ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › kadakolla05 ರವರ ಬ್ಲಾಗ್

ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

August 22, 2008 - 4:24pm — kadakolla05

ನಾನು ರಾಮಾಯಣ ಮಹಾಭಾರತ ಎರಡೂ ಸರಿಯಾಗಿ ಓದಿಲ್ಲ. ಕೇವಲ ಶಾಲೆಯಲ್ಲಿ ಕೇಳಿದ ಕಥೆ, ಅಲ್ಲಿ ಇಲ್ಲಿ ಕೇಳಿದ ಹರಿಕಥೆ. ಸ್ವಲ್ಪ ಅಜ್ಜ ಹೇಳಿದ್ದು ಇಷ್ಟು ಮಾತ್ರ ನನಗೆ ತಿಳಿದಿರುವ ರಾಮಾಯಣ, ಮಹಾಭಾರತ. ನನಗೆ ಈಗ ಓದು ಬೇಕೆನ್ನುವ ಹಂಬಲ ತುಂಬಾ ಇದೆ. ಆದರೆ ಸಮಸ್ಯೆ ಏನಂದರೆ ರಾಮಾಯಣ ಮಹಾಭಾತಕ್ಕೆ ಸಂಬಂದಿಸಿದಂತೆ ನೂರಾರು ಹೊತ್ತಿಗೆ ಅಂಗಡಿಯಲ್ಲಿ ಸಿಗುತ್ತಿವೆ. ಯಾವುದನ್ನು ಕೊಳ್ಳುವುದು? ಇದು ನನ್ನ ಬುದ್ಧಿಗೆ ಸರಿಯಾಗಿ ಅರಿವಾಗುತ್ತಿಲ್ಲ. ನನಗೆ ತುಂಬಾ ಆಳವಾಗಿ ಅಧ್ಯಯನ ಮಾಡುವ ಮನಸ್ಸಿದೆ. ಸರಳವಾಗಿ, ಸಮಗ್ರವಾಗಿರುವ ಪುಸ್ತಕಗಳ ಬಗ್ಗೆ ನನಗೆ ಯಾರಾದರು ತಿಳಿಸುವಿರ? ಕನ್ನಡದಲ್ಲಿ ಬರೆದವರ ಹೆಸರು, ಪ್ರಕಾಶಕರು, ಸಿಗುವ ಸ್ಥಳ. ಇಷ್ಟೂ ಮಾಹಿತಿಗೆ ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವೆನು.
ಮುಂಚಿತವಾಗಿ ನಿಮ್ಮೆಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತ.

ಕುಮಾರಸ್ವಾಮಿ.ಕಡಾಕೊಳ್ಳ
ಪುಣೆ

  • ಚರ್ಚೆ ಹಾಗು ಸಲಹೆ
~.~
  • kadakolla05 ರವರ ಬ್ಲಾಗ್
  • Login or register to post comments
  • 291 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 22, 2008 - 4:34pm — shreekant.mishrikoti

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

shreekant.mishrikoti's picture

ನಾನು ಶಿಫಾರ್ಸು ಮಾಡೋದು ನಾಲ್ಕು ಪುಸ್ತಕ
೧) ಆದಿಕವಿ ವಾಲ್ಮೀಕಿ - ಮಾಸ್ತಿ ವೆಂಕಟೇಶ ಅಯ್ಯಂಗಾರರು
೨) ಶ್ರೀರಾಮ ಪಟ್ಟಾಭಿಷೇಕ - ಮಾಸ್ತಿ ವೆಂಕಟೇಶ ಅಯ್ಯಂಗಾರರು
೩) ಪೂರ್ವ ಸೂರಿಗಳೊಡನೆ
೪) ಸೀತೆಯ ಭವಿಷ್ಯ - ಇದು ತೆಲುಗಿನಿಂದ ಅನುವಾದವಾದದ್ದು . ನಾರ್ಲ ...ರಾವು ಅವರದ್ದಿರಬೇಕು

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2008 - 4:43pm — madhava_hs

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

madhava_hs's picture

ನನಗೆ ಅನಿಸಿದ್ದು:
೧. ಮಹಾಭಾರತ. - ವಚನಭಾರತ ಬೈ ಎ.ಆರ್. ಕೃಷ್ಣಶಾಸ್ತ್ರಿ.
೨. ಕುಮಾರವ್ಯಾಸಭಾರತ.
ಪೂರಕವಾಗಿ ನೀವು ಯಾವುದಾದರೂ ಪುರಾಣ ಗ್ರಂಥವನ್ನೋದಲೇಬೇಕು. ಇಲ್ಲದಿದ್ದರೆ ಮೂಲವಿಷಯಗಳು ದಾರಿತಪ್ಪಿಸಿಬಿಡುತ್ತವೆ!.
೩. ರಾಮಾಯಣ - ಗೋರಖ್ ಪುರ ಗೀತಾಪ್ರೆಸ್ ನ ಯಾವುದಾದರೂ ಕನ್ನಡ ಅನುವಾದ ಪುಸ್ತಕಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2008 - 5:13pm — ಶ್ರೀನಿಧಿ

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

ಶ್ರೀನಿಧಿ's picture

ಮಹಾಭಾರತದ ಬಗ್ಗೆ ಮಾಧವ ಅವರು ಸೂಚಿಸಿದ ಪುಸ್ತಕ ಸರಿಯಾಗಿದೆ.

ರಾಮಾಯಣಕ್ಕೆ,

೧. ರಾಜಾಜಿಯವರ ರಾಮಾಯಣ
೨. ನಾರಾಯಣಾಚಾರ್ಯ ಅವರ ರಾಮಾಯಣ ಪಾತ್ರ ಪ್ರಪಂಚ

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 22, 2008 - 10:38pm — hamsanandi

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

hamsanandi's picture

ಭಾರತ ದರ್ಶನ ಪ್ರಕಾಶನದವರು, ಮಹಾಭಾರತ ಹಾಗೂ ರಾಮಾಯಣ ಎರಡರದ್ದು ಪೂರ್ಣಪಾಠವನ್ನು ಹೊರತಂದಿದ್ದಾರೆ. (ಮಹಾಭಾರತವು ೩೦+ ಸಂಪುಟಗಳಲ್ಲಿದೆ ಎಂದು ನೆನಪು)

ಇದರ ಪ್ರತಿಗಳು ದೊರೆಯುತ್ತಿವೆಯೋ ಇಲ್ಲವೋ, ನನಗೆ ತಿಳಿಯದು.

-ಹಂಸಾನಂದಿ
ಹರಿದಾಸ ಸಂಪದ:- http://haridasa.in/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:01am — savithasr

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

savithasr's picture

ಕುವೆಂಪುರವರ "ಶ್ರೀ ರಾಮಾಯಣ ದರ್ಶನಂ" ಓದಲು ಸರಳವಾಗಿದೆ.

ಮಹಾಭಾರತದ ಬಗ್ಗೆ "ಕುಮಾರವ್ಯಾಸಭಾರತ" ಓದಿ.

-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 9:33am — mahesha

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

mahesha's picture

Smiling ರೀ ಇವೆರಡು ಹೊಸಗನ್ನಡದಲ್ಲಿ ಇಲ್ಲ,

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 26, 2008 - 12:58pm — savithasr

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

savithasr's picture

ಕುಮಾರಸ್ವಾಮಿಯವರು ಹೊಸಗನ್ನಡದ ಪುಸ್ತಕಾನೇ ಬೇಕು ಅಂತೇನು ಬರೆದಿಲ್ಲ...
-ಸವಿತ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 5:20pm — kadakolla05

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

kadakolla05's picture

" ಹೊಸಗನ್ನಡದ ಹೊತ್ತಿಗೆ "

@@ ಮಹೇಶ,
ನಿಮ್ಮ ತಿರುಬರಹಕ್ಕೆ ನನ್ನಿ. ನನಗೆ ಬೇಕಿರುವುದು ಅಚ್ಚಕನ್ನಡ ಹೊತ್ತಿಗೆಗಳೆ. ನಾನು ಈ ಮಾತನ್ನು ನನ್ನ ಬರಹದಲ್ಲಿ ಬರೆದಿರಲಿಲ್ಲ. ಇದು ನನ್ನ ತಿಳಿಗೇಡಿತನ.

@@ ಸವಿತ,

ಹೌದು ನಾನು ಅಚ್ಚಕನ್ನಡ ಹೊತ್ತಿಗೆ ಬೇಕೆಂದು ನನ್ನ ಬರಹದಲ್ಲಿ ಬರೆದಿರಲಿಲ್ಲ.
ನಿಮಗೆ ಗೊತ್ತಿರುವ ಬೇರೆಯಾವುದಾದರು ಅಚ್ಚಕನ್ನಡ ಹೊತ್ತಿಗೆ ಬಗ್ಗೆ ತಿಳಿಸಿ.

ನನ್ನಿ
ಸ್ವಾಮಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
September 9, 2008 - 5:03pm — kadakolla05

ಉ: ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ

kadakolla05's picture

ಸವಿತ,
ಈ ಹೊತ್ತಿಗೆಯ ಬಗ್ಗೆ ತಿಳಿಸಿದ್ದಕ್ಕೆ ನನ್ನಿ.

ನಾನು ಕುವೆಂಪುರವರ "ರಾಮಾಯಣ ದರ್ಶನಂ" ಓದಿರುವೆ. ಅದರಲ್ಲಿ ತುಂಬಾ ಉತ್ಪ್ರೇಕ್ಷೆ ಇದೆ. ಇನ್ನೊಂದು ಹೊತ್ತಿಗೆಯ ತುಂಬಾ ಸಂಸ್ಕೃತ ನುಡಿಗಳು ತುಂಬಿಕೊಂಡಿವೆ. ನನ್ನ ಮನಸ್ಸಿಗೆ ಓದುವಾಗ ಯಾಕೋ ಗೆಲುವೆನಿಸಲಿಲ್ಲ. ಬೇರೆಯಾವುದಾದರು ಹೊತ್ತಿಗೆ ಇದ್ದರೆ ತಿಳಿಸಿ.

ನನ್ನಿ
ಸ್ವಾಮಿ
ಪುಣೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾಮಾಯಣ ಹಾಗು ಮಹಾಭಾರತ ....ಹೊತ್ತಿಗೆ
  • ಮಿನಿ ರಾಮಾಯಣ
  • ಕವನ ಸಂಕಲನ
  • ಮಹಾಭಾರತ
  • ರಾಮಾಯಣ ಕಟ್ಟು ಕಥೆಯೇ??
Syndicate content

ಲೇಖಕರು

kadakolla05's picture

ಪೂರ್ಣ ಹೆಸರು
ಕುಮಾರಸ್ವಾಮಿ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
  • savithasr
    ಉ: ನನ್ನ ಮೃದಂಗಾಭ್ಯಾಸ
    December 2, 2008 - 8:44am
  • karihaida
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 8:38am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:20am
  • mahesha
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 8:18am
  • venkatesh
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 7:24am
  • hamsanandi
    ಉ: ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
    December 2, 2008 - 6:31am
  • pinkzangel
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 2, 2008 - 2:57am
  • kalpana
    ಉ: ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
    December 2, 2008 - 1:25am
ಇನ್ನಷ್ಟು
ಈಗಿನಂತೆ 10 ಸದಸ್ಯರು ಮತ್ತು 366 ಅತಿಥಿಗಳು ಆನ್ಲೈನ್ ಇರುವರು.


ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ ।
ಜಗಕೆ ಕಾಣಿಪುದೊಂದು, ಮನೆಯ ಜನಕೊಂದು ।।
ಸೊಗಸಿನೆಳಸಿಕೆಗೊಂದು, ತನ್ನಾತ್ಮಕ್ಕಿನ್ನೊಂದು ।
ಬಗೆಯೆಷ್ಟೊ ಮೊಗವಷ್ಟು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator