ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › Sampada Blogs › madhava_hs ರವರ ಬ್ಲಾಗ್

ಕುಮಾರವ್ಯಾಸ ಭಾರತ

July 23, 2008 - 11:05am — madhava_hs

ಕುಮಾರವ್ಯಾಸ ಭಾರತ ಒಂದು ಸಮಗ್ರ ಕನ್ನಡ ಪುರಾಣ ಕಾವ್ಯ. ಇದರಲ್ಲಿ ಎಲ್ಲ ಸಂದರ್ಭಗಳನ್ನು ರಸವತ್ತಾಗಿ ವರ್ಣಿಸಿ ಪ್ರತಿಯೊಂದು ಘಟನಾವಳಿಗಳ ಹಿನ್ನೆಲೆ ಯನ್ನು ಅದರ ಕಾರಣ ಸಮೇತ ವರ್ಣಿಸಿದ್ದಾನೆ ಕವಿ. ಆದರೂ ಕರ್ನಾಟಕದಲ್ಲಿ ಕುಮಾರವ್ಯಾಸ ಭಾರತ ಕೇವಲ ಗಮಕವಾಚನಕಾರರಿಗೆ ಮಾತ್ರ ಸೀಮಿತವಾಗಿದೆಯೇನೋ ಅನ್ನಿಸುತ್ತದೆ. ಅಲ್ಲೊಬ್ಬರು ಇಲ್ಲೊಬ್ಬರು (ಶತಾವಧಾನಿ ಗಣೇಶ್, ಪಾವಗಡ ಪ್ರಕಾಶರಾವ್) ಹೆಚ್ಚು ಕನ್ನಡ ಪಾಂಡಿತ್ಯವಿದ್ದವರು ಬಿಟ್ಟರೆ ಇತರ ವಿಧ್ವತ್ ಜನರ ನಡುವೆ ಇದು ಅಷ್ಟೊಂದು ಪ್ರಚಾರ ಪಡೆದುಕೊಂಡಿಲ್ಲ. ಪ್ರೊ.ಕೆ.ಎಸ್.ನಾರಾಯಣಾಚಾರ್ಯರು ಬರೆದಿರುವ ’ಆ ಹದಿನೆಂಟು ದಿನಗಳು’ ಸಹ ಮಹಾಭಾರತವನ್ನಾದರಿಸಿದ ಕೃತಿ. ಇದು ಹಿಂದೆ ತರಂಗದಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿತ್ತು.
ಕನ್ನಡದಲ್ಲಿ ಮಹಾಭಾರತವನ್ನಾದರಿಸಿ ಬರೆದ ಮಹತ್ತಾದ ಕೃತಿಗಳು ಇನ್ಯಾವುವು?

  • ಸಾಹಿತ್ಯ
~.~
  • madhava_hs ರವರ ಬ್ಲಾಗ್
  • Login or register to post comments
  • 280 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 23, 2008 - 12:02pm — Sunil Jayaprakash

ಉ: ಕುಮಾರವ್ಯಾಸ ಭಾರತ

Sunil Jayaprakash's picture

ಪರ್ವ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 6:08pm — keerthi2kiran

ಉ: ಕುಮಾರವ್ಯಾಸ ಭಾರತ

keerthi2kiran's picture

ಎಸ್ ಎಲ್ ಭೈರಪ್ಪನವರ ಕಾದಂಬರಿ. ತುಂಬಾ ಚೆನ್ನಾಗಿದೆ.
ಕೀರ್ತಿ ಕಿರಣ್ ಎಂ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 12:35pm — mahesha

ಉ: ಕುಮಾರವ್ಯಾಸ ಭಾರತ

mahesha's picture

ಗದಾಯುದ್ಧ/ಸಾಹಸಭೀಮವಿಜಯ
ವಿಕ್ರಮಾರ್ಜುನ ವಿಜಯ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 12:50pm — HV SURYANARAYAN...

ಉ: ಕುಮಾರವ್ಯಾಸ ಭಾರತ

HV SURYANARAYANA SHARMA's picture

ಇವು ವೀರ ಕನ್ನಡಿಗರು ಓದಬಾರದ ಕಬ್ಬಗಳು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 3:13pm — mahesha

ಉ: ಕುಮಾರವ್ಯಾಸ ಭಾರತ

mahesha's picture

ಯಾಕೆ ಓದಬಾರದು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 4:48pm — HV SURYANARAYAN...

ಉ: ಕುಮಾರವ್ಯಾಸ ಭಾರತ

HV SURYANARAYANA SHARMA's picture

ಯಾಕೆಂದರೆ ಈ ಕಬ್ಬಗಳಲ್ಲಿ ಹೇರಳವಾದ ಕನ್ನಡದವಲ್ಲದ ಒರೆಗಳಿವೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 4:54pm — mahesha

ಉ: ಕುಮಾರವ್ಯಾಸ ಭಾರತ

mahesha's picture

ಇದ್ದರೇನು?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 3:17pm — shreekant.mishrikoti

ಉ: ಕುಮಾರವ್ಯಾಸ ಭಾರತ

shreekant.mishrikoti's picture

ಅದ್ಯಾವ್ದೋ ಪ್ರಸಿದ್ಧ ಕನ್ನಡ ಕಾವ್ಯ ಅಂತೆ ... ಅದ್ರಲ್ಲಿನ ಕನ್ನಡ ಪ್ರತ್ಯಯ ಎಲ್ಲ ತೆಗೆದು ಹಾಕಿದರೆ .... ಉಳಿವುದೆಲ್ಲಾ ಮರಾಠೀ ಅಂತೆ !

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 2:18pm — Sunil Jayaprakash

ಉ: ಕುಮಾರವ್ಯಾಸ ಭಾರತ

Sunil Jayaprakash's picture

ವಿಕ್ರಮಾರ್ಜುನ ವಿಜಯದ ಕೆಲವು ತುಣುಕುಗಳನ್ನು ಓಎಲ್ಎನ್.ಸ್ವಾಮಿಗಳು ಇಲ್ಲಿ ಪರಿಚಯ ಮಾಡಿಸಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 2:17pm — Sunil Jayaprakash

ಉ: ಕುಮಾರವ್ಯಾಸ ಭಾರತ

Sunil Jayaprakash's picture

"ದ್ರೌಪದಿಯ ಸ್ವಗತ" ಅಂತಲೋ ಏನೋ ಸುಧಾದಲ್ಲಿ ಬರ್ತಾ ಇತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 10:13pm — Ennares

ಉ: ಕುಮಾರವ್ಯಾಸ ಭಾರತ

Ennares's picture

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾಗಿದ್ದ ಡಾ. ಎ. ಆರ್. ಕೃಷ್ಣಶಾಸ್ತ್ರಿಯವರು ೧೯೫೦ನೇ ಇಸವಿಯಲ್ಲಿ ತಮ್ಮ "ವಚನ ಭಾರತ" ಕೃತಿಯನ್ನು ಪ್ರಕಟಿಸಿದರು.
ಪ್ರಕಾಶಕರು: ಗೀತಾ ಬುಕ್‍ಹೌಸ್, ಮೈಸೂರು.
ಮೊದಲ ಮುದ್ರಣ: ೧೯೫೦
ಎಂಟನೆಯ ಮುದ್ರಣ: ೧೯೯೩
ಬೆಲೆ ರೂ: ೧೨೫.೦೦

೧೯೫೦ರ ದಶಕದಲ್ಲಿ ನಾವುಗಳು ಎಂಟನೆಯ ತರಗತಿಯ ಪಠ್ಯಪುಸ್ತಕವಾಗಿ "ವಚನಭಾರತ"ದ ಒಂದು ಅಧ್ಯಾಯ "ಅರಣ್ಯ ಪರ್ವ" ಓದಿದ್ದೆವು.

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 10:18pm — Ennares

ಉ: ಕುಮಾರವ್ಯಾಸ ಭಾರತ

Ennares's picture

"ವಚನ ಭಾರತ" ಗಾಂಧೀಬಜಾರ್‍ನ ಅಂಕಿತ ಪುಸ್ತಕದಂಗಡಿಯಲ್ಲೂ ದೊರಕುತ್ತೆ. ನಾನಂತೂ ನನ್ನ ಪ್ರತಿಯನ್ನು ಕೊಂಡದ್ದು ಅಲ್ಲೇ.

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 8:19am — mahesha

ಉ: ಕುಮಾರವ್ಯಾಸ ಭಾರತ

mahesha's picture

ವಚನ ಬಾರತ ತುಂಬಾ ಚನ್ನಾಗಿದೆ ಚಕ್ಕೊಟವಾಗಿದೆ..

ಮಹಾಬಾರತ ಮೊದಲು ಓದೋರಿಗೆ ಒಳ್ಳೇ ಹೊತ್ತಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 23, 2008 - 11:04pm — Narayana

ಉ: ಕುಮಾರವ್ಯಾಸ ಭಾರತ

Narayana's picture

ಮತ್ತೊಂದು ಮಹತ್ವದ ಪುಸ್ತಕ ಅಂದರೆ ಯುಗಾಂತ . ಇದು ಮೂಲ ಕನ್ನಡವಲ್ಲ , ಮರಾಠಿ ( ಮೂಲ ಲೇಖಕಿ : ಇರಾವತಿ ಕರ್ವೆ) . ಆದರೆ ಇದರ ಕನ್ನಡ ಅನುವಾದ ಬಹಳ ಹಿಂದೆ ಓದಿದ್ದೆ . ಚೆನ್ನಾಗಿದೆ.

ಭೈರಪ್ಪನವರ ಪರ್ವ ಹೊರಬಂದಾಗ ಅದು ಯುಗಾಂತದಿಂದ ಪ್ರಭಾವಿತವಾಗಿದೆ ಅಂತ ಯಾರೋ ಬರೆದಿದ್ದ ನೆನಪು. (ಹಾಗಿರಲಿಕ್ಕಿಲ್ಲ ಅಂತ ಪರ್ವ ಓದಿದ ಮೇಲೆ ಅನ್ನಿಸಿತು)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 1:10am — Ennares

ಉ: ಕುಮಾರವ್ಯಾಸ ಭಾರತ

Ennares's picture

ತಮ್ಮ ವಚನಭಾರತಕ್ಕಾಗಿ ೧೯೫೦ರಲ್ಲಿ ಮೊದಲ ಮುದ್ರಣದ ಪೀಠಿಕೆಯಲ್ಲಿ ಕೃಷ್ಣಶಾಸ್ತ್ರಿಗಳು ಈ ಕೆಳಕಂಡ ಮಾಹಿತಿ ಕೊಟ್ಟಿದ್ದಾರೆ.

"ಮಹಾಭಾರತವು ಬಹು ದೊಡ್ಡ ಗ್ರಂಥ; ಹರಿವಂಶವೂ ಸೇರಿದರೆ ಒಂದು ಲಕ್ಷಶ್ಲೋಕಗಳಿಗಿಂತ ಹೆಚ್ಚಾಗುತ್ತದೆ......... ಸಂಸ್ಕೃತ ತಿಳಿದವರೂ ಅದನ್ನು ಆಮೂಲಾಗ್ರವಾಗಿ ಓದಿ ಜೀರ್ಣಿಸಿಕೊಳ್ಳುವುದು ಸುಲಭಸಾಧ್ಯವಲ್ಲ........ ಲೋಕೋಪಕಾರಬುಧ್ಧಿಯೂ, ಭಗವದ್ಭಕ್ತಿಯೂ, ಸರಸ್ವತೀ ಪ್ರಸಾದವೂ ಉಳ್ಳ"ಕುಮಾರವ್ಯಾಸ" ನಂಥವರು ಅದನ್ನು ಕನ್ನಡಿಸಿದರು. ನಾರಣಪ್ಪನ ಭಾರತ ಕನ್ನಡ ಸಾಹಿತ್ಯದ ಗೋಪುರಕ್ಕೆ ಇಟ್ಟಿರುವ ಬಂಗಾರದ ಕಳಶಗಳಲ್ಲಿ ಒಂದು. ಆದರೂ ಅದು ಪದ್ಯ; ಅದರ ಭಾಷೆ ನಡುಗನ್ನಡ; ಸಾಮಾನ್ಯಜನಕ್ಕೆ ಅದನ್ನು ಓದುವಷ್ಟೂ ತಾಳ್ಮೆ ಭಾಷಾಜ್ನಾನಗಳು ಇಲ್ಲ.

ಪಂಪಭಾರತವಂತೂ ಪ್ರೌಢ ಚಂಪೂಕಾವ್ಯ; ಅದನ್ನು ಓದುವುದಕ್ಕೆ ಪಾಂಡಿತ್ಯ ಬೇಕು. ಇದನ್ನು ಕಂಡು ಮುಮ್ಮಡಿ ಕೃಷ್ನರಾಜ ಒಡೆಯರವರು ಸಂಸ್ಕೃತ ಮಹಾಭಾರತವನ್ನು ಅಕ್ಷರಶಃ ಭಾಷಾಂತರ ಮಾಡಿಸಿದರು*. ಆದರೆ ಅದು ಹಲವು ದೊಡ್ಡ ಸಂಪುಟಗಳಲ್ಲಿದೆ; ಆದ್ದರಿಂದ ಬೆಲೆ ಹೆಚ್ಚು; ಅವು ಎಷ್ಟೋ ವರ್ಷಗಳ ಹಿಂದೆಯೇ ಮುಗಿದು ಹೋಗಿ ಪುಸ್ತಕಭಂಡಾರಗಳಲ್ಲಿ ಅಲ್ಲೊಂದುಇಲ್ಲೊಂದು ಸಿಕ್ಕುವ ಪ್ರತಿಯೂ ತುಂಬಾ ಜೀರ್ಣವಾಗಿರುತ್ತದೆ. ಈಚೆಗೆ ದಿ. ದೇವಶಿಖಾಮಣಿ ಅಳಸಿಂಗರಾಚಾರ್ಯರು ಮಹಾಸಾಹಸ ಮಾಡಿ ಅದನ್ನು ಆಮೂಲಾಗ್ರವಾಗಿ ಭಾಷಾಂತರಿಸಿ ಪ್ರಕಟಿಸಿದರು** ಇದು ಮುಖ್ಯವಾಗಿ ದಾಕ್ಷಿಣಾತ್ಯ ವಿಸ್ತಾರ ಪಾಠವನ್ನು ಅನುಸರಿಸಿದೆ; ಏಕರೂಪವಾದ, ಸುಲಭವಾದ, ಶುಧ್ಧವಾದ, ಹೊಸಗನ್ನಡದಲ್ಲಿದೆ; ಸಚಿತ್ರವಾಗಿ ಹಿಡಿತವಾಗಿ ಇದೆ. ಆದರೂ ಹಲವು ಸಂಪುಟಗಳಲ್ಲಿರುವುದರಿಂದ, ಹೆಚ್ಚು ವಿವರಗಳನ್ನು ಅಪೇಕ್ಷಿಸದೆ ಕಥೆಯನ್ನು ಓದಿಕೂಂಡುಹೋಗಬೇಕೆನ್ನುವರಿಗೆ ಇದು ತುಂಬಾ ಭಾರವಾಗುತ್ತದೆ............................................................................................................
........................................................................................................................

......ಇನ್ನೂ ಸ್ವಲ್ಪ ವಿಸ್ತಾರವಾಗಿ, ಉಪಕಥೆ, ನೀತಿ ಧರ್ಮ ಎಲ್ಲವನ್ನೂ ಒಳಕೊಂಡು, ಸರಳವಾದ ಗದ್ಯದಲ್ಲಿ ಬರೆದ, ಒಂದು ಸಂಪುಟದಲ್ಲಿರುವ, ಜನಸಾಮಾನ್ಯಕ್ಕೆ ನಿಲುಕುವಂಥ ಒಂದು ಕನ್ನಡ ಭಾರತ ಬೇಕಾಗಿತ್ತು; ಈ ಅಭಿಪ್ರಾಯ ನಾನು ವಿದ್ಯಾರ್ಥಿಯಾಗಿದ್ದಾಗಲೇ ಇತ್ತು; ಉಪಾಧ್ಯಾಯನಾಗಿದ್ದಾಗ ಅದರ ಅವಶ್ಯಕತೆ ಆಗಾಗ್ಗೆ ತೋರುತ್ತಲೇ ಇತ್ತು. ಆದ್ದರಿಂದ ಸ್ಪಷ್ಟವಾದ ಸೂಚನೆ ಬಂದ ಕೂಡಲೆ ಅದನ್ನು ಮನಸಾರೆ ಕೈಗೊಂಡೆ..."

___________________________________________________________________
* - "ಕೃಷ್ನರಾಜ ವಾಣೀವಿಲಾಸವೆಂಬ ಮಹಾಭಾರತದ ಕನ್ನಡ ಟೀಕು"- ರಚನೆ ಕ್ರಿ. ಶ. ೧೮೨೦
** - " ಶ್ರೀ ಮಹಾಭಾರತವು -ಕರ್ಣಾಟಕ ವಚನವು" -ರಚನೆ ೧೯೩೨-೩೩
__________________________________________________________________

ನವರತ್ನಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 9:08am — Sunil Jayaprakash

ಉ: ಕುಮಾರವ್ಯಾಸ ಭಾರತ

Sunil Jayaprakash's picture

ಅರರೆ!!! ಒಂದು ಬಿಟ್ಟೇಬಿಟ್ವಲ್ಲ, ಜೈಮಿನಿ ಭಾರತ !!! ಇದು ಗಮಕಿಗಳ ನಡುವೆ ಸಿಕ್ಕಾಪಟ್ಟೆ ಹೆಸರುವಾಸಿಯಾಗಿತ್ತಂತೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 24, 2008 - 6:41pm — madhava_hs

ಉ: ಕುಮಾರವ್ಯಾಸ ಭಾರತ

madhava_hs's picture

ನಿಮ್ಮ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.
ವಚನ ಭಾರತ ವನ್ನು ಒಂದಷ್ಟು ಭಾಗ ಪಠಿಸಿದ್ದೆ.. ಚೆನ್ನಾಗಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಕುಮಾರವ್ಯಾಸ ಭಾರತ' ಕಾವ್ಯ ವಾಚನ-ವ್ಯಾಖ್ಯಾನ
  • ಕುಮಾರವ್ಯಾಸ ಭಾರತದ ಕಾವ್ಯ ವಾಚನ
  • ೫೮ ನೆಯ 'ಗಣರಾಜ್ಯದಿನೋತ್ಸವ'ದ ಶುಭದಿನದ ಹಾರ್ದಿಕ ಶುಭಾಷಯಗಳು !
  • ವೇದ ಪುರುಷನ ಸುತನ ಸುತನ...
  • ಈ ಹಾಡನ್ನು ಹಾಡಿ, ಕೇಳಿಸಿರಿ ದಯವಟ್ಟು!
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮಾ(ನವ) ಜೀ(ವನ)ದ ಕಥೆ:
  • ಕನಸಿನ ಮಾತುಗಳು
  • ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
  • ಜಾತ್ಯತೀತರೆಂಬ ಕೋಮುವಾದಿಗಳು (ಭಾಗ-೨)
  • ಹಣೆಯಲ್ಲಿ ಬರೆದದ್ದು
  • ಬೆಚ್ಚಗೆ ನಿನ್ನ ನೆನಪು
  • ಲಿಂಬಿಹಣ್ಣು -೨
  • ಲಿಂಬಿಹಣ್ಣು
  • ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
  • ನನ್ನ ಲೌಕಿಕ ಕರ್ಮಠ ಧರ್ಮ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:52pm
  • ಮನಹ್ಪಠಲ
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:47pm
  • mahesha
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:16pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:13pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:12pm
  • harshab
    ಉ: ಓದಬೇಕು & ಓದಿಕೊಳ್ಳಬೇಕು
    August 20, 2008 - 1:12pm
  • ASHOKKUMAR
    ಉ: ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
    August 20, 2008 - 1:11pm
  • harshab
    ಉ: ಮತ್ತೆ ನಿಲ್ಲುವೆ, ನೀ ಬರುವ ದಾರಿಯಲಿ, ಹೂ ಚೆಲ್ಲಿ ಕಾಯುತ್ತ.
    August 20, 2008 - 1:11pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:07pm
  • mahesha
    ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
    August 20, 2008 - 1:06pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 77 ಅತಿಥಿಗಳು ಆನ್ಲೈನ್ ಇರುವರು.


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator