ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ವಿಜ್ಞಾನ ಏನೆನ್ನುತ್ತದೆ?
August 11, 2008 - 10:36am — madhava_hs
ನೆನ್ನಿನ ಪತ್ರಿಕೆಯೊಂದರಲ್ಲಿ ಒಂದು ವಿಸ್ಮಯಕಾರಿ ಸಂಗತಿಯೊಂದರ ವರದಿ ಬಂದಿದೆ. ಗುಲ್ಬರ್ಗ ಜಿಲ್ಲೆಯ ಮಹಿಳೆಯೊಬ್ಬಳು ಸುಮಾರು ೧೮ ವರ್ಷಗಳಿಂದ ಏನೂ ತಿನ್ನುವ ಆಹಾರ ಸೇವಿಸಿಲ್ಲವಂತೆ. ದಿನಕ್ಕೆ ಎರಡು ಕಪ್ ಚಹಾ ಮತ್ತು ಕೆಲವೊಮ್ಮೆ ನೀರು ಕುಡಿಯುವುದು ಬಿಟ್ಟರೆ ಇನ್ನೇನೂ ಆಹಾರ ಸೇವಿಸಿಲ್ಲವಂತೆ. ೫೦ ವರ್ಷದ ಆಕೆ ಎಲ್ಲರಂತೆ ಸುಲಲಿತವಾಗಿ ಮನೆಯ ಮತ್ತು ಹೊಲದ ಎಲ್ಲ ಕೆಲಸಗಳನ್ನು ಮಾಡಿಕೊಂದು ಆರೋಗ್ಯವಾಗಿದ್ದಾರಂತೆ. ವಿಜ್ಞಾನಿಗಳಿಗೆ ಇದೊಂದು ಸವಾಲು ಎಂದು ಹೇಳಲಾಗಿದೆ.
ವಿಜ್ಞಾನದ ಪ್ರಕಾರ ಆರೋಗ್ಯವಂತ ವ್ಯಕ್ತಿಗೆ ಸರಿಸುಮಾರು ೧೫೦೦ ರಿಂದ ೨೦೦೦ ಕ್ಯಾಲರಿಗಳಷ್ಟು ಶಕ್ತಿಕೊಡುವ ಆರೋಗ್ಯ ದಿನ ನಿತ್ಯ ಬೇಕು. ಎರಡುಕಪ್ ಚಯಾದಲ್ಲಿ ಸುಮಾರು ೧೫೦ ಕ್ಯಾಲರಿಗಳು ಸಿಗಬಹುದಷ್ಟೆ. ಹಾಗಾದರೆ ನೀರಿನಿಂದ ದೇಹಕ್ಕೆ ಶಕ್ತಿ ಸಾಧ್ಯವೇ? ಏನೆನ್ನುತದೆ ವಿಜ್ಞಾನ ಇದಕ್ಕೆ?

- madhava_hs ರವರ ಬ್ಲಾಗ್
- Login or register to post comments
- 632 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು
ಉ: ವಿಜ್ಞಾನ ಏನೆನ್ನುತ್ತದೆ?
ಅದೇ ವಿಸ್ಮಯ!
ಉ: ವಿಜ್ಞಾನ ಏನೆನ್ನುತ್ತದೆ?
ಸೂರ್ಯಪಾನ( ಸೂರ್ಯನತ್ತ ನೋಡಿ) ಆಹಾರವೇ ತೆಗೆದುಕೊಳ್ಳದೆ ಬದುಕುವುದು ಸಾಧ್ಯವೆಂದು ಒಬ್ಬನ ಉದಾಹರಣೆ ಸಹಿತ ಸುಧಾದಲ್ಲಿ ಬಂದಿತ್ತು(ಒಂದ್ರೆರಡು ವಾರ ಹಿಂದೆ)
ಹೆಚ್ಚಿನ ವರದಿಗಳು ಬಹುರಂಜಿತವಾಗಿರುವುದೇ ಹೆಚ್ಚು.
*ಅಶೋಕ್
ಉ: ವಿಜ್ಞಾನ ಏನೆನ್ನುತ್ತದೆ?
ಇಂತಹ ಪ್ರಕೃತಿ ವಿಸ್ಮಯಗಳಿಗೆ "ದೆವ್ವ ಭೂತ" ಚೆಷ್ಟೇ ಅಂತಲೋ, "ಲೋಕಲ್ ದೇವರ" ಕೃಪೆ ಅಂತಲೋ ಹೇಳದಿದ್ದರೆ ಸಾಕು...
-Yogi
ಉ: ವಿಜ್ಞಾನ ಏನೆನ್ನುತ್ತದೆ?
ನೀವೆ ತಿಳಿಸಿರುವಂತೆ ಆಹಾರ ಹಾಗೂ ಅದರ ಪ್ರಮಾಣ ‘ಆರೋಗ್ಯವಂತ’ ವ್ಯಕ್ತಿಗೆ ಸಂಬಂಧಿಸಿದ್ದು. ಇವು ಕೆಲವು ಎಕ್ಸೆಪ್ಷನ್ಸು ಅಷ್ಟೇ. ಗಾಜು ತಿನ್ನುವವರು, ಹಾವು ಚೇಳು ತಿನ್ನುವವರು ಇದ್ದಾರೆ. ಇವಕ್ಕೆ ಕಾರಣ ಹುಡುಕುವುದಕ್ಕೂ ವಿಜ್ಞಾನ ಬೇಕು. ಅದು ಬಿಟ್ಟು ನಾಲ್ಕು ಕಾಲಿರುವ ಮಗುವನ್ನು ದೇವಸ್ಥಾನದಲ್ಲಿಟ್ಟು ಪೂಜೆ ಮಾಡುವಂಥ ಮೌಢ್ಯತೆಗೆ ಇಂಥ ಸಂಗತಿಗಳು ಬಲಿಯಾಗಬಾರದು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
"ನೀವೆ ತಿಳಿಸಿರುವಂತೆ ಆಹಾರ ಹಾಗೂ ಅದರ ಪ್ರಮಾಣ ‘ಆರೋಗ್ಯವಂತ’ ವ್ಯಕ್ತಿಗೆ ಸಂಬಂಧಿಸಿದ್ದು"
ನಾನು ಇಲ್ಲಿ ಚರ್ಚಿಸುತ್ತಿರುವ ವ್ಯಕ್ತಿಯೂ ’ಆರೋಗ್ಯವಂತ’ ವ್ಯಕ್ತಿಯೇ. ಇನ್ನು ಹೀಗೆಯೇ ಹತ್ತು ಹಲವು ಪ್ರಕೃತಿ ವಿಸ್ಮಯಗಳಿವೆ.
ಕೆಲದಿನಗಳ ಹಿಂದೆ ಕರ್ನಾಟಕದ ಹಳ್ಳಿಯೊಂದರಲ್ಲಿ ದಿನಕ್ಕೆ ೨೫ ಮುದ್ದೆ ತಿನ್ನುವ ಭೂಪನೊಬ್ಬನಿದ್ದ. ಅವನ ಈ ವಿಚಿತ್ರವನ್ನು ಯಾವುದೇ ಡಾಕ್ಟರೂ ಸರಿಪಡಿಸಲಾಗಲಿಲ್ಲ.
ಇದನ್ನೆಲ್ಲಾ ’ಎಕ್ಸೆಪ್ಷನ್ಸು’, ’ಪ್ರಕೃತಿ ವಿಸ್ಮಯಗಳು’ ಎಂದು ಪರೋಕ್ಷವಾಗಿ ’ಇದು ನಮಗೆ ನಿಲುಕದ್ದು’ ಎಂದು ಷರಾ ಬರೆದಿಡುವುದು ಬಲು ಸುಲಭ. ವಿಜ್ಞಾನ ಎಷ್ಟು ಮುಂದುವರೆದಿದೆ. ಇದಕ್ಕೆಲ್ಲಾ ಕಾರಣ ಹುಡುಕಲಿ.
ಉ: ವಿಜ್ಞಾನ ಏನೆನ್ನುತ್ತದೆ?
ಕೋಪ ಯಾಕೆ ಮಾಡಿಕೊಳ್ಳುತ್ತೀರಿ? ನೀವು ಒಬ್ಬ ಸಾಮಾನ್ಯ ಮನುಷ್ಯ, ಅಥವಾ ಸರಾಸರಿ ಮನುಷ್ಯ ಎಂಬ ಪದ ಬಳಸಿದ್ದರೆ ಸೂಕ್ತವಾಗುತ್ತಿತ್ತು. ನೀವು ಆರೋಗ್ಯವಂತ ಮನುಷ್ಯನಿಗೆ ಆಹಾರ ಬೇಕೇ ಬೇಕು ಎಂದು ಬರೆದಿದ್ರಿ.
ವಿಜ್ಞಾನ ಅನ್ವೇಷಿಸುತ್ತಾ ಸಾಗಿರುವ ಎಷ್ಟೋ ಸಂಗತಿಗಳು ಒಂದು ಕಾಲದಲ್ಲಿ ನಮಗೆ ನಿಲುಕದ್ದವೇ ಆಗಿದ್ದವು. ವಿಜ್ಞಾನ ಅನ್ವೇಷಿಸಿದ ಮಾತ್ರಕ್ಕೆ ಅವೆಲ್ಲಾ ನಮಗೆ ನಿಲುಕಿದ್ದಾವೆ ಅನ್ನಿಸುವುದಿಲ್ಲ. ನಾವು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಎಲ್ಲಾ ಬೆರಗು ಅಚ್ಚರಿಗಳನ್ನು ಅನುಭವಿಸಿದ ನಂತರ ಅದರ ಬಗ್ಗೆ ಅಧ್ಯಯನ ಮಾಡಿದರೆ ಸತ್ಯ ತಿಳಿಯುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಛೆ! ನಾನೆಲ್ಲಿ ಕೋಪ ಮಾಡಿಕೊಂಡೆ ಮಾರಾಯ್ರೆ.
ಉ: ವಿಜ್ಞಾನ ಏನೆನ್ನುತ್ತದೆ?
ಹ್ಮ್. ಅಶೋಕ್ ಹೇಳಿದ್ದು ಸರಿ, ಒಂದೆರೆಡು ವಾರದ ಹಿಂದೆ, ಸುಧಾದಲ್ಲಿ ಬಂದಿತ್ತು. ಆದರೆ, ಇದು ವಿಜ್ಞಾನಕ್ಕೆ ನಿಲುಕದ ವಿಷಯ ಖಂಡಿತ ಅಲ್ಲ. ಆದರೆ ಸಮರ್ಪಕವಾದ ಉತ್ತರಕ್ಕೆ ಸರಿಯಾದವರನ್ನೇ ಕೇಳಬೇಕು.
ಫಿಲಸಾಫಿಕಲಿ, ಇದನ್ನು "ಪ್ರಾಣವನ್ನು ಪ್ರಾಣವೇ ತಿನ್ನುವುದು" ಅಂತ ಕರೆದಿದ್ದಾರೆ.
ಉ: ವಿಜ್ಞಾನ ಏನೆನ್ನುತ್ತದೆ?
ವಿಜ್ನಾನದ ಹಲವು ಉತ್ತರಗಳು ಈ ಕೆಳಗಿನ ಕೊಂಡಿಗಳಲ್ಲಿ ಇವೆ.
http://www.sciam.com/article.cfm?id=how-long-can-a-person-sur
http://health.howstuffworks.com/live-without-food-and-water1.htm
http://www.professorshouse.com/food-beverage/food/how-long-can-a-person-...
ಇವೆಲ್ಲದರ ಪ್ರಕಾರ ಹದಿನೆಂಟು ವರ್ಷ ಬದುಕುಳಿಯುವುದು ಅಸಾಧ್ಯ.
ಆ ಪತ್ರಿಕಾ ವರದಿ ಎಷ್ಟು ನಿಜ ಅನ್ನೋದು ತಿಳಿಯುವುದು ಒಳಿತು. ಅಕಸ್ಮಾತ್ ನಿಜವೇ ಆಗಿದ್ದರೆ ಒಂದು ವಿಸ್ಮಯವೇ ಖಂಡಿತ.
-ನವರತ್ನ ಸುಧೀರ್
ಉ: ವಿಜ್ಞಾನ ಏನೆನ್ನುತ್ತದೆ?
ಐದು ವರ್ಷಗಳ ಹಿಂದೆ ಇನ್ನೊಬ್ಬ ಹಿರಾ ರತನ್ ಮನೆಕ್ ನಾಮಾಂಕಿತ ೬೪ ವಯಸ್ಸಿನ ಮಹಾನುಭಾವ ಇದೇ ರೀತಿ ಕೇವಲ ನೀರು ಮತ್ತು ಸೌರ ಶಕ್ತಿಯ ಸಹಾಯದಿಂದ ವರ್ಷಗಟ್ಟಳೆ ಜೀವಿಸಿದ್ದಾಗಿ ಕೊಚ್ಚಿಕೊಂಡಿದ್ದ. ಅಮೇರಿಕದ NASA ಕೂಡ ಇದನ್ನು ಪರೀಕ್ಷಿಸಿ ನಿಜ ಅಂತ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಅಂತ ಬೇರೆ ಹೇಳಿ ಕೊಂಡಿದ್ದ. ಆಮೇಲೆ ಎಲ್ಲ ಸುಳ್ಳು ಅಂತ ತಿಳಿಯಿತು.
ಈ ಕೆಳಗಿನ ಕೊಂಡಿಯಲ್ಲಿ ಸಂಕ್ಷಿಪ್ತ ಚರಿತ್ರೆ ಓದಿ.
http://en.wikipedia.org/wiki/Hira_Ratan_Manek
ಆಮೇಲೆ ಇನ್ನೊಂದು ವರದಿ ಓದಿ ನೋಡಿ
http://www.randi.org/jr/071103.html
ಈ ಮಹಾತ್ಮನ ಒಂದು ಅಫಿಷಿಯಲ್ ವೆಬ್ ಸೈಟ್ ಬೇರೆ ಇದೆ. ನಿಜವಾಗಿಯೂ ಓದಲರ್ಹ.
http://www.solarhealing.com/
ಈ ಪ್ರಪಂಚದಲ್ಲಿ ಏನೇನು ಲೀಲೆಗಳು? ಜೀವನವನ್ನು ಸ್ವಾರಸ್ಯಕರವನ್ನಾಗಿಸುವವರು ಇಂಥವರೇ ಅಲ್ಲವೇ?
- ನವರತ್ನ ಸುಧೀರ್
ಉ: ವಿಜ್ಞಾನ ಏನೆನ್ನುತ್ತದೆ?
ಹೀಗಾಗಿಯೇ ಇಂಥ ವಿಸ್ಮಯದ ಸಂಗತಿಗಳನ್ನು ಹೇಳಿ ಅನಂತರ ಇದಕ್ಕೆ ವಿಜ್ಞಾನ ಏನನ್ನುತ್ತದೇ... ಎಂದು ಕೊಂಕು ಕೇಳುವವರನ್ನು ಕಂದು ನಗುಬರುತ್ತದೆ.
ಹಾಯ್ ಬೆಂಗಳೂರೆಂಬ ಪ್ರತಿವಾರದ ಅಚ್ಚರಿಯಲ್ಲಿ ಸಹ ಕಳೆದ ಸಂಚಿಕೆಯಿಂದ ಕೆಲವು ‘ಭೂತ’,‘ಆತ್ಮ’ ‘ವಿದೇಶಿ’ ‘ವರದಿ’ಗಳನ್ನು ಕನ್ನಡಿಸಿ ಪ್ರಕಟಿಸಿ ಇದಕ್ಕೆ ವಿಜ್ಞಾನ ಏನೂ ಹೇಳಲು ಸಾಧ್ಯವಾಗಿಲ್ಲ. ವಿಜ್ಞಾನ ಮೂಕ ಎಂದು ಸ್ವತಃ ವಿಜ್ಞಾನಿಯ ಹಾಗೆ ಅಪ್ಪಣೆ ಕೊಡಿಸುತ್ತಾರೆ.
ನಮ್ಮ ಮಾಧ್ಯಮಗಳು ಎಲ್ಲಾ ಅಚ್ಚರಿ, ವಿಸ್ಮಯಗಳನ್ನು ಮೂಢನಂಬಿಕೆ, ವಂಚನೆಗೆ ಬಳಸಿಕೊಳ್ಳಲು ನೆರವು ನೀಡುತ್ತಿವೆಯಾ? ಒಕ್ಕಣ್ಣು ತೆರೆದ ಬಾಬಾನ ಮುಂದೆ ಬಿದ್ದ ರಾಶಿ ರಾಶಿ ನೋಟುಗಳೇ ಉತ್ತರಿಸಬೇಕು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
"ಹೀಗಾಗಿಯೇ ಇಂಥ ವಿಸ್ಮಯದ ಸಂಗತಿಗಳನ್ನು ಹೇಳಿ ಅನಂತರ ಇದಕ್ಕೆ ವಿಜ್ಞಾನ ಏನನ್ನುತ್ತದೇ... ಎಂದು ಕೊಂಕು ಕೇಳುವವರನ್ನು ಕಂದು ನಗುಬರುತ್ತದೆ.
ಹಾಯ್ ಬೆಂಗಳೂರೆಂಬ ಪ್ರತಿವಾರದ ಅಚ್ಚರಿಯಲ್ಲಿ ಸಹ ಕಳೆದ ಸಂಚಿಕೆಯಿಂದ ಕೆಲವು ‘ಭೂತ’,‘ಆತ್ಮ’ ‘ವಿದೇಶಿ’ ‘ವರದಿ’ಗಳನ್ನು ಕನ್ನಡಿಸಿ ಪ್ರಕಟಿಸಿ ಇದಕ್ಕೆ ವಿಜ್ಞಾನ ಏನೂ ಹೇಳಲು ಸಾಧ್ಯವಾಗಿಲ್ಲ. ವಿಜ್ಞಾನ ಮೂಕ ಎಂದು ಸ್ವತಃ ವಿಜ್ಞಾನಿಯ ಹಾಗೆ ಅಪ್ಪಣೆ ಕೊಡಿಸುತ್ತಾರೆ.
ನಮ್ಮ ಮಾಧ್ಯಮಗಳು ಎಲ್ಲಾ ಅಚ್ಚರಿ, ವಿಸ್ಮಯಗಳನ್ನು ಮೂಢನಂಬಿಕೆ, ವಂಚನೆಗೆ ಬಳಸಿಕೊಳ್ಳಲು ನೆರವು ನೀಡುತ್ತಿವೆಯಾ? ಒಕ್ಕಣ್ಣು ತೆರೆದ ಬಾಬಾನ ಮುಂದೆ ಬಿದ್ದ ರಾಶಿ ರಾಶಿ ನೋಟುಗಳೇ ಉತ್ತರಿಸಬೇಕು."
ನೀವು ಟಿ.ವಿ. ಕಾರ್ಯಕ್ರಮಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಈ ಮಾತನ್ನು ಹೇಳುತ್ತಿದ್ದೇನೆ.
ಎಲ್ಲದಕ್ಕೂ ವಿಜ್ಞಾನ, ವಿಜ್ಞಾನ ಎನ್ನುವಾಗ ಇಂತಹ ಸಂಗತಿಗಳಿಗೂ ಅದು ಉತ್ತರಿಸಬೇಕಪ್ಪ. ಇಲ್ಲದಿದ್ದರೆ ಸೋತಂತೆ. ಟಿ.ವಿ೯ ರಲ್ಲಿ ಪ್ರತಿ ಭಾನುವಾರ ರಾತ್ರಿ ೧೦.೩೦ಕ್ಕೆ ಪ್ರಸಾರವಾಗುವ ’ಹೀಗೂ ಉಂಟೆ’ ಕಾರ್ಯಕ್ರಮದಲ್ಲೂ ಇಂತಹ ಅನೇಕಾನೇಕ ಸಂಗತಿಗಳನ್ನು ತೋರಿಸುತ್ತಾರೆ. ಮೈಸೂರಿನಹತ್ತಿರದ ಒಂದು ಊರಿನಲ್ಲಿ ಗಣೇಶನ ವಿಗ್ರಹವನ್ನು ಕೆಲವೊಮ್ಮೆ ಸುಲಭವಾಗಿ ಎತ್ತಲು ಬರುತ್ತದೆ. ಮಗದೊಂದು ಬಾರಿ ಏನೇ ಬಲಪ್ರಯೋಗ ಮಾಡಿದರೂ ಮೇಲೇಳುವುದಿಲ್ಲ. ಮನಸ್ಸಿನಲ್ಲಿ ಏನು ಕೆಲಸದ ಮೇಲೆ ಚಿಂತಿಸುತ್ತಿದ್ದೀರಿ ಮತ್ತು ಅದರ ಆಗು ಹೋಗುಗಳನ್ನು ಅದು ಪ್ರತಿಬಿಂಬಿಸುತ್ತದಂತೆ. ಇದನ್ನು ಸಾವಿರಾರು ಜನ ಪರೀಕ್ಷಿಸಿಹೋಗಿದ್ದಾರೆ. ೮ ನೇ ಶತಮಾನದಲ್ಲಿ ಇದನ್ನು ಶಂಕರ್ರಾಚಾರ್ಯರು ಪ್ರತಿಷ್ಟಾಪಿಸಿದ್ದರಂತೆ. ಬೇಕಾದರೆ ನೀವೂ ಇದನ್ನು ಪರೀಕ್ಷಿಸಿಕೊಂಡು ಬರಬಹುದು. ಒಂದು ವಿಗ್ರಹಕ್ಕೆ ಇಂತಿಷ್ಟೇ ತೂಕ ಇರುತ್ತದೆ. ಕೆಲವೊಮ್ಮೆ ಹಗುರ ಕೆಲವೊಮ್ಮೆ ಭಾರ ಆಗುವುದು ಹೇಗೆ ಸಾಧ್ಯ? ಇದಕ್ಕೆಲ್ಲ ಏನು ಹೇಳುತ್ತದೆ ವಿಜ್ಞಾನ?.
ಉ: ವಿಜ್ಞಾನ ಏನೆನ್ನುತ್ತದೆ?
ಸರ್,
ನಾನು ತಂತ್ರಜ್ಞಾನದ ವಿದ್ಯಾರ್ಥಿ. ವಿಜ್ಞಾನದ ವಿದ್ಯಾರ್ಥಿಯಲ್ಲ. ಹಾಗೂ ವಿಜ್ಞಾನದ ಬಗ್ಗೆ ಅಧಿಕಾರಯುತವಾಗಿ ಮಾತನಾಡುವಷ್ಟು ಜ್ಞಾನ ನನಗಿಲ್ಲ.
ಆದರೆ ವಿಜ್ಞಾನ ಸೋತಂತೆ, ವಿಜ್ಞಾನಕ್ಕೆ ಉತ್ತರಿಸಲು ಆಗಿಲ್ಲ ಎಂಬ ಮಾತುಗಳೇ ಹಾಸ್ಯಸ್ಪದ ಯಾಕೆಂದರೆ ವಿಜ್ಞಾನ ಎಂಬುದು ಯಾರೋ ಯಾವ ಕಾಲದಲ್ಲೋ ಬರೆದಿಟ್ಟು ಹೋದಂಥ ಶಾಸ್ತ್ರವಲ್ಲ, ಧಾರ್ಮಿಕ ಗ್ರಂಥವಲ್ಲ. ಅದು ನಿರಂತರ ಅನ್ವೇಷಣೆಯ ಪಥ. ವೈಜ್ಞಾನಿಕ ಮನೋಭಾವ ಎನ್ನುವುದು ವಿಜ್ಞಾನ *ಹೇಳುತ್ತದೆ* ಎಂಬುದನ್ನು ನಂಬಿಕೊಳ್ಳುವುದಲ್ಲ. ಪ್ರತಿಯೊಂದನ್ನೂ ಪರೀಕ್ಷಿಸಿ, ಪ್ರಮಾಣಿಸಿ ನೋಡುವ ಹಸಿವು.
ನಿಮಗೆ ಅಷ್ಟು ವಾದ ಮಾಡುವ ಉದ್ದೇಶವೇ ಇದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ.
೧. ಒಂದು ದೇವರ ದೇವಸ್ಥಾನದಲ್ಲಿ ಪೂಜೆ ಮಾಡಿದವರ ಇಷ್ಟಾರ್ಥವೆಲ್ಲಾ ಈಡೇರುತ್ತದೆ ಎಂದಿಟ್ಟುಕೊಳ್ಳಿ. ಇಲ್ಲಿ ಸೇವೆ ಮಾಡಿದರೆ ಕೋರ್ಟು ಕೇಸು ಗೆಲ್ಲಬಹುದು ಎಂದು ನಿಮ್ಮ ‘ಹೀಗೂ ಉಂಟೆ’ ಕಾರ್ಯಕ್ರಮದವರು ಹೇಳುತ್ತಾರೆ. ಈಗ ನಾನು ನೀವು ಕೇಸು ಬಡಿದಾಡುತ್ತಿದ್ದೇವೆ ಎಂದಿಟ್ಟುಕೊಳ್ಳಿ ಇಬ್ಬರೂ ಅಲ್ಲಿಗೆ ಹೋಗಿ ಸೇವೆ ಮಾಡಿದರೆ ಗೆಲ್ಲುವವರು ಯಾರು?
೨. ದೇವರನ್ನು, ಅಥವಾ ಆ ಹೆಸರಿನ ಅಗೂಚರ, ನಿಗೂಢ ಶಕ್ತಿಯನ್ನು, ತನ್ನ ಸೇವೆ ಮಾಡುವವರಿಗೆ ಒಲಿಯವ, ಮಾಡದವರನ್ನು ದಂಡಿಸುವ ದೇವರು ಸರ್ವಶಕ್ತನೇ? ಸರ್ವ ಶಕ್ತ ಎಂದರೆ ಆತನ ಕೈಲ ಮಾಡಲು ಸಾಧ್ಯವಿಲ್ಲದು ಯಾವುದೂ ಇಲ್ಲ ಅಂತ ತಾನೇ? ಹಾಗಾದರೆ ತನ್ನ ಕೈಯಲ್ಲಿ ಎತ್ತಲು ಸಾಧ್ಯವಿಲ್ಲದ ಒಂದು ಕಲ್ಲು ಗುಂಡನ್ನು ಸೃಷ್ಟಿಸಲು ಆತನಿಗೆ ಸಾಧ್ಯವೇ?
ನೀವು ಹೇಳುವ, ವಿಸ್ಮಯ, ಆಧ್ಯಾತ್ಮ, ಮನಃಶಾಂತಿ ಎಲ್ಲವನ್ನೂ ಒಪ್ಪೋಣ ಆದರೆ ಅವನ್ನು ಮೌಢ್ಯತೆಯನ್ನು ಬೆಳೆಸುವುದಕ್ಕೆ ಆಕರವಾಗಿ ಬಳಸುವುದಕ್ಕೆ ನನ್ನ ವಿರೋಧವಿದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಸುಪ್ರಿ, ನೀವು ಹೇಳಿರೋದು ಸರಿ.
"ವಿಜ್ಞಾನ ಎಂಬುದು ಯಾರೋ ಯಾವ ಕಾಲದಲ್ಲೋ ಬರೆದಿಟ್ಟು ಹೋದಂಥ ಶಾಸ್ತ್ರವಲ್ಲ, ಧಾರ್ಮಿಕ ಗ್ರಂಥವಲ್ಲ. ಅದು ನಿರಂತರ ಅನ್ವೇಷಣೆಯ ಪಥ. ವೈಜ್ಞಾನಿಕ ಮನೋಭಾವ ಎನ್ನುವುದು ವಿಜ್ಞಾನ *ಹೇಳುತ್ತದೆ* ಎಂಬುದನ್ನು ನಂಬಿಕೊಳ್ಳುವುದಲ್ಲ. ಪ್ರತಿಯೊಂದನ್ನೂ ಪರೀಕ್ಷಿಸಿ, ಪ್ರಮಾಣಿಸಿ ನೋಡುವ ಹಸಿವು."
ಬಹಳ ಒಳ್ಳೆಯ ಮಾತು.
ಮಾಧವ ಅವರೆ, ಆ ಕಲ್ಲಿನ ವಿಶಯಕ್ಕೆ ಬಂದರೆ ವಿಜ್ಞಾನವು ’ಹೋಗಿ ಪರೀಕ್ಷೆ ಮಾಡಿ’ ಎಂದು ಅಷ್ಟೆ ಹೇಳಲು ಸಾಧ್ಯ. ಇದು ನಿಜಕ್ಕೂ 'super-natural' ಹೌದೇ ಎನ್ನುವುದು ಕ್ರಮಬಧ್ಧವಾಗಿ ಪರೀಕ್ಷೆ ಮಾಡಿ ಮಾತ್ರ ತಿಳಿಯಲು ಸಾಧ್ಯ.
ಉದಾಹರಣೆಗೆ,
* ಒಬ್ಬ ವ್ಯಕ್ತಿ ಹಲವಾರು ಬಾರಿ ಪ್ರಯತ್ನಿಸಿದಾಗ ಒಂದೇ ರೀತಿಯ ಫಲಿತಾಂಶ ಬರುತ್ತದೆಯೇ?
* ಬೇರೆ ಯಾರೂ ಹತ್ತಿರದಲ್ಲಿ ಇರದೇ ಇದ್ದಾಗ ಕೂಡ ಇದು ಕೆಲಸ ಮಾಡುತ್ತದೆಯೆ?
ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದ ಹೊರತು ಯಾವುದೇ ರೀತಿಯ ನಿರ್ಣಯಕ್ಕೆ ಬರುವುದು ಕಷ್ಟವಲ್ಲವೆ?
ಇನ್ನು ಟಿವಿ ೯ ರವರ ವಿಶ್ವಾಸಾರ್ಹತೆಹ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ನಮ್ಮ ಮಾಧ್ಯಮಗಳು ಕೂಡ ಜನರ ಮೌಢ್ಯ ಬೆಳೆಸುವ ಕೆಲಸವನ್ನು ಚೆನ್ನಾಗಿ ಮಾಡುತ್ತಿವೆ. ಉದಾಹರಣೆಗೆ ’ಹೀಗೂ ಉಂಟೆ’ ನಂತಹ ಹಲವಾರು ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ ಆದರೆ ಈ ಕೆಳಗಿನ ಲೇಖನದಲ್ಲಿ ವರದಿಯಾದ ಘಟನೆ ನಮ್ಮ ಮಾಧ್ಯಮಗಳಲ್ಲಿ ಎಷ್ಟು ಕಾಣಲಿಕ್ಕೆ ಸಿಗುತ್ತದೆ?
http://www.rationalistinternational.net/article/2008/20080310/en_1.html
ಉ: ವಿಜ್ಞಾನ ಏನೆನ್ನುತ್ತದೆ?
ಕೊಂಡಿಯಲ್ಲಿನ ಬರಹ ಚೆನ್ನಾಗಿದೆ.
*ಅಶೋಕ್
ಉ: ವಿಜ್ಞಾನ ಏನೆನ್ನುತ್ತದೆ?
"ಮಾಧವ ಅವರೆ, ಆ ಕಲ್ಲಿನ ವಿಶಯಕ್ಕೆ ಬಂದರೆ ವಿಜ್ಞಾನವು ’ಹೋಗಿ ಪರೀಕ್ಷೆ ಮಾಡಿ’ ಎಂದು ಅಷ್ಟೆ ಹೇಳಲು ಸಾಧ್ಯ. ಇದು ನಿಜಕ್ಕೂ 'super-natural' ಹೌದೇ ಎನ್ನುವುದು ಕ್ರಮಬಧ್ಧವಾಗಿ ಪರೀಕ್ಷೆ ಮಾಡಿ ಮಾತ್ರ ತಿಳಿಯಲು ಸಾಧ್ಯ.
ಉದಾಹರಣೆಗೆ,
* ಒಬ್ಬ ವ್ಯಕ್ತಿ ಹಲವಾರು ಬಾರಿ ಪ್ರಯತ್ನಿಸಿದಾಗ ಒಂದೇ ರೀತಿಯ ಫಲಿತಾಂಶ ಬರುತ್ತದೆಯೇ?
* ಬೇರೆ ಯಾರೂ ಹತ್ತಿರದಲ್ಲಿ ಇರದೇ ಇದ್ದಾಗ ಕೂಡ ಇದು ಕೆಲಸ ಮಾಡುತ್ತದೆಯೆ?
ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಗದ ಹೊರತು ಯಾವುದೇ ರೀತಿಯ ನಿರ್ಣಯಕ್ಕೆ ಬರುವುದು ಕಷ್ಟವಲ್ಲವೆ?
ಇನ್ನು ಟಿವಿ ೯ ರವರ ವಿಶ್ವಾಸಾರ್ಹತೆಹ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ನಮ್ಮ ಮಾಧ್ಯಮಗಳು ಕೂಡ ಜನರ ಮೌಢ್ಯ ಬೆಳೆಸುವ ಕೆಲಸವನ್ನು ಚೆನ್ನಾಗಿ ಮಾಡುತ್ತಿವೆ. ಉದಾಹರಣೆಗೆ ’ಹೀಗೂ ಉಂಟೆ’ ನಂತಹ ಹಲವಾರು ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ ಆದರೆ ಈ ಕೆಳಗಿನ ಲೇಖನದಲ್ಲಿ ವರದಿಯಾದ ಘಟನೆ ನಮ್ಮ ಮಾಧ್ಯಮಗಳಲ್ಲಿ ಎಷ್ಟು ಕಾಣಲಿಕ್ಕೆ ಸಿಗುತ್ತದೆ?"
----
ಶಾಸ್ತ್ರಿಗಳೇ ಮತ್ತು ಯುನಿಕ್ಸುಪ್ರಿಯವರೇ, ಇದು(ಗಣೇಶನ ವಿಗ್ರಹ) ೧೨೦೦ ವರ್ಶಗಳಿಂದ ಲಕ್ಷಾಂತರ ಜನರು/ಭಕ್ತರು ಪರೀಕ್ಷಿಸಿ ಒಪ್ಪಿಕೊಂಡಿರುವಂತಹ ಸತ್ಯ. ಸುಮ್ಮನೆ ಟಿ.ವಿ.೯ ನವರು ಆ ವಿಚಾರವನ್ನು ಕೇಳಿ, ಆ ಕಾರ್ಯಕ್ರಮ ರೂಪಿಸಿರುತ್ತಾರಷ್ಟೇ. ಒಬ್ಬರು ಇಬ್ಬರು ಸುಳ್ಳಾಡಬಹುದು. ಲಕ್ಷಾಂತರ ಜನ ಸುಳ್ಳಾಡಲಾರರು. ೧೨೦೦ ವರ್ಷಗಳಿಂದ ವಿಜ್ಞಾನಕ್ಕೆ ಈ ಸತ್ಯವನ್ನು ಏಕೆ ಭೇದಿಸಲಾಗಲಿಲ್ಲ ಎಂಬುದೇ ಪ್ರಶ್ನೆ.
ಇನ್ನು ಚನ್ನರಾಯಪಟ್ಟಣದ ಸಮೀಪದ ಒಂದು ಬೆಟ್ಟದಲ್ಲಿ ಒಂದು ದೇವಾಲಯ ಮತ್ತು ಒಂದು ದೇವರ "ಕಲ್ಲುಗುಂಡು" ಇದೆ. ಫುಟ್ ಬಾಲ್ ಆಕಾರದಲ್ಲಿರುವ ಈ ಗುಂಡಿನ ಮೇಲೆ ಕುಳಿತರೆ ಕೆಲವೊಮ್ಮೆ ಎಡಕ್ಕೂ ಕೆಲವೊಮ್ಮೆ ಬಲಕ್ಕೂ
ಸುತ್ತುತ್ತದೆ. ನೀವು ಕೆಲವೊಮ್ಮೆ ಬಲಕ್ಕೆ ಭಾರಹಾಕಿ ಕುಳಿತರೂ ಅದು ತನ್ನಿಷ್ಟ ಬಂದಂತೆ ಎಡಕ್ಕೋ ಬಲಕ್ಕೋ ತಿರುಗುತ್ತದೆ. ಇದಕ್ಕೆ ಏನೆನ್ನೋಣ? ಏಕೆ ಈ ಕಾಲದ ಅದ್ಭುತ ಶಿಲ್ಪಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಕೆಲವೊಮ್ಮೆ ಹಗುರ ಕೆಲಬೊಮ್ಮೆ ಭಾರವಾಗುವ ವಿಗ್ರಹವನ್ನೋ, ಕೆಲವೊಮ್ಮೆ ಎಡಕ್ಕೂ ಕೆಲವೊಮ್ಮೆ ಬಲಕ್ಕೂ ತಿರುಗುವ ಗುಂಡನ್ನು ತಯಾರಿಸಿ ’ಇದು ಹೀಗೆ ನೋಡಿ’ ಎಂದು ಏಕೆ ಇಂತಹ ಘಟನೆಗಳಿಗೆ ಸವಾಲು ಹಾಕಬಾರದು?
ನನ್ನ ಈ ಬ್ಲಾಗಿನ ಉದ್ದೇಶ, ಸಾಧ್ಯವಾದರೆ ವಿಜ್ಞಾನ ಇಂತಹ ಸತ್ಯಗಳನ್ನು ಭೇದಿಸಲಿ ಅಂತ ಅಷ್ಟೆ.
ಉ: ವಿಜ್ಞಾನ ಏನೆನ್ನುತ್ತದೆ?
ಮಾಧವರೇ, ನೀವು ನಂಬಿಕೊಂಡಿರುವ, ಲಕ್ಷಾಂತರ ಮಂದಿ ಒಪ್ಪಿಕೊಂಡಿರುವ ಸಂಗತಿಯನ್ನು ಪ್ರಶ್ನಿಸಲು ನಾವು ಹೋಗುತ್ತಿಲ್ಲ. ವಿಜ್ಞಾನ ಯಾಕೆ ಮಾಡಿಲ್ಲ ಅಂತ ಪ್ರಶ್ನಿಸಿದಿರಿ. ವಿಜ್ಞಾನ ಅಂದರೆ ಏನು ಎಂಬುದನ್ನು ಹೇಳಿದೆ. ವಿಜ್ಞಾನ ವಿಜ್ಞಾನಿಗಳ ಸ್ವತ್ತಲ್ಲ. ಪವಾಡ ದೇವಸ್ಥಾನಗಳ ಸ್ವತ್ತಾದ ಹಾಗೆ! ನನಗೆ ಒಂದು ಸಂಶಯ ಬರುತ್ತದೆ. ಪವಾಡಗಳು, ನೀವು ಹೀಗೂ ಉಂಟೆನಲ್ಲಿ ನೋಡಿ ಬೆರಗಾಗುವಂಥ ಸಂಗತಿಗಳು ದಂಡಿ ದಂಡಿಯಾಗಿ ವರದಿಯಾಗುವುದು ಭಾರತದಲ್ಲಿ ಮಾತ್ರ! ವಿದೇಶಗಳಲ್ಲಿ ಕಣ್ತೆರೆಯುವ ಬಾಬಾ ಆಗಲಿ, ಮೂರ್ತಿಯಿಂದ ಜೇನು, ವಿಭೂತಿ ಸೃಷ್ಟಿಯಾಗಲೀ ನಡೆಯುವುದಿಲ್ಲ. ಇಂಥ ಕಲ್ಲು ಗುಂಡು ಪವಾಡಗಳೂ ಕಾಣುವುದಿಲ್ಲ (ಅವರೆಲ್ಲಾ ಪಾಪಿಗಳು ಅದಕ್ಕೆ ಅಂತ ಮಾತ್ರ ಹೇಳಬೇಡಿ!)
ನಿಮಗೆ ತಿಳಿದಿರಲಿ, ಒಂದಾನೊಂದು ಕಾಲದಲ್ಲಿ ಕೇವಲ ಲಕ್ಷಾಂತರ ಮಂದಿಯೇಕೆ, ಇಡೀ ಪಾಶ್ಚಿಮಾತ್ಯ ಜಗತ್ತೇ ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ, ಗ್ರಹಗಳು ಸುತ್ತುತ್ತವೆ ಎಂದು *ನಂಬಿ*ದ್ದರು. ಲಕ್ಷಾಂತರ ಮಂದಿ ನಂಬಿದ್ದಾರೆ ಎಂಬ ಕಾರಣಕ್ಕೆ ಅದು ಸತ್ಯವಾಗಬೇಕು ಎಂದೇನಿಲ್ಲ. ಒಬ್ಬನೇ ಒಬ್ಬ ಕೂಪರ್ ನಿಕಸ್, ಗೆಲಿಲಿಯೋ ಹೇಳಿದರು ಎಂದ ಮಾತ್ರ ಅಷ್ಟು ಮಂದಿಯ ನಂಬಿಕೆ ತಪ್ಪಾಯಿತು ಎಂದೂ ಅಲ್ಲ. ಅವರು ಪ್ರಮಾಣೀಕರಿಸಿ ನೋಡಿದರು. ಗ್ರಹಣಗಳ ಬಗ್ಗೆ ಹೇಳಿದರು. ಹೀಗೆ ವಿಸ್ಮಯಗಳನ್ನು ನೋಡಿದಾಗ ಎಷ್ಟು ಮಂದಿ ಅದನ್ನು ಪರಿಶೀಲಿಸುವ, ವೈಜ್ಞಾನಿಕವಾಗಿ ಅನ್ವೇಷಿಸುವ ಮನಸ್ಸು ಮಾಡುತ್ತೇವೆ ಭಾರತದಲ್ಲಿ?
ವಿಜ್ಞಾನಕ್ಕೆ ಇನ್ನೂ ಆಗಿಲ್ಲ, ಇನ್ನೂ ಆಗಿಲ್ಲ ಎಂಬ ವರಾತ ಯಾಕೋ ನನಗೆ ಕಿರಿಕಿರಿ ಅನ್ನಿಸುತ್ತದೆ. ಕಾರಣ ನಿಮಗೆ ಹಿಂದೆಯೇ ಹೇಳಿರುವೆ. ವಿಜ್ಞಾನ ನಿಂತ ನೀರಲ್ಲ. ಅದು ನಿರಂತರ ಅನ್ವೇಷಣೆಯ ಪಥ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ವಿದೇಶಗಳಲ್ಲಿ ಕಣ್ತೆರೆಯುವ ಬಾಬಾ ಆಗಲಿ, ಮೂರ್ತಿಯಿಂದ ಜೇನು, ವಿಭೂತಿ ಸೃಷ್ಟಿಯಾಗಲೀ ನಡೆಯುವುದಿಲ್ಲ. ಇಂಥ ಕಲ್ಲು ಗುಂಡು ಪವಾಡಗಳೂ ಕಾಣುವುದಿಲ್ಲ (ಅವರೆಲ್ಲಾ ಪಾಪಿಗಳು ಅದಕ್ಕೆ ಅಂತ ಮಾತ್ರ ಹೇಳಬೇಡಿ!)"
=> ನಾನು ಹೇಳುತ್ತಿರುವುದು ವಿಭೂತಿ, ಜೇನು ಇವುಗಳಬಗ್ಗೆ ಅಲ್ಲ. ಗಣೇಶ ವಿಗ್ರಹ, ಕಲ್ಲುಗುಂಡು ಇವುಗಳ ವಿಚಿತ್ರವನ್ನು ಕಣ್ಣಾರೆಕಂಡು ಅನುಭವಿಸಿಬಂದವರ ಬಾಯಿಂದ. ಇವು ಹಗಲಿನಷ್ಟೇ ಸತ್ಯಸಂಗತಿಗಳು.
"ನಿಮಗೆ ತಿಳಿದಿರಲಿ, ಒಂದಾನೊಂದು ಕಾಲದಲ್ಲಿ ಕೇವಲ ಲಕ್ಷಾಂತರ ಮಂದಿಯೇಕೆ, ಇಡೀ ಪಾಶ್ಚಿಮಾತ್ಯ ಜಗತ್ತೇ ಭೂಮಿಯ ಸುತ್ತ ಸೂರ್ಯ ಸುತ್ತುತ್ತಾನೆ, ಗ್ರಹಗಳು ಸುತ್ತುತ್ತವೆ ಎಂದು *ನಂಬಿ*ದ್ದರು. ಲಕ್ಷಾಂತರ ಮಂದಿ ನಂಬಿದ್ದಾರೆ ಎಂಬ ಕಾರಣಕ್ಕೆ ಅದು ಸತ್ಯವಾಗಬೇಕು ಎಂದೇನಿಲ್ಲ. ಒಬ್ಬನೇ ಒಬ್ಬ ಕೂಪರ್ ನಿಕಸ್, ಗೆಲಿಲಿಯೋ ಹೇಳಿದರು ಎಂದ ಮಾತ್ರ ಅಷ್ಟು ಮಂದಿಯ ನಂಬಿಕೆ ತಪ್ಪಾಯಿತು ಎಂದೂ ಅಲ್ಲ. ಅವರು ಪ್ರಮಾಣೀಕರಿಸಿ ನೋಡಿದರು. ಗ್ರಹಣಗಳ ಬಗ್ಗೆ ಹೇಳಿದರು"
=>
ಗ್ರಹಣಗಳ ಬಗ್ಗೆ ನಮ್ಮ ಪಂಚಾಂಗ ಮೊದಲಾದೆಡೆ ಕೋಪರ್ನಿಕಸ್, ಗೆಲಿಲಿಯೋ ಕಾಲಕ್ಕಿಂತಲೂ ಮೊದಲೇ ಗೊತ್ತಿತ್ತು.
"ವಿಜ್ಞಾನಕ್ಕೆ ಇನ್ನೂ ಆಗಿಲ್ಲ, ಇನ್ನೂ ಆಗಿಲ್ಲ ಎಂಬ ವರಾತ ಯಾಕೋ ನನಗೆ ಕಿರಿಕಿರಿ ಅನ್ನಿಸುತ್ತದೆ. ಕಾರಣ ನಿಮಗೆ ಹಿಂದೆಯೇ ಹೇಳಿರುವೆ. ವಿಜ್ಞಾನ ನಿಂತ ನೀರಲ್ಲ. ಅದು ನಿರಂತರ ಅನ್ವೇಷಣೆಯ ಪಥ."
=>
ಇನ್ನೂ ಸಂಶೋಧನೆ ಆಗಿಲ್ಲದಿರುವುದರಿಂದ ಆಗಿಲ್ಲ ಎಂದೇ ಹೇಳಬೇಕಾಗುತ್ತದೆ. ಇನ್ನೇನು ಹೇಳಲಿಕ್ಕಾಗುತ್ತದೆಯೋ? ಅಥವಾ ವಿಜ್ಞಾನ ಇನ್ನು ಮುಂದೆ ಕಂಡುಹಿಡಿಯಬಹುದು ಎಂದು ಕಾಯುತ್ತಾ ಕೂರೋಣವೇ? ಇದ್ದದ್ದು ಇದ್ದಂತೆ ಹೇಳಿದರೆ ನೀವೇಕೆ ವಿಜ್ಞಾನಿಗಳ ಪ್ರತಿನಿಧಿಯಂತೆ ಕಿರಿಕಿರಿಗೊಳ್ಲುವಿರಿ? ಸಾಧ್ಯವಾದರೆ ವಿಜ್ಞಾನಿಗಳ ತಂಡವನ್ನು ಇಂತಹ ಸ್ಥಳಗಳಿಗೆ ದೌಡಾಯಿಸಿ ಸಂಶೋಧನೆಗಿಳಿಸಿ.
ಉ: ವಿಜ್ಞಾನ ಏನೆನ್ನುತ್ತದೆ?
ನೀವೇಗೆ ಅಷ್ಟು ಗಾಬರಿಯಾಗುತ್ತೀರಿ? ನಿಮಗೊಂದು ಸತ್ಯ ಸಂಗತಿ ಗೊತ್ತೇ? ನಮ್ಮ ದೇಶ ವೈಜ್ಞಾನಿಕ ಸಂಶೋಧನೆಗಳ ಮೇಲೆ ಎಷ್ಟು ಹಣ ತೊಡಗಿಸುತ್ತಿದೆ ಎಂಬುದು? ನಮ್ಮಲ್ಲಿ ತಂತ್ರಜ್ಞಾನ ಓದುವುದಕ್ಕೆ ಇರುವ ಜಂಗುಳಿ ಶುದ್ಧ ವಿಜ್ಞಾನ ಓದುವುದಕ್ಕೆ ಇಲ್ಲವೆಂದರೆ ಇದಕ್ಕೆ ಕಾರಣವೇನು? ನೀವು ಕಂಡಕಂಡಲೆಲ್ಲಾ ವಿಜ್ಞಾನಿಗಳನ್ನು ದೌಡಾಯಿಸುವುದಕ್ಕೆ ಸಾಧ್ಯವಾಗುವುದಿಲ್ಲ. ಮತ್ತು, ಒಂದು ಕಲ್ಲುಗುಂಡಿನ ಪವಾಡವನ್ನು ಬಯಲು ಗೊಳಿಸಿದಾಕ್ಷಣ ಅದರಿಂದ ಏನು ಪ್ರಯೋಜನ, ದೇಶಕ್ಕೆ? ಮೂಢನಂಬಿಕೆಗಳು ಅಳಿಯುವುದಿಲ್ಲ. ಏಕೆಂದರೆ ನೀವೀಗ ಬಾಬಾ ವಿಭೂತಿ, ಜೀಸಸ್ ಕಣ್ಣಿನ ರಕ್ತವನ್ನೆಲ್ಲಾ ಪವಾಡ ಅಲ್ಲ ಎಂದು ಕರೆಯುತ್ತಿರುವುದಕ್ಕೆ ಕಾರಣ ಅವುಗಳ ರಹಸ್ಯ ಬಯಲಾಗಿರುವುದು. ಒಂದು ಕಾಲದಲ್ಲಿ ಜನರು ನಿಮ್ಮ ಕಲ್ಲುಗುಂದುಗಳ ಹಾಗೇ ಇವನ್ನು ವಿಜ್ಞಾನಕ್ಕೆ ಸವಾಲು, ದೈವದ ಲೀಲೆ ಎಂದೇ ಕರೆಯುತ್ತಿದ್ದರು ನೆನಪಿರಲಿ.
ಇನ್ನು *ನಮ್ಮ* ಪಂಚಾಂಗ ಎಂದೋ ಹೇಳಿತ್ತು ಎಂದಿದ್ದೀರಿ, ಗ್ರಹಣದ ಬಗ್ಗೆ. ಈ ಮಾತನ್ನು ನಾನು ನಿರೀಕ್ಷಿಸಿದ್ದೆ. ಸಂತೋಷ. *ಭಾರತೀಯರು* (ಅದು ಕೇವಲ ಭೌಗೋಳಿಕ ಪ್ರದೇಶ) ವೈಜ್ಞಾನಿಕ ಮನೋಭಾವ ಹೊಂದಿದ್ದರು. ಆದರೆ ಎಷ್ಟು ಮಂದಿಗೆ ಈಗ ಪಂಚಾಗ ವೈಜ್ಞಾನಿಕ ಅನ್ವೇಷಣೆಯ ಕೈಪಿಡಿಯಾಗಿದೆ? ಎಷ್ಟು ಮಂದಿ ಭಾರತೀಯರಿಗೆ ಪಂಚಾಂಗ ಖಗೋಳ ವಿಜ್ಞಾನದ ಪಠ್ಯವಾಗಿದೆ ಆಲೋಚಿಸಿ... ಹಿಂದಿನ ವೈಭವವನ್ನೇ ಮೆಲುಕು ಹಾಕುತ್ತಾ ಕೂರುವುದರಲ್ಲಿ ಯಾವ ಪ್ರಯೋಜನವೂ ಇಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಹಾಗಾದ್ರೆ ನಾನು ಹೇಳಿದ ಸಂಗತಿಗಳೆಲ್ಲವನ್ನೂ ಒಮ್ಮೆ ವಿಜ್ಞಾನ ಬಯಲುಮಾಡುತ್ತದೆ ಎಂದಾಯ್ತು? ಏನು ಗ್ಯಾರಂಟಿ?
ಉ: ವಿಜ್ಞಾನ ಏನೆನ್ನುತ್ತದೆ?
ಏನು ಸಾರ್ ಹೀಗೆ ಕೇಳುತ್ತಿದ್ದೀರಿ? ನನಗಂತೂ ಬಿದ್ದು ಬಿದ್ದು ಉರುಳುವಾಡುವಷ್ಟು ನಗು ಬರುತ್ತಿದೆ.
ಬನ್ನಿ ಎಲ್ಲರೂ ಒಟ್ಟಿಗೆ ವಿಜ್ಞಾನವನ್ನು ಅಭ್ಯಾಸ ಮಾಡೋಣ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಅಯ್ಯೋ ನಾನೆಲ್ಲಿ ಹೇಳಿದೆ ವಿಜ್ಞಾನ ಅಭ್ಯಾಸಕ್ಕೆ ಬರುತ್ತೇನೆ ಅಂತ?
ಇನ್ನೂ ಎಷ್ಟು ಲಕ್ಷವರ್ಷಬೇಕು ಹೇಳಿ ಈ ಪವಾಡದ ಸತ್ಯ ಬಹಲುಮಾಡಲು?
ನಿಮ್ಮಂತಹ ಅತ್ಯಾಧುನಿಕ ವಿಜ್ಞಾನಿಗಳಿಗೆ ಮುಂದಿನ ಕೆಲಸಕೊಟ್ಟಿದ್ದೇನಷ್ಟೆ
ಉ: ವಿಜ್ಞಾನ ಏನೆನ್ನುತ್ತದೆ?
ವಿಜ್ಞಾನ ಅಭ್ಯಸಿಸುವ ಆಸಕ್ತಿಯಿಲ್ಲ ಆದರೂ ವಿಜ್ಞಾನ ಏನೆನ್ನುತ್ತದೆ ಇದಕ್ಕೆ ಎನ್ನುವ ಸವಾಲು...
ಬಿಡಿ, ಇನ್ನು ಚರ್ಚಿಸಿ ಫಲವಿಲ್ಲ.
ಶುಭಂ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
" ಇನ್ನೂ ನಿಂತಿಲ್ಲ ನಗು."
ನಿಮ್ಮ ಪರಿಸ್ಠಿತಿ ನೋಡಿಕೊಂಡು ನೀವೇ ನಗುತ್ತಿದ್ದೀರೋ ಹೇಗೆ?
ನೀವೇನು ಬಲು ದೊಡ್ಡ ವಿಜ್ಞಾನಿ ನೋಡಿ. ತಾವು ಎಷ್ಟು ಮೆಡಲುಗಳನ್ನು ತಗೊಂಡಿದೀರೋ?
ಉ: ವಿಜ್ಞಾನ ಏನೆನ್ನುತ್ತದೆ?
ಎಲ್ಲೋಗಿದ್ರಿ ಇಶ್ಟ ದಿಸ!
ನನ್ನಿ
ಉ: ವಿಜ್ಞಾನ ಏನೆನ್ನುತ್ತದೆ?
ಇಲ್ಲೇ ಇದ್ದೆ ಮಾಯ್ಸಣ್ಣ. ಸ್ವಲ್ಪ ಆರೋಗ್ಯದ ಸಮಸ್ಯೆ. ಎರಡು ಆರ್ಥೋಪೆಡಿಕ್ ಆಪರೇಷನ್‍ಗಳು ಆಗಿತ್ತು. ಈಗ ಸುಮಾರುಪಾಲು ಚೆನ್ನಾಗಿದ್ದೇನೆ.
ಅದಕ್ಕೆ ಮತ್ತೆ ಸಂಪದದಲ್ಲಿ ವಕ್ಕರಿಸಿಕೊಳ್ಳೋಕ್ಕೆ ಪ್ರಾರಂಭಿಸಿದ್ದು.
ಕಳಕಳಿಯಿಂದ ವಿಚಾರಿಸಿದ್ದಕ್ಕೆ ಧನ್ಯವಾದಗಳು.
-ನವರತ್ನ ಸುಧೀರ್
ಉ: ವಿಜ್ಞಾನ ಏನೆನ್ನುತ್ತದೆ?
ಅಯ್ಯೋ.. ಮಲೆಯ!
ವುಸಾರ್ ಆದ್ರಲ್ಲ!
ಉ: ವಿಜ್ಞಾನ ಏನೆನ್ನುತ್ತದೆ?
ಯುನೀಕ್ಸುಪ್ರಿಯವರು, ಶಾಸ್ತ್ರಿಗಳು ವಿಜ್ಞಾನದ ನಿಲುವು ಚೆನ್ನಾಗಿ ಹೇಳಿದ್ದಾರೆ.
ನನ್ನ ಪ್ರಶ್ನೆ - ವಿಜ್ಞಾನಕ್ಕೆ ಇದು ಸವಾಲಾಗುವುದಿರಲಿ. ವಿಜ್ಞಾನವಲ್ಲದ ನಿಮ್ಮ ವಿವರಣೆ, ಅದಕ್ಕೆ ಆಧಾರ ಏನು ಅಂತ?!
ಉ: ವಿಜ್ಞಾನ ಏನೆನ್ನುತ್ತದೆ?
ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪು ಇದೇ. ಸ್ವಲ್ಪ ಮಾಮೂಲಿಗಿಂತ ಬೇರೆಯಾದ ವಿಷಯ ಕಂಡು ಬಂದ ಕೂಡಲೇ ಕೆಲವರು ಅದು ಒಂದು ಪವಾಡ ಅಂತಲೋ ಇನ್ನು ಕೆಲವರು ಅದೆಲ್ಲಾ ಮೋಸ, ವಂಚನೆ ಅಂತಲೋ ಹೆಸರಿಟ್ಟು ಸುಮ್ಮನಿದ್ದು ಬಿಡುತ್ತಾರೆ! ನಮಗೆ ಗೊತ್ತಿಲ್ಲದಿರುವ ಅನೇಕ ವಿಷಯಗಳು ಇರಲೂ ಬಹುದು ಅಂತ ತಿಳಿದು ಅದನ್ನು ಪರೀಕ್ಷಿಸುವಷ್ಟು ತಾಳ್ಮೆ ವೈಜ್ಞಾನಿಕ ಮನೋಭಾವ ಎಷ್ಟು ಜನರಿಗಿರುತ್ತದೆ? ಅಲ್ಲದೇ ಎಲ್ಲದ್ದಕ್ಕೂ ಒಂದು ಹೆಸರು (label) ಇರಲೇ ಬೇಕೇ? ನಿಸರ್ಗದಲ್ಲೇ ಎಷ್ಟೋ ವಿಸ್ಮಯಕಾರಿ ಅಂಶಗಳಿಲ್ಲವೇ, ದಿನಾ ನೋಡುವುದರಿಂದ ನಮಗೆ ಮಾಮೂಲಾಗಿದೆ ಅಷ್ಟೆ.
ಉ: ವಿಜ್ಞಾನ ಏನೆನ್ನುತ್ತದೆ?
ನಿಮ್ಮ ಮಾತು ಸತ್ಯ ಸರ್.
ಈ ಬಗೆಯ ಲೇಬಲ್ಲಿಂಗ್ ನಿಂದಾಗಿ ಅನೇಕ ಅಪಾಯಗಳಿವೆ. ನಮಗ್ ತಿಳಿಯದ್ದು ನಮ್ಮಲ್ಲಿ ಹುಟ್ಟಿಸುವ ಬೆರಗು, ಭಯ, ಆತಂಕಗಳ ಮಿಶ್ರಣದಿಂದ ಹುಟ್ಟಿದ ಅನುಭೂತಿ ಎಲ್ಲವನ್ನು ಅನುಭವಿಸಲಿಕ್ಕೆ ಈ ಬಗೆಯ ಹಣೆ ಪಟ್ಟಿ ಅಂಟಿಸುವಿಕೆ ಅಡ್ಡಿ ಮಾಡುತ್ತದೆ. ಪವಾಡ ಎಂದು , ಇಲ್ಲವೇ ಹಿಂದು ಮುಂದೆ ನೋಡದೆ ವಂಚನೆಯೆಂದು ಕರೆಯುವುದರಿಂದ ನಾವು ಹೆಚ್ಚಿನದನ್ನ ಕಳೆದುಕೊಳ್ಳುತ್ತೇವೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಎಲ್ಲಕ್ಕೂ ವ್ಯಾಖ್ಯೆ(definition) ಬೇಕೆನ್ನುತ್ತೆ ವಿಜ್ಞಾನ. ಆದರೆ ಯಾವುದನ್ನಾದರೂ ವ್ಯಾಖ್ಯಿಸಿಬಿಟ್ಟರೆ ಕಥೆ ಮುಗಿದು ಹೋಯ್ತೆನ್ನುತ್ತೆ ತತ್ವಜ್ಞಾನ. ಈ definition ನಲ್ಲೇ finish ಇದೆ ನೋಡಿ. ಅದೇ ವಿಜ್ಞಾನದ ಕೊಱತೆ. ಎಲ್ಲವನ್ನು ವ್ಯಾಖ್ಯಿಸಿದರೂ ಇನ್ನೂ ಉೞಿದಿದೆ ಹೇೞಲಿಕ್ಕನ್ನೋದು ತತ್ವಜ್ಞಾನ. ಅದಕ್ಕೆ ಅನಂತ, ಅಗಮ್ಯ, ಅಪ್ರಮೇಯ, ಅಜ್ಞೇಯ ಇವುಗಳು ತತ್ವಜ್ಞಾನದಲ್ಲಿ ಬೞಸುವ ಶಬ್ದಗಳು.
ಉ: ವಿಜ್ಞಾನ ಏನೆನ್ನುತ್ತದೆ?
ಸರ್,
ತತ್ವಜ್ಞಾನ ಎಲ್ಲವನ್ನೂ ಒಳಗೊಳ್ಳುವುದಿಲ್ಲ. ಬೆಂಕಿಯ ಮೇಲೆ ನೀರು ಹಾಕಿದರೆ ಬೆಂಕಿ ಯಾಕೆ ಆರಿಹೋಗುತ್ತದೆ ಎಂಬುದನ್ನು ತಿಳಿಸುವುದಕ್ಕೆ ತತ್ವಜ್ಞಾನದಿಂದ ಎಂದಿಗೂ ಸಾಧ್ಯವಿಲ್ಲ. ತತ್ವಜ್ಞಾನಿ ಏನಾದರೂ ಅದನ್ನು ಹೇಳಲು ತೊಡಗಿದರೆ ಅದು ಅರ್ಥವಾಗುವುದು ಅಷ್ಟರಲ್ಲೇ ಇದೆ.
ವಿಜ್ಞಾನ ಎಲ್ಲದಕ್ಕೂ ಪರಿಹಾರ ಎಂಬುದು ಮೂಢತನ ಎಂಬುದು ನನ್ನ ನಂಬಿಕೆ. ನನ್ನ ಪ್ರಕಾರ ಪರಿಪೂರ್ಣ ಮನುಷ್ಯನಾದವನು ಹೇಗಿರುತ್ತಾನೆ ಎಂದರೆ, ಆತ ಲ್ಯಾಬರೋಟರಿಯ ಒಳಕ್ಕೆ ಹೊಕ್ಕಾಗ ವಿಜ್ಞಾನವನ್ನು ಬಳಸುತ್ತಾನೆ. ಲ್ಯಾಬಿನಿಂದ ಹೊರ ಬಂದು ಮನೆ ತಲುಪಿದಾಗ ತತ್ವಶಾಸ್ತ್ರವನ್ನು ಬಳಸುತ್ತಾನೆ. ದೇವಸ್ಥಾನಕ್ಕೆ ಹೋದಾಗ ಆಧ್ಯಾತ್ಮವನ್ನು ಬಳಸುತ್ತಾನೆ. ಆತನಿಗೆ ಅವೆಲ್ಲಾ ಪರಿಕರಗಳಿದ್ದಂತೆ ಅಷ್ಟೇ. ಈ ಯಾವ ಪರಿಕರಿಗಳೂ ಆತನಲ್ಲಿ ಅಂಧ ವಿಶ್ವಾಸವನ್ನು ಮೂಡಿಸಲಾರವು.
ಅದಕ್ಕೇ ಹಿಂದೇ ಹೇಳಿದ್ದು, ಎಲ್ಲವನ್ನೂ ವಂಚನೆ, ಮೂಢನಂಬಿಕೆ ಎಂದು ಜರೆಯುವುದು ಖಂಡಿತಾ ವೈಜ್ಞಾನಿಕ ಮನೋಭಾವನೆಯಲ್ಲ ಎಂದು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಬೆಂಕಿಗೆ ನೀರು ಹಾಕಿದಾಗ ಯಾಕೆ ಆಱಿಹೋಗುತ್ತೆ ಎಂಬ ವಿಷಯ ವಿಜ್ಞಾನ ತತ್ವಜ್ಞಾನದ ಒಂದು ಭಾಗವಾದಾಗ ಒಂದು ವಿಚಾರವಾಗುತ್ತದೆ. ತತ್ವಜ್ಞಾನಿ ವೈಜ್ಞಾನಿಕತೆ ಬೇಡವೆನ್ನನು? ಬದುಕಿನ ಮುಖವಾಗಿ ಹೊಱಟದ್ದೆಲ್ಲ ತತ್ವಜ್ಞಾನ. ಸತ್ಯ. ಬದುಕಿನಿಂದ ವಿಮುಖವಾಗಿದ್ದರೆ ಅದು ಅವೈಜ್ಞಾನಿಕ ತತ್ವಜ್ಞಾನ.
ಉ: ವಿಜ್ಞಾನ ಏನೆನ್ನುತ್ತದೆ?
ಇದೇ ಸಂಗತಿಯನ್ನು ವಿಜ್ಞಾನಿಯೂ ಹೇಳಬಲ್ಲ ಅಲ್ಲವೇ ಸರ್? ಎಲ್ಲವುಗಳ ಸಾಮರಸ್ಯದಿಂದಲೇ ಪರಿಪೂರ್ಣತೆಗೆ ಸಾಗಬಹುದು.
ನಿಮ್ಮ ಮೊದಲ ಪ್ರತಿಕ್ರಿಯೆಯಲ್ಲಿ ನ ಈ ಅಂಶ ( ಅದೇ ವಿಜ್ಞಾನದ ಕೊಱತೆ. ಎಲ್ಲವನ್ನು ವ್ಯಾಖ್ಯಿಸಿದರೂ ಇನ್ನೂ ಉೞಿದಿದೆ ಹೇೞಲಿಕ್ಕನ್ನೋದು ತತ್ವಜ್ಞಾನ.) ದಿಂದಾಗಿ ನಾನು ಹಾಗೆ ಪ್ರತಿಕ್ರಿಯಿಸಬೇಕಾಯ್ತು... ತತ್ವಜ್ಞಾನಕ್ಕೂ ತನ್ನದೇ ಆದ ಮಿತಿಯಿದೆ ಅಂತ ತಿಳಿಸಲು
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಇದನ್ನು ನೋಡಿ, http://www.stephenjaygould.org/ctrl/sagan_science.html,
ಈ ಚರ್ಚೆಗೆ ಪೂರಕ ಅನ್ನಿಸಿತು...
ಉ: ವಿಜ್ಞಾನ ಏನೆನ್ನುತ್ತದೆ?
science is a way of thinking much more than it is a body of knowledge.
ಮೊದಲ ಸಾಲೇ ಅದ್ಭುತವಾಗಿದೆ. ಲೇಖನ ಪೂರ್ತಿ ಓದಲಾಗಿಲ್ಲ. ಓದಿದ ನಂತರ ಪ್ರತಿಕ್ರಿಯಿಸುವೆ. ಒಳ್ಳೆಯ ಲಿಂಕು ರಾಮ ಕುಮಾರರೇ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ವಿಜ್ಞಾನ ಏನೆನ್ನುತ್ತದೆ?
ಅನ್ನ ನೀರು ಗಾಳಿಗಳನ್ನು ಬಿಟ್ಟು ಬದುಕುತ್ತಾರೆ ಎಂದರೆ ಅದು ಖಂಡಿತ ಸುಳ್ಳು. ಹಾಗಾದರೆ ಈ ಘಟನೆಯಲ್ಲಿ ಸತ್ಯ ಏನಾಗಿರಲಿಕ್ಕೆ ಸಾಕು?.... ಅಜ್ಞಾನ!!
ಗುಲ್ಬರ್ಗಾ ಜಿಲ್ಲೆಯ ಆ ಮಹಿಳೆ ಅಜ್ಞಾನಿ ಯಾಗಿರಬಹುದು ಅಥವಾ ವರದಿಗಾರ ಅಜ್ಞಾನಿ ಯಾಗಿರಬಹುದು. ಆ ಮಹಿಳೆಗೆ ತಾನು ಹೇಳಿದ್ದನ್ನು ವರದಿಗಾರ ಏನೆಂದು ಅರ್ಥೈಸಿಕೊಳ್ಳುತ್ತಿದ್ದಾನೆ ಎಂಬುದರಬಗ್ಗೆ ಅಜ್ಞಾನ ಇ