ಮೀಸಲಾತಿಯ ಆಚೆಗೆ ನೋಡೋಣ
ಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಗಳು ಬಹಳ ಮುಖ್ಯವಾದ ವಿಷಯವೊಂದನ್ನು ಮರೆತು ಬಿಟ್ಟಿವೆ. ಮೀಸಲಾತಿ ಬೇಡ ಎನ್ನುವವರು ಮುಂದೊಡ್ಡುತ್ತಿರುವ ತಥಾಕಥಿತ ಮೆರಿಟ್ ಎಷ್ಟು ಅಬ್ಸರ್ಡ್ ಆದ ಪರಿಕಲ್ಪನೆ ಎಂಬುದು ನಮ್ಮ ಕ್ಯಾಪಿಟೇಷನ್ ಕಾಲೇಜುಗಳನ್ನು ನೋಡಿದರೆ ಅರ್ಥವಾಗುತ್ತದೆ. ಅದಕ್ಕೂ ದೊಡ್ಡ ತಮಾಷೆ ಎಂದರೆ ಪ್ರತಿಭೆ ಎಂಬುದು ಕೆಲವೇ ಜಾತಿಗಳಿಗೆ ಮಾತ್ರ ಸೀಮಿತವಾದ ವಿಷಯ ಎಂಬಂಥ ಧ್ವನಿಯಲ್ಲಿ ಮಾತನಾಡುವುದು. ಮೀಸಲಾತಿ ಬೇಕು ಎಂದು ವಾದಿಸುತ್ತಿರುವವರೂ ಅಷ್ಟೇ. ಮೀಸಲಾತಿ ಇಲ್ಲದಿದ್ದರೆ ನಮಗೆ ಬದುಕೇ ಇಲ್ಲ ಎಂಬಂತೆ ವಾದಿಸುತ್ತಾರೆ. ಈ ಮೂಲಕ ತಾವು ದಡ್ಡರು ಎಂದು ಒಪ್ಪಿಕೊಳ್ಳುತ್ತಾರೆ.
ವಾಸ್ತವದಲ್ಲಿ ನಾವು ಚರ್ಚಿಸಬೇಕಿರುವುದು ಮೀಸಲಾತಿಯ ಬಗೆಗೆ ಅಲ್ಲ. ಮೀಸಲಾತಿಯನ್ನು ಅಗತ್ಯ ಎನ್ನುವಂತೆ ಮಾಡಿರುವ ಇತರ ಅಂಶಗಳ ಬಗ್ಗೆ. ಅನಂತಮೂರ್ತಿಯವರು ತಮ್ಮ ಇತ್ತೀಚಿನ ಲೇಖನ ಸಾಮಾನ್ಯ ಶಾಲೆಗಳಲ್ಲಿ ಸಮಾನ ಶಿಕ್ಷಣದ ಜ್ಞಾನ ಯಜ್ಞದಲ್ಲಿ ಮೀಸಲಾತಿಯ ಅಗತ್ಯವೇ ಇಲ್ಲದಂತೆ ಮಾಡಲು ಸಾಧ್ಯವಿರುವ ಶಿಕ್ಷಣ ವ್ಯವಸ್ಥೆಯೊಂದರ ಬಗ್ಗೆ ಬರೆದಿದ್ದಾರೆ. ಇದು ಅತಿ ಆದರ್ಶದ ಮಾತೇನೂ ಅಲ್ಲ. ತೀರಾ ಇತ್ತೀಚಿನವರೆಗೂ ಇದ್ದ ಈಗ ನಗರಗಳಲ್ಲಿ ಪೂರ್ಣ ಇಲ್ಲದಂತಾಗಿರುವ ವ್ಯವಸ್ಥೆಯೊಂದರ ಪುನರುಜ್ಜೀವನದ ಬಗ್ಗೆ ಅವರು ಹೇಳುತ್ತಿದ್ದಾರೆ. ಮೀಸಲಾತಿಯ ಬೇಕು ಬೇಡಗಳ ಕುರಿತು ಸಂವೇದನಾ ರಹಿತರಾಗಿ ಮಾತನಾಡುವುದಕ್ಕಿಂತ ಈ ಬಗೆಯ ವ್ಯವಸ್ಥೆಯೊಂದನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯನ್ನಾದರೂ ಇಡುವುದು ಸೂಕ್ತ ಎನಿಸುತ್ತದೆ.
ಇದಕ್ಕಾಗಿ ಸರಕಾರ ಏನೂ ಮಾಡಬೇಕಿಲ್ಲ. ನಾವು ನಮ್ಮ ಮಕ್ಕಳನ್ನು ಸರಕಾರೀ ಶಾಲೆಗಳಿಗೆ ಕಳುಹಿಸುವ ಮೂಲಕವೇ ಇದನ್ನು ಆರಂಭಿಸಬಹುದು. ಈಗಂತೂ ಸಮುದಾಯವನ್ನು ಶಾಲೆಯ ಆಗು ಹೋಗುಗಳಲ್ಲಿ ಪಾಲುದಾರರನ್ನಾಗಿಸುವುದು ಕಡ್ಡಾಯವೂ ಆಗಿರುವುದರಿಂದ ಹೊಸ ಶಿಕ್ಷಣ ಸಂಸ್ಕೃತಿಯೊಂದನ್ನು ಬೆಳೆಸುವುದು ಖಂಡಿತಾ ಸಾಧ್ಯ ಎಂಬುದು ನನ್ನ ಭಾವನೆ.

- ismail ರವರ ಬ್ಲಾಗ್
- Login or register to post comments
- 1925 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಮತ್ತೊ೦ದು ವಿಷಯ
ಈ IIT/IIM ಗಳೂ ನಮ್ಮ ದೇಶದ ಪ್ರಮುಖ ವಿಜ್ನಾನ ಅಧ್ಯಾಯನ ಕೇ೦ದ್ರವಾಗಿರುವದಿ೦ದಲೇ
ಇಷ್ಟೊ೦ದು ತಿಕ್ಕಾಟ. ಒಮ್ಮೆ ಚೀನಾದ ತತ್ತ್ವ ಜ್ನಾನಿಯೊಬ್ಬ ಹೇಳಿದ ಮಾತು, ಬುದ್ಧಿಗೆ
ಜಾಸ್ತಿ ಪ್ರಧಾನ್ಯ ಕೊಟ್ಟರೆ ತಿಕ್ಕಾಟ ಪ್ರಾರ೦ಭವಾಗುತ್ತದೆ ಎ೦ದು. ನನ್ನ ಒಬ್ಬ ಮಿತ್ರ
ಸುಬ್ಬು ಶಾಸ್ತ್ರಿ IIT ಯಲ್ಲಿ ಓದಿ , ಅಮೇರಿಕಾದ ವಿಶ್ವವಿದ್ಯಾಲವದಲ್ಲಿ phd
ಗಳಿಸಿ ಈಗ ನರ್ಮದ ಮತ್ತು ಇತರೆ ಹೋರಾಟಗಳಲ್ಲಿ ಭಾಗಿಯಾಗಿ ,ನಮ್ಮ ದೇಶದ ಪರಿಸರ ಸ೦ರಕ್ಷಣೆಗಾಗಿ
ಕೆಲಸ ಮಾಡುತ್ತಿದ್ದಾನೆ. ಅವನ ಪ್ರಕಾರ ಈ IIT ಗಳಲ್ಲಿ ಓದುವುದು ಅಷ್ಟು ಪ್ರಯೋಜನಕಾರಿಯಿಲ್ಲಾ,
ಹಾನಿಯೆ ಹೆಚ್ಚೆ೦ದು ಅವನ ಭಾವನೆ. ಅವು ಬಹುಶ: ನಮ್ಮ ಮನಸ್ಸನ್ನು ತೀರಾ ಯಾ೦ತ್ರಿಕ ಹಾಗೂ
ತಾ೦ತ್ರಿಕಗೊಳಿಸುತ್ತದೆ, ಹೃದಯದ ವಿಕಾಸವಾಗುವುದಿಲ್ಲಾ.ಹೃದಯದ ವಿಕಾಸವಾಗದೆ ಮಾನವ ಪ್ರಾಣಿ ಮಾತ್ರ.
ಅದರಿ೦ದಲೇ ಈ IIT/IIM ನವರೂ ಹೆಚ್ಚಾಗಿ ಅಮೇರಿಕಾ ಗೆ ಹೋಗಿ ಅಲ್ಲಿ ತಮ್ಮ ಬುದ್ಧಿಯ ಚಮತ್ಕಾರದಿ೦ದ
ಮು೦ದೆ ಬ೦ದು "ದೊಡ್ದವಾರಾದೆವು" ಎ೦ಬ ಭ್ರಮೆ ಪಡುವುದು.
ಹಾಗು ಈ ಶಿಕ್ಷಣ ಪದ್ಧತಿಯು ವ್ಯಕ್ತಿಯನ್ನು ತನ್ನ ಸಮುದಯದಿ೦ದ ಬೇರೆ ಮಾಡಿ, ಆನನ್ನು ಒ೦ಟಿ ಜೀವಿಯನ್ನಾಗಿ
ಮಾಡುತ್ತದೆ.ಈ ಶಿಕ್ಷಣ ಪದ್ಧತಿಯನ್ನು ಧಿಕ್ಕರಿಸುವುದನ್ನು ಬಿಟ್ಟು ಅದಕ್ಕಾಗಿ ನಾವು ಬಾಯ್ ತೆರೆಯುತ್ತಿರುವುದು
ವಿಷಾದನೀಯ ಹಾಗೂ ಅವಿವೇಕದ ಸ೦ಗತಿ.