ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › kishoreyc ರವರ ಬ್ಲಾಗ್

ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

September 24, 2008 - 11:43pm — kishoreyc

ನನ್ನ ಸಹೋದ್ಯೋಗಿ ಟೋನಿ ಮೊನ್ನೆ ಒ೦ದು ಆಫೀಸ್ ಪಾರ್ಟಿಯಲ್ಲಿ ಉಲಿದಿದ್ದ.."ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ, ಊರಲ್ಲಿರೋ ರಿಯಲ್ ಎಸ್ಟೇಟ್ ವ್ಯಾಪಾರದಲ್ಲಿ ಕನ್ನಡಿಗರು ತೀರ ಕಡಿಮೆ, ಮತ್ತು ನಿನಗೆ ಗೊತ್ತಿರೋ ಹಾಗೆ ಕನ್ನಡಿಗನಿಗಿ೦ತ ಹತ್ತು ಪಟ್ಟು ಆರ್ಥಿಕವಾಗಿ ಉತ್ತಮಸ್ಥಿತಿಯಲ್ಲಿರುವ ಪರಭಾಷಿಕರು ಇಲ್ಲಿ ಬ೦ದು ನೆಲೆಸುತ್ತಿದ್ದಾರೆ, ಬ೦ದವರು ಸುಮ್ಮನೆ ಕೂರುತ್ತಾರ? ಖ೦ಡಿತ ಇಲ್ಲ. ನಮ್ಮೂರ ಕೇರಳಿಗರು ಮೊದಲೇ ಉದ್ಯಮಶೀಲತೆಯಲ್ಲಿ ಹೆಸರುಮಾಡಿದವರು, ಉತ್ತರ ಭಾರತದ ಲಾಲಾ, ಮಾರವಾಡಿಗಳು, ಬಜಾಜ್ ಗಳು, ಬನ್ಸಲ್ ಗಳು ಪ್ರತಿಯೊಬ್ಬನಿಗೂ ವ್ಯಾಪಾರ ಮಾಡೋದು ರಕ್ತಗತವಾಗಿ ಬ೦ದಿರತ್ತೆ".

ನಾರಾಯಣ ಮೂರ್ತಿಯವರನ್ನು ಬಿಟ್ಟು ನಮ್ಮಲ್ಲಿ ಅದಾವ ದೊಡ್ಡ ಉದ್ಯಮಶೀಲನಿದ್ದಾನೆ ಎ೦ದು ಯೋಚಿಸತೊಡಗಿದೆ. ಕನ್ನಡಿಗರಿಗೂ ಉದ್ಯಮಶೀಲತೆಗೂ ಇರುವ ಮಡಿವ೦ತಿಕೆಯ ಕಾರಣವೇನು? ತಿಳಿದವರ ಪ್ರಕಾರ ಇನ್ನು ಹತ್ತು ವರ್ಷಮಾತ್ರ ಇರುವುದು, ಆ ನ೦ತರ ನಮ್ಮ ನಾಡಿನಲ್ಲೂ ಸಹ ಮು೦ಬೈನ ಹಾಗೆ, ಬೇರೆಯವರು ಬ೦ದು ನಮ್ಮನ್ನಾಳುತ್ತಾರೋ ಏನೋ? ನಮ್ಮ ನಾಗರೀಕತೆಯ ಮೇಲೆ ಪರಭಾಷಿಕರ ಪ್ರಭಾವ ಹೆಚ್ಹಾದರೆ ಏನೇನು ಅನಾಹುತವಾಗುತ್ತದೆಯೆ೦ದು ಯೋಚಿಸಿದರೆ ಎದೆ ನಡುಗುತ್ತದೆ. ಕನ್ನಡಿಗರು ಕನ್ನಡ ಮಾತಾಡಕ್ಕೇ ಮಡಿವ೦ತಿಕೆ ತೋರಬಹುದು... ಪರಭಾಷಿಕನೇ ರಾಜನಾಗಿ ಮೆರೆಯಬಹುದು... ದೇಶದ ಎಲ್ಲೆಡೆಯಿ೦ದ ಜನರು ಬ೦ದು ಇಲ್ಲಿ ಕೆಲಸ ಮಾಡಬಹುದು, ಇದರಿ೦ದ ಕನ್ನಡಿಗನಿಗೆ ತನ್ನ ಊರಲ್ಲೇ ಕೆಲಸ ಸಿಗದೇಹೋಗಬಹುದು. ನೆನಪಿರಲಿ, ನಮ್ಮಲ್ಲಿ ಯಾವ ವಲಸೆ ಕಾನೂನು ಇಲ್ಲ. ಒಬ್ಬ ಬಿಹಾರಿ ಬ೦ದು ಇಲ್ಲಿ ಒ೦ದು ಕ೦ಪನಿ ಪ್ರಾರ೦ಭಿಸಬಹುದು, ಕನ್ನಡಿಗರು ಬೇಡ ನಮ್ಮೂರಿ೦ದಲೇ ಜನರನ್ನು ಕೆಲಸಕ್ಕೆ ಇಟ್ಕೋತೀನಿ ಅ೦ದರೆ ಕನ್ನಡದೋರು ಬಾಯಿ ಮುಚ್ಕೋ೦ಡಿರಬೇಕು. ಹೆಚ್ಹು ಮಾತಾಡಿದರೆ, ಆಗಲೇ ಬ೦ದು ನೆಲೆಸಿರುವ ಹಿ೦ದಿಗರು ನಮ್ಮನ್ನು ಅಸ೦ವೈಧಾನಿಕವಾಗಿ ನಡೆದುಕೊಳ್ಳುತ್ತಿದ್ದಿಯ ಎ೦ದು ದೂರಬಹುದು. (ಮು೦ಬೈನಲ್ಲಿ ಇವೆಲ್ಲಾ ಆಗಿಹೋಗಿವೆ!)

ಮು೦ಬೈನಲ್ಲಿ ತಮ್ಮ ಅ೦ಗಡಿ ಮು೦ಗಟ್ಟಿನಲ್ಲಿರುವ ನಾಮಫಲಕವು ಮರಾಠಿಯಲ್ಲಿ ಹಾಕುವುದಿಲ್ಲ ಎ೦ದು ಅಲ್ಲಿನ ಸರ್ಕಾರಕ್ಕೇ ಸವಾಲೊಡ್ಡಿರುವ ಹಿ೦ದಿಗರು ಇಲ್ಲಿ ತಮ್ಮ ಕ್ಯಾತೆ ತೆಗೆಯಲ್ಲ ಅ೦ತ ಏನು ಗ್ಯಾರ೦ಟಿ? ಮೊದಲೇ ಕನ್ನಡದವರು ಮುಗ್ಧರು, ಹಾಗೂ ಅಹಿ೦ಸಾ ಪ್ರಿಯರು... ಇದರ ಲಾಭ ಪಡೆದುಕೊಳ್ಳಕ್ಕೆ ಪರಭಾಷಿಕರು ತುದಿಗಾಲಲ್ಲಿ ನಿ೦ತಿದ್ದಾರೆ.

ಟೋನಿಯ ಹತ್ತು ವರ್ಷದ ಗಡುವು ಐದು ವರ್ಷವಾದರೆ ಏನು ಅಚ್ಚರಿಯಿಲ್ಲ. ಅವನ ಜೊತೆ ವಾದ ಮಾಡಿ ಪ್ರಯೋಜನ ಇಲ್ಲವೆ೦ದು ತಿಳಿದಾಗ, ಸತ್ಯ ಅರಿವಾದಾಗ, ಕುಳಿತು ಯೋಚಿಸಿದಾಗ ಕನ್ನಡಿಗರು ಉದ್ಯಮಶೀಲರಾಗದಿದ್ದಲ್ಲಿ ನಮಗೆ ಉಳಿಗಾಲವಿಲ್ಲ ಎ೦ದು ಮನಗ೦ಡೆ!! ಸುಮ್ಮನೆ ಪಾರ್ಟಿಯಿ೦ದ ಎದ್ದು ಹೊರಟಿದ್ದೆ. ಟೋನಿ, ಇರೋ.. ನನ್ನನ್ನು ಮನೆಯವರೆಗೆ ಡ್ರಾಪ್ ಕೊಡೆ೦ದು ಕೇಳಿದ. ಸರಿ, ನನ್ನ ಪಲ್ಸರ್ ನಲ್ಲಿ ಅವನನ್ನು ಮನೆಗೆ ಬಿಟ್ಟು, ನಾವು ಮಾಡಿದ ವಾದದ ಬಗ್ಗೆ ಯೋಚಿಸುತ್ತಾ ಮನೆ ತಲುಪಿದೆ.

ಸ೦ಪದದ ಓದುಗರು ಇದರ ಬಗ್ಗೆ ಏನು ಅಭಿಪ್ರಾಯ ವ್ಯಕ್ತ ಪಡಿಸಬಹುದೆ೦ದು ತಿಳಿಯಲು ಈ ಬರಹ!

  • ಉದ್ಯಮ
  • ಕನ್ನಡಸಿರಿ
  • ಕರ್ನಾಟಕ
  • ಸಮಸ್ಯೆ
~.~
  • kishoreyc ರವರ ಬ್ಲಾಗ್
  • Login or register to post comments
  • 454 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 25, 2008 - 4:05am — shilpaam

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

shilpaam's picture

ಈ ವಿಷಯದ ಬಗ್ಗೆ ನಮ್ಮ ಮನೇಲಿ ಬಹಳಷ್ಟು ಬಾರಿ ವಾದ ನಡೆದದ. ಬೇರೆ ರಾಜ್ಯಗಳಲ್ಲಿ ’ವ್ಯಾಪಾರ ಮಾಡೋ ಮಗನೆ, ಸ್ವಂತ ಕಾಲ ಮ್ಯಾಲೆ ನಿಂತಕೊ, ಬ್ಯಾರೆಯವರ ಸಲುವಾಗಿ ಯಾಕ್ ದುಡಿತಿ/ ಸ್ವಂತದ ಸಲುವಾಗಿ ದುಡಿ’ ಅಂತ ಮಕ್ಕಳಿಗೆ ಹೇಳತಾರ. ಅದ ನಮ್ಮಲ್ಲಿ, ಒಂದ ಸರಕಾರಿ ನೌಕರಿ ಇರಬೇಕು ಇಲ್ಲ ದೊಡ್ಡ ಸೊಫ಼್ತ್ವೆರ್ ಕಂಪನಿಯೊಳಗ ಕೆಲಸ ಮಾಡಬೇಕು. ಅಕಸ್ಮಾತ್ ಕಂಪನಿ ಹಾಕ್ತಿನಿ ಅಂತ ಧ್ವನಿ ತಗದ್ರ, ಅಯ್ಯೋ ಅದರೊಳಗ ಸ್ಥಿರ ಆದಾಯದ ನಂಬಿಕೆ ಇಲ್ಲ, ಅಂಥ ಕೆಲಸ ಯಾಕ ಮಾಡ್ತಿಯೋ? ನಾಳೆ ಮದುವಿಯಾಗ್ಲಿಕ್ಕೆ ಹುಡಗಿ ಸಿಗೋದಿಲ್ಲ, ಹಾಂಗ ಹಿಂಗ ಅಂತ ಕನಸನ್ನ ಚಿವಟಿ ಬಿಡತಾರ. ದೊಡ್ಡವರು ಮಕ್ಕಳನ್ನ ಹುರಿದ್ಂಬಿಸದೆ ಇದ್ರ ನೀವು ಹೇಳತಾ ಇರೋ ದಿನ ಇನ್ನೂ ಲಗೂನ ಬರಬಹುದು.

ಶಿಲ್ಪ
ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:26pm — ಸಂಗನಗೌಡ

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

ಸಂಗನಗೌಡ's picture

Quote:
...ಅಕಸ್ಮಾತ್ ಕಂಪನಿ ಹಾಕ್ತಿನಿ ಅಂತ ಧ್ವನಿ ತಗದ್ರ, ಅಯ್ಯೋ ಅದರೊಳಗ ಸ್ಥಿರ ಆದಾಯದ ನಂಬಿಕೆ ಇಲ್ಲ, ಅಂಥ ಕೆಲಸ ಯಾಕ ಮಾಡ್ತಿಯೋ? ನಾಳೆ ಮದುವಿಯಾಗ್ಲಿಕ್ಕೆ ಹುಡಗಿ ಸಿಗೋದಿಲ್ಲ, ...
... ಇದಂತೂ ದಿಟ ಐತಿ!!... :-)

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:29pm — ಸಂಗನಗೌಡ

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

ಸಂಗನಗೌಡ's picture

..ತಲಿ ಕೆಡಿಸ್ಕೋಬೇಡಿರಿ, ಬೆಂಗಳೂರು ಕನ್ನಡಿಗರ ಕೈಯಲ್ಲೇ ಇರುತ್ತೆ, ಬಂದವರು ಕನ್ನಡಕ್ಕೆ ಒಗ್ಗಿ, ಕನ್ನಡಿಗರೇ ಆಗುತ್ತಾರೆ, ನೋಡಿ ಬೇಕಾದರೆ, ಅಪ್ಪ-ಅಮ್ಮ ಎಲ್ಲಿಂದಲೇ ಬಂದಿರಲಿ, ಇಲ್ಲಿ ಹುಟ್ಟಿ ಬೆಳೆದವರು ಕನ್ನಡಿಗರೇ ಆಗಿರುತ್ತಾರೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:48pm — madhava

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

madhava's picture

ಕನ್ನಡ ರಾಜ್ಯೋತ್ಸವ ಒಂದು ವೇದಿಕೆಯಲ್ಲಿ ಪ್ರೊ.ಜಿ.ವೆಂಕಟಸುಬ್ಬಯ್ಯ(ಜೀವಿ) ನವರು ಇನ್ನು ಕೆಲವು ವರ್ಷಗಳಲ್ಲಿ ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬಹುದು ಎಂದುದು ನೆನಪಾಯಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 1:50pm — mahesha

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

mahesha's picture

ಏನ್ ತಲೆಗೆಡಿಸಿಕೋಬೇಡಿ....

ಹಿಂದಿನಿಂದಲೂ ಬೆಂಗಳೂರಿಲ್ಲಿ ಕನ್ನಡವಿಲ್ಲ ಕನ್ನಡವಿಲ್ಲ ಅಂತ ಬೊಬ್ಬೆ..

ಆದರೆ ದಿಟನೋಡ್ರಿ.. ಬರೀ ಕೋರಮಂಗಳ, ಮಾರತ್ತಹಳ್ಳಿ ನೋಡಿ ಮಂದಿ ಕನ್ನಡವಿಲ್ಲ ಅಂತಾರೆ.. ಅಶ್ಟೇ...

ಆದರೆ ಇಂದಿಗೂ ಬೆಂಗಳೂರಲ್ಲಿ ಮೂರು ಮುಕ್ಕಾಲು ಏರಿಯ ಕನ್ನಡದ್ದೇ..

ತೆಂಕಣ ಬಡಗಣ ಪಡುವಣ ಬೆಂಗಳೂರುಗಳು ಕನ್ನಡವೇ.. ಮೂಡಣ ಬೆಂಗಳೂರಾದ ಕೋರಮಂಗಳ, ಮಾರತ್ತಳ್ಳಿ ಕಡೆ ಸೊಲ್ಪ ಕನ್ನಡ ಕಡಮೆ. ಇನ್ನು ಅಲಸೂರು ಮಂದಿಗೆಲ್ಲ ಕನ್ನಡ ಬಂದೇ ಬರತ್ತೆ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 4:05pm — kpbolumbu

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

kpbolumbu's picture

ಅಲಸೂರಿನದ್ದು ಕನ್ನಡ ಅಲ್ಲ ಸ್ವಾಮಿ, ಎನ್ನಡ ಅದೂ....
__________________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೆಪಿ ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 25, 2008 - 10:28pm — kishoreyc

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

kishoreyc's picture

ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲ ಮಿತ್ರರಿಗೂ ಧನ್ಯವಾದಗಳು! ನಾವೊಬ್ಬರೇ ವ್ಯಾಪಾರ ಮಾಡಲು ಹೊರಟರೆ, ಖ೦ಡಿತ ಕಷ್ಟವಾಗುತ್ತದೆ... ಇನ್ ಫೋಸಿಸ್ ಶುರು ಮಾಡಿದಾಗ ನಾರಾಯಣ ಮೂರ್ತಿಯವರು ಒಬ್ಬರೇ ಇರಲಿಲ್ಲ. ನಾವುಗಳು ಒಟ್ಟಾಗಿ ಪ್ರಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ! ಏನ೦ತೀರ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 10:41am — Ennares

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

Ennares's picture

ಪ್ರಿಯ ಕಿಶೋರ್,

ಸಮಾಜ ಶಾಸ್ತ್ರಿ ಶ್ರೀಮತಿ ಜಾನಕಿ ನಾಯರ್ ಬೆಂಗಳೂರು ಮತ್ತುಕನ್ನಡದ ಬಗ್ಗೆ ಬರೆದ ಲೇಖನವೊಂದನ್ನು ಈ ಕೆಳಗಿನ ಕೊಂಡಿಯಲ್ಲಿ ಓದಿ ನೋಡಿ.

https://courses.washington.edu/banglr06/wp-content/uploads/2006/08/nair-...

ಧನವಾದಗಳು
- ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 6:23pm — baktavarbaba

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

baktavarbaba's picture

Kishore ravare..

Nimma Lekahana Oddidaga, Nijavagalure aa preshne taleyalli eluttade. Nanage Anisida hage idu bahalashtu janara taleyalli ee prashne bandirabahuu. Yakendare Eegina paristiti nodidare hageye aniisuttade.

Illi iruva real estate malikaru, IT udyamigalu, alomst parabhashigare iddare.

Kannadigarige mattu udyamashilatege madivantige ide- adu antu dita.

ನಿಮ್ಮ ಪ್ರೀತಿಯ
ಬಾಬಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 26, 2008 - 9:12pm — kishoreyc

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

kishoreyc's picture

ಧನ್ಯವಾದಗಳು ಸುಧೀರ್ ರವರೆ,

ಬಾಬಾ ರವರೆ,
ಐದು ಬೆರಳು ಕೂಡಿ ಒ೦ದು ಮುಷ್ಟಿಯು ಎ೦ಬ ಹಾಡು ನಾವು ಕೇಳಿಲ್ಲವೇ? ಹಾಗೆಯೇ ಎದೆಗು೦ದದೆ, ಎಲ್ಲರೂ ಒಟ್ಟಾಗಿ ಇದರ ಬಗ್ಗೆ ಕೆಲಸಮಾಡೋಣ... ನಮಗೆ ತಕ್ಷಣಕ್ಕೆ ಈ ರೀತಿಯ ಚಿ೦ತನೆಗಳಿಗೆ ಒ೦ದು ಫೋರ೦ ಬೇಕು. ಸ೦ಪದ ಎಲ್ಲರೂ ಕೂಡಿ ಇದರ ಬಗ್ಗೆ ಹೆಚ್ಚು ಹೆಚ್ಚು ಬರೆಯೋಣ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 8:45pm — baktavarbaba

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

baktavarbaba's picture

ಹೌದು ಪ್ರಿಯ ಕಿಶೋರ್ ರವರೆ,

ನಿಮ್ಮ ಮಾತು ನಿಜ, ಸಂಪದದಲ್ಲಿ ಆದಷ್ಟು ಬೇಗ ನಾವು ನಮ್ಮ ಚಿಂತನೆಗಳಿಗೆ ತಕ್ಕುದಾದ ಒಂದು ಫೋರಮ್ ಅನ್ನು ಮಾಡಬೇಕು... ನೀವು ಹೇಳುತ್ತಿರುವುದು ಬೇರೆ ಫೋರಮ್ ಅಥವಾ ಸಂಪದದಲ್ಲಿಯೇ ಒಂದು ಫೋರಮ್..?

ನಿಮ್ಮ ಪ್ರೀತಿಯ
ಬಾಬಾ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 11:18pm — kishoreyc

ಉ: ಇನ್ನು ಹತ್ತು ವರ್ಷದಲ್ಲಿ ಬೆ೦ಗಳೂರು ಕನ್ನಡಿಗರ ಕೈಗಳಲ್ಲಿ ಇರುವುದಿಲ್ಲ ??

kishoreyc's picture

ಬಾಬಾರವರೇ, ಸ೦ಪದದ ಮ೦ದಿಯೇ ಒಮ್ಮೆ ಒಟ್ಟಿಗೆ ಸೇರೋಣ. ಸಮಚಿ೦ತಕರಾದ ನಾವು ಜನರಲ್ಲಿ ಜಾಗೃತಿಯನ್ನು ಮುಡಿಸುವಬಗ್ಗೆ, ನಾವು ಹೆಚ್ಚು ಹೆಚ್ಚು ಉದ್ಯಮಶೀಲರಾಗುವ ಬಗ್ಗೆ ಏನು ಮಾಡಬೇಕೆ೦ದು ಕುಳಿತು ಸಮಾಲೋಚಿಸೋಣ. ನಮ್ಮ ಬಿಸಿ ದಿನಚರಿಯಲ್ಲಿ ರಜಾದಿನವೋ ಮತ್ತೊ೦ದು ದಿನವೋ ಒ೦ದೆರಡು ಗ೦ಟೆ ಕಾಲ ಇದರ ಬಗ್ಗೆ ಮಾತಾಡೋಣ ಅಲ್ವಾ. ಹಾಗೇ ನಿಮ್ಮನ್ನು ನೋಡಿದ ಹಾಗೂ ಆಗುತ್ತದೆ ಮತ್ತೆ ನಿಮ್ಮ ಪರಿಚಯವೂ ಆಗುತ್ತದೆ. ನೀವು ಹು೦ ಎ೦ದರೆ ಮು೦ದಿನದು ಯೋಚಿಸೋಣ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಭಾವನ ತ೦ಗಿ!
  • ಪ್ರೇಮದ ಕಾದ೦ಬರಿ
  • "Builder of IT City" -- ನಾರಾಯಣ ಮೂರ್ತಿ ??
  • ಕರ್ನಾಟಕ್ ಲಾಬ್
  • ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ
Syndicate content

ಲೇಖಕರು

kishoreyc's picture

ಪೂರ್ಣ ಹೆಸರು
ಕಿಶೋರ್

ಪರಿಚಯ

ಬೆಂಗಳೂರಿನ ಎಂ.ಏನ್.ಸಿ ಕಂಪನಿಯಲ್ಲಿ ಅಕೌಂಟೆಂಟ್. ನಾಡ ಪ್ರೇಮಿ, ಗಿಟಾರ್ ಕಲಿಕೆಯಲ್ಲಿ ಆಸಕ್ತಿ. ಷೇರು ಮಾರುಕಟ್ಟೆಯಲ್ಲಿ ಹಣ ಮಾಡುವ ಹಂಬಲ. ನನಗೆ ಪ್ರಿಯವಾದದ್ದು - ಚಿಂತನಾತ್ಮಕ ವ್ಯಕ್ತಿಗಳು, ಕನ್ನಡ,ಫ್ರೆಂಡ್ಸ್ ಜೊತೆ ವೀಕೆಂಡ್ ಮೋಜು...

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
ಇನ್ನಷ್ಟು
ಈಗಿನಂತೆ 16 ಸದಸ್ಯರು ಮತ್ತು 442 ಅತಿಥಿಗಳು ಆನ್ಲೈನ್ ಇರುವರು.


ಸು:ಖ ದು:ಖ ಗಳನು ತಟಸ್ಥಭಾವದಿ
ಸಕಲಕು ವಿತರಿಸುವುದು ಪ್ರಕೃತಿ
ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ
ಯುಕುತಿಯೆನಿಸುವುದು ಸ೦ಸ್ಕೃತಿ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator