ಜೋತ ನನ್ನಿ ಎನ್ನಿ!
ಇಂದು ಬೆಳಿಗ್ಗೆ ಆಪೀಸಿಗೆ ಬಂದು ನನಗೆ ಗುರುಸಮರಾದ ಗೆಳೆಯರಾದ ಕಿರಣ್ ಬಿ.ಆರ್ ಅವರ ಕೂಟ ಚಾಟುತ್ತಿದ್ದೆ...
ನಾವ್ ಹಲವ್ ನಾಳ್ಗಳಿಂದ ಕನ್ನಡದಲ್ಲಿ ’ನಮಸ್ತೆ/ನಮಸ್ಕಾರ’ ಎನ್ವುದಕ್ಕೆ ಸಮ ಒರೆಯನ್ನ ಆರಯ್ತಿದ್ವಿ.... ತುೞಿಲು, ತೋಳು, ಕುಂಬಿಡು.. ಮುಂತಾದ ಹಿರಿಗನ್ನಡ ಒರೆಗಳು ಬಂದು ತ್ಯಾಂಕ್ಸ್‌ಗೆ ’ನನ್ನಿ’ ನಿಂತಂತೆ ನಿಲ್ಲದೇ ಹೋದವು.....
ಅವರ ಪುಟ್ಟಮಗುವಿಗೆ ಈಗೀಗ ಮಾತು ಬರಲು ತೊಡಗಿದೆ.. ಅದರ ಅಮ್ಮ ಅದಕ್ಕೆ ’ಮಾಮಿ ಜೋತ ಮಾಡು’ ಅನ್ನೋದನ್ನ ಗಮನಿಸಿದ ಇವರು.. ಕನ್ನಡದಲ್ಲಿ ’ಜೋತ’ ಎನ್ವುದೇ ’ನಮಸ್ಕಾರ’ಕ್ಕೆ ಹೆಚ್ಚು ಒಪ್ಪುವ ಒರೆ. ಯಾಕೆಂದ್ರೆ, ನಮ್ಮಂದಿರೆಲ್ಲ ನಮಗೆ ’ಮಾಮಿ ಜೋತ’, ’ಮಂಮ್’ ಮಾಡಿಸಿರ್ತಾರೆ....
ನಿನ್ಮುಂದೆ ನಾವ್ ’ಜೋತ’ ಮತ್ತು ’ನನ್ನಿ’ ಬೞಸಲ್ ತೀರ್ಮಾನಿಸಿದ್ದೀವಿ.
ಕನ್ನಡದಲ್ಲಿ ದೇವರು = ಮಾಮಿ... ಮಮ್ಮು = ಪುಡ್.. ಇವನ್ನೂ ಬೞಸಬೋದಲ್ಲ..!!

- mahesha ರವರ ಬ್ಲಾಗ್
- Login or register to post comments
- 232 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: