ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › mahesha ರವರ ಬ್ಲಾಗ್

ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

October 3, 2008 - 11:28am — mahesha

ನಾನು ಒಲ್ಲುತ್ತಿದ್ದ ತಿಂಡ್ಳು ಹಳ್ಳಿಯನ್ನು ಬಿಟ್ಟು ಬಂದ ಸಂಗತಿ ತಿಳಿದೇ ಇದೆ... ನನ್ ನಲ್ಮದುವೆಯ ಬಳಿಕ ನಾವ್ ಮನೆ ಮಾಡಿರೋದು ಬೆಂಗಳೂರಲ್ಲೇ ಕನ್ನಡವೇ ಇಲ್ಲ ಎಂದು ಮಂದಿ ಅಂದುಕೊಂಡಿರೋ ಒಂದು ಲೇವೋಟಲ್ಲಿ.

ಈ ಜಾಗದಲ್ಲಿ ಬಾಡಿಗೆ-ಮನೆ ನಮ್ಮದು. ಇಲ್ಲಿಗೆ ಬಾಡಿಗೆಗೆ ಬರುವಾಗ ನನ್ ಹೆಂಡತಿ "ರೀ ನಮ್ ವಿಜಯ ನಗರದಂತ ಅಪ್ಪಟ ಕನ್ನಡ ಏರಿಯ ಬಿಡಿಸಿ ಆ ಏರಿಯಾಗೆ ನನ್ ಕರೆದುಕೊಂಡು ಹೋಗ್ತೀರಲ್ಲ.. ನನಗೆ ತುಂಬಾ ಕಶ್ಟ ಆಗತ್ತೆ ಕಣ್ರೀ.. ಆ ಪಾಶ್ ಏರಿಯಲ್ಲಿ ಎಲ್ಲ ಕಾಸ್‌‌ಟ್ಳಿ ಬೇರೆ" ಎಂದು ಗೊಣಗಿದ್ಲು..

ಆದರೂ ನಾನು ಎರಡುವಾರ ತಿರುಗಾಡಿ ಹುಡುಕಿದ ಮನೆಯ ಬಾಡಿಗೆ ಎಶ್ಟು ಎಂದು ಕೇಳಿ, ’ಈ ಏರಿಯಾದಲ್ಲಿ, ಇಶ್ಟು ಕಡಮೆ ಬಾಡಿಗೆಗೆ ಇಂತ ಮನೆ ಸಿಗೋದು ಕಶ್ಟ" ಎಂದು ನನ್ ಹೊಗಳಿದ್ಲು. Smiling

ಕಳೆದ ವಾರ ನಾವ್ ನಮ್ ಹೊಸ-ಬಾಡಿಗೆ-ಮನೆಗೆ ಬಂದೆವು... ಇದಕ್ಕೆ ಮುನ್ನ ನಡೆದ ಕೆಲವು ಸರ್‍ಕಸ್ಗಳನ್ನು ಅರುಹಿಕೊಳ್ಳುವೆನು.

ನಮ್ ಮದುವೆ ಸೆಪ್ಟಂಬರ್‍ ೧೦ಕ್ಕೆ ಆಯ್ತು.. ಯಾಕೆ ಈ ದಿನ ಎಂದರೆ ಸೆಪ್ಟಂಬರ್‍ ೧೫ ರಿಂದ ಪಿತ್ರು ಪಕ್ಶ. ಆಮೇಲೆ ಅಕ್ಟೊಬರ್‍ಅಲ್ಲಿ ನಮ್ ತಾತನ ತಿತಿಯಾದರೆ, ನವಂಬರ್‍ಅಲ್ಲಿ ಅವಳ ತಾತನ ತಿತಿ.. ಕೊನೆಗೆ ಮದುವೆಯನ್ನ ಡಿಸೆಂಬರ್‍ಅಲ್ಲಿ ಮಾಡಿಕೋಬೇಕು. ಅಂದರೆ ನಿಶ್ಚಿತಾರ್ತ ಜುಲಯ್ಅಲ್ಲಿ ಮಾಡಿ ಆರು ತಿಂಗಳ ಬಳಿಕ ಮದುವೆ, ಹರ ಹರ ಅದೂ ಸಲ್ಲದು.. ಹಾಗಾದರೆ ಜುಲಯ್ ಆಗಸ್ಟಲ್ಲಿ ಆಶಾಡ-ಶ್ರವಣ ಮಾಸಗಳು ಅವಗಳಲ್ಲಿ ನಮ್ ಸಂಪ್ರದಾಯದಂತೆ ಮದುವೆ ಮಾಡೋ ಹಾಗಿಲ್ಲ.. ಈ ಎಲ್ಲ ಲೆಕ್ಕಾಚಾರಗಳ ಬಳಿಕ ನಮಗೆ ಉಳಿದುದು ಬರೀ ಬಾದ್ರಪದ ಮಾಸದ ಮೊದಲು ೧೫ ದಿನಗಳು. ಅದರಲ್ಲಿ ತದಿಗೆ-ಚವ್ತಿ ಗವ್ರಿ-ಗಣೇಶ ವ್ರತ, ಸೋ ಮೊದಲ ಅಯ್ದುನಾಳುಗಳು ಸಲ್ಲವು.. ಕೊನೆಗೆ ಉಳಿದು ಹತ್ತುನಾಳುಗಳು. Smiling

ಈ ಎಲ್ಲ ಲೆಕ್ಕಾಚಾರಗಳನ್ನು ನಮ್ ಮನೆಯಲ್ಲಿ ನಡೆದು ನಡೆದೂ, ನಾವ್ ನಮ್ ಹೊಸ ಮನೆಗೆ ಹೋಗುವ, ಅಲ್ಲಿ ಹಾಲು ಉಕ್ಕಿಸುವ ನಾಳು, ಒಳ್ಳೆಯ ದಿನವಾಗಬೇಕಾದರೆ ಪಿತ್ರು ಪಕ್ಷ ಬರುವ ಮುನ್ನವೇ ಆಗಬೇಕು...

ಅಯ್ಯೋ ರಾಮ ರಾಮ.. ನನಗೆ ಈ ಗಣಿತ ತಲೆ ಕಡಿಸಿ ಹಾಕಿತ್ತು.. ಅದಕ್ಕೆ ನಾನೇ ಒಂದ್ ಉಪಾಯ ಮಾಡಿದೆ.. ಅದೂ ಮದುವೆ ರಾತ್ರಿ. Smiling ನನ್ ಗೆಳೆಯರ ತಿಣಿ ನನಗೆ ಒಂದು ಕದಿರೊಲೆ/ಮಿಕ್ರೋವೆವ್ ಒವೆನ್ ಉಡುಗೊರೆಯಾಗಿ ಕೊಟ್ಟಿತ್ತು. ಅದಕ್ಕೆ ನಾನು ಮದುಮಾರನೆ ದಿನ ಆ ಕದಿರೊಲೆಯ ಜೊತೆಗೆ ನನ್ ಹೆಂಡತಿ, ಅವರಮ್ಮ, ನಮ್ಮಮ್ಮನ್ನ ಒಂದು ಟ್ಯಾಕ್ಸಿಗೆ ಹತ್ತಿಸಿಕೊಂಡು ಹೊಸಮನೆಗೆ ಹೋಗಿ, ಆ ಕದಿರೊಲೆಯಲ್ಲೇ ಅರೆಲೀಟರ್‍ ಹಾಲು ಉಕ್ಕಿಸಿದ ಶಾಸ್ತ್ರ ಮಾಡಿಸಿ ಬಂದೆ. ನನ್ ಹೆಂಡತಿಗೆ ಈ ದಿನ ಗಳಿಕೆಯಲ್ಲಿ ಎಲ್ಲಿಲ್ಲದ ನಂಬುಗೆ. ಅವಳಿಂದ ನನ್ ಚದುರತನಕ್ಕೆ ಮೆಚ್ಚುಗೆಯೂ ದೊರೆಯಿತು. Smiling

ಇನ್ನ ನಮ್ ಏರಿಯ ವಿಶಯಕ್ಕೆ ಬರಣ. ನಮ್ ಏರಿಯದಲ್ಲಿ ೨೭ನೇ ತಲೆಹಾದಿ/ಮುಕ್ಯರಸ್ತೆಯಲ್ಲಿ ಕಡಮೆ ಅಂದರೂ ನಾಲಕ್ಕು ಮಾಲ್ಗಳಿವೆ. ಅಲ್ಲಿ ಇಂಗ್ಲಿಶು ಮಲಯಾಳಂ ಹೊತ್ತಗೆಗಳು ದೊರೆಯುವುವು ಹೊರತು ಕನ್ನಡದ ಒಂದು ಹೊತ್ತಗೆ ಕೂಡ ಸಿಕ್ಕಲ್ಲ. ಅಲ್ಲಿ ವಿಳ್ಳೇದೆಲೆ ಸಿಕ್ಕಲ್ಲ. ಹೂ ಸಿಕ್ಕಲ್ಲ.. ಹೀಗೆ ಕನ್ನಡ-ಹಾರುವರ ಮನೆಬೇಕಾದರ ಹಲವು ಸರಕುಗಳು ಸಿಕ್ಕಲ್ಲ... ನನ್ ಹೆಂಡತಿಗೆ ಇದರಿಂದ ಮೊದಲೆರಡು ದಿವಸ ಸಿಡಿಸಿಡಿ..

ಆದರೆ ಬರಬರತ್ತಾ ನಮಗೆ ತಿಳೀತ್ತಾ ಹೋಯ್ತು.. ನಮ್ ಮನೆಯಿಂದ ತುಸು ದೂರದಲ್ಲಿ ಅಗರ ಹಳ್ಳಿ, ಪರಂಗಿ ಪಾಳ್ಯ ಹಳ್ಳಿಗಳಿವೆ... ಅಲ್ಲಿ ನಾವ್ ಏನೇನೇನೇನೇನು ಸಿಕ್ಕಲ್ಲ ಅಂತ ಕೊರಗುತ್ತಿದ್ದೆವೋ ಅವೆಲ್ಲ ದಾರಾಳವಾಗಿ ಸಿಗತ್ತೆ. ನಮ್ ಮನೆಯ ಅಕ್ಕಪಕ್ಕದ ಮನೆಗಳಲ್ಲಿ ಕಡಮೆ ಅಂದರೂ ಆರು ಮನೆಗಳಲ್ಲಿ ಕನ್ನಡವನ್ನೇ ಮಾತಾಡ್ತಾರೆ.. ಅಶ್ಟೇ ಅಲ್ಲ ಅವರ ಮನೆ ಮಕ್ಕಳು ಬೀದಿಯಲ್ಲಿ ಕನ್ನಡದಲ್ಲೇ ಆಟ ಆಡ್ತಾರೆ. Smiling. ನಮ್ ಮನೆಗೆ ಕೇಬಲ್ ಹಾಕಿಕೊಟ್ಟವನು ಮಂಡ್ಯದವನಂತೆ Smiling, ಇವೊತ್ತು ಬೆಳಿಗ್ಗೆ "ನಿಮಗೆ ಯಾವ ಪೇಪರ್‍ ಹಾಕಲಿ" ಎಂದು ಒಬ್ಬ ಬಂದ, ನಾನು "ಪೇಪರ್‍ ಬೇಡ, ಮಯೂರ ಹಾಕಿ" ಎಂದೆ.. ಅವನು "ಮಯೂರಾನಾ ಸರಿ" ಎಂದು ಹೋದ. ನನಗೆ ನಲಿವೇನೆಂದರೇ ನಮ್ ಏರಿಯದಲ್ಲೂ ಕೆಲವರು ಮಯೂರ ಓದ್ತಾರೆ.. ಅದಕ್ಕೆ ಅವನಿಗೆ ಮಯೂರ, ಸುದಾ, ತರಂಗಗಳ ಗುರುತು ಇದೆ....

ಪಾಪಾ ನಮ್ ಕನ್ನಡದೋರು ಬೆಂಗಳೂರಲ್ಲಿ ಕನ್ನಡ ಇಲ್ಲ ಕನ್ನಡ ಇಲ್ಲ ಅಂತ ಗೊಣಗಿ ಸಂಕಟ ಪಡ್ತಾರೆ.. ಆದರೆ ಅವರಿಗೇ ಗೊತ್ತಿಲ್ಲ.. ಬೆಂಗಳೂರೆಂಬ ಹಲಸಿನ ಹಣ್ಣಿನ ಒಳಗೆ ಹುದುಗಿರೋದು ಸಿಹಿಯಾದ ಕನ್ನಡವೇ ಎಂದು Smiling

  • ಅನಿಸಿಕೆ
~.~
  • mahesha ರವರ ಬ್ಲಾಗ್
  • Login or register to post comments
  • 359 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 3, 2008 - 11:39am — Chetan.Jeeral

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

Chetan.Jeeral's picture

ನಿಮ್ಮ ವೈವಾಹಿಕ ಜೀವನಕ್ಕೆ ನನ್ನ ಶುಭಕಾಮನೆಗಳು ಮಹೇಶ್. ಇನ್ನು ಕನ್ನಡದ ಸುದ್ದಿ ಕೇಳಿ ನಿಜಕ್ಕೂ ಸಂತೋಷ ಅನ್ನಿಸ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:41am — ASHOKKUMAR

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

ASHOKKUMAR's picture

ಪುಕ್ಕಟೆ ಸಲಹೆ.. ಕನ್ನಡ ಪತ್ರಿಕೆ ಹಾಕಿಸಿಕೊಳ್ಳಿ
ಮಯೂರ ತಿಂಗಳಿಗೊಮ್ಮೆ ಬರೋದಲ್ವೇ? Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:09pm — mahesha

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

mahesha's picture

ಹು.. ಆದರೆ ಆ ಏಜೆಂಟಿಗೆ ಗೊತ್ತಿತ್ತು....

ಕನ್ನಡದ ತಿಂಗಳಿಗೊಮ್ಮೆ ಬರೋ ಮಯೂರದ ಹೆಸರು ಬಹಳಶ್ಟು ಮಂದಿಗೆ ಗೊತ್ತೇ ಇಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:27pm — ರಾಮಕುಮಾರ್

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

ರಾಮಕುಮಾರ್'s picture

ಆದ್ರೆ ಯಾವ ಪತ್ರಿಕೆ ತಗಬೇಕು ಅನ್ನದೆ ಸಮಸ್ಯೆ...
ಉದಯವಾಣಿಯಲ್ಲಿ 'ಕಲ್ಸಂಕದ ಬಳಿ ಯಾರೋ ಬಸ್ಸು ಹತ್ತುವಾಗ ಬಿದ್ದು ಮಂಡಿ ತರಚಿದ್ದು ಸುದ್ದಿ ..'
ವಿಜಯ ಕರ್ನಾಟಕದವರಿಗೆ ತಾವಷ್ಟೆ ಕಂಡ ಸತ್ಯವನ್ನ ಎಲ್ಲರಿಗೂ ಕಾಣಿಸಬೇಕೆಂಬ ಉಮೇದು..
ಪ್ರಜಾವಾಣಿ ಒಂದು ಕಾಲದಲ್ಲಿ ಚೆನ್ನಾಗಿತ್ತು.. ಈಗ ಬರೀ ಜಾಳು ಜಾಳು, ನಿಸ್ಸಾರ..
ಕನ್ನಡಪ್ರಭ, ಸಂಯುಕ್ತ ಕರ್ನಾಟಕದ ಬಗ್ಗೆ ನನಗೆ ಗೊತ್ತಿಲ್ಲ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:35pm — mahesha

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

mahesha's picture

ರಾಮ

"ಮಯೂರ" "ತುಷಾರ" ಇವನ್ನು ಒಮ್ಮೆ ಓದಿ ನೋಡಿರಿ..

ಮಂಗಳ, ಬಾಲಮಂಗಳದ ಜೊತೆಗೆ ಇನ್ನು ಹಲವು ಚನ್ನಾಗಿರುವ ಮ್ಯಾಗ್ಜೇನ್ಗಳಿವೆ...

ನ್ಯೂಸ್ ಪೇಪರ್‍ಗಳಲ್ಲಿ ಕನ್ನಡಪ್ರಭ ಮತ್ತು ಪ್ರಜಾವಾಣಿ ಲೇಸು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:48pm — ರಾಮಕುಮಾರ್

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

ರಾಮಕುಮಾರ್'s picture

ಧನ್ಯವಾದ.
"ಮಯೂರ" ತಪ್ಪದೆ ಓದುತ್ತೇನೆ.. ಬಹಳ ಚೆನ್ನಾಗಿ ಬರುತ್ತಿದೆ...
ಈಗ ಅದರಲ್ಲಿ ಬರುತ್ತಿರುವ ಕಡಿದಾಳು ಶಾಮಣ್ಣನವರ ಜೀವನಕಥೆ ("ಕಾಡು ತೊರೆಯ ಜಾಡು" ?) ನನ್ನ ಫೇವರಿಟ್... ಕೊನೆಯಲ್ಲಿ ಬರುವ ತಿಂಗಳ ಕವಿತೆ ವಿಶ್ಲೇಷಣೆಯೂ ಚನ್ನಾಗಿರುತ್ತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:53am — Sunil Jayaprakash

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

Sunil Jayaprakash's picture

ಮಡದಿಯೊಡ ಮನೆಹೊಕ್ಕ ಮಾಯ್ಸ,
ಮತ್ತೊಮ್ಮೆ ಸಂಪದಿಗರಿಗೆ ಸಿಗಲಿದೆ,
ಕನ್ನಡದ ಸವಿ ಸವಿ ಪಾಯ್ಸ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:20pm — roshan_netla

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

roshan_netla's picture

ನಿಮಗೆ ಮದುವೆ ಶುಭಾಶಯಗಳು..
ಬೆಂಗಳೂರಿನಲ್ಲಿ ಇದ್ದು..ಕನ್ನಡ ಮಾತಾಡುವವ್ರು ಇದ್ದಾರೆ, ನಮ್ಮ ಪೇಪರ್ ಏಜಂಟ್ ಗೆ ಮಯೂರ ಅಂದ್ರೆ ಗೊತ್ತು, ಕನ್ನಡ ಬರುತ್ತೆ ಅಂತ ಸಂತೋಷ ಪಡಬೇಕಾಗಿದೆ ಅಲ್ಲ..ಅದಕ್ಕೇ ನಮಗೆಲ್ಲ ಬೇಸರ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:25pm — mahesha

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

mahesha's picture

ರೋಶನ್...

ನೀವು ಹೇಳೋದು ಒಂದು ಕಡೆಯಿಂದ ಸರಿ..

ಆದರೆ ನಮ್ ಹಲಗನ್ನಡಿಗರು, ಹೊರಗಡೆಯವರು ಬೆಂಗಳೂರಲ್ಲಿ ಕನ್ನಡವೇ ಇಲ್ಲ ಎಂದು ಹೇಳೋ ತೀರಾ ಸುಳ್ಳು ಎಂದು ನಾನು ಹೇಳಹೋಗಿದ್ದು...

ಕೆಲವರು ಹೇಗೆ ಆಡ್ತಾರೆ ಅಂದರೆ ಬೆಂಗಳೂರು ಕರ್‍ನಾಟಕದಲ್ಲೇ ಇಲ್ವೇನೋ ಅನ್ನೋ ಹಾಗೆ... ಆದರೆ ಎಲ್ಲಾ ಕಡೆ ಕನ್ನಡ ನಡೆಯತ್ತೆ.. ನಾವ್ ಮಾತಾಡಬೇಕಶ್ಟೇ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:25pm — mahesha

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

mahesha's picture

ಇದಕ್ಕೆ ಮೊದಲ ನಮ್ ತಲೆಯಲ್ಲಿ ಕನ್ನಡ ಇಲ್ಲೂ ಇದೆ ಎಂದು ಬಲವಾಗಿ ನಂಬುಗೆ ಇರಬೇಕು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:40pm — roshan_netla

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

roshan_netla's picture

ಒಳ್ಳೇಯದು.. ಆದರೆ ಬೆಂಗಳೂರಿನ ಹೃದಯ ಬಾಗ ಎಂ.ಜೀ ರೋಡ್ ನಲ್ಲಿ ಟಸ್, ಪುಸ್ ಇಂಗ್ಲೀಷು, ಶಿವಾಜಿನಗರದಲ್ಲಿ ಕ್ಯಾರ್‍ಏ..ಬ್ಯಾರ್‍ಎ ಹಿಂದಿ ..ಜಾಸ್ತಿ ಅಲ್ವೆ...ಈಗ ತಮಿಳನವರು ಸೇರಿ ಮಹಾನಗರ ಪಾಲಿಕೆನಲ್ಲಿ ಚುನಾವಣೆಗೆ ನಿಂತು ಸ್ಥಾನ ಪಡಿಬೇಕೂಂತ ಇದ್ದಾರೆ ಅಂತೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 12:58pm — savithru

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

savithru's picture

>ವಿಜಯ ನಗರದಂತ ಅಪ್ಪಟ ಕನ್ನಡ ಏರಿಯ ಬಿಡಿಸಿ .....
Smiling
ಅದಕ್ಕೆ ನಾನು ದೂರ ಅದರೂ ಪರವಾಗಿಲ್ಲ ಅಂತ ಇಲ್ಲಿಂದ ಮಾರತ್ಹಳ್ಳಿ ಗೆ ದಿನಾ ಓಡಾಡ್ತೀನಿ!

ಕೊನೆ ಲೈನು! ....
ಹೇ ಹೇ... ವಿಜಯನಗರದ ವೀರಪುತ್ರರು ಸಂಪದದಲ್ಲೂ ಬಹಳಷ್ಟು ಜನರಿದ್ದಾರೆ! Eye-wink

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 1:55pm — Sunil Jayaprakash

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

Sunil Jayaprakash's picture

ಸವಿತೃ, ವಿಜಯನಗರದಿಂದ ಮಾರತ್ಹಳ್ಳಿಗೆ ಬರ್ತೀಯಾ ಅಂದ್ರೆ, ನೀನು ನಿಜಕ್ಕೂ ವಿಜಯನಗರದ ವೀರಪುತ್ರನೇ ಸೈ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 2:30pm — savithru

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

savithru's picture

ಅಯ್ಯೋ ಸುನೀಲ ...

ಹಲವು ವರ್ಷಗಳಿಂದ ನಾನು ಇಲ್ಲೇ...ರಾಜಾಜಿನಗರ , ವಿಜಯನಗರ, RPC ಲೇಔಟ್ ನಲ್ಲೆ ಇರೋದು. ( ಅಲ್ದೆ JP ನಗರ , ಬನ್ನೇರುಘಟ್ಟ, ಜಿಗಣಿ ನಲ್ಲೂ ಇದ್ದೆ!...ಅವ್ಯಾವೂ ನಮ್ಮ ಊರು ಅನ್ನಿಸಲಿಲ್ಲ Sad ) ನನ್ನ ಎಲ್ಲ ಹಳೆಯ ಸ್ನೇಹಿತರು ಸಹಾ ಇಲ್ಲೇ ಇರೋದು. ನನ್ನ ಸ್ವಂತ ಊರು ಅನ್ನಿಸಿಬಿಟ್ಟಿವೆ ಇವು ಈಗ! ..

ನಾನಂತೂ ಸ್ವಂತ ಊರಿಂದ ಓಡಾಡ್ತೀನಿ! Smiling ನೀನು?!

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:17pm — vikashegde

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

vikashegde's picture

ಸುನಿಲ, ವಿಜಯನಗರದ ವೀರಪುತ್ರ ಹೆಸರನ್ನು ಸೋಮಣ್ಣನವರಿಗೆ ನೋಂದಾವಣೆ ಮಾಡಿಸಲಾಗಿದೆ. ಬೇರೆಯಾರಿಗೂ ಬಳಸುವಂತಿಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 2:24pm — vikashegde

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

vikashegde's picture

ಹೊಸಬಾಟಲಿಯಲ್ಲಿ ಹಳೇ ವೈನು.

ಸದರಿಯವರಿಗೆ ತಾವು ಗೃಹಸ್ಥರಾಗಿದ್ದನ್ನೂ, ತಮ್ಮ ಬುದ್ಧಿವಂತಿಕೆಯನ್ನೂ, ಯಾವುದೋ ಪಾಶ್ ಏರಿಯಾದಲ್ಲಿ ಮನೆ ಮಾಡಿದ್ದನ್ನೂ ಹೇಳಿಕೊಳ್ಳಬೇಕಿತ್ತು. ಅದಕ್ಕೆ ಅವರಿಗೆ ಸಿಕ್ಕ ಅಸ್ರ್ತ ಕನ್ನಡ. ಇದುವರೆಗೂ ಬೆಂಗಳೂರಿನ ಅಷ್ಟದಿಕ್ಕುಗಳಲ್ಲೂ ವಾಸವಾಗಿದ್ದೇನೆ, ಎಲ್ಲಿಯೂ ಕೂಡ ಕನ್ನಡ ಬಿಟ್ಟು ಬೇರೆ ಮಾತಾಡೋ ಪರಿಸ್ಥಿತಿ ನನಗೆ ಬಂದಿಲ್ಲ, ಬರಕ್ಕೂ ಬಿಡಕ್ಕಿಲ್ಲ. ಕೆಲವು ಕಡೆ ಬೇರೆ ನುಡಿಯವರು ಜಾಸ್ತಿ ಜನರಿದ್ದಾರೆ ನಿಜ. ಅದೇನೋ ನಮ್ಮಲ್ಲೇ ಕನ್ನಡತನವಿರಬೇಕು ಅಂತ ಮತ್ತೆ ಹಳೆಯದನ್ನೇ ಯಾರಿಗೂ ಗೊತ್ತಿಲ್ಲದಂತೆ ಕೊರೆದಿರುವುದೂ, ಪೇಪರ್ನೋನಿಗೆ ಕನ್ನಡ ಬತ್ತೈತೆ ಅಂತ ಖುಷಿಪಟ್ಟಿರುವುದೂ ಮಜವಾಗಿದೆ. ’ಮಯೂರ’ ಪತ್ರಿಕೆ ಪೇಪರ್ನೋನಿಗೆ ಗೊತ್ತಿಲ್ಲದೇ ಇನ್ಯಾರಿಗೆ ಜಟಕಾಸಾಬಿಗೆ ಗೊತ್ತಿರ್ತದಾ.! ಬೆಂಗಳೂರಲ್ಲಿ ಕನ್ನಡವಿಲ್ಲ, ಕನ್ನಡಿಗರಿಲ್ಲ ಅಂತ ತಾವು ತಪ್ಪು ತಿಳಿದುಕೊಂಡಿದ್ದನ್ನ ಎಲ್ಲರಿಗೂ ಅನ್ವಯಿಸಿ ಏನೋ ಹೊಸವಿಷಯ ಕೊಟ್ಟಂತೆ ಬರೆದಿದ್ದಾರೆ ಶ್ರೀಯುತರು. ಬೆಂಗಳೂರಲ್ಲಿ ಕನ್ನಡಕ್ಕೆ ಏನೂ ತೊಂದರೆಯಾಗಿಲ್ಲ ಹೆದರಬೇಡಿ ಎಂದು ಎಲ್ಲರಿಗೂ ಹೇಳುತ್ತಾ ಸುತ್ತಲೂ ಆರು ಮನೆಲ್ಲಿ ಕನ್ನಡ ಐತೆ, ಪೇಪರ್ನೋನಿಗೆ ಕನ್ನಡ ಬತ್ತೈತೆ, ಅಂಗಡಿಯಲ್ಲಿ ವೀಳ್ಯದೆಲೆ ಸಿಕ್ತದೆ ಅಂತ ಖುಷಿ ಪಡುತ್ತಿರುವುದು ಕನ್ನಡಿಗರ ದುಸ್ಥಿತಿ ತೋರಿಸುತ್ತದೆ. ಇಲ್ದಿದ್ದ್ರೆ ಇವೆಲ್ಲಾ ಹೇಳೋ ವಿಷ್ಯನಾ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:07pm — muralihr

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

muralihr's picture

ಎಲ್ಲಾ ಸರಿ !
ನಿಮ್ಮ್ ಗ್ಯಾಕ್ ಹೊಟ್ಟೆ ಉರಿ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 6:09pm — vikashegde

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

vikashegde's picture

ಹೊಟ್ಟೆ ಉರಿಯಲ್ಲ. ವಾಸ್ತವ

ಮಯೇಸ್ ಎಲ್ಲಿ? ನಿಮಗೆ ಹೇಳಿ ಕಳಿಸಿದ್ರಾ ಹಿಂಗನ್ನಿ ಅಂತ ! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:49pm — Sunil Jayaprakash

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

Sunil Jayaprakash's picture

ಯಾಕೆ ನಿಮಗೆ ಮಾಯ್ಸರಿಂದ, "ಇಲ್ಲಿ ಹೀಗೆ ಕಾಮೆಂಟ್ ಹಾಕು, ಅಲ್ಲಿ ಹಾಗೆ ಕಾಮೆಂಟ್ ಹಾಕು" ಅಂತ ಹೇಳಿಸಿಕೊಂಡು ಅಭ್ಯಾಸ ಏನಾದರೂ ಇದೆಯೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 9:59pm — hamsanandi

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

hamsanandi's picture

ಮಹೇಶ್ ಮತ್ತು ವಿಕಾಸ್,

ನೀವಿಬ್ಬರೂ ಜೀವದ ಗೆಳೆಯರಿರಬೇಕು ಅಂತ ನನ್ನ ಗುಮಾನಿ - ಅದಕ್ಕೇ ಒಬ್ಬರು ಇನ್ನೊಬ್ಬರ ಕಾಲೆಳೀತಾ ಇರ್ತೀರೋ ಏನೋ Eye-wink

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 10:16pm — muralihr

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

muralihr's picture

ಜನ್ಮ ಜನ್ಮದ ಅನುಭ೦ದ -- ಕನ್ನಡ - ಸ೦ಸ್ಕೃತ ನ೦ಟು ಪ್ರಾರ೦ಭ ಆದಾಗಿನಿ೦ದ ಈ ನ೦ಟು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 3, 2008 - 11:24pm — vasant.shetty

ಉ: ಬೆಂಗಳೂರಿನ ಕನ್ನಡವಿಲ್ಲದ ಏರಿಯದಲ್ಲೂ ಅಡಗಿರುವ ಕನ್ನಡ

vasant.shetty's picture

ಅಲ್ಲೆಲ್ಲೋ ನಾಲ್ಕು ಮನೆಲಿ ಕನ್ನಡ ಮಾತಾಡಿದ್ರೆ,, ಕನ್ನಡ ಅನ್ನೊದು under current ತರಹ ಬೆಂಗಳೂರಿನ ನಾಡಿಗಳಲ್ಲಿ ಹರಿತಿದೆ ಅನ್ನೊದು ಅತಿಶಯ ಆದೀತು..
ದೊಡ್ಡ ಪ್ರಮಾಣದಲ್ಲಿ ವಲಸಿಗರು ಬೆಂಗಳೂರಲ್ಲಿ ಸೇರಕೊಂಡಿರೋದನ್ನ ಯಾರು ಅಲ್ಲಗಳೆಯೋಕಾಗಲ್ಲ.. ಹಾಗ ಬಂದಿರೋ ವಲಸಿಗರು ಕನ್ನಡ ಮುಖ್ಯವಾಹಿನಿ ಸೇರದೆ, ತಮ್ಮದೇ ದ್ವೀಪ ಮಾಡಿಕೊಂಡಿರೋದು ಕಣ್ಣಿಗೆ ಕಾಣಲ್ವ? ಹಾಗಿರೋದ್ರಿಂದಲೆ ತಾನೇ, ವಿಜಯನಗರ ಅಪ್ಪಟ ಕನ್ನಡಿಗರ ಏರಿಯಾ ಆಗೋದು ?? ಎಷ್ಟೇ ಕಷ್ಟ ಆದ್ರೂ ನಮ್ಮೊರು ಮಾರ್ತಹಳ್ಳಿಲಿ ಇರದೇ ವಿಜಯನಗರಕ್ಕೆ ಬಸ್ಸಲ್ಲಿ ಬರೋದು ?

ಇವತ್ತು ಆಫೀಸ್ ಇಂದ ಬರ್ತಾ ಇದ್ದೆ,, ಜಯನಗರ ೯ ನೆ ಬ್ಲಾಕ್ ನಂತ ಅಚ್ಚ ಕನ್ನಡದ ( ??) ಪ್ರದೇಶದಲ್ಲಿ ೫೦೦ ಮೀಟರ್ ಅಂತರದಲ್ಲಿ ೨ ದೊಡ್ಡ ಆರ್ಕೆಷ್ಟ್ರಾ ನಡಿತಾ ಇತ್ತು,, ಎರಡರಲ್ಲೂ ತಮಿಳು ಹಾಡು ಹಾಕೊಂಡು, ತಮಿಳು ಬ್ಯಾನರ್ ಕಟ್ಟಿಕೊಂಡು ಕುಣಿತಾ ಇದ್ರು,, ಯೋಚಿಸಿ ನೋಡಿ,, ನಮ್ಮ ಜೀವಿತದವಧಿಯಲ್ಲಿ ಒಮ್ಮೆಯಾದ್ರೂ ತಮಿಳನಾಡಿನ ಯಾವುದಾರೂ ಊರಲ್ಲಿ ಒಂದೇ ಒಂದು ಕನ್ನಡ ಆರ್ಕೆಷ್ಟ್ರಾ ಮಾಡೋಕೆ ಆದಿತಾ? ಅದ್ಯಾಕೆ ಬರೀ ಕನ್ನಡಿಗರಷ್ಟೇ, ದೊಡ್ಡ ಮನಸ್ಸಿನವರಾಗಬೇಕು? ಕನ್ನಡಿಗರಷ್ಟೇ ವಿಶಾಲ ಹೃದಯಿಗಳು, ಅದು ಇದು ಅಂತಾ ಯಾರ ಹತ್ರಾನೋ ಹೊಗಳಿಸ್ಕೊಬೇಕು?

ಇಂತ ಸಂದರ್ಭದಲ್ಲೆಲ್ಲ ಕನ್ನಡದ ಪರವಾಗಿ ಧ್ವನಿ ಎತ್ತಿದ್ರೆ ಸಾಕು,, ಅವನು narrow minded, parochial, fanatic ಮಣ್ಣು ಮಸಿ ಅಂತ ಇರೋ ಬರೋದನ್ನೆಲ್ಲ ನಮ್ಮ ಮೇಲೆ ಆರೋಪಿಸ್ತಾರೆ.. ಅಲ್ಲಾ ರೀ,, ನಮ್ಮ ನಾಡಲ್ಲಿ ಕನ್ನಡ ಮಾತಾಡಿ ಅನ್ನೊ ನಾವು fanatic ಸೋ? ಇಲ್ಲ ಹಿಂದಿ ಮಾತಾಡೋ ಊರಿಂದ ಇಲ್ಲಿಗೆ ಬಂದು , ಇಲ್ಲಿಯೂ ಅವನ ಅನುಕೂಲಕ್ಕೆ ನಾವು ಹಿಂದಿ ಮಾತಾಡಲಿ ಅಂತಾ ಅಪೇಕ್ಷಿಸೋ ನಾರ್ಥಿಗಳು fanatic ಸೋ?

ಮಾತು ಎಲ್ಲಿಂದ ಎಲ್ಲಿಗೋ ಹೊರಳಿತು...
ಹೋಗಲಿ,, ಇಲ್ಲ್ಯಾರೋ ಒಬ್ಬಳು ತಲೆ ಕೆಟ್ಟಿರೋ ಕೊಂಗಮ್ಮ,, ಗಾಂಧಿ ಬಜಾರಲ್ಲಿ ಬರೀ ಹಿಂದಿ, ತೆಲುಗು, ತಮಿಳು ಅಂತಾ ಉದ್ದುದ್ದ ಭಾಷಣ ಕುಯ್ತವ್ಳೆ.. ಹಾದಿ ಬೀದಿಲಿ ಒಂದ ನಾಲ್ಕು ವಲಸಿಗರನ್ನ ಮಾತಾಡಸಿ,, ಬೆಂಗಳೂರು pure ಕಾಸ್ಮೋ ಪಾಲಿಟಿನ್ ಸಿಟಿ,, ಕನ್ನಡ ಲೆಕ್ಕಕ್ಕೆ ಇಲ್ಲ ಅಂತ್ರ ಅಂತಾ ನಮ್ಮ ನೆತ್ತಿ ಸವರತಾರಲ್ಲ,, ಇವರಿಗೆಲ್ಲ ಕಾಯಸಿ ಬರೆ ತಾನೇ ಹಾಕಬೇಕು?
http://bangalore.citizenmatters.in/articles/view/488-future-city

ಕೊನೆ ಮಾತು:
ಬೆಂಗಳೂರಿನಲ್ಲಿ ಕನ್ನಡ ಸೇಫ್ ಆಗಿದೆ ಅನ್ನೋದು ಎಷ್ಟು ದೊಡ್ಡ ಸುಳ್ಳೋ, ಕನ್ನಡ ಮಾಯವಾಗಿದೆ, ಕನ್ನಡಿಗರು ಪೂರ್ತಿ ಅಲ್ಪ ಸಂಖ್ಯಾತರು ಅನ್ನೋದು ಅಷ್ಟೇ ದೊಡ್ಡ ಸುಳ್ಳು.. ನಾವು ಚೆನ್ನೈಗಿಂತ ಹಿಂದೆ, ಮುಂಬೈಗಿಂತ ಚೂರೇ ಚೂರು ಬೆಟರ್ ಅನ್ನಬಹುದು..

-
ವಸಂತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾನು ಮಾತಾಡೋದು ಕನ್ನಡಾನೇ ಅಲ್ಲ..!! ಪರವಾಗಿಲ್ಲ..!!!
  • ಜೋತಿಶ್ಯ ಹೇಳೋರಿಗೆ, ಪುರೋಹಿತರಾದರೋರಿಗೆ ತೆರಿಗೆ ಇಲ್ವ?
  • ಏನ್-ಗುರು ಮತ್ತು ಹರಿಹರಪುರದ ಸ್ವಾಮೀಜಿ ಮತ್ತು ಕಣ್ಣು ನೋವು
  • ಹೆದರ್‍ ಬೇಡ ಕಣೋ....
  • ಇದು ನ್ಯಾಯಾನಾ ನೀವೇ ಹೇಳಿ ? ಇವರುಗಳ ಅನ್ಯಾಯಕ್ಕೆ ಕಡಿವಾಣ ಎಂದು?
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 343 ಅತಿಥಿಗಳು ಆನ್ಲೈನ್ ಇರುವರು.


ಪರಸ್ಥಳದಲ್ಲಿ ವಿದ್ಯೆಯೇ ಧನ, ವಿಪತ್ಕಾಲದಲ್ಲಿ ಬುಧ್ಧಿಯೇ ಧನ, ಪರಲೋಕದಲ್ಲಿ ಧರ್ಮವೇ ಧನ, ಒಳ್ಳೆಯ ನೆಡೆತೆಯಾದರೋ ಎಲ್ಲೆಡೆಯಲ್ಲಿಯೂ ಅಖಂಡ ಧನ.

— ಭಾರತ ಮಂಜರೀ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator