ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಸದಾ ಸುದ್ದಿಯಲ್ಲಿರಲು ಬಯುಸುವ "ಬುದ್ಧಿಜೀವಿ" ಅರುಂಧತಿ ರಾಯ್ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಹೇಳಿಕೆ ಹೀಗಿದೆ.
“And if no one is listening then it is because they don"t want to hear. Because this is a referendum. People don"t need anyone to represent them; they are representing themselves. As somebody who has followed people"s movements and who has been in rallies and at the heart or the edge of things, I don"t think you can dispute what you see here,”
“since the 1930s, there have been debates and disputes about who has the right to represent the Kashmiri people, whether it was Hari Singh or Sheikh Abdullah or someone else. And the debate continues till today whether it is the Hurriyat or some other party.”
“But I think today the people have represented themselves.”
“India needs azadi from Kashmir as much as Kashmir needs azadi from India.”
ಯಾವುದೋ ರಾಷ್ಟ್ರದ್ರೋಹಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅವರನ್ನು ವಹಿಸಿಕೊಳ್ಳುತ್ತಿರುವ ಇಂತಹವರನ್ನು ದೇಶದ್ರೋಹಕ್ಕಾಗಿ ಶಿಕ್ಷಿಸಬೇಕು. ಬೇಜವಾಬ್ದಾರಿ ಹೇಳಿಕೆಗಳಿಗೆ ಒಂದು ಮಿತಿಯಿರಬೇಡವೇ?

- keerthi2kiran ರವರ ಬ್ಲಾಗ್
- Login or register to post comments
- 581 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅರುಂದತಿ ರಾಯ್ ಹೇಳಿದ್ದು ಸರಿಯಾಗೇ ಇದೆ..
ಅವರು ಕಾಶ್ಮಿರಿಗ ಮಾತು "ಕೇಳಿಸಿಕೊಳ್ಳಿ" ಎಂದು ಹೇಳುತ್ತಿದ್ದಾರೆ.. ಅವರ ಮಾತನ್ನು ಕೇಳಿಸಿಕೊಳ್ಳಲು ತಯಾರಿಲ್ಲವೇ?
ಕಾಶ್ಮಿರಕ್ಕೆ ಸೊತಂತ್ರಬೇಕೋ ಬೇಡವೋ ಅದನ್ನ ಹೇಳಬೇಕಾದುದು ಕಾಶ್ಮಿರದವರು.!!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಆದ್ರೆ ಅವರಿಗೆ ಮಾತಾಡಕ್ಕೆ ಬಿಡ್ತಾನೇ ಇಲ್ವಲ್ಲ. ಇವರೇ ಹೇಳ್ತಿದಾರಲ್ಲ ಅವರಿಗೆ ಬೇಕಾಗಿರೋದು ಇದೇ ಅಂತ. ಅವರು ನಮಗೆ ಬೇಕಾಗಿರೋದು ಊಟ, ಬಟ್ಟೆ, ಶಾಂತಿ ಅಂದ್ರೆ ಕೊಡಕ್ಕೆ ಯಾರಾದ್ರು ರೆಡಿ ಇದಾರಾ?
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಮೊದಲು ರೆಪೆರೆಡಂ ಮಾಡಿ.. ಕತೆ ಮುಗಿಸಲಿ...
ಆಮೇಲೆ ಏನಾರ ಆಗಲಿ..
ಸುಮ್ನೆ ನಮ್ ದೇಶಕ್ಕೆ ಇದೊಂದು ಎಂದೂ ನಿಲ್ಲದ ಗೊಡವೆ.!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ರೆಪೆರೆಡಂಮ್ಮೂ!!!! ಪಾಕಿಗಳು ಮತ್ತು ಅವರ ಕಡೆಯವರೇ ಆದ ಬ೦ಡುಕೋರರು ಬ೦ದೂಕನ್ನು ಹಿಡಕೊ೦ಡು ಕಾಶ್ಮೀರದೌರ್ನ ಹೆದರಿಸಿ-ಬೆದರ್ಸಿ, ಕೊ೦ದು-ಗಿ೦ದು ಅವರ ಅನುಕೂಲಕ್ಕೆ ಮಾಡ್ಸ್ತಾರೆ ರೆಪೆರೆಡಂನ? ಮೊದಲೇ ಕಾಶ್ಮೀರದ ಮೂರ್ನೇ ಒ೦ದ್ಭಾಗ ಮಡಿಕೊ೦ಡವ್ರೆ. ಅದರ ಮದ್ಯೆ ಸ೦ಯುಕ್ತ ರಾಶ್ಟ್ರಗಳ ಸೆಕೆರೆಟ್ರಿ ಜೆನೆರಲ್ಲು ಆದ ಬನ್ಕಿ ಮೂನು ಹೇಳೌನಲ್ಲಾ ನಾನ್ ಬೇಕಾದ್ರೆ ಬ೦ದು ಮದ್ಯೆ ಬ೦ದು ಪಿ೦ಡ ಇಡ್ತೀನಿ ಅ೦ತ. ನಮ್ಮವು(ಕೇ೦ದ್ರ ಸರ್ಕಾರ) ಮಿಕ ಮಿಕ ಅ೦ತ ನೋಡ್ತಾ ಇರ್ತವೆ. ಗೇಮ್ಸ್ ಓವರ್ ಫೋಕ್ಸ್!! ಆಗ ನಮದೇಸವರು ಮಣ್ಣ್ ತಿನ್ನ್ಬೇಕಾಗುತ್ತೆ.
ಈ ಅರುಂಧತಿ ರಾಯ್ಗೆ ಬೇರೆ ನೆಟ್ಟಗಿಲ್ಲ. ಆವಾಗ್ವಾಗ ಲೂಜಾಯಾತ ಇರ್ತದೆ. ಪುಣ್ಯ ಏನಪಾ೦ದ್ರೆ ಈ ವಿಸ್ಯದಲ್ಲಿ ಇವಳು ನರೇ೦ದ್ರ ಮೋದಿ ಹೆಸರೆತ್ಲಿಲ್ಲ. ಯಾರಿಗೊತ್ತು ಮು೦ದೆ ಎತ್ತಿದ್ರೂ ಎತ್ತ್ಬೋದು.... ಇರಲಿ. ಈಕೆ ಇದ್ದ್ಯಾಕ್ ಉಸಾಬರಿ. ಹೇಗೂ ಸಖತಾಗ್ ದುಡ್ಡೈತೆ ಪುಸ್ಕ ಬರ್ದು ಬರ್ದು. ಮಜಮಾಡ್ಕೊ೦ಡ್, ತಿನ್ಕೊ೦ಡು ಸೌದಿಲೋ ಪಾಕಿಸ್ತಾನ್ದಲೋ, ಸಿರಿಯಾನೋ... ಇನ್ನ್ನೂ ಲಿಸ್ಟೂ ಉದ್ದಾ ಐತೆ.(ಹೆ೦ಗಿದ್ರೂ ಸ೦ಗ್ದೋರಲ್ಲ್ವಾ-- ಇನ್ಗೆಲ್ಲಾ ಮಾತಾಡಿದ್ರೆ ತಾನೇ ತಾನೊಬ್ಬಳು ದೊಡ್ದ ಸೆಕುಲರಿಸ್ಟ್ ಅ೦ತ ಗುರ್ತು ಹಿಡಿಬೋದು) ಓಗಿ ಸುಮ್ಕಿರ್ ಬಾರ್ದಾ!! ಎಲ್ಲ್ ಕೆರಿತಾ ಇರತ್ತೋ ಕಾಣೆ.......... ಇಡಿಯಟ್ಗೇ!!!! X-(
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಸ್ವಲ್ಪ ಸಮಾಧಾನ ಮಾಡ್ಕೊಳಿ ಸಾರ್...
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಈ ಬುದ್ಧಿಜೀವಿಗಳ ಇಬ್ಬಂದಿತನವನ್ನ ನೋಡಿ ಜಿಗುಪ್ಸೆ ಬರುತ್ತದೆ. ‘ಮುಸ್ಲಿಂ’ ಎಂಬ ಹಣೆ ಪಟ್ಟಿ ಹೊಂದಿರುವ ಯಾವ ಸಂಗತಿಯ ಬಗ್ಗೆ ಬೇಕಾದರೂ ಇವರು ವಿಶ್ವ ಮಾನವರ ಹಾಗೆ ಯೋಚಿಸಬಹುದು! ಕ್ರಾಂತಿಕಾರಿ ಚಿಂತನೆಗಳನ್ನು ನೀಡಬಹುದು.
ಒಂದು ಉದಾಹರಣೆ ಗಮನಿಸಿ. ನಾವು ಅಲ್ಪಸಂಖ್ಯಾತರು ಒಂದು ರಾಜ್ಯದಲ್ಲಿದ್ದೇವೆ. ಬಹುಸಂಖ್ಯಾತರಾದ ನಮ್ಮ ಧರ್ಮೀಯರು ಬೇರೆ ದೇಶದಿಂದ ನಮಗೆ ಕುಮ್ಮಕ್ಕು ಕೊಡುತ್ತಾರೆ. ನಾವು ಇಲ್ಲಿನ ಎಲ್ಲಾ ಅನ್ಯಧರ್ಮೀಯರನ್ನು ಬಲವಂತವಾಗಿ ಹೊರಗೋಡಿಸುತ್ತೇವೆ. ಅನಂತರ ಇಲ್ಲಿ ನಮ್ಮ ಪ್ರತಿನಿಧಿ ನಾವೇ ಎನ್ನುತ್ತೇವೆ. ನಮಗೆ ಸ್ವಾತಂತ್ರ್ಯ ಬೇಕೋ ಬೇಡವೋ ಎನ್ನುವುದು ಇಲ್ಲಿ ಬಹುಸಂಖ್ಯಾತರಾದ ನಮ್ಮ ಅಭಿಪ್ರಾಯದ ಮೇಲೆಯೇ ನಿಂತಿರುತ್ತದೆ. ಎಷ್ಟು ಸಿಂಪಲ್ ಅಲ್ಲವಾ?
ಈಗ ಹೇಳಿ, ಬಹುಸಂಖ್ಯಾತ ಭಾರತದ ಹಿಂದೂಗಳಿಗೂ, ಕಾಶ್ಮೀರದ ಬಹುಸಂಖ್ಯಾತ ಮುಸ್ಲೀಮರಿಗೂ ಈ ಬುದ್ಧಿಜೀವಿಗಳು ಯಾವ ರೀತಿಯ ತಾರತಮ್ಯ ಮಾಡುತ್ತಾರೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಈ ಲಾಜಿಕ್ಕನ್ನು ನಾನು ಪೂರ ಒಪ್ಪುತ್ತೇನೆ...!
ಆದರೆ ಕಾಶ್ಮಿರಕ್ಕೆ ನಮ್ಮ ಸಂವಿದಾನದಡಿ ವಿಶೇಶ ಅನುವು ಕೊಟ್ಟಿದ್ದೇ ಇದಕ್ಕೆ ಕಾರಣ.. ಈಗಲಾದರು ಅದನ್ನ ಹಿಂಪಡೆಯಲಿ..
ಆದರೆ ಇಂದು ಅದಕ್ಕೆ ಕಾಲ ಮಿಂಚಿ ಹೋಗಿರ ಸ್ತಿತಿ ಇದೆಯಲ್ಲ.. ಕಾಶ್ಮಿರದ ತಗಾದೆಗೆ ನಾಳೆ ಚೀಣಾ ಮೂಗು ತೂರಿಸುವ ಮುನ್ನ ಕಾಶ್ಮಿರಿಗರನ್ನು ಒಲಿಸಿಕೊಳ್ಳಬೇಕು ಹೊರತು ಅದುಮಬಾರದು.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಹೇಗೆ ಒಲಿಸಿಕೋ ಬೇಕು ಸ್ವಲ್ಪ ಹೇಳ್ತೀರಾ?
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಹೇಗೆ ಒಲಿಸಬೇಕು ಅನ್ನೋದನ್ನ ನಮ್ ಕೇಂದ್ರ ರೂಪಿಸಬೇಕು.................
ನಾನು ಹೇಳ್ತಾ ಇರೋದು ಇಶ್ಟೇ.. ಕಾಶ್ಮಿರಿಗರು ಆಗಲೇ UN ಬಾಗಿಲು ತಟ್ತಾ ಇದ್ದಾರೆ... ಇನ್ನೂ ಅವರನ್ನ ಹೆದರಿಸಿ ಅದುಮೋದು ಸರಿಯಲ್ಲ...
ಸಾಮ,ದಾನ,ಬೇದ ಬಳಕ ದಂಡ.. ಮೊದಲ ಮೂರನ್ನು ಬಳಸಬೇಕೀಗ..
ಉ:
ಮೊದಲ ಮೂರನ್ನು ಬಳಸಬೇಕೀಗ.. ..........?
ಇಸ್ಟ್ವರ್ಷ ಮಾಡಿದೇನ್ ಬ೦ತು?? ಕೊನೆದೊ೦ದೇ ಬಾಕಿ ಊಳಿದಿರೋದು!!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ನಿಮಗೆ ಏನ್ಮಾಡ್ಬೇಕು ಅನ್ಸತ್ತೆ ಹೇಳಿ. ಸರ್ಕಾರ ಅಂತೂ ಏನೂ ಮಾಡ್ತಿಲ್ಲ. ಯಾರು ಅವರನ್ನ ಹೆದರಿಸಿ ಅದುಮುತ್ತಿದ್ದಾರೆ ಈಗ? ಹೇಳಿ ನೋಡಣ.
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅವರ ಮಾತನ್ನ ಕೇಳಿಸಿಕೊಳ್ಳಿ..
ರೆಪೆರೆಂಡಮ್ಮನ್ನು ಮಾಡಿರಿ.. ಆಗ.. ಅವರ ಒಳಸಂಗತಿ ತಿಳಿಯತ್ತೆ.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಹೌದು ಈಗಾಗಲೇ ಸಮಸ್ಯೆ ಗಂಭೀರವಾಗಿದೆ. ಕೇಂದ್ರ ಸರಕಾರ ಏನಾದರೊಂದು ನಿರ್ಣಯವನ್ನು ತೆಗೆದುಕೊಳ್ಳಲೇಬೇಕು. ಹಿಂದೆ ಇಂದಿರಾ ಗಾಂಧಿ ತೆಗೆದುಕೊಂಡ ಹಾಗೆ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇಬೇಕು. ಅದರಿಂದ ತಾತ್ಕಾಲಿಕವಾಗಿ ಏನೇ ತೊಂದರೆಗಳು ಆದರೂ ಸಹ ಒಂದು ನಿರಂತರವಾದ ಸಮಸ್ಯೆಯಿಂದ ಪರಿಹಾರ ಸಿಕ್ಕಂತಾಗುತ್ತದೆ. ಆದರೆ ನಮ್ಮ ರಾಜಕೀಯ ಪಕ್ಷಗಳು ಧರ್ಮದ ಲೇಬಲಿನಲ್ಲೇ ಪ್ರತಿ ಪಾಲಿಸಿಗಳನ್ನೂ ರೂಪಿಸುವಾಗ ಇವರಿಂದ ಆ ಬಗೆಯ ಗಟ್ಟಿತನವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಬಹುಶಃ ಅರುಂಧತಿಯ ಮಾತು ಅವರ ಬುದ್ಧಿಜೀವಿ ಟ್ಯಾಗಿಗೆ ಅಂಟಿಕೊಂಡಂತೆ ಕಾಂಪ್ಲೆಕ್ಸ್ ಆಗಿಯೇ ಇದೆ. "India needs azadi from Kashmir" ಅಂದರೆ ಭಾರತಕ್ಕೂ ಕಾಶ್ಮೀರದ ಕಥೆ ಸಾಕೋ ಸಾಕಾಗಿದೆ ಎನ್ನುವರ್ಥದಲ್ಲಿ ಅಂದುಕೊಳ್ಳುತ್ತೇನೆ. ಕಾಶ್ಮೀರಕ್ಕೆ ಇನ್ನು ಆಝಾದಿ ಎಂದರೆ ಹೆಚ್ಚಿನ autonomy ಅಷ್ಟೆ. ಜಮ್ಮು ಬೇರೆ, ಲಧಾಕ್ ಬೇರೆ, ಝೇಲಮೇ ಬೇರೆ ಎಂಬಂತೆ ಪ್ರಾಂತ್ಯಗಳನ್ನ ವಿಂಗಡಿಸಿ ಕಾಶ್ಮಿರಕ್ಕೆ ಹೆಚ್ಚಿನ ಅಟಾನಮಿ ಕೊಡಬಹುದು ಎಂದು ನಡೆಯುತ್ತಿರುವ ಮಾತುಕತೆ ಹೆಚ್ಚು sensible ಅನ್ಸತ್ತೆ.
ಲಭ್ಯವಿರುವ ಮಾಹಿತಿಯಂತೆ ಕಾಶ್ಮೀರದ ಸಂಪೂರ್ಣ ಎಕಾನಮಿ ಭಾರತವನ್ನು ಅವಲಂಬಿಸಿದೆ. ಅವರ ಎಕಾನಮಿ ಸ್ವಾತಂತ್ರ್ಯಾನಂತರ ಭಾರತದಿಂದಾಗಿ ಬಹಳ ಸುಧಾರಿಸಿದೆಯಂತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಕಾಶ್ಮೀರ ಸ್ವತಂತ್ರ ಆದರೆ ಉಗ್ರರ ತಾಣಗಳು ಹೆಚ್ಚಿ ಈಗ POK ಆಗಿರೋ ಹಾಗೆ ಇನ್ನೊಂದು ಅಫಘಾನಿಸ್ತಾನ ಆಗತ್ತೆ. ಉದ್ಧಾರ ಅಂತೂ ಆಗಲ್ಲ.
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಕಾಶ್ಮೀರಕ್ಕೆ ಸ್ವಾಯುತ್ತತೆ ಕೊಟ್ಟರೆ ನಾಳೆ ಪಂಜಾಬ್, ನಾಡಿದ್ದು ಹಿಮಾಚಲ ಪ್ರದೇಶಕೇಳುತ್ತಾರೆ. ಒಂದೊಂದೇ ಪ್ರದೇಶ ಪಾಕಿಸ್ತಾನದ ವಶವಾಗುತ್ತಾ ಹೋಗುತ್ತದೆ. ಆದ್ದರಿಂದ ಇಡೀ ಕಾಶ್ಮೀರವನ್ನು ಲೈನ್ ಆಫ್ ಕಂಟ್ರೋಲ್ ಆಗಿ ಯಥಾಸ್ಥಿತಿ ಕಾಯ್ದುಕೊಳ್ಳುವುದೇ ಉತ್ತಮ.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಟೊನಮಿ ಕೊಟ್ರೆ ಹೆಂಗೆ ಪಾಕಿಸ್ತಾನ ಕಬಳಿಸ್ತದೆ?
ಅಟೊನಮಿಯ ಜೊತೆಗೂ ಅವರು ಇಂಡಿಯದ ಒಂದು ಹೋಳು ಆಗಿರಬೋದು..!!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಆಗಸ್ಟ್ ೧೫ರಂದು ಆಗಲೇ ಅಲ್ಲಿನ ಕೆಲವು ಸ್ಠಳಗಳ ಮೇಲೆ ಪಾಕೀಸ್ತಾನದ ಧ್ವಜ ಹಾರಿಸಿ ’ನಾವು ಪಾಕೀಸ್ತಾನಿಗಳು’ ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತಿದ್ದರು ಎಂದು ವರದಿಯಾಗಿತ್ತು. ಇಶ್ಟೆಲ್ಲಾ ಆದಮೇಲೂ ಆಟೋನಾಮಿ ಕೊಟ್ಟನಂತರ ಅವರು ಎಲ್ಲಿಗೆ ಸೇರುವರು ಎಂಬುದು ತಿಳಿಯದೇ??
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅದು ಅವರ ಇಶ್ಟ!
ನಮಗೆ ದಬ್ಬಾಳಿಕೆ ಮಾಡಿ ಒಂದು ಪ್ರದೇಶವನ್ನು ಆಳಬಾರದು ಎಂಬ ಮನಸ್ಸು ಇದ್ರೆ... ಈ ಮಾತುಗಳು ತಿಳಿಯುತ್ತೆ..
ಇಂಡಿಯದೇಶ ಯಾಕೆ ಬಂಗಾಳದೇಶದ ರಚನೆಗೆ ನೆರವಾಯ್ತು ಹಾಗಾದರೆ?
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಲ್ಲಿ ಮೊದಲಿನಿಂದಲೂ ಇದ್ದ ಕಾಶ್ಮೀರಿ ಪಂಡಿತರು ಮತ್ತಿತರ ಹಿಂದೂಗಳು ಭಾರತದ ಭಾಗವಾಗಬೇಕೆಂದು ಬಯಸಿದ್ದರು. ಅದು ಅವರ ಇಷ್ಟ. ಅವರನ್ನೆಲ್ಲಾ ಅಲ್ಲಿಂದ ಓಡಿಸಿ ತಮ್ಮಿಷ್ಟ ಸಾಧಿಸಿಕೊಳ್ಳುವುದು ಎಷ್ಟು ಸರಿ? ಅಲ್ಲಿದ್ದ ಹಿಂದೂಗಳನ್ನೆಲ್ಲಾ ಓಡಿಸಿದ್ದು ನೋಡಿದರೆ ಯಾರು ಯಾರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ ಎಂದು ತಿಳಿಯುತ್ತದೆ.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
೧೯೪೭ರಲ್ಲೇ ಹಿಂದುಗಳಲ್ಲಿ ಅಲ್ಪಸಂಖ್ಯಾತರು
ಹಿಂದುಗಳನ್ನು ಓಡಿಸಿದರೇ..ಅವರ್ಯಾಕೆ ಓಡಿಬಂದರು? ನಮ್ ಸರಕಾರಗಳೇಕೆ ಆಗ ಸುಮ್ಮನಿದ್ದವು?
ಹಿಂದುಗಳನ್ನು ಓಡಿಸಿದಕ್ಕೆ ಕಾರಣ ಅಲ್ಪಸಂಖ್ಯಾತ ಹಿಂದುಗಳ ಕಿತಾಪತಿಯಿಂದ ಬಹುಸಂಖ್ಯಾತ ಮುಸ್ಲಿಂ ಮಂದಿ ಇರುವ ಕಾಶ್ಮಿರಕ್ಕೆ ಈ ಪಾಡು ಅಂತ ಅವರು ಗೊಣಗ್ತಾರಲ್ಲ..
ಇಲ್ಲಿ ವಿಷಯ ಹಿಂದು vs ಮುಸ್ಲಿಂ ಮಾಡೋದ್ರಲ್ಲಿ ಹಲವು ಚನ್ನಾಗೇ ಯಶ ಕಂಡರು.. ಆದರೆ ಅದಲ್ಲ..!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಹೈದರಾಬಾದ್ ಕರ್ನಾಟಕದ ಎಷ್ಟೋ ಹಳ್ಳಿಗಳಲ್ಲಿ ಇಂದೂ ಹಿಂದುಗಳು ಅಲ್ಪ ಸಂಖ್ಯಾತರು. ಅಲ್ಲಿಯೂ ಆಗಸ್ಟ್ ೧೫ರಂದು ಪಾಕಿಸ್ತಾನದ ದ್ವಜ ಹಾರಿಸಲಾಗುತ್ತದೆ. ಅವರೂ ಪಾಕೀಸ್ತಾನಕ್ಕೆ ಸೇರಬೇಕಂತೆ. ಹಾಗಾದರೆ ಇಂತಹ ಪ್ರದೇಶಗಳನ್ನೆಲ್ಲಾ ಪಾಕಿಸ್ತಾನಕ್ಕೆ ಧಾರೆ ಎರೆದುಬಿಡೋಣವೇ?
ಮೊದಲು ಕಾಶ್ಮೀರ ಪಾಕೀಸ್ತಾನಕ್ಕೆ ಹೇಗೆ ಸೇರುತ್ತದೆ ಎಂದಿರಿ. ಪುರಾವೆ ಕೊಟ್ಟನಂತರ ಅದು ಅವರಿಷ್ಟ ಅಂದಿರಿ. ಈಗ ಹಿಂದುಗಳು ಯಾಕೆ ಓಡಿಬಂದರು ಎನ್ನುತ್ತಿದ್ದೀರಿ. ಮೊದಲು ವಿಶಯವನ್ನು ಕೂಲಂಕುಷವಾಗಿ ತಿಳಿದುಬಂದು ನಂತರ ಚರ್ಚೆಗಿಳಿಯುವುದು ಒಳ್ಳೆಯದು.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಯ್ಯೋ...
ಹಯಿದರಾಬಾದ್ ಕರ್ನಾಟಕದ ಹಳ್ಳಿಗಳ ಮಂದಿ ಹೇಳಲಿ ಆ ಮಾತನ್ನು.. ಆಗ ನಾವು ಕೇಳಿಸಿಕೊಳ್ಳವ ಮನಸ್ಸು ತೋರಣ.
ಈಗ ಕಾಶ್ಮಿರ ಪಾಕಿಸ್ತಾನ ಸೇರುತ್ತದೆ ಎಂದು ಅರುಂದತಿ ರಾಯ್ ಹೇಳಿದ್ದಾ?
ಇದೇ ಹೇಳಿದ್ದು ಅವರು ಮಾತು ಕೇಳಿಸಿಕೊಳ್ಳಲು ತಯಾರಿಲ್ಲ..!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಮಾಧವರೇ, ನಮ್ಮ ಮಾಯ್ಸಣ್ಣ ಹೇಳುವ ಮಾತುಗಳು ಫೆಡರಲ್ ಭಾರತದಲ್ಲಿ ಬದುಕುವುದಕ್ಕೆ ತಕ್ಕನಾದುವಲ್ಲ. ಅದು ಇಡೀ ಮನೆಗೆ ಒಬ್ಬ ಯಜಮಾನ ಕುಳಿತುಕೊಂಡು ‘ಹುಂ, ನಿನಗೆ ಬೇರೆ ಮನೆ ಬೇಕಾ? ಹೇಳು...’ ಅಂತ ಕೇಳುವ ಯಜಮಾನಿಕೆಯದು. ಅವರು ಕೇಳಲಿ ಆಮೇಲೆ ನೋಡಣ ಎನ್ನುವ ಉಡಾಫೆಯ ಧಾಟಿಯಿದೆಯಲ್ಲ, ಅಲ್ಲಿ *ನೋಡುವವರು* ಯಾರು?
ಇನ್ನು ಅಲ್ಪಸಂಖ್ಯಾತ ಹಿಂದುಗಳಿಂದ ಕಿರಿಕಿರಿ... ಸರ್ಕಾರವೇನು ಮಾಡ್ತಿತ್ತು? ಈ ಎಲ್ಲಾ ಪ್ರಶ್ನೆಗಳಿಗೆ ಆಗಿನ ನೆಹರೂ ಸಾಹೇಬ್ರ ಸೆಕ್ಯುಲರಿಸಂ ಕಾರಣ ಎಂದು ಹೇಳಬೇಕಿಲ್ಲ. ಅದರ ಫಲವಾಗಿಯೇ ಇಂದು ನಮ್ಮ ಪೆಕ್ಯುಲಿಯರ್ ಬುದ್ಧಿಜೀವಿಗಳು ಹೆಸರು ಮಾಡುತ್ತಿರುವುದು.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಇದನ್ನು ಒಪ್ಪುವೆನು...
ನಾವು ಹಿಂದಿನಿಂದಲೂ ಪರಿಸ್ತಿತಿಯನ್ನು ಹದಗೆಡಬಿಟ್ಟು ಈ ಕಾಲಮಿಂಚುವ ಹೊತ್ತಿನಲ್ಲು ಗತ್ತಿನಿಂದ ನಡೆಯುವುದು ತರವಲ್ಲ..
ನಯವಾಗಿ.. ಒಲಿಸಿಕೊಳ್ಳಿ.. ಅದಕ್ಕಾಗಿ ಕಾಶ್ಮಿರಿಗರಿಗೆ ಮಾತಾಡುವ, ಅದನ್ನು ಕೇಳಿಸುಕೊಳ್ಳ ಅನುವು ನೀಡಲಿ ಎಂದೇ ಅವರು ಹೇಳಿರೋದು... ಅಶ್ಟು ಮಾಡುಲು ತಯಾರಿಲ್ಲ ಅಂದ್ರೆ ದಬ್ಬಾಳಿಕೆ ಎಂದು ಎದುರು ಬೀಳದೇ ಇರುವರಾ?
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ನಮಗೆ ದಬ್ಬಾಳಿಕೆ ಮಾಡಿ ಒಂದು ಪ್ರದೇಶವನ್ನು ಆಳಬಾರದು ಎಂಬ ಮನಸ್ಸು ಇದ್ರೆ... ಈ ಮಾತುಗಳು ತಿಳಿಯುತ್ತೆ..
ಜಮ್ಮು ಕಾಶ್ಮೀರದಲ್ಲಿ ಹೇಗೆ ದಬ್ಬಾಳಿಕೆ ನಡೀತಿದೆ? ಅಲ್ಲಿ ಚುನಾವಣೆಗಳು ನಡೀತಿಲ್ವಾ? ಅವರ ಸರ್ಕಾರ ಅವರೇ elect ಮಾಡ್ತಿಲ್ವಾ?
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಟೋನಮಿ ಒಳ್ಳೇದಲ್ಲ. ಮಂಗನ ಕೈಗೆ ಮಾಣಿಕ್ಯ ಕೊಟ್ಟಹಾಗಾಗತ್ತೆ. (ಉದಾಹರಣೆಗೆ ನಮ್ಮ ರಾಜ್ಯದ ಇಂಜಿನಿಯರ್ ಕಾಲೇಜುಗಳನ್ನೇ ನೋಡಿ. ಒಳ್ಳೆಯ ಶಿಕ್ಷಕರಿಲ್ಲದೇ ಅಟಾನಮಸ್ ಆಗಿ ದುಡ್ಡಿಗಾಗಿ ಡಿಗ್ರಿ ಮಾರ್ತಿದಾರೆ). ಅಟೋನಮಿ ಕೊಟ್ರೆ ಹತೋಟಿ ಮಾಡೋದು ಕಷ್ಟ ಆಗತ್ತೆ.
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅದೇ ಹತೋಟಿ ಯಾಕೆ ಅವರಿಗೆ ಇಶ್ಟ ಇಲ್ಲದೇ ಇರದ ಮೇಲೆ?
ಹಾಗಾದರೆ ಕಾಶ್ಮಿರದ ಮೂಲ ನಿವಾಸಿಗಳ ಅನಿಸಿಕೆಗೆ ಬೆಲೆ ಇಲ್ವ?
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಲ್ಲಿ ಚುನಾವಣೆಗಳು ನಡೀತಿಲ್ವಾ? ಅವರ ಸರ್ಕಾರ ಅವರೇ elect ಮಾಡ್ತಿಲ್ವಾ?
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅದೇ ಸರಕಾರ ಇವೊತ್ತು ಬಿದ್ದೋಗಿದೆಯಲ್ಲ..
ಅದೇ ಸರಕಾರದ ಅಂಗಪಕ್ಶವೇ ಹೋರಾಟ ಮಾಡ್ತಿದೆಯಲ್ಲ....
ಆದರೆ ಜಮ್ಮು ಅಲ್ಲಿ ನಡೀತಾ ಇರೋ ಗಲಾಟೆ ಹಿಂದಿನ ಸಂಗಟನೆ ಯಾವ ಚುನಾವಣೆಯಲ್ಲಿ ಗೆದ್ದಿದೆ?
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
@ಮಾಧವ ಮತ್ತು ಕೀರ್ತಿಕಿರಣ,
ಯಾವುದಾದರೊಂದು ಗಂಭೀರ ವಿಷಯದ ಬಗ್ಗೆ ಚರ್ಚೆ ಮಾಡುವಾಗ ನಾವು ’ಯಾರ’ ಜೊತೆ ಮಾಡುತ್ತಿದ್ದೇವೆ ಎಂಬುದೂ ಮುಖ್ಯ.
ಸುಮ್ಮನೇ ವಾದಕ್ಕಾಗೇ ಬರುವ ಪೂರ್ವಗ್ರಹ ಪೀಡಿತರ ಜೊತೆ ಸಮಯ ಹಾಳು ಮಾಡಿಕೊಳ್ಲಬೇಡಿ.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ನೀವು ಹೇಳಿದ್ದು ಸರಿ... ಎಲ್ಲರ ಜೊತೇಲೂ ವಾದ ಮಾಡಕ್ಕಾಗಲ್ಲ.
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಹೆ ಹೆ..!
ಇಶ್ಟು ಗೆಣಸ್ ತುರಿದ್ರ?
ನಿಮ್ ಜೋಡಿ ಚನ್ನಾಗಿದೆ.!
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ನಿಮ್ಮ ದೃಷ್ಟಿಯಲ್ಲಿ ಕಾಶ್ಮೀರದ ಮೂಲ ನಿವಾಸಿಗಳು ಯಾರು? ತಲೆತಲಾಂತರಗಳಿಂದ ಕಾಶ್ಮೀರದಲ್ಲಿದ್ದು ಈಗ ಅಲ್ಲಿಂದ ಓಡಿಸಲ್ಪಟ್ಟ ಹಿಂದೂ ಪಂಡಿತರೇ ಅಥವಾ ಪಾಕಿಸ್ಥಾನದಿಂದ ಕದ್ದು ನುಗ್ಗಿ ಬಂದು ಗಲಾಟೆ ಎಬ್ಬಿಸುತ್ತಿರುವ ಆತಂಕವಾದಿಗಳೇ?
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಇಲ್ಲಿ ಕಾಶ್ಮಿರದ ಪಂಡಿತರಲ್ಲಿ ಹಲವರು ಮುಸ್ಲಿಮರಾಗಿದ್ದುಂಟು...
ಕಾಶ್ಮಿರದ ಪಂಡಿತರನ್ನು ಓಡಿಸಿದ್ದಾಗಲಿ, ನುಸುಳುಕೋರರ ಗೊಡವೆಯಾಗಲಿ.. ಇವೆಲ್ಲದ ಹೊರತೂ.. ಕಾಶ್ಮಿರಿಗ, ಅಲ್ಲಿನ ಮೂಲನೆಲೆಸಿಗರ ಬೇಡಿಕೆ ಏನೋ ಇದೆ.. ಅದನ್ನೊಮ್ಮೆ ಕೇಳಿಸಿಕೊಳ್ಳಿರಿ..
ಕಾಶ್ಮಿರ ಹೇಗೆಂದು ನಮಗೆ ’ಇಂಡಿಯ’ ಹೇಗೆ ಹೇಳುವುದೋ, ಅದನ್ನು ನಾವು ದಿಟವೆಂದುಕೊಂಡಿದ್ದೀವಿ.. ಅದಕ್ಕೂ ಬೇರೆಯಾಗಿ ಅಲ್ಲಿಯ ಸ್ತಿತಿಯೇ ಬೇರೆ ಇರಬೋದು.... ನಮ್ಮ ಇಂಡಿಯದ ಮ್ಯಾಪು ಎಶ್ಟು ಇಂಡಿಯದ ಅಂಕೆಯಲ್ಲಿ ಇರದ ನೆಲಗಳನ್ನೆಲ್ಲ ಹೊಂದಿರುವ.. ಹಾಗೆ.
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅದು ಅಷ್ಟು ಸುಲಭ ಅಲ್ಲ ಮಾಯ್ಸ ಅವರೆ. ಎಲ್ಲರಲ್ಲೂ ಒಮ್ಮತ ಇದ್ದರೆ ನೀವು ಹೇಳೋದು ಸರಿ. ಆದರೆ ಒಂದೇ ಪ್ರಾಂತ್ಯದಲ್ಲಿರುವ ಕೆಲವರು ಭಾರತದ ಪರ ಕೆಲವರು ಪಾಕಿಸ್ತಾನದ ಪರ ವೋಟ್ ಮಾಡಬಹುದು. ಆಗ ಮತ್ತೆ ೧೯೪೭ರ ಥರ ಜನ ವಲಸೆ ಹೋಗಬೇಕಾಗತ್ತೆ. ಈಗಿರೋದಕ್ಕಿಂತ ದೊಡ್ಡ ಸಮಸ್ಯೆ ಬರತ್ತೆ.
ಕೀರ್ತಿ ಕಿರಣ್ ಎಂ
ಉ: ಅರುಂಧತಿ ರಾಯ್: ಕಾಶ್ಮೀರಕ್ಕೆ ಭಾರತದಿಂದ ಸ್ವಾತಂತ್ರ್ಯ ಬೇಕು!!!
ಅಣ್ಣ ಅಲ್ಲಿರೋದು ಮೂರು ಪ್ರಾಂತ್ಯಗಳು..!
ಅದನ್ನು ಒಟ್ಟು ಸೇರಿಸಿ ಒಂದು ರಾಜ್ಯ ಮಾಡವ್ರೆ~