ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
http://www.thegreatdebatersmovie.com/
ತಿರುಳು:
೧೯೩೫ರ ಸುತ್ತುಮುತ್ತದ ಹೊತ್ತಿನಲ್ಲಿ ಒಕ್ಕಟ್ಟಿನ-ಅಮೆರಿಕೆಯ-ನೆಲಗಳು ಎಂಬ ದೇಶದಲ್ಲಿ ನೀಗ್ರೋಗಳ ಮೇಲೆ ಬಿಳಿಯರ ದಬ್ಬಾಳಿಕೆಯ ಪಾಡಿನ ಕತೆ.
ಟೆಕ್ಸಸ್ ನೆಲದ ನೀಗ್ರೋಗಳ ಕಾಲೇಜಿನ ಒಬ್ಬ ಪ್ರೊಪೇಸರನು ಒಂದು ಡಿಬೇಟ್-ಟೀಮ್ಮಿಂದ ತಮ್ಮ ಹಕ್ಕುಗಳಿಗೆ ಹೋರಾಡುವನು.
ಟೆಕ್ಸಸ್ ಅಲ್ಲಿ ಗುಲಾಮರಾದ ನೀಗ್ರೋಗಳನ್ನು ತಪ್ಪು ಮಾಡಿದಕ್ಕೆ ಉರುಳುಹಾಕಿ ಸುಡುವ ಅಲುವಾಟವಿತ್ತು.
ಯಾವುದೇ ಜನಾಂಗ ತನಗೆ ಈಗ ಆಗುತ್ತಿರುವ ಅನ್ಯಾಯಕ್ಕೆ ಹೋರಾಡಲೂ ಕಾಯಬಾರದು. ಅನ್ಯಾಯದ ಎದುರು ಹೋರಾಡಕ್ಕೆ ಯಾವಾಗಲೂ ಯಾವಾಗಲೂ ಸರಿಯಾದ ತಕ್ಕ ಹೊತ್ತೇ.... ನ್ಯಾಯವು ಬೇರೆ ಯಾರೋ ಕೊಡುವುದಲ್ಲ... ನಾವು ನಮ್ ತಕ್ಕುಮೆಯಿಂದ ಪಡೆಯುವಂತದ್ದು...
ಚನ್ನಾಗಿರುವ ಸಂಗತಿ:
ಡಯ್ಲಾಗುಗಳು, ಅದರ ತಿರುಳು
ನಾನು ನೋಡಿ ದಿಟ್ಟಿಕೋನ: ನೀಗ್ರೋಗಳ ಜಾಗದಲ್ಲಿಂದು ಅತಿಅನ್ಯಾಯ ಅನುಬವಿಸುತ್ತಿರುವ ಕನ್ನಡಿಗರನ್ನು ಇಟ್ಟು. ಎಲ್ಲ ಹೋರಾಟಕ್ಕೆ ಈಗ ಕಾಲವಲ್ಲ ಎಂದು ಮುಂದೂಡ ಸೋಮಾರಿಗಳನ್ನು ಇಟ್ಟು.
ನೀವು ಹೀಗೆ ನೋಡಿ, ಆ ಪಾಡೇ ನಮ್ಮ ಪಾಡು.. [ ನೇರ ಬಂದು ಸುಡುತ್ತಿಲ್ಲ.. ಅಶ್ಟು ಅತಿಯಾಗಿಲ್ಲ ಅಂತ ಕೆಲವರು ಬಂದು ಹೇಳಬೋದು.. ಅವರು ಯಾವಗಲೂ ಹಾಗೇ ತಾನೆ..
. ತಮ್ಮ ಮನೆಯ ಅಡುಗೆ ಮನೆಯಲ್ಲಿ ಮೂರು ಹೊತ್ತು ಕೂತು, ಬೀದಿಯಲ್ಲಿ ನೀರಿಗೆ ನೆಲಕ್ಕಾಗಿ ಕುದಿಬೆವರು ಸುರಿಸಿ ಕಲ್ಲುಹೊಡೆದು ಪೋಲಿಸರ ಏಟು ಸವಿಯುವ ಹೋರಾಟಗಾರರನ್ನು ಅನಾಗರಿಕ ಕಚಡಗಳು ಅನ್ನುವ ಸಭ್ಯಸ್ಥರು ]

- mahesha ರವರ ಬ್ಲಾಗ್
- Login or register to post comments
- 502 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಈ ಸಭ್ಯಸ್ತರ ಕತೆ ಕಟ್ಟಿಕೊಂಡರೆ ಅಷ್ಟೇ , ನಿಮ್ಮ ತಾಯಿನುಡಿಯ ಪ್ರೇಮ ನನ್ನನ್ನು ಮೂಕನಾಗಿಸಿದೆ .
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ನನ್ನ ತಾಯಿನಾಡು ಕನ್ನಡ.. [ಯಾಕೆ ಅಂದರೆ ನಮ್ ಅಮ್ಮಂಗೆ ಬರೋದು ಕನ್ನಡವೊಂದೇ]
ಅದು ಬಾರತ ಜನನಿಯ ತನುಜಾತೆ ಅಲ್ಲ.. [ ಯಾಕೆ ಅಂದ್ರೆ ನಮ್ಮ ಅಮ್ಮಂಗೆ ಸಂಸ್ಕೃತವಾಗಲಿ ಅದರಿಂದ ಬಂದ ಹಿಂದಿ, ಸಿಂದಿಯಾಗಲಿ ಬರಲ್ಲ... ಕನ್ನಡ ಸಂಸ್ಕೃತದಿಂದ ಬಂದಿಲ್ಲ.. ]
ಇಂಡಿಯ ಎಂಬುದು ಎಂದು ಹೆಣ್ಣಾದ್ರೆ ಅದರ ಒಂದು ಅಂಗ ಕನ್ನಡ. ಕಾಲೋ, ತಲೆಯೋ ಎನ್ನೋದು.. ಮಿಕ್ಕ ಇಂಡಿಯಿಗರು ನಮ್ಮನ್ನು ಕಾಣುವ ನೋಟದ ಮೇಲಿದೆ....
ಶೇಕರಯ್ಯನೋರೆ...
ನೀವೂ ಒಮ್ಮೆ ನೋಡಿ.... ಸಬ್-ಟಯ್ಟಲ್ ಇದ್ರೇ ಒಳ್ಳೇದು.. ಕಣ್ಗಳಲ್ಲಿ ನೀರು ಬಂದೀತು.. !!
ನನ್ನಿ!
[ ಅವರು ಸಭ್ಯಸ್ತರಲ್ಲ ಸಭ್ಯಸ್ಥರು.. ಅವರಲ್ಲಿ ದಿಟವಾಸ ಒಳ್ಳೆತನ ’ಸ್ಥ’ ನಿಂತುಹೋಗಿದೆ
]
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಸಮಯೋಜಿತವಾಗಿದೆ. ನಿನ್ನೆಗೆ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹತ್ಯೆಯಾಗಿ ಸರಿಯಾಗಿ ನಲವತ್ತು ವರ್ಷ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಸಂದೆಯಿಂದ ಇಲ್ಲೀ ಅದೇ ಪ್ರೋಗ್ರಾಮು ಟೀವೀಲಿ
ಆದ್ರೂ ಬಲ್ ಗಟ್ಟಿಗರಯ್ಯ... ಆ ಹೋರಾಟದಲ್ಲಿ ಎಶ್ಟು ಕೊಲೆಗಳು
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಬರೇ ಒಂದು ಡೈಮೆನ್ಶನ್ ನೋಡ್ತಿದೀಯ ಮಹೇಶ. ಈ ಹೋರಾಟ, ಜಗಳಕ್ಕೆ ಹಲವು angleಗಳು, ಹಲವು ಡೈಮೆನ್ಶನ್ನುಗಳಿರುತ್ತವೆ... ಮೇಲ್ನೋಟಕ್ಕೆ ಕಾಣುವುದಿಲ್ಲ. ಹೋರಾಟ, ಕೊಲೆ, ವಯಲೆನ್ಸ್ ಟಿವೀಲಿ, ಸಿನಿಮಾದಲ್ಲಿ, ಡಾಕ್ಯುಮೆಂಟರಿಗಳಲ್ಲಿ ನೋಡೋಕೆ ಚೆಂದ, ಅದರಲ್ಲಿದ್ದಾಗ ಅದರ ನಿಜಸ್ಥಿತಿಯ ಅರಿವಾಗತ್ತೆ. ಒಂದು ದೃಷ್ಟಿಕೋನದಲ್ಲಿ ನೋಡಿ ಅದರ ಬಗ್ಗೆ ಅಥವ ಹೋರಾಟದ ಬಗ್ಗೆ ಹಿಗ್ಗುವುದು ತರವಲ್ಲ. ನಿಜಸ್ಥಿತಿ ಬೇರೇನೊ.
ನನ್ನ ಮಟ್ಟಿಗೆ "ಹೋರಾಟ" non-violent ಆಗಿರಬೇಕು. ಆದರೆ ಡಿಪ್ಲೋಮ್ಯಾಟಿಕ್ ಆಗಬೇಕು. ಗಾಂಧೀಜಿಯವರ ಥರಾ ಹೋರಾಟ ಈಗ ಆಗದು. ಆದರೆ ಕಲ್ಲು, ಮಚ್ಚು, ಗುಂಡು - ಇದು ಉತ್ತರವಲ್ಲ.
ಏನೇ ಇರಲಿ ಅನಿವಾಸಿಯವರ ಪ್ರತಿಕ್ರಿಯೆಗೆ ಕಾಯೋಣ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಹರಿ..
ನೀಂ ಸಿನಿಮ ನೋಡಿಲ್ಲ ಅಲ್ವ... ಅದರಾಗೆ ಕೊನಗೆ ಗಾಂದಿಯ ನಾನ್-ಕೊಅಪರೇಶನ್ ಮೇಲೆ ಒತ್ತು ಇರೋದು...
ಕೊನೆ ಡಿಬೇಟ್ ತುಂಬಾ ಗಾಂದಿ...
ಆಗ ನಂಗೆ ದಿಟವಾಗಲೂ ಗಾಂದಿ ಬಗ್ಗೆ ಹೆಮ್ಮೆ ಅನ್ನಿಸ್ತು
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಮಾಯ್ಸ,
ಸರಿಯಾದ ಹೊತ್ತಿಗೆ ಹಾಕಿದ್ದೀಯ. ಸಕತ್, ನಿನ್ನ ಬರಹದಿಂದ ನಮ್ಮ ಜಡ್ಡುಗಟ್ಟಿರುವ ಹೋರಾಟದ ಅಲುವಾಟಗಳು ಗರಿಗೆದರಿ ಹಾರಲಿ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಮಹೇಶ,
"ನೀಗ್ರೋ ಪದವನ್ನು ಬಳಸಬಾರದು, ಏಕೆಂದರೆ ಆ ಪದವೇ ಜನಾಂಗೀಯ ನಿಂದನೆಯನ್ನು ಸಾರಿ ಹೇಳುತ್ತದೆ." ಹಾಗಂತ ನನಗೂ ನಿಮ್ಮಂತೆ ಗೊತ್ತಿರಲಿಲ್ಲ, ಇಂಗ್ಲಂಡಿಗೆ ಬಂದ ಮೇಲೆ ಗೊತ್ತಾಯಿತು. ನೀಗ್ರೋ ಪದ nigger ಎಂಬ ಕೆಟ್ಟ ಪದದಿಂದ ಹುಟ್ಟಿದ್ದು (The term nigger is now probably the most offensive word in English. Its degree of offensiveness has increased markedly in recent years, although it has been used in a derogatory manner since at least the Revolutionary War. Webster dictionary: in vulgar derision or depreciation). ಈಗ ಯಾರಾದರೂ ಆ ಪದವನ್ನು ಬಳಸಿದರೆ ಅದು ಜನಾಂಗೀಯ ನಿಂದನೆಯಾಗುತ್ತದೆ (racial abuse). ದಯಮಾಡಿ ನಿಮ್ಮ ಬ್ಲಾಗ್ ಲೇಖನದಲ್ಲಿ ನೀಗ್ರೋ ಎಂಬ ಜಾಗದಲ್ಲಿ "ಕಪ್ಪು ಜನ" (ಸಂಸೃತವಾದರೆ ಕೃಷ್ಣಜನಾಂಗ) ಎಂದು ಬದಲಿಸಿ, please!
ಕೇಶವ
Visit my blog:
http://kannada-nudi.blogspot.com
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಕೇಶವರೇ...
ನೀವ್ ಹೇಳೊದು ಸರಿ.. ನನಗೂ ಆ ಸಂಗತಿ ತಿಳಿದಿದೆ.. ಇಲ್ಲಿ ಅಮೇರಿಕದೋದು. ಕಲರ್‌ಡ್ ಮಂದಿ ಅಂತಾರೆ... ಇಲ್ವೇ ಆಪ್ರೋ-ಅಮೇರಿಕನ್
ಆದ್ರೆ ಕನ್ನಡದಲ್ಲಿ ಹಾಗಿಲ್ಲ.. ಇಂಗ್ಲೀಶಲ್ಲಿ ಇದೆ..
ಅವರಿಗೆ ಹಾಗೆ ಇದ್ರೆ ಇರಲಿ.. ನಮಗೆ ಹಾಗೆ ಇರಬೇಕಾಗಿಲ್ಲ..
ಇನ್ನೊಂದು ಆ ಸಿನಿಮದ ಪೂರ್ತಿ ನೀಗ್ರೋ ಅನ್ನೋ ಒರೆಯನ್ನೇ ಬಳಸಿರೋದು..!!
ನಾವ್ ಕನ್ನಡಿಗರೂ, ತಮಿಳರೂ ಮುಂತಾದ ತೆಂಕಣಿಡಿಯದೋರು ಕಪ್ಪುಮಂದಿಯೇ..!!!
.
.
.
.
ಒಂದು ನಗೆ !!
ತೂ ಅಸಯ್ಯ...
ಕೃಷ್ಣಜನಾಂಗ ಸದ್ಯ ಇನ್ನೊಂದು ನ ಇಲ್ಲ!!!
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಮಹೇಶ,
ನಾನು ಈ ಚಿತ್ರ ನೋಡಿಲ್ಲ. ಆದರೆ ಕೇಶವರು ಹೇಳಿದ್ದು ನನಗೂ ಸರಿ ಅನಿಸುತ್ತದೆ. ಇದು ನುಡಿಗೆ ಸಂಬಂಧ ಪಟ್ಟ ವಿಷಯವಲ್ಲ. ನಾವು ಹೊಲೆಯ ಮಾದಿಗ ಎಂದು ಯಾರನ್ನೂ ಕರೆಯುವುದಿಲ್ಲ. ಕನ್ನಡದಲ್ಲೂ "ದಲಿತ" "ಕಪ್ಪುಜನ" ಎಂದೆಲ್ಲಾ ಹೇಳುವುದು ರೂಢಿಸಿಕೊಂಡಿದ್ದೇವೆ. ಹಿಂದೆ ಹರಿಜನ ಅನ್ನುತ್ತಿದ್ದರು, ಈಗೀಗ ಅದು ಸರಿಯಲ್ಲ ಎಂಬ ಮಾತಿದೆ.
ಒಟ್ಟಾರೆ, ಕರೆಸಿಕೊಳ್ಳುವವರಿಗೆ ಸಂಬಂಧಿಸಿದ ವಿಷಯವಿದು. ಅವರಿಗೆ ಆ ಪದದ ಬೇಗೆ ಏನು ಅನಿಸುತ್ತದೆ ಅನ್ನುವುದು ಮುಖ್ಯ. ಈಗಿ ನೀವಿರುವ ಕೆಲಸದಲ್ಲೋ, ಮನೆಯ ಅಕ್ಕಪಕ್ಕದಲ್ಲೋ ಇರುವ ಕಪ್ಪು ಮಂದಿಗೆ ನನ್ನ ಭಾಷೆಯಲ್ಲಿ "ಹೀಗೇ ನಿನ್ನನ್ನು ಕರೆಯುತ್ತೇನೆ ಸರಿಯಾ" ಎಂದು ಕೇಳಿ ನೋಡಿ. ಅದು ಒಳ್ಳೆಯ ಟೆಸ್ಟ್.
ನಾವೂ ಕಪ್ಪು ಜನ ಎಂಬ ವಾದವೂ ಹುರುಳಿಲ್ಲದ್ದು. ಅದು ಬರೇ ಚರ್ಮದ ಬಣ್ಣಕ್ಕಲ್ಲ - ಆ ಜನಾಂಗದ ಚರಿತ್ರೆಗೆ ಸಂಬಂಧಪಟ್ಟಿದ್ದು.
ಇನ್ನು ಚರಿತ್ರೆಯ ಯಾವುದೋ ಘಟ್ಟದಲ್ಲಿ ನಡೆಯುವ ಘಟನೆಯನ್ನು ಚಿತ್ರಿಸುವಾಗ, ಅಂದು ಬಳಕೆಯಲ್ಲಿದ್ದ ಪದವೇ ಆಡಿದ್ದರೆ ಅದೂ ಇಂದಿನ ನಮ್ಮ ನಡೆತೆಗೆ ಸಮಜಾಯಿಷಿಯಾಗದು.
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ನೀವು ಹೇಳೋದು, ಕೇಶವರು ಹೇಳಿದ್ದು ಸರಿ...
ಆದ್ರೆ ಆ ಸಿನಿಮದಲ್ಲೇ ನೀಗ್ರೋ ಅನ್ನೋ ಪದವನ್ನೇ ಹೆಚ್ಚು ಬಳಸಿದ್ದಾರೆ.....
ನಿಮಗೆಲ್ಲ ’ನೀಗ್ರೋ’ ಪದ ಅಪೆನ್ಸಿವ್ ಆಗಿದ್ರೆ ಮನ್ನಿಸಿರಿ..!
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ಅಂದಹಾಗೆ ಮರೆತುಬಿಟ್ಟೆ-
ಕನ್ನಡದವರನ್ನು - ಕಪ್ಪುಮಂದಿಯ ಹೋರಾಟದ ಜತೆ ಸಮೀಕರಿಸುವುದು ತುಂಬಾ ಸಿಂಪ್ಲಿಫೈ ಮಾಡಿದಂತೆ. ಇಬ್ಬರಿಗೂ ಅನ್ಯಾಯಮಾಡಿದಂತೆ.
ಕೊನೆಯದಾಗಿ - ಸಿನೆಮಾವನ್ನು ಸೀರಿಯಸ್ಸಾಗಿ ತಗೋಬಾರದು. ಅದು ಇರುವುದು ಬರೀ ಮೋಜು ಮಜಕ್ಕೆ ಎಂದು ಹಿಂದೊಮ್ಮೆ ನೀವು ನನಗೆ ಉಪದೇಶ ಮಾಡಿದ್ದಿರಿ
ಉ: ದ ಗ್ರೇಟ್ ಡಿಬೇಟರ್‍ಸ್- ಒಂದು ಸಿನಿಮಕತೆ
ನಾನು ಯಾಕೆ ಎಮೊಶನಲ್ ಆದೆ ಅಂತ ನಿಮಗೆ ಹೇಳಿದ್ನಲ್ಲ.. ಬಲು ಪ್ರಯ್ವೇಟ್ ಸಂಗತಿ.. ಚಾಟಲ್ಲಿ ಹೇಳ್ತೀನಿ...
ಅನ್ಯಾಯದಶ್ಟ ದೊಡ್ಡ ತಪ್ಪಾಗಿದ್ರೆ ಮನ್ನಿಸಿರಿ...