ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ವಾರಾಂತ್ಯದ ಕಾರ್ಯಕ್ರಮಗಳು..
ಸಾಮಾನ್ಯ ವಾರಾಂತ್ಯಗಳು ಸ್ನೇಹಿತರು, ಬಂಧುಮಿತ್ರರನ್ನು ಭೇಟಿಯಾಗಲು, ಇತರ ಆಫೀಸೇತರ ಕೆಲಸಗಳನ್ನು ಮಾಡಿಕೊಳ್ಳಲು ಸರಿಹೋಗುತ್ತದೆ. ನಾಳೆ ಕೃಷ್ಣಾಷ್ಟಮಿ. ಒಂದೆರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿದೆ. ನಾಡಿದ್ದು ಭಾನುವಾರ ಒಂದಷ್ಟು ಕೆಲಸದ ಸಂಭಂದಿ ವಿಷಯದಬಗ್ಗೆ ಓದಬೇಕೆಂದುಕೊಂಡಿದ್ದೇನೆ. ಸಿನಿಮಾ, ನಾಟಕ ನೋಡುವುದು ಬಿಟ್ಟು ಸುಮಾರು ವರ್ಶಗಳೇ ಆಗಿತ್ತು. ಈಗೆರಡುತಿಂಗಳಿಂದ ಮಳೆ,ಚಳಿಗಳ ನಡುವೆ ಹೊರಗೆ ಹೆಚ್ಚು ಹೋಗಲಾಗದೆ ಮತ್ತೆ ಅವುಗಳ ಮೊರೆಹೋಗಬೇಕಾಯಿತು. ಸುಮಾರು ತಿಂಗಳುಗಳ ಹಿಂದೆ ರಂಗಶಂಕರದಲ್ಲಿ ’ನಾನೀನಾದ್ರೆ ನೀನಾನೇನಾ’ ನಾಟಕ ನೋಡಿದ್ದೆವು. ಭೋಪಸಂದಾಗಿತ್ತು. ಸಿಹಿ-ಕಹಿ ಚಂದ್ರು ಮೊದಲಾದ ಖ್ಯಾತನಾಮರು ಅಭಿನಯಿಸಿದ್ದರು. ಅದಕ್ಕೆ ಮೊದಲು ’ಚಿದಂಬರ ರಹಸ್ಯ’ ನಾಟಕ ನೋಡಿದ್ದೆವು. ನಾಟಕದಲ್ಲಿ ಏನಿತ್ತೆಂಬುದು ಕೊನೆಗೂ ಚಿದಂಬರ ರಹಸ್ಯವಾಗೇ ಉಳಿಯಿತು. ಇತ್ತೀಚೆಗೆ ನಡೆಯುತ್ತಿರುವ ನಾಟಕಗಳು ಯಾವುದಾದರೂ ಚೆನ್ನಾಗಿವೆಯೇ?
ನಾಟಕ ಇಲ್ಲದಿದ್ದರೆ ’ಅರ್ಜುನ’ ’ದರ್ಶನ’ ಮಾಡಬೇಕು. ವಾತಾವರಣ ಒಂದಿಷ್ಟು ಬಿಸಿಲಿನಿಂದ ಕೂಡಿದ್ದು ಗೆಲುವಾಗಿರಲಿ ಎಂದು ಆಶಿಸುತ್ತೇನೆ.

- madhava_hs ರವರ ಬ್ಲಾಗ್
- Login or register to post comments
- 146 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS: