ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಸಾಹಿತ್ಯಾಭಿರುಚಿ
ಕನ್ನಡ ಸಾಹಿತ್ಯ ಅಭಿರುಚಿ
ಜನಪದ ಲೆಕ್ಕ
ಜಾಣ್ಮೆ ಲೆಕ್ಕ
ಇಬ್ರ ಅಣ್ಣ ತಮ್ಮ. ಇಬ್ರ ಹತ್ರು ತಲಾ ಮೂವತ್ತ ಲಿಂಬಿಹಣ್ಣ. ಅಣ್ಣ ರೂಪಾಯ್ಕ ಎರಡು ಮಾರಾಟಕ್ಕ ಹಚ್ಚಿದ. ತಮ್ಮ ರೂಪಾಯ್ಕ ಮೂರು ಹಚ್ಚಿದ. ಇಬ್ರು ಒಂದ ಕಡೆ ಕೂತು ಮಾರತಿದ್ದರು. ಅಣ್ಣಂಗೇನೋ ತುರ್ತು ಕೆಲಸ ಬಂತು. ತಮ್ಮಗ
ಹೇಳಿ ಹೋದ. ತಮ್ಮ ಎರಡೂ ಸೇರಿಸಿ ಎರಡ ರೂಪಾಯ್ಕ ಐದರಂಗ ಮಾರಿದ. ಒಟ್ಟು ಇಪ್ಪತ್ನಾಲ್ಕು ರೂಪಾಯ್ ಬಂದ್ವು.
ಅಣ್ಣಗ ಹದಿನೈದು ಕೊಟ್ಟ. ತಮ್ಮಗ ಒಂಬತ್ತ ಉಳಿದವು. ಖರೆ ಅಂದ್ರ ತಮ್ಮಗ ಹತ್ತು ರೂ. ಬರಬೇಕಿತ್ತು. ಇನ್ನೊಂದು ರೂಪಾಯ್ ಎಲ್ಲಿ ಹೋಯ್ತು ! ರೂಪಾಯ್ಕ ಎರಡರಂಗ/ಮೂರಂಗ ಮಾರಿದ್ರೂ ಒಂದ. ಎರಡು ರೂಪಾಯ್ಕ ಐದ ಮಾರಿದರೂ
ಒಂದ. ಹಿಂಗಿದ್ದೂ ಒಂದ ರೂ. ಕಡಿಮಿಯಾಕ ಬಂತು ! ಹುಡಿಕಿ ಕೊಡತೀರಿ ?
ವಿಚಿತ್ರಾನ್ನದಿಂದ ಒಂದೀಟ ಹೊರಗ ಬಂದು ತೆಲಿ ಕೆಡಸಗೋರ್ರಿ.
ನಿಮಗೆಲ್ಲಾರಿಗೂ ನಮ್ಮ ನಮಸ್ಕಾರಿ.
ಚಂದ್ರಗೌಡ ಕುಲಕರ್ಣಿ

- kadadalli ರವರ ಬ್ಲಾಗ್
- Login or register to post comments
- 199 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಜನಪದ ಲೆಕ್ಕ
ತಪ್ಪು ಲೆಕ್ಕದಾಗ ಐತಿ.
ರೂಪಾಯ್ಕ ಎರಡರಂಗ/ಮೂರಂಗ ಮಾರಿದ್ರೂ ಒಂದ. ಎರಡು ರೂಪಾಯ್ಕ ಐದ ಮಾರಿದರೂ ಒಂದ.
ಎರಡೂ ಒಂದೇ ಅಲ್ಲ.
ರುಪಾಯಿಗೆ ೩ => ಒಂದಕ್ಕೆ ೧/೩
ರುಪಾಯಿಗೆ ೨ => ಒಂದಕ್ಕೆ ೧/೨
ಸರಾಸರಿ = (೧/೩ + ೧/೨)/೨ = ೫/೧೨
ಹೀಗೆ ತಮ್ಮ ೫ ರುಪಾಯಿಗೆ ೧೨ ನಿಂಬೇಹಣ್ಣು ಮಾರಬೇಕಿತ್ತು. ೨ ರುಪಾಯಿಗೆ ಐದಲ್ಲ.
ಸರೀನಾ?
ಕೀರ್ತಿ ಕಿರಣ್ ಎಂ
ಉ: ಜನಪದ ಲೆಕ್ಕ
ಕೀರ್ತಿ ಕಿರಣ್ ,
ನಿನ್ನ ಉತ್ತರ ಸರಿ ಐತಿ.
ಚಂದ್ರಗೌಡ ಕುಲಕರ್ಣಿ
ಉ: ಜನಪದ ಲೆಕ್ಕ
ಹಾಗೇ ಈ ಪ್ರಶ್ನೇನೂ ನೋಡಿ.
http://sampada.net/blog/keerthi2kiran/27/07/2008/10373
ಕೀರ್ತಿ ಕಿರಣ್ ಎಂ