ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › ನೆಲದ ಮರೆಯ ನಿದಾನ

ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ

March 15, 2006 - 9:34pm — ismail

ಲೈಂಗಿಕತೆಯ ಅವಶ್ಯಕತೆಯೇ ಇಲ್ಲದೇ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಪ್ರಾಚೀನ ಭಾರತೀಯರು, ಗ್ರೀಕರು ನಂಬಿದ್ದರು. ತಾಪದ ಪ್ರಭಾವದಿಂದ ಮಣ್ಣು ಜೀವಿಗಳನ್ನು ಹುಟ್ಟಿಸುತ್ತದೆ ಎಂದು ಗ್ರೀಕ್‌ ಚಿಂತಕ, ಗುರು ತೇಲ್ಸ್‌ ತನ್ನ ವಿದ್ಯಾರ್ಥಿಗಳಿಗೆ ಹೇಳಿದ್ದ. ಮಣ್ಣು ಯಾವ ಬಾಹ್ಯ ನೆರವೂ ಇಲ್ಲದೆ ಸೃಷ್ಟಿಸುವ ಶಕ್ತಿ ಹೊಂದಿದೆ ಎಂಬ ವಾದವನ್ನು ತತ್ವಜ್ಞಾನಿ ಅರಿಸ್ಟಾಟಲ್‌ ಮಂಡಿಸಿದ್ದ.

ಮಣ್ಣಿನ ಶಕ್ತಿಯ ಕುರಿತ ಇಂಥ ಪರಿಕಲ್ಪನೆಗಳು ದಾಖಲಾಗುವುದಕ್ಕೆ ಸಾವಿರಾರು ವರ್ಷಗಳ ಮೊದಲೇ ಕೃಷಿ ಹುಟ್ಟಿತ್ತು. ಕೃಷಿಯ ಹುಟ್ಟಿನ ಬಗ್ಗೆ ಎರಡು ಬಗೆಯ ಕಥನಗಳಿವೆ. ಮೊದಲನೆಯದ್ದು ನಾವೆಲ್ಲರೂ ಶಾಲೆಯಲ್ಲಿ ಅರಿಯುವುದು. ಎರಡನೆಯದ್ದು ನಮ್ಮ ಧಾರ್ಮಿಕ ನಂಬಿಕೆಗಳಿಂದ ಬಂದದ್ದು. ಶಾಲೆಯಲ್ಲಿ ಹೇಳುವಂತೆ ಸುಮಾರು 10,000 ವರ್ಷಗಳ ಹಿಂದೆ ಕೃಷಿ ಆರಂಭವಾಯಿತು. ಇದು ಮನುಷ್ಯನನ್ನು ನಾಗರಿಕನನ್ನಾಗಿಸಿತು. ಅವನ ಅಲೆಮಾರಿ ಬದುಕನ್ನು ಕೊನೆಗೊಳಿಸಿ `ನಿವಾಸಿ'ಯಾಗುವಂತೆ ಮಾಡಿತು. ಚಕ್ರದಿಂದ ಆರಂಭಿಸಿ ಅತ್ಯಾಧುನಿಕ ಸೂಪರ್‌ ಕಂಪ್ಯೂಟರ್‌ಗಳವರೆಗಿನ ಎಲ್ಲ ಆವಿಷ್ಕಾರಗಳಿಗೂ ಬೇಸಾಯವೇ ಮೂಲ.

ಈ ವೈಜ್ಞಾನಿಕ ಕಥನದ ಹುಟ್ಟಿಗೆ ಕಾರಣವಾದದ್ದು ಡಾರ್ವಿನ್‌ನ ವಿಕಾಸವಾದ. ಈ ಕಥನವನ್ನು ಸೃಷ್ಟಿಸಿದ ಪ್ರದೇಶದಲ್ಲಿರುವ ಧಾರ್ಮಿಕ ನಂಬಿಕೆಗಳು ಬೇಸಾಯದ ಹುಟ್ಟಿಗೆ ಸಂಬಂಧಿಸಿದಂತೆ ಬೇರೊಂದು ಕಥೆಯನ್ನು ಹೇಳುತ್ತವೆ. ಆದಿ ಪುರುಷ ಆಡಂ ಮತ್ತು ಆದಿ ಮಾತೆ ಈವ್‌ ಇದ್ದದ್ದು ಏಡನ್‌ ಉದ್ಯಾನವನದಲ್ಲಿ. ಅಲ್ಲಿದ್ದ ಜ್ಞಾನವೃಕ್ಷದ ಹಣ್ಣನ್ನು ಹೊರತು ಪಡಿಸಿದರೆ ಎಲ್ಲಾ ಮರ, ಗಿಡಗಳನ್ನೂ ಇವರಿಬ್ಬರೂ ಆಹಾರವಾಗಿ ಬಳಸುವ ಅನುಮತಿಯನ್ನು ದೇವರು ನೀಡಿದ್ದ. ಈವ್‌ ಒಂದು ದಿನ ಚಪಲಕ್ಕೆ ಬಲಿಯಾಗಿ ಜ್ಞಾನವೃಕ್ಷದ ಹಣ್ಣನ್ನು ತಿನ್ನುತ್ತಾಳೆ. ಆಡಂ ಆಕೆಯನ್ನು ಅನುಸರಿಸುತ್ತಾನೆ. ಆಜ್ಞೆಯನ್ನು ಪಾಲಿಸದ ಈ ತಪ್ಪಿಗಾಗಿ ದೇವರು ಅವರಿಗೆ ಶಿಕ್ಷೆ ವಿಧಿಸುತ್ತಾನೆ. ಅದರಂತೆ ಅವರು ಬೆವರು ಸುರಿಸಿ ದುಡಿದು ಬದುಕಬೇಕು. ಹಾಗೆ ಕೃಷಿ ಆರಂಭವಾಗುತ್ತದೆ.

ಅತ್ಯಂತ `ವೈಜ್ಞಾನಿಕ'ವಾಗಿರುವ ಮೊದಲ ಕಥನ ಮತ್ತು ಕೇವಲ ನಂಬಿಕೆಯನ್ನಷ್ಟೇ ಆಧಾರವಾಗಿ ಇಟ್ಟುಕೊಂಡಿರುವ ಎರಡನೇ ಕಥನಗಳ ಮಧ್ಯೆ ಮೂಲಭೂತವಾದ ವ್ಯತ್ಯಾಸಗಳೇನೂ ಇಲ್ಲ. ಮನುಷ್ಯ ನಿಸರ್ಗದಲ್ಲಿ ಆಹಾರವನ್ನು ಕಂಡುಕೊಳ್ಳುವುದರ ಬದಲಿಗೆ ಆಹಾರವನ್ನು ಸೃಷ್ಟಿಸುವ ಪ್ರಯತ್ನ ಆರಂಭಿಸಿದ ಎಂಬುದನ್ನು ಎರಡೂ ಕಥನಗಳು ಹೇಳುತ್ತಿವೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ನಿಸರ್ಗವನ್ನು ತನಗೆ ಬೇಕಿರುವಂತೆ ಬದಲಾಯಿಸುವ ಪ್ರಯತ್ನಗಳನ್ನು ಮನುಷ್ಯ ಆರಂಭಿಸಿದ. ಆಡಂ ಮತ್ತು ಈವ್‌ರ ಕಥೆಯನ್ನು ಸೂಕ್ಷ್ಮವಾಗಿ ನೋಡಿದರೆ ಇದು ಅರ್ಥವಾಗುತ್ತದೆ.

ಜ್ಞಾನವೃಕ್ಷದ ಹಣ್ಣನ್ನು ತಿಂದದ್ದರಿಂದ ಅವರಲ್ಲಿ ಒಳಿತು-ಕೆಡುಕುಗಳ ಅರಿವುಂಟಾಯಿತು. ಅಂದರೆ ಅವರು ತಮ್ಮ ಮುಗ್ಧತೆಯನ್ನು ಕಳೆದುಕೊಂಡರು. ಈ ಮುಗ್ಧತೆಯನ್ನು ಕಳೆದುಕೊಳ್ಳುವುದರ ಜೊತೆಗೆ ಮನುಷ್ಯನ `ನಾಗರಿಕ'ನಾಗುವ ಪ್ರಕ್ರಿಯೆ ಆರಂಭಗೊಂಡಿತು. ಇದೇ ಕಾರಣಕ್ಕೆ ಚಾರ್ಲ್ಸ್‌ ಡಾರ್ವಿನ್‌ನ ಬಲವಿದ್ದವನಷ್ಟೇ ಉಳಿದುಕೊಳ್ಳುತ್ತಾನೆ ಎಂಬ ಸಿದ್ಧಾಂತ ಬಹಳ ತರ್ಕಬದ್ಧವಾಗಿ ಕಾಣಿಸಿದ್ದು. ಹಾಗೆಯೇ ಡಾರ್ವಿನ್‌ ಪ್ರಸಿದ್ಧನಾದ ಹೊತ್ತಿನಲ್ಲೇ ಸಸ್ಯವಿಜ್ಞಾನಿ ಆಂಟನ್‌ ಡಿ ಬಾರಿ ಮಂಡಿಸಿದ `ಕೂಡುಬಾಳುವೆ'ಯ ಸಿದ್ಧಾಂತ ಇನ್ನೂ ಅರ್ಥವಾಗದೇ ಹೋಗಿರುವುದು. ಆಂಟನ್‌ ಡಿ ಬಾರಿ ಹೇಳುವಂತೆ ತನ್ನಿಂದ ತಾನೇ ಪೂರ್ಣವಾಗುವ ಯಾವ ಜೀವಿಯೂ ಇಲ್ಲ. ಯಾರು ಯಾರನ್ನು ಕೊಲ್ಲುತ್ತಾರೆ ಎನ್ನುವುದಕ್ಕಿಂತ ಯಾರು ಬದುಕಬೇಕಾದರೆ ಯಾರಿರಬೇಕು ಎಂಬುದು ಬಹಳ ಮುಖ್ಯ. ನಮ್ಮ ಕಾಡುಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಬಲಶಾಲಿಯಷ್ಟೇ ಬದುಕುವುದಾದರೆ ಪೊದೆ, ಹುಲ್ಲುಗಳು ಇರುತ್ತಿರಲಿಲ್ಲ.

-ಇಸ್ಮಾಯಿಲ್‌

‹ ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?ಮೇಲಿನ ಪುಟಕ್ಕೆ
~.~
  • ismail ರವರ ಬ್ಲಾಗ್
  • Printer-friendly version
  • Login or register to post comments
  • 1572 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 16, 2006 - 3:06am — vvdooshaka

ಖಂಡಿತಾ ಬಲಹೀನವಲ್ಲ

vvdooshaka's picture

"ಬಲಶಾಲಿ" ಪದವನ್ನು ಅತಿ ಸೀಮಿತ ಅರ್ಥದಲ್ಲಿ ಬಳಸಿದ್ದೀರಿ ಎಂದೆನ್ನಿಸುತ್ತದೆ. ನಿಮ್ಮ ಲೇಖನದ ಕೊನೆಯಲ್ಲಿ ಪೊದೆಗಳು, ಹುಲ್ಲುಗಳು ಬಲಹೀನವೆಂಬ ಅಭಿಪ್ರಾಯ ಬರುತ್ತದೆ. ನಿಸರ್ಗದ ಹತ್ತು ಹಲವು ಏರು ಪೇರುಗಳಿಗೆ, ಬದಲಾವಣೆಗಳಿಗೆ ಅಡಾಪ್ಟ್ ಆಗಿರುವ ಈ ಜಾತಿಗಳು ಡಾರ್ವಿನ್ ಸಿದ್ಧಾಂತದ ದೃಷ್ಟಿಯಲ್ಲಿ ಖಂಡಿತಾ ಬಲಹೀನವಲ್ಲ.

ವಂದನೆಗಳೊಂದಿಗೆ,

ವಿ.ವಿ.
ನನ್ನ ಬ್ಲಾಗ್: ಮಜಾವಾಣಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
March 16, 2006 - 1:20pm — tksbhat

ನನಗೂ ಹಾಗೇ ಅನ್ನಿಸಿತ್ತು.

tksbhat's picture

ಹೌದು, ಮೊದಲು ನನಗೂ ಹಾಗೇ ಅನ್ನಿಸಿತ್ತು. ಆದರೆ ಅದಕ್ಕೂ ಮೇಲಿನ ಸಾಲಿನ ಜತೆ ಓದಿಕೊಂಡರೆ ಅದು ಬೇರೇ ಅರ್ಥವನ್ನು ಧ್ವನಿಸುತ್ತದೆಯಲ್ಲವೇ?

ಟಿ.ಕೆ.ಎಸ್.ಭಟ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
  • ‘ಕಾಮ್’ ವತಿಯಿಂದ ಮಸನೊಬು ಫುಕುವೊಕ- ಒಂದು ನೆನಪು
  • ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು
  • ಅರಣ್ಯ ನಾಶ ಮಾಡಿದ ಮಗು ಮೇಲೆ ಕೇಸು
  • ಭಾಷಾ ಶುದ್ಧಿಯ ನಟ್ಟು ಬೋಲ್ಟುಗಳು….
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 126 ಅತಿಥಿಗಳು ಆನ್ಲೈನ್ ಇರುವರು.


"ಎಂಥ ನಾಡಿದು ಯೆಂಥ ಕಾಡಾಯಿತೋ"

— ರಂ. ಶ್ರೀ. ಮುಗಳಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator