’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ - ಅಡಿಗರ ಕವಿತೆಯ ಈ ಸಾಲು ಕ್ಲೀಶೆ (Cliche) ಅನ್ನಿಸುವಷ್ಟರ ಮಟ್ಟಿಗೆ ಉಪಯೋಗವಾಗಿದೆ.
ಆದರೆ ನಾನು ಎಲ್ಲೋ ಓದಿದ ನೆನಪು ಹೀಗಿದೆ:
Original ಕವಿತೆಯಲ್ಲಿ ಈ ವಾಕ್ಯದ ಕೊನೆಗೊಂದು ಪ್ರಶ್ನಾರ್ಥಕ ಚಿಹ್ನೆ ಇದೆಯಂತೆ:
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು.
( So, ಇದೊಂದು conclusion ಅಥವಾ statement ಅಲ್ಲ. )
ಹಾಗಾಗಿ ಈ ವಾಕ್ಯದ ಅರ್ಥ ನಿಜಕ್ಕೂ ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ಜೀವನ ತುಡಿಯುವುದಿಲ್ಲ ’ ಅಥವಾ ’ ಯಾತಕ್ಕಾದರೂ ತುಡಿದೀತು? ’ ಎಂದಂತೆ.
ಯಾರಾದರೂ ಗೊತ್ತಿರುವವರು ಈ ಬಗ್ಗೆ ಬರೆದಾರೇ?
ಇಂದು ಗೂಗಲ್ ನಲ್ಲಿ ಕನ್ನಡ ಸರ್ಚಿಸುವಾಗ ಸಿಕ್ಕಿದ ಈ ಕೊಂಡಿಯ ಪ್ರಕಾರ ನನ್ನ ಅನುಮಾನ ಸರಿಯಾಗಿದೆ ಅಂತ ಅನ್ನಿಸತೊಡಗಿದೆ:
http://www.kannadasaahithya.com/uniarc/index.php?layout=main&cslot_1=37

- kishorpatwardhan ರವರ ಬ್ಲಾಗ್
- Login or register to post comments
- 777 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
ಕಿಶೋರ ಅವರ ಇದರ ಅರ್ಥ ನೀವರೀ,
ನಿಮ್ಮ ಕಡೆ ಈ ಸಾಲಿನ ಅರ್ಥ ಇಲ್ಲಂತ, ತಿಳಿದುಕೊಳ್ಳೋ ಪ್ರಯತ್ನದ ಫಲವೇ ಈ ನಿಮ್ಮ ಹುಡುಕಾಟ.
ನಿಮಗ ಗೊತ್ತಿತ್ತಂದ್ರ ನೀವ್ಯಾಕ ಹುಡುಕತಿದ್ರೀ ಸಾಹೇಬ್ರ.
ನೀವೂ ಇಲ್ಲದುದರ ಕಡೆ ಹೊಂಟಿರಂದಂಗಾತು.
ಬಿಡಬ್ಯಾಡಡ್ರೀ ಹುಡುಕಾಟಾನ....!!!!!!!!!!
ಉ: ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
ಇವತ್ತು ಸುಮ್ನೆ ಗೂಗ್ಲಿಸುತ್ತಿದ್ದಾಗ, ಈ ಕೊಂಡಿ ಸಿಕ್ತು. ಭಾಳ ಚಂದ ಬರದಾರ.
’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ - ಎಂದು.
( So, ಇದೊಂದು conclusion ಅಥವಾ statement ಅಲ್ಲ. )
ಖರೆ ಐತಿ. ಆದರ ನಂಗನಿಸಿದ್ದು, "’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ, ಅಲ್ವಾ?’ ಅಂತ. (ಮನಸಿದ್ದಂಗ ಮಾದೇವ)
@tarlesubba,
ನೀವುಕೇಳಿದ್ದ ರಿಂಗಣ, ಇಲ್ಲಿ repetative ಅನ್ನೋ ಅರ್ಥದಾಗ ಬಳಕ್ಯಾಗೇತಿ ನೋಡ್ರಿ.
ಉ: ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
ಈ ಕೊಂಡಿ ಕೊಟ್ಟದ್ದಕ್ಕೆ ನನ್ನಿ.
ಚೆನ್ನಾಗಿ ಬರೆದಿದ್ದಾರೆ.
ಉ: ’ ಇರುವುದೆಲ್ಲವ ಬಿಟ್ಟು ......' - ಏನಿದರ ನಿಜವಾದ ಅರ್ಥ?
'ಇರುವದೆಲ್ಲವ ಬಿಟ್ಟು, ಇರುವೆ ಬಿಟ್ಗೋನ್ಡ್ರು.' ಎಂದು ಹೊಸ ಗಾದೆ ಹೇಳಬಹುದೇನೋ.....