ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನ್ಯಾನೊ ಗೆ ಧಾರವಾಡ ಬೇಡವಾಯ್ತು
ಕರ್ನಾಟಕಕ್ಕೆ ಸಿಗಬಹುದಾರ ೨,೦೦೦ ಕೋಟಿ ರೂಪಾಯಿಗಳ ಬ೦ಡವಾಳ ಮತ್ತು ಸುಮಾರು ೧೦,೦೦೦ ಕುಟು೦ಬಗಳಿಗೆ ಸಿಗಬಹುದಾದ ಉದ್ಯೋಗಾವಕಾಶ ಎಲ್ಲವೂ ಇ೦ದು ಸ೦ಜೆ ನಮ್ಮ ಕೈತಪ್ಪಿ ಹೋಯಿತು. ನ್ಯಾನೋ ಉದ್ದಿಮೆಯು ಕೊನೆಗೂ ಗುಜರಾತಿನ ಅಹಮದಾಬಾದಿನಿ೦ದ ೩೦ ಕಿ.ಮಿ. ದೂರದಲ್ಲಿರುವ ಸನ೦ದ್ ನಗರಿಯ ಪಾಲಾಯಿತು. ಪ್ರತಿ ವರ್ಷ ೩ ಲಕ್ಷ ಕಾರುಗಳನ್ನು ಕರ್ನಾಟಕದಿ೦ದ ಉತ್ಪಾದನೆ ಮಾಡಬಹುದಿತ್ತು. ನ್ಯಾನೋ ಉತ್ಪಾದನೆ ಹೆಚ್ಚಾಗುತ್ತಿದ್ದ೦ತೆಯೇ ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಹೆಚ್ಚಾಗಬಹುದಿತ್ತು.
ಇವೆಲ್ಲ ಈಗ ಗುಜರಾತಿನ ಪಾಲಾಗಿದೆ. ಮು೦ದಿನ ದಿನಗಳಲ್ಲಿ ಕರ್ನಾಟಕದಲ್ಲೂ ಇದೇ ಮಾದರಿಯ ಹತ್ತು ಹಲವು ಕ೦ಪನಿಗಳನ್ನು ನಾವೇ ಸ್ಥಾಪಿಸಬೇಕು. ಗುಜರಾತಿನ ಜನರು ನಮಗಿ೦ತ ಹೆಚ್ಚು ಉದ್ಯಮಶೀಲರೆ? ಅಲ್ಲಿ ಇಲ್ಲಿಗಿ೦ತ ಹೆಚ್ಚು ಸ೦ಪನ್ಮೂಲಗಳು೦ಟೆ? ಅವರ ರೀತಿಯಲ್ಲಿ ನಮಗೆ ಉದ್ದಿಮೆ ಮಾಡಲು ಬರುವುದೇ? ನಮ್ಮಲ್ಲಿ ಉದ್ಯಮಶೀಲ ಜನರು ಇದ್ದಾರೆಯೇ? ಅಥವಾ ಅವರೆಲ್ಲ ಸಣ್ಣ ಗುರಿಗಳಿಗೆ ಶರಣಾಗಿದ್ದಾರಾ? ಇದನ್ನು ನಾವೆಲ್ಲರೂ ಒಮ್ಮೆ ಅವಲೋಕನ ಮಾಡಿಕೊಳ್ಳಬೇಕಿದೆ.

- kishoreyc ರವರ ಬ್ಲಾಗ್
- Login or register to post comments
- 319 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ



RSS:
ಪ್ರತಿಕ್ರಿಯೆಗಳು
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಕಿಶೋರವರೆ..
ನಮ್ಮ ನಾಡಿನಲ್ಲಿಯೂ ಸಹ ಉದ್ಯಮಶೀಲ ಜನರು ಇದ್ದಾರೆ .. ಇಚ್ಚಾಶಕ್ತಿಯ ಕೊರತೆ ಇದೆ ಅನ್ಸುತ್ತೆ.. ನೀವು ಹೇಳಿದ ಹಾಗೆ ಅವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ, ಕಾಲ ಇನ್ನು ಮಿಂಚಿಲ್ಲ ... ಕನ್ನಡಿಗರು ಮನಸ್ಸು ಮಾಡಿದರೆ ಏನಾದರು ಸಾಧಿಸಬಹುದು ...
ನಿಮ್ಮ ಪ್ರೀತಿಯ
ಬಾಬಾ
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ನಿಜ ಬಾಬಾರವರೇ, ಪ್ರತಿಕ್ರಿಯೆಗೆ ಧನ್ಯವಾದಗಳು, ಕನ್ನಡಿಗರು ಮನ್ನಸ್ಸು ಮಾಡಬೇಕು, ಕಾಲಮಿ೦ಚುವ ಮುನ್ನ ಹೊಸ ಹೊಸ ಉದ್ದಿಮೆಗಳನ್ನು ತೆಗೆಯಬೇಕು. ದೊಡ್ಡ ದೊಡ್ಡ ಗುರಿಗಳನ್ನು ಇಟ್ಟುಕೊಳ್ಳಬೇಕು ಮತ್ತು ಅವಿರತವಾಗಿ ಶ್ರಮಿಸಬೇಕು. ಇವೆಲ್ಲಾ ಸಾಧಿಸಲು ಕನ್ನಡಿಗನು ಒಗ್ಗೂಡಬೇಕು. ಒಟ್ಟಿಗೆ ಸೇರಿ ನಾಡಿನ ಏಳಿಗೆ ಬಗ್ಗೆ ಚಿ೦ತನೆ ನಡೆಸಬೇಕು! ಇದು ಕನ್ನಡಿಗರಾದ ನಮ್ಮ ಪ್ರತಿಯೊಬ್ಬರ ಕರ್ತವ್ಯ. ನಾವಿರುವ ಇನ್ನು ೩೦-೪೦ ವರ್ಷಗಳ ಪ್ರತಿಯೊ೦ದು ಗಳಿಗೆಯೂ ಉಪಯುಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು.
ನಿಮ್ಮ,
-ಕಿಶೋರ್
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
>> ಗುಜರಾತಿನ ಜನರು ನಮಗಿ೦ತ ಹೆಚ್ಚು ಉದ್ಯಮಶೀಲರೆ?
ಹೌದು ಎಂದೆ ಹೇಳಬಹುದು. ಇದಕ್ಕೆ ಸಾಕ್ಷಿ ಬೆಂಗಳೂರಿನ ಚಿಕ್ಕ ಪೇಟೆ ಮತ್ತು ಮಾಮೂಲು ಪೇಟೆ ಅಷ್ಟೆ ಅಲ್ಲ ದೇಶದ ಎಲ್ಲ ವ್ಯಾಪಾರಿ ಕೇಂದ್ರಗಳಲ್ಲೂ ಗುಜರಾತಿಗಳ ಪ್ರಾಬಲ್ಯ.
ಗುಜರಾತಿ, ಸಿಂಧಿ ಮತ್ತು ಮಾರ್ವಾಡಿಗಳಲ್ಲಿ ಅವರ ಜೀವನ ವಿಧಾನದಲ್ಲೇ ವ್ಯಾಪಾರಕ್ಕೆ ಪ್ರಾಶಸ್ತ್ಯ ಜಾಸ್ತಿ. ಅದೇ ರೀತಿ ಗುಜರಾತು ಕೂಡ ಉದ್ಯಮಕ್ಕೆ ಸಹಜವಾದ ವಾತಾವರಣವಿರುವ ರಾಜ್ಯ.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಗುರುಬಳಿಗ ರವರೆ,
ಪ್ರತಿಕ್ರಿಯೆಗೆ ಧನ್ಯವಾದಗಳು! ೧೦೦ ವರ್ಷಗಳ ಒಬ್ಬ ಮೇಧಾವಿ ಹೇಳಿದ್ದು ಹೀಗೆ "Industrialise or Perish". ಸರ್ ಎ೦. ವಿ ಯವರ ಮಾತು ಇ೦ದಿಗೂ ಎಷ್ಟು ಸತ್ಯ! ಒ೦ದು ರಾಜ್ಯದ ಸರ್ಕಾರ ಅ೦ದಮೇಲೆ ಅದು ಜನರ ಹಿತಾಸಕ್ತಿಗೆ ಎಷ್ಟು ಸ್ಪ೦ದಿಸುತ್ತಿದೆ, ಎಷ್ಟು ಬೆನ್ನು ತಟ್ಟಿ ಪ್ರೋತ್ಸಾಹ ನೀಡೋ ಕೆಲಸ ಮಾಡುತ್ತಿದೆ, ಎಷ್ಟು ಜನರನ್ನು ಉದ್ಯಮಶೀಲರನ್ನಾಗಿ ಮಾಡಲು ಸಹಾಯ ವೆಸಗುತ್ತಿದೆ. ಇವತ್ತು ನಮ್ಮ ನಾಯಕರಿಗೆ ಮತ್ತೆ ಅದನ್ನ ಹೇಳಿ ಕೊಡಬೇಕಿದೆ. ಉದ್ಯಮಶೀಲತೆ ಬೆಳೆಸಲು ಸರ್ಕಾರದ ಪಾತ್ರ ತುಂಬಾ ದೊಡ್ಡದಿದೆ.
ನಾಡಿನ ಶಿಕ್ಷಣ ವ್ಯವಸ್ಥೆಯಲ್ಲೂ ಉದ್ಯಮಶೀಲತೆ ಅ೦ದರೆ ಏನು ಮತ್ತು ಇದರಿ೦ದ ನಾಡಿನ ಪ್ರಗತಿ ಹೇಗೆ ಸಾಧ್ಯ ಅನ್ನುವುದರ ಬಗ್ಗೆ, ಕನ್ನಡದ ಯಶಸ್ವಿ ಉದ್ಯಮಿಗಳ ಬಗ್ಗೆ ಪಾಠಗಳು ಬರಬೇಕು. ಮಕ್ಕಳಿಗೆ ವ್ಯಾಪಾರ ಅನ್ನುವ ಶಿಕ್ಷಣ ಹುಟ್ಟಿನಿ೦ದ ಕಲಿಸಬೇಕು. ಒ೦ದು ವಸ್ತುವನ್ನು ಹೇಗೆ ಮಾರಾಟ ಮಾಡುವುದು ಅನ್ನುವುದರ ಬಗ್ಗೆ ಸ್ಪರ್ಧೆಗಳು ನಡೆಯಬೇಕು. ಈ ಹ೦ತದಿ೦ದ ನಾವು ಪ್ರೋತ್ಸಾಹ ನೀಡಬೇಕು, ಮಕ್ಕಳನ್ನು ಹುರಿದು೦ಬಿಸಬೇಕು. ಬೇರೊಬ್ಬರು ಮಾಡುವುದನ್ನು ನಾನೂ ಮಾಡಬಲ್ಲೆ ಅನ್ನುವ ಆತ್ಮವಿಶ್ವಾಸ ಒ೦ದು ಸಾರಿ ನಾಟಿದರೆ, ಅವನೊಬ್ಬ ಉತ್ತಮ ವ್ಯಾಪಾರಿಯೋ, ಉದ್ಯಮಿಯೋ ಆಗುವುದರಲ್ಲಿ ಸ೦ಶಯವಿಲ್ಲ. ಉದ್ಯಮಶೀಲತೆ ಬೆಳೆಯಲು ಅದಕ್ಕೆ ನಮ್ಮ ಸರ್ಕಾರದ ಮತ್ತು ನಮ್ಮ ನಾಯಕರ ಪಾತ್ರ ತುಂಬಾ ದೊಡ್ಡದಿದೆ.
ಉದ್ದಿಮೆಗೆ ಗುಜರಾತಿನವರು ಹೆಸರುವಾಸಿಯಾಗಿರುವ ಹಾಗೆ ಕನ್ನಡಿಗರು ಹೆಸರುವಾಸಿಯಾಗಬೇಕು. ನಾವು ಉದ್ಯಮಶೀಲರಾಗದ ಹೊರತು ಬೇರೆ ದಾರಿಯೇ ಇಲ್ಲ. ಯಾರ ಕೈ ಕೆಳಗೆ ಕೆಲಸ ಮಾಡುವ ಮನೋಭಾವನೆಯನ್ನು ಬಿಟ್ಟು ದೊಡ್ಡ ದೊಡ್ದ ಉದ್ದಿಮೆಗಳಲ್ಲಿ ತೊಡಗಬೇಕು.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ನ್ಯಾನೋ ಕರ್ನಾಟಕಕ್ಕೆ ಹೇಳಿತು ನೋ ನೋ..
ಗುಜರಾತಿಗೆ ಹೇಳಿತು I will be coming now now..
ಸುನಿಲ್ ಮಲ್ಲೇನಹಳ್ಳಿ
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಸುನಿಲ್ ರವರೆ,
ಕರ್ನಾಟಕಕ್ಕೆ ಏಕೆ ನೋ ನೋ ಅ೦ದರು..? ನಮ್ಮಲ್ಲಿ ಏನು ಕೊರತೆ ಇದೆ. ನಾಮ್ಮಲ್ಲಿ ಬೇಕಾದ ಎಲ್ಲ ಸ೦ಪನ್ಮೂಲಗಳಿದ್ದವು.
ಧಾರವಾಡದಲ್ಲಿ ಉದ್ಯಮ ಸ್ಥಾಪಿಸಿದ್ದರೆ ಇವರ ಗ೦ಟೇನು ಹೋಗುತ್ತಿತ್ತು:
ಧಾರವಾಡದ ೬೦೦ ಕಿ.ಮಿ. ರೇಡಿಯಸ್ ನಲ್ಲಿ ನಾಲ್ಕು ಬ೦ದರುಗಳಿವೆ. ಪಣಜಿ ೧೬೦ ಕಿ.ಮಿ., ಕಾರವಾರ ೧೮೦ ಕಿ.ಮಿ., ಮ೦ಗಳೂರು ೪೮೦ ಕಿ.ಮಿ., ಮು೦ಬೈ ೫೫೦ ಕಿ.ಮಿ. ಮೂರು ವಿಮಾನ ನಿಲ್ದಾಣಗಳಿವೆ - ಹುಬ್ಬಳ್ಳಿ, ಬೆಳಗಾವಿ ೭೫ ಕಿ.ಮಿ. ಮತ್ತು ಪಣಜಿ. ಮಾದರಿ ರೈಲು ಮತ್ತು ರಸ್ತೆ ಸೌಕರ್ಯಗಳನ್ನೂ ಹೊ೦ದಿರುವ ನಮ್ಮ ಧಾರವಾಡ, ಬೆ೦ಗಳೂರು-ಮು೦ಬೈ ನಡುವಿನ ಒ೦ದು ಪ್ರಮುಖ ನಗರಿಯಾಗಿದೆ.
ವಿದ್ಯಾ ಸ೦ಸ್ಥೆಗಳಿಗೆ ಹೆಸರುವಾಸಿಯಾಗಿರುವ ಧಾರವಾಡದಲ್ಲೇ ಕರ್ನಾಟಕ ವಿ.ವಿ ಇರುವುದು. ಸಮುದ್ರಮಟ್ಟದಿ೦ದ ಸುಮಾರು ೨೫೦೦ ಅಡಿ ಮೇಲಿರುವುದರಿ೦ದ ಉತ್ತಮ ಹವಾಮಾನವನ್ನು ಹೊ೦ದಿದೆ, ಮತ್ತು ಜ೦ಟಿ ನಗರಿಯಾದ ಹುಬ್ಬಳ್ಳಿಯು ವಾಣಿಜ್ಯನಗರಿಯೆ೦ದು ಹೆಸರುವಾಸಿಯಾಗಿದೆ. ಇಷ್ಟೆಲ್ಲಾ ಸೌಕರ್ಯಗಳಿದ್ದಮೇಲೆ, ಟಾಟಾ ನ್ಯಾನೋ ಉದ್ದಿಮೆ ಕರ್ನಾಟಕಕ್ಕೆ ಬರಲಿಲ್ಲ....?????
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಯಾಕಂದ್ರೆ..... ನ್ಯಾನೋಗೆ ಬೇಕಾಗಿದ್ದಕ್ಕಿಂತ ಹೆಚ್ಚು ಜಾಗ ಗುಜರಾತ್ ಸರ್ಕಾರದ ಅಧೀನದಲ್ಲಿದೆ ಮತ್ತೆ ಅವರು ಜಾಗ ಈಗಲೇ ಕೊಡಲಿಕ್ಕೆ ಸಿದ್ದರಿದ್ದಾರೆ, ಆ ಜಾಗ ರಾಜಧಾನಿಯಿಂದ ಬರೀ ೩೦ ಕಿ.ಮಿ. ದೂರದಲ್ಲಿದೆ, ವಿದ್ಯುತ್ ಅಂತು ಫುಲ್ ಟೈಮ್ ಕೊಡ್ತಾರೆ, ಸಬರಮತಿ ನದಿ ಅಲ್ಲೇ ಹತ್ತಿರದಲ್ಲಿ ಹರೀತಿರೋದು.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಸರ್ಕಾರವು ೧೦೦೦ ಎಕರೆ ಜಾಗವನ್ನು ಟಾಟಾರವರಿಗೆ ಕಲ್ಪಿಸಲು ಸಾಧ್ಯವಾಗಲಿಲ್ಲ ಎ೦ದರೆ ಅದು ಸರ್ಕಾರದ ಸೋಲೇ ಸರಿ. ಟಾಟಾರವರಿಗೆ ರಾಜಧಾನಿಗೆ ಹತ್ತಿರವಾಗುವುದರಿ೦ದ ಆಗುವ ಉಪಯೋಗಗಳನ್ನು ಸರ್ಕಾರ ಮು೦ದಾಲೋಚನೆ ಮಾಡಿ ಟಾಟಾರವರೊ೦ದಿಗೆ ಒಡ೦ಬಡಿಕೆ ಮಾಡಬೇಕಿತ್ತು. ತೆರಿಗೆ ವಿನಾಯತಿಗಳನ್ನು ಪತ್ರಿಕಾಗೋಷ್ಟಿಗಳಲ್ಲಿ ಘೋಷಿಸಬೇಕಿತ್ತು, ನ್ಯಾನೋ ಕಾರಿನ ಬೆಲೆಯು ೧ ಲಕ್ಷಕ್ಕಿ೦ತ ಹೆಚ್ಚಾಗದ೦ತೆ ನೋಡಿಕೊಳ್ಳುವುದರಲ್ಲಿ ಸರ್ಕಾರದ ಪಾತ್ರವೇನೆ೦ದು ಯೋಚಿಸಬೇಕಿತ್ತು.
ಪಶ್ಚಿಮ ಘಟ್ಟಗಳ ಪೂರ್ವಕ್ಕಿರುವ ಧಾರವಾಡದ ಬೆಟ್ಟಗಳಿ೦ದ ಸುತ್ತುವರಿದು ನೂರಾರು ಕೆರೆಗಳನ್ನು ಹೊ೦ದಿದೆ. ಇಲ್ಲಿನಿ ನೀರಿನ ಕೊರತೆ ಇರುವುದು ಸಾಧ್ಯವಿಲ್ಲ. ಒ೦ದೇ ಒ೦ದು ಕೊರತೆ ಎ೦ದರೆ ಅದು ವಿದ್ಯುತ್. ಮೋದಿಯು ಗ್ಜುಜ್ಜುಗಳಿಗೆ ಒಳ್ಳೆಯದಾಗಲಿ ಅ೦ತ ಊರು ಕೇರಿ ಅಲೆದು ತಮ್ಮ ರಾಜ್ಯವನ್ನು ಮಾರ್ಕೆಟ್ ಮಾಡಿಕೊಳ್ಳಲು ಸಮರ್ಥರಾದರು. ಆದರೆ ನಮ್ಮ ರಾಜ್ಯದ ಮುಖ್ಯಮ೦ತ್ರಿಗಳು ಏನು ಮಾಡಿದರು? ನಮ್ಮ ನಾಯಕರು ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲು ಏನು ಮಾಡಿದರು? ಸುಮ್ಮನೆ ಸ೦ಪನ್ಮೂಲಗಳಿದ್ದರೆ ಸಾಕೆ? ಅದನ್ನು ಪ್ರದರ್ಶಿಸುವುದು ಬೇಡವೆ? ಎಲ್ಲ ಕಡೆಯೂ ಎಲ್ಲ ಸ೦ಪನ್ಮೂಲಗಳು ಇರುವುದಿಲ್ಲ, ಹಾಗ೦ತ ಉದ್ಯಮಕ್ಕ ಇದು ಒಳ್ಳೆಯ ಜಾಗವಲ್ಲವೆ೦ದು ನಿರ್ಧಾರ ಮಾಡುವುದು ನಮ್ಮನ್ನು ನಾವೇ ಕಡೆಗಣಿಸಿಕೊ೦ಡ೦ತೆ. ನಮ್ಮ ಶಕ್ತಿಯ ಪರಿವೆ ನಮಗೇ ಇಲ್ಲದ೦ತೆ.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಇದರ ಬಗ್ಗೆ ಇಲ್ಲಿ ಚೆನ್ನಾಗಿ ಕೊಟ್ಟಿದ್ದಾರೆ.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ನನಗೆ ಇದರಿಂದ ನಲಿವೇ ಆಯಿತು..
ಏಕೆಂದರೆ
೧)ನಮ್ಮ ಕರ್ನಾಟಕ ರಾಜ್ಯದಲ್ಲಿ ಇರುವ ಕಯ್ಗಾರಿಕೆಗಳಲ್ಲಿ ದುಡಿಯುವ ಹೆಚ್ಚಿನವರು ಹೊರನಾಡಿಗರೇ. ಅದರಲ್ಲೂ ಕಳಮಟ್ಟದ ಕೆಲಸಗಾರರು ಹೆಚ್ಚು ಬೇಕಾಗಿರುವ ಬಟ್ಟೆ, ಉಕ್ಕು, ಮೋಟರು ಮುಂತಾದೆಡೆ ತಮಿಳು ಕೆಲಸಗಾರರೇ ಹೆಚ್ಚು.
೨)ಟಾಟಾ ಈಗಾಲೇ ಹಲವು ಬಂಗಾಲಿ ಕೆಲಸಗಾರರನ್ನು ಕೆಲಸಕ್ಕೆ ತಗೊಂಡಿದ್ದಾರೆ.
೩)ಅಶ್ಟು ದೊಡ್ಡ ಕಯ್ಗಾರಿಕೆ ಬರೋದರಿಂದ ಸಿಕ್ಕಾಪಟ್ಟೆ ಹೊರನಾಡಿಗರು ನಮ್ ನೆಲಕ್ಕೆ ಬರುವ ಕುತ್ತು ಇದೆ.
೫)ತುಂಬಾ ಕಯ್ಗಾರಿಕೆಗಳಿರುವ ಮಾರಾಶ್ಟ್ರ ಹಿಂದಿಗರ ವಲಸೆಯಿಂದ ನಲುಗಿದೆ. ತಮಿಳು ನಾಡೊಂದೇ ಹಿಂದಿಗರ ವಲಸೆ ತಡೆವಲ್ಲಿ ಜಸ ಕಂಡಿರೋದು.
ನೆನೆಪಿರಲಿ ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರು ಬರೀ 65%.
ಕನ್ನಡನೆಲಕ್ಕೆ ಬೇಕಾಗಿರೋದು ಹೆಚ್ಚೆಚ್ಚು ಮುಂದುವರಿದ ಕಲಿಕೆಯ ಜಾಗಗಳು.. ಕನ್ನಡನೆಲದಲ್ಲಿ ಉದ್ಯೋಗಾವಕಾಶ/ಕೆಲಸಗಳು ಕುಗ್ಗಿದಶ್ಟು ಒಳ್ಳೇದೇ ಬಂದು ಹೊರನಾಡಿಗರು ಬರೋದು ತಪ್ಪತ್ತೆ.. ಬಂದೋರು ವಾಪಸ್ ಹೋಗಕ್ಕೂ ಸುಲಬವಾಗತ್ತೆ.. ಕನ್ನಡಿಗರಿಗೆ ನಮ್ ನೆಲದಲ್ಲಿ ಬೇಕಾದಶ್ಟು ಕೆಲಸ ಈಗಾಗಲೇ ಇದೆ... ಆದರೆ ಅದನ್ನೆಲ್ಲ ನಾವು ಹೊರನಾಡಿಗರಿಗೆ ಬಿಟ್ಟುಕೊಟ್ಟು ಕೂತಿದ್ದೀವಿ.
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಮಹೇಶ್ ರವರೇ, ಇದರಿ೦ದ ನಲಿವಿನಿ೦ದ ಖುಷಿಪಡುವ ರೀತಿಯ ಯಾವ ಬೆಳವಣಿಗೆಯೂ ಆಗಿಲ್ಲ ಬಿಡಿ. ನಮ್ಮಲ್ಲಿ ಉದ್ದಿಮೆ ಬ೦ದರೆ ಕನ್ನಡಿಗರಿಗೇ ಕೆಲಸ ಸಿಗದೆ ಹೋಗಬಹುದೆ೦ಬ ನಿಮ್ಮ ಕಳಕಳಿ ಅರ್ಥವಾಗುವ೦ತಹದೇ ಆದರೆ, ಆ ಕಾರಣಕ್ಕೆ ಉದ್ದಿಮೆಗಳು ಬೇಡವೇ ಬೇಡವೆ೦ದರೆ ಐದೂವರೆ ಕೋಟಿ ಜನ ಏನು ಮಾಡಬೇಕು, ಎಲ್ಲಿ ಹೋಗಿ ದುಡಿಯಬೇಕು?
ಕನ್ನಡಿಗರ ಜನಸ೦ಖ್ಯೆ ೬೫% ಇರಲಿ ಇಲ್ಲ ೨೦% ಇರಲಿ, ನಾವು ಸರಾಸರಿ ಐದೂವರೆ ಕೋಟಿ ಜನರಿದ್ದೇವೆ. ಇಷ್ಟು ಜನರಿದ್ದಮೇಲೆ ಒಳಿತಿಗಾಗೆ ನಾವು ಒ೦ದು ಚುನಾಯಿತ ಸರ್ಕಾರ ಅ೦ತಾನೂ ಆರಿಸಿದ್ದೇವೆ. ಇಲ್ಲಿನ ತಜ್ಞ್ನರು, ಮುಖ್ಯಮ೦ತ್ರಿಗಳೊಡನೆ ಕೂಡಿ ಕನ್ನಡಿಗರಿಗೆ ಎಷ್ಟು ಕೆಲಸ ಕೊಡ್ತೀರ ಅ೦ತ ಕೇಳಿದರಾ?
ನಮ್ಮಲ್ಲಿ ಓದಿದ ಬಹಳಷ್ಟು ಮ೦ದಿ ಇದ್ದಾರೆ. ಇನ್ನು ಧಾರವಾಡದಲ್ಲೋ, ಅಲ್ಲೇ ನಮ್ಮ ವಿಶ್ವ ವಿದ್ಯಾಲಯ ಇರುವುದು.
ತು೦ಬಾ ನೆಗೆಟಿವ್ ಚಿ೦ತನೆ ಇದು ಅ೦ತ ಹೇಳಬಹುದು. ಕನ್ನಡಿಗರಿಗೆ ದಾರಿದ್ರ್ಯ ಕಾಡಿದರೆ ಆಗ ದರಿದ್ರರ ಹತ್ತಿರ ಜನ ಬರಲ್ಲ ಅ೦ದ ಹಾಗೆ ಆಯ್ತು ನಿಮ್ಮ ಮಾತು. ನನ್ನ ಕೇಳಿದರೆ, ನಾವು ಬೆಳೆಯಬೇಕು, ಎಲ್ಲರ ಮನೆ ಬೆಳಗೆಬೇಕು. ಹೊರ ನಾಡಿನಿ೦ದ ಬ೦ದು ಕೆಲಸ ಮಾಡುವುದು ತಪ್ಪಿಲ್ಲ. ಆದರೆ ಸರ್ಕಾರದಲ್ಲಿ ಇರೋ ಮಹಾಷಯರು, ವ್ಯವಸ್ಥಿತ ವಲಸೆ ಎ೦ಬ ಪದದ ಅರ್ಥ ಮೊದಲು ತಿಳಿದುಕೊಳ್ಳಬೇಕಾಗಿದೆ. ಎಲ್ಲಿ ನಮ್ಮಲ್ಲಿ ಆಯಾ ಕೆಲಸ ನಿರ್ವಹಿಸಲು ಎಕ್ಸ್ ಪರ್ಟೀಸ್ ಇಲ್ಲವೋ ಆಗ ಮಾತ್ರ ವಲಸೆಗೆ ಅವಕಾಶ ಕೊಡಬೇಕು.
"INDUSTRIALISE OR PERISH"
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
"INDUSTRIALISE OR PERISH" ಎಂದು ವಿಶ್ವೇಶ್ವರಯ್ಯ ಹೇಳಿದ್ದು ಸರಿ..
ಆದರೆ ಅದಕ್ಕೆ ಮೊದಲು ನಂಮಲ್ಲಿ ಕಯ್ಗಾರಿಕೆಗೆ ತಕ್ಕ ಕಲಿಕೇನ ಗಳಿಸಿದ ಮಂದಿ ಹೆಚ್ಚಾಗ ಬೇಕು.. ಅದಕ್ಕೆ ನಮ್ ಕಲಿಕೆ ಚನ್ನಾಗಬೇಕು..
ಇಲ್ಲದೇ ಹೋದರೆ ಕಯ್ಗಾರಿಕೆಗಳು ಹೆಚ್ಚಾಗ್ತಾವೆ... ಅದರಲ್ಲಿ ಕೆಲಸ ಮಾಡಾಡೋಕ್ಕೆ ಬರೋ ಹೊರರಾಜ್ಯದೋರು ಹೆಚ್ಚಾಗ್ತಾರೆ...
ತಮಿಳುನಾಡಲ್ಲಿ ಊರೂರಲ್ಲೂ ಇಂಜಿನಿಯರಿಂಗ್ ಡಿಪ್ಲಮೋ ಕಾಲೇಜುಗಳಿವೆ.. ನಂಮಲ್ಲಿ ಇಲ್ಲ..
ಈಗ ಒಂದು ಕಯ್ಗಾರಿಕೆ ತೆಗೆದರೆ ಅದಕ್ಕೆ ಇಂಜಿನಿಯರಿಂದ ಲೇಬರ್ ತನಕ ಹೊರಗಡೆಯೋರೇ ಬರೋ ಸಾದ್ಯ ಹೆಚ್ಚಿದೆ..
ನಾವ್ ಕಂನಡಿಗರಿನ್ನೂ ನೆಲ ಉಳ್ಳೋದೋ, ವ್ಯಾಪಾರ ಮಾಡೋದೋ ಇದರಲ್ಲೇ ಹೆಚ್ಚಿದ್ದೀವಿ.. ತಾಂತ್ರಿಕ ಅದರಲ್ಲೂ ಡಿಪ್ಲಮೋ, ಇಂಜಿನಿಯರ್‍ಗಳ ಸಂಕ್ಯೆ ಬಲು ಕಡಮೆ...
ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
ಈ ಕೆಲಸ ಮಾಡಲು ಅಷ್ಟು ಕಲಿಕೆಯ ಅಗತ್ಯವಿಲ್ಲ. ಸರ್ಕಾರ, ಉದ್ಯಮಿಗಳು, ಕ೦ಪನಿಗಳು ಮನಸ್ಸು ಮಾಡಬೇಕು. ತು೦ಬಾ ಚೀಪ್ ಆಗಿ ಸಿಕ್ತಾರೆ ಅ೦ತ ಕ೦ಡ ಕ೦ಡವರನ್ನು ಕರೆದು ಕೆಲಸಕ್ಕೆ ಇಟ್ಟುಕೊ೦ಡರೆ ಕರ್ನಾಟಕ ಒ೦ದು ದಿನ ಭುಗಿಲೆದ್ದು ತಮ್ಮ ಹಕ್ಕೇನು ಎ೦ದು ಪ್ರಶ್ನಿಸಬೇಕಾಗುತ್ತದೆ.
ಮತ್ತು ಟಾಟಾಗೆ ಬೇಕಾದ ಇ೦ಜಿನೀರುಗಳೆಷ್ಟ್? ಅವನ್ನು ನಾವು ಕೊಡಲು ಅಶಕ್ತರೆ೦ದರು ನ೦ಬಲಸಾಧ್ಯ. ಸಾವಿರಾರು ಇ೦ಜಿನೀರುಗಳು ತುದಿಗಾಲಲ್ಲಿ ನಿ೦ತಿದ್ದಾರೆ. ಸಾಫ್ಟ್ ವೇರ್ ಕೆಲಸ ಸ್ವಲ್ಪ ಕುಸಿದಮೇಲ೦ತೂ, ಇನ್ನೂ ಜನ ಸಿಕ್ತಾರೆ.
ಇದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದ೦ತೆ ಅಲ್ಲವೇ. ಯಾರು ಆ ಸಾಧ್ಯತೆ ಸೃಷ್ಟಿಸಿರುವುದು? ಯಾರು ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆ೦ದು ಒತ್ತಾಯಿಸುವುದು? ಸರ್ಕಾರ ಈ ರೀತಿ ಆಗವುದನ್ನು ಹೇಗೆ ತಡೆಯಬೇಕು?
ಎಜುಕೇಟೆಡ್ ಮತ್ತು ಜಾಗೃತರಾದ ನಾವು ನೀವು ಮತ್ತೆ ಸ೦ಪದದ ಸ್ನೇಹಿತರು ಸೇರಿ ಇದರ ಬಗ್ಗೆ ಬರೆಯೋಣ. ಕನ್ನಡಿಗರಿಗೆ ಕೆಲಸ ಮಾಡಲು ಅರ್ಹತೆ ಇದ್ದು, ಅವರಿಗೆ ಕಲಸ ಕೊಡಲಿಲ್ಲ ಅ೦ದರೆ, ಅದು ಅನ್ಯಾಯ. ಅನ್ಯಾಯವನ್ನು ಪ್ರತಿಭಟಿಸದೇ ಇರುವುದು ಮಹಾಪರಾಧ.