ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › ismail ರವರ ಬ್ಲಾಗ್

ತೇಜೋಮಯ ಚಿಂತನೆಯೊಂದರ ತುಣುಕು

August 22, 2005 - 2:39pm — ismail

1999 ಮುಗಿಯುತ್ತಾ ಬಂದಾಗ ‘ಜನವಾಹಿನಿ’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ವರ್ಗಾವಣೆಯ ಆದೇಶವೂ ತಲುಪಿತ್ತು. ನನಗೆ ಅರ್ಥವಾಗದ ಕಾರಣಗಳಿಗಾಗಿ ನನ್ನನ್ನು ಚಿಕ್ಕಮಗಳೂರಿಗೆ ವರ್ಗಾಯಿಸಲಾಗಿತ್ತು. 1999ಕ್ಕೆ ವಿದಾಯ ಹೇಳಿದ ಮರುದಿನ ಅರ್ಥಾತ್ 2000ದ ಜನವರಿ ಒಂದನೇ ತಾರೀಕಿನಂದು ನಾನು ‘ಜನವಾಹಿನಿ’ ಪತ್ರಿಕೆಯ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಸೇರಿಕೊಂಡೆ. ನಾನು ಮೊದಲು ಕೆಲಸ ಮಾಡುತ್ತಿದ್ದ ಮಂಗಳೂರಿಗೆ ಹೋಲಿಸಿದರೆ ಚಿಕ್ಕಮಗಳೂರಿನಲ್ಲಿ ಅಕ್ಷರಶಃ ಕೆಲಸವಿರಲಿಲ್ಲ. ಇಲ್ಲಿ ನನಗೊಬ್ಬ ಸಹಾಯಕ ವರದಿಗಾರರೂ ಇದ್ದುದರಿಂದ ಇಲ್ಲದ ಕೆಲಸ ಇಲ್ಲವೇ ಇಲ್ಲ ಎಂಬಂತಾಗಿತ್ತು. ಇಂಥಾ ಹೊತ್ತಿನಲ್ಲಿ ಎಲ್ಲಾ ಪತ್ರಕರ್ತರೂ ಮಾಡುವಂತೆ ನಾನೂ Special storyಗಳ ಹುಡುಕಾಟದಲ್ಲಿ ಮುಳುಗಿದೆ.

ನನ್ನ ಮೂಲವೂ ಮಲೆನಾಡೇ. ಹಾಗಾಗಿ ಮಲೆನಾಡಿನ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಲಿಲ್ಲ. ಏಲಕ್ಕಿಯ ಅವನತಿ, ಕಾಫಿಯ ಬೆಲೆಯ ಕುಸಿತಗಳು ನನಗೆ ಕೇವಲ ಪತ್ರಿಕಾ ವರದಿಗಳಷ್ಟೇ ಆಗಿರಲಿಲ್ಲ. ಇವು ವೈಯಕ್ತಿಕ ಮಟ್ಟದಲ್ಲಿ ಕಾಡುತ್ತಿದ್ದ ಸಂಗತಿಗಳೂ ಆಗಿದ್ದವು. ಈ ವಿಷಯಗಳ ಆಳಕ್ಕಿಳಿದು ಅರ್ಥ ಮಾಡಿಕೊಳ್ಳುವ ಪ್ರಯತ್ನವೊಂದರ ಭಾಗವಾಗಿ ನಾನು ತೇಜಸ್ವಿಯವರನ್ನು ಭೇಟಿಯಾದೆ. ಮಲೆನಾಡಿನಲ್ಲಿ ಸಂಭವಿಸುತ್ತಿರುವ ಸಂಕೀರ್ಣ ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳ ಬೇಕಾದ ವಿಧಾನ ಯಾವುದಾಗಿರಬೇಕು ಎಂಬುದು ನನಗೆ ಸ್ಪಷ್ಟವಾಯಿತು.

ಅಟಲ್ ಬಿಹಾರಿ ವಾಜಪೇಯಿಯವರ ಸರಕಾರದ ಮೊದಲ ಬಜೆಟ್ಟನ್ನು ಅಂದಿನ ಹಣಕಾಸು ಸಚಿವ ಯಶವಂತ್ ಸಿನ್ಹಾ ಮಂಡಿಸುತ್ತಿದ್ದರು. ಈ ಹೊತ್ತಿಗೆ ಸರಿಯಾಗಿ ತೇಜಸ್ವಿಯವರ ದೂರವಾಣಿ ಕರೆ.

‘ಬಜೆಟ್ ನೋಡ್ತಿದಿಯಾ?’
‘ಹೌದು... ಸರ್ ’
‘ಮೀಸಲಾತಿ ವಿಷಯ ಅರ್ಥ ಆಯ್ತಾ?’
‘ಅದೇ ಸರ್, ಮೀಸಲಾತಿಯನ್ನು ಮುಂದುವರೆಸಿದ್ದಾರೆ.’
‘ನಾನೂ ಬಜೆಟ್ ನೋಡ್ತಿದೀನಿ. ಅದು ನನ್ಗೂ ಗೊತ್ತು. ಆದರೆ ಯಾವ ರೀತಿ ಮುಂದುವರಿಸಿದ್ದಾರೆ ಅಂತ ಗೊತ್ತಾಯ್ತಾ?’
‘......’
‘ಸರಕಾರೀ ನೇಮಕಾತಿಗೆ ತಡೆ ಒಡ್ಡಿದ್ದಾರೆ. ಪಬ್ಲಿಕ್ ಸೆಕ್ಟರ್ ಇಂಡಸ್ಟ್ರೀಸ್ ಎಲ್ಲಾ ಪ್ರೈವಟೈಸ್ ಮಾಡ್ತಿದ್ದಾರೆ. ಮೀಸಲಾತಿ ಮುಂದುವರಿಸುತ್ತಾರೆ ಅಂದರೆ ಏನರ್ಥ?’
‘…?...’
‘ಅಂದರೆ ಮೀಸಲಾತಿ ನೀತಿ ಮುಂದುವರಿಯುತ್ತೆ. ಆದರೆ ಮೀಸಲಾತಿ ಅನುಸರಿಸಿ ಉದ್ಯೋಗ ಪಡೆಯಲು ಮಾತ್ರ ಅವಕಾಶಗಳಿಲ್ಲ’
‘ಸರ್... ಅದು ಗ್ಲೋಬಲೈಸೇಶನ್,,, ನ್ಯೂ ಇಕನಾಮಿಕ್ ಪಾಲಿಸಿ....’
‘ಹೌದು ಮಾರಾಯ... ಅದೆಲ್ಲಾ ಸರಿ ಇಲ್ಲ ಅಂತ ಭಾಷಣ ಮಾಡಿದ್ರೆ ಅದು ಬರೋದು ನಿಲ್ಲುತ್ತಾ. ಇಡೀ ಜಗತ್ತೇ ಒಂದು ಹೊಸ ವ್ಯವಸ್ಥೆಗೆ ಓಪನ್ ಆಗ್ತಾ ಇದೆ. ಇದು ಬೇಕು ಅಥವಾ ಬೇಡ ಅಂತಾ ಡಿಸೈಡ್ ಮಾಡೋ ಸ್ಥಿತಿಯಲ್ಲಿ ನಮ್ಮ ಎಕಾನಮಿ ಇದೆಯಾ?’
‘….’
‘ಮೀಸಲಾತಿಯನ್ನು ಮುಂದುವರಿಸುತ್ತಲೇ ಅದನ್ನು ಇರ್ರಿಲವೆಂಟ್ ಮಾಡ್ತಿದ್ದಾರೆ. ಮೀಸಲಾತಿ ಇರ್ರಿಲವೆಂಟ್ ಆಗ್ತಾ ಇರೋ ಹೊತ್ತಿನಲ್ಲೂ ನಾವು ಮಾತ್ರ ಮೀಸಲಾತಿ ಇನ್ನೂ ಹತ್ತು ವರ್ಷಕ್ಕೆ ಮುಂದುವರೀತು ಅಂತ ಸಂತೋಷ ಪಡ್ತಿದ್ದೇವೆ.’

ಅಂದು ತೇಜಸ್ವಿ ಮೀಸಲಾತಿಗೆ ಸಂಬಂಧಿಸಿದಂತೆ ತಮ್ಮ ಚಿಂತನೆಗಳನ್ನು ಇನ್ನೂ ವಿವರಾಗಿ ಬಿಡಿಸಿಟ್ಟರು. ನನಗೆ ನೆನಪಿದ್ದುದನ್ನಷ್ಟೇ ಇಲ್ಲಿ ಬರೆದಿದ್ದೇನೆ. ಆದಿನ ತೇಜಸ್ವಿ ಚಿಂತನೆಗಳನ್ನು ನಾನು ಒಂದು ಬಜೆಟ್ ಪ್ರತಿಕ್ರಿಯೆಯ ಸುದ್ದಿಯನ್ನಾಗಿ ಬರೆದೆ. ಅದು ಮುಖಪುಟದಲ್ಲೇ ಪ್ರಕಟವಾಯಿತು. ತಮಾಷೆಯೆಂದರೆ ದಿಲ್ಲಿಯ, ಬೆಂಗಳೂರಿನ, ಮುಂಬೈಯ ಪ್ರತಿಷ್ಠಿತ ಟಿ.ವಿ. ಚಾನೆಲ್ ಗಳ ಬಜೆಟ್ ಚರ್ಚೆಯಲ್ಲೂ ಮೀಸಲಾತಿ ಮುಂದುವರಿಕೆಗೆ ಇರುವ ಮತ್ತೊಂದು ಆಯಾಮದ ಬಗೆಗೆ ಯಾರೂ ಮಾತನಾಡಲಿಲ್ಲ. ಪ್ರಖ್ಯಾತ ದಲಿತ ಚಿಂತಕರಿಗೂ ಇದು ಅರ್ಥವಾಗಿರಲಿಲ್ಲ. ಆಮೇಲಿನ ದಿನಗಳಲ್ಲೂ ಮೀಸಲಾತಿಯ ಈ ಆಯಾಮದ ಬಗ್ಗೆ ಚರ್ಚೆ ನಡೆದುದನ್ನು ನಾನು ಕಂಡಿಲ್ಲ. ತೇಜಸ್ವಿಯವರೇ ಕೆಲವು ವೇದಿಕೆಗಳಲ್ಲಿ ಈ ವಿಷಯ ಪ್ರಸ್ತಾಪಿಸಿದರು.

ಇದಾದ ಕೆಲಕಾಲದ ನಂತರ ಆಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ. ರವಿವರ್ಮ ಕುಮಾರ್ ಆಯೋಗ ನಡೆಸುತ್ತಿದ್ದ ಸಮೀಕ್ಷೆಗಾಗಿ ಚಿಕ್ಕಮಗಳೂರಿಗೂ ಭೇಟಿ ನೀಡಿದ್ದರು. ಆಗ ತೇಜಸ್ವಿಯವರು ಅಂತರ್ಜಾತೀಯ ವಿವಾಹವಾದವರೂ ಜಾತಿಯ ಸಂಕೋಲೆಯನ್ನು ಕಳಚಿಕೊಳ್ಳಲಾಗದ ವಿಪರ್ಯಾಸದ ಬಗ್ಗೆ ಅವರ ಗಮನ ಸೆಳೆದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಒಂದು ಸುದೀರ್ಘ ಮನವಿಯೊಂದನ್ನು ಆಯೋಗಕ್ಕೆ ಸಲ್ಲಿಸಿದರು. ಅದರ ಕರಡಿನ ಪ್ರತಿಯೊಂದು ಈಗಲೂ ನನ್ನ ಬಳಿ ಇದೆ.

ಇತ್ತೀಚೆಗೆ ಮತ್ತೆ ಹಿಂದುಳಿದ ವರ್ಗಗಳ ಚಳವಳಿಯೊಂದು ಕರ್ನಾಟಕದಲ್ಲಿ ಆರಂಭವಾಗಿದೆ. ‘ಅಹಿಂದ’ ಸಮಾವೇಶದಲ್ಲಿ ಭಾಗವಹಿಸಿದರೆಂಬ ಕಾರಣಕ್ಕೆ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪದವಿಯಿಂದ ಉಚ್ಛಾಟಿಸಲಾಯಿತು ಎಂಬುದನ್ನು ಮುಂದಿಟ್ಟುಕೊಂಡು ಈ ಚಳವಳಿ ನಡೆಯುತ್ತಿದೆ. ಈ ಚಳವಳಿಯನ್ನು ನಡೆಸುತ್ತಿರುವವರು ‘ಪ್ರಬಲ ಮುಂದುವರಿದ ಜಾತಿ’ಗೆ ಸೇರಿದ ಮಾಜಿ ಪ್ರಧಾನಿ ದೇವೇಗೌಡರು ‘ದುರ್ಬಲ ಹಿಂದುಳಿದ ಜಾತಿ’ಗೆ ಸೇರಿದ ಸಿದ್ದರಾಮಯ್ಯನವರನ್ನು ತುಳಿದಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ವಿಪರ್ಯಾಸವೆಂದರೆ ದೇವೇಗೌಡರು ಮತ್ತು ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ‘ಜಾತ್ಯತೀತ’ ಜನತಾದಳವನ್ನು ಪ್ರತಿನಿಧಿಸಿದ್ದರು, ಮತ್ತು ಈಗಲೂ ಇವರಿಬ್ಬರೂ ಜಾತ್ಯತೀತತೆ ತಮ್ಮ ಸಿದ್ಧಾಂತ ಎಂದು ಹೇಳಿಕೊಳ್ಳುತ್ತಿರುವುದು.

ಈ ವಿಪರ್ಯಾಸದ ಬಗ್ಗೆ ನಾನು ಈಗ ಕೆಲಸ ಮಾಡುತ್ತಿರುವ ‘ಉದಯವಾಣಿ’ ಪತ್ರಿಕೆಗೆ ಲೇಖನ ತಯಾರಿಸಲು ಅವಶ್ಯವಿರುವ ಮಾಹಿತಿಯನ್ನು ನನ್ನ ಹಳೆಯ ಕಡತಗಳಲ್ಲಿ ಹುಡುಕುತ್ತಿರುವಾಗ ತೇಜಸ್ವಿಯವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಸಲ್ಲಿಸಿದ ಮನವಿಯ ಕರಡು ಪ್ರತಿ ಸಿಕ್ಕಿತು. ಅದನ್ನು ‘ಸಂಪದ’ದಲ್ಲಿ ಪ್ರಕಟಿಸಬಹುದೇ ಎಂದು ತೇಜಸ್ವಿಯವರನ್ನು ಕೇಳಿದಾಗ ಅವರು ತುಂಬು ಮನಸ್ಸಿನ ಒಪ್ಪಿಗೆ ನೀಡಿದರು. ಅವರಿಗೆ ಸಂಪದ ಬಳಗದ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕನಿಷ್ಠ ಐಚ್ಛಿಕವಾದ ರಾಷ್ಟ್ರೀಯ ನಾಗರಿಕ ಸಂಹಿತೆಯೊಂದು ಬೇಕು. ಇಲ್ಲದಿದ್ದರೆ ನಾವು ವೈಯಕ್ತಿಕವಾಗಿ ಜಾತಿ-ಧರ್ಮಗಳನ್ನು ಮೀರಿದರೂ ಕಾನೂನು ಮಾತ್ರ ನಮ್ಮನ್ನು ಅದಕ್ಕೆ ಕಟ್ಟಿ ಹಾಕುತ್ತಲೇ ಇರುತ್ತದೆ.
namismail @ rediffmail. com

~.~
  • ismail ರವರ ಬ್ಲಾಗ್
  • Login or register to post comments
  • 941 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
September 7, 2005 - 7:02pm — hosanaga

ಆಳುವ ವರ್ಗದ ಆಳದ ಚಿಂತನೆಗಳು

hosanaga's picture


ಇಸ್ಮಾಯಲ್ ಭಾಯ್, ಒಳ್ಳೆಯ  ಲೇಖನ ಬರೆದಿದೀರಿ. ಸರ್ಕಾರದ ಆಳುವ ವರ್ಗದ ಈ ಆಳದ ಚಿಂತನೆಗಳು ನಮ್ಮಂತ ಸಾಮಾನ್ಯರಿಗೆ ಅರ್ಥವಾಗೋದು ಇಲ್ಲ. ತಿಳಿದಂತವರು, ಆ ದಿಸೆಯಲ್ಲಿ ಪ್ರಯತ್ನಿಸಿದರೆ, ಸ್ತುತ್ಯಾರ್ಹ. ವಂದನೆಗಳು.

---------

ಅನ್ ಸರ್ಟನಿಟಿ  ಅನ್ನೋದು ಕೂಡ ಬದುಕಿನ ಒಂದು ಕೆರಕ್ಟರಿಸ್ಟಿಕ್ ಫೀಚರ್ ಅನಿಸುತ್ತೆ ಹಾಗಲ್ಲದಿದ್ದರೆ ಬದುಕು ಫಿಸಿಕ್ಸ್ ಅಥವಾ ಕೆಮಿಸ್ಟ್ರಿಯ ಫಾರ್ಮುಲಾದಂತಾಗಿಬಿಡುತ್ತಿತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾವು ಬಿಟ್ಟರೂ ನಮ್ಮನ್ನು ಬಿಡದ ಜಾತಿ
  • ಮೀಸಲಾತಿಯ ಆಚೆಗೆ ನೋಡೋಣ
  • OBC ಸರ್ಟಿಫಿಕೆಟ್ ಬಿಕರಿ
  • ಮಹಿಳೆಗಿನ್ನೂ ಮೀಸಲಾತಿ ಅನಿವಾರ್ಯವೇ...?!
  • ಮೀಸಲಾತಿ ಕಕ್ಕುಲಾತಿ - ಬೇಡ ಈ ದುರ್ಗತಿ
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ತೆಹ್ರಿ ಅಣೆಕಟ್ಟು, ಉತ್ತರಾಂಚಲ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನನ್ನ ಪುಟ್ಟ ಗೂಡು
  • ಮೈಸೂರಿನ ಓಶೋ ಸನ್ನಿಧಿಯಲ್ಲಿ "ಧ್ಯಾನಸ್ಥ" 3 ದಿನಗಳು
  • ಗಾಂಧೀಸ್ಮರಣೆ - 2
  • ಡೈರಿಯ ಕೆಲವು ಹಾಳೆಗಳು - ಭಾಗ ೧೧
  • ನಿಮ್ಮ ಸ್ನೇಹ
  • ಓದಿದ್ದು ಕೇಳಿದ್ದು ನೋಡಿದ್ದು-49 ಬ್ಲಾಗಿನಲ್ಲಿದ್ದುದು ಪುಸ್ತಕಕ್ಕೆ.................
  • ಕಲೆಗುಂಟೇ ನೆಲೆಯ ಬಲೆ?
  • ಪ್ರಾರ್ಥಿಸಲೊಂದು ಬೇರೆಯದೇ ಬಗೆ :)
  • ಕಂಪ್ಯೂಟರ್ ಮೇಲಿನ ಪ್ಲಾನೆಟೇರಿಯಂ - ಸ್ಟೆಲ್ಲೇರಿಯಮ್
  • ಸಹಕಾರ ಬೇಕಾಗಿದೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:35pm
  • venkatesh
    ಉ: ಚಿಕಾಗೊ ನಗರದ ದಿಗಂತ ಬೆಡಗಿಯರು !
    October 14, 2008 - 1:30pm
  • mahesha
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:23pm
  • vijendra
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:19pm
  • mahesha
    ಉ: ’ಭೋಜ’ ತಮಿಳನಾಗಿದ್ದರೆ ಅವನ ಹೆಸರು ಏನು ಇರುತಿತ್ತು?
    October 14, 2008 - 1:15pm
  • anil.ramesh
    ಉ: ಮಲೆನಾಡಿನಲ್ಲಿ ಎರಡು ದಿನಗಳು...
    October 14, 2008 - 1:14pm
  • mahesha
    ಉ: ನಾನು ಮರಾಠಿ ಕಲಿಯುವುದು, " ಅವ್ವಾಚೀ ಪರವಾನಗೀ ಇಲ್ಲಾ ; ಲಗ್ನ ಇಲ್ಲಾ ! "
    October 14, 2008 - 1:13pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:12pm
  • shreekant.mishrikoti
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:07pm
  • srinivasps
    ಉ: ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್
    October 14, 2008 - 1:03pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 72 ಅತಿಥಿಗಳು ಆನ್ಲೈನ್ ಇರುವರು.


ಸಂತತದ ಶಿಕ್ಷೆಯಿಂ ದೀರ್ಘದಭ್ಯಾಸದಿಂ-|
ದಂತರಂಗದ ಕಡಲು ಶಾಂತಿಗೊಳಲಹುದು ||
ಸಂತೃಪ್ತವೃತ್ತಿಯಿಂದೇಕಾಂತಸೇವೆಯಿಂ |
ಸಂತಯಿಸು ಚಿತ್ತವನು -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator