ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ನೆಲದ ಮರೆಯ ನಿದಾನ

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

March 3, 2006 - 8:08pm — ismail

ಎತ್ತು ಏರಿಗೆಳೆದರೆ ಕೋಣ ನೀರಿಗೆಳೆಯಿತು

ಈ ಗಾದೆ ಕನ್ನಡಿಗರಿಗೆಲ್ಲಾ ಪರಿಚಿತ. ರೈತರಂತೂ ಇದನ್ನು ಅಕ್ಷರಾರ್ಥದಲ್ಲೇ ಕಲ್ಪಿಸಿಕೊಂಡು ಸ್ವಾರಸ್ಯವನ್ನು ಗ್ರಹಿಸಿಯಾರು. ಒಂದು ವಸ್ತುವನ್ನು ಇಬ್ಬರು ಎರಡು ಪರಸ್ಪರ ಭಿನ್ನ ದಿಕ್ಕುಗಳಿಗೆ ಎಳೆದರೆ ಅದು ಒಂದಿಂಚೂ ಅಲುಗದು ಎಂಬುದನ್ನು ಈ ಗಾದೆ ಧ್ವನಿಸುತ್ತದೆ. ಇನ್ನೂ ಸರಳಗೊಳಿಸಿದರೆ ಇಬ್ಬರ ಮೊಂಡುವಾದಗಳು ಅಥವಾ ಇಬ್ಬರ ವ್ಯರ್ಥ ಪ್ರಯತ್ನಗಳಿಗೆ ಇದು ರೂಪಕವಾಗಬಹುದು. ಈ ಸರಳ ಗ್ರಹಿಕೆಗಳ ಆಚೆಗೆ ಹೋಗಿ ಈ ಗಾದೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದರೆ...?

ಮೊದಲನೆಯದಾಗಿ ಎತ್ತು ಮತ್ತು ಕೋಣಗಳು ಏನನ್ನು ಎಳೆಯುತ್ತಿವೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕಾಗುತ್ತದೆ. ವಿಶ್ಲೇಷಣೆಯ ಅನುಕೂಲಕ್ಕೆ ಇವರೆಡೂ ಸೇರಿ ಒಂದು ಗಾಡಿಯನ್ನು ಎಳೆಯುತ್ತಿವೆ ಎಂದು ಭಾವಿಸಿ ಮುಂದುವರಿಯೋಣ.

ಮುಂದಿನ ಪ್ರಶ್ನೆ ಇರುವುದು ಕೋಣ-ಎತ್ತುಗಳ ಜೋಡಿಯನ್ನು ಗಾಡಿಗೆ ಕಟ್ಟಿ ನೀರಿರುವ ಜಾಗಕ್ಕೆ ಅದನ್ನು ತಂದದ್ದೇಕೆ?

ಏನೋ ಹಾಗಾಯಿತು ಎಂಬ ಸಮಜಾಯಿಶಿ ಕೊಟ್ಟೆವು ಎಂದುಕೊಳ್ಳೋಣ. ಮತ್ತೆಯೂ ಪ್ರಶ್ನೆಗಳು ಮುಗಿಯುವುದಿಲ್ಲ. ಎತ್ತು ಗಾಡಿಯನ್ನು ಎಳೆಯಲು ಪ್ರಯೋಗಿಸುತ್ತಿರುವ ಬಲದ ಪ್ರಮಾಣ, ಹಾಗೆಯೇ ಕೋಣದ ಬಲ ಇದಾದ ನಂತರ ಗಾಡಿಯ ಭಾರ, ಅದಕ್ಕೆ ಅಳವಡಿಸಲಾಗಿರುವ ಚಕ್ರದ ವ್ಯಾಸ. ಘರ್ಷಣೆ ಹೀಗೆ ಹಲವು ಸೂಕ್ಷ್ಮ ವಿಚಾರಗಳನ್ನು ಲೆಕ್ಕ ಹಾಕುತ್ತಲೇ ಹೋಗಬಹುದು. ಈ ಎಲ್ಲಾ ಲೆಕ್ಕಾಚಾರಗಳ ಫಲಿತಾಂಶವಾಗಿ ಗಾಡಿ ಏರಿಯ ಕಡೆಗೆ ಚಲಿಸಿತು ಅಥವಾ ನೀರಿನ ಕಡೆಗೆ ಚಲಿಸಿತು ಎಂಬ ಸ್ಪಷ್ಟ ಉತ್ತರ ಸಿಗುತ್ತದೆ. ಆದರೆ ಈ ಉತ್ತರದಿಂದ ಆದ ಪ್ರಯೋಜನವೇನು?

ವೈಜ್ಞಾನಿಕ ಕೃಷಿಯ ಆರಂಭದ ದಿನದಿಂದಲೂ ಇಂಥದ್ದೊಂದು ಪ್ರಶ್ನೆಯನ್ನು ನಾವು ಎದುರಿಸುತ್ತಲೇ ಇದ್ದೇವೆ. ಭೂಮಿಯಲ್ಲಿ ಬಿತ್ತಿದ ಬೀಜ ಮೊಳಕೆಯೊಡೆಯುತ್ತದೆ ಎಂಬ ಸರಳ ಸತ್ಯವನ್ನು ಸಂಕೀರ್ಣವಾಗಿ ಗ್ರಹಿಸಲು ಹೊರಟೆವು. ಪರಿಣಾಮವಾಗಿ ನಾವು ಮಣ್ಣಿನಲ್ಲಿ ಇರಬೇಕಾದ ರಾಸಾಯನಿಕಗಳ ಬಗ್ಗೆ ತಿಳಿದುಕೊಂಡೆವು. ಮೊಳಕೆಯೊಡೆಯಲು ಅವಶ್ಯವಿರುವ ರಾಸಾಯನಿಕ ಇಲ್ಲ ಎಂದಾದಾಗ ಆ ರಾಸಾಯನಿಕವನ್ನು ಭೂಮಿಗೆ ಸೇರಿಸಿದೆವು. ಇವುಗಳ ಮಧ್ಯೆ ವೈಜ್ಞಾನಿಕ ಕೃಷಿಯನ್ನು ಆರಂಭಿಸುವ ಮೊದಲೂ ಕೃಷಿಯಿತ್ತು ಮತ್ತು ಆಗಲೂ ಬೀಜ ಮೊಳಕೆಯೊಡೆಯುತ್ತಿತ್ತು ಎಂಬುದನ್ನು ಮರೆತಿದ್ದೆವು.

ಈ ಬಗೆಯ ವಿಸ್ಮೃತಿ ಸೃಷ್ಟಿಸುವ ಗೊಂದಲಗಳು ಹೇಗಿವೆ ಎಂಬುದನ್ನು ಪ್ರತಿಯೊಬ್ಬರೂ ಅನುಭವಿಸುತ್ತಿದ್ದೇವೆ. ಈ ಗೊಂದಲದಿಂದ ಹೊರಬರಲು ಹೆಚ್ಚು ಕಷ್ಟ ಪಡಬೇಕಿಲ್ಲ. ಸಹಜವಾಗಿ ಇದ್ದುಬಿಟ್ಟರೆ ಸಾಕಾಗುತ್ತದೆ. ಹಾಗಾದರೆ ಪ್ರಕೃತಿ ಅಷ್ಟು ಸರಳವೇ? ಖಂಡಿತವಾಗಿಯೂ ಅಲ್ಲ. ಪ್ರಕೃತಿಯ ಕುರಿತ ನಮ್ಮ ಗ್ರಹಿಕೆಯನ್ನು ತಿರುಗು ಮುರುಗಾಗಿಸಿಕೊಂಡರೆ ಇದು ಅರ್ಥವಾಗುತ್ತದೆ.

ನಾಥ ಪಂಥದ ಸಂತರು ಈ ಬಗೆಯ ಹೇಳಿಕೆಗಳಿಗೆ ಪ್ರಸಿದ್ಧರು. ಇದನ್ನು ಉಲಟ್‌ ಭಾಂಸಿ ಎನ್ನುತ್ತಾರೆ. ಸಂತ ಕಬೀರನ ಉಲಟ್‌ ಭಾಂಸಿ ಪ್ರಕೃತಿಯ ಕುರಿತ ಗ್ರಹಿಕೆ ಹೇಗಿರಬೇಕು ಎಂಬುದಕ್ಕೆ ಮಾರ್ಗದರ್ಶಿಯಾಗಬಹುದು.

ಏಕ್‌ ಅಚಂಛಾ ದೇಖರೆ ಭಾಯಿ, ಠಾಢಾ ಸಿಂಹ ಚರಾವೈ ಗಾಇ
ಪಹಲೇ ಪೂತ ಪೀಚೆ ಮಾಇ ಭಾಯಿ, ಚೇಲಾಕೆ ಗುರು ಲಾಗೈ ಪಾಯಿ

ಹಸುವನ್ನು ಸಿಂಹ ಸಾಕುತ್ತದೆ. ಮಗನಿಂದಾಗಿ ತಾಯಿ ಇದ್ದಾಳೆ. ಶಿಷ್ಯನಿಂದಾಗಿ ಗುರುವಿದ್ದಾನೆ ಎನ್ನುವ ಈ ದ್ವಿಪದಿ ನೈಸರ್ಗಿಕ ಸಂಬಂಧಗಳನ್ನು ಸ್ಪಷ್ಟವಾಗಿ ಹೇಳುತ್ತದೆ. ಒಂದು ಸಿಂಹ ಬದುಕಿದೆ ಎಂದಾದರೆ ನೂರಾರು ಹಸುಗಳು, ಆ ಹಸುಗಳು ತಿನ್ನಲು ಬೇಕಿರುವ ಹುಲ್ಲು, ಆ ಹುಲ್ಲು ಬೆಳೆಯುವ ಭೂಮಿ ಎಲ್ಲವೂ ಇದೇ ಎಂದರ್ಥ. ಹಾಗಾಗಿಯೇ ಸಿಂಹ ಹಸುವನ್ನು ಸಾಕುತ್ತದೆ!

ಇಸ್ಮಾಯಿಲ್

‹ ನೆಲದ ಮರೆಯ ನಿದಾನಮೇಲಿನ ಪುಟಕ್ಕೆನೆಲದ ಮರೆಯ ನಿದಾನ-1 ›
  • ನೆಲದ ಮರೆಯ ನಿದಾನ (ಮಾಲಿಕೆ)
~.~
  • ismail ರವರ ಬ್ಲಾಗ್
  • Printer-friendly version
  • Login or register to post comments
  • 1757 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 4, 2006 - 6:53pm — tvsrinivas41

ಕಬೀರರ ಕಾಣಿಕೆ

tvsrinivas41's picture

ಲೋಕದಲ್ಲಿ ಜನರ ಮೌಢ್ಯತನ ಪರಮಾವಧಿಯನ್ನು ತಲುಪುತ್ತಿದ್ದಾಗ ಸಂತ ಕಬೀರರ ಮಾತುಗಳು ಆ ಮೌಢ್ಯತನವನ್ನು ನಿವಾರಿಸುವುದರಲ್ಲಿ ಮಹತ್ತರ ಪಾತ್ರವಹಿಸಿದವು ಎಂದು ಕೇಳಿದ್ದೆ. ಆದರೆ ಎಂದಿಗೂ ಅವುಗಳನ್ನು ಓದಲಾಗಲಿಲ್ಲ. ಕಬೀರರ ಚಿಂತನೆಗಳನ್ನು ನಮಗೆ ಸಂಪದದಲ್ಲಿ ಕರುಣಿಸಿ. ಕಬೀರರ ದೋಹೆಗಳಲ್ಲಿ ಹೆಚ್ಚಿನ ಅರ್ಥಗಳಿವೆ ಎಂದು ಕೇಳಿರುವೆ. ನಿಮಗೆ ಸಮಯವಾದಾಗ ಅವುಗಳನ್ನು ಅರ್ಥದೊಂದಿಗೆ ಬರೆಯಿರಿ. ಕಬೀರರ ಸುಲಭ ನುಡಿಗಳ ಉತ್ತಮ ಅಧ್ಯಾತ್ಮ ವಿಚಾರಗಳು ಎಲ್ಲರಿಗೂ ಎಂದಿಗೂ ಸೂಕ್ತವು ಅಲ್ಲವೇ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ
http://asraya.net

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವೇದ ಸುಳ್ಳಾದ್ರೂ ಗಾದೆ ಸುಳ್ಳಾಗಕಿಲ್ಲವಂತೆ !!!
  • ನೆಲದ ಮರೆಯ ನಿದಾನ-2: ಮರದಿಂದ ಹಣ್ಣು ಯಾಕೆ ಕೆಳಗೆ ಬೀಳುತ್ತದೆ?
  • ಮುಗ್ಧತೆಯ ಅಂತ್ಯವೇ ಕೃಷಿಯ ಆರಂಭ
  • ವಾಸ್ತವವೆಂದರೆ ವಾಸ್ತವವೇ?
  • ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ,...
Syndicate content

ಲೇಖಕರು

ismail's picture

ಪೂರ್ಣ ಹೆಸರು
ismail

ಪರಿಚಯ

ವೃತ್ತಿಯಲ್ಲಿ ಪತ್ರಕರ್ತ. ಈ ವೃತ್ತಿಗೆ ಸಹಜವಾಗಿರುವಂತೆ ಜಗತ್ತಿನಲ್ಲ ಎಲ್ಲ ವಿಷಯಗಳ ಬಗ್ಗೆಯೂ ಆಸಕ್ತಿ ಇದೆ. ಭಾಷಾ ವಿಜ್ಞಾನ ಮತ್ತು ಅರ್ಥಶಾಸ್ತ್ರ ಮೆಚ್ಚಿನ ವಿಷಯಗಳು.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ವಾಪಾಸ್ ಬಂದುಬಿಟ್ಟೆ...!
  • ಸ್ವಲ್ಪ ಖುಷಿ... ಸ್ವಲ್ಪ ದುಃಖ... ಈ ಬ್ಲಾಗ್‌ಗಳು....
  • ಕನಸು ಕದ್ದ ಹುಡುಗಿ...
  • ಚೌರದವನ ಕಷ್ಟ ಸುಖ
  • ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
  • ಹನ್ನೊಂದು ಅಡಿ ಎತ್ತರದ ತಂಬೂರಿ!
  • ಓದಿದ್ದು ಕೇಳಿದ್ದು ನೋಡಿದ್ದು-46 ಅರ್ಥಶಾಸ್ತ್ರದಲ್ಲಿ ನೋಬೆಲ್ ವಿಜೇತ,ಪ್ರಶಸ್ತಿಯ ಹಣವನ್ನು ಎಲ್ಲಿ ಹೂಡಲಿದ್ದಾರೆ?
  • ಗುರುದತ್ ಎಂಬ ದುರಂತ ನಾಯಕ
  • ಸ್ವಲ್ಪನಗಿ
  • ಮೈಸೂರು ದಸರಾ ೨೦೦೮ ವೆಬ್ಕಾಸ್ಟ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 7:04pm
  • hpn
    ಉ: ಗುರುದತ್ ಎಂಬ ದುರಂತ ನಾಯಕ
    October 11, 2008 - 6:29pm
  • anivaasi
    ಉ: ಪತನದ ಕತೆ
    October 11, 2008 - 6:06pm
  • anivaasi
    ಉ: ಪತನದ ಕತೆ
    October 11, 2008 - 6:05pm
  • anivaasi
    ಉ: ಪತನದ ಕತೆ
    October 11, 2008 - 5:50pm
  • venkatesh
    ಉ: (ಈಚಲುಮರಗಳು) ಪಾಮ್ ಮರಗಳು, ಹಾಗೂ ನೀರಿನ-ಬುಗ್ಗೆಗಳು !
    October 11, 2008 - 5:00pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 11, 2008 - 4:15pm
  • csomsekraiah
    ಉ: ಇ೦ದಿನಿ೦ದ ಸ೦ಪದ ಬಳಗದಲ್ಲಿ ನಾನೂ ಒಬ್ಬ
    October 11, 2008 - 3:46pm
  • makrumanju
    ಉ: ಮರಳಿ ಬರಲಿ ಬಾಲ್ಯ
    October 11, 2008 - 2:19pm
  • anil.ramesh
    ಉ: ಬಸವನ ಹುಳು...
    October 11, 2008 - 2:15pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 119 ಅತಿಥಿಗಳು ಆನ್ಲೈನ್ ಇರುವರು.


ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator