ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಕಲ್ಪನಾಲೋಕ
ದೂರದಿಂದ ಬಂದವರೆ, ಬಾಗಿಲಲಿ ನಿಂದವರೆ,
ಮಂದಿರವು ಚೆನ್ನಿದೆಯೆ, ಆರಾಮವಾಗಿದೆಯೆ ?
ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಜಾಸ್ತಿ ಬರೆಯಲು ಸಮಯವಿಲ್ಲ. ಆದರೂ ಮೊನ್ನೆ ನಡೆದ ತಮಾಷೆ ಪ್ರಸಂಗ ಹಂಚಿಕೊಳ್ಳಬೇಕೆನ್ನಿಸಿತು. ಅಮೆರಿಕೆಗೆ ಮಗಳ ಬಾಣಂತನಕ್ಕೆ ಬಂದಿರುವ ಹಿರಿಯ ಮಹಿಳೆಯೊಬ್ಬರು ಸಿಕ್ಕಿದ್ದರು. ಅಪ್ಪಟ ಕನ್ನಡಿಗರೆ. ಆದ್ರೆ, ನಾನು ಕನ್ನಡದಲ್ಲಿ ಕೇಳಿದ್ದಕ್ಕೆಲ್ಲ ಇಂಗ್ಲೀಷಿನಲ್ಲಿ ಉತ್ತರಿಸುತ್ತಿದ್ದರು. ಅದೂ ಹರಕು ಮುರಕು ಇಂಗ್ಲೀಷು
ಯಾಕೆ ಹೀಗೇಂತ ಯೋಚಿಸಿದೆ. ಒಂದು ವಾರದ ಹಿಂದೆ ಯಾರೋ(ಮಹೇಶ?) ಬರೆದಿದ್ದ ಬರಹ ನೆನಪಾಯ್ತು. ಹುಡುಗಿಯರು ಯಾಕೋ ಕನ್ನಡ ಗೊತ್ತಿದ್ದರೂ ಮಾತಾಡುವುದಿಲ್ಲ ಅಂತ ಬರೆದಿದ್ರು. ಆದ್ರೆ, ಇಲ್ಲಿ ವಯಸ್ಸಾದ ಹಿರಿಯರು ಕನ್ನಡ ಗೊತ್ತಿದ್ದರೂ ಮಾತಾಡುತ್ತಾ ಇಲ್ಲ, ಇದಕ್ಕೇನಂತೀರ? "False prestige" ಅನ್ನಬೇಕೋ, ಅಥವ, ಅವರು ಇಂಗ್ಲೀಷು ಕಲಿಯಬೇಕೆಂದು ಪಣತೊಟ್ಟು ಅವಕಾಶ ಸಿಕ್ಕಾಗಲೆಲ್ಲ ಅದರಲ್ಲಿ ಮಾತಾಡುತ್ತಿದ್ದಾರೋ ತಿಳಿಯಲಿಲ್ಲ. ಆದ್ರೆ, ಹುಟ್ಟುವ ಕೂಸಿನ ಜೊತೆಯಾದರೂ ಕನ್ನಡ ಮಾತಾಡಿದರೆ ಒಳಿತು ಎನ್ನಿಸಿತು. ಇಲ್ದಿದ್ರೆ, ಪಾಪ, ಮಗಳು-ಅಳಿಯ ಅಷ್ಟೆಲ್ಲ ದುಡ್ಡು ಖರ್ಚು ಮಾಡಿ ತಮಗೆ traditional Indian ಬಾಣಂತನ ಬೇಕೂಂತ ತಮ್ಮ ತಾಯಿಯನ್ನು ಕರೆಸಿಕೊಂಡಿದ್ದಾರೆ. ಆ ತಾಯಿ ನೋಡಿದ್ರೆ ಭಾಷೆಯಿಂದ ಹಿಡಿದು ಸಂಪ್ರದಾಯದವರೆಗೆ ಇಲ್ಲಿ Americanise ಆಗಿ ಕೂತ್ರೆ, ಈ ಬಡಪಾಯಿಗಳು ಏನು ಮಾಡ್ಬೇಕು ಅಂತೀನಿ? ![]()

- kalpana ರವರ ಬ್ಲಾಗ್
- Login or register to post comments
- 431 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
೧) "ಜಾಸ್ತಿ ಬರೆಯಲು ಸಮಯವಿಲ್ಲ..." ಎಂದೇ ಬರಹವನ್ನಾರಂಭಿಸುವುದು. ಇದಕ್ಕೇನಂತೀರ? "False prestige" ಅನ್ನಬೇಕೋ, ಅಥವ, ತಾನು ಮಹಾ ಬಿಜಿ ಎಂದು ತೋರಿಸಿಕೊಳ್ಳುವುದಕ್ಕೆ ಹಾಗೆ ಬರೆಯುತ್ತಿದ್ದಾರೋ ತಿಳಿಯಲಿಲ್ಲ.
೨) "ಅಪ್ಪಟ ಕನ್ನಡಿಗರೆ". ಹೌದು, ಆ ಹಿರಿಯ ಮಹಿಳೆಯ ವರ್ತನಯಿಂದ ಅದೇ ತಾನೆ ಸಾಬೀತಾದದ್ದು?
೩) ಅವರದು ಹರಕು ಮುರಕು ಇಂಗ್ಲೀಷು. ಇರಲಿ. ಆದರೆ, "False prestige ಅನ್ನಬೇಕೋ", "traditional Indian ಬಾಣಂತನ", "Americanise ಆಗಿ ಕೂತ್ರೆ..." - ಇವೆಲ್ಲ ಏನು? ಕೋಡುಬಳೆ/ಮುರುಕು?
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಜೋಷಿಗಳೆ,
೧) ಮಹಾ ಬಿಜಿ ಅಲ್ಲ. ಈ ಲೇಖನವನ್ನು ಇನ್ನೂ ವಿಸ್ತಾರವಾಗಿ ಬರೆಯಬೇಕೆಂಬ ಉದ್ದೇಶವಿತ್ತು. ನಾನು ಕನ್ನಡದಲ್ಲಿ ಮಾತಾಡಿದ್ದು ಏನು, ಅವರು ಇಂಗ್ಲೀಷಿನಲ್ಲಿ ಉತ್ತರಿಸಿದ್ದು ಏನು ಇತ್ಯಾದಿ... ಆದ್ರೆ ಬರೆಯಲು ಸಮಯವಿರಲಿಲ್ಲ. ಈ ವಿಷಯ ನನ್ನ ತಲೆಯಲ್ಲಿದ್ದಾಗಲೆ ಇಲ್ಲಿ ಹೇಳಬೇಕೆಂದೆನಿಸಿತು, ಅದಕ್ಕೇನೆ ಚಿಕ್ಕದಾಗಿ ಪ್ರಸ್ತಾಪಿಸಿ ಬರೆದೆ. ಬೇರೆ ಏನೋ ಕಲ್ಪಿಸಬೇಡಿ.
೨) ನಿಮ್ಮ ಮಾತಿನ ಅರ್ಥ - ಈಗ ಕನ್ನಡಿಗರು ಹೀಗೆ ಮಾತಾಡುವುದು - ಅಂತಲೋ? ತಿಳಿಯಲಿಲ್ಲ.
೩) ನಾನು ಕನ್ನಡದಲ್ಲಿ ನಿರರ್ಗಳವಾಗಿ ಮಾತಾಡುವುದು ಸ್ವಲ್ಪ ಕಷ್ಟವೆ. ಇಲ್ಲಿ ಬರೆಯುವಾಗಲೂ ನಿಘಂಟು ಹತ್ತಿರದಲ್ಲಿರುತ್ತೆ. ಬೇಗ ಬರೆದಿದ್ದರಿಂದ ಕನ್ನಡ ಪದಗಳು ಹೊಳೆಯದೆ ತೋಚಿದ್ದು ಇಂಗ್ಲೀಷಿನಲ್ಲಿ ಬರೆದೆ. ಇದು ಒಣ ಪ್ರತಿಷ್ಠೆ ಅಲ್ಲ. ಇರಲಿ. ಇಲ್ಲಿ ಹೇಳಲು ಹೊರಟಿದ್ದು, ಆ ಮಹಿಳೆ ನನಗಿಂತ ಸುಮಾರು ೩೦-೪೦ ವರ್ಷ ಹಿರಿಯರು. ಅವರ ಕಾಲದಲ್ಲಿ ಇಷ್ಟು ಕನ್ನಡ-ಇಂಗ್ಲೀಷು ಕಲಬೆರಕೆ ಇರಲಿಲ್ಲ. ಅಂದರೆ, ನಾನು ಮಾತಾಡುವ ಕಂಗ್ಲೀಷಿಗಿಂತ ಉತ್ತಮ ಮಟ್ಟದ ಕನ್ನಡ ಚಾಲನೆಯಲ್ಲಿತ್ತು. ಅವರು ಸಿಕ್ಕೊಡನೆ ನನಗನ್ನಿಸಿದ್ದು. ಅರೆ, ಒಳ್ಳೆಯ ಅವಕಾಶ. ಇವರೊಡನೆ ಮಾತಾಡಿ ಒಂದಷ್ಟು ಕನ್ನಡ ಪದಗಳನ್ನು ಕಲಿಯೋಣ ಎಂದು. ಆದರೆ, ನಡೆದಿದ್ದೆ ಬೇರೆ.
~ಕಲ್ಪನ
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಕಲ್ಪನಾ ಅವರಿಗೆ ನಮಸ್ಕಾರ!
ಪ್ರಾಮಾಣಿಕವಾಗಿ ಹೇಳ್ತೇನೆ, ನಿಮ್ಮ ಬರಹವನ್ನು ನೋಡಿ ಅದರಲ್ಲಿನ ತಿರುಳನ್ನು ಮೆಚ್ಚಿಕೊಂಡಿದ್ದೆ, ಆದರೂ "ಇವರನ್ನು ಸ್ವಲ್ಪ ರಚನಾತ್ಮಕವಾಗಿ ಕೆಣಕುವಾ
" ಅಂತಲೇ ನಾನು ಆ ರೀತಿ ಪ್ರತಿಕ್ರಿಯೆ ಬರೆದಿದ್ದೆ. ನೀವು ಕೆರಳದೆ ಶಾಂತರೀತಿಯಲ್ಲೇ ಉತ್ತರಿಸಿದ್ದು ತುಂಬ ಹಿಡಿಸಿತು. ಅದಕ್ಕಾಗಿ ನಿಮಗೆ ಅಭಿನಂದನೆ.
ಮೊನ್ನೆ ಶಿಕಾಗೊದಲ್ಲಿ ’ಅಕ್ಕ’ ಸಮ್ಮೇಳನದಲ್ಲೂ ನನಗೆ ಭೇಟಿಯಾದ ಸುಮಾರಷ್ಟು ಅಮೆರಿಕನ್ನಡಿಗ ಹಿರಿತಲೆಗಳು ನಾನು ಎಷ್ಟೇ ಕನ್ನಡದಲ್ಲಿ ಉತ್ತರಿಸಿದರೂ ಇಂಗ್ಲೀಷಲ್ಲೇ ಮಾತನಾಡುತ್ತಿದ್ದರು. ಹೋಗಲಿ, ಅವರಾದರೂ ದಶಕಗಳಿಂದ ಅಮೆರಿಕದಲ್ಲಿರುವವರು, ಕನ್ನಡದ ನಿತ್ಯಸಂಪರ್ಕ ಅಷ್ಟಾಗಿ ಇಲ್ಲದವರು ಎಂದು ಪರಿಗಣಿಸಬಹುದು. ಆದರೆ ತಿಂಗಳುಗಳ ಮಟ್ಟಿಗೆ ಭಾರತದಿಂದ ಬಂದ ಹಿರಿಯರೂ, ಇಲ್ಲಿ ಕನ್ನಡ ಮಾತಾಡುವ ಕನ್ನಡಿಗರೊಡನೆ ಇಂಗ್ಲೀಷಲ್ಲೇ ವ್ಯವಹರಿಸಬಯಸುತ್ತಾರೆಂದರೆ ಸ್ವಲ್ಪ ಆಶ್ಚರ್ಯವೇ. ಹಾಗೆ ನಿಮಗೆ ಅನುಭವವಾದದ್ದನ್ನು ನೀವು ಸಂಪದಿಗರೊಂದಿಗೆ ಹಂಚಿಕೊಳ್ಳಬೇಕೆಂದು ಬಯಸಿದ್ದು ಸಹಜವೇ.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ನಮಸ್ಕಾರ ಜೋಷಿಗಳೆ,
ಹೀಗಾಗಿ ನಿಮ್ಮ ಮಾತಿನ ಬಲೆಗೆ ಬೀಳದೆ ತಣ್ಣಗೆ ಉತ್ತರಿಸಿದೆ. ಅಭಿನಂದನೆಗೆ ಧನ್ಯವಾದಗಳು 
ನಿಮ್ಮದು (ನನ್ನಂತೆಯೆ) ಸ್ವಲ್ಪ ತರಲೆ ಬುದ್ಧಿ ಅಂತ ನನಗೆ ಗೊತ್ತು
~ಕಲ್ಪನ
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಹ್ಹ, ಹ್ಹ, ನಿಮ್ಮಿಬ್ಬರ ಮಾತುಕತೆ ಚೆನ್ನಾಗಿದೆ.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಹಱುಕು ಮುಱುಕು ಎಂದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು. ಎಲ್ಲವನ್ನು ಹಾಸ್ಯ ಮಡುವಾಗ ನಾಲಿಗೆ ನಡುಗಿಸಿ ಹೇೞಿದರೆ ಅಲ್ಲವೇ. ಸುಮ್ಮನೆ ಕನ್ನಡ ಮಾತಾಡಿ.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಮಾಡುವಾಗ(ಮಡುವಾಗ ಅಲ್ಲ) ಎಂದು ತಿದ್ದಿಕೊಳ್ಳಿ.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಪಾಪ, ಅವರು ಈಗ ಇಂಗ್ಲಿಷ್ ಕಲೀತ ಇದಾರೆ ನಿಮ್ಮಂಥ ಕನ್ನಡಿಗರ ಸಹಾಯದಿಂದ...ಮನ್ನಿಸಿ ಬಿಡಿ ...
ಅದು ನನಗೆ 'false prestige' ಅನ್ನಿಸಲಿಲ್ಲ...
ಅವರು ಬೇರೆ ಕಡೆ ಇಂಗ್ಲಿಷ್ ಬಳಸ ಬೇಕಾದ ಸಂಧರ್ಭದಲ್ಲಿ ನಿಮ್ಮಗಳ ಸಹಾಯದಿಂದ ಕಲಿತ ಇಂಗ್ಲಿಷ್ ಬಳಕೆ ಆಗತ್ತೆ... ಅಲ್ಲವಾ?
ಹೌದು ಕನ್ನಡಿಗರೊಂದಿಗೆ ಕನ್ನಡ ಮಾತಾಡಿದರೆ ಚೆನ್ನ ಒಪ್ಪಿದೆ...
ಆದರೆ ಕನ್ನಡಿಗರಲ್ಲಿ "ನಮ್ಮವರು - ಇವರ ಮುಂದೆ ಇಂಗ್ಲಿಷ್ ತಪ್ಪಾದರೂ ತಪ್ಪಿಲ್ಲ " ಎಂಬ ಭಾವನೆಯಿಂದ ಅಂತ ಇಂಗ್ಲಿಷ್ ಬಳಸಿರಬಹುದು...ಆಲ್ವಾ?
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ನನಗೆ ಈ ಹಿರಿಯರು ಇಂಗ್ಲೀಶಿನಲ್ಲಿ ಮಾತಾಡೋದು ಆಶ್ಚರ್ಯ ಅನ್ನಿಸೋದೇ ಇಲ್ಲ. ಇದು ಅಮೇರಿಕಾ ಯಾಕೆ, ಕರ್ನಾಟಕದಲ್ಲಿಯೇ ಇದನ್ನು ಕಾಣಬಹುದು. ನೀವು ಯಾರದೋ ಮನೆಗೆ ಸತ್ಯನಾರಾಯಣ ಪೂಜೆಗೋ, ಮದುವೆಗೋ ಮೊಟ್ಟಮೊದಲ ಬಾರಿಗೆ ಹೋಗಿದ್ದೀರ ಅಂತಿಟ್ಕೊಳ್ಳಿ. ನಿಮ್ಮನ್ನು ಮೊದಲ ಬಾರಿಗೆ ನೋಡುತ್ತಿರುವವರು ಇಂಗ್ಲೀಶಿನಲ್ಲೇ ಮಾತಾಡಿಸ್ತಾರೆ.
ಉದಾಹರಣೆಗೆ, ನಿಮ್ಮ ಸ್ನೇಹಿತ, ನಿಮ್ಮನ್ನು ಅವರ ತಂದೆಗೆ ಪರಿಚಯ ಮಾಡಿಸುತ್ತಾನೆ ಅಂತಿಟ್ಟುಕೊಳ್ಳಿ.
ಅಣ್ಣ, ಇವನು ನಮ್ ಕೊಲೀಗು, ಸುನೀಲ್ ಅಂತ. (ಎಷ್ಟೋ ವೇಳೆ, ತಪ್ಪು ಸ್ನೇಹಿತನಲ್ಲಿ ಇರತ್ತೆ, ಅಣ್ಣ, "ದಿಸ್ ಈಸ್ ಸುನೀಲ್" ಅಂತ ಪರಿಚಯ ಮಾಡಿದರೆ ಮುಗಿದೇ ಹೋಯ್ತು. ಇಂಗ್ಲೀಷೇ ಗತಿ, ಸೋ, ಈಗ ಕಲ್ಪನ ಅವರಿಗೆ ಪ್ರಶ್ನೆ, ನಿಮ್ಮ ಮತ್ತು ಆ ಹಿರಿಯರ ಪರಿಚಯ ಹೇಗೆ ಆಯಿತು ?).
"ಓಹ್, ಈಸ್ ಇಟ್, ಹಲೋ. ಫ್ರಂ ಹವ್ ಲಾಂಗ್ ಹ್ಯಾವ್ ಯು ಬೀನ್ ವರ್ಕಿಂಗ್ ದೇರ್".. ಅದೂ ಇದೂ ಶುರುವಾಗತ್ತೆ. ಒಂದು ವೇಳೆ, ಸ್ನೇಹಿತನ ಕಸಿನ್ಸ್ ಮತ್ತು ಸ್ನೇಹಿತನ ತಂದೆ ಇಬ್ಬರೂ ಒಟ್ಟಿಗೆ ಇದ್ದಾರೆ ಅಂತಿಟ್ಕೊಳ್ಳಿ, ಆಗ ಏನಾಗತ್ತೆ ಅಂದ್ರೆ, ಸ್ನೇಹಿತನ ಕಸಿನ್ಸ್ ಇಂಗ್ಲೀಷಲ್ಲಿ ಮಾತಾಡಿಸ್ತಾರೆ. ಆಗ "ಈ ಚಿಕ್ಕ ಹುಡುಗರಿಗೆ ನಾನೇನು ಕಮ್ಮಿ" ಅಂತ ತೋರಿಸಿಕೊಳ್ಳುವ ಒಳಮನಸ್ಸಿನಿಂದ ಹಿರಿಯರೂ ಇಂಗ್ಲೀಷ್ ಮಾತಾಡ್ತಾರೆ.
ಯಾಕೆ ಹಾಗೆ ಮಾತಾಡ್ತಾರೆ ?
ಅವರು ಹಾಗೆ ಇಂಗ್ಲೀಶಿನಲ್ಲಿ ಮಾತಾಡದಿದ್ದರೆ, "ಇವರು ಯಾರೋ ಮುದಿಗೂಬೆ, ಒಂಚೂರೂ ಕಾಂಟೆಂಪೊರರಿ ಟೇಸ್ಟ್ ಇಲ್ಲ ಅಂತ ನಾನು ಅಂದ್ಕೊಂಡು ಅವರನ್ನು ಮುಂದೆ ಮಾತಾಡಿಸದೇ ಇರಬಹುದು" ಎಂಬ ಶಂಕೆ ಅವರದು.
ತಪ್ಪು ಹಿರಿಯರದಲ್ಲ, ನಮ್ಮದು. ಬೇಕಿದ್ರೆ, ನೋಡಿ. ನಾವು ನಮಗೆ ತಿಳಿದೋ ತಿಳಿಯದೆಯೋ ಎಂತಹ ಪರಿಸ್ಥಿತಿ ನಿರ್ಮಾಣ ಮಾಡ್ತಾ ಇರ್ತೀವಿ ಅಂದ್ರೆ. ನಮ್ಮನ್ನು ಕನ್ನಡದಲ್ಲಿ ಮಾತಾಡಿಸಿದವರನ್ನು ನಾವು ಮತ್ತೊಮ್ಮೆ ಮಾತನಾಡಿಸುವುದೇ ಇಲ್ಲ, ಅದೇ ಇಂಗ್ಲೀಶಿನಲ್ಲಿ ಮಾತಾಡಿಸಿದವರನ್ನು ಮಾತಾಡಿಸುತ್ತಲೇ ಇರ್ತೀವಿ!!!!!!!
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಮುಖ್ಯವಾಗಿ ಹೇಳಬೇಕಾದ್ದು, ಚಿಕ್ಕವರಿಗೆ ಮಾಡಕ್ಕೆ ಕೆಲಸ ಇಲ್ಲ, ಚಿಕ್ಕಂದಿನಿಂದ ಇಂಗ್ಲೀಶಲ್ಲಿ ಮುಳುಗಿ ತೇಲಿರ್ತೀವಲ್ಲ, ಅದಕ್ಕೆ ಕನ್ನಡ ಅಂದ್ರೆ ನಾಸ್ಟಾಲ್ಜಿಯಾ, ಆಕರ್ಷಣೆ. ಆದರೆ ಹಿರಿಯರಿಗೆ, ಕನ್ನಡವೇ ಬದುಕಾಗಿದ್ದರಿಂದ, ಅವರಿಗೆ ಕನ್ನಡ ನಾಸ್ಟಾಲ್ಜಿಕ್ ಎಂಟಿಟಿ ಅಲ್ಲ, ಅವರಿಗೆ ದಿನಬೆಳಗಾದರೆ ಅದೇ. ಅವರು ಇಂಗ್ಲೀಶ್ ಕಲಿಯದಿದ್ದರೆ, ದೊಡ್ಡವರು, ಬರೀ, ಹೆರಿಗೆ, ಬಾಣಂತನ, ಮೊಮ್ಮಕ್ಕಳನ್ನು ಆಡಿಸು, ಅಡುಗೆ, ಪೂಜೆ ಇವುಗಳಿಗಷ್ಟೇ ಸೀಮಿತ ಮಾಡ್ತೀವಿ. ಇದು ಮೇಯ್ನ್ ಪ್ರಾಬ್ಲಮ್ಮು.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಸುನೀಲರೆ,
ನೀವ್ಯಾಕೋ ತುಂಬ ಭಾವುಕರಾಗಿ ಇಲ್ಲಿ ಬರೀತಾಯಿದ್ದೀರ ಅನ್ನಿಸ್ತು.
ಸಾಮಾನ್ಯವಾಗಿ ಇಂಗ್ಲೀಷು ಗೊತ್ತಿಲ್ಲದವರು ಪೆದ್ದರು ಎಂಬ ಕಲ್ಪನೆ ಸಮಾಜದಲ್ಲಿರುವ ವಿಷಯ ನನಗೆ ಗೊತ್ತಿರುವುದೆ. ಆದ್ರೆ, ಇದು ನಡೆದದ್ದು ಬರಿಯ ಕನ್ನಡದವರೆ ಇರುವ, ನಾನೂ ಕನ್ನಡದವಳು ಎಂದು ತಿಳಿದಿರುವ, ನಾನು ಕನ್ನಡದಲ್ಲೇ ಮಾತನಾಡಿಸುತ್ತಿರುವ, ಇಂಗ್ಲೀಷಿನ ಅವಶ್ಯಕತೆಯೇ ಇಲ್ಲದ ಸಂದರ್ಭದಲ್ಲಿ!
ಮತ್ತೆ ಬಾಣಂತನಕ್ಕೆ ಅಮ್ಮ-ಅಪ್ಪನನ್ನು ಭಾರತದಿಂದ ಕರೆಸಿಕೊಳ್ಳುವುದು ಇಲ್ಲಿ ಯಾವಾಗಲೂ ನಡೆಯುವ ಸಾಮಾನ್ಯ ವಿಷಯ. ಬೇಸಿಗೆ ರಜೆಯಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಸಹ ತಾತ-ಅಜ್ಜಿಯರು ಬರುತ್ತಾರೆ. ಇದೂ ಇಲ್ಲಿ ವಾಡಿಕೆ. ಹಿರಿಯರ ಶೋಷಣೆ ನಡೆಯುತ್ತಿದೆ ಅಂದುಕೊಂಡು ನೀವು "ಗುರ್ರ್" ಅನ್ನಬಹುದು. ಆದ್ರೆ, ಇದು ಒಂತರಹ ಹಿರಿಯರು-ಕಿರಿಯರು ಮಾಡಿಕೊಂಡಿರುವ mutually beneficial ಹೊಂದಾಣಿಕೆ.
~ಕಲ್ಪನ
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ನೀವಿಲ್ಲಿ ಬೞಸಿದ ಗುರ್ರ್ ಬದಲು ನಾಲಿಗೆ ನಡುಗಿಸುವ ಗುಱ್ ಎಂದು ಬೞಸಿದರೆ ಚೆನ್ನಿತ್ತೇನೋ? ಗುಱುಗುಱು ಗುಱುಗುಟ್ಟುವ ಜನರಿರುತ್ತಾರೆ. ಅದಕ್ಕೆಲ್ಲ ತಲೆಕೆಡಿಸಿಕೊಳ್ಳಬೇಡಿ. ಸುಮ್ಮನೆ ಕನ್ನಡ ಮಾತಾಡಿ.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಅಯ್ಯೋ ಕನ್ನಡಕಂದರೆ, ನೀವು ಬರೆದಿರುವ ಅಕ್ಷರಗಳನ್ನು ನಾನು ಮೊದಮೊದಲು ಫಾಂಟ್ ತೊಂದರೆ ಅಂತಂದ್ಕೊಂಡೆ
ಈಗ ಅವು ಹಳೆಗನ್ನಡ ಅಕ್ಷರಗಳೇನೋ ಅನ್ನಿಸ್ತಾ ಇದೆ. ಹೌದೆ? ಹಾಗಾದ್ರೆ ಇದನ್ನು ಕೀಲಿಮಣೆಯಲ್ಲಿ ಬರೆಯುವುದು ಹೇಗೆ?
~ಕಲ್ಪನ
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ನೋಡಿ, ಇನ್ನೊಂದು ದೊಡ್ಡ ಸಮಸ್ಯೆ, ನಾವು "ನಮ್ಮ ಹಿರಿಯರು ಕನ್ನಡ ಉಳಿಸಬೇಕು" ಅಂತ ಎಕ್ಸಪೆಕ್ಟ್ ಮಾಡ್ತಾ ಇದ್ದೀವಿ. ಅಲ್ಲ ನಾವುಗಳು ಕನ್ನಡದ ಬಗ್ಗೆ ಎಷ್ಟು ಸೋಲೊಪ್ಪಿಕೊಂಡಿದ್ದೀವಿ ಅಂದ್ರೆ, ತಪ್ಪು ನಮ್ಮಲ್ಲೇ ಇಟ್ಕೊಂಡು, ಹಿರಿಯರು ಕನ್ನಡ ಮಾತಾಡಲ್ಲ ಅಂತೀವಿ. ಅಲ್ಲ, ಹಿರಿಯರು ಯಾಕ್ರೀ ಕನ್ನಡ ಮಾತಾಡ್ಬೇಕು. ಯಾರೋ ಮಗಳು, ಸೊಸೆ, ಮೊಮ್ಮಕ್ಕಳಿಗೆ "ಟ್ರೆಡೀಶನ್ ಇಂಡಿಯನ್ ಬಾಣಂತನ" ಮಾಡಕ್ಕ :ಗುರ್ರ್:
@ಮುರಳಿ, ಎಲ್ಲಿರುವೆ ?
ಅಲ್ಲ, ನಾವು ಮಾತ್ರ, MNC, GIMNC ಸೇರಿ, ಟಸ್ಸಪುಸ್ಸ ಇಂಗ್ಲೀಶ್ ಹೊಡೆದು, ಹಣ ಸಂಪಾದಿಸ್ತೀವಿ. ಅಲ್ಲ, ಹಿರಿಯರಿಗೆ ಬೇಕಿರುವ ಒಂದೆರೆಡು ಒಳ್ಳೆಯ ಮಾತು ಆಡೋಕ್ಕೆ ನಮಗೆ ಟೈಂ ಇದ್ಯಾ. ನಾವು ಚಿಕ್ಕವರಿದ್ದಾಗಿನಿಂದ, ಇಂಗ್ಲೀಶ್ ಮಾತಾಡುವವರೊಡನೆ ಹೆಚ್ಚು ಹೆಚ್ಚು ಮಾತಾಡುವುದನ್ನು ನೋಡುತ್ತಲೇ ಬರುವ ಹಿರಿಯರು, ಇಂಗ್ಲೀಶ್ ಮಾತಾಡಿದರೆ, ಚಿಕ್ಕವರು ನಮ್ಮನ್ನು ಮಾತಾಡಿಸ್ತಾರೆ ಅಂದ್ಕೊಳ್ತಾರೆ. ಇಂಗ್ಲೀಶಿನಿಂದ ಅವರ ಆಸೆಯೂ ಪೂರೈಸುವಂತಾದರೆ ಕಲಿಯಲಿ ಬಿಡಿ. ಕನ್ನಡದ ಬಗ್ಗೆ ಅಷ್ಟೊಂದು ಪ್ರೀತಿ ಇದ್ರೆ, ನಾವು ನೀವು ಕನ್ನಡ ಬೆಳಸ್ಬೇಕು.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಈ ಹುಚ್ಚೇ ಕೆಲವು ಕನ್ನಡಪದಗಳು ಮಱೆಯಾಗಲು ಕಾರಣವಿರಬಹುದೇ?
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ಇದಕ್ಕೆ ತದ್ವಿರುದ್ದವಾಗಿ ಒಂದು ಪ್ರಸಂಗ ನಾನು ಇತ್ತೀಚೆಗೆ ನೊಡಿದೆ. ಒಂದು ಔಷದಿ ಅಂಗಡಿ ಯಲ್ಲಿ 60 ವರ್ಷ ದಾಟಿದ ಒಬ್ಬ ನನ್ನ ಪರಿಚಯದ ವೈದ್ಯರಿದ್ದರು ಅವರಲ್ಲಿ ಒಬ್ಬ ಹುಡಿಗಿ ಬಂದು ಯಾವುದೋ ವಿಳಾಸ ಕೇಳಿದಳು. ಅವರ ನಡುವೆ ನಡೆದ ಸಂಬಾಷಣೆ ಯಲ್ಲಿ ವೈದ್ಯರು ಬರಿ ಕನ್ನಡದಲ್ಲಿ ಉತ್ತರ ಕೊಟರೆ ಹುಡುಗಿ ಬರೀ ಇಂಗ್ಲೀಷನಲ್ಲಿ ಮಾತನಾಡಿದಳು. ಆ ವದ್ಯರು ಲಂಡನಿನಲ್ಲಿ ಕೆಲವು ವರ್ಷ ಕೆಲಸ ಮಾಡಿದವರು.
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
ನಮ್ಮ ಮನೆಯ ಬಳಿ ಈ ರೀತಿಯ ಒಬ್ಬರು ಡಾಕ್ಟರ್ ಇದ್ದಾರೆ
ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
rx=ಱ್, Lx=ೞ್. ಉೞಿದಂತೆ a=ಅ, A, aa=ಆ, ಇತ್ಯಾದಿ
ದೊಡ್ಡಸುೞಿಯಲ್ಲಿ ಹೊೞೆ ಹರಿಯುವಾಗ ಮಾಡುವ ಸದ್ದು ಜುೞುಜುೞು.
ಬೆಕ್ಕು ಪಾತ್ರೆ ಕೆರೆಯುವಾಗ ಕೇಳುವ ಸದ್ದು ಪಱಪಱ
ನನ್ನ ಱ ಮತ್ತು ೞ ಉಚ್ಚರಿಸುವುದು ಹೇಗೆ ಓದಿ.