ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › madhava_hs ರವರ ಬ್ಲಾಗ್

ಗಾಯತ್ರೀ ಛಂದಸ್ಸು

May 29, 2008 - 6:12pm — madhava_hs

ಏನಿದು ಗಾಯತ್ರೀ ಛಂದಸ್ಸು?

ವೇದಗಳಲ್ಲಿ ಹಲವಾರು ಮಂತ್ರಗಳು ಗಾಯತ್ರೀ ಛಂದಸ್ಸಿನಲ್ಲಿವೆ. ಇದರ ವಿಶಿಶ್ಟತೆ ಏನು?

ಬೇರೆ ವಿದದ ಛಂದಸ್ಸುಗಳಾವವು?

  • ವ್ಯಾಕರಣ
~.~
  • madhava_hs ರವರ ಬ್ಲಾಗ್
  • Login or register to post comments
  • 578 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 29, 2008 - 6:18pm — savithru

ಉ: ಗಾಯತ್ರೀ ಛಂದಸ್ಸು

savithru's picture

ನನಗೆ ಗೊತ್ತಿರುವುದು..ಅರ್ಥಾತ್ ಈ ಕ್ಷಣಕ್ಕೆ ನೆನಪಿಗೆ ಬರ್ತ ಇರೋದು...
ಅನುಷ್ಟುಪ್ ಛಂದಸ್ಸು... . ಮೃತ್ಯುಂಜಯ ಮಂತ್ರವು ಇದೆ ಛಂದಸ್ಸಿನಲ್ಲಿದೆ. ನಾಲ್ಕು ಸಾಲು ಇದರ ಒಂದು ಲಕ್ಷಣ.
ಮೂರು ಸಾಲು ಗಾಯತ್ರಿಯ ಒಂದು ಲಕ್ಷಣ.

ವೇದಗಳನ್ನು ಬಲ್ಲವರು ಹೆಚ್ಚು ಸೇರಿಸಿ.

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 9:01pm — Prabhu Murthy

ಉ: ಗಾಯತ್ರೀ ಛಂದಸ್ಸು

Prabhu Murthy's picture

ಗಾಯತ್ರಿ:
೩ ಪಾದಗಳು... ಪ್ರತಿಪಾದದಲ್ಲಿ ೮ ಅಕ್ಷರಗಳು -> ಒಟ್ಟು ೨೪ ಅಕ್ಷರಗಳು (ಗಾಯತ್ರೀ ಚತುರ್ವಿಂಶತ್ಯಕ್ಷರಾ)

ವೇದದ ಚಂದಸ್ಸುಗಳಲ್ಲಿ ಗಾಯತ್ರಿಯನ್ನು ಸಾಮಾನ್ಯವಾಗಿ ಮೊದಲು ಹೇಳುತ್ತಾರೆ.
ಗಾಯತ್ರಿ ಉಷ್ಣಿಕ್ ಅನುಷ್ಟುಪ್ ಬೃಹತಿ ಪಂಕ್ತಿ ತ್ರಿಷ್ಟುಪ್ ಜಗತಿ ಇತ್ಯಾದಿ.

ಗಾಯತ್ರಿ -> ೨೪ ಅಕ್ಷರ
ಉಷ್ಣಿಕ್ -> ೨೮
ಅನುಷ್ಟುಪ್ -> ೩೨
...
ಪ್ರತಿ ಚಂದಸ್ಸು ಹಿಂದಿನಕ್ಕಿಂತ ೪ ಅಕ್ಷರ ಹೆಚ್ಚಿನದು.

ಅನುಷ್ಟುಪ್ ತುಂಬಾ ಪ್ರಚಲಿತವಿರುವ ಚಂದಸ್ಸು. ಅದರ ಲಕ್ಷಣವನ್ನು ಹೀಗೆ ಬರೆಯಬಹುದು:
೮ <> ೮ |
೮ <> ೮ ||
<> ಯತಿ ವಿಶ್ರಮ
ಉದಾ: ಭಗವದ್ಗೀತೆಯ ಬಹುಪಾಲು ಶ್ಲೋಕಗಳು ಅನುಷ್ಟುಪ್ಪಿನಲ್ಲಿವೆ.

ಹೆಚ್ಚಿನ ವಿವರಕ್ಕೆ:
http://en.wikipedia.org/wiki/Vedic_meter

ಪ್ರಭು ಮೂರ್ತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 29, 2008 - 11:14pm — srivathsajoshi

ಉ: ಗಾಯತ್ರೀ ಛಂದಸ್ಸು

srivathsajoshi's picture

ಪಂಚಮಂ ಲಘು ಸರ್ವತ್ರ
ಸಪ್ತಮಂ ದ್ವಿಚತುರ್ಥಯೋಃ
ಗುರು ಷಷ್ಟಂ ಚ ಪಾದಾನಾಂ
ಚತುರ್ಣಾಂಸ್ಯಾದನುಷ್ಟುಭಿ: ||

ಇದು ಅನುಷ್ಟುಪ್ ಛಂದಸ್ಸಿನ ಬಗ್ಗೆ ಅನುಷ್ಟುಪ್ ಛಂದಸ್ಸಿನಲ್ಲಿಯೇ ಇರುವ ಸೂತ್ರ/ಶ್ಲೋಕ.

ನಿಯಮಗಳು:

೧) ಒಟ್ಟು ನಾಲ್ಕು ಸಾಲುಗಳು (ತಲಾ ಎಂಟು ಅಕ್ಷರಗಳು)
೨) ಎಲ್ಲ ಸಾಲುಗಳ ಐದನೆಯ ಅಕ್ಷರ ಲಘು
೩) ಎರಡನೆ ಮತ್ತು ನಾಲ್ಕನೆ ಸಾಲುಗಳ ಏಳನೆಯ ಅಕ್ಷರ ಲಘು
೪) ಎಲ್ಲ ಸಾಲುಗಳ ಆರನೆಯ ಅಕ್ಷರ ಗುರು
=======

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 2:58am — benaka

ಉ: ಗಾಯತ್ರೀ ಛಂದಸ್ಸು

benaka's picture

ಮಾಧವರೇ,

ಗಾಯತ್ರೀಛಂದಸ್ಸಿನ ಲಕ್ಷಣವನ್ನು ಒಂದೊಂದು ಗ್ರಂಥವೂ ತನ್ನದೇ ಆದ ಬಗೆಯಲ್ಲಿ ಹೇಳುತ್ತದೆ:

೧."ಗಾಯತ್ರೀ ಷಡಕ್ಷರಾ" (ವೃತ್ತರತ್ನಾಕರ)

-> ಪ್ರತಿಪಾದದಲ್ಲಿ ಆರು ಅಕ್ಷರವುಳ್ಳ ವೃತ್ತವೇ ಗಾಯತ್ರೀ; ಅಂದರೆ ೪ ಪಾದಗಳಿಂದ ೨೪ ಅಕ್ಷರದ ಮಿತಿಯುಳ್ಳ ಛಂದಸ್ಸು.
ಇದರಲ್ಲಿ ಮೂರು ವಿಧಗಳಿವೆ: ತನುಮಧ್ಯಾ, ಶಶಿವದನಾ, ವಸುಮತೀ

೨."ಗಾಯತ್ರ್ಯಾಃ ವಸವಃ" (ಛಂದಶ್ಶಾಸ್ತ್ರ)

-> ಪ್ರತಿಪಾದದಲ್ಲಿ ಎಂಟು ಅಕ್ಷರವುಳ್ಳ ವೃತ್ತವೇ ಗಾಯತ್ರೀ; ಅಂದರೆ ೩ (ಗಮನಿಸಿ:ಮೂರು)ಪಾದಗಳಿಂದ ೨೪ ಅಕ್ಷರದ ಮಿತಿಯುಳ್ಳ ಛಂದಸ್ಸು.ಇದೇ ವೇದಗಳಲ್ಲಿ ಕಂಡುಬರುವ ವೃತ್ತ. "ಗಾಯತ್ರೀ ಚತುರ್ವಿಂಶತ್ಯಕ್ಷರಾ,ತ್ರಿಪದಾ,ಷಟ್ಕುಕ್ಷೀ" ಎಂದು ವೈದಿಕ ವರ್ಣನೆ.

೩."ಅಗುರುಚತುಷ್ಕಂ ಭವತಿ ಗುರೂ ದ್ವೌ,ಘನಕುಚಯುಗ್ಮೇ ಶಶಿವದನಾಸೌ" (ಶ್ರುತಬೋಧ)
-> ಪ್ರತಿಪಾದದಲ್ಲಿ ಆರಕ್ಕರವಿರುವ ವೃತ್ತ "ಶಶಿವದನಾ" ಎನ್ನುತ್ತಾನೆ ಇಲ್ಲಿ ಕಾಳಿದಾಸ!(ವೃತ್ತರತ್ನಾಕರದಂತೆ ಇದು ಗಾಯತ್ರಿಯ ಒಂದು ವಿಧ)

ವೇದಗಳ ಗಾಯತ್ರೀ ತ್ರಿಪದಿಯಾಗಿದ್ದು,೨೪ ಅಕ್ಕರವಿದ್ದರೂ,ಉಚ್ಚಾರಣಾಶೈಲಿಯ ವ್ಯತ್ಯಾಸದಿಂದ ೨೩ ಅಕ್ಕರವಾಗಿರುವುದೂ ಉಂಟು.ಇದೇ "ನಿಚೃದ್ಗಾಯತ್ರೀ" ಛಂದಸ್ಸೆಂದು ಬಳಕೆಯಲ್ಲಿರುವ ಪ್ರಸಿದ್ಧ ವೃತ್ತ.

ಪಿಂಗಳನ ಛಂದಶ್ಶಾಸ್ತ್ರವನ್ನು ಓದಿದಲ್ಲಿ ಹೆಚ್ಚಿನ ಮಾಹಿತಿ ಲಭ್ಯ.ಅಥವಾ ಈ ಹಿಂದೆ ಸಂಪದದಲ್ಲಿ ನಡೆದ ಚರ್ಚೆಯಿಂದ ಲಭ್ಯವಾದ "ನಾಗವರ್ಮನ ಕನ್ನಡ ಛಂದಸ್ಸು" ಕೂಡ ಉಪಯುಕ್ತವೇ!

ನಿಮ್ಮವ

ಬೆನಕ

ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 11:39am — madhava_hs

ಉ: ಗಾಯತ್ರೀ ಛಂದಸ್ಸು

madhava_hs's picture

ನಿಮ್ಮಗಳೆಲ್ಲರ ಪ್ರತಿಕ್ರಿಯೆಗೆ ಧನ್ಯವಾದಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಛಂದಸ್ಸು ಪ್ರಾಸ ಬೇಡವೇ?
  • ಪ್ರಾಸ ಮತ್ತು ಛಂದಸ್ಸು
  • ಏನಿದು?
  • ವಿಫಲ ಪ್ರಯತ್ನ
  • ಕವನ ಬರೆವ ಹವ್ಯಾಸವುಳ್ಳವರಿಗಾಗಿ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • shylaswamy
    ಉ: ಸಕಲವೂ ಈಶ್ವರಮಯವಾದುದು
    December 2, 2008 - 10:44am
  • savithasr
    ಉ: ಮುಗಿಲಿಗೆ ಭೊಷಣ ಬಿದಿಗೆ ಚಂದ್ರಮನು
    December 2, 2008 - 10:43am
  • Rakesh Shetty
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 10:19am
  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
ಇನ್ನಷ್ಟು
ಈಗಿನಂತೆ 15 ಸದಸ್ಯರು ಮತ್ತು 158 ಅತಿಥಿಗಳು ಆನ್ಲೈನ್ ಇರುವರು.


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator