ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ನಮಸ್ಕಾರ,
ನಾನು ಈವತ್ತು ಉಬುಂಟು 8.04 ನಾ ವಿಂಡೊಸ್ ಒಳಗೆ ಹಾಕ್ಕೊಂಡೆ. ಅಲ್ಲಿ ನನಗೆ ಇಂಟರ್ನೆಟ್ ಹ್ಯಾಂಗ ಚಾಲುಮಾಡ್ಬೆಕು ಗೊತ್ತಾಗಿಲ್ಲ.ನಾನು DSL ಉಪಯೊಗ ಮಾಡ್ತಿನಿ. ಅಲ್ಲಿ ವಿಂಡೊಸ್ ದಾಗ make a new connection ,connect to internet ,setup my connection manually,connect using a broadband connection that requires a user name and password,isp name,
ಅಂತ setup madi ಮುಂದ ನನ್ನ user name ಅಂದ್ರ ನನ್ನ ಫೊನ್ ನಂ.ಕೊಟ್ಟು pass word ಏನು ಇಲ್ದೆ finish ಅಂತ ಮಾಡಿದ್ದೆ.ಇಲ್ಲಿ ಉಬಂಟುನಾಗ ಹ್ಯಾಂಗ ಮಾಡ್ಬೆಕು ಗೊತ್ತಾಗಲ್ಯಾಗದ. ಅದಕ ಸ್ವಲ್ಪ ಹ್ಯಾಂಗ ಮಾಡಬೇಕು ಅಂತ ಹೇಳ್ರಿ.

- kulmanju ರವರ ಬ್ಲಾಗ್
- Login or register to post comments
- 345 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ಇದಕ್ಕೆ ಉತ್ತರ ಇಲ್ಲಿದೆ ನೋಡಿ.
http://sampada.net/blog/omshivaprakash/25/05/2008/8938
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ಇರುವದೆಲ್ಲವ ಬಿಟ್ಟು.....
ಓಂ ಶಿವಪ್ರಕಾಶ ನಿಮಗ ಶರಣು.ನೀವು ಹೇಳಿದಂಗ ಮಾಡ್ಲಿಕ್ಕಿ ನೊಡ್ದೆ.ಅದ್ರ ಆಗ್ಲಿಲ್ಲಾ.ನಾ ಇರೊದು ಜರ್ಮನಿದಾಗ, ಇಲ್ಲಿ ISP ಯವರು ಬರೆ username .ಕೊಟ್ಟಾರ.ಉಳಿದಿದ್ದು, ಹ್ಯಾಂಗ ಮಾಡ್ಬೆಕು ಗೊತ್ತಾಗ್ಲಿಲ್ಲ.ನಾ ವಿಂಡೊಸ್ ನಾಗ ಮ್ಯಾಲೆ ಹೆಳಿಧಂಗ connect ಮಾಡಿನಿ .ನೀವು ಹೇಳಿಧಂಗ ಮಾಡ್ಲಿಕ್ಕಿ ಬೆಕಾಗೊದು ಹ್ಯಾಂಗ ತೊಗೊಬೇಕು? ISP ಯವರಿಗಿ ಫೊನ ಮಾಡದ್ರ ಉಪಯೋಗ ಇಲ್ಲ. ಯಾಕಂದ್ರ ಅವರಿಗಿ ಜರ್ಮನ್ ಬಿಟ್ಟು ಬ್ಯಾರೆ ಮಾತಾಡ್ಲಿಕ್ಕಿ ಬರೊದಿಲ್ಲಾ.ಪ್ಲೀಸ್ ಸ್ವಲ್ಪ ಹ್ಯಾಂಗ ಮಾಡೊದು ಹೇಳ್ರಿ.
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ಜರ್ಮನಿಯಾಗ ಇದ್ರೂ ಚಲೋ ಕನ್ನಡರೀ ನಿಮ್ದು.
ಜರ್ಮನಿ ಇದು ಯಾ ಮನಿ?
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ಇರುವದೆಲ್ಲವ ಬಿಟ್ಟು.....
ಅಣ್ಣೊರೆ, ಜರ್ಮನಿದಾಗ ಇದ್ರು ಕಲಬುರ್ಗಿದಾಗ ಇದ್ರು ಭಾಷಾ ಬದ್ಲಾಗ್ತದೇನ್ರಿ. ನಾಯೆನು ಇಲ್ಲೆ ಹುಟ್ಟಿಬೆಳದಿಲ್ಲಾ, ಹೊಟ್ಟಿಪಾಡಿಗ್ ಬಂದಿನಿ.
ದಯಮಾಡಿ ನನ್ನ ಈ ಮ್ಯಾಲಿನ problem ಗೆ ಉತ್ತರ ಕೊಡ್ರಿ.
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ನೀವು ವಿಂಡೋಸ್ನಾಗೆ ನೆಟ್ವರ್ಕ್ ಹ್ಯಾಂಗ್ ಸೆಟಪ್ ಮಾಡ್ಕೊಂಡ್ರಿ ಅಂತ ಒಂದು ಮೈಲಾಯಿಸ್ಲಿಕ್ಕಾಗ್ತದ ನೋಡಿ. ಹಾಗೆ, ನೀವು ಉಪಯೋಗಿಸ್ತಿರೋ ಡಿ.ಎಸ್.ಎಲ್ ಮೋಡೆಮ್ ನ ಹೆಸರನ್ನೂ ತಿಳಿಸಿ.
ಧನ್ಯವಾದಗಳೊಂದಿಗೆ,
ನಿಮ್ಮ, ಓಂ ಶಿವಪ್ರಕಾಶ
ಉ: ದಯವಿಟ್ಟು ಸಹಾಯಮಾಡಿ (ಲಿನಕ್ಸ್ ಬಗ್ಗೆ)
ಇರುವದೆಲ್ಲವ ಬಿಟ್ಟು.....
ಶಿವ ಪ್ರಕಾಶ್ ನಿಮಗ ನಾನು ಒಂದು ಮೆಲ್ ಕಳ್ಸಿನಿ. ಅದ್ರಾಗ ಎಲ್ಲಾ ಬರದಿನಿ.