ಖಾನಾವಳಿ ಚನ್ನಿ
ನೆನ್ನೆ ಬಾನುವಾರ ೨/೨/೦೭ ನಾನು ನಂಗೆಳೆಯ ಬೆಳಿಗ್ಗೆ ೧೧.೩೦ ತಾಸಿಂದ ಮೆಜೆಸ್ಟಿಕ್ ಅಲ್ಲಿ ಟಿಕಾಣಿ ಹೂಡಿದ್ವು...
ಯಾಕೆ? ಅಂತೀರ.. ವಾರದ ಕೊನೆ, ಮಾಡಕ್ಕೆ ಕೆಲಸಿಲ್ಲ.. ಬೇಜಾರು...
ಮೊದಲು ನಂಗೆಳೆಯನ ’ಗೊರ್ತು’(ಗುರುತು) ಮಾಡ್ತೀನಿ. ಬಳ್ಳಾರಿಯವನು.. ಇವನ ದೆಸೆಯಿಂದ ನನ್ನ ಅಪ್ಟಟ ಕಾವೇರಿ-ಹೇಮಾವರಿ ಕನ್ನಡ ಹೋಗಿ, ಬಳ್ಳಾರಿಯ ತುಂಗಬದ್ರ-ಕನ್ನಡದ ಜೊತೆ ಕೂಡಕೊಳ್ತಿದೆ.. ನಾವಿಬ್ರೂ ಮಾತಾಡ್ತಿದ್ರೆ.. ಇವರು ಮಯ್ಸೂರೋರ, ಬಳ್ಳಾರಿಯೋರ ಅಂತ ಮಯ್ಸೂರು ಕಡೆಯೋರಿಗೂ, ಬಳ್ಳಾರಿ ಕಡೆಯೋರಿ ಗುಮಾನಿ ಜೋರೆದ್ದು ತಲೆ ಕೆರಕೆರ ಕೆರೆದುಕೊಂಡು ಹುಣ್ಣಾಗಬೇಕು... ಹಾಗೆ ನಾವಿಬ್ರು ಮಾತಾಡೋದು..
[ಇಲ್ಲಿಂದ ನೋಡ್ರಿ, ಅದೇ ಕನ್ನಡದಾಗ್ ಬರ್‍ದೀನಿ.. ]
ಸರಿ.. ೧೧ಗಂಟಿ ನಾವ್ ಕಲೆತು, ನಮ್ ತಿಂಡ್ಲು ಹಳ್ಳಿಂದ್, ನಮ್ ಬಿ.ಎಂ.ಟಿ.ಸಿ ಬಸ್ನಾಗ್ ಹೊರಟ್ ಮೆಜೆಸ್ಟ್ ೧೧.೩೦ ತಲ್ಪುದ್ವು.. ಹಾದಿ ಉದ್ದಕ್ಕೂ ಕಿಟಕಿಂದ ಇಣ್‌ಕಿ ಆ ಕಾರು ಮಾರುತಿ ಸ್ವಿಪ್ಟು. ಇದು ಸ್ಯಾಂಟ್ರೋ, ಅಂತ ಕಾರ್‍ಗಳನ್ ಗುರುತು ಹಚ್ಚೋದೇ ನಮ್ ಕೆಲಸವಾಗಿತ್ತು.. ಅದ್ಯಾಕೆ ಅಂತೀರ.. ಇಬ್ರುಗೂ ಕಾರ್-ಹುಚ್ಚು... ಇದ್ ಹ್ಯಾಗದೆ ನೋಡಿ, ಬಸ್ಸಲ್ಲಿ ಕುಂತು ಕಾರ್ ಮೆಚ್ಚೋದು.. ![]()
ಸರಿ... ೧೧.೧೦ ಮೆಜೆಸ್‌ಟಿಕಲ್ಲಿ ಬಂದಿಳಿತು, ನೇರ ತ್ರಿವೇಣಿ ಟಾಕೀಸ್ಗ್ ಹೋದ್ವು..ಇಂತಿ ನಿನ್ನ ಪ್ರೀತಿಯ ನೋಡಕ್ಕೆ.. ಆದ್ರೆ ನಾವ್ ಹೊರಟಿದ್ದು ’ಅವ್ವ’ ನೋಡಕ್ಕೆ ಆದ್ರೆ ’ಅವ್ವ’ ಮೆಜೆಸ್‌ಟಿಕ್ನಾಗಿರೋ ಟಾಕೀಸಿಂದ ಹೊಂಟ್‌ಹೋಗ್ವಳೆ. ಮುಂದಿನ ಶೋ ಒಂದೂವರಿಗೆ ಅಂತ್ ತಿಳಿದ್, ಏನ್ ಮಾಡೋದ್ಲೇ ಅಲ್ಲಿ ತನ? ಅಂತ ಯೋಚಿಸ್ತಿದ್ ನಮ್ಗೆ, ಒಂದು ಐಡಿಯ ಹೊಳೀತು.. ಅಲ್ಲೇ ಇದ್ ಗುಬ್ಬಿವೀರಣ್ಣ ನಾಟಕದ್ ಮನೆಯಲ್ ಒಂದು ನಾಟಕ ನೋಡೋದು, ಆಮ್ಯಾಲ್ ಬಂದು ಸಿನಿಮ ನೋಡೋದು ಅಂತ.
ಸರಿ.. ಅಲ್ಲೇ ೧೧.೪೫ಕ್ಕೆ ’ಖಾನಾವಳಿ ಚನ್ನಿ’ ಎಂಬೋ ನಾಟಕ ಇದ್ದಿತು. ಇಬ್ರೂ ಮುಂದಿನ್ ಸೀಟ್ಗಳ ಟಿಕಿಟ್ ಕೊಂಡ್ ಒಳ್ ಹೋದ್ವು..
ನಾಟಕ ಸಕ್ಕತ್ ಟಯ್ಮ ಪಾಸ್.. ಅದು ಸಾಮಾಜಿಕ ನಾಟಕವಂತೆ... ಹಲ-ಪಾತ್ರಗಳು ಒಳ್ಳೇ ಪವ್ರಾಣಿಕದೊರಂಗೆ ಸಿಕ್ಕಾಪಟ್ಟೆ ಸಂಸ್ಕ್‌ರುತ ಮಾತಾಡ್ತಿದ್ರು.. ಇನ್ನೂ ನಾಟಕದ ನಾಯಕಿ ಚನ್ನಿ ಮತ್ತವ್ರಪ್ಪ ಉತ್ರ ಕರ್ನಾಟಕದ ಬಾಶೆ ಆಡ್ತಿದ್ರು.. ನಾಟಕದ್ ಪೂರ ಡಬ್ಬಲ್, ತಿಬ್ಬಲ್, ಮೀನಿಂಗ್ ಜೋಕುಗಳಿಂದ ತುಂಬಿ ತುಳುಕಿ, ಹರಿದಾಡ್ತಿತ್ತು.. ನಾವಿಬ್ರು.. ’ಅಲಲ... ಭಾಳ್ ಭೇಶ್ ಅದ್ ನೋಡ್’.. ಅಂತ ಆ ಜೋಕುಗಳಿಗೆ ನಮ್ದೂ ಉಪಕತೆಗಳನ್ನು, ಕಿರಿಕತೆಗಳನ್ನು ಸೇರಿಸಿ ನಲಿದು ನುಲಿದಾಡಿದ್ವು..
ಸರಿ.. ಅಂತೂ ನಾಟಕ ಬರೋಬ್ಬಬ್‌ಬ್‌ಬ್‌ರಿ ಎರಡವರಿಗೆ ಮುಗಿತು. ಇನ್ನು ನಾಟಕಮನೆಯಿಂದ ಹೊರಬರ್ತಲೇ ಹೊಟ್ಟೆ-ಹೊಡೆಕ್ಕೊಳ್ಳಕ್ ಹತ್ತು(ಹತ್ತಿತು). ಹೆಂಗೂ ಮುಂದಿನ್ ಸಿನಿಮ ಶೋ ಇರೋದು ನಾಕೂವರಿಗೆ ಅಂತ ಮಾಡಿ, ಸೀದಾ ಆನಂದ-ರಾವ್ ಸರ್‌ಕಲ್ನಾಗಿರೋ ’ಪೈ’ ಜ್ವಾಳದ ರೊಟ್ಟಿ ಊಟ ತಿನ್ಲಾಕ್ ಹೋದ್ವು..
ಇಬ್ರು ಮನಿಯಾಗೂ ಜ್ವಾಳ ಮಾಡೊಲ್ರೂ.. ಇಬ್ರೂ ಅನ್ನ ತಿಂಬೋ ಮನಿ-ಮಂದಿ.. ಆದ್ರೂ ಹ್ವಾದ್ವು.. ನಾನ್ ಬರೀ ಜ್ವಾಳದ್ ರೊಟ್ಟಿ, ಹಾಗಲ್ಕಾಯಿ ಗೊಜ್ಜು, ಬದನೆಕಾಯಿ ಗೊಜ್ಜು ತಿಂದಿ. ನಂಗೆಳೆಯ ಮೂರ್ ರೊಟ್ಟಿ ತಿಂದ್, ನನ್ ಕಯ್ಲ್ ಈ ಜ್ವಾಳದ ರೊಟ್ಟಿ ಇನ್ ಆಗೊಲ್ದೆ, ಅಂದು ಅನ್ನ ಸಾರ್ ತಿಂದ.. ಅಂತೂ ನಮ್ ಇಬ್ರೂ ಬಾನುವಾರದ ದೊಡ್ಡೂಟ ಸಕ್ಕತಾಗಿ ನಡೆದು.. ಪಾನ್ ಅಕ್ಕೊಂಡು ತ್ರಿವೇಣಿ ಮುಂದೆ ಮೂರು-ಮುವತ್ತಕ್ಕೆ ಹಾಜರ್.
ಅಲ್ಲೋ ಯಕ್ಕಮಕ್ಕ ದೊಡ್ಡ ಲಯ್ನು ಬಾಲ್ಕಾನಿಗೆ.. ಸರಿ.. ನಾನ್ ನಂಗೆಳೆಯನ್ನ ಸಾಲ್ ಕೊನೆಗಟ್ಟಿ, ನಾ ಮುಂದೆ ಸೇರ್ಕೋಬೋದ ಅಂತ ತಿಣ್‌ಕ್‌ತಿದ್ದೆ.. ಅಶ್ಟರಲ್ಲಿ ಕಾವಲ್ಗಾರ ಬಂದ್ ಗದರ್‌ಸಿ ನಂನಂನೂ ಹಿಂದಟ್ಟಿ ಬಿಟ್ಟ.. ನನ್ ಮಗ ಟಟಟಟ ಪಪಪಪ.
ಸರಿ.. ಅಶ್ಟುದ್ದು ಕ್ಯೂನಾಗೆ ಅಶ್ಟುಹೊತ್ ಹೆಂಗ್ ನಿಲ್ಲೋದು.. ಅದಕ್ ನಮ್ ಕಯ್ಲಿದ್ದ ಕನ್ನಡಪ್ರಬ ಪದಬಂದ ತುಂಬ್ಕೋತಾ ಮುಮ್‌ಮುನ್ ಹೋದ್ವು..
ಹಯ್ಟ್‌ಲಗಾ! ನಮ್ ಅದ್ರುಶ್ಟಕ್ಕೆ ಬಾಲ್ಕಾನಿಯ ಕೊನೆ ಎರಡು ಟಿಕೀಟು ನಮಗ್ ಸಿಕ್‌ಬಿಡ್ತು.. ನಮಗೆ ಎರಡು ಟಿಕೀಟ್ ಕೊಟ್ ಕವಂಟರ್ ಮುಚ್‌ದ, ಕವಂಟರ್‍ನೋನು.
ಸರಿ ಇಬ್ರೂ ಸಕ್ಕತ್ ಕುಶಿಪಟ್ಟು.. ಅಲ್ಲೆಲ್ಲಾ ಸುತ್ತಾಡ್‌ಕೊಂಡು ಬರ್ಮ ಬಜಾರ್ ಹ್ವಾಗಿ.. ಎರಡು ಗೇಮ್ ಡಿವೀಡಿ ತಕ್ಕೊಂಡು, ವಾಪಿಸ್ ತ್ರಿವೇಣಿಗೆ ಬಂದು ಆ ಚಂದದ ಸಿನಿಮ ನೋಡ್ಕೊಂಡು ಮನಿಗ್ ಬಸ್ಸಲ್ ಹ್ವಾಗಿ ಮಕ್ಕೊಂಡ್ವು.. ![]()

- mahesha ರವರ ಬ್ಲಾಗ್
- Login or register to post comments
- 239 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಖಾನಾವಳಿ ಚನ್ನಿ
ಯಾವವು?
(ಮಾಯ್ಸಣ್ಣ ಅಟ್ಟಿಸ್ಕೊಂಡು ಬರಲ್ಲಾ ಅಂದ್ಕೊಂಡೇನಿ...)
ಉ: ಖಾನಾವಳಿ ಚನ್ನಿ
ಅಟ್ಟಿಸಿಕೊಂಡು ಯಾಕೆ ಬರಲಿ ? ( ಅಟ್ಟಿಸೋದಕ್ಕೂ, ಅಟ್ಟೋದಕ್ಕೆ ಬೇರೆತನ ಇದೆ
.. ಯೋಚಿಸಿ )
ಎರಡರ ಹೆಸರು ಸರಿಯಾಗಿ ನೆನಪಾಗ್ತಿಲ್ಲ.....
೧) ರೋಮ್ ಪಡೆಯಿಂದ ಬವರ
೨) ಅಗಾತಾ ಕ್ರಿಸ್ಟ್ ತರ ಒಂದು ಕೊಲೆಯ ಗುಟ್ಟು ರಟ್ಟು.
ಮತ್ತೊಂದು ಡಿವಿಡಿ ತಕ್ಕೊಂಡ್ವು.. ಅದು ಬೇಡ ಬಿಡಿ..