ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ನೀನು ನಾನು ಜೋಡಿ
![]() |
| From 2008-08-17, TRANSCRIPTION |
ಗಡಿ ಭಾಗದ ಈ ಆಹ್ವಾನ ಪತ್ರಿಕೆಯಲ್ಲಿ ಭಾಷೆ ಹಾಗೂ ಬರಹಗಳು ಬೇರೆ ಬೇರೆಯಾಗಿದ್ದರೂ "ನಾನೂ ನೀನೂ ಜೋಡಿ" ಎಂದು ಯಾವುದೇ ಗಡಿಬಿಡಿ ಇಲ್ಲದೇ ಒಟ್ಟಿಗೆ ಸಾಗುತ್ತಿವೆ!!

- ishwar.shastri ರವರ ಬ್ಲಾಗ್
- Login or register to post comments
- 263 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ನೀನು ನಾನು ಜೋಡಿ
ಮಿರಜಿಯಲ್ಲಿ ’ಇಲ್ಲಿ ಗಲೀಜು ಮಾಡಬಾರದು’ ಅನ್ನುವ ತಿಳಿವು ಬರುವಂತೆ ಮರಾಟಿಯಲ್ಲಿ, ಕನ್ನಡ ಅಕ್ಕರ ಬಳಸಿ ಬರೆದದ್ದು ನೆನಪಾಯಿತು. ದೇವನಾಗರಿ ಓದಲು ಬರುವವರು ತುಸು ಓದಿ, ಇದು ಪಕ್ಕಾ ಕನ್ನಡದಲ್ಲಿದೆ. :-)
ಉ: ನೀನು ನಾನು ಜೋಡಿ
ಇದೆ ರೀತಿ ಹಲವಾರು ಅಯ್ಯಂಗಾರ್ ಮನೆತನದವರು ಆಹ್ವಾನ ಪತ್ರಿಕೆಗಳಲ್ಲಿ ಕನ್ನಡ ಲಿಪಿ ತಮಿಳ್ ನುಡಿ ಬಳಸುವುಂಟು....
ಉ: ನೀನು ನಾನು ಜೋಡಿ
ಸೊಲ್ಲಾಪುರ/ಸೋಲಾಪುರದಲ್ಲಿ ಶೇ ೫೦ ಜನ ಕನ್ನಡದವರಿದ್ದಾರೆ...ನನ್ನ ಮೊದಲ ಕರ್ಮಭೂಮಿ ಸೊಲ್ಲಾಪುರ..
ನಾನು ಕಂಪ್ಯೂಟರ್ ಸರ್ವಿಸ್ ಎಂಜಿನಿಯರ್ ಅಂತ ಕೆಲಸ ಮಾಡ್ತಿದ್ದೆ.. ನನಗೆ ಸುಮಾರು ಜನ ಕನ್ನಡ ಸಿನಿಮಾ ಹಾಡು, ಜನಪದ ಹಾಡುಗಳ ಸಿಡಿ ಕೇಳ್ತಾಯಿದ್ರು.. ನಾನು ಕೆಲಸ ಮಾಡೋ ಕಂಪನಿನೂ ಕನ್ನಡದವರದ್ದೆ.. ಹೀಗಾಗಿ ಒಂದು ಕಂಪ್ಯುಟರ್ ಕನ್ನಡದವರಿಗೆ ಮಾರಾಟ ಮಾಡಿದ್ರೆ ಅದರ ಜೊತೆ ೪-೫ ಕನ್ನಡ ಸಿನಿಮಾ ಹಾಡಿನ ಸಿಡಿ ಕೊಡುತ್ತಿದ್ದೆ. ಇದರಿಂದ ನಮ್ಮ ಜನರಿಗೆ ವಿಶ್ವಾಸ ಬೆಳೀತಿತ್ತು ಮತ್ತೆ ನಮಗೆ ಅವರಿಂದ ಒಳ್ಳೆಯ ಗಿರಾಕಿಗಳು ಸಿಗುತ್ತಿದ್ದರು..ಆದರೆ ಅವರಿಗೆ ಮರಾಠಿ (ಅವರ ಮಾತೃಭಾಶೆ ತಾನೆ) ಭಾಷೆ ಅಂದ್ರೆ ತುಂಬ ಅಭಿಮಾನ. ಕನ್ನಡ ಮಾತ್ರ ಬಿಟ್ಟುಕೊಡರು..ನನಗೆ ಮರಾಠೀ ಬೇಗ ಕಲಿಬೇಕು ಅಂತ ಹೇಳಿಕೊಡುತ್ತಿದ್ದರು. ನಾನು ಅಲ್ಲಿಗೆ ಹೋದ ಮೂರು ತಿಂಗಳಲ್ಲೇ ತಕ್ಕಮಟ್ಟಿಗೆ ವ್ಯವಹರಿಸುವಶ್ಟು ಮರಾಠಿ ಕಲಿತೆ..ಹಾ ಇನ್ನೊಂದು ವಿಚಾರ ನಮ್ಮ ಕಡೆ ಅಂದ್ರೆ ಗಡಿ ಭಾಗದಲ್ಲಿ ಮದುವೆ ಕರೆಯೋಲೆ ಕೂಡ ಕನ್ನಡ ಮತ್ತು ಮರಾಠಿಯಲ್ಲಿ ಇರುತ್ತೆ. ಇದರ ಬಗ್ಗೆ ಇನ್ನೊಂದು ಸಲ ಬ್ಲಾಗ್ ಬರೀತಿನಿ ಹೇಳೋಕೆ ಹೋದರೆ ವಿಶಯ ಬಹಳಶ್ಟಿದೆ..
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!
ಉ: ನೀನು ನಾನು ಜೋಡಿ
ಇಲ್ಲಿದೆ ತಮಾಶೆ
ಕನ್ನದದೋರು ತಾವು ಉಳಿದಂತೆ ಕೃಷ್ಣ ಅನ್ನು ಕ್ರಿಶ್ಣ ಎಂದು ಬರೆದುಕೊಂಡರೆ ಅದಕ್ಕೆ ಅಡ್ಡ ಮಾತು..
ಇಲ್ಲಿ ಎಂಟು ಹೋಗಿ ಯೇನ್ಟು ಆಗಿದೆ.. ಇನ್ನೂ ಏನೇನೋ.. ಅದೆಲ್ಲ
ಹೇ ಹೇ