ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕನ್ನಡಿಗನಿಗಲ್ಲ ಈ ದಸರಾ..!!
ದಸರಾ ಬ೦ದೇ ಬಿಡ್ತು. ನಮ್ಮ ನಾಡ ಹಬ್ಬವನ್ನು ಇನ್ನೂ ಹೆಚ್ಚಿನ ಆಡ೦ಬರದೊ೦ದಿಗೆ ಈ ಬಾರಿ ಆಚರಿಸಲಾಗುತ್ತಿದೆ. ಆದರೆ ನಮ್ಮೂರ ದಸರಾ ಇತಿಹಾಸವನ್ನು ಮತ್ತದರ ಕಾರ್ಯಕ್ರಮಗಳನ್ನು ದಯವಿಟ್ಟು ಕನ್ನಡದಲ್ಲಿ ಮಾತ್ರ ಕೇಳಬೇಡಿರಿ. ಏಕೆ೦ದರೆ, ಅ೦ತರ್ಜಾಲತಾಣವನ್ನು http://www.mysoredasara.com ನಿರ್ಮಿಸಿರುವ ಮಹಾನ್ ಅಧಿಕಾರಿಗಳು ೩೫ ವಿದೇಶಿ ಭಾಷೆಗಳಲ್ಲಿ ಯೂನಿಕೋಡ್ ನಲ್ಲಿ ತಯಾರಿಸಿ, ಕನ್ನಡದಲ್ಲಿ ಮಾತ್ರ ಮಾಡಿಲ್ಲ.
ಅಬ್ಬಬ್ಬ ಅದೆ೦ತಹ ದೊಡ್ಡವ್ಯಕ್ತಿಗಳಪ್ಪ ಇವರು. ತಮ್ಮ ನಾಡಿನ ಬಗ್ಗೆ ತಮ್ಮ ನುಡಿಯ ಬಗ್ಗೆ ಅದೆ೦ತಹ ಅಭಿಮಾನ. ತಾಯಿ ಚಾಮು೦ಡಿಯೇ ಇವರನ್ನು ಪೊರೆಯಲಿ.

- kishoreyc ರವರ ಬ್ಲಾಗ್
- Login or register to post comments
- 473 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಕನ್ನಡಿಗನಿಗಲ್ಲ ಈ ದಸರಾ..!!
ಗೂಗಲಿನ ಸ್ವಯಂಚಾಲಿ ಅನುವಾದ ಸೇವೆ ಬಳಸಿ ಇತರ ಭಾಷೆಗಳಲ್ಲಿ ತಾಣವನ್ನು ಒದಗಿಸುವ ಯತ್ನ ಇಲ್ಲಿ ಮಾಡಿದ್ದಾರೆ. ಅನುವಾದ ಅರೆಬರೆಯಷ್ಟೇ ಆಗುತ್ತದೆ.
ಕನ್ನಡವನ್ನು ಪ್ರಧಾನವಾಗಿ ಬಳಸಿದ್ದಾರೆ.
ಇನ್ನು ಪ್ರತಿ ಭಾಗ ಸಂಪೂರ್ಣ ಕನ್ನಡದಲ್ಲಿ ಲಭ್ಯವಿದೆ.
ನೀವು ಸರಿಯಾಗಿ ಗಮನಿಸಿಲ್ಲವೇ?
*ಅಶೋಕ್
ಉ: ಕನ್ನಡಿಗನಿಗಲ್ಲ ಈ ದಸರಾ..!!
ಈಗಷ್ಟೇ ಕನ್ನಡದಲ್ಲಿ ಮಾಡಿದ್ದಾರೆ. ಅಧಿಕಾರಿಗಳಿತೆ ಧನ್ಯವಾದಗಳು.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಅದು ನಿಮ್ಮ ಬರಹದ ಫಲಶ್ರುತಿ.
*ಅಶೋಕ್
ಉ: ಕನ್ನಡಿಗನಿಗಲ್ಲ ಈ ದಸರಾ..!!
ಅಶೋಕ್ ರವರೆ,
ಈ ನನ್ನ ಬರಹವನ್ನು ಅಳಿಸಲು ಏನು ಮಾಡಬೇಕು? ನಾನು ಸ೦ಪದಕ್ಕೆ ಸ್ವಲ್ಪ ಹೊಸಬ. ದಯವಿಟ್ಟು ತಿಳಿಸುವಿರಾ?
ಉ: ಕನ್ನಡಿಗನಿಗಲ್ಲ ಈ ದಸರಾ..!!
ಕಿಶೋರ್,
ಬರಹವನ್ನು ಅಳಿಸುವುದಕ್ಕೆ ಆಗೋದಿಲ್ಲ ಅಂತ ಅನ್ಸುತ್ತೆ...
ಅಳಿಸಬೇಕಾದ ಪ್ರಸಂಗ ಉದ್ಭವವಾದಾಗ ’ನಿರ್ವಾಹಕರ ಗಮನಕ್ಕೆ ತನ್ನ’ ಅನ್ನುವ ಕೊಂಡಿಯನ್ನು ಚಿಟುಕಿಸಿ... ಆಗ ನಿಮ್ಮ ಬರಹವನ್ನು ಅಳಿಸಲಾಗುತ್ತದೆ...
ನಾನು ಹೇಳಿದ್ದು ತಪ್ಪಿದ್ದರೆ ಯಾರಾದ್ರೂ ಸರಿಯಾಗಿ ತಿಳಿಸಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಇರಲಿ ಬಿಡಿ ಕಿಶೋರ್. ಪ್ರತಿಕ್ರಿಯೆ ಓದಿದಾಗ ಎಲ್ಲವೂ ಸ್ಪಷ್ಟವಗುತ್ತದೆ.
ಹಾಗೂ ಬೇಕಿದ್ದರೆ ಹರಿಪ್ರಸಾದ್ ಇದ್ದಾರಲ್ಲ. ರಮೇಶ್ ಹೇಳಿದಂತೆ ಮಾಡಿ.
*ಅಶೋಕ್
ಉ: ಕನ್ನಡಿಗನಿಗಲ್ಲ ಈ ದಸರಾ..!!
ಅಳಿಸಬೇಕಿಲ್ಲ. ನೀವು ಬರೆದದ್ದು ಸರಿಯಾಗಿತ್ತು ಹಾಗು ಸರಿಯಾಗಿದೆ.
ದಸರಾಗೆಂದು ಮಾಡಿರುವ ಅಂತರ್ಜಾಲದಲ್ಲಿ ಖಂಡಿತವಾಗಿ ಸಂಪೂರ್ಣವಾಗಿ ಕನ್ನಡದಲ್ಲಿ ಓದಿಕೊಳ್ಳುವ ಆಯ್ಕೆಯಿರಬೇಕು!
ಚೈನಾದವರ ಸೈಟುಗಳನ್ನು ನೋಡಿದ್ದೀರಾ?
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕನ್ನಡಿಗನಿಗಲ್ಲ ಈ ದಸರಾ..!!
ಚೈನಾ ವನ್ನು ಯಾಕೆ ಸಾರ್ ಹಿಂಬಾಲಿಸಬೇಕು? ಅವರು ಹಾಗೆ ಮಾಡ್ಕೊಂಡಿದ್ರಿಂದ ಅಲ್ವ ಐ.ಟಿ ನಲ್ಲಿ ಹಿಂದೆ ಬಿದಿದ್ದು?... ಹೊರಗಿನ ಪ್ರವಾಸಿಗರು ಸ್ವಲ್ಪ ಬರಲಿ ಮೈಸೂರಿಗೆ... ತೊಂದ್ರೆ ಇಲ್ಲ. ಕನ್ನಡ ಬೇಡ ಅಂತ ಹೇಳ್ತಾ ಇಲ್ಲ ಚೈನಾ, ರಷ್ಯ ಹಿಂಬಾಲಿಸೋದು ಬೇಡ ಅಂತೀನಿ...
ಉ: ಕನ್ನಡಿಗನಿಗಲ್ಲ ಈ ದಸರಾ..!!
ತಾಣದ ಯು.ಆರ್.ಎಲ್ ಕೊಟ್ಟಾಗ ಮೊದಲು ಕನ್ನಡ ಯುನಿಕೋಡ್ ನಲ್ಲಿ ಬರಬೇಕು, ಇಂಗ್ಲೀಶ್, ಇಲ್ಲವೇ ಇನ್ಯಾವುದೇ ಬೇರೆ ನುಡಿಯ ಪೇಜುಗಳಿಗೆ ಅಲ್ಲಿ ಕೊಂಡಿ ಕೊಟ್ಟಿರಬೇಕು, ದಸರಾ ಜಗತ್ತಿನಲ್ಲಿ ಸಾಕಸ್ಟು ಹೆಸರು ಮಾಡಿರುವದರಿಂದ, ಕನ್ನಡ ಯುನಿಕೋಡ್ ಸೈಟುಗಳಲ್ಲಿ ಹಿಂದೆ ಬಿದ್ದಿಲ್ಲ, ಅಂತ ತೋರಿಸಿದಂತಾಗುತ್ತದೆ, ಈ ಸೈಟ್ ಮೊದಲು ಕನ್ನಡದಲ್ಲೇ ಮೂಡಬೇಕು.
ನಾನು ನೆರವು ನೀಡಲು ಸೈ, sikhanagoudar AT gmail DOT com ನನ್ನ ಈ ಮೇಲ್...
ಉ: ಕನ್ನಡಿಗನಿಗಲ್ಲ ಈ ದಸರಾ..!!
ಚೈನಾದವರನ್ನು ಹಿಂಬಾಲಿಸಬೇಕಿಲ್ಲ, ಆದರೆ ಅವರನ್ನು ನೋಡಿ ಕಲಿಯಬಹುದು. ಚೈನಾ ಆಗಲಿ, ಜರ್ಮನಿ ಆಗಲಿ, ಜಪಾನ್ ಆಗಲಿ (ಯಾವುದೂ ಬೇಡ, ಪಕ್ಕದ ತಮಿಳುನಾಡು ತಗೊಳಿ ಸಾಕು) ಏನೇ ರೆಡಿ ಮಾಡುವಾಗ ಮೊದಲು ಆಲೋಚಿಸುವುದು ತಮ್ಮ ಸ್ವಂತದ ಭಾಷೆಯ ಬಗ್ಗೆ, ತಮ್ಮ ಜನರ ಬಗ್ಗೆ. ನಂತರ ಉಳಿದವರ ಬಗ್ಗೆ! ನಮ್ಮ ನಮ್ಮ ಭಾಷೆಗಳ ಬಗ್ಗೆ ಇಂತಹ ಕಾಳಜಿ ನಮಗೇ ಇಲ್ಲದಿದ್ದರೆ ಹೇಗೆ?
ಚೈನಾ ಐಟಿಯಲ್ಲಿ ಹಿಂದೆ ಬಿದ್ದಿದೆ ಅಂತ ಹೇಳುವುದು ಸರಿಯಲ್ಲ. ಸುಮಾರು ವಿಷಯಗಳಲ್ಲಿ ಚೈನಾ ಭಾರತಕ್ಕಿಂತ ಬಹಳ ಮುಂದಿದೆ. ಇಲ್ಲಿಯ ರಾಜಕಾರಣಿಗಳು ಹಾಸಿದ ರತ್ನಗಂಬಳಿಯಿಂದಾಗಿ ಏನೋ ಕೆಲವು ಕಂಪೆನಿಗಳು ಭಾರತದಲ್ಲಿ ಹೆಚ್ಚು ಇನ್ವೆಸ್ಟ್ ಮಾಡಿರಬಹುದು, ಕೆಲವು ಭಾರತೀಯ ಸರ್ವೀಸ್ ಕಂಪೆನಿಗಳು ಮುಂದಕ್ಕೆ ಬಂದಿರಬಹುದು. ಇವುಗಳಿಂದಾಗಿ ಐಟಿ ಕ್ಷೇತ್ರದಲ್ಲಿ ಭಾರತ ಬಹಳ ಮುಂದಿದೆ ಎನ್ನುವುದು ತಪ್ಪು ಕಲ್ಪನೆ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕನ್ನಡಿಗನಿಗಲ್ಲ ಈ ದಸರಾ..!!
ಐ.ಟಿ ಯಲ್ಲಿ ಯಾರು ಏನೇ ಹೇಳಿದರು ಭಾರತದ ಸಾದನೆ ಉತ್ತಮ ವಾಗಿದೆ, ಈ ಯುನಿಕೊಡ್ ಗಳು ಬರುವ ಮುಂಚೆ ಇಂಗ್ಲೀಷ್ ನದ್ದೇ ಕಾರು ಬಾರು. ಚೀನಾ ಅದರ "ಮಿಲಿಟರಿ"ವಿಷಯದಲ್ಲಿ ಚೆನ್ನಾಗಿದೆ ಅಸ್ಟೆ ಬೇಕಾದರೆ ಅದನ್ನು ನಾವು ಅವರಿಂದ ಕಲಿಯಬಹುದು ( ಆದ್ರೆ ಅದೂ ಡೇಂಜರ್)... ಮತ್ತೆ ತಮಿಳರಿಂದ ನಾವು ಕಲಿಯುವುದಕ್ಕಿಂತ ಅವರು ನಮ್ಗೆ ಕಲಿಸೊದೇ ಜಾಸ್ತಿಅಲ್ವೆ...ಪ್ರತೀ ಸಾರಿ
ಉ: ಕನ್ನಡಿಗನಿಗಲ್ಲ ಈ ದಸರಾ..!!
ಐಟಿಯಲ್ಲಿ ಭಾರತದ ಸಾಧನೆ? ಬೇರೆ ದೇಶದ ಚಾಕರಿ ಮಾಡೋದನ್ನ ಸಾಧನೆ ಅನ್ನೋದಾದ್ರೆ ಖಂಡಿತ ನಮ್ಮ ಸಾಧನೆ ಮೇಲೆ ಬೇರೊಂದಿಲ್ಲ.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಸರಿಯಾದ ಮಾತು
ರೋಶನ್,
ಐಟಿ ಕ್ಷೇತ್ರದಲ್ಲಿ ಭಾರತ ಇನ್ನೂ ಸುಮಾರು ದೂರ ಹೋಗುವುದಿದೆ. ಮಹತ್ಸಾಧನೆ ಅಂತ ಇನ್ನೂ ಆಗಿಲ್ಲ. ಹಾಗೆ ನೋಡಿದರೆ ಹೆಚ್ಚು ದೂರ ಹೋಗಿಲ್ಲ ಅಂದರೂ ಉತ್ಪ್ರೇಕ್ಷೆಯಲ್ಲ. ಒಂದೆರಡು ಕಂಪೆನಿಗಳು ದುಡ್ಡು ಮಾಡಿದರೆ ಅದು ಪ್ರಗತಿಯಾಗುವುದಿಲ್ಲ, ಭಾರತದಲ್ಲಿ ಒಟ್ಟಾರೆ ಐಟಿ ಎಲ್ಲಿದೆ ಎಂದು ಆಲೋಚಿಸಿ ನೋಡಿ.
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕನ್ನಡಿಗನಿಗಲ್ಲ ಈ ದಸರಾ..!!
ಚಾಕರಿ ಮಾಡೊದು ಅಂತ ತಿಳ್ಕೊಂಡ್ರೆ ಯಾರು ಯೇನು ಮಾಡೊಣ ಹೇಳಿ? ನಿಮಗೆ ಕಣ್ಣಿಗೆ ಬರಿ ಅಮೇರಿಕ, ಆಸ್ಟ್ರೇಲಿಯವೇ ಕಂಡ್ರೆ ಇದು ಚಾಕರಿ ಆಗಬಹುದು. ಚೀನಾದಿಂದ, ದಕ್ಶಿಣ ಕೊರಿಯಾದಿಂದ,ಯಾಕೆ ಫ್ರಾನ್ಸ್ ನಿಂದ ನಮಗೆ ಕಂಪ್ಯೂಟರ್ ಕಲಿಸಿ ಅಂತ ಭಾರತವನ್ನು ಕೇಳ್ತಾ ಇದ್ದಾರೆ. ಬೆಂಗಳೂರಿನಲ್ಲಿ ಕೆಲವು ಚೀನಿಯವರು ಕಂಪ್ಯೂಟರ್ ಕೋರ್ಸ್ ಮಾಡಲು ಬಂದು ಅವರಿಗೆ ಬೇರೆ ಬಾಷೆ ಬರದೆ ಒದ್ದಾಡಿದ್ದು ನಾನು ಕಣ್ಣಾರೆ ನೊಡಿದ್ದೀನಿ. ಅಮೇರಿಕಾ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ಅವರ ಚಾಕರಿ ಮಾಡ್ತೇವೆ..ಅನ್ನೊದು ಈಗಿನ ಫ್ಯಾಷನ್..
ಉ: ಕನ್ನಡಿಗನಿಗಲ್ಲ ಈ ದಸರಾ..!!
ಸರ್ ಚಾಕರಿ ಅಂದಿದ್ದು ನಾವು ಮಾಡ್ತಿರೊ ಕೆಲ್ಸದ ಗುಣಮಟ್ಟದ ಬಗ್ಗೆ ..
ಭಾರತ,, ಐ.ಟಿಯಲ್ಲಿ ಏನೇ ಮಹಾ ಸಾಧಿಸಿದಿವಿ ಅಂದ್ರು,, ಒಂದೇ ಒಂದು ಸರಿಯಾದ, ನಮ್ಮದೇ ಅನ್ನಬಹುದಾದ ಪ್ರಾಡಕ್ಟ್ ಇಲ್ಲ. i-flex ನ flexcube ಅನ್ನೊ ಕೋರ್ ಬ್ಯಾಂಕಿಂಗ್ ಸಾಫ್ಟವೇರ್ ಒಂದೇ ಇವತ್ತಿನ ವರೆಗೆ,, ಭಾರತದ ಕಂಪನಿಯೊಂದು ಮಾಡಿರುವ, ವಿಶ್ವದಾದ್ಯಂತ ಬಳಸ್ತಿರೋ ಪ್ರಾಡಕ್ಟ್ ಅನ್ನಬಹುದು. ಅದು ಬಿಟ್ರೆ ಎಲ್ಲಿದೆ ಹೇಳಿ ?? ಬರಿ ಬೇರೆ ಕಂಪನಿಗಳಿಗೆ ಸರ್ವಿಸ್ ಕೊಡೊದ್ರಲ್ಲೆ ಸಮಾಧಾನ ಪಟ್ಕೊತಾ ಇದಿವಿ. ನಾನು ಟಿ.ಸಿ.ಎಸ್ ಅಲ್ಲಿ ಇದ್ದಾಗ, ಸೀನಿಯರ್ ಮ್ಯಾನೆಜರ್ ಗೆ ಈ ಪ್ರಶ್ನೆ ಕೇಳಿದಾಗ,, ಆತ RoI ಇಲ್ಲದೇ ಇರೋದು ಯಾವುದನ್ನು ನಾವು ಮಾಡಲ್ಲ,, ಹೊಸ ಪ್ರಾಡಕ್ಟ್, ಹೊಸ ಸಂಶೋಧನೆಗೆ ದುಡ್ಡು ಬೇಕು, ಸಮಯ ಬೇಕು,, ಎಲ್ಲಕಿಂತ ಹೆಚ್ಚಾಗಿ ಅದರಲ್ಲಿ ರಿಸ್ಕ್ ಇದೆ,, ಅದು ನಮಗೆ ಬೇಡ,, we want to play safe ಅಂತ ಅವತ್ತಷ್ಟೆ ಸೇರಿದ್ದ ೫೦೦ ಜನ ಫ್ರೇಶರ್ಸ್ ಮುಂದೆ ನೇರವಾಗಿ ಹೇಳಿದ್ರು.. ಹೇಳಿ ಇಂತ ವ್ಯವಸ್ಥೆಯಲ್ಲಿ ತಲೆ ಖರ್ಚು ಮಾಡಿ,, ಒಂದೇ ಒಂದು ವಿಶ್ವ ಬೆರಗಾಗುವಂತ ಪ್ರಾಡಕ್ಟ್ ಈ so called IT capital ಇಂದ ಬಂದಿತಾ??
ಎಂದಿಗಾದ್ರೂ ಭಾರತದಿಂದ ಒಂದು ಐ-ಪಾಡ್/ಐ-ಫೋನ್, ಒಂದು ವಿಂಡೋಸ್ ಎಕ್ಸ್-ಪಿನೊ, ಒಂದು ಸೊನಿ ವೆಬ್ ಕ್ಯಾಮ್, ಒಂದು ನೊಕಿಯ N-95 ಬಂದಾಗ್ಲೆ, ನಾವು ಮಾಡ್ತಿರೋದು ಕತ್ತೆ ಚಾಕರಿ ಅಲ್ಲ,, ದೇಶಕ್ಕೆ Foreign Exchange ತರೋವಂತ ದೊಡ್ಡ ಕೆಲ್ಸ ಅಂತ ಕರಿಬೌದು.
ಏನಂತೀರಿ?
-
ವಸಂತ
ಉ: ಕನ್ನಡಿಗನಿಗಲ್ಲ ಈ ದಸರಾ..!!
ನಾವು ನಾವು ಅಂತ ಬೊಬ್ಬಿಡ್ತೀರಲ್ಲಾ..ಅದನ್ನು ಮಾಡಬೇಕಾದುದು ಯಾರು? ಅಂತ ಯೋಚಿಸಿ... ಒಂದು ವಿದೇಶಿ ಐಟಿ ಕಂಪೆನಿನಲ್ಲಿ ಸ್ವಲ್ಪ ದುಡಿದು ಹಣ ಮಾಡಿ ಭಾರತದಲ್ಲಿ ಕಂಪೆನಿಶುರು ಮಾಡುವವರೆ ಇಲ್ಲಿ ಇರೋದು ಹೆಚ್ಚು. ನೀವುಗಳೆಲ್ಲಾ ಸೇರಿ ಒಂದು ಐಟಿ ಅಸೊಸಿಎಶನ್..ಅಂತ ಯೇನಾದ್ರು ಮಾಡಿ ಒಟ್ಟು ಸೇರಿ ಇದನ್ನು ಹೇಗೆ ಮಾಡಬಹುದು ಅಂತ ತಿಳಿಸಬಹುದು ಅಲ್ವೆ?
ಉ: ಕನ್ನಡಿಗನಿಗಲ್ಲ ಈ ದಸರಾ..!!
ಐಟೀ ಕ್ಷೇತ್ರದಲ್ಲಿ ಭಾರತ ಮು೦ದಿರಬಹುದು, ಆದರೆ ಕನ್ನಡಿಗರದು ಇದರಲ್ಲಿ ಎಷ್ಟು ಪಾತ್ರವಿದೆ ಎಂದು ವಿಮರ್ಶಿಸಿಕೊಳ್ಳಬೇಕು. ಹಾಗು ಕನ್ನಡಿಗನು ಇರೋ ಬಾರೋ ಎಲ್ಲಾ ಉದ್ದಿಮೆನೂ ಮಾದುವನ್ತಾಗಲಿ.
ಈಗ ನೋಡಿ ಗುಜರಾತ್ ಸರ್ಕಾರ ವರ್ಷಕ್ಕೆ ೪೦,೦೦೦ ಕೋಟಿಯಷ್ಟು ಕೇಂದ್ರ ಸರ್ಕಾರದ ಖಾತೆ ತುಂಬುತ್ತದಂತೆ.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಇವತ್ತು ಕುಳಿತು ಅಲ್ಲಿಲ್ಲಿ ಅಲ್ಪಸ್ವಲ್ಪ ಕನ್ನಡ ಬರಿಸಿದ್ದಾರೆ ಅದರಲ್ಲಿ. ಮುರಳಿ ವೆಬ್ಸೈಟು ನೋಡಲಾಗದೆ ನಿನ್ನೆ ಕುಳಿತು ಸ್ವಲ್ಪ ಅನುವಾದ ಮಾಡಿಕೊಟ್ಟನಂತೆ.
ಶಿವು ಅವರಿಗೆ ಮುರಳಿಯ ಅನುವಾದ ತಲುಪಿಸಿದೆ ಎಂದು ಹೇಳುತ್ತಿದ್ದ
- HPN
ನನ್ನ ಬ್ಲಾಗುಗಳು: ಪರಿವೇಶಣ | PariveshaNa
ಉ: ಕನ್ನಡಿಗನಿಗಲ್ಲ ಈ ದಸರಾ..!!
ಓ.!! ಅ೦ದರೆ ನಮ್ಮ ಸ೦ಪದದ ಗೆಳೆಯರ ಸಹಕಾರ ಪಡೆದುಕೊ೦ಡು ಕನ್ನಡದ ಅ೦ತರ್ಜಾಲತಾಣವನ್ನು ನಿರ್ಮಿಸಿದರೆ೦ದರೆ ಅವರಿಗೆ ಅಲ್ಲೇನು ಕೆಲಸ. ನಾವೇ ಅವರ ಜಾಗದಲ್ಲಿದ್ದಿದ್ದರೆ ಇನ್ನೂ ಚೆನ್ನಾಗಿಯೇ ತಾಣವನ್ನು ನಿರ್ಮಿಸಬಹುದಿತ್ತೇನೋ!
ಅ೦ತರ್ಜಾಲದಲ್ಲಿ ಕನ್ನಡವೇ ಡೀಫಾಲ್ಟ್ ಭಾಷೆಯಾಗೆ ತೆರೆಯಲು ಇವರ ಮೇಲೆ ಒತ್ತಡ ತರಬೇಕು. ಎಲ್ಲವೂ ಹೇಳಿಯೇ ಮಾಡಿಸಿಕೊಳ್ಳಬೇಕು! ಅವರಿಗೆ ಹೊಳೆಯುವುದೇ ಇಲ್ಲವೇನೋ! ಛೇ!
ಉ: ಕನ್ನಡಿಗನಿಗಲ್ಲ ಈ ದಸರಾ..!!
ಕೇವಲ ಒ೦ದೇ ಒಂದು ಪುಟ ಮಾತ್ರ ಕನ್ನಡದಲ್ಲಿದೆ. ಎ೦ತಹ ವಿಷಾದದ ಸ೦ಗತಿ. ಪ್ರಮೋದ್ ಎ೦ಬವರು ಈ ವ್ಯವಸ್ಥೆಯ ನೋಡಿಕೊಳ್ಳುತ್ತಿದ್ದಾರಂತೆ. ಅವರ ದೂರವಾಣಿ ಸ೦ಖ್ಯೆಗೆ ೯೯೭೨೦೩೫೬೩೦ ಕರೆ ನೀಡಿ ಕನ್ನಡದ ಪ್ರತಿ ಈ ಮಲತಾಯಿ ಧೋರಣೆ ಏಕೆ೦ದು ಕೇಳಿದಾಗ ತಬ್ಬಿಬ್ಬಾದರು!
ಉ: ಕನ್ನಡಿಗನಿಗಲ್ಲ ಈ ದಸರಾ..!!
ಹೌದು ಕಿಶೋರ್ ನೀವು ಹೆಲ್ಲಿದು ಸರಿಯಾಗಿದೆ. ಕರ್ನಾಟಕದ ಯಾವುದೇ ಅಂತರ್ಜಾಲ ತಾಣವಾದರು ಡೀಫಾಲ್ಟ್ ಕನ್ನದಾನೆ ಇರಬೇಕು. ಬೇರೆ ಭಾಷೆಗೆ ಕೊಂಡಿಯನ್ನು ನೀಡಲಿ.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಹೌದು, ಈ ಸೈಟ್ ಯುನಿಕೋಡ್ ಕನ್ನಡದಲ್ಲಿರಲಿ. ಇಂಗಲೀಶ್ ಆವ್ರುತ್ತಿಗೆ ಲಿಂಕ್ ಇರಲಿ....
ಉ: ಕನ್ನಡಿಗನಿಗಲ್ಲ ಈ ದಸರಾ..!!
ಯಾವ್ದೋ ಒಂದು ಪುಟನ ಕನ್ನಡದಲ್ಲಿ ಹಾಕಿದಾರೆ. ನಾಚಿಕೆ ಆಗ್ಬೆಕು ಅದನ್ನ ಬಿಡುಗಡೆ ಮಾಡಿದವ್ರಿಗೆ.
ಆ ಇಂಗ್ಲೀಶ್‍ನಲ್ಲಿರೊ ಮಾಹಿತಿನು ಅಷ್ಟಕ್ಕಷ್ಟೆ.
ಉ: ಕನ್ನಡಿಗನಿಗಲ್ಲ ಈ ದಸರಾ..!!
ದಸರ ತಾಣ ತೋರಿದಕ್ಕೆ ನನ್ನಿ...
ಪ್ರೋಗ್ರಾಮ್ ಪಟ್ಟಿ ಸಿಕ್ಕಿದ್ದು ಒಳ್ಳೇದಾಯ್ತು.. ಈ ವಾರದ ಕೊನೆ ಹೋಗುಮ ಅಂತಿದ್ದೀವಿ.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಈ ಅನುವಾದದ ಜೊತೆಗೆ ಸ್ವಲ್ಪ ಸ೦ಶೋಧನೆ ಮಾಡಿ ಬರೆದದ್ದು ಸ೦ಪದ ತ೦ಡದವ್ರೂ
http://www.mysoredasara.com/mysorek.html
ಉ: ಕನ್ನಡಿಗನಿಗಲ್ಲ ಈ ದಸರಾ..!!
>>ಈ ಅನುವಾದದ ಜೊತೆಗೆ ಸ್ವಲ್ಪ ಸ೦ಶೋಧನೆ ಮಾಡಿ ಬರೆದದ್ದು ಸ೦ಪದ ತ೦ಡದವ್ರೂ...
ಮುರಳಿ, ಸಕ್ಕತ್ ರೀ..,
ಅನುವಾದದ ಜೊತೆಗೆ ಸ್ವಲ್ಪ ಸಂಶೋಧನೆ ಮಾಡಿ ಬರೆದ ಸಂಪದ ತಂಡದವರಿಗೆ ಇಡೀ ಸಂಪದ ಸಮುದಾಯದ ಪರವಾಗಿ ಅಭಿನಂದನೆಗಳು...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಕನ್ನಡಿಗನಿಗಲ್ಲ ಈ ದಸರಾ..!!
ಮುರಳಿ ಅವರೇ,
ನಿಮಗೆ ಧನ್ಯವಾದಗಳು..
ಓಂ ಹೇಳ್ತಾ ಇದ್ರು, ನಿಮ್ಮ ಉತ್ಸಾಹದ ಬಗ್ಗೆ..
ನಾನು ಆ ಪ್ರಮೋದ ಜೊತೆ ಮಾತಾಡಿದೆ. ೨ ಪುಟ ಭಾಷಾಂತರಕ್ಕೆ ಸಹಾಯ ಬೇಕು ಎಂದು ಕೇಳಿದ. ಅದನ್ನು ಮುರಳಿ, ಹಾಗೂ ನನ್ನ ಇನ್ನೊಬ್ಬ ಸ್ನೇಹಿತ ಮಾಡಿ ತಲುಪಿಸಿದರು.
ಆಶ್ಚರ್ಯ ಅಂದರೆ,, ಪ್ರಮೋದ ಹೇಳಿದ್ದು,, " ಸರ್, ಇಂಟರ್ ನೆಟ್ ನ ಡಿಫಾಲ್ಟ್ ಭಾಷೆ ಇಂಗ್ಲೀಷ್,, ಕನ್ನಡದ ಬಗ್ಗೆ ಅಷ್ಟ್ಯಾಕೆ ತಲೆ ಕೆಡಸ್ಕೊತಿರಾ? !!! " ಎಂದದ್ದು. ಆತನಿಗೆ ಹರಿ ಹೇಳಿದ ಹಾಗೆ ಚೈನಾದ ಉದಾಹರಣೆ ನಾನು ಕೊಟ್ಟೆ, ಜೊತೆಗೆ ಸ್ವಲ್ಪ ಗದರಿದೆ. ಕರ್ನಾಟಕ ಸರ್ಕಾರದ ದುಡ್ಡಲ್ಲಿ ಮಾಡ್ತಿರೊ ವೆಬ್ ಸೈಟ್,, ಇಲ್ಲಿ ನೋಡಿದ್ರೆ ನಾಡ ಭಾಷೆ ಬಗ್ಗೆ ತಾತ್ಸಾರ ಯಾಕೆ ಅಂತ.
ಕಿಶೋರ್ ಹೇಳಿದ ಹಾಗೆ,, ಮುಂದಿನ ದಸರೆಗೆ,, ಈ ವೆಬ್ ಸೈಟ್ ಮಾಡೋ ಗುತ್ತಿಗೆ ಸಂಪದ ಸ್ನೇಹಿತರೇ ಹಿಡಿಬೇಕು ,, ಯಾರೇ ನೋಡಿದ್ರೂ,, ಮೆಚ್ಚಿ ತಲೆದೂಗಬೇಕು ,, ಹಾಗೆ ಈ ವೆಬ್ ಸೈಟ್ ಮೂಡಿ ಬರಬೇಕು.
ಓಂ, ಮುರಳಿ ಹಾಗೂ ನನ್ನ ಸ್ನೇಹಿತರಾದ ಕೆ.ಸಿ ಗೆ ನನ್ನಿ.
-
ವಸಂತ
ಉ: ಕನ್ನಡಿಗನಿಗಲ್ಲ ಈ ದಸರಾ..!!
>>"ಕಿಶೋರ್ ಹೇಳಿದ ಹಾಗೆ,, ಮುಂದಿನ ದಸರೆಗೆ,, ಈ ವೆಬ್ ಸೈಟ್ ಮಾಡೋ ಗುತ್ತಿಗೆ ಸಂಪದ ಸ್ನೇಹಿತರೇ ಹಿಡಿಬೇಕು ,, ಯಾರೇ ನೋಡಿದ್ರೂ,, ಮೆಚ್ಚಿ ತಲೆದೂಗಬೇಕು ,, ಹಾಗೆ ಈ ವೆಬ್ ಸೈಟ್ ಮೂಡಿ ಬರಬೇಕು."
ಇದು ಉತ್ಸಾಹ ಅಂದ್ರೆ
ಉ: ಕನ್ನಡಿಗನಿಗಲ್ಲ ಈ ದಸರಾ..!!
ಎಲ್ಲಕ್ಕೂ ಮೂಲದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ದೊಡ್ಡದಿದೆ.
ಅದರ ಬಗ್ಗೆ ಏನ್ ಗುರು ಲಿ ಒಮ್ಮೆ ಓದಿದ್ದೆ,,
ಭಾರತ ಯಾಕೆ, R&D ಯಲ್ಲಿ ಮೆಕ್ಸಿಕೊ ಕಿಂತಲೂ ಹಿಂದಿದೆ ಎಂದು.. ಅದು ಇಲ್ಲಿದೆ:
ಹೊರಲಾರದ ಇಂಗ್ಲೀಷ್ ಹೊರೆಯಿಂದ ಭಾರತ ತರಗತಿಯಲ್ಲಿ ನಪಾಸು!
http://enguru.blogspot.com/2007/10/blog-post_18.html
ಕನ್ನಡ ಒಂದು ಅನ್ನ ಕೊಡುವ ಭಾಷೆಯಾಗಿ ಬದಲಾಗದ ಹೊರತು,, ವಿಶ್ವ ಬೆರಗಾಗುವಂತ ಒಂದೇ ಒಂದು ಉತ್ಪನ್ನ ನಮ್ಮ ನೆಲದಿಂದ ಬರಲು ಸಾಧ್ಯವಿಲ್ಲ,, ಅಲ್ಲಿವರೆಗೂ ಪುಡಿಗಾಸಿಗೆ ಕತ್ತೆ ಚಾಕರಿನೇ ಗತಿ
-
ವಸಂತ