ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?
ಇವಳಿಗೆ ಓಟು ಕೊಡಿ ಪ್ಲೀಸ್!
ಮೊನ್ನೆ ಸ್ಟಾರ್ ಪ್ಲಸ್ ನಲ್ಲಿ ಬರುವ ವಾಯ್ಸ್ ಆಫ್ ಇಂಡಿಯಾ ಕಾರ್ಯಕ್ರಮ ನೋಡುತ್ತ ಕುಳಿತಿದ್ದೆ. ಹಾಡು ಹಾಡಿದ ನಂತರ ಪ್ರತಿ ಸ್ಪರ್ಧಿಯೂ ತನ್ನ ಭಾಷಯಲ್ಲಿ ಓಟು ಕೇಳುತ್ತಿದ್ದ/ದ್ದಳು. ನಾನು "ನಮ್ಮ ಕನ್ನಡದವರು ಒಬ್ಬರೂ ಇಲ್ಲಿ ಬಂದಿಲ್ಲ. ಕನ್ನಡದಲ್ಲಿ ಓಟು ಕೇಳಿಲ್ಲ.." ಅಂತ ಗೊಣಗುತ್ತ ಎದ್ದು ಹೋದೆ. ಮರುಕ್ಷಣವೇ ಕಾರ್ಯಕ್ರಮ ನಿರ್ವಹಿಸುವ ಶಾನ್ ಈಗ ಕರ್ನಾಟಕದಿಂದ ರಿತಿಷಾ ಪದ್ಮನಾಭ ಹಾಡುವುದು ಕೇಳಿ ಅಂದ. ಎದ್ನೋ ಬಿದ್ನೋಂತ ಬಂದು ಮತ್ತೆ ಕೂತ್ಕೊಂಡೆ. ಆಹಾ! ಏನು ಚೆನ್ನಾಗಿ ಹಾಡಿದ್ಳು ಗೊತ್ತಾ? ಸ್ವರ, ತಾಳ, ಲಯದ ಮೇಲೆ ಪರ್ಫೆಕ್ಟ ಕಂಟ್ರೋಲು. ಜಡ್ಜುಗಳು ಸಹ ಅವಳ ಬಗ್ಗೆ ಒಳ್ಳೆ ಮಾತಾಡಿದ್ರು ಆಮೇಲೆ, ಕನ್ನಡದಲ್ಲಿ "ನನಗೆ ದಯವಿಟ್ಟು ಓಟ್ ಮಾಡಿ, ಸಪೋರ್ಟ್ ಮಾಡಿ" ಅಂತ ಕೇಳ್ಕೊಂಡ್ಳು. ಪಾಪ ಅನ್ನಿಸ್ತು. ಯಾಕೆಂದ್ರೆ, ಈ ಸ್ಪರ್ಧೆಗಳೆಲ್ಲ ಒಂಥರ TRP ಅವಲಂಬಿತವಾದವು. ಯಾವ ಗಿಮಿಕ್ಸೂ ಮಾಡದೆ ಬರಿ ಚೆನ್ನಾಗಿ ಹಾಡಿದರೆ ಗೆಲ್ಲೋದಿಲ್ಲ. ಹಿಂದೆ, ಹೈದ್ರಾಬಾದಿನ ಹೇಮಚಂದ್ರ ಸರಿಗಮಪದಲ್ಲಿ ಎಷ್ಟೇ ಚೆನ್ನಾಗಿ ಹಾಡಿದ್ರೂ ಓಟು ಸಿಗದೆ ಸರಿದು ಹೋದ. ಮತ್ತೆ, ಅದಕ್ಕೂ ಮುಂಚೆ ಕನ್ನಡದ ವಿಜಯಪ್ರಕಾಶ್(ಇತ್ತಿಚೆಗೆ ಗಾಳಿಪಟದಲ್ಲಿ "ಕವಿತೆ ಕವಿತೆ" ಹಾಡಿದವನು) ಸಹ ಕೊನೆಯ ತನಕ ಬಂದು ಹೊರಟ. ರಿತಿಷಾಳಿಗೆ ಹೀಗಾಗದೆ ಅವಳು ಕೊನೆಯವರೆಗೂ ಇದ್ದು, ಗೆದ್ದರೆ ಚೆನ್ನ. ಕನ್ನಡದವರು ಹಿಂದಿ ನೋಡುವುದು ಕಡಿಮೆ. ಆದ್ದರಿಂದ, ಅವಳು ಜಾಸ್ತಿ ದಿನ ಉಳಿಯುತ್ತಾಳೆಂಬ ನಂಬಿಕೆ ನನಗಿಲ್ಲ. ಆದರೂ, ಬಹಳ ಒಳ್ಳೆಯ ಹಾಡುಗಾರ್ತಿ, ಈಗಿರುವ ಸ್ಪರ್ಧಿಗಳಲ್ಲಿ ಇವಳೇ most deserving. ದಯವಿಟ್ಟು ಭಾರತದಲ್ಲಿರುವವರು ಅವಳಿಗೆ ಓಟು ಮಾಡಿ, ಗೆಲ್ಲಿಸಿ.
ಅವಳ ಒಂದು ಹಾಡು ಇಲ್ಲಿದೆ. ಕೇಳಿ ಆನಂದಿಸಿ.

- kalpana ರವರ ಬ್ಲಾಗ್
- Login or register to post comments
- 597 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಚೆನ್ನಾಗಿ ಹಾಡಿದಾರೆ.
-ಹಂಸಾನಂದಿ
ಹರಿದಾಸ ಸಂಪದ:- http://haridasa.in/
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಹೌದು ಹಂಸಾನಂದಿಗಳೆ, ನಾನು ಮೊದಲು ಕೇಳಿದ ಹಾಡು ಆಶಾ ಭೊಂಸ್ಲೆದು. ಅದೂ ಕೂಡ ಚೆನ್ನಾಗಿ ಬಂತು.
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
>>ದಯವಿಟ್ಟು ಭಾರತದಲ್ಲಿರುವವರು ಅವಳಿಗೆ ಓಟು ಮಾಡಿ, ಗೆಲ್ಲಿಸಿ.
-ಓಟು ಮಾಡಬಹುದು. ಆದರೆ ಗೆಲ್ಲಿಸಿ?-ಸ್ಟಾರ್ ಪ್ಲಸ್ನವರು ಮನಸ್ಸು ಮಾಡಬೇಕು.
-ಗಣೇಶ.
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ನಿಜ ಗಣೇಶರೆ, ನನಗೂ ದಕ್ಷಿಣ ಭಾರತದವಳು ಗೆಲ್ಲುತ್ತಾಳೆಂಬ ನಂಬಿಕೆ ಇಲ್ಲ. ನೋಡೋಣ...
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಹೇಮಚಂದ್ರ ಸಾರೆಗಮಪದಿಂದ ಹೊರಬಿದ್ದ ಮ್ಯಾಲೆ ಈ ಸಂಗೀತ ಕಾರ್ಯಕ್ರಮಗಳನ್ನ ನೋಡೋದೆ ಬಿಟ್ಟಬಿಟ್ಟೆನಿ.ರಿತಿಷಾ ಚೆನ್ನಾಗಿ ಹಾಡಿದಾರೆ. ಜನರು ಮತ ಹಾಕ್ಲಿಲ್ಲ ಅಂತ ಇನ್ನೊಬ್ಬ ಕಲಾವಿದರಿಗೆ ನಿರಾಸೆ ಆಗದಿರಲಿ.
ಶಿಲ್ಪ
ಭವಿಶ್ಯ ನಮ್ಮ ಕೈಯಲ್ಲಿಯೆ ಇದೆ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಶಿಲ್ಪ ಅವರೆ,
ನಾನೂ ಸಹ ಹೇಮಚಂದ್ರನ ಅಭಿಮಾನಿ. ಎಸ್.ಪಿ.ಬಿ, ಹರಿಹರನ್ ಹಾಡುಗಳನ್ನು ಎಷ್ಟು ಚೆನ್ನಾಗಿ ಹಾಡುತ್ತಿದ್ದ ಅಲ್ವ?
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಪ್ರಿಯ ಕಲ್ಪನಾರವರೆ,
ಹಾಡು ತುಂಬಾ ಚೆನ್ನಾಗಿದೆ. ನಿಜಕ್ಕೂ ನೀವು ಹೇಳಿದಂತೆ ಹಿಂದಿ channelಗಳನ್ನು ನಮ್ಮ ಕರ್ನಾಕದಲ್ಲಿ ನೋಡುವವರು ತುಂಬಾ ಕಡಿಮೆ. ಆದಕಾರಣ ನೀವು ಹೇಳಿದಂತೆ ಓಟು ಸಿಗದೇ ಒಳ್ಳೆಯ voice ಇದ್ದರೂ ಗೆಲ್ಲುವುದು ಕಷ್ಟವಾಗಬಹುದೇನೋ. ಆದರೂ ಅವರ ಪ್ರತಿಭೆಗೆ ಎಲ್ಲಾದರೂ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ಆ ಅದೃಷ್ಟ ಅವರಿಗೆ ಇರಲಿ, ಅವರ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿ ಎಂದು ನಾವು ಕನ್ನಡಿಗರು ಹರಸೋಣ. ಧನ್ಯವಾದಗಳು ಕಲ್ಪನಾರವರೆ.
ಶೈಲಾಸ್ವಾಮಿ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಸರಿಯಾದ ಮಾತು ಶೈಲಾ ಅವರೆ. ಪ್ರತಿಭೆ ಎಲ್ಲಿದ್ದರೂ ಬೆಳಗುತ್ತದೆ. ಆದರೂ ನ್ಯಾಶನಲ್ ಲೆವೆಲ್ನಲ್ಲಿ ಕರ್ನಾಟಕದ ಗಾಯಕಿ ಮುಂದೆ ಬಂದರೆ, ನನಗೆ ಅಭಿನವ್ ಬಿಂದ್ರಾ ಒಲಂಪಿಕ್ಸ್ನಲ್ಲಿ ಚಿನ್ನ ಗೆದ್ದಷ್ಟು ಸಂತೋಷ ಆಗುತ್ತೆ
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಚೆನ್ನಾಗಿ ಹಾಡಿದ್ದಾಳೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಶೈಲಮ್ಮ ಅವರು ಹೇಳಿದ ಹಾಗೆ, ಇವಳ ಪ್ರತಿಭೆಗೆ ತಕ್ಕ ಪುರಸ್ಕಾರ ಸಿಗಲಿ ಎಂದು ಆಶಿಸೋಣ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಅನಿಲರೆ,
ಈ ಚಿಕ್ಕ ವಯಸ್ಸಿಗೇನೆ ಎಂತಹ ಒಳ್ಳೆಯ ಪ್ರತಿಭೆ ಇದೆ ಅಲ್ವ? ಇವಳಿಗೆ ಒಳ್ಳೆಯ ಅವಕಾಶ ಸಿಕ್ಕಿ, ಮುಂದೆ ಬರ್ಲಿ ಅನ್ನುವುದೇ ನನ್ನ ಆಶಯ ಸಹ.
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಸ್ವಲ್ಪ ಕಟುವಾದ ಮಾತು ಅನಿಸಬಹುದು. ಆದರೆ ಎಲ್ಲ ಮಕ್ಕಳಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ನಿಮಗೆ ಈ ಹುಡುಗಿಯ ಪ್ರತಿಭೆ ಮಾತ್ರ ಕಾಣಿಸುತ್ತಿದೆ, ಏಕೆಂದರೆ ಹಾಡು ನಿಮಗಿಷ್ಟ, ಜೊತೆಗೆ ಇವಳು ನ್ಯಾಶನಲ್ ನೆಟ್ವರ್ಕೊಂದರ ರಿಯಾಲಿಟಿ ಶೋ ನಲ್ಲಿ ಬರುತ್ತಿದ್ದಾಳೆ.
ಸುತ್ತಲೂ ನೋಡಿ. ನಿಮ್ಮ ಆಸುಪಾಸಿನಲ್ಲೇ ಎಷ್ಟೋ ಪುಟಾಣಿಗಳು ನಿಮಗೆ ಕಾಣದ ಪ್ರತಿಭೆಯೊಂದನ್ನ ಇಟ್ಟುಕೊಂಡಿಯೇ ಇರುತ್ತಾರೆ. ನೀವು ಅದನ್ನು ಗುರುತಿಸಿರುವುದಿಲ್ಲ, ಅಷ್ಟೆ. ಇವಳ ಕುರಿತು "ಈ ಹುಡುಗಿ ಮುಂದೆ ಬರಲಿ" ಎಂದೆನಿಸಿದಷ್ಟು ಆ ಪುಟಾಣಿಗಳ ಬಗ್ಗೆ ನಿಮಗೆ ಅನಿಸಿರಲಿಕ್ಕಿಲ್ಲ.
ಎಷ್ಟು ಬೇಗ ಇಂಥದ್ದು ಗುಡ್ ವಿಲ್ ಜೆನರೇಟ್ ಮಾಡೋದಲ್ಲದೆ ಮನಸೂರೆಗೊಳಿಸುತ್ತ ಟಿ ವಿ ಚ್ಯಾನಲ್ಲುಗಳ ಮಾರಾಟದ ತಂತ್ರಗಳಿಗೆ ಇಂಬು ಕೊಡುತ್ತದೆ ಎಂಬುದು ನೋಡಿ ನನಗಾಶ್ಚರ್ಯವಾಗುತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಹಾಗೇನೂ ಇಲ್ಲ ಸಾರ್, ನನಗೆ ನನ್ನ ಸುತ್ತಲಿನ ಮಕ್ಕಳು ಮುಂದೆ ಬಂದರೂ ಇಷ್ಟನೆ
ನೀವು "ತಾರೆ ಜಮೀನ್ ಪರ್" ಚಿತ್ರದಿಂದ ಬಹಳ influence ಆಗಿಯೋ, ಏನೋ, ಮನಸ್ಸಿನಲ್ಲಿ ಬೇರೆ ವಿಚಾರ ಇಟ್ಟುಕೊಂಡು ಇದನ್ನು ಬರೆದಿರುವ ಹಾಗಿದೆ. ಏಕೆಂದರೆ, ನೀವು ನನ್ನ ಹಳೆಯ ಕಾಮೆಂಟು (http://sampada.net/blog/%E0%B2%B0%E0%B3%87%E0%B2%96%E0%B2%BE/29/06/2008/...) ನೋಡಿರಲಿಕ್ಕಿಲ್ಲ. ಅಲ್ಲಿ ಬರೆದಿರುವ ಹಾಗೆ, ಪ್ರತಿ ಮಗುವಿನಲ್ಲೂ ಒಂದಲ್ಲ ಒಂದು ಪ್ರತಿಭೆ ಅಡಗಿದೆಯೆಂಬುದನ್ನು ಬಲವಾಗಿ ನಂಬಿರುವವಳು ನಾನು. ಅದು ಈ competitive ಯುಗಕ್ಕೆ ಸರಿಹೊಂದುವ ಪ್ರತಿಭೆಯಲ್ಲದಿರದಿರಬಹುದು. ಆದ್ರೆ, ಅದು ಬೇರೆಯ ವಿಷಯ.
ಹೌದು, ಟಿವಿಯವರು ನಮ್ಮನ್ನು ಮರುಳು ಮಾಡುತ್ತಾರೆಂಬುದನ್ನು ಒಪ್ಪುತ್ತೇನೆ. ಹಾಗಂತ, ಟಿವಿಯಲ್ಲಿ, ಪೇಪರ್ನಲ್ಲಿ ಹೆಸರು ಬಂದರೆ ಮಾತ್ರ ಒಬ್ಬರು ಪ್ರತಿಭಾವಂತರು ಅಂತೇನೂ ಅಲ್ಲ. ಇದನ್ನು ನಾವು ಅರಿತಿರಬೇಕು. ಆದರೆ, ಒಬ್ಬರ ಪ್ರತಿಭೆಯನ್ನು ಕ್ಷಣ ಮಾತ್ರದಲ್ಲಿ ಪ್ರಪಂಚಕ್ಕೆ ಸಾರುವ ತಾಕತ್ತು ಈ ಮಾಧ್ಯಮಗಳಿಗೆ ಇವೆಯೆಂಬುದೂ ಸಹ ನಿಜವೆ. ಭಾರತದ ಯಾವುದೋ ಒಂದು ಹಳ್ಳಿಯ ಮೂಲೆಯಲ್ಲಿ ಮಹಾನ್ ಸಂಗೀತಗಾರರೊಬ್ಬರು ಸೊಗಸಾಗಿ ಹಾಡುತ್ತಿದ್ದರೆ ನಮಗೆ ತಿಳಿಯುವುದಿಲ್ಲ. ಇದು ವಾಸ್ತವ ಪ್ರಪಂಚ.
ಈ ರಿತಿಷಾಳ ವಿಷ್ಯ ತೆಗೆದುಕೊಂಡರೆ, ಸಾವಿರಾರು ಸ್ಪರ್ಧಿಗಳ ಮಧ್ಯೆ ಕನ್ನಡದ ಹುಡುಗಿಯೊಬ್ಬಳು ಗೆದ್ದು ಬಂದು, (ನನಗೆ ತಿಳಿದಿರುವ ಹಾಗೆ ಮೊದಲ ಸರ್ತಿ) ಇಡೀ ದೇಶದ ಮುಂದೆ ಹಾಡುತ್ತ ನಿಂತಿದ್ದಾಳೆ. ಇದನ್ನು ಸಾಧನೆ ಅನ್ನುತ್ತಿರುವುದು ತಪ್ಪೆ? ಯಾರು ಹೊಗಳುತ್ತಾರೋ, ಯಾರು ತೆಗಳುತ್ತಾರೋ ಗೊತ್ತಿಲ್ಲ, ಆದರೂ ಎಲ್ಲವನ್ನೂ ಧೈರ್ಯವಾಗಿ ಎದುರಿಸಿಕೊಂಡು ಹಾಡುತ್ತಿದ್ದಾಳೆ. ಇದನ್ನು ಭೇಷ್ ಅನ್ನುತ್ತಿರುವುದು ತಪ್ಪೆ?
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
>>ಸಾವಿರಾರು ಸ್ಪರ್ಧಿಗಳ ಮಧ್ಯೆ ಕನ್ನಡದ ಹುಡುಗಿಯೊಬ್ಬಳು ಗೆದ್ದು ಬಂದು,(ನನಗೆ ತಿಳಿದಿರುವ ಹಾಗೆ ಮೊದಲ ಸರ್ತಿ...
-ಕರ್ನಾಟಕದ ಅರ್ಚನಾ ಉಡುಪ ೧೯೯೯ರಲ್ಲಿ 'ಟಿ.ವಿ.ಯಸ್. ಸ ರಿ ಗ ಮ' ಸ್ಪರ್ಧೆಯನ್ನು ಗೆದ್ದಿರುವಳು.
ಈಕೆ ಹಿಂದಿ ಹಾಡಿನ ಕಾರ್ಯಕ್ರಮಗಳಲ್ಲಿ 'ದ.ಭಾರತ'ದಿಂದ ಮೊದಲ ಬಾರಿಗೆ ಗೆದ್ದಾಕೆ.
ನೋಡಿ-
http://en.wikipedia.org/wiki/Archana_Udupa
http://www.youtube.com/watch?v=crKA7Z81jGY
-ಗಣೇಶ.
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಕನ್ನಡದ ಮಕ್ಕಳು ಹಿಂದಿ ಚಾನಲ್ ಒಂದರಲ್ಲಿ ಬಂದ್ರೆ ನಾವೆಲ್ಲ ಅಷ್ಟ್ಯಾಕೆ excite ಆಗ್ತಿವೋ.
ನನ್ನ ಮಟ್ಟಿಗೆ ನಿಜವಾದ revival ಆಗಿರೋದು ಕನ್ನಡ ಸಂಗೀತ ಕ್ಷೇತ್ರದಲ್ಲಿ.
ಬರಿ ಐದು ವರ್ಷದ ಕೆಳಗೆ ನಮ್ಮ ಬಡಾವಣೆಯ ಎಷ್ಟೋ ಮಕ್ಕಳು ಒಂದೇ ಒಂದು ಕನ್ನಡ ಹಾಡು ಉಲಿಯೋದನ್ನು ನಾನು ನೋಡಿರಲಿಲ್ಲ.. ಆದ್ರೆ ಎದೆ ತುಂಬಿ ಹಾಡುವೆನು ಬಂದಿದ್ದೆ ಬಂದದ್ದು, ಬೆಂಗಳೂರು, ಮೈಸೂರು, ಮಣಿಪಾಲ ಇಂತ ಊರಲ್ಲಿ ಅಸಂಖ್ಯ ಪಾಲಕರು ( ಟಿ.ವಿ ಯಲ್ಲಿ ಬರಬೇಕು ತಮ್ಮ ಮಕ್ಕಳು ಅನ್ನೊ ಹಂಬಲ ) ತಮ್ಮ ಮಕ್ಕಳನ್ನು ಸಂಗೀತ ಪಾಠ ಕಲಿಯಲು ಕಳಿಸಲು ಶುರು ಮಾಡಿದ್ದಾರೆ. ನಮ್ಮ ಬಡಾವಣೆಯ ಮಕ್ಕಳಲ್ಲೇ ಎಷ್ಟೋ ಮಕ್ಕಳು " ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ", ಇಲ್ಲ " ನಾವಾಡುವ ನುಡಿಯೇ ಕನ್ನಡ ನುಡಿ" ಅಂತ ಹಾಡಲು ಶುರು ಹಚ್ಚಿರೋದು ನೋಡಿ ಸಕತ್ ಅಂದ್ರೆ ಸಕತ್ ಖುಷಿ ಆಗಿದೆ. ಮತ್ತೆ ನಮ್ಮ ನಾಡಿನ ಮಕ್ಕಳ ಬಾಯಲ್ಲಿ ಹಳೆಯ ಕನ್ನಡ ಹಾಡುಗಳು ನಲಿಯಲು ಶುರು ಆಗೋದಕ್ಕೆ ನೇರ ಕಾರಣ ಎದೆ ತುಂಬಿ ಹಾಡುವೆನು ಅಂತ ಕಾರ್ಯಕ್ರಮಗಳು.
ಇವತ್ತಂತೂ ಕನ್ನಡದ ಪ್ರತಿ ಚಾನಲ್ ಅಲ್ಲೂ ಮಕ್ಕಳ ಹಾಡಿನ ಕಾರ್ಯಕ್ರಮ ಬರ್ತಾ ಇದೆ. ಇಂತದೊಂದು ಬದಲಾವಣೆ ತುಂಬಾ ದೊಡ್ಡ ಮಟ್ಟದಲ್ಲಿ ಮಕ್ಕಳಲ್ಲಿ ಕರ್ನಾಟಕ ಸಂಗೀತ, ಶಾಸ್ತ್ರೀಯ ಸಂಗೀತ, ಕನ್ನಡ ಸಂಗೀತ, ಕನ್ನಡ ಚಿತ್ರಗಳು, ನಮ್ಮ ಸಂಗೀತ ಪ್ರಪಂಚಕ್ಕಿರೋ ಭವ್ಯ ಇತಿಹಾಸ,, ಹೀಗೆ ಪ್ರತಿಯೊಂದು ವಿಷಯದಲ್ಲೂ ದೊಡ್ಡ ಮಟ್ಟದ ಜಾಗ್ರುತಿಗೆ ಕಾರಣವಾಗಿವೆ ಎನ್ನಬಹುದು.
ಶೋಭಾ...
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಶೋಭರವರೆ,
ನೀವು ತಪ್ಪು ತಿಳಿದಿದ್ದೀರ. ರಿತಿಷಾ ಹಿಂದಿಯಲ್ಲಿ ಹಾಡಿದಳು ಅಂತ ಹೆಮ್ಮೆ ಪಡಲಿಲ್ಲ. ಅವಳೇ ಹೇಳಿದಂತೆ ಕರ್ನಾಟಕವನ್ನು ನ್ಯಾಷನಲ್ ಮಟ್ಟದಲ್ಲಿ represent ಮಾಡುತ್ತಿದ್ದಾಳೆ. ಅದಕ್ಕೆ ಹೆಮ್ಮೆ. ಜೊತೆಗೆ ಕರ್ನಾಟಕಕ್ಕೆ ಇದರ ಅಗತ್ಯ ಬಹಳ ಇದೆ. ಈಗ ನೋಡಿ, ಹಿಂದಿಯಲ್ಲಿ ಸರೆಗಮಪ ಗೆದ್ದ ಶ್ರೇಯ ಗೋಶಲ್ ಕನ್ನಡದ ಹಿನ್ನೆಲೆ ಗಾಯಕಿಯರ ಪಾಲನ್ನು ಹೇಗೆ ಕಬಳಿಸುತ್ತಿದ್ದಾಳೆ? ಇವಳಷ್ಟು ಚೆನ್ನಾಗಿ ಹಾಡುವವರು ಕನ್ನಡದಲ್ಲೂ ಇರಬಹುದು ಅಲ್ವ? ಆದರೂ ನಿರ್ದೇಶಕರು ಕಡೆಗಣಿಸುತ್ತಾರೆ, ಯಾಕೆ? ರಾಜೇಶ್ ಇದ್ದರೂ ಸೋನುವಿನಿಂದ ಹಾಡಿಸುತ್ತಾರೆ. ಯಾಕೆ? ಕರ್ನಾಟಕದವರು ನ್ಯಾಷನಲ್ ಲೆವೆಲ್ ನಲ್ಲಿ ಹೆಚ್ಚೆಚ್ಚು ಹೆಸರು ಮಾಡಿದಷ್ಟೂ ಕನ್ನಡಕ್ಕೆ ಒಳ್ಳೆಯದೇ, ತಪ್ಪೇನಿಲ್ಲ. ಹೀಗೆ ಪ್ರಸಿದ್ಧರಾದವರು ತಮ್ಮ ಕನ್ನಡದ ಬೇರನ್ನು ಮರೆಯದಿದ್ದರೆ ಸರಿ.
ಕನ್ನಡದ ಹಾಡಿನ ಸ್ಪರ್ಧೆಗಳು ಮಕ್ಕಳಲ್ಲಿ ಕನ್ನಡ ಹಾಡುಗಳ ಬಗ್ಗೆ ಒಲವನ್ನು ಹೆಚ್ಚಿಸಿದ್ದರೆ ಬಹಳ ಸಂತೋಷ. ಅವರೀಗೂ ಓಟು ಕೊಡಿ, ಪ್ರೋತ್ಸಾಹಿಸಿ. ಆದರೆ, ನಾನು ಹೇಳಿದ್ದಕ್ಕೂ, ನೀವು ಹೇಳುವುದಕ್ಕೂ ಸಂಬಂಧವೇ ಇಲ್ಲ.
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಕಲ್ಪನಾ ಅವರೇ,
ರಾಷ್ಟ್ರ ಮಟ್ಟದಲ್ಲಿ ನಮ್ಮ ರಾಜ್ಯದ ಹುಡುಗಿ ಹೆಸರು ಮಾಡಲಿ ಅನ್ನುವ ನಿಮ್ಮ ಆಶಯದ ಬಗ್ಗೆ ನನಗೆ ಯಾವುದೇ ಭೇದವಿಲ್ಲ. ಆದ್ರೆ ಹಾಗೆ ಹೆಸರುವಾಸಿಯಾದ ತಕ್ಷಣ ನಮ್ಮ ರಾಜ್ಯದಲ್ಲಿ ಅವರಿಗೆ ಮನ್ನಣೆ ಸಿಗುತ್ತೆ ಅನ್ನೋದು ನನಗೇನೊ ಸಂದೇಹ. ಹಾಗೆ ಆಗುವ ಹಾಗಿದ್ದಲ್ಲಿ, ನಮ್ಮವರೇ ಆದ ಅರ್ಚನ ಉಡುಪರಿಗೆ ಸಾಕಷ್ಟು ಅವಕಾಶಗಳು, ಹೆಸರು ಮನ್ನಣೆ ಸಿಗಬೇಕಿತ್ತು. ಆದ್ರೆ ಹಾಗಾದದ್ದು ನಾ ಕಾಣೆ, ಅರ್ಚನ ಅವರು ತಮ್ಮ ಪರಿಶ್ರಮದಿಂದ ಸುಗಮ ಸಂಗೀತ, ಭಾವಗೀತೆಯಂತ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅರ್ಚನ ಅವರು ಅದೆಷ್ಟೆ ಚೆನ್ನಾಗಿ ಹಾಡಿದರೂ ನಮ್ಮ ರಿಯಲ್ ಎಸ್ಟೇಟ್ ನಿರ್ಮಾಪಕರಿಗೆ ಬಾಲಿವುಡ್ ನ ತಪ್ಪು ತಪ್ಪು ಉಚ್ಚಾರ ಮಾಡೋ ಸೋನು/ಶ್ರೇಯಾ ಅವರೇ ಬೇಕು ಅನ್ನೋದು ಇವತ್ತಿನ ಪರಿಸ್ಥಿತಿ.
ಹೀಗಾಗಿ ಒಂದು ಲೆವೆಲ್ pessimism ನ ಜೊತೆಗೆ ನಿಮ್ಮ ಪೋಸ್ಟ್ ಗೆ ಹಾಗೆ ಉತ್ತರಿಸಿದೆ.
ಶೋಭಾ...
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಶೋಭ ಅವರೆ,
ನಾನೂ ಈಗ ಅರ್ಚನಾರ ಯೂಟೂಬ್ ಹಾಡುಗಳನ್ನು ಕೇಳಿದೆ. ಬಹಳ ಚೆನ್ನಾಗಿ ಹಾಡಿದ್ದಾರೆ. ನಿಮ್ಮ pessimism ನನಗೆ ಅರ್ಥವಾಗುತ್ತೆ. ಆದರೆ, ಈವತ್ತಿನದು ಹೊಸ ದಿನ, ಹೊಚ್ಚ ಹೊಸ ಗಳಿಗೆ. pessimism, no big deal, so what, ಎನ್ನುವ negativity ಕಿತ್ಹಾಕಿ ಒಳ್ಳೆಯದನ್ನು ಆಶಿಸೋಣ ಅಲ್ವ?
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಹೌದಾ ಗಣೇಶರೆ, ನನಗೆ ಅರ್ಚನ ಉಡುಪ ಗೆದ್ದಿದ್ದು ಗೊತ್ತಿರಲಿಲ್ಲ. ಅವರೂ ಸಹ ಚೆನ್ನಾಗಿ ಹಾಡುತ್ತಾರೆ.
~ಕಲ್ಪನ
ಉ: ಇವಳಿಗೆ ಓಟು ಕೊಡಿ ಪ್ಲೀಸ್!
ಮೊನ್ನೆ ಈಕೆ ಹಾಡಿದ್ದ್ದನ್ನು ಕೇಳ್-ನೋಡಿದೆ... ಚೆನ್ನಾಗಿ ಹಾಡ್ತಾಳೆ..