ಆನ್ಲೈನ್ ಇರುವರು.

ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator