ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › ishwar.shastri ರವರ ಬ್ಲಾಗ್

ಕ್ರುಶ್ಣಾನೀ ಬ್ಯಾಗನೆ ಬಾರೋ

October 6, 2008 - 12:30pm — ishwar.shastri

ಕ್ರುಶ್ಣಾನೀ ಬ್ಯಾಗನೆ ಬಾರೋ
ಶ್ರೀ ಡಿ ಎನ್ ಶಂಕರ ಭಟ್ಟರವರು ಹೊಸದಾಗಿ ಕನ್ನಡ ವ್ಯಾಕರಣವನ್ನು ಬರೆದಿದ್ದಾರೆ. ಇದರಲ್ಲಿ ಯಾವ ಮಹಾಪ್ರಾಣಗಳಿಲ್ಲ-ಎಂಬುದು ಇದರ ಹೆಗ್ಗಳಿಕೆ. ಇವರು ಹಾಗೂ ಇವರಿಂದ ಪ್ರಭಾವಿತರಾದವರು, ಕನ್ನಡವು ಸಂಸ್ಕೃತೀ ಕರಣ ಹೊಂದಿದೆ(ಬೃಷ್ಠಗೊಂಡಿದೆ?) ಎಂದು ಇದನ್ನು ಶುದ್ಧೀಕರಿಸವ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಶ್ರೀ ವೈಭವರವರು ಕೊಟ್ಟ ಮಾಹಿತಿಯಂತೆ  ಭಟ್ಟರು ತಮ್ಮ ಪುಸ್ಥಕದಲ್ಲಿ ಕೃಷ್ಣ ಎಂಬ ಸಂಸ್ಕೃತ ಪದವನ್ನು ಕನ್ನಡದಲ್ಲಿ ಕ್ರುಶ್ಣವೆಂದು ಬರೆದಿದ್ದಕ್ಕೆ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಈ ಪಂಥದ ವಾದವನ್ನು ಒಪ್ಪಿ ನಾವು ಹೇಗೆ ಉಚ್ಚರಿಸುತ್ತೇವೆಯೋ ಅದನ್ನು ಹಾಗೆಯೇ ಬರವಣಿಗೆಗೆ ತಂದರೆ ಹೇಗಾಗಬಹುದೆಂಬುದಕ್ಕೆ ಕ್ರುಶ್ಣಾನೀ ಬ್ಯಾಗನೆ ಬಾರೋ ಎಂಬುದೊಂದು ಉದಾಹರಣೆ. ತಮತಮಗೆ ಇಷ್ಟಬಂದಂತೆ ಬೇರೆಬೇರೆ ಪ್ರದೇಶದವರು ಜಾತಿ ಜನಾಂಗದವರು ಬೇರೆ ಬೇರೆಯ ರೀತಿಯಲ್ಲಿ ಬರೆದರೆ ಅದು ಹೀಗಿರಬಹುದೇ? ;-
*ಕ್ರುಶ್ಣಾ ನೀ ಬೆಗ್ನೆ ಬಾರೋ * ಕುಶ್ಣಾ ನೀ ಬೇಗ್ಬಾರೋ * ಕ್ರಿಸ್ನಾ ನೀ ಬೇಗನೆ ಬಾರೋ * ಕ್ರಿಸ್ಣಾ ನೀ ಬೇಗಣೆ ಬಾರಲಾ. *ಕುಟ್ಣಾ ನೀ ಬೆಗ್ನೆಬಾರೋ  *ಕಿಟ್ಟಾನೀ ಬೇಗನೆ ಬಾರೋ * ಕಿಟ್ಟೀ ನೀ ಬೇಗನೆ ಬಾರೋ ಇತ್ಯಾದಿ ಇತ್ಯಾದಿ.
ಬೇಗನೆ ಎನ್ನುವ ಪದದ ಬದಲು ಬೇರೆ ಬೇರೆ ಪದವನ್ನು ಬಳಸುವವರು ಹೀಗೂ ಬರೆಯಬಹುದು;-  *ಕ್ರಿಶ್ಣಾ  ನೀ ದೌಡು ಬಾರೋ * ಕ್ರಿಶ್ಣಾ ನೀ ದೌಡ್ಬಾರೋ * ಕ್ರಿಶ್ನಾ ನಿ ಲಗೂನೆ ಬಾರೋ * ಕ್ರಿಶ್ಣಾ ನೀ ಜಲ್ದಿ ಬಾರೋ * ಕ್ರಿಶ್ಣಾ ನೀ ಲೌಕರ್ ಬಾರೋ *ಕ್ರೀಶ್ಣಾ ನೀ ಶೀಘ್ರ ಬಾರೋ * ಕ್ರಿಶ್ಣಾ ನೀ ಗಡಾನೆ ಬಾರೋ (ಕ್ರಿಶ್ಣಾ ನೀ ಅರ್ಜಂಟ್ ಬಾರೋ  *ಕ್ರಿಶ್ಣಾ ನೀ ಅರ್ಜಂಟಾಗಿ ಬಾರೋ  *ಕ್ರಿಶ್ಣಾ ನೀ ಕ್ವಿಕ್ಕಾಗಿ ಬಾರೋ?)

ಇದರಲ್ಲಿ ಕೆಲವು ಪದಗಳು ಕನ್ನಡ ಅಲ್ಲದಿರಬಹುದು ಆದರೆ ಇದೆಲ್ಲವೂ ಬೇರೆ ಬೇರೆ ಪ್ರದೇಶದ ಕನ್ನಡಿಗರು ತಮ್ಮ ಮನೆಮಾತಿನಲ್ಲಿ ಅಳವಡಿಸಿಕೊಂಡ ನಿತ್ಯ ಉಪಯೋಗಿಸುವ ಶಬ್ಧವೇ ಆಗಿರುತ್ತದೆ. ಹೀಗಾಗಿ ಇವರೆಲ್ಲಾ  ಸ್ರೀ ಬಟ್ಟರ  ಪಂತದವರನ್ನು ಸ್ವಾಗತಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಆದರೆ ನನಗೆ ವಿಚಿತ್ರವೆನ್ನಿಸಿದ್ದೇನೆಂದರೆ ಈ ಪಂಥವನ್ನು ಬಲವಾಗಿ ಸಮರ್ಥಿಸಿಕೊಳ್ಳುವ ಮಹೇಶರು ಕ್ರುಶ್ಣನ ಬಗ್ಗೆ ಅಪಸ್ವರ ಎತ್ತಿದ್ದು ಆಶ್ಚರ್ಯವನ್ನುಂಟು ಮಾಡಿದೆ. ಕೃಷ್ಣ ನನ್ನು ಕ್ರಿಶ್ಣ ಎಂದು ಬರೆಯ ಬೇಕಾಗಿತ್ತೆಂಬುದು ಅವರ ಅಂಬೋಣ. ಅಥವಾ ಕಿಣ್ಣ /ಕಣ್ಣ ಆಗಬೇಕಿತ್ತೆಂದು ವ್ಯಾಕರಣ ಸೂತ್ರ ಹೇಳುತ್ತಾರೆ. ಆಡುಭಾಷೆಗೂ ವ್ಯಾಕರಣವೇ? ವ್ಯಾಕರಣ ಏನಿದ್ದರೂ ಷಿಷ್ಟ ಭಾಷೆಗೆ ಅಲ್ಲವೇ? ಇವರು ಹೇಳಿದಂತೆ ಕಿಣ್ಣ /ಕಣ್ಣವನ್ನು ಉಪಯೋಗಿಸುವ ಕನ್ನಡಿಗರಾರೂ ನನಗೆ ಇದುವರೆಗೆ ಸಿಕ್ಕಿಲ್ಲ. ಆದರೆ ತಮಿಳರು ಕಣ್ಣ ಅನ್ನುವುದನ್ನು ಕೇಳಿಬಲ್ಲೆನು. ಜೊತೆಗೆ ನಾನು ಮೇಲೆ ಹೇಳಿದ ಎಲ್ಲಾ ಶಬ್ಧವನ್ನು ಉಪಯೋಗಿಸುವ ಕನ್ನಡ ಜನರನ್ನು ನಾನು ಬಲ್ಲೆನು.

ಕನ್ನಡಕ್ಕೆ ಹೊಸ ವ್ಯಾಕರಣ  ತಂದು ಕನ್ನಡವನ್ನು ಆಂಡೈಯನ ಕಾಲಕ್ಕೆ ಒಯ್ದು ನಮ್ಮ ಮಕ್ಕಳು ಇಂಗ್ಲೀಷಿಗೇ  ಗಟ್ಟಿಯಾಗುತ್ತ  ಹೋಗುವಂತಾಗಬೇಕೇ?  ಅಥವಾ ಅವರಿಗೂ ಕನ್ನಡವನ್ನು ಓದಲು ಅವಕಾಶವನ್ನು ಮಾಡಿ ಕೊಡಬೇಕೇ?  ಭಟ್ಟರು ಹಾಗೂ ಅವರ ಅಭಿಮಾನಿಗಳು ತಮ್ಮನ್ನು ಮರುವಿಮರ್ಷೆ ಮಾಡಿಕೊಳ್ಳುವುದು ಕನ್ನಡ ಹಾಗೂ ಕನ್ನಡಿಗರ ಹಿತರಕ್ಷಣೆಗೆ ತುಂಬಾ ಸಹಕಾರಿಯಾದದ್ದೆಂದು ಭಾವಿಸುವವರಲ್ಲಿ ನಾನು ಒಬ್ಬ. ಆಡುಮಾತಿನಲ್ಲಿ ಕನ್ನಡ ಜನತೆಗೆ ಇಷ್ಟವಾದಂತಿರಲಿ ಆದರೆ ಬರವಣಿಗೆಯಲ್ಲಿ ಬದಲಾವಣೆ ಸಲ್ಲ. ಇಂದಿನ ದಿನದಲ್ಲಿ ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತಕರ್ನಾಟಕ ವಿಜಯಕರ್ನಾಟಕ  ಇತ್ಯಾದಿಗಳು ಯಾವ ಬಗೆಯ ಕನ್ನಡವನ್ನು ಲೇಖನದಲ್ಲಿ  ಬಳಸುತ್ತವೆಯೋ ಅವು ಮಾತ್ರ ಮುಂದುವರೆಯಬೇಕು, ಅದರಲ್ಲಿ ಮಾಡುವ ಬದಲಾವಣೆಗಳು ಕನ್ನಡವನ್ನು ಉಳಿಸುವುದಿಲ್ಲ. ಬದಲಿಗೆ ಪತ್ರಿಕೆಗಳೆಲ್ಲಾ, ನಮಗೆಲ್ಲ ಗೊತ್ತಿರುವ ನಿನ್ನೆ / ನೆನ್ನೆ ಗಳಿಗೆ ಬದಲಾಗೆ ಮಹೇಶರು ನೆಂನೆ ಎಂದು ಉಪಯೋಗಿಸಿದಂತೆ  ತಮಗಿಷ್ಠ ಬಂದಹಾಗೆ ಬರೆಯಲು ಪ್ರಾರಂಭಿಸಿದಲ್ಲಿ  ಕನ್ನಡ .......,,,,,,,,,,,,,,,,,,,,,,,

~.~
  • ishwar.shastri ರವರ ಬ್ಲಾಗ್
  • Login or register to post comments
  • 268 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 6, 2008 - 12:44pm — madhava_hs

ಉ: ಕ್ರುಶ್ಣಾನೀ ಬ್ಯಾಗನೆ ಬಾರೋ

madhava_hs's picture

ಹೌದು, ಈ ಬಗ್ಗೆ ಕಳೆದವಾರ ಭಾಷಾ ವಿಜ್ಞಾನಿ ಕೆ.ವಿ.ತಿರುಮಲೇಶ್ ಎನ್ನುವವರೂ ಸಹ ವಿಜಯಕರ್ನಾಟಕದಲ್ಲಿ ಬರೆದು ಭಾಷೆ ಯಾರ ಸ್ವತ್ತೂ ಅಲ್ಲ. ಅದು ಕಾಲಕ್ರಮೇಣ ಬೆಳೆದಂತೆ ಅವಶ್ಯಕವಿದ್ದ ಎಲ್ಲ ಪದಗಳನ್ನೂ ಸೇರಿಸಿಕೊಂಡು ಪ್ರಬುದ್ಧವಾಗುತ್ತಾ ಹೋಗುತ್ತದೆ. ಹಾಗಾಗಿ ಭಾಷೆಗೆ ಸಧ್ಯದ ಸ್ಥಿತಿಯಲ್ಲಿ ಇರುವುದೇ ಸರಿ ಎಂದು ಅವರವಾದ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 8:48am — mahesha

ಉ: ಕ್ರುಶ್ಣಾನೀ ಬ್ಯಾಗನೆ ಬಾರೋ

mahesha's picture

ಶಂಕರ ಭಟ್ಟರ್ ಯಾವ ಹೊಟ್ಟಗೆ ಓದಿದ್ದೀರಾ?

ಇಲ್ಲವೇ ಮತ್ತೊಂದು ಸಂಸ್ಕೃತ ಸಮ್ಮೆಳನಕ್ಕೆ ಹೋಗಿ ಬಂದಿರೆನು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 1:35pm — mahesha

ಉ: ಕ್ರುಶ್ಣಾನೀ ಬ್ಯಾಗನೆ ಬಾರೋ

mahesha's picture

Smiling

ಕ್ವಿಲ್ ಬಳಸಿ ಬರೆದುದು ಹೀಗಾಗಿದೆ...

ಶಂಕರ ಬಟ್ಟರ ಯಾವ ಹೊತ್ತಗೆ ಓದಿದ್ದೀರಿ?

ಇಲ್ಲವೇ ಮತ್ತೊಂದು ಸಂಸ್ಕ್ರುತ ಸಂಮೇಳನಕ್ಕೆ ಹೋಗಿ ಬಂದಿರೇನು? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 1:39pm — mahesha

ಉ: ಕ್ರುಶ್ಣಾನೀ ಬ್ಯಾಗನೆ ಬಾರೋ

mahesha's picture

ಮಾರಾಯರೇ

ಕ್ರುಶ್ಣ ನೀ ಎರಡು ಒರೆಗಳು...

"ಕ್ರಿಶ್ಣ ನೀ ಬೇಗನೇ ಬಾರೋ" ಮತ್ತೆ "ಕೃಷ್ಣ ನೀ ಬೇಗನೇ ಬಾರೋ"ಗಳ ನಡುವಣ ಉಲಿ ಬೇರೆತನ ತೋರಿರಿ.. ನೀವೇ ಉಲಿದು ಇಲ್ಲಿ ಕೇಳಿಸಿರಿ Smiling

ನೆನ್ನೆ = ನೆಂನೆ ಯಾಕೆ ಅಂದರೆ
ಅಂತ = ಅನ್ತ Smiling

ಅಂತ ಅನ್ನು ಯಾಕೆ ಅನ್ತ ಅಂತ ಸಂಸ್ಕ್ರುತದಲ್ಲಿ ಬರೀತಾರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 7, 2008 - 1:45pm — mahesha

ಉ: ಕ್ರುಶ್ಣಾನೀ ಬ್ಯಾಗನೆ ಬಾರೋ

mahesha's picture

" ಕೃಷ್ಣ ನನ್ನು ಕ್ರಿಶ್ಣ ಎಂದು ಬರೆಯ ಬೇಕಾಗಿತ್ತೆಂಬುದು ಅವರ ಅಂಬೋಣ. ಅಥವಾ ಕಿಣ್ಣ /ಕಣ್ಣ ಆಗಬೇಕಿತ್ತೆಂದು ವ್ಯಾಕರಣ ಸೂತ್ರ ಹೇಳುತ್ತಾರೆ"

ಇಲ್ಲಿ ಕಿಣ್ಣ ಆಗಬೇಕಿತ್ತು ಅಂತ ಎಲ್ಲಿ ಹೇಳಿದ್ದಾರೆ? Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಊಟಕೆ ಬಾರೋ ತುಂಟಣ್ಣ...
  • ಕಲ್ಲರಳಿ ಹೂವಾಗಿ - ಬಾರಪ್ಪಾ ಓ ಬೆಳ್ಳಿ ದೀಪ
  • ಪ್ರೇಮದ ಓಲೆ
  • ಲಾಲಿ
  • ನಾನು ಯಾವ ಆತ್ಮ
Syndicate content

ಲೇಖಕರು

ishwar.shastri's picture

ಪೂರ್ಣ ಹೆಸರು
ಈಶ್ವರ ಶಾಸ್ತ್ರಿ ಮೋಟಿನಸರ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 13 ಸದಸ್ಯರು ಮತ್ತು 266 ಅತಿಥಿಗಳು ಆನ್ಲೈನ್ ಇರುವರು.


ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator