ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!

ಸಂಪದ › Sampada Blogs › hpn ರವರ ಬ್ಲಾಗ್

ಪರಿವೇಶಣ

'ಸಂಪದ'ದಲ್ಲಿ ಹರಿ ಪ್ರಸಾದ್ ನಾಡಿಗ್ ಬರೆಯುವ ಬ್ಲಾಗ್.

ಸುದ್ದಿ-ಸ್ವಾರಸ್ಯ?

July 30, 2008 - 12:00am — hpn

ಸುಧಾ ವಾರಪತ್ರಿಕೆಯಲ್ಲಿ ಹಲವು ವರ್ಷಗಳಿಂದ ಕೊನೆಯ ಪುಟದ ಕಾಲಂ ಹೆಸರು ಇದು. ಕೊಂಚ ತರಲೆ, ಕೊಂಚ ಹಾಸ್ಯ, ಮತ್ತಷ್ಟು ಗೋಡೆಯಿಂದಾಚೆಗಿನ ಸುದ್ದಿ, ಸರಕು. ಆದರೆ ಈ combination ಎಷ್ಟು ಚೆನ್ನಾಗಿ ಒಗ್ಗಿಸಿಕೊಂಡಿದ್ದಾರೆಂದರೆ ಈ ವಿಭಾಗ ನನಗೆ ತಿಳಿದಂತೆ ತುಂಬಾ ಜನಪ್ರಿಯ!
ಇಂಟರ್ನೆಟ್ ಬಂದ ಮೇಲೆ ವಿದೇಶದ weird ಸುದ್ದಿಗಳಿಗೇನೂ ಬರವಿಲ್ಲದಿರುವಾಗಲೂ ಕನ್ನಡದಲ್ಲಿರುವುದರ advantage ಇದಕ್ಕಿದ್ದದ್ದೇ. Lycos ತನ್ನ ಅಂತರ್ಜಾಲ ತಾಣವನ್ನು ಬ್ರಿಟಿಷರಿಗಾಗಿ ತೆರೆದಾಗ ಸುತ್ತಲಿಂದ ಇಂತದ್ದೇ ಹಲವು ಸುದ್ದಿ ಚೂರುಗಳನ್ನು ಓದುಗರಿಗೆ ಪ್ರತ್ಯೇಕ ವಿಭಾಗವಾಗಿಯೇ ಒದಗಿಸಿತ್ತು. ಅದು ನಂತರ ಬಹಳ ಜನಪ್ರಿಯವಾದದ್ದರಲ್ಲಿ ಆಶ್ಚರ್ಯವೇನಿಲ್ಲ.

ಆದರೆ ಇತ್ತೀಚೆಗೆ 'ತರಂಗ' ಕೂಡ ಸುದ್ದಿ-ಸ್ವಾರಸ್ಯವನ್ನು ನಕಲು ಮಾಡ ಹೊರಟು ತನ್ನ ಕೊನೆಯ ಪುಟವನ್ನು 'ಶ್!ಗಪ್ ಚುಪ್!!' ಮಾಡಿದೆ. ಅದರಲ್ಲಿ ಗಪ್ ಚುಪ್ ಆಗಿ ಓದುವಂತ ಯಾವುದೇ ಸುದ್ದಿಯಿಲ್ಲದಿರುವುದಷ್ಟೇ ಅಲ್ಲ, ಬರವಣಿಗೆ ಕೂಡ ಮಿ.ಬೀನ್ ಶೈಲಿಯ ಹಾಸ್ಯ. ಪ್ರಯಾಸ ಪಟ್ಟು ನಗಿಸಲು ಪ್ರಯತ್ನಿಸುತ್ತಿರುವಂತೆ.

'ತರಂಗ'ಮಾತ್ರ ಅಲ್ಲ, ಇನ್ನೂ ಹಲವು ಹೊಸ/ಹಳೆ ವಾರಪತ್ರಿಕೆಗಳಲ್ಲೂ ಹೀಗೊಂದು ಕೊನೆಯ ಪುಟದ ಇರುವಿಕೆ ಮಾಮೂಲಾಗಿಬಿಟ್ಟಿದೆ. ಸುಧಾ, ತರಂಗ ಮತ್ತು ಅದರಂತಿರುವ ಉಳಿದ ವಾರಪತ್ರಿಕೆಗಳನ್ನು ಗಮನಿಸಿದರೆ ಅದೇ ಮತ್ತೊಂದು ಫಾರ್ಮ್ಯಾಟ್ saturate ಆಗಿ ಕುಳಿತಂತೆ ಕಾಣುತ್ತದೆ.

ಎಲ್ಲದಕ್ಕಿಂತ ತಮಾಷೆಯ ವಿಷಯ ಎಂದರೆ ಇಂತಹ ಕಾಲಂಗಳಲ್ಲಿ ಬಳಸುವ ಚಿತ್ರಗಳದ್ದು - ಅದು ಯಾರು ತೆಗೆದದ್ದೋ, ಯಾರ ಸ್ವತ್ತೋ, ಏನೂ ಕ್ರೆಡಿಟ್ಸ್ ಕಾಣದೆ ಪ್ರತಿ ಸ್ವಾರಸ್ಯಕ್ಕೊಂದು ಚಿತ್ರವಾಗಿ ಮರೆಯಾಗುತ್ತವೆ, ಸಾಮಾನ್ಯವಾಗಿ ಇಂಟರ್ನೆಟ್ ಇಲ್ಲದವರಿಗೆ ಕಣ್ಣಿಗೆ ಬೀಳದ್ದು ರದ್ದಿ ಅಂಗಡಿಯ ಕುತೂಹಲದ ಕಣ್ಣುಗಳಿಗೂ ತಲುಪುತ್ತದೆ.

  • ಕೊನೆಯ ಪುಟದ ಕಾಲಂ
  • ತರಂಗ
  • ವಾರಪತ್ರಿಕೆಗಳು
  • ಸುದ್ದಿ-ಸ್ವಾರಸ್ಯ
  • ಸುಧಾ
~.~
  • hpn ರವರ ಬ್ಲಾಗ್
  • Login or register to post comments
  • 690 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 30, 2008 - 1:31am — Aravinda

ಉ: ಸುದ್ದಿ-ಸ್ವಾರಸ್ಯ?

Aravinda's picture

ನಾನಂತೂ ಸುಧಾ ಓದೋದಿಕ್ಕೆ ಶುರು ಮಾಡ್ತಾ ಇದ್ದಿದ್ದು ಕೊನೆಯ ಪುಟದಿಂದಲೇ Smiling

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 9:34am — ASHOKKUMAR

ಉ: ಸುದ್ದಿ-ಸ್ವಾರಸ್ಯ?

ASHOKKUMAR's picture

Quote:
ನಾನಂತೂ ಸುಧಾ ಓದೋದಿಕ್ಕೆ ಶುರು ಮಾಡ್ತಾ ಇದ್ದಿದ್ದು ಕೊನೆಯ ಪುಟದಿಂದಲೇ[\quote]
ಈಗ ಯಾವ ಕಡೆಯಿಂದ ಓದಲು ಶುರು ಮಾಡ್ತಿದ್ದೀರಿ? ಅಥವ ಓದೋದು ಬಿಟ್ಟಿದ್ದೀರಾ? Smiling

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 12:41pm — ಸಂಗನಗೌಡ

ಉ: ಸುದ್ದಿ-ಸ್ವಾರಸ್ಯ?

ಸಂಗನಗೌಡ's picture

ಆಗ ಇಂತ ’ಪತ್ರಿಕೆ’ಗಳೇ ಸಂಗತಿ ತಿಳಿಸುವಂತವಾಗಿದ್ದವು, ಅವುಗಳ ಒಳ್ಳೆ ಸಂಗತಿಗಳೊಂದಿಗೆ, ಜೊಳ್ಳು, ಪೊಳ್ಳುಗಳೂ ಮೆದುಳು ಸೇರುತ್ತಿದ್ದವು, ಈಗ ಇಂತ ಓಲೆಗಳೇನಿದ್ದರೂ, ಹಿಂದೊಮ್ಮೆ ನನ್ನ ನೆಚ್ಚಿನ ಪತ್ರಿಕೆ ಆಗಿತ್ತಲ್ಲ, ಅನ್ನುವ ಕರುಣೆಯಿಂದ ಕೊಳ್ಳುವದಕ್ಕಸ್ಟೇ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 11:23pm — hpn

ಉ: ಸುದ್ದಿ-ಸ್ವಾರಸ್ಯ?

hpn's picture

ಇಲ್ಲ, ಈಗಲೂ ಒಳ್ಳೆಯ ಲೇಖನಗಳು ಸುಮಾರು ಇರುತ್ವೆ. ಮಯೂರದಲ್ಲಿ ಕೂಡ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 9:13am — ASHOKKUMAR

ಉ: ಸುದ್ದಿ-ಸ್ವಾರಸ್ಯ?

ASHOKKUMAR's picture

ಹೌದು,ಸುಧಾ ಈಗಲೂ ಚೆನ್ನಾಗಿಯೇ ಬರುತ್ತಿದೆ ಎಂದು ನನ್ನನಿಸಿಕೆ.
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 12:05pm — ಸಂಗನಗೌಡ

ಉ: ಸುದ್ದಿ-ಸ್ವಾರಸ್ಯ?

ಸಂಗನಗೌಡ's picture

ಮಯೂರಕ್ಕಿಂತ ಕಸ್ತೂರಿ ಚೆನ್ನಾಗಿದೆ,. ಸಂಗತಿಗಳು ಚೆನ್ನಾಗಿರುತ್ತವೆ, ನಾನು ಈಗಲೂ ಕಸ್ತೂರಿ,ಮಯೂರಗಳನ್ನು ಕೊಳ್ಳುತ್ತಿರುತ್ತೇನೆ, ಸುಧಾ, ತರಂಗಗಳನ್ನು ಈಗಿಗ ಅಸ್ಟಾಗಿ ಕೊಳ್ಳುತ್ತಿಲ್ಲ.

-------------------------------------------------------------

ದೇವರು ನಗುವದನ್ನು ನೋಡಲು ಅವನಿಗೆ ನಿಮ್ಮ ಯೋಜನೆಗಳ ಬಗ್ಗೆ ಹೇಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 12:12pm — ASHOKKUMAR

ಉ: ಸುದ್ದಿ-ಸ್ವಾರಸ್ಯ?

ASHOKKUMAR's picture

ಕಸ್ತೂರಿ ಡೈಜೆಸ್ಟ್-ರೀಡರ್ಸ್ ಡೈಜೆಸ್ಟ್ ಮಾದರಿಯದು. ಮಯೂರ ಕತೆ-ಕವನ- ಸಾಹಿತ್ಯದ ಕಡೆ ಒತ್ತು ನೀಡುವ ಪತ್ರಿಕೆ. ಅವನ್ನು ಹೋಲಿಸಲಾಗದೇನೋ!
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 3:20pm — harshab

ಉ: ಸುದ್ದಿ-ಸ್ವಾರಸ್ಯ?

harshab's picture

ಸುಧಾ ನಡುವೆ ಅಶ್ಟು ಚೆನ್ನಾಗಿ ಬರುತ್ತಿರಲಿಲ್ಲ, ಅದ್ರೆ ಮೂರ್ನಾಕು ವರ್ಶಗಳಿಂದೀಚೆ ಚೆನ್ನಾಗಿ ಬರುತ್ತಿದೆ. ಹೋದ ವಾರ ಗಣೇಶಯ್ಯ ನವರ "ಕಪಿಲಿಪಿಸಾರ" ಧಾರವಾಹಿ ಮುಗಿಯಿತು. ಚೆನ್ನಾಗಿತ್ತು...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 11:41am — Chamaraj

ಉ: ಸುದ್ದಿ-ಸ್ವಾರಸ್ಯ?

Chamaraj's picture

ನಾಗೇಶ ಹೆಗಡೆಯವರು ಸುಧಾ ವಾರಪತ್ರಿಕೆ ರೂಪಿಸುತ್ತಿದ್ದಾಗಿನ ಸ್ವಾರಸ್ಯ ಈಗ ಹತ್ತು ವರ್ಷಗಳಿಂದ ಉಳಿದಿಲ್ಲ ಬಿಡಿ. ಸುಧಾ ಪತ್ರಿಕೆಗೆ ಮೌಲ್ಯ ಹಾಗೂ ಜನಪ್ರಿಯತೆ ತಂದುಕೊಟ್ಟವರು ಅವರು. ನಂತರ ಅದು ಮಹಿಳಾವಾದಿಗಳ ಕೈಗೆ ಸಿಲುಕಿ ಪಡಬಾರದ ಫಜೀತಿ ಪಟ್ಟಿತು. ಪ್ರಜಾವಾಣಿಯಲ್ಲಿ ನಾನು ಕೆಲಸ ಮಾಡುತ್ತಿದ್ದಾಗ, ಬಹುತೇಕ ಜನರು ಸುಧಾ ವಿಭಾಗವನ್ನು ’ಲೇಬರ್‌ ವಾರ್ಡ್‌’ ಎಂದೇ ಕರೆಯುತ್ತಿದ್ದರು. ಅಂದರೆ, ಪ್ರಜಾವಾಣಿಯ ಮಹಿಳಾ ಸಹೋದ್ಯೋಗಿಗಳು ಗರ್ಭಿಣಿಯಾದರೆ, ’ಸುಧಾಕ್ಕೆ ಹಾಕಿ’ ಎಂದೇ ವಿನಂತಿಸಿಕೊಳ್ಳುತ್ತಿದ್ದರಿಂದ ಆ ಹೆಸರು ವ್ಯಂಗ್ಯವಾಗಿ ಬಳಕೆಯಾಗುತ್ತಿತ್ತು.

ಸರಿ, ಅಲ್ಲಿ ಯಾರೇ ಹೋಗಿ ಕೆಲಸ ಮಾಡಲಿ, ಅದರ ಮೌಲ್ಯ ಕಾಪಾಡಬೇಕಲ್ಲವೆ? ಅಂಥದ್ದೇನೂ ಆಗಲಿಲ್ಲ. ಆಯ್ದ ಕೆಲವರಿಂದ ಬರೆಸುವುದು, ಆಯ್ದ ವಿಷಯಗಳ ಬಗ್ಗೆ ಬರೆಯುವುದು- ಇಂಥ ಕ್ರಮಗಳಿಂದಾಗಿ ಸುಧಾ ಪತ್ರಿಕೆ ಕೇವಲ ಆಯ್ದ ಕೆಲವರು ಮಾತ್ರ ಓದುವ ಪತ್ರಿಕೆಯಾಗಿ ಮಾರ್ಪಟ್ಟಿತು. ಕ್ರಮೇಣ ಅದು ಎಂಥ ದುಃಸ್ಥಿತಿಗೆ ಬಂತೆಂದರೆ, ಕೊನೆಯ ಪುಟಕ್ಕೆ ಕೂಡ ಜಾಹೀರಾತು ದೊರೆಯದೇ ಯಾವುದಾದರೂ ಹಕ್ಕಿ ಅಥವಾ ಪ್ರಕೃತಿಯ ಫೋಟೊ ಹಾಕುವ ಅನಿವಾರ್ಯತೆಗೆ ಬಂದಿತು.

ಒಂದು ಅತ್ಯುತ್ತಮ ಪತ್ರಿಕೆ ಸಂಕುಚಿತ ದೃಷ್ಟಿಕೋನದ ಜನರ ಕೈಗೆ ಸಿಕ್ಕು ಹಾಳಾಗಿದ್ದು ಹೀಗೆ. ನಿಮ್ಮ ಬರವಣಿಗೆ ಅದನ್ನು ಮತ್ತೆ ನೆನಪಿಸಿತು.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 30, 2008 - 11:29pm — hpn

ಉ: ಸುದ್ದಿ-ಸ್ವಾರಸ್ಯ?

hpn's picture

ಸುಧಾದಲ್ಲಿ ಈ ವಾರದ ಫೀಚರ್ - ಚಿತ್ರ ಕಲಾ ಪರಿಷತ್, ಕೆನ್ ಆರ್ಟ್ ಸ್ಕೂಲ್ ಹಾಗು ಕಾವಾ (CAVA) ಕುರಿತು, ಬಹಳ ಚೆನ್ನಾಗಿ ಬಂದಿದೆ. ಜೊತೆಗೆ ಇಡಿ ವಾರಪತ್ರಿಕೆಯ ವಿನ್ಯಾಸ ಕೂಡ ಬದಲಾಗುತ್ತಿರುವ ಕಾಲಕ್ಕೆ ಸ್ವಲ್ಪವಾದರೂ ಬದಲಾಗುತ್ತಲೇ ಬರುತ್ತಿದೆ.

ಈಗಲೂ ಸುಧಾ ಇದ್ದಿದ್ದರಲ್ಲಿ ಉತ್ತಮವಾದದ್ದು ಅನ್ಸತ್ತೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2008 - 12:12am — Chamaraj

ಉ: ಸುದ್ದಿ-ಸ್ವಾರಸ್ಯ?

Chamaraj's picture

ನಿಜ, ಅಳಿದ ಊರಿಗೆ ಉಳಿದವನೇ ಗೌಡ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 31, 2008 - 2:05pm — madhava_hs

ಉ: ಸುದ್ದಿ-ಸ್ವಾರಸ್ಯ?

madhava_hs's picture

ಚಾಮರಾಜರೇ ನಿಮ್ಮ ವಾದವನ್ನು ಒಪ್ಪುತ್ತೇನೆ. ಸುಧಾ ಸುದ್ಧಿಗಳಲ್ಲಿ ಸ್ವಲ್ಪ ಏಕತಾನತೆ ಇದೆ ಅನ್ನಿಸುತ್ತದೆ. ಆದರೆ ತರಂಗ ಹಾಗಲ್ಲ. ಆಸಕ್ತಿಕೆರಳಿಸುವ ವಿಷಯಗಳು ಬಹಳಷ್ಟಿದ್ದವು. ಟಿ.ಆರ್.ಅನಂತರಾಮ್ ರಂತಹವರ ವೈಜ್ಞಾನಿಕ ದೃಷ್ಟಿಕೋನಗಳಿರುವ ಲೇಖ್ಹನಗಳು, ಪುರಾಣ, ಐತಿಹಾಸಿಕ, ರಾಜಕೀಯ ಹೀಗೆ ಎಲ್ಲ ವಿಭಾಗದ ಸುದ್ಧಿಗಳನ್ನು ಪ್ರಕಟಿಸುತ್ತಿದ್ದರು.
ಬಹಳಷ್ಟು ವರ್ಶಗಳಿಂದ ತರಂಗ ಅಥವಾ ಸುಧಾ ವನ್ನು ವಾರವಾರ ಓದುತ್ತಿದ್ದೆ. ೮೦ರ ದಶಕದಲ್ಲಿ ನಮ್ಮ ಮನೆಯಲ್ಲಿ ತರಂಗ ಮತ್ತು ಪ್ರಜಾಮತ ತರಿಸುತ್ತಿದ್ದರು. ಎರಡೂ ಚೆನ್ನಾಗಿ ಮೂಡಿಬರುತ್ತಿತ್ತು. ಪ್ರಜಾಮತ ಕೆಲಕಾಲ ನಿಂತು ಹೋಗಿತ್ತು. ಮತ್ತೆ ಯಾರೋ ಶುರುಮಾಡಿದ್ದಾರೆ ಎಂದು ಕೇಳಿದೆ. ಅದು ಮಯೂರ/ತುಷಾರ ದಂತೆ ಚಿಕ್ಕ ಸೈಜಿನಲ್ಲಿ ಬರುತ್ತಿದೆ ಎಂದು ಹೇಳುತ್ತಿದ್ದರು.

ಅದೇ ಪ್ರವಾಸ ಕಥನಗಳು, ಅದೇ ರಾಜಕೀಯ ಉಪನ್ಯಾಸಗಳು ಬೇಜಾರಾಗಿ ಇತ್ತೀಚೆಗೆ ವಾರಪತ್ರಿಕೆಗಳನ್ನೋದುವುದನ್ನೇ ನಿಲ್ಲಿಸಿದ್ದೇನೆ. ಇನ್ನು ಧಾರಾವಾಹಿಗಳೆಂದರೆ ನನಗೆ ಅಲರ್ಜಿ. ಸುದ್ಧಿಗಾಗಿ ಯಾವುದೋ ಒಂದು ದಿನಪತ್ರಿಕೆ, ದಿನಕ್ಕೊಂದು ನ್ಯೂಸ್ ನೋಡುವುದು ಮಾಡಿ ನಮಗೆ ತಿಳಿದಂತೆ ವಿಶ್ಲೇಶಿಸಿಕೊಳ್ಳುತ್ತೇವೆ. ವಾರಪತ್ರಿಕೆಗಳಿಂದ ದೊರಕುತ್ತಿದ್ದ ಮನರಂಜನೆ ಕೆಲ ಮಟ್ಟಿಗೆ ಟಿ.ವಿ.ಚಾನೆಲ್ ಗಳಿಂದ ಲಭಿಸುತ್ತಿದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2008 - 12:11am — Chamaraj

ಉ: ಸುದ್ದಿ-ಸ್ವಾರಸ್ಯ?

Chamaraj's picture

ಸಮಸ್ಯೆ ಏನಾಗಿದೆ ಎಂದರೆ, ಮ್ಯಾಗಝೀನ್‌ ವಿಭಾಗಕ್ಕೆ ದಡ್ಡರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು. ಇದರಲ್ಲಿ ಸಂಪಾದಕೀಯ ವಿಭಾಗದ ಹಿರಿಯರ ಕೈಚಳಕವೂ ಸೇರಿದೆ. ಚೆನ್ನಾಗಿ ಕೆಲಸ ಮಾಡಬಲ್ಲವರನ್ನು ಸುದ್ದಿ ವಿಭಾಗದಲ್ಲಿ ಉಳಿಸಿಕೊಳ್ಳುತ್ತಾರೆ. ಹುಳುಕುಗಳನ್ನು ಹುಡುಕಿ ಮ್ಯಾಗಝೀನ್‌ ವಿಭಾಗಕ್ಕೆ ಹಾಕುತ್ತಾರೆ. ಮೊದಲೇ ಕೆಲಸ ಗೊತ್ತಿಲ್ಲದವರು ಅವರು. ಇನ್ನು ಸುಧಾದಂತಹ ಪತ್ರಿಕೆಗೆ ಹೋಗಿ ಕೂತರೆ ಬರೆಯುವುದೇನು ಬಂತು? ಮುದ್ರಣದ ಗುಣಮಟ್ಟ ಇರುವುದರಿಂದ, ಕಲಾವಿದರ ಕೈಚಳಕ ಸೇರುವುದರಿಂದ ತಕ್ಕಮಟ್ಟಿಗೆ ಪತ್ರಿಕೆ ನೋಡಲು ಚೆನ್ನಾಗಿಯೇ ಕಾಣುತ್ತದೆ. ಆದರೆ, ಓದಲು ಕೂತರೆ ತಲೆನೋವು ಖಚಿತ.

ಹೀಗಾಗಿ ಸುಧಾ ಒಂದೇ ಅಲ್ಲ, ಕನ್ನಡದ ಬಹುತೇಕ ಪತ್ರಿಕೆಗಳು, ಮುಖ್ಯವಾಗಿ ಸಾಹಿತ್ಯಿಕ ಹಾಗೂ ವಾರಪತ್ರಿಕೆಗಳು ಗಬ್ಬೆದ್ದು ಹೋಗಿವೆ. ಲಂಕೇಶ್‌ ಬದುಕಿದ್ದಾಗ (ಕೊನೆಯ ವರ್ಷಗಳನ್ನು ಹೊರತುಪಡಿಸಿ) ಲಂಕೇಶ್‌ ಪತ್ರಿಕೆ ಹೇಗೆ ಬರುತ್ತಿತ್ತು ಎಂಬುದನ್ನು ನೆನಪಿಸಿಕೊಳ್ಳಿ. ಇವತ್ತಿನ ಅವಳಿ ಲಂಕೇಶ್‌ಗಳನ್ನು ಓದಲಾದರೂ ಆದೀತೆ? ಅವರ ಪೂರ್ವಾಗ್ರಹಗಳು, ಆಷಾಡಭೂತಿತನ, ಟೊಳ್ಳು ಸಿದ್ಧಾಂತಗಳನ್ನು ಕೇಳುವುದೇ ಕಡುಕಷ್ಟ, ಇನ್ನು ಓದಲಂತೂ ಖಂಡಿತ ಸಾಧ್ಯವಿಲ್ಲ. ಇಂಥ ವಾತಾವರಣದ ನಡುವೆ ನೆಮ್ಮದಿ ಹುಟ್ಟಿಸಬೇಕಿದ್ದ ಸುಧಾ/ತರಂಗದಂತಹ ಪತ್ರಿಕೆಗಳು ದುರ್ಬಲ ಸರಕನ್ನು ತುಂಬುವ ಗೋದಾಮುಗಳಾಗಿಬಿಟ್ಟಿವೆ.

- ಚಾಮರಾಜ ಸವಡಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2008 - 5:21am — ASHOKKUMAR

ಉ: ಸುದ್ದಿ-ಸ್ವಾರಸ್ಯ?

ASHOKKUMAR's picture

Quote:
ಮ್ಯಾಗಝೀನ್‌ ವಿಭಾಗಕ್ಕೆ ದಡ್ಡರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು......ಕೆಲಸ ಗೊತ್ತಿಲ್ಲದವರು ಅವರು. ಇನ್ನು ಸುಧಾದಂತಹ ಪತ್ರಿಕೆಗೆ ಹೋಗಿ ಕೂತರೆ ಬರೆಯುವುದೇನು ಬಂತು?...ಓದಲು ಕೂತರೆ ತಲೆನೋವು ಖಚಿತ.

ನನಗೆ ಹಾಗನ್ನಿಸುವುದಿಲ್ಲ..ಸುಧಾದಂತಹ ಪತ್ರಿಕೆಯಲ್ಲಿ ಸಂಪಾದಕ ವರ್ಗ ಸ್ವತ: ಬರೆದು ಪ್ರಕಟಿಸುವುದು ಕಡಿಮೆ..ಹೊರಗಿನವರ ಲೇಖನಗಳೇ ಹೆಚ್ಚು.

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 2, 2008 - 2:45pm — basavarajdengi

ಉ: ಸುದ್ದಿ-ಸ್ವಾರಸ್ಯ?

basavarajdengi's picture

ನನ್ನ ಪ್ರಕಾರ ತರಂಗಕ್ಕಿಂತ ಸುಧಾ ಎಸ್ಟೊ ವಾಸಿ. ತರಂಗದಲ್ಲಿ ಸುಮಾರು ಸಂಚಿಕೆಗಳು - ೫೦ ಬಗೆಯ-ಇಡ್ಲಿ, ದೋಸೆ.. ಇತ್ಯಾದಿಯಿಂದ ತುಂಬಿ ಹೋಗಿರುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸಂಪದದಲ್ಲಿ ಹೊಸತು: ಆಯ್ದ ಸುದ್ದಿ ವಿಭಾಗ
  • ಸುಧಾ ಮ್ಯಾಗಜೀನ್ ಓದಲು ಒಂದು ಫೈರ್ಫಾಕ್ಸ್ ಪ್ಲಗಿನ್
  • ಹೆಸರು ಬರೆಯುವುದು ಹೇಗೆ?
  • ಅಪ್ಪಟ-ಕನ್ನಡ ಒರೆ ’ವಾರ್ತೆ’ಗೆ - ೧
  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
Syndicate content

ಲೇಖಕರು

hpn's picture

ಪೂರ್ಣ ಹೆಸರು
ಹರಿ ಪ್ರಸಾದ್ ನಾಡಿಗ್

ಪರಿಚಯ

ಹುಟ್ಟಿದ್ದು ದಾವಣಗೆರೆಯಲ್ಲಿ, ಬೆಳೆದಿದ್ದು ಚಿತ್ರದುರ್ಗ, ಮೈಸೂರು ಹಾಗೂ ಶಿವಮೊಗ್ಗದಲ್ಲಿ.
ವಿಕಿಪೀಡಿಯದ ಹುಚ್ಚು ಹಿಡಿದಾಗ ಕನ್ನಡ ವಿಕಿಪೀಡಿಯದ ಹುಚ್ಚು ಹಿಡಿಸಿಕೊಂಡು ಪ್ರಾರಂಭ ಹಂತದಿಂದ ಹೊರಡಿಸಿ ಸುಮಾರು ವರ್ಷ ಅದರಲ್ಲಿ ಬರೆಯುತ್ತಿದ್ದೆ, ನೋಡಿಕೊಳ್ಳುತ್ತಿದ್ದೆ. ಹೀಗೇ ಒಮ್ಮೆ ೨೦೦೫ರಲ್ಲಿ ಸಂಪದ ಪ್ರಾರಂಭಸಿದ್ದು. ತದನಂತರ ಸಂಪದಿಗರ ಒಡನಾಟ ಖುಷಿ ಕೊಟ್ಟಿದೆ.
ನನ್ನ ಇಷ್ಟದ ವಿಷಯಗಳು ಹಾಗು ಪ್ರಸ್ತುತ ಯೋಜನೆಗಳ ಬಗ್ಗೆ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಬರೆಯುತ್ತಿರುತ್ತೇನೆ. ಭೇಟಿ ಕೊಡಿ: ನನ್ನ ಅಂತರ್ಜಾಲ ಪುಟ, ಸಂಪದದಲ್ಲಿ ನನ್ನ ಬ್ಲಾಗ್: ಪರಿವೇಶಣ ಹಾಗು ಇಂಗ್ಲಿಷಿನಲ್ಲಿ ಬರೆಯುವ ಬ್ಲಾಗ್.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಆಹೆಟ್ಟಿ

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಗಡು ತುತ್ತೂರಿಯ ನಾ. ಕಸ್ತೂರಿ, ಜಿ.ಪಿ. ರಾಜರತ್ನಂ, ಕುವೆಂಪು
  • ಓದಿದ್ದು ಕೇಳಿದ್ದು ನೋಡಿದ್ದು-97 ಅಪಘಾತ ವಿಮೆಯಲ್ಲಿ ಭಯೋತ್ಪಾದಕ ದಾಳಿಗೂ ಪರಿಹಾರ ಇದೆಯೇ?
  • ಇಂದು ಓದಿದ ವಚನ: ಚಂದಿಮರಸ: ನಾಯ ಕುನ್ನಿಯ ಕಚ್ಚಬೇಡ
  • ಒಗಟು - ಬಿಡಿಸಿ!
  • ಮನಸ್ಸೆಲ್ಲೋ ಕನಸ್ಸೆಲ್ಲೋ
  • ಕೋತಿಯಾಟವಯ್ಯಾ ಭಾಗ 1
  • ಕಲ್ಯಾಣಂ ತುಳಸಿ ಕಲ್ಯಾಣಂ
  • ತಳುಕಿನ ಗುರು-ಸೋದರರ ದೃಷ್ಟಿಯಲ್ಲಿ ಬ್ರಾಹ್ಮಣ-ಅಬ್ರಾಹ್ಮಣ-ಅಸ್ಪೃಶ್ಯ...
  • ಓದಿದ್ದು ಕೇಳಿದ್ದು ನೋಡಿದ್ದು-96 ಧಿಕ್ಕಾರ ಕೂಗಿದ ಪತ್ರಿಕೆ
  • ಇಂದು ಓದಿದ ವಚನ:ಅಮುಗೆ ರಾಯಮ್ಮ: ಕಾಲಿಲ್ಲದ ಕುದುರೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: ಇಂದು ಓದಿದ ವಚನ: ಸಕಲೇಶ ಮಾದರಸ: ದೊರಕೊಂಡಂತೆ ತಣಿದಿಹ
    December 2, 2008 - 10:08am
  • sathvik N V
    ಉ: ನನ್ನ ತಪ್ಪೇ ಅಥವಾ ಸಿನಿಕತನವೇ?
    December 2, 2008 - 10:04am
  • Rakesh Shetty
    ಉ: ತುಳು ಭಾಷೆ
    December 2, 2008 - 9:36am
  • anil.ramesh
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:30am
  • palachandra
    ಉ: bird_at_waterfall.jpg
    December 2, 2008 - 9:23am
  • palachandra
    ಉ: ಚಂದ್ರ-ಗುರು-ಶುಕ್ರ...
    December 2, 2008 - 9:21am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:18am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:12am
  • palachandra
    ಉ: ನನ್ನ ಮೃದಂಗಾಭ್ಯಾಸ
    December 2, 2008 - 9:08am
  • harshavardhan v...
    ಉ: ‘ ವಿಲಾಸಿ’ ರಾವ್ ‘ವಿ’ದೇಶಮುಖ್! ‘ರಾಮ್’ ಹಾಗು ‘ಗೋಪಾಲ್ ’ ಲೆಕ್ಕದ ‘ವರ್ಮಾ’ ಅವರಿಂದ ನೂತನ ಚಿತ್ರ..ಸದ್ಯದಲ್ಲೇ ಬಿಡುಗಡೆ!
    December 2, 2008 - 9:04am
ಇನ್ನಷ್ಟು
ಈಗಿನಂತೆ 12 ಸದಸ್ಯರು ಮತ್ತು 237 ಅತಿಥಿಗಳು ಆನ್ಲೈನ್ ಇರುವರು.


ಕರುಣೆಯೇ ಪರಮ ಜ್ಞಾನ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator