ನನ್ನ ವೋಟು.
ನಮ್ ಪಜೀತಿ ದೇಶದಾಗೆ, ಎಲ್ಲಾದರಲ್ಲೂ ಎಡವಟ್ಟೋ ಎಡವಟ್ಟು.
ಮೊಂನೆ ಎಲೆಕ್ಕಶಂನಾಗೆ ವೋಟು ಹಾಕಕ್ಕೆ ಅಂತ ಗುರುತಿನ ಚೀಟಿ ಮಾಡಿಸಕ್ಕೆ ನಂಮೂರಿಗೆ ವೋದೆ. ನನ್ ತಂಮ ’ಅಂಣ ನಾನ್ ವೋಗಿ ನೋಡ್ ಬತ್ತೀನಿ, ನೀನ್ ಮನೆಲೇ ಇರು’ ಅಂದು ವೋದ. ಅವನು ಇದು ಮೊದಲನೇ ಸಲ ವೋಟು ಹಾಕಕ್ಕೆ ಇರೋದು.
ಹೋಗಿ ಬಂದು ಯೇಳ್ತಾನೆ... "ಅಂಣ ವೋಟಿನ್ ಲಿಸಿಟ್ಟನಲ್ಲಿ ನನ್ ಒಬ್ಬನದೇ ಯೆಸರು ಇರೋದು... ನಿಂದು, ಅಪ್ಪಂದು ಅಂಮಂದು ಯೆಸರೇ ಇಲ್ಲ.. ನನ್ ಯೆಸರಂನೂ ತಪ್ ತಪ್ಪ ಬರೆದವರೆ ನೋಡು" ಎಂದು ಗುರುತಿನ ಚೀಟಿ ತೋರಿಸಿದ.
ನನ್ ಗೆಳೆಯನ ಗುರುತಿನ ಚೀಟಿಯಾಗೆ ಲಿಂಗ = ಹೆಂಗಸು ಅಂತ ಆಗದೆ. ಅವನು ವೋಗಿ ’ಏನರೀ ಯಿಂಗಾ ಮಾಡದು.... ನಾನ್ ಈ ಚೀಟಿ ತೋರಿಸಿಕಂಡು ಯೆಂಗೆ ತಿರುಗಾಡಲಿ" ಅಂದನಂತೆ.. ಅದಕ್ಕೆ ಆ ಆಪೀಸರರು "ರೀ ಒಂದ್ ಅರಜಿ ಬರೆದು ಕೊಡಿ, ಒಂದು ತಿಂಗಳ ಒಳಗೆ ಸರಿಪಡಿಸಿತೀವಿ" ಅಂದರಂತೆ..
ಸರಿ ಇತ್ತ ನಾನು ನಮ್ ಅಪ್ಪಂಗೆ "ಅಪ್ಪೋ ಇದೇನ್ ಇದು.. ನಾನ್ ಯೆಂಗ್ ವೋಟ್ ಆಕಲಿ.. ಈ ದಪ" ಅಂದೆ.. ಅದಕ್ಕೆ ನಮ್ ತಂದೆ "ಲೇ, ಏನ್ ಆಗಕ್ಕಿಲ್ಲ ಸುಮ್ಮಕಿರು.. ವೋಟುಗಟ್ಟೆಗೆ ವೋದಾಗ ನಾನ್ ಯೇಳಿ ಆಕಸುತೀನಿ.." ಅಂದರು... ಅದೂ ದಿಟವೇ ಕಳೆದ ಸಲವೂ ನಾನ್ ನಮ್ ಅಪ್ಪನ ಜೊತೆ ವೋಗೇ ವೋಟಾಗಿದ್ದೂ.. ಅವರೊಂದು ಪಕಶಕ್ಕೆ ನಾನೊಂದು ಪಕಶಕ್ಕೆ, ನಮ್ ಅಂಮ ಇಂನೊಂದ ಪಕಶಕ್ಕೆ
... ಆದರೆ ಗೆದ್ದುದು ನಾನ್ ವೋಟು ಆಕಿದೋರೇ! ![]()
ಈ ಸರತಿ.. ಯಾರಿಗೆ ವೋಟು ಆಕೋದು.. ಅಂನೋದು ನಂಗೆ ತಲೆ ನೋವು. ಬೀಜೀಪಿಗಂತೂ ಎಂದೂ ಆಕಕ್ಕಿಲ್ಲ.. ಮೊದಲೇ ತಮಿೞಂಮ ಜಯಜಯಲಲಿತಾ ಜೊತೆ ಸೇರಿದ್ದೋರು, ಯೇಳಕ್ಕಾಗಲ್ಲ ಮುಂದೂ ಸೇರಿಕಳ್ಳೊರು... ಮುಂದಿನ ಎಂಪಿ ಎಲೆಕ್ಕಶನ್ನಾಗೆ, ಜಯಲಲಿತಾ ಬೆಂಬಲದಿಂದ ಇವರು ಪಟ್ಟಕ್ಕೆ ಬಂದರೇ, ನಾವ್ ಗೋತಾ! ಅವರು ಕೋಮುವಾದಿ, ಆ ವಾದಿ, ಈ ವಾದಿ, ಇವೆಲ್ಲ ನಂಗೆ ಬೇಕಾಗಿಲ್ಲ.. ನಮ್ ಊರಾಗೆ ಈ ಪಕಶದಿಂದ ನಿಂತಿರೋ ವಯ್ಯನ ಯೆಸರೇ ಹಲವರು ಕೇಳೇ ಇಲ್ಲವಂತೇ!
ಇಂನು ಕಾಂಗರೆಸ್ಸು.. ಇವರಿಗೆ ಆಕಬೋದು... ಎಸ್.ಎಂ.ಕಿರಿಶಣ ಮತ್ತೆ ವಾಪಸ್ ಬಂದಿರೋದರಿಂದ ನಮ್ ಊರೋನೇ ಆಗಿರೋದರಿಂದ, ಕಾಂಗರೆಸ್ಸು ಬಂದರೆ, ನಮ್ ಊರಿಗೆ ಒಳ್ಳೇ ದುಡ್ಡು ಬತ್ತದೆ. ಆದರೂ.. ಇವರೂ ತಮಿಳಪ್ಪ ಕರುಣಾನಿದಿ ತಾಳಕ್ಕೆ ಕುಣಿಯೋ ಆಸಾಮಿಗಳೇ.. ಅಲ್ವ..! ಅದರೂ ಇವರು ತುಸು ವಾಸಿ.
ಇಂನು ನಮ್ ತೆನೆವೊತ್ತೆ ಹೆಂಗಸಿನ ಪಕಶ ಜಾತಿಇಲ್ಲದ ಗವುಡರ ದಳ. ಇದಕ್ಕೂ ಆಕಬೋದು... ಚಲುವರಾಯಸಾಮಿ ಚಂನಾಗೇ ರೋಡು ಗೀಡು ಮಾಡವರೆ.... ಆದರೂ.. ಇವರಿಗೆ ನಮ್ ಈ ಸಲ ಪುಲ್ ಮೆಜಾರಿಟಿ ಬತ್ತದಾ ಅಂತ ಅಯಿಬು...!!
ಇಂನು ಮಿಕ್ಕ ಆನೆ, ಸಯಿಕಲ್ಲು ಮುಂತಾದ ಪಕಶಗಳು .. ನೋಡಣ...
ಏನೇ ಆದರೂ, ಕಳೆದ ಸರತಿ ಅಂತ ಮತ್ತೆ ಎಡವಟ್ಟಿನ ಅಸೆಂಬಲಿ ಬಂದು, ಮತ್ತೆ ಸಂಮಿಶರ ಗಿಂಮಿಶರ ಅಂತ ಕಯ್ ಹಿಡಿದು, ಆಮೇಲೆ ಕಾಲ್ ಎಳೆಯೋದೆಲ್ಲ ಚಂದಾಕಿರಕ್ಕಿಲ್ಲ.. ಒಂದು ಪಕಶ ಬಂದು ಅಯಿದು ವರುಶ ಇರಲಪ್ಪ.. ದೇವ!
ಯಾರಿಗೆ ಬೇಕು ಈ ಹಾಳು ಎಲೆಕ್ಕಶನ್ ಗಲಾಟೆ!

- mahesha ರವರ ಬ್ಲಾಗ್
- Login or register to post comments
- 246 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ನನ್ನ ವೋಟು.
ಮಾಯ್ಸ,
ಕೆಲವು ಸಂಗತಿಗಳು
--> ಕೆಲವು ದಿನಗಳ ಹಿಂದೆ ಡೆಕನ್ ಹೆರಾಲ್ಡಿನಲ್ಲಿ ಓದಿದ್ದೆ. ಈ ಜೆಡಿಎಸ್ಸಿನವರು ಬೆಂಗಳೂರಿನ ಈಜಿಪುರದಲ್ಲಿ ತಮಿಳಿನಲ್ಲಿ ಚುನಾವಣೆಯ ಪ್ರಚಾರ ಮಾಡಿದ್ದಾರೆಂದು ವರದಿಯಾಗಿದೆ.
--> ಈಗತಾನೆ ಟಿವಿ-೯ ನೋಡುತ್ತಿದ್ದೆ. ಚಿಕ್ಕಬಳ್ಳಾಪುರದ 'ಬಾಗೇಪಲ್ಲಿ'ಯ ಚುನಾವಣ ಪ್ರಾಚಾರ ಕೂಟದಲ್ಲಿ ಬಿಜೆಪಿಯವರು (ವೆಂಕಯ್ಯನಾಯ್ಡು, ಸಾಯಿಕುಮಾರ್) ತೆಲುಗಿನಲ್ಲಿ ಬಾಶಣ ಮಾಡುವುದನ್ನ ಟಿವಿ-೯ ರವರು ವಿಡಿಯೊ ಸಮೇತ ತೋರಿಸಿದರು.
ಇನ್ನು ಕಾಂಗ್ರೆಸ್ ನ ದರಮ್ ಸಿಂಗ್ ಕನ್ನಡಕ್ಕಿಂತ ಉರ್ದು/ಹಿಂದಿಯ ಬಕುತ. ಇನ್ನು ಇವ್ರಿಂದ ಕನ್ನಡ ಏಳಿಗೆಯಾಗುತ್ತಾ???
ಯಾರಗಪ್ಪ ವೋಟ್ ಹಾಕೋದು.?? ಕನ್ನಡಕ್ಕೆ ದುಡಿಯುವ ಪಕುಶಗಳನ್ನು ಹುಡ್ಕುದ್ರು ಸಿಗ್ತಾಯಿಲ್ಲ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು