ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › mahesha ರವರ ಬ್ಲಾಗ್

ಏನ್-ಗುರು ಮತ್ತು ಹರಿಹರಪುರದ ಸ್ವಾಮೀಜಿ ಮತ್ತು ಕಣ್ಣು ನೋವು

July 7, 2008 - 9:47am — mahesha

ಹೋದ ವಾರದ ಕೊನೆಯ ಕತೆ ಇದು...

ಇಡೀ ಶನಿವಾರ ಚಿಕ್ಕಚಿಕ್ಕ ಓಣಿಗಳು ಚಿಕ್ಕಪೇಟೆಯ ಚಿಕ್ಕಚಿಕ್ಕ ಅಂಗಡಿಯಲ್ಲಿ ದೊಡ್ಡ ದೊಡ್ಡ ಕರೀದಿ-ದಿನ. ಮೊದಲ ಸರತಿ ಸೀರೆ-ಗೀರೆ ಆಯ್ಕೆಗೆ ಹೋದುದು.. ನನಗೆ ತಲೆಕೆಟ್ಟು ಹೋಯ್ತು.. ಅದೇನ್ ಹೆಂಗಸರಪ್ಪ!!.. ಈ ಬಣ್ಣದ ಸೀರೇಲಿ ತಾನ್ ಕಪ್ಪಗೆ ಕಾಣ್ತೀನ ಬೆಳ್ಳಗೆ ಕಾಣ್ತೀನ; ಬಣ್ಣ ಹಿಡಿಸಿದರೆ ಅಂಚು ಹಿಡಿಸಲ್ಲ, ಅಂಚು ಹಿಡಿಸಿದರೆ ಸೆರಗು ಹಿಡಿಸಲ್ಲ, ಸೆರಗು ಹಿಡಿಸಿದರೆ ಬೆಲೆ ಹಿಡಿಸಲ್ಲ.!! Smiling ಅದಕ್ಕೆ ನಾನೇ ನನ್ನ ಕಯ್ಯಲ್ಲಿ ಆದ ಮಟ್ಟಿಗೆ ಒಂದು ಆಯ್ಕೆ ಕಡಮೆ ಮಾಡಣ ಎಂದು "ಬೆಲೆ ಬಗ್ಗೆ ತೆಲೆಕೆಡಿಸಿಕೊಳ್ಳಬೇಡಿ, ಕಾರ್ಡು ಉಜ್ಚೋದು ಹೇಗಿದ್ರೂ ನಾನೇ ತಾನೇ" ಎಂದೆ Smiling.

"ಸೀರೆ ಸೀರೆ ಸೀರೆ
ಎಲ್ಲೆಲ್ಲೋ ಹಾರ್‍ಯ್ತೆ
ಸೂರೆ ಸೂರೆ ಸೂರೆ
ಮನಸೂರೆ ಮಾಡಯ್ತೆ" ಎಂಬ ಹಾಡು ನೆನೆಪಾಯ್ತು.. ಈ ಹಾಡು ನನಗೆ ಎಶ್ಟು ಇಶ್ಟ ಅಂತ ಆಗಲೇ ಅರಿವಾದುದು.. Smiling

ಪಾಪಾ ನಮ್ಮ ಹುಡುಗೀಗೆ ಸೀರೆ ಆರಿಸಕ್ಕೂ ಬರಲ್ಲ ಅಂತ ಆಗಲೇ ಗೊತ್ತಾದುದು.. ಎಲ್ಲಾದಕ್ಕೂ ನನ್ನೇ ಇದು ಚನ್ನೇ ಇದು ನೀಟೇ ಎಂದು ಕೇಳೋದೇ!! ನಾನ್ ಯಾವೊತ್ತು ಸೀರೆ ಆರಿಸಿದ್ದೇ? Smiling ನಾನ್ ನಮ್ಮಮ್ಮ ಕಡೆ ನೋಡಿ, ಅವರ ಸನ್ನೆಗೆ ತಕ್ಕಂತೆ "ಸೂಪರ್‍, ಬೊಂಬಾಟ್, ಕೊಂಗರ್‍ ಕಲರ್‍, ವ್ಯಾ" ಎಂದು ಹೇಳ್ತಾ ಹೋದೆ.. ನಮ್ಮಮ್ಮ ಸೂಪರ್‍.. ಎಶ್ಟೇ ಆದರೂ ಕಡಮೆ ಅಂದರೂ ೩೦-೩೫ ವರುಶದಿಂದ ಸೀರೇ ಆರಿಸಿ ಅನುಬವ Smiling.

ಕೊನೆಗೂ ಅದೇನೇನ್ ತಗೊಂಡರೋ ನನಗೆ ನೆನೆಪೇ ಇಲ್ಲ.. ದಾರಿಯುದ್ದಕ್ಕೂ ಆ ಸೀರೆ ಚನ್ನಾಗಿದೆ ಅಲ್ವ, ಆದು ಜೋರಾಗಿದೆ ಅಲ್ವ ಅಂದರೆ ನಾನ್ ಏನ್ ಹೇಳಲಿ..

ನಂಗೆ ಸಾಕಾಯ್ತು.. ನಾನ್ ಅಮ್ಮಂಗೆ ಮುಂದಿನ ಸರತಿ ಸೀರೆ-ಗೀರೆ ತರಕ್ಕೆ ನಾನ್ ಬರಲ್ಲ ಅಂದೆ. ಅದಕ್ಕೆ ನಮ್ಮಮ್ಮ.. ನಗ್ತಾ "ಹವುದಪ್ಪ.. ಈಗ ಎಲ್ಲ ಹೀಗೇ ಹೇಳ್ತಾರೆ.. ಆಮೇಲೆ ಹೆಂಡತಿ ಜೊತೆ ಬಾನವಾರ ಶನಿವಾರ ಎಲ್ಲ ಸೀರೆ ಅಂಗಡೀಲೇ ಇರ್ತಾರೆ" ಅಂದರು.. Smiling

ಹಿಂಗೆ ಎರಡು ಮೂರು ಅಂಗಡೀಲಿ ಎರಡು ಮೂರು ತೆರ ಸೀರೆ ಕೊಂಡುಕೊಂಡು ಮುಗಿಸೋ ಹೊತ್ತಿಗೆ ಸಂಜೆಯಾಯ್ತು.. ನನ್ ಬಾಳಲ್ಲಿ ನಾನ್ ಮಾಡಿದ ಮೊದಲ ಉದ್ದದ್ದ ಶಾಪಿಂಗು. Smiling

ನಮ್ಮಮ್ಮನ ಮುಂದೇನೇ ನಮ್ಮ ಹುಡುಗಿ "ನಾಳೆ ಬಡಗುನಾಡು ಬವನದಲ್ಲಿ ಹರಿಹರಪುರದ ಸ್ವಾಮೀಜಿ ಬರ್ತಾರೆ... ನಾವೆಲ್ಲ ಹೋಗ್ತೀವಿ ನೀವು ಬನ್ರೀ" ಎಂದು ಅನ್ನೋದೇ.. ಇದಕ್ಕೆ ನಮ್ಮಮ್ಮ "ಹೋಗೋ, ಸ್ವಾಮೀಜಿ ಹತ್ರ ಪಲಮಂತ್ರಾಕ್ಶತೆ ತಕ್ಕೋ, ಒಳ್ಳೇದು" ಅಂದರು. ನಾನ್ ಬಾನುವಾರ ಬೆಳಗ್ಗೆ ಏನ್-ಗುರು ಮೀಟಿಂಗ್ಗೆ ಹೋಗಿ, ಆಮೇಲೆ ಕಣ್ಣು ತೋರಿಸಿಕೊಂಡು, ಸಂಜೆ ಮೇಲೆ ಯಾವುದಾದರೂ ಸಿನಿಮ ನೋಡಣ ಅಂತ ಇದ್ರೆ........................ ಸರಿ ಇನ್ನೇನು ಮಾಡೋದು.. "ಆಯ್ತು.. ಊಟ ಇರತ್ತಲ್ಲ" ಅಂದೆ. Smiling

ಮನೆಗೆ ಬಂದಾಗ ಎಡಗಣ್ಣು ಕೆಂಪಗಾಗಿ ಉರಿತಾ ಇತ್ತು.. ಡಾಕ್ಟರು ಕೊಟ್ಟ ಹನಿಮದ್ದನ್ನು ಹಾಕಿಕೊಂಡು, ತಣ್ಣಗಾಗಿಸಿಕೊಂಡೆ.

ಬಾನುವಾರ ಏನ್-ಗುರು ಮೀಟಿಂಗ್ಗೆ ಹೊರಟೆ ಬಸ್ಸಲ್ಲಿ.. ಕಾರ್‍ ಓಡಿಸಕ್ಕೆ ಆಗಲ್ಲ.. ಕಣ್ಣುರಿ. ವಿದ್ಯಾರಣ್ಯಪುರದಿಂದ ಕೆ.ಆರ್‍.ಮಾರ್ಕೆಟಿಗೆ ಬಸ್ಸಲ್ಲಿ ಬಂದು ಅಲ್ಲಿಂದ ಮೀಟಿಂಗ್ ಜಾಗ ಬಿ.ಎಂ.ಶ್ರೀ ಸಬಾಂಗಣಕ್ಕೆ ಆಟೋ. ಆಟೋದೋನು ಯಾರೋ ತಮಿಳ. ಅದೇನೋ ಪಳನಿವೇಲ್ ಅಂತ ಹೆಸರು.. ಅವನಿಗೆ ನಾನ್ ಮಾತಾಡಿದ್ದೇ ತಿಳೀತಾ ಇಲ್ಲ.. ಎಲ್ಲೆಲ್ಲೋ ಸುತ್ತಾಡಿಸಿಕೊಂಡು ಹೋದ.. ನಾನ್ ಹಾಳಾಗಿ ಹೋಗಲಿ ಎಂದು "ಕನ್ನಡಾನೇ ಬರಲ್ಲ.. ನಿಮಗೆ" ಎಂದು ಹೇಳಿ ದುಡ್ಡುಕೊಟ್ಟು ಇಳಿದೆ.

ಏನ್-ಗುರು ಮೀಟಿಂಗ್ಗೆ ನಾನು ಹೋಗಲು ಓಸುಗರ ನಮ್ಮ ಒಬ್ಬ ಗೆಳೆಯರು ನನಗೆ ಒಂದು ಮಿಂಚೆಯನ್ನ ಎಸಗಿ ಬರಕ್ಕೆ ಹೇಳಿದುದು. ಅಲ್ಲಿ ಕೆಲವು ಮಂದಿಯ ’ಬಿಟ್ಟಿ ಸ್ಕೋಪ್’ ನೋಡಿ ನಗು ಬಂದುದಂತೂ ದಿಟ.. ನಾನೇನು ಮಾತಾಡಿಲ್ಲಪ್ಪ... Smiling.. !!

ಅವರು ’ಕನ್ನಡ-ಕನ್ನಡಿಗ-ಕರ್ನಾಟಕ’ ಅಂತೆಲ್ಲ ಏನೇನೋ ಹೇಳಿದರು.. ನಾನು ಮನದಲ್ಲಿ ನನ್ನ ಡೆಪೆನಿಶನ್ನುಗಳನ್ನು ನೆನೆಸಿಕೊಂಡೆ

ಕನ್ನಡ - ಬರೀ ಕನ್ನಡದ ಒರೆಗಳಿರುವ, ಕನ್ನಡ ಮಂದಿ, ಕನ್ನಡ ನೆಲದಿಂದ ಬಂದ ಒರೆಗಳಿರುವ ನುಡಿ.. ಅದು ಒಂದು "ಪುರಾತನ, ಶ್ರೇಷ್ಠ, ಭಾಷೆ"ಯಲ್ಲ.. ಅದು ಒಂದು "ಹಳೆಯ, ಹರಿ"ನುಡಿ. Smiling

ಕನ್ನಡಿಗ - ಯಾರ ತಾಯ್ನುಡಿಕನ್ನಡವಾಗಿದ್ದು, ಯಾರು ಕನ್ನಡಬುಡಕಟ್ಟಿನವರು ಬರೀ ಅವರು. ( ನಮ್ಮ ನಾಡಿಗೆ ಯಾ ಯಾ ಕಾಲದಲ್ಲಿ ಬಂದು ನೆಲೆಸಿದ ಬೇರೆ ಯಾವ ನುಡಿ-ಮನೆಮಾತಿನ ಮಂದಿ ಎಂದು ಕನ್ನಡ ಬುಡಕಟ್ಟಲ್ಲ )

ಕರ್ನಾಟಕ - ಕನ್ನಡ ಬುಡಕಟ್ಟಿನ ಬೇರುನೆಲಗಳು ( ಬಡಗ ಕನ್ನಡಬುಡಕಟ್ಟಿನ ನೀಲಗಿರಿ ಬೆಟ್ಟಗಳು ಮುಂತಾದವು..)

ಹೀಗೆ.. ಇವು ನನ್ನ ನಿಲುವು, ನಂಬಿಕೆಗಳು.. ಇದಕ್ಕೆ ಆಚೆ ಇಚೆ ಏನು ಹೇಳಿದರು ಅದಕ್ಕೆ ಒಪ್ಪಿಗೆಯಂತೂ ಇಲ್ಲ.

ಸರಿ ಮೀಟಿಂಗ್ ಮುಗಿಯಿತು. ನಮ್ಮ ವಯ್ಬವ ಬರತರು ನನ್ನ ’ಕವಿರಾಜಮಾರ್ಗ’ವನ್ನು ಮರಳಿಸಿದರು. ನಾವು ಅಲ್ಲೇ ಕಾಮತ್ ಹೊಟೆಲಲ್ಲಿ ಹಾಲುಕುಡಿದು ಬೇರೆಯಾದೆವು.

ಅಲ್ಲಿಂದ ನನ್ನ ಗೆಳೆಯ ಅರುಣನ ಬಯ್ಕೆ ಸವಾರಿ ಸವಿಯುತ್ತಾ ಮಲ್ಲೇಶ್ವರದ ’ಬಡಗು ನಾಡು ಬವನ’ಕ್ಕೆ ಹೋದುದು. ಅಲ್ಲಿ ಸ್ವಾಮೀಜಿಗೆ ತಲೆಬಾಗಿದಕ್ಕೆ ಬಾಳೆಹಣ್ಣು ಸಿಕ್ಕಿತು. ಬರ್ಜರಿ ಊಟ ಇತ್ತು.. ಎಂತಹ ಊಟ.. ಅಬ್ಬಬ್ಬ.. ಆ ಪುಳಿಯೊಗರೆಯೋ, ಹುಳಿಯೋ, ಜಿಲೇಬಿಯೋ. ಸಕ್ಕತ್..

ಊಟ ಮುಗಿಸಿದ ಕೂಡಲೆ ಜಯನಗರದಿಂದ ನನ್ನ ಕಸಿನ್ನು "ನೀವುಬ್ರೂ ಮನಗೆ ಬನ್ನೀ ಈಗ, ಏನ್ ಮಾಡ್ತೀರ" ಎಂದು ಪೋನ್ ಮಾಡಿದಳು. ಅವರ ಮನೆಗೆ ಹೋಗಿ ಮತ್ತೆ ನಮ್ಮ ವಿದ್ಯಾರಣ್ಯಕ್ಕೆ ಬರುವಶ್ಟರಲ್ಲಿ ಇರುಳು ಒಂಬತ್ತು..

ಇವೊತ್ತಾದ್ರೂ ಬಿಡುವ ಮಾಡಿಕೊಂಡು ಹೋಗಿ ಕಣ್ಣು ತೋರಿಸಬೇಕು.. ನೋಡಣ.!!

  • ವಾರದ ಕೊನೆ ಕತೆ
~.~
  • mahesha ರವರ ಬ್ಲಾಗ್
  • Login or register to post comments
  • 168 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಬೋರು ಹೊಡೆಸೋ ’ಮುಸ್ಸಂಜೆ ಮಾತು’... ಕಾಲಿ ಕಾಲಿ!!
  • ನನ್ನ ವೋಟು.
  • ಮಂದಿರೆಯ ಸೀರೆ!
  • ಅರಮನೆ - ಮನೆಮಂದಿ ಜೊತೆ
  • ವೋಲ್ವೋ ಇಲ್ಲದ ಹೆಬ್ಬಾಳ
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಾಯ್ಸ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
  • ...ನಮ್ಮ ತಿಪ್ಪಾರಳ್ಳಿ ಬಲು ದೂರ, ನಡಿಯಕೆ ಬಲು ದೂರ!
  • ಓದಿದ್ದು ಕೇಳಿದ್ದು ನೋಡಿದ್ದು-10
  • ಮೊದಲ ಚಿತ್ರ
  • ಬಿಗುಮಾನದ ಚಿತ್ರಗಳು
  • ಬರಾಕ್ ಒಬಾಮ ಮತ್ತು ಜಾನ್ ಮೆಕೈನ್: ಯಾರು ಸರಿ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
  • yuvapremi
    ಉ: Splendours of Royal Mysore
    September 6, 2008 - 10:19pm
  • yuvapremi
    ಉ: ಮೊದಲ ಚಿತ್ರ
    September 6, 2008 - 10:11pm
  • ASHOKKUMAR
    ಉ: ಹಬ್ಬ ತಂದ ನೆನಪು...
    September 6, 2008 - 9:59pm
  • uniquesupri
    ಉ: ಜೀವ ಕಾಯುವುದೇತಕೆ?
    September 6, 2008 - 9:30pm
  • cmariejoseph
    ಉ: ಹಬ್ಬ ತಂದ ನೆನಪು...
    September 6, 2008 - 9:16pm
  • cmariejoseph
    ಉ: ಚಂದಿರನ ನೋಡಿದವ
    September 6, 2008 - 9:01pm
  • cmariejoseph
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:54pm
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 6, 2008 - 8:13pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 156 ಅತಿಥಿಗಳು ಆನ್ಲೈನ್ ಇರುವರು.


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator